Followers

Saturday, 30 May 2020

ಗ ಪು - ಅಧ್ಯಾಯ 4 ಭಾಗ 1

ಗ ಪು - 4 – ಭಾಗ 1

ನರಕಪ್ರದಪಾಪಚಿಹ್ನನಿರೂಪಣಮ್                                  ನರಕಗಳ ಉಂಟುಮಾಡುವ ಪಾಪಚಿಹ್ನೆಗಳ ನಿರೂಪಣೆ

 

ಗರುಡ ಉವಾಚ

ಕೈರ್ಗಚ್ಛಂತಿ ಮಹಾಮಾರ್ಗೇ ವೈತರಣ್ಯಾಂ ಪತಂತಿ ಕೈಃ ।

ಕೈಃ ಪಾಪೈರ್ನರಕೇ ಯಾಂತಿ ತನ್ಮೇ ಕಥಯ ಕೇಶವ ॥೦೧॥

ಗರುಡ ಹೇಳಿದ – “ಏ ಕೇಶವನೇ!, ಪಾಪಿಗಳು ಯಾವಕಾರಣದಿಂದ (ಯಾವ ಪಾಪದ ಕಾರಣದಿಂದ ಲಾಗಿ)ಹೋಗುವವು  ಯಾವುದರಿಂದಲಾಗಿ ವೈತರಣೀ ನದಿಲಿ ಬೀಳುತ್ತವೆ . ಯಾವ ಪಾಪಗಳಿಂದಲಾಗಿ ನರಕಕ್ಕೆ ಹೋಗುವವು ಎನಗೆ ಹೇಳು.”

ಶ್ರೀಭಗವಾನ್ ಉವಾಚ

ಸದೈವಾಕರ್ಮನಿರತಾಃ ಶುಭಕರ್ಮಪರಾಙ್ಮುಖಾಃ।ನರಕಾನ್ನರಕಂ ಯಾಂತಿ ದುಃಖಾದ್ದುಃಖಂ ಭಯಾದ್ಭಯಮ್ ॥೦೨॥

ಭಗವಂತ ಹೇಳಿದ°- ಏವತ್ತೂ ಅಶುಭಕರ್ಮಗಳಲ್ಲೇ ನಿರತರಾಗಿರುವ , ಶುಭಕರ್ಮಗಳಿಂದ ವಿಮುಖರಾಗಿರೋರು ಒಂದು ನರಕದ ಇನ್ನೊಂದು ನರಕಕ್ಕೂ, ಒಂದು ದುಃಖದಿಂದ ಇನ್ನೊಂದು ದುಃಖಕ್ಕೂ, ಒಂದು ಭಯದಿಂದ ಇನ್ನೊಂದು ಭಯಕ್ಕೂ ಹೋಗುವವು 

ಧರ್ಮರಾಜಪುರೇ ಯಾಂತಿ ತ್ರಿಭಿರ್ದ್ವಾರೈಸ್ತು ಧಾರ್ಮಿಕಾಃ ।

ಪಾಪಸ್ತು ದಕ್ಷಿಣದ್ವಾರಮಾರ್ಗೇಣೈವ ವ್ರಜಂತಿ ತತ್ ॥೦೩॥

ಧಾರ್ಮಿಕರು ಧರ್ಮರಾಜನ ಪುರಕ್ಕೆ ಮೂರು ದ್ವಾರಗಳಿಂದ ಹೋಗುವರು  ಪಾಪಿಗಳು ದಕ್ಷಿಣದ್ವಾರದ ಮಾರ್ಗದಲೇ ಹೋಗುವವು.

ಅಸ್ಮಿನ್ನೇವ ಮಹಾದುಃಖೇ ಮಾರ್ಗೇ ವೈತರಣೀ ನದೀ ।

ತತ್ರ ಯೇ ಪಾಪಿನೋ ಯಾಂತಿ ತಾನಹಂ ಕಥಯಾಮಿ ತೇ ॥೦೪॥

ಮಹಾದುಃಖಕರವಾದ ವೈತರಣೀ ನದಿ ಇದೇ ಮಾರ್ಗಲ್ಲಿ ಯಾವ ಪಾಪಿಗಳು ಹೋಗುತ್ತವೋ ಅದರ ಬಗ್ಗೆ ನಿನಗೆ ಹೇಳುತ್ತೆನೆ 

ಬ್ರಹ್ಮಘ್ನಾಶ್ಚ ಸುರಾಪಾಶ್ಚ ಗೋಘ್ನಾ ವಾ ಬಾಲಘಾತಕಾಃ ।

ಸ್ತ್ರೀಘಾತೀ ಗರ್ಭಪಾತೀ ಚ ಯೇ ಚ ಪ್ರಚ್ಛನ್ನಪಾಪಿನಃ ॥೦೫॥

ಬ್ರಹ್ಮಹತ್ಯೆ ಮಾಡುವವು, ಸುರಾಪಾನ ಮಾಡುವವು, ಗೋಹತ್ಯೆ ಮಾಡುವವು, ಶಿಶುಹತ್ಯೆ ಮಾಡುವವು, ಸ್ತ್ರೀಹತ್ಯೆ ಮಾಡುವವು, ಗರ್ಭಪಾತ ಮಾಡುಸುವವು ಮತ್ತೆ ಗುಟ್ಟಿನಲ್ಲಿ ಪಾಪಗಳ ಮಾಡುವವು,

ಯೇ ಹರಂತಿ ಗುರೋರ್ದ್ರವ್ಯಂ ದೇವದ್ರವ್ಯಂ ದ್ವಿಜಸ್ಯ ವಾ ।

ಸ್ತ್ರೀದ್ರವ್ಯಹಾರಿಣೋ ಯೇ ಚ ಬಾಲದ್ರವ್ಯಹರಾಶ್ಚ ಯೇ ॥೦೬॥

ಯಾರು ಗುರುಗಳ ದ್ರವ್ಯವ (ವಸ್ತು/ಧನ/ಸಂಪತ್ತು) ಅಥವಾ ದೇವರ ಪೈಸೆಯ (ವಸ್ತು/ಸಂಪತ್ತು/ದ್ರವ್ಯ) ಅಥವಾ ದ್ವಿಜರ ಪೈಸೆಯ ಅಪಹರುಸುತ್ತಾ ರೋ , ಯಾರು ಹೆಣ್ಣುಮ್ಮಕ್ಕಳ (ಕೂಸುಗಳ) ಧನವ ಅಪಹರಿಸುತ್ತಾರೋ , ಯಾರು ಮಕ್ಕಳ ಪೈಸೆಯ ಅಪಹರಿಸುತ್ತರೋ ,

ಯೇ ಋಣಂ ನ ಪ್ರಯಚ್ಛಂತಿ ಯೇ ವೈ ನ್ಯಾಸಾಪಹಾರಕಾಃ ।

ವಿಶ್ವಾಸಘಾತಕಾ ಯೇ ಚ ಸವಿಷಾನ್ನೇನ ಮಾರಕಾಃ ॥೦೭॥

ಯಾರು ಇನ್ನೊಬ್ಬರ ಹತ್ತಿರ ತೆಗೆದು ಕೋಂಡ ಸಾಲವ ತೀರುಸುವುದಿಲ್ಲಯೋ, ಯಾರು ಇನ್ನೊಬ್ಬರು  ಒತ್ತೆ ಮಡಿಗಿದ್ದರ ಅಪಹರುಸುತ್ತರೋ , yaaರು ವಿಶ್ವಾಸಘಾತಕರೋ, ಮತ್ತೆ ಯಾ ರು ಚಾರುವಿನಲ್ಲಿ ವಿಷ ಹಾಕಿ ಕೊಲ್ಲುತ್ತರೋ 

ದೋಷಗ್ರಾಹೀ ಗುಣಾಶ್ಲಾಘೀ ಗುಣವತ್ಸು ಸಮತ್ಸರಾಃ ।

ನೀಚಾನುರಾಗಿಣೋ ಮೂಢಾಃ ಸತ್ಸಂಗತಿಪರಾಙ್ಮುಖಾಃ ॥೦೮॥

ಯಾರು ಪರರ ದೋಷವ ಗ್ರಹಣಮಾಡುತ್ತಾರೋ  ಉತ್ತಮ ಗುಣಗಳ ಪ್ರಶಂಸಿಸುವುದಿಲ್ಲವೊ ಗುಣವಂತರಲ್ಲಿ ಮತ್ಸರಪಡುತ್ತರೋ , ನೀಚರ ಪ್ರೀತಿಸುತ್ತರು , ಮೂಢರು, ಸತ್ಸಂಗಂದ ವಿಮುಖರಾದೋರು,

ತೀರ್ಥಸಜ್ಜನಸತ್ಕರ್ಮಗುರುದೇವನಿಂದಕಾಃ ।

ಪುರಾಣವೇದಮೀಮಾಂಸಾನ್ಯಾಯವೇದಾಂತದೂಷಕಾಃ ॥೦೯॥

ತೀರ್ಥ, ಸಜ್ಜನ, ಸತ್ಕರ್ಮ, ಗುರು, ಮತ್ತೆ ದೇವರ ನಿಂದನೆ ಮಾಡುವರೋ ಪುರಾಣ, ವೇದ, ಮೀಮಾಂಸ, ನ್ಯಾಯ ಮತ್ತೆ ವೇದಾಂತಂಗಳ ದೂಷಣೆ ಮಾಡುವರೋ 

ಹರ್ಷಿತಾ ದುಃಖಿತಂ ದೃಷ್ಟ್ವಾ ಹರ್ಷಿತೇ ದುಃಖದಾಯಕಾಃ ।

ದುಷ್ಟವಾಕ್ಯಸ್ಯ ವಕ್ತಾರೋ ದುಷ್ಟಚಿತ್ತಾಶ್ಚ ಯೇ ಸದಾ ॥೧೦॥

ದುಃಖಿತರ ನೋಡಿ ಸಂತೋಷ ಪಡುವರೋ ಹರ್ಷಿತರಾಗಿದ್ದವರನ್ನು ದುಃಖಿಗಳಾಗಿ ಮಾಡುವರೋ ಬೇಡಗಟ್ಟೆ ಮಾತುಗಳ ಆಡುವರೋ , ಯಾವತ್ತೂ ದುರಾಲೋಚನೆಲಿ ಇರುವರೋ 

ನ ಶೃಣ್ವಂತಿ ಹಿತಂ ವಾಕ್ಯಂ ಶಾಸ್ತ್ರವಾರ್ತಾಂ ಕದಾಪಿ ನ ।

ಆತ್ಮಸಂಭಾವಿತಾಃ ಸ್ತಬ್ಧಾ ಮೂಢಾಃ ಪಂಡಿತಮಾನಿನಃ ॥೧೧॥

ಹಿತವಚನಗಳನ್ನೂ, ಶಾಸ್ತ್ರದ ವಿಷಯಗಳನ್ನೂ ಯಾವತ್ತೂ ಕೇಳದ್ದೇ ಇದ್ದವರು  ಆತ್ಮಶ್ಲಾಘನೆಯನ್ನೇ ಮಾಡುತ್ತರೋ (ತಾನೇ ಸಂಭಾವಿತ, ದೊಡ್ಡವ ಎಂದು ತಿಳ್ಕೊಂಡಿರುವವರು), ಕಠಿಣ ಹೃದಯಿಗಳು , ಮೂಢರು, ತಮ್ಮನ್ನೇ ಪಂಡಿತ  ಎಂದು ತಿಳ್ಕೊಂಡವರು 

ಏತೇ ಚಾನ್ಯೇ ಚ ಬಹವಃ ಪಾಪಿಷ್ಠಾ ಧರ್ಮವರ್ಜಿತಾಃ ।

ಗಚ್ಛಂತಿ ಯಮಮಾರ್ಗೇ ಹಿ ರೋದಮಾನಾ ದಿವಾನಿಶಮ್ ॥೧೨॥

ಇವೆಲ್ಲೋರೂ, ಪಾಪಿಗಳೂ, ಧರ್ಮಹೀನರೂ ಆದ ಇನ್ನೂ ಅನೇಕರು ಯಮಮಾರ್ಗಲ್ಲಿ ಹಗಲು ಇರುಳು ಕೂಗಿಕೋಂಡು ಹೋಗುವವು.

ಯಮದೂತೈಸ್ತಾಡ್ಯಮಾನಾ ಯಾಂತಿ ವೈತರಣೀಂ ಪ್ರತಿ ।

ತಸ್ಯಾಂ ಪತಂತಿ ಯೇ ಪಾಪಾಸ್ತಾನಹಂ ಕಥಯಾಮಿ ತೇ ॥೧೩॥

ಯಮದೂತರಿಂದ ಬಡುಸಿಕೋಂಡು, ವೈತರಣೀ ನದಿಯ ಕಡೆಗೆ ಹೋವವು. ಯಾವ ಪಾಪಿಗಳು ಅದರಲ್ಲಿ  ಬೀಳುತ್ತವೆ ಎಂದು ನಾನು ನಿನಗೆ ಹೇಳುತ್ತೆನೆ ಕೇಳು 

ಮಾತರಂ ಯೇsವಮನ್ಯಂತೇ ಪಿತರಂ ಗುರುಮೇವ ಚ ।

ಆಚಾರ್ಯಂ ಚಾಪಿ ಪೂಜ್ಯಂ ಚ ತಸ್ಯಾಂ ಮಜ್ಜಂತಿ ತೇ ನರಾಃ ॥೧೪॥

ಯಾರು ಅಮ್ಮ ಅಪ್ಪ° ಗುರು ಆಚಾರ್ಯ° ಮತ್ತೆ ಪೂಜ್ಯರ ಅವಮಾನಿಸುತ್ತರೋ  ಆ ಮನುಷ್ಯರು ಅದರಲ್ಲಿ ಮುಳುಗುತ್ತವೆ 

ಪತಿವ್ರತಾಂ ಸಾಧುಶೀಲಾಂ ಕುಲೀನಾಂ ವಿನಯಾನ್ವಿತಾಮ್ ।

ಸ್ತ್ರಿಯಂ ತ್ಯಜಂತಿ ಯೇ ದ್ವೇಷಾದ್ವೈತರಣ್ಯಾಂ ಪತಂತಿ ತೇ ॥೧೫॥

ಆರು ಪತಿವ್ರತೆಯೂ, ಸಾಧುಶೀಲೆಯೂ, ಕುಲೀನಳೂ, ವಿನಯಶೀಲೆಯೂ ಆದ ಸ್ತ್ರೀಯರ ದ್ವೇಷ ತ್ಯಜಿಸುವುದಿಲ್ಲವೋ  ಅವರು ವೈತರಣೀ ನದಿಲಿ ಬೀಳುತ್ತವು.

ಸತಾಂ ಗುಣಸಹಸ್ರೇಷು ದೋಷಾನಾರೋಪಯಂತಿ ಯೇ ।

ತೇಷ್ವವಜ್ಞಾಂ ಚ ಕುರ್ವಂತಿ ವೈತರಣ್ಯಾಂ ಪತಂತಿ ತೇ ॥೧೬॥

ಯಾರು ಸಾವಿರಾರು ಗುಣಗಳಿದ್ದವರ ಮೇಲೆ  ದೋಷಾರೋಪಣೆ ಮಾಡುತ್ತರೋ ಮತ್ತೆ ಅವರನ್ನು  ತಿರಸ್ಕಾರ ಮಾಡುತ್ತರೋ ಅವು ವೈತರಣೀ ನದಿಲಿ ಬೀಳುತ್ತಾ ರೆ 

ಬ್ರಾಹ್ಮಣಾಯ ಪ್ರತಿಶ್ರುತ್ಯ ಯಥಾರ್ಥಂ ನ ದದಾತಿ ಯಃ ।

ಆಹೂಯ ನಾಸ್ತಿ ಯೋ ಬ್ರೂಯಾತ್ತ ಯೋರ್ವಾಸಶ್ಚ ಸಂತತಮ್ ॥೧೭॥

ಯಾರು ಬ್ರಾಹ್ಮಣರಿಗೆ ಪ್ರತಿಜ್ಞೆ ಮಾಡಿ ಅದರ ಪ್ರಕಾರವಾಗಿ ಕೊಡುವುದಿಲ್ಲವೋ, ಅವರ ದ್ವನಿಗೊಂಡಿಕ್ಕಿ (ಆಹ್ವಾನಿಸಿ) ಎಂತದೂ ಇಲ್ಲ ಎಂದು ಹೇಳುತ್ತರೋ  ಅವು ಏವತ್ತೂ ಅಲ್ಲೇ ವಾಸ ಮಾಡುತ್ತರೆ 

ಸ್ವಯಂ ದತ್ತಾಪಹರ್ತಾ ಚ ದಾನಂ ದತ್ವಾsನುತಾಪಕಃ ।

ಪರವೃತ್ತಿ ಹರಶ್ಚೈವ ದಾನೇ ದತ್ತೇ ನಿವಾರಕಃ ॥೧೮॥

ತಾನೇ ದಾನ ಕೊಟ್ಟದ್ದರ ಕಿತ್ತುಕೊಂಡವ  ದಾನವ ಕೊಟ್ಟು ಪಶ್ಚಾತ್ತಾಪ ಪಡುವವರು ಪರರ ಜೀವನ ಅಪಹರಿಸುವವ, ಮತ್ತೊಬ್ಬ ದಾನ ಕೊಟ್ಟರೆ  ನಿಷೇಧಿಸುವವ

ಯಜ್ಞವಿಧ್ವಂಸಕಶ್ಚೈವ ಕಥಭಂಗಕರಶ್ಚ ಯಃ ।

ಕ್ಷೇತ್ರಸೀಮಾಹರಶ್ಚೈವ ಯಶ್ಚ ಗೋಚರಕರ್ಷಕಃ ॥೧೯॥

ಯಜ್ಞವ ಧ್ವಂಸ ಮಾಡುವವ, ಪುರಾಣ ಕಥಗೆ ವಿಘ್ನವುಂಟುಮಾಡುವವ, ಹೊಲದ ಮೇರೆಯ ಅಪಹರುಸುವವ (ಜಾಗೆಯ ಗಡಿಯ ಅತಿಕ್ರಮಣ ಮಾಡುವಂವ), ಗೋಮಳವ (ಭೂಮಿಯ/ಪ್ರದೇಶವ) ಅಪಹರುಸುವವ

ಬ್ರಾಹ್ಮಣೋ ರಸವಿಕ್ರೇತಾ ಯದಿಸ್ಯಾದ್ ವ್ಯಷಲೀಪತಿಃ ।

ವೇದೋಕ್ತಯಜ್ಞಾದನ್ಯತ್ರ ಸ್ವಾತ್ಮಾರ್ಥಂ ಪಶುಮಾರಕಃ ॥೨೦॥

ಬ್ರಾಹ್ಮಣನಾಗಿಯೂ ರಸವಿಕ್ರಯ (ಮಾದಕ ದ್ರವ ಪದಾರ್ಥವ ಮಾರುವವ) ಮಾಡುವವ ಕೀಳ್ದರ್ಜೆಸ್ತ್ರೀಯ ವರಿಸುವವ  ವೇದೋಕ್ತಯಜ್ಞಂಗೊಕ್ಕೆ ವ್ಯತಿರಿಕ್ತವಾಗಿ ಸ್ವಾನಂದಕ್ಕಾಗಿ ಪಶುಹತ್ಯೆಮಾಡುವವ

ಬ್ರಹ್ಮಕರ್ಮಪರಿಭ್ರಷ್ಟೋ ಮಾಂಸಭೋಕ್ತಾ ಚ ಮದ್ಯಪಃ ।

ಉಚ್ಛೃಂಖಲಿಸ್ವಭಾವೋ ಯಃ ಶಾಸ್ತ್ರಾಧ್ಯಯನವರ್ಜಿತಃ ॥೨೧॥

ಬ್ರಹ್ಮಕರ್ಮವ ಮಾಡದ ಇರುವವರು ಮಾಂಸ ಭಕ್ಷಣೆ ಮಾಡುವವ, ಮದ್ಯಪಾನ ಮಾಡುವವ  ಸ್ವೇಚ್ಛಾಚಾರಿಯಾದವ, ಶಾಸ್ತ್ರಾಧ್ಯಯನ ಮಾಡದೆ ಇದ್ದವ

ವೇದಾಕ್ಷರಂ ಪಠೇಚ್ಛೂದ್ರಃ ಕಾಪಿಲಂ ಯಃ ಪಯಃ ಪಿಬೇತ್ ।

ಧಾರಯೇದ್ ಬ್ರಹ್ಮಸೂತ್ರಂ ಚ ಭವೇದ್ವಾ ಬ್ರಾಹ್ಮಣೀ ಪತಿಃ ॥೨೨॥

ಯಾವ ಶೂದ್ರನಾದವ  ವೇದಾಕ್ಷರವ ಪಠಿಸುತ್ತನೋ, ಕಪಿಲೆಯ ಹಾಲ ಕುಡಿತ್ತನೋ, ಯಜ್ಞೋಪವೀತವ ಧರುಸುತ್ತನೋ, ಬ್ರಾಹ್ಮಣ ಸ್ತ್ರೀಯ ಗಂಡನಾಗುತ್ತಾನೋ,

ರಾಜಭಾರ್ಯಾಭಿಲಾಷೀ ಚ ಪರದಾರಾಪಹಾರಕಃ ।

ಕನ್ಯಾಯಾಂ ಕಾಮುಕಶ್ಛೈವ ಸತೀನಾಂ ದೂಶಕಶ್ಚ ಯಃ ॥೨೩॥

ರಾಜನ ಪತ್ನಿಯ ಇಚ್ಛಿಸುವವ, ಮತ್ತೆ ಪರಸ್ತ್ರೀಯರ ಅಪಹರಿ ಸುವವ  ಕನ್ಯೆಯರ ಕಾಮಿಸುವವ ಮತ್ತೆ ಪತಿವ್ರತಾ ಸ್ತ್ರೀಯರ ದೂಷಿಸುವವ

ಏತೇ ಚಾನ್ಯೇ ಚ ಬಹವೋ ನಿಷಿದ್ಧಾಚರಣೋತ್ಸುಕಾಃ ।

ವಿಹಿತತ್ಯಾಗಿನೋ ಮೂಢಾ ವೈತರಣ್ಯಾಂ ಪತಂತಿ ತೇ ॥೨೪॥

ಇವಲ್ಲರೂ, ನಿಷಿದ್ಧವಾದ ಆಚರಣೆಲಿ ಉತ್ಸುಕರಾದೋರು, ಶಾಸ್ತ್ರವಿದಿತ ಕರ್ಮಗಳ ತ್ಯಜಿಸಿದ ಮೂಢರು ಮತ್ತೆ ಇನ್ನೂ ಅನೇಕರು ವೈತರಣೀ ನದಿಲಿ ಬೀಳುತ್ತಾರೆ 

ಸರ್ವಂ ಮಾರ್ಗಮತಿಕ್ರಮ್ಯ ಯಾಂತಿ ಪಾಪಾ ಯಮಾಲಯೇ ।

ಪುನರ್ಯಮಾಜ್ಞಯಾಗತ್ಯ ದೂತಾಸ್ತಸ್ಯಾಂ ಕ್ಷಿಪಂತಿ ತಾನ್ ॥೨೫॥

ಮಾರ್ಗಗಳೆಲ್ಲವ ದಾಟಿ ಪಾಪಿ ಯಮಾಲಯಕ್ಕೆ ಹೋಗುವವು. ಅಲ್ಲಿ ಯಮನ ಆಜ್ಞೆ ಪ್ರಕಾರ ದೂತರು ಅವರ ಪುನಃ ಅದೇ ವೈತರಣೀ ನದಿಲಿ ಬೀಳುತ್ತಾರೆ 

ಯಾ ವೈ ದುರಂಧರಾ ಸರ್ವಧೌರೇಯಾಣಾಂ ಖಗಾಧಿಪ ।

ಅತಸ್ತಸ್ಯಾಂ ಪ್ರಕ್ಷಿಪಂತಿ ವೈತರಣ್ಯಾಂ ಚ ಪಾಪಿನಃ ॥೨೬॥

ಏ ಪಕ್ಷಿರಾಜನೇ!, ನರಕಗಳಲ್ಲಿ ಅತಿ ಮುಖ್ಯವಾದ ವೈತರಣಿಲಿ ಆ ಪಾಪಿಗಳ ಅವು ಅಂಬಗ ಇಡಿದು ಕೊಳ್ಳುತ್ತಾರೆ 

ಕೃಷ್ಣಾ ಗೌರ್ಯಾದಿ ನೋ ದತ್ತಾ ನೋರ್ಧ್ವದೇಹಕ್ರಿಯಾಃ ಕೃತಾಃ ।

ತಸ್ಯಾಂ ಭುಕ್ತ್ವಾ ಮಹದುಃಖಂ ಯಾಂತಿ ವೃಕ್ಷಂ ತಟೋದ್ಭವಮ್ ॥೨೭॥

ಕೃಷ್ಣವರ್ಣದ ಗೋವಿನ ದಾನಕೊಡದೆ ಇದ್ದವರು ಔರ್ಧ್ವದೇಹಕ್ರಿಯೆಯ ಮಾಡದ್ದೆ ಇದ್ದವರು  ಅದರಲ್ಲಿ ಮಹಾದುಃಖವ ಅನುಭವಿಸಿ, ಆ ನದಿಯ ದಡಲ್ಲಿ ಹುಟ್ಟಿದ ಮರದ ಹತ್ತ್ತಿರ ಹೋಗುತ್ತವೆ 

ಕೂಟಸಾಕ್ಷ್ಯಪ್ರದಾತಾರಃ ಕೂಟಧರ್ಮಪರಾಯಣಾಃ ।

ಛಲೇನಾರ್ಜಸಂಸಕ್ತಾಶ್ಚೌರ್ಯವೃತ್ತ್ಯಾ ಚ ಜೀವಿನಃ ॥೨೮॥

ಸುಳ್ಳು ಸಾಕ್ಷಿ ಹೇಳುವವರು ಮಿಥ್ಯಾಧರ್ಮಲ್ಲಿ ಪ್ರವೃತ್ತರಾಗಿರುವವರು  ಮೋಸದಿಂದ ಸಂಪಾನೆ ಮಾಡುವವರು ಕದ್ದು ಜೀವನ ಮಾಡುವವರು 

ಛೇದಯಂತ್ಯತಿವೃಕ್ಷಾಂಶ್ಚ ವನಾರಾಮವಿಭಂಜಕಾಃ ।

ವ್ರತಂ ತೀರ್ಥಂ ಪರಿತ್ಯಜ್ಯ ವಿಧವಾಶೀಲನಾಶಕಾಃ ॥೨೯॥

ದೊಡ್ಡ ಮರಗಳು  ಕತ್ತರಿಸುವವು, ಕಾಡುಗಳ, ತೋಟಗಳ ನಾಶಮಾಡುವವು, ವ್ರತಗಳನ್ನೂ ತೀರ್ಥಗಳನ್ನೂ ತ್ಯಜಿಸುವವರು ವಿಧವೆಯ ಶೀಲವ ನಾಶಮಾಡುವವರು 

ಭರ್ತಾರಂ ದೂಷಯೇನ್ನಾರೀ ಪರಂ ಮನಸಿ ಧಾರಯೇತ್ ।

ಇತ್ಯಾದ್ಯಾಃ ಶಾಲ್ಮಲೀವೃಕ್ಷೇ ಭುಜಂತೇ ಬಹುತಾಡನಮ್ ॥೩೦॥

ತನ್ನ ಪತಿಯ ದೂಷಿಸಿ, ಪರರ ಮನಸ್ಸಿಲ್ಲಿ ಧ್ಯಾನುಸುವ ಸ್ತ್ರೀ ಮೊದಲಾದವರು  ಶಾಲ್ಮಲೀ ವೃಕ್ಷದ ಹತ್ತಿರ ಬಹಳ ಪೆಟ್ಟು ತಿನ್ನುವರು 

ತಾಡನಾತ್ಪತಿತಾ ದೂತಾಃ ಕ್ಷಿಪಂತಿ ನರಕೇಷು ತಾನ್ ।

ಪತಂತಿ ತೇಷು ಯೇ ಪಾಪಾಸ್ತಾನಹಂ ಕಥಯಾಮಿ ತೇ ॥೩೧॥

ಆ ಹೊಡೆತದಿಂದ ಕೆಳಗೆ ಬಿದ್ದರು ದೂತರು ಎಳದು ನರಕದೊಳಗೆ ಬಿಡುತ್ತಾರೆ . ಯಾವ ಪಾಪಿಗಳು  ಅದರಲ್ಲಿ ಬೀಳುತ್ತರೋ ಎಂದು ನಿನಗೆ ಹೇಳುತ್ತೆನೆ  


Friday, 29 May 2020

ಗ ಪು ಅಧ್ಯಾಯ 3 ಭಾಗ 3


ಅರ್ಧಂ ಖಾತ್ವಾsವಟೇ ಕೇಚಿದ್ಭಿದ್ಯಂತೇ ಮೂರ್ಧ್ನಿ ಸಾಯಕೈಃ ।

ಅಪರೇ ಯಂತ್ರಮಧ್ಯಸ್ಥಾಃ ಪೀಡ್ಯಂತೇ ಚೇಕ್ಷುದಂಡವತ್ ॥೫೦॥

ಕೆಲವರ ಅರ್ಧದೇಹವ ಹಳ್ಳದಲ್ಲಿ ಹೂತು ಅವರ ಮಸ್ತಕವ ಚೂಪಾದ ಬಾಣಗಳಿಂದ ಕುಕ್ಕಿ ಕೆಲವರ ಯಂತ್ರದ ಮಧ್ಯಲ್ಲಿ ಹಾಕಿದ ಕಬ್ಬಿನ ತುಂಡಿನ ರೀತಿಲಿ ಹಿಂಡುತ್ತರೆ 

ಕೇಚಿತ್ಪ್ರಜ್ವಲಮಾನೈಸ್ತು ಸಾಂಗಾರೈಃ ಪರಿತೋ ಭೃಶಮ್ ।

ಉಲ್ಮು ಕೈರ್ವೇಷ್ಟಯಿತ್ವಾ ಚ ಧ್ಮ್ಯಾಯಂತೇ ಲೋಹಪಿಂಡವತ್ ॥೫೧॥

ಕೆಲವರ ಪ್ರಜ್ವಲಿಸುವ ಕೆಂಡಗಳಿಂದ ಬಹಳವಾಗಿ ಹೊತ್ತಿ ಉರಿವ ಮುಷ್ಟಗೆ ಹೊದ್ದಿಸಿ ಲೋಹದ ಅದುರಿನ ಹಾಗೆ ಕರಗುಸುತ್ತರೆ 

ಕೇಚಿದ್ಭ್ರತಮಯೇ ಪಾಕೇ ತೈಲಪಾಕೇ ತಥಾ ಪರೇ ।

ಕಟಾಹಕ್ಷಿಪ್ತವಟವತ್ಪ್ರಕ್ಷಿಪ್ಯಂತೇ ಯತಸ್ತತಃ ॥೫೨॥

ಕೆಲವರ ತುಪ್ಪದ ಪಾಕಲ್ಲಿಯೂ, ಕೆಲವರ ಎಣ್ಣೆಯ ಪಾಕಲ್ಲಿಯೂ ಅದ್ದಿ ಕಾದ ಎಣ್ಣೆಯ ಕೊಪ್ಪರಿಗೆಯಲ್ಲಿ  ಹಾಕಿ ತಿರುಗಿಸುತ್ತಾ ತಿರುಗಿಸುತ್ತಿದ್ದರು 

ಕೇಚಿನ್ಮತ್ತ ಗಜೇಂದ್ರಾಣಾಂ ಕ್ಷಿಪ್ಯಂತೇ ಪುರತಃ ಪಥಿ ।

ಬದ್ಧ್ವಾ ಹಸ್ತೌ ಚ ಪಾದೌ ಚ ಕ್ರಿಯಂತೇ ಕೇsಪ್ಯಧೋಮುಖಾಃ ॥೫೩॥

ಕೆಲವರ ಮದ್ದಾನೆಗಳ ಮುಂದೆ ದಾರಿಯಲಿ ಹಿಡಿದು  ಕೆಲವರ ಕೈ ಮತ್ತೆ ಕಾಲ ಕಟ್ಟಿ ತಲೆಕೆಳವಾಗಿ ತೂಗುಹಾಕಿದ್ದರು 

ಕ್ಷಿಪ್ಯಂತೇ ಕೇsಪಿ ಕೂಪೇಷು ಪಾತ್ಯಂತೇ ಕೇsಪಿ ಪರ್ವತಾತ್ ।

ನಿಮಗ್ನಾಃ ಕೃಮಿಕುಂಡೇಷು ತುದ್ಯಂತೇ ಕೃಮಿಭಿಃ ಪರೇ ॥೫೪॥

ಕೆಲವರ ಬಾವಿಗೆ ತಳ್ಳುತ್ತಿದ್ದರು . ಕೆಲವರ ಪರ್ವತಗಳ ಮೇಲಿಂ ದ ಹೊರಳಿಸಿದರು . ಕೆಲವರ ಹುಳುಹುಪ್ಪಟೆಗೊ ತುಂಬಿದ ಕುಂಡಲ್ಲಿ ಮುಳುಗುಸುತ್ತದ್ದರು  ಅವು ಕ್ರಿಮಿಗಳಿಂದ ಕಚ್ಚಲ್ಪಡುತ್ತಿದ್ದವು 

ವಜ್ರತುಂಡೈರ್ಮಹಾಕಾಕೈರ್ಗೃಧ್ರೈರಾಮಿಷಗೃಧ್ನುಭಿಃ ।

ನಿಷ್ಕುಷ್ಯಂತೇ ಶಿರೋದೇಶೇ ನೇತ್ರೇ ವಾಸ್ಯೇ ಚ ಚುಂಚುಭಿಃ ॥೫೫॥

ವಜ್ರದoತೇ  ಕೊಕ್ಕುರುವ ದೊಡ್ಡ ಕಾಕೆಗಳ  ಮಾಂಸ ಭಕ್ಷಿಗಳಾದ ಮತ್ತೆ ತಿನ್ನಲು  ಕಾತರುಸುವ ಹದ್ದುಗಳು , ಆ ಪಾಪಿಯ ತಲೆಮೇಲ್ಕಟೆ, ಕಣ್ಣು, ಮೋರೆಗಳಲ್ಲಿ ತಮ್ಮ ಕೊಕ್ಕುಗಳಿಂದ ಕುಕ್ಕಿ ಕುಕ್ಕಿ ಕೀಳುತ್ತಿದ್ದವು .

ಋಣಂ ವೈ ಪ್ರಾರ್ಥಯಂತ್ಯನ್ಯೇ ದೇಹಿ ದೇಹಿ ಧನಂ ಮಮ ।

ಯಮಲೋಕೇ ಮಯಾ ದೃಷ್ಟೋ ಧನಂ ಮೇ ಭಕ್ಷಿತಂ ತ್ವಯಾ ॥೫೬॥

ನನ್ನ ಪೈಸೆಯ ಕೊಡು., ಕೊಡು, ಯಮಲೋಕಲ್ಲಿ ಈಗ ನಿನ್ನ ನೋಡಲ್ಪಟ್ಟತ್ತು, ನಿನ್ನಿಂದ ನನ್ನ ಪೈಸೆ ತಿಂದಾಕಲ್ಪತ್ತಿದ್ದೀಯ 

ಏವಂ ವಿವದಮಾನಾನಾಂ ಪಾಪಿನಾಂ ನರಕಾಲಯೇ ।

ಛಿತ್ತ್ವಾಸಂದಂಶಕೈರ್ದೂತಾ ಮಾಂಸಖಂಡಾಂದದಂತಿ ಚ ॥೫೭॥

ಈ ರೀತಿ ನರಕಾಲಯಲ್ಲಿ ಪಾಪಿಗಳು  ಲಡಾಯಿ ಮಾಡಿಕೊಂಡು ಯಮದೂತರು ಚಿಮಿಟಿಂದ ಸಾಲಗಾರನ ಮಾಂಸಖಂಡಂಗಳ ಕತ್ತರಿಸಿ ಸಾಲಕೊಟ್ಟವನಿಗೆ ಕೊಡುತ್ತಿದ್ದರು 

ಏವಂ ಸಂತಾಡ್ಯ ತಾನ್ದೂತಾಃ ಸಂಕೃಷ್ಯ ಯಮಶಾಸನಾತ್ ।

ತಾಮಿಸ್ರಾದಿಷು ಘೋರೇಷು ಕ್ಷಿಪ್ಯಂತೇ ನರಕೇಷು ಚ ॥೫೮॥

ಈ ರೀತಿ ಯಮದೂತರು ಅವರ ಬಡುದು ಯಮನ ಆಜ್ಞೆಯ ಪ್ರಕಾರ ಅವರ ಎಳಕ್ಕೊಂಡು ಹೋಗಿ ತಾಮಿಸ್ರ ಮೊದಲಾದ ಘೋರವಾದ ನರಕಗಳಲ್ಲಿ ಹಾಕುತ್ತಿದ್ದರು 

ನರಕಾ ದುಃಖಬಹುಲಾಸ್ತತ್ರ ವೃಕ್ಷ ಸಮೀಪತಃ ।

ತೇಷ್ವಸ್ತಿ ಯನ್ಮಹದ್ದುಃಖಂ ತದ್ವಾಚಾಮಪ್ಯಗೋಚರಮ್ ॥೫೯॥

ಮರದ ಹತತ್ತಿರ ಬಹು ದುಃಖಗಳಿಂದ ತುಂಬಿದ ನರಕಗಳು ಇದ್ದು. ಅಲ್ಲಿ ಯಾವ ಮಹಾ ದುಃಖ ಇದ್ದೋ ಅದರ ಮಾತಿಲ್ಲಿ ಹೇಳಲು  ಸಾಧ್ಯವಿಲ್ಲ 

ಚತುರಶೀತಿಲಕ್ಷಾಣಿ ನರಕಾಃ ಸಂತಿ ಖೇಚರ ।

ತೇಷಾಂ ಮಧ್ಯೇ ಘೋರತಮಾ ಧೌರೇಯಾಸ್ತ್ವೇಕವಿಂಶತಿಃ ॥೬೦॥

ಎಲೈ ಗರುಡನೇ!, ಒಟ್ಟು ಎಂಬತ್ತನಾಲ್ಕು ಲಕ್ಷ ನರಕಗಳು ಇದ್ದು. ಅವುಗಳಲ್ಲಿ ಅತಿ ಘೋರವಾದ ಇಪ್ಪತ್ತೊಂದು ನರಕಗಳು  ಮುಖ್ಯವಾದವುಗಳು 

ತಾಮಿಸ್ರೋ ಲೋಹಶಂಕುಶ್ಚ ಮಹಾರೌರವಶಾಲ್ಮಲೀ ।

ರೌರವಃ ಕುಡ್ಮಲಃ ಕಾಲಸೂತ್ರಕಃ ಪೂತಿಮೃತ್ತಿಕಃ ॥೬೧॥

ತಾಮಿಸ್ರ, ಲೋಹಶಂಕು, ಮಹಾರೌರವ, ಶಾಲ್ಮಲೀ, ರೌರವ, ಕುಡ್ಮಲ, ಕಾಲಸೂತ್ರಕ, ಪೂತಿಮೃತ್ತಿಕ,

ಸಂಘಾತೋ ಲೋಹಿತೋದಶ್ಚ ಸವಿಷಃ ಸಂಪ್ರತಾಪನಃ ।

ಮಹಾನಿರಯಕಾಕೋಲೌ ಸಂಜೀವನಮಹಾಪಥೌ ॥೬೨॥

ಸಂಘಾತ, ಲೋಹಿತೋದ, ಸವಿಷ, ಸಂಪ್ರತಾಪನ, ಮಹಾನಿರಯ, ಕಾಕೋಲ, ಸಂಜೀವನ, ಮಹಾಪಥಿ,

ಅವೀಚಿರಂಧತಾಮಿಸ್ರಃ ಕುಂಭೀಪಾಕಸ್ತಥೈವ ಚ ।

ಸಂಪ್ರತಾಪನನಾಮೈಕಸ್ತಪನೆಸ್ತ್ವೇಕವಿಂಶತಿಃ ॥೬೩॥

ಅವೀಚಿ, ಅಂಧತಾಮಿಸ್ರ, ಕುಂಭೀಪಾಕ, ಸಂಪ್ರತಾಪನ ಮತ್ತೆ ತಪನ- ಇವೆ ಆ ಇಪ್ಪತ್ತೊಂದು ನರಕಗಳು 

ನಾನಾಪೀಡಾಮಯಾಃ ಸರ್ವೇ ನಾನಾಭೇದೈಃ ಪ್ರಕಲ್ಪಿತಾಃ ।

ನಾನಾಪಾಕವಿಪಾಕಶ್ಚ ಕಿಂಕರೌಘೈರಧಿಷ್ಠಿತಾಃ ॥೬೪॥

ಈ ಎಲ್ಲ ನರಕಗಳು ಅನೇಕ ರೀತಿಯ ಯಾತನೆಗಳಿಂದ ತುಂಬಿದ್ದು. ಅವುಗಳ  ಅನೇಕ ಭಾಗಗಳಾಗಿ ಮಾಡಲ್ಪಟ್ಟಿದು. ಅಲ್ಲಿ ನಾನಾ ರೀತಿಯ ಪಾಪಗಳಿಗೆ ತಕ್ಕ ಫಲಗಳ ಅನುಭವಿಸಬೇಕು . ಯಮಕಿಂಕರರು ಅದರಲ್ಲಿದ್ದರು  (ಅಲ್ಲಿದ್ದವು).

ಏತೇಷು ಪತಿತಾ ಮೂಢಾಃ ಪಾಪಿಷ್ಠಾ ಧರ್ಮವರ್ಜಿತಾಃ ।

ತತ್ರ ಭುಂಜಂತಿ ಕಲ್ಪಾಂತೇ ತಾಸ್ತಾ ನರಕಯಾತನಾಃ ॥೬೫॥

ಇವುಗಳಲ್ಲಿ ಬಿದ್ದ ಪಾಪಿಗಳಾದ ಮೂಢರು, ಧರ್ಮವ ಬಿಟ್ಟವು, ಅಲ್ಲಿ ಕಲ್ಪದ ಅಂತ್ಯದವರೇಗೆ ಆಯಾ ನರಕಯಾತನೆಗಳ ಅನುಭವುಸುತ್ತವೆ 

ಯಾಸ್ತಾಮಿಸ್ರಾಂಧತಾಮಿಸ್ರಾ ರೌರವಾದ್ಯಶ್ಚ ಯಾತನಾಃ ।

ಭುಂಕ್ತೇ ನರೋ ವಾ ನಾರೀ ವಾ ಮಿಥಃ ಸಂಗೇನ ನಿರ್ಮಿತಾಃ ॥೬೬॥

ತಾಮಿಸ್ರ, ಅಂಧತಾಮಿಸ್ರ, ರೌರವಾದಿ ನರಕಗಳ ಯಾತನೆಗಳ ಯಾವ ಪುರುಷ ಅಥವಾ ಸ್ತ್ರೀ ಅನುಭವುಸುತ್ತವೋ, ಅದರ ಪಾಪಪೂರಿತವಾದ ಪರಸ್ಪರ ಸಂಯೋಗದಿಂದಲೇ (ಕಾಮಲೋಲುಪತೆಂದ) ಪಡೆದಿರುತ್ತವೆ 

ಏವಂ ಕುಟುಂಬಂ ಬಿಭ್ರಾಣ ಉದರಂಭರ ಏವ ವಾ ।

ವಿಸೃಜ್ಯೇಹೋಭಯಂ ಪ್ರೇತ್ಯ ಭುಂಕ್ತೇ ತತ್ಫಲಮೀದೃಶಮ್ ॥೬೭॥

ಈ ರೀತಿ ತನ್ನ ಕುಟುಂಬವ ಪಾಲಿಸುವವ ಮತ್ತೆ ಉದರ ಪೋಷಣೆ ಮಾಡುವವ ಇವರೆಡನ್ನೂ ಬಿಟ್ಟು ಪರಲೋಕಕ್ಕೆ ಹೋಗಿ ಈ ರೀತಿಯಾಗಿ ಅದರ ಫಲವ ಅನುಭವುಸುತ್ತನೆ .

ಏಕಃ ಪ್ರಪದ್ಯಂತೇ ಧ್ವಾಂತಂ ಹಿತ್ವೇದಂ ಸ್ವಂ ಕಲೇವರಮ್ ।

ಕುಶಲೇತರಪಾಥೇಯೋ ಭೂತದ್ರೋಹೇಣ ಯದ್ಭೃತಮ್ ॥೬೮॥

ಅವ ತನ್ನ ಸ್ಥೂಲ ಶರೀರವ ಬಿಟ್ಟು  ಇತರರಿಗೆ ಮಾಡಿದ ದ್ರೋಹದಿಂದ ಉಂಟಾದ ಪಾಪದ ಬುತ್ತಿಯೊಟ್ಟಿಗೆ ಅಂಧಕಾರಪೂರ್ಣವಾದ ನರಕಲ್ಲಿ ತಾನೋಬ್ಬನೇ ಬೀಳುತ್ತಾನೆ 

ದೈವೇಸನಾಸಾದಿತಂ ಸತ್ಯ ಶಮಲೇ ನಿರಯೇ ಪುಮಾನ್ ।

ಭುಂಕ್ತೇ ಕುಟುಂಬಪೋಷಸ್ಯ ಹೃತದ್ರವ್ಯ ಇವಾತುರಃ ॥೬೯॥

ಆ ಮನುಷ್ಯ ವಿಧಿನಿಯಮಕ್ಕಧೀನನಾಗಿ, ಆ ತುಚ್ಛ ನರಕಲ್ಲಿ ತನ್ನ ಕುಟುಂಬಕ್ಕೆ ಆಧಾರವಾದ ಧನವ ಕಡಕೊಂಡವನಾಗೆ ದುಃಖವ ಅನುಭವುಸುತ್ತನೆ 

ಕೇವಲೇನ ಹ್ಯಧರ್ಮೇಣ ಕುಟುಂಬಭರಣೋತ್ಸುಕಃ ।

ಯಾತಿ ಜೀವೋಂಧತಾಮಿಸ್ರಂ ಚರಮಂ ತಮಸಃ ಪದಮ್ ॥೭೦॥

ಕೇವಲ ಅಧರ್ಮದ ತನ್ನ ಕುಟುಂಬ ಪೋಷಣೆಲಿ ಉತ್ಸುಕನಾಗಿಪ್ದ್ದ ಜೀವ ಅತ್ಯಂತ ಅಂಧಕಾರಯುಕ್ತ ಜಾಗ ಆದ ಅಂಧತಾಮಿಸ್ರ ಹೇಳುವ ನರಕಕ್ಕೆ ಹೋಗುತ್ತಾನೆ 

ಅಧಸ್ತಾನ್ನರಲೋಕಸ್ಯ ಯಾವತೀರ್ಯಾತನಾದಯಃ ।

ಕ್ರಮಶಃ ಸಮನುಕ್ರಮ್ಯ ಪುನರತ್ರಾ ವ್ರಜೇಚ್ಛುಚಿಃ ॥೭೧॥

ನರಲೋಕದ ಕೆಳಗೆ ಇದ್ದ ಯಾತನೆಗಳ ಕ್ರಮವಾಗಿ ಅನುಭವುಸಿ ಪರಿಶುದ್ಧನಾಗಿ ಪುನಃ ಇಲ್ಲಿ ಬರುತ್ತಾರೆ .

 ಇತಿ ಶ್ರೀ ಗರುಡಪುರಾಣೇ ಸಾರೋದ್ಧಾರೇ ಯಮಯಾತನಾ ನಿರೂಪಣಂ ನಾಮ ತೃತೀಯೋಧ್ಯಾಯಃ ॥

ಇಲ್ಲಿಗೆ ಗರುಡಪುರಾಣಲ್ಲಿ ಸಕಲಶಾಸ್ತ್ರಗಳ ಸಾರವಾದ ‘ಸಾರೋದ್ಧಾರ’ ವಿಭಾಗಲ್ಲಿ ‘ಯಮಯಾತನೆಯ ನಿರೂಪಣೆ’ ಹೇಳುವ ಮೂರನೆ ಅಧ್ಯಾಯ ಮುಗಿದದ್ದು 

Thursday, 28 May 2020

ಗ ಪು ಅಧ್ಯಾಯ 3 ಭಾಗ 2

ಪು 3  – ಭಾಗ 2

 

ತತ್ರ ವೃಕ್ಷೋ ಮಹಾನೇಕೋ ಜ್ವಲದಗ್ನಿಸಮಪ್ರಭಃ ।

ಪಂಚಯೋಜನವಿಸ್ತೀರ್ಣ ಏಕಯೋಜನಮುಚ್ಛ್ರಿತಃ ॥೩೪॥

ಅಲ್ಲಿ ದೊಡ್ಡದಾದ ಒಂದು ಮರ ಇದ್ದು. ಅದು ನೋಡಲು ಕಿಚ್ಚಿನಲ್ಲಿ ಕಾಂತಿಯುಕ್ತವಾಗಿದ್ದು. ಅದರ ವಿಸ್ತೀರ್ಣ ಐದು ಯೋಜನ ದಷ್ಟು. ಅದರ ಎತ್ತರ ಒಂದು ಯೋಜನದಷ್ಟು ಆಗಿದೆ 

ತದ್ವೃಕ್ಷೇ ಶೃಂಖಲೈರ್ಬದ್ಧ್ವಾsದೋಮುಖಂ ತಾಡಯಂತಿ ತೇ ।

ರುದಂತಿ ಜ್ವಲಿತಾಸ್ತತ್ರ ತೇಷಾಂ ತ್ರಾತಾ ನ ವಿದ್ಯತೇ ॥೩೫॥

ಆ ಮರಕ್ಕೆ ಪಾಪಿಗಳ ತಲೆಕೆಳಾಗಿ ಕಟ್ಟುತ್ತಿದ್ದರು  ಅವು ತೂಗಾಡುತ್ತಿದ್ದವು. ಅಲ್ಲಿ ಬೆಂದು ಶೋಕಿಸುವ ಅವನನ್ನು ರಕ್ಷಿಸಲು ಯಾರು  ಇರುವುದಿಲ್ಲ 

ತಸ್ಮಿನ್ವೈ ಶಾಲ್ಮಲೀವೃಕ್ಷೇ ಲಂಬಂತೇsನೇಕಪಾಪಿನಃ ।

ಕ್ಷುತ್ಪಿಪಾಸಾಪರಿಶ್ರಾಂತಾ ಯಮದೂತೈಶ್ಚ ತಾಡಿತಾಃ ॥೩೬||

ಆ ರೇಷ್ಮೆಹತ್ತಿಯ ಮರದಲ್ಲಿ ಅನೇಕ ಪಾಪಿಗಳು  ಹಸಿವಿನಿಂದ ಆಸರಂದ ಬಳಲಿಗೊಂಡು, ಯಮದೂತರಿಂದ ಬಡಿಸಿಕೋಂಡು ತೂಗಾಡಿಕೊಂಡು ಇದ್ದವು 

ಕ್ಷಮಧ್ವಂ ಭೋsಪರಾಧಂ ಮೇ ಕೃತಾಂಜಲಿಪುಟಾ ಇತಿ ।

ವಿಜ್ಞಾಪಯಂತಿ ತಾನ್ ದೂತಾನ್ ಪಾಪಿಷ್ಠಾಸ್ತೇ ನಿರಾಶ್ರಯಾಃ ॥೩೭॥

ನಿರಾಶ್ರಯಿಗಳಾದ ಆ ಪಾಪಿಗಳು  ಕೈಜೋಡಿಸ್ಕೊಂಡು  ಯಮದೂತಹತ್ತಿರ  “ಓಯ್, ಎನ್ನ ಅಪರಾಗಳ ಕ್ಷಮಿಸಿಬಿಡಿ  ಎಂದು ವಿನಂತಿ ಮಾಡುತ್ತಿದ್ದವು 

ಪುನಃಪುನಃಶ್ಚ ತೇ ದೂತೈರ್ಹನ್ಯಂತೇ ಲೋಹಯಷ್ಟಿಭಿಃ ।

ಮುದ್ಗರೈಸೋಮರೈಃ ಕುಂತೈರ್ಗದಾಭಿರ್ಮುಸಲೈರ್ಭೃಶಮ್ ॥೩೮॥

ಮತ್ತೆ ಮತ್ತೆ ಆ ಯಮದೂತರಿಂದ ಲೋಹದ ಬಡಿಗೆಲಿ, ಸುತ್ತಿಗೆ, ಈಟಿ, ಭರ್ಜಿ, ಗದೆ, ಒನಕೆಗಳಿಂದ ಬಡುಸಿಕೊಂಡವು.

ತಾಡನಾಚ್ಚೈವ ನಿಶ್ಚೇಷ್ಟಾ ಮೂರ್ಚಿತಾಶ್ಚ ಭವಂತಿ ತೇ ।

ತಥಾ ನಿಶ್ಚೇಷ್ಟಿತಾನ್ದೃಷ್ಟ್ವಾ ಕಿಂಕರಸ್ತೇ ವದಂತಿ ಹಿ ॥೩೯॥

ಹಾಗೆ ಬಡಿತ್ತದಿಂದ ಮೂರ್ಛಿತರಾಗಿ ನಿಶ್ಚೇಷ್ಟಿತರಾಗುವವು . ಅಷ್ಟ ನಿಶ್ಚೇಷ್ಟಿತರಾದ ಅವರನ್ನು  ನೋಡಿ ಯಮಕಿಂಕರರು ಹೀಗೆ ಹೇಳುತ್ತಿದ್ದ ವು –

ಭೋಃ ಭೋಃ ಪಾಪಾ ದುರಾಚಾರಾಃ ಕಿಮರ್ಥಂ ದುಷ್ಟಚೇಷ್ಟಿತಮ್ ।

ಸುಲಭಾನಿ ನ ದತ್ತಾನಿ ಕಲಾನ್ಯನ್ನಾನ್ಯಪಿ ಕ್ವಚಿತ್ ॥೪೦॥   

“ಏಯಿ ಪಾಪಿಗಳೇ!, ದುರಾಚಾರಿಗಳೇ (ಕೆಟ್ಟ ನಡತೆಯೋರೇ), ಬೇಡಗಟ್ಟೆ ಕೆಲಸಗಳನ್ನು ಎತಕೆ ಮಾಡುತ್ತಿರಿ ? ಅನ್ನ ನೀರು ಮುಂತಾದ ಸುಲಭವಾದ ವಸ್ತುಗಳನ್ನು ಎತಕೆ ಏವತ್ತೂ ದಾನ ಕೊಟ್ಟಿಲ್ಲ 

ಗ್ರಾಸಾರ್ಧಮಪಿ ನೋ ದತ್ತಂ ನ ಶ್ವವಾಯಸಯೋರ್ಬಲಿಮ್ ।

ನಮಸ್ಕೃತಾ ನಾತಿಥಯೋ ನ ಕೃತಂ ಪಿತೃತರ್ಪಣಮ್ ॥೪೧॥

ಅರ್ಧ ತುತ್ತು ಆಹಾರವನ್ನೂ ನಾಯಿ, ಕಾಗಿಗಳಿಗೆ ಕೊಟ್ಟಿಲ್ಲ  ಅತಿಥಿಗಳಿಗೆ ನಮಸ್ಕರಿಸಿಲ್ಲ ಪಿತೃತರ್ಪಣವನ್ನೂ ಮಾಡಿಲ್ಲ 

ಯಮಸ್ಯ ಚಿತ್ರಗುಪ್ತಸ್ಯ ನ ಕೃತಂ ಧ್ಯಾನಮುತ್ತಮಮ್ ।

ನ ಜಪ್ತಶ್ಚ ತಯೋರ್ಮಂತ್ರೋ ನ ಭವೇದ್ಯೇನ ಯಾತನಾ ॥೪೨॥

ಯಮನ ಮತ್ತೆ ಚಿತ್ರಗುಪ್ತನ ಉತ್ತಮವಾದ ದ್ಯಾನವನೂ ಮಾಡಿಲ್ಲ ಯಾವ ಮಂತ್ರದಿಂದ ಈ ಯಾತನೆಗಳು ಉಂಟಾಗಿವೆಯೋ ಅಂತಹ ಅವರ ಮಂತ್ರವನ್ನೂ ಜಪಿಸಿಲ್ಲ 

ನಾಪಿ ಕಿಂಚಿತ್ಕೃತಂ ತೀರ್ಥಂ ಪೂಜಿತಾ ನೈವ ದೇವತಾ ।

ಗೃಹಾಶ್ರಮಸ್ಥಿತೇ ನಾಪಿ ಹಂತಕಾರೋsಪಿ ನೋ ಧೃತಾಃ ॥೪೩॥

ರಜಾರೂ ತೀರ್ಥಯಾತ್ರೆ ಮಾಡಿಲ್ಲ , ದೇವತೆಗಳ ಪೂಜಿಸಿಲ್ಲ ಗೃಹಸ್ಥಾಶ್ರಮಲ್ಲಿದ್ದುಕೋಂಡು ಅನ್ನದಾನವನ್ನೂ ಮಾಡಿಲ್ಲ 

[ಇಲ್ಲಿ ‘ಹಂತಕಾರ’ ಹೇಳಿರೆ, ಭೋಜನದ ಮೊದಲು ಮಡಿಲಿ ವೈಶ್ವದೇವ ಬಲಿ , ಪಂಚಬಲಿ ವಿಧಿ. ಪಂಚಬಲಿಲಿ ದನ, ನಾಯಿ, ಕಾಗೆ - ಕ್ರಿಮಿ - ಕೀಟ ಇತ್ಯಾದಿ) ಹಾಗೂ ಅತಿಥಿಗಳಿಗೆ ಭೋಜನದ ಸ್ವಲ್ಪ ಅಂಶವ ಕೊಡುವ  (ಕೊಡುವ/ಮಡುಗುವ/ತೆಗದು ಮಡುಗುವ) ಕ್ರಮ. ಎಲ್ಲಿ 

ವೈಶ್ವದೇವಬಲಿ ಅಸಾಧ್ಯವೋ ಅಲ್ಲಿ  ಅಗ್ನಿಗೆ ಅಶನದ ಆಹುತಿ ನೀಡಿ ಗೋವು, ನಾಯಿ, ಕಾಗೆ  ಇತ್ಯಾದಿಗಳಿಗೆ ಭೋಜನ ಸಾಮಾಗ್ರಿಗಳ ಕೊಡುವ /ತೆಗದು ಇಡುವ ಕ್ರಮ]

ಶುಶ್ರೂಷಿತಾಶ್ಚ ನೋ ಸಂತೋ ಭುಂಕ್ಷ್ವ ಪಾಪಫಲಂ ಸ್ವಕಮ್ ।

ಯತಸ್ತ್ವಂ ಧರ್ಮಹೀನೋsಸಿ ತತಃ ಸಂತಾಡ್ಯಸೇ ಭೃಶಮ್ ॥೪೪॥

ನೀನು ಸಂತರ ಶುಶ್ರೂಷೆ ಮಾಡಿಲ್ಲ ನೀನು ಮಾಡಿದ ಪಾಪದ ಫಲವ ಅನುಭವುಸು. ನೀನು ಧರ್ಮಹೀನನಾಗಿದರಿಂದ ನಿನ್ನ ಬಡಿಯುತ್ತೆವೆಯೋ ಪಾಪಿಯೇ 

ಕ್ಷಮಾಪರಾಧಂ ಕುರುತೇ ಭಗವಾನ್ಹರಿರೀಶ್ವರಃ ।

ವಯಂ ತು ಸಾಪರಾಧಾನಾಂ ದಂಡದಾ ಹಿ ತದಾಜ್ಞಯಾ ॥೪೫॥

ಭಗವಂತನಾದ ಹರಿಯಾದ ಈಶ್ವರ ನಿನ್ನ ತಪ್ಪುಗಳ ಕ್ಷಮಿಸು ಎಂದು ಬೇಡಿಕೋ ಹೇಗಾದರೋ ಅವನ ಆಜ್ಞೆಗೆ ಅನುಸಾರವಾಗಿ ಅಪರಾಧಿಗೆ ಶಿಕ್ಷೆ ಕೊಡುತ್ತೆಯೋ.

ಏವಮುಕ್ತ್ವಾ ಚ ತೇ ದೊತಾ ನಿರ್ದಯಂ ತಾಡಯಂತಿ ತಾನ್ ।

ಜ್ವಲದಂಗಾರಸದೃಶಾಃ ಪತಿತಾಸ್ತಾಡನಾದಧಃ ॥೪೬॥

ಹೀಗೆ ಹೇಳಿಗೊಂಡು ಆ ಯಮದೂತರುಗಳು ನಿರ್ದಯವಾಗಿ ಆ ಪಾಪಿಗಳನ್ನು  ತೂಗು ತ್ತದ್ದವು. ಆ ಪೆಟ್ಟಿನಿಂದ ಅವು ಹೊತ್ತಿಕೋಂಡಿದ್ದ ಕೆಂಡದ ಹಾಗೆ ಕೆಳ ಬೀಳುತ್ತದ್ದವು 

ಪತನಾತ್ತಸ್ಯ ಪತ್ರೈಶ್ಚ ಗಾತ್ರಚ್ಛೇದೋ ಭವೇತ್ತತಃ ।

ತಾನಧಃ ಪತಿತಾನ್ ಶ್ವಾನೋ ಭಕ್ಷಯಂತಿ ರುದಂತಿ ತೇ ॥೪೭॥

ಕೆಳ ಬೀಳುವಾಗ, ಆ ಮರದ ಎಲೆಗಳಿಂದ ಆ ಪಾಪಿಯ ಶರೀರವು ಛೇದಿಸುತ್ತಿದ್ದವು . ಕೆಳಬಿದ್ದ ಅವರ ನಾಯಿಗಳು ತಿನ್ನುತ್ತಿದ್ದವು ಅಷ್ಟಕ್ಕೆ  ಅವು ಕೂಗುತ್ತದ್ದವು 

ರುದಂತಸ್ತೇ ತತೋ ದೂತೈರ್ಮುಖಮಾಪೂರ್ಯ ರೇಣುಭಿಃ ।

ನಿಬದ್ಧ್ಯ ವಿವಿಧೈಃ ಪಾಶೈರ್ಹನ್ಯಂತೇ ಕೇsಪಿ ಮುದ್ಗರೈಃ ॥೪೮॥

ಅಷ್ಟಕ್ಕೆ  ಅಲ್ಲಿದ್ದ ಯಮದೂತರಿಂದ ಕೂಗುವ ಆ ಪಾಪಿಗಳ ಬಾಯಿತುಂಬ ಧೂಳು ತುಂಬಲ್ಪಡುತ್ತಿದ್ದರು ನಾನಾ ಪ್ರಕಾರದ ಪಾಶಂಗಳಿಂದ ಬಂಧಿಸಿ ಕೆಲವರ ಸುತ್ತಿಗೆಂದ ಬಡಿಯಲ್ಪಡುತ್ತಿದ್ದರು 

ಪಾಪಿನಃ ಕೇsಪಿ ಭಿದ್ಯಂತೇ ಕ್ರಕಚೈಃ ಕಾಷ್ಠವದ್ವಿಧಾ ।

ಕ್ಷಿಪ್ತ್ವಾ ಚಾನ್ಯೇ ಧರಾಪೃಷ್ಠೇ ಕುಠಾರೈಃ ಖಂಡಶಃ ಕೃತಾಃ ॥೪೯॥

ಕೆಲವು ಪಾಪಿಗಳ ಗರಗಸದಿಂದ ಮರತುಂಡಿನ ಕತ್ತರಿಸುವ ರೀತಿಲಿ ಎರಡು ತುಂಡಾಗಿ ಕತ್ತರಿ ಸುತ್ತವು.ಮತ್ತೆ ಕೆಲವರ ಭೂಮಿಯ ಮೇಲೆ ಇಟ್ಟು ಕೊಡಲಿಂದ ತುಂಡು ತುಂಡಾಗಿ ಕೊಚ್ಚುತ್ತಿದ್ದವು 

ಅರ್ಧಂ ಖಾತ್ವಾsವಟೇ ಕೇಚಿದ್ಭಿದ್ಯಂತೇ ಮೂರ್ಧ್ನಿ ಸಾಯಕೈಃ ।

ಅಪರೇ ಯಂತ್ರಮಧ್ಯಸ್ಥಾಃ ಪೀಡ್ಯಂತೇ ಚೇಕ್ಷುದಂಡವತ್ ॥೫೦॥

ಕೆಲವರ ಅರ್ಧದೇಹವ ಹಳ್ಳಲ್ಲಿ ಹೂದು ಅವರ ಮಸ್ತಕವ ಚೂಪಾದ ಬಾಣಗಳಿಂದ ಚುಚ್ಚುತಿದ್ದವು . ಕೆಲವರ ಯಂತ್ರದ ಮಧ್ಯಲ್ಲಿ ಹಾಕಿದ ಕಬ್ಬಿನ ತುಂಡಿನ ರೀತಿಲಿ ಹಿಂಡುತ್ತಿದ್ದ ವು

Wednesday, 27 May 2020

ಗ ಪು ಅಧ್ಯಾಯ 3 ಭಾಗ 1


ಆದಿತ್ಯಚಂದ್ರಾವನಿಲೋsನಲಶ್ಚ ದ್ಯೌರ್ಭೂಮಿರಾಪೋ ಹೃದಯಂ ಯಮಶ್ಚ ।

ಅಹಶ್ಚ ರಾತ್ರಿಶ್ಚ ಉಭೇ ಚ ಸಂಧ್ಯೇ ಧರ್ಮಶ್ಚ ಜಾನಾತಿ ನರಸ್ಯ ವೃತ್ತಮ್॥೧೬॥

ಸೂರ್ಯ, ಚಂದ್ರ, ಅಗ್ನಿ, ವಾಯು, ಆಕಾಶ, ಭೂಮಿ, ನೀರು, ಹೃದಯ, ಯಮ, ಹಗಲು, ಇರುಳು, ಎರಡು ಸಂಧ್ಯಾಕಾಲಕ್ಕೆ  ಮತ್ತೆ ಧರ್ಮ- ಇವುಗಳ ಮನುಷ್ಯನ ವೃತ್ತಾಂತವನ್ನು ತಿಳ್ಕೊಂಡಿರುತ್ತರೆ 

ಧರ್ಮರಾಜಶ್ಚಿತ್ರಗುಪ್ತಃ ಶ್ರವಣಾ ಭಾಸ್ಕರಾದಯಃ ।

ಕಾಯಸ್ಥಂ ತತ್ರ ಪಶ್ಯಂತಿ ಪಾಪಂ ಪುಣ್ಯಂ ಚ ಸರ್ವಶಃ ॥೧೭॥

ಧರ್ಮರಾಜ, ಚಿತ್ರಗುಪ್ತ, ಶ್ರವಣ, ಸೂರ್ಯ ಮೊದಲಾದೋರು ಈ ಶರೀರಲ್ಲಿದ್ದುಗೊಂಡು ಪಾಪಪುಣ್ಯಗಳೆಲ್ಲವ ನೋಡುತ್ತರೆ 

.ಏವಂ ಸುನಿಶ್ಚಯಂ ಕೃತ್ವಾ ಪಾಪಿನಾಂ ಪಾತಕಂ ಯಮಃ ।

ಆಹೂಯ ತಾನ್ನಿಜಂ ರೂಪಂ ದರ್ಶಯತ್ಯತಿಭೀಷಣಮ್ ॥೧೮॥

ಈ ರೀತಿ ಪಾಪಿಯ ಪಾಪಗಳ ನಿಶ್ಚಯಮಾಡಿ, ಯಮಧರ್ಮರಾಜ ಅವನನ್ನು ಕರೆಸಿ ಅತಿಭಯಂಕರವಾದ ತನ್ನ ನಿಜರೂಪವ ತೋರುಸುತ್ತನೆ 

ಪಾಪಿಷ್ಠಾಸ್ತೇ ಪ್ರಪಶ್ಯಂತಿ ಯಮರೂಪಂ ಭಯಂಕರಮ್ ।

ದಂಡಹಸ್ತಂ ಮಹಾಕಾಯಂ ಮಹಿಷೋಪರಿ ಸಂಸ್ಥಿತಮ್ ॥೧೯॥

ಆ ಪಾಪಿಷ್ಠರು ದಂಡಪಾಣಿಯಾದ, ಮಹಾಕಾಯನಾದ, ಕೋಣನ ಮೇಲೆ ಕೂಳಿತು ಕೊಂಡಿದ್ದ ಭಯಂಕರನಾದ ಯಮನ ರೂಪವ ನೋಡುತ್ತರೆ 

ಪ್ರಲಯಾಂಬುದನಿರ್ಘೋಷಂ ಕಜ್ಜಲಾಚಲಸನ್ನಿಭಮ್ ।

ವಿದ್ಯುತ್ಪ್ರಭಾಯುಧೈರ್ಭೀಮಂ ದ್ದ್ವಾತ್ರಿಂಶದ್ಭುಜಸಂಯುತಮ್ ॥೨೦॥

ಪ್ರಳಯಕಾಲದ ಮೇಘಗಳ ಗರ್ಜನೆ ಹಾಗೆ ಗರ್ಜುಸುವ, ಕಾಡಿಗೆಯ ಪರ್ವತದ ಹಾಗೆ ಕಪ್ಪಾಗಿ, ಮಿಂಚಿನಾಗೆ ಹೊಳವ ಆಯುಗಳಿಂದ ಒಡಗೂಡಿ ಭಯಂಕರನಾದ ಮೂವತ್ತೆರಡು ಭುಜಗಳ ಹೊಂದಿದ್ದ 

ಯೋಜನತ್ರಯವಿಸ್ತಾರಂ ವಾಪೀತುಲ್ಯವಿಲೋಚನಮ್ ।

ದಂಷ್ಟ್ರಾಕರಾಲವದನಂ ರಕ್ತಾಕ್ಷಂ ದೀರ್ಘನಾಸಿಕಮ್ ॥೨೧॥

ಮೂರು ಯೋಜನ ವಿಸ್ತಾರದ (ದೇಹಾಕಾಯ ), ಬಾವಿಯ ಹಾಗೆ ಕಣ್ಣುಗಳು ಕೋರೆಹಲ್ಲಿನ  ಭಯಂಕರವಾದ ಮೋರೆಯಿದ್ದು , ರಕ್ತರಂಜಿತ ಕಣ್ಣುಗಳಿದ್ದು , ಉದ್ದವಾದ ಮೂಗಿನ ಯಮರಾಜನ ಸ್ವರೂಪ ( ಈ ರೀತಿ ಭಯಂಕರವಾದ್ದು).

ಮೃತ್ಯುಜ್ವರಾದಿಭಿರ್ಯುಕ್ತಶ್ಚಿತ್ರಗುಪ್ತೋsಪಿ ಭೀಷಣಃ ।

ಸರ್ವೇ ದೂತಾಶ್ಚ ಗರ್ಜಂತಿ ಯಮತುಲ್ಯಾಸ್ತದಂತಿಕೇ ॥೨೨॥

ಮೃತ್ಯುಜರಾದಿಗಳಿಂದ ಕೂಡಿದ ಚಿತ್ರಗುಪ್ತನೂ ಭಯಂಕರನಾಗಿದ್ದ  ಯಮರೂಪಕ್ಕೆ ತುಲ್ಯವಾದ ರೂಪವ ಹೊಂದಿ ಎಲ್ಲ ದೂತರು ಗರ್ಜಿಸಿಕೊಂಡು ಅವನ ಹತ್ತಿರ ಇದ್ದರು .

ತಂ ದೃಷ್ಟ್ವಾಭಯಭೀತಸ್ತು ಹಾಹೇತಿ ವದತೇ ಖಲಃ ।

ಅದತ್ತದಾನಃ ಪಾಪಾತ್ಮಃ ಕಂಪತೇ ಕ್ರಂದತೇ ಪುನಃ ॥೨೩॥

ಯಮನ ನೋಡಿ ಭಯಭೀತನಾಗಿ ಆ ದುಷ್ಟ  ಹಾ ಹಾ ಎಂದು ಕಿರುಚುತ್ತ . ದಾನವನ್ನೂ ಮಾಡದ್ದೆ ಇಂತಹ ಪಾಪಿ ನಡುಗಿಕೋಂಡು ಮತ್ತೆ ವಿಲಪಿಸುತ್ತನೆ 

ತತೋ ವದತಿ ತಾನ್ಸರ್ವಾನ್ ಕ್ರಂದಮಾನಾಂಶ್ಚ ಪಾಪಿನಃ ।

ಶೋಚಂತಃ ಸ್ವಾನಿ ಕರ್ಮಾಣಿ ಚಿತ್ರಗುಪ್ತೋ ಯಮಾಜ್ಞಯಾ ॥೨೩॥

ಮತ್ತೆ ವಿಲಾಪಿಸುತ್ತಿದ್ದ  ಹಾಗೂ ತಾವು ಮಾಡಿದ ಕರ್ಮಗಳ ಕುರಿತು ಶೋಕಿಸಿಕೋಂಡು ಇದ್ದ ಎಲ್ಲ ಪಾಪಿಗಳು ಯಮನ ಅಪ್ಪಣೆ ಪ್ರಕಾರ ಚಿತ್ರಗುಪ್ತ ಹೇಳುತ್ತನೆ 

ಭೋಃ ಭೋಃ ಪಾಪಾ ದುರಾಚಾರಾ ಅಹಂಕಾರಪ್ರದೂಷಿತಾಃ ।

ಕಿಮರ್ಥಮರ್ಜಿತಂ ಪಾಪಂ ಯುಷ್ಮಾಭಿರವಿವೇಕಿಭಿಃ ॥೨೫॥

“ಎಲೈ ಪಾಪಿಗಳೇ, ಕೆಟ್ಟ ನಡತೆಯಿoದ ಅಹಂಕಾರದ ತುಂಬಿಕೊಂಡ, ಅವಿವೇಕಿಗಳೇ, ಪಾಪವ ಎತಕೆ ಬೇಕಾಗಿ ಸಂಪಾದಿಸಿದ್ದಿರಿ 

ಕಾಮಕ್ರೋಧಾದ್ಯದುತ್ಪನ್ನಂ ಸಂಗಮೇನ ಚ ಪಾಪಿನಾಮ್ ।

ತತ್ಪಾಪಂ ದುಃಖದಂ ಮೂಢಾಃ ಕಿಮರ್ಥಂ ಚರಿತಂ ಜನಾಃ ॥೨೬॥

“ಕಾಮ, ಕ್ರೋಧಗಳಿಂದ ಪಾಪಿಗಳ ಸಹವಾಸದ ಉತ್ಪನ್ನವಾದ ದುಃಖದಾಯಕವಾದ ಆ ಪಾಪಗಳು  ಏ ಮೂಢರೇ, ಎತಕೆ ಮಾಡಿದಿರಿ 

ಕೃತವಂತಃ ಪುರಾ ಯೂಯಂ ಪಾಪಾನ್ಯತ್ಯಂತಹರ್ಷಿತಾಃ ।

ತಥೈವ ಯಾತನಾ ಭೋಗ್ಯಾಃ ಕಿಮಿದಾನೀಂ ಪರಾಙ್ಮುಖಾಃ ॥೨೭॥

“ನಿನಗ ಮೊದಲೆ ಅತ್ಯಂತ ಹರ್ಷಿತರಾಗಿ ಪಾಪಗಳ ಮಾಡಿದ್ದಿ. ಹಾಗೇ ಈಗ ಯಾತನೆಗಳ ಅನುಭವುಸಿ. ಈಗ ಎತಕೆ ಮೋರೆ ತಿರುಗುಸುತ್ತಿರಿ ?”

ಕೃತ್ಯಾನಿ ಯಾನಿ ಪಾಪಾನಿ ಯುಷ್ಮಭಿಃ ಸುಬಹೂನ್ಯಪಿ ।

ತಾನಿ ಪಾಪಾನಿ ದುಃಖಸ್ಯ ಕಾರಣಂ ಚ ನ ವಂಚನಾ ॥೨೮॥

“ನಿನನ್ನಿಂದ  ಬಹಳವಾಗಿ ಏವ ಪಾಪಗಳನ್ನು  ಮಾಡಲ್ಪಟ್ಟತ್ತೋ ಆ ಪಾಪಗಳೇ ಈಗ ದುಃಖದ ಕಾರಣಗಳ . ಅದರಲ್ಲಿ ವಂಚನೆ ಏನೂ ಇಲ್ಲವೆ "

ಮೂರ್ಖೇsಪಿ ಪಂಡಿತೇ ವಾಪಿ ದರಿದ್ರೇ ವಾ ಶ್ರಿಯಾನ್ವಿತೇ ।

ಸಬಲೇ ನಿರ್ಬಲೇ ವಾಪಿ ಸಮವರ್ತೀ ಯಮಃ ಸ್ಮೃತಃ ॥೨೯॥

“ಮೂರ್ಖನಾಗಲೀ, ಪಂಡಿತನಾಗಲಿ, ದರಿದ್ರನಾಗಲಿ ಧನವಂತನಾಗಲಿ, ಬಲವಂತನಾಗಲಿ ಬಲಹೀನನಾಗಿರಲಿ ಯಮಧರ್ಮರಾಜ ಸಮಾನ ಭಾವನೆಯಿಂದ  ವರ್ತಿಸುತ್ತನೆ ಎಂದು ಹೇಳಿದ ವಿಷಯ”.

ಚಿತ್ರಗುಪ್ತಸ್ಯೇತಿ ವಾಕ್ಯಂ ಶ್ರುತ್ವಾ ತೇ ಪಾಪಿನಸ್ತದಾ ।

ಶೋಚಂತಃ ಸ್ವಾನಿ ಕರ್ಮಾಣಿ ತೂಷ್ಣೀಂ ತಿಷ್ಠಂತಿ ನಿಶ್ಚಲಾಃ ॥೩೦॥

ಚಿತ್ರಗುಪ್ತನ ಈ ಮಾತುಗಳ ಕೇಳಿ ಆ ಪಾಪಿಗಳು ತಾವು ಮಾಡಿದ ಕರ್ಮಗಳ ಶೋಕಿಸಿಕೋಂಡು ನಿಶ್ಯಬ್ದರಾಗಿ ನಿಶ್ಚಲರಾಗಿ ನಿottu ಬಿಟ್ಟರು 

ಧರ್ಮರಾಜೋsಪಿ ತಾನ್ ದೃಷ್ಟ್ವಾ ಚೋರವನ್ನಿಶ್ಚಲಾನ್ ಸ್ಮಿತಾನ್ ।

ಆಜ್ಞಾಪಯತಿ ಪಾಪಾನಾಂ ಶಾಸ್ತಿಂ ಚೈವ ಯಥೋಚಿತಾಮ್ ॥೩೧॥

ಕಲ್ಲುಗಳಾಗೆ ನಿಶ್ಚಲರಾಗಿ ನಿಂತಿದ್ದರು  ಅವರನ್ನ ಯಮಧರ್ಮರಾಯ ನೋಡಿ, ಅವರ ಪಾಪಕ್ಕೆ 

ಯಥೋಚಿತವಾದ ಶಿಕ್ಷೆಯ ಆಜ್ಞಾಪಿಸುತ್ತನೆ 


ತತಸ್ತೇ ನಿರ್ದಯಾ ದೂತಾಸ್ತಾಡಯಿತ್ವಾ ವದಂತಿ ಚ ।

ಗಚ್ಛ ಪಾಪಿನ್ ಮಹಾಘೋರಾನ್ನರಕಾನತಿಭೀಷಣಾನ್ ॥೩೨॥

ಮತ್ತೆ ನಿರ್ದಯಿಗಳಾದ ಆ ಯಮದೂತರು ಬಡಿದು ಹೇಳುತ್ತರೆ – ಏ ಪಾಪಾತ್ಮನೇ, ಘೋರವಾದ ಅತಿ ಭಯಂಕರವಾದ ನರಕಕ್ಕೆ ಹೋಗು”.

ಯಮಾಜ್ಞಾಕಾರಿಣೋ ದೂತಾಃ ಪ್ರಚಂಡ ಚಂಡಕಾದಯಃ ।

ಏಕಪಾಶೇನ ತಾನ್ಬದ್ಧ್ವಾ ನಯಂತಿ ನರಕಾನ್ಪ್ರತಿ ॥೩೩॥

ಯಮಧರ್ಮರಾಯನ ಆಜ್ಞಾನುವರ್ತಿಗಳು ಆದ ಪ್ರಚಂಡ ಚಂಡಕ ಮೊದಲಾದ ದೂತರುಗಳು , ಒಂದೇ ಪಾಶದಿಂದ ಅವರ ಕಟ್ಟಿ ಘೋರ ನರಕದ ಕಡೇಗೆ ಕರ್ಕಂಡು ಹೋಗುತ್ತಾರೆ 

Tuesday, 26 May 2020

ಗ ಪು 3 ಅಧ್ಯಯ

ಗರುಡ ಉವಾಚ
ಯಮಮಾರ್ಗಮತಿಕ್ರಮ್ಯ ಗತ್ವಾ ಪಾಪೀ ಯಮಾಲಯೇ ।
ಕೀದೃಶೀಂ ಯಾತನಾಂ ಭುಂಕ್ತೇ ತನ್ಮೇ ಕಥಯ ಕೇಶವ ॥೦೧॥

ಗರುಡ ಹೇಳಿದ - ಏ ಕೇಶವನೇ!, ಪಾಪಿಯಾದವ  ಯಮ ಮಾರ್ಗವ ದಾಟಿ ಯಮಾಲಯಕ್ಕೆ ಹೋಗಿ ಅಲ್ಲಿ ಯಾವ ರೀತಿಯ ಕಷ್ಟಗಳ ಅನುಭವುಸುತ್ತರೆ ಎನಗೆ ಹೇಳು.

ಶ್ರೀ ಭಗವಾನ್ ಉವಾಚ
ಆದ್ಯಂತಂ ಚ ಪ್ರವಕ್ಷ್ಯಾಮಿ ಶ್ರುಣುಷ್ವ ವಿನತಾತ್ಮಜ ।
ಕಥ್ಯಮಾನೇsಪಿ ನರಕೇ ತ್ವಂ ಭವಿಷ್ಯಸಿ ಕಂಪಿತಃ ॥೦೨॥

ಭಗವಂತ ಹೇಳಿದ – ಏ ವಿನತೆಯ ಮಗನೇ!, ಸುರುವಿದ ಅಕೇರಿವರೇಗೆ ಹೇಳುತ್ತೇನೆ ಕೇಳು. ನರಕದ ವರ್ಣನೆಯ ಕೇಳುವುದರಿಂದಲೇ ನೀನು ನಡುಗಿ ಹೋಗುವೆ 

ಚತ್ವಾರಿಂಶದ್ಯೋಜನಾನಿ ಚತುರ್ಯುಕ್ತಾನಿ ಕಾಶ್ಯಪ ।
ಬಹುಭೀತಿಪುರಾದಗ್ರೇ ಧರ್ಮರಾಜಪುರಂ ಮಹತ್ ॥೦೩॥

ಏ ಕಾಶ್ಯಪ, ಬಹುಭೀತಿಪುರದ ಮುಂದೆ ನಲ್ವತ್ತ ನಾಲ್ಕು ಯೋಜನ ವಿಸ್ತೀರ್ಣಲ್ಲಿ ವಿಶಾಲವಾದ ಧರ್ಮರಾಯನ ಪುರ ಇದ್ದು.

ಹಾಹಾಕಾರಸಮಾಯುಕ್ತಂ ದೃಷ್ಟ್ವಾಕ್ರಂದತಿ ಪಾತಕೀ ।
ತತ್ಕ್ರಂದಿತಂ ಸಮಾಕರ್ಣ್ಯ ಯಮಸ್ಯ ಪುರಚಾರಿಣಃ ॥೦೪॥

(ಆ ಊರು) ಹಾಹಾಕಾರ ಕೂಗಿನಿಂದ ಕೂಡಿದ್ದು. ಅದರ ನೋಡಿದರೆ ಪಾಪಿ ಕಿರುಚುತ್ತರೆ  ಆ ಕಿರುಚಾಟವ ಕೇಳಿ ಯಮನ ಊರಿನವರು 

ಗತ್ವಾ ಚ ತತ್ರ ತೇ ಸರ್ವೇ ಪ್ರತೀಹಾರಂ ವದಂತಿ ಹಿ ।
ಧರ್ಮಧ್ವಜಃ ಪ್ರತೀಹಾರಸ್ತತ್ರ ತಿಷ್ಠತಿ ಸರ್ವದಾ ॥೦೫॥

ಅವು ದ್ವಾರಪಾಲಕನ ಹತ್ರ ಹೋಗಿ ಎಲ್ಲವನ್ನೂ ಹೇಳುತ್ತನೆ  ಅಲ್ಲಿ ಧರ್ಮಧ್ವಜ ಹೇಳುವ ದ್ವಾರಪಾಲಕ ಇರುತ್ತಾನೆ 

ಸ ಗತ್ವಾ ಚಿತ್ರಗುಪ್ತಾಯ ಬ್ರೂತೇ ತಸ್ಯ ಶುಭಾಶುಭಮ್ ।
ತತಸ್ತಂ ಚಿತ್ರಗುಪ್ತೋsಪಿ ಧರ್ಮರಾಜಂ ನಿವೇದಯೇತ್ ॥೦೬॥

ಅವ ಹೋಗಿ ಚಿತ್ರಗುಪ್ತನಿಗೆ ಆ ಪಾಪಿಯ ಶುಭಾಶುಭ ಕರ್ಮಗಳೆಲ್ಲವ ಹೇಳುತ್ತನೆ  ಮತ್ತೆ ಚಿತ್ರಗುಪ್ತ ಯಮಧರ್ಮರಾಜನತ್ ಹತ್ತಿರ ನಿವೇದಿಸುತ್ತಾನೆ 

ನಾಸ್ತಿಕಾ ಯೇ ನರಾಸ್ತಾರ್ಕ್ಷ್ಯ ಮಹಾಪಾಪರತಾಃ ಸದಾ ।
ತಾಂಶ್ಚ ಸರ್ವಾನ್ಯಥಾಯೋಗ್ಯಂ ಸಮ್ಯಗ್ಜಾನಾತಿ ಧರ್ಮರಾಟ್ ॥೦೭॥

ಯಾವ ಮನುಷ್ಯರು ನಾಸ್ತಿಕರೋ ಮತ್ತೆ ಪಾಪಕಾರ್ಯಗಳಲ್ಲೇ ನಿರತರಾಗಿರುತ್ತಾರೋ  ಅವೆರೆಲ್ಲರನ್ನೂ ಧರ್ಮರಾಜ° ತಿಳಿದು ಕೋoಡಿರುತ್ತನೆ 

ತಥಾಪಿ ಚಿತ್ರಗುಪ್ತಾಯ ತೇಷಾಂ ಪಾಪಂ ಸ ಪೃಚ್ಛತಿ ।
ಚಿತ್ರಗುಪ್ತೋsಪಿ ಸರ್ವಜ್ಞಃ ಶ್ರವಣಾನ್ಪರಿಪೃಚ್ಛತಿ ॥೦೮॥

ಅಂದರೂ ಅವ ಚಿತ್ರಗುಪ್ತನ ಹತ್ತಿರ  ಅವರ ಪಾಪಗಳ ವಿಷಯವಾಗಿ ಕೇಳುತ್ತನೆ. ಚಿತ್ರಗುಪ್ತ ಎಲ್ಲವನ್ನೂ ತಿಳುದವನಾಗಿದ್ದರೂ ಶ್ರವಣ ಮಾಡುತ್ತಾನೆ 

ಶ್ರವಣಾ ಬ್ರಹ್ಮಣಃ ಪುತ್ರಾಃ ಸ್ವರ್ಭೂಪಾತಾಲಚಾರಿಣಃ ।
ದೂರಶ್ರವಣವಿಜ್ಞಾನಾ ದೂರದರ್ಶನಚಕ್ಷುಷಃ ॥೦೯॥

ಬ್ರಹ್ಮನ ಮಕ್ಕ ಆದ ಶ್ರವಣರು ಸ್ವರ್ಗ, ಭೂಮಿ, ಪಾತಾಳಗಳಲ್ಲಿ ಸಂಚರಿಸುವವು. ಅವಕ್ಕೆ ದೂರದಿಂದಲೇ ಕೇಳಿ ತಿಳ್ಕೊಂದು ಬಾ  ಹಾಗೇ ದೂರದಿಂದಲೇ ನೋಡಲು ವಿಶೇಷ ಜ್ಞಾನಶಕ್ತಿ ಮತ್ತೆ ವೀಕ್ಷಣಾಶಕ್ತಿ ಇದ್ದು.

ತೇಷಾಂ ಪತ್ನ್ಯಸ್ತಥಾಭೂತಾಃ ಶ್ರವಣ್ಯಃ ಪೃಥಗಾಹ್ವಯಾಃ ।
ಸ್ತ್ರೀಣಾಂ ವಿಚೇಷ್ಟಿತಂ ಸರ್ವಂ ತಾ ವಿಜಾನಂತಿ ತತ್ತ್ವತಃ ॥೧೦॥

ಅವರ ಪತ್ನಿಗೊ ಅಂತಹ ಶಕ್ತಿ ಇದ್ದು. ಹಾಗಾಗಿ ಅವರ ಶ್ರವಣಿಯರು ಎಂದು ಹೇಳುತ್ತರೆ ಸ್ತ್ರೀಯರು ಮಾಡೋದೆಲ್ಲವ ಅವು ಯಥಾರ್ಥರೂಪಲ್ಲಿ ತಿಳ್ಕೊಂಡಿರುತ್ತರೆ 

ನರೈಃ ಪ್ರಚ್ಛನ್ನಪ್ರತ್ಯಕ್ಷಂ ಯತ್ಪ್ರೋಕ್ತಂ ಚ ಕೃತಂ ಚ ಯತ್ ।
ಸರ್ವಮಾವೇಯಂತ್ಯೇವ ಚಿತ್ರಗುಪ್ತಾಯ ತೇ ಚ ತಾಃ ॥೧೧॥

ಮನುಷ್ಯರು ಗುಪ್ತವಾಗಿಯೂ ಬಹಿರಂಗವಾಗಿಯೂ ಹೇಳಿದ್ದನ್ನೂ ಮಾಡಿದ್ದನ್ನೂ ಅವು ಚಿತ್ರಗುಪ್ತನಿಗೆ ಹೇಳುವರು 

ಚಾರಾಸ್ತೇ ಧರ್ಮರಾಜಸ್ಯ ಮನುಷ್ಯಾಣಾಂ ಶುಭಾಶುಭಮ್ ।
ಮನೋವಾಕಾಯರಂ ಕರ್ಮ ಸರ್ವಂ ಜಾನಂತಿ ತತ್ತ್ವತಃ ॥೧೨।।

ಯಮಧರ್ಮರಾಜನ ಗುಪ್ತಚರರು ಆದ ಇವು ಮನುಷ್ಯರ ಶುಭಾಶುಭಂಗಳನ್ನೂ ಮನೋವಾಕ್ಕಾಯಗಳಿಂದ ಮಾಡುವ ಎಲ್ಲ ಕರ್ಮಗಳನ್ನೂ ಸರಿಯಾಗಿ ತಿಳುದುಕೊಂಡಿರುತ್ತರೆ 

ಏವಂ ತೇಷಾಂ ಶಕ್ತಿರಸ್ತಿ ಮರ್ತ್ಯಾಮರ್ತ್ಯಾಧಿಕಾರಿಣಾಮ್ ।
ಕಥಯಂತಿ ನೃಣಾಂ ಕರ್ಮ ಶ್ರವಣಾಃ ಸತ್ಯವಾದಿನಃ ॥೧೩॥

ಮರ್ತ್ತ್ಯರಿಗೂ ಅಮರರಿಗೂ ಅಧಿಕಾರಿಗಳಾಗಿರುವ ಅವರಿಗೆ ಇಷ್ಟು ಶಕ್ತಿ ಇದ್ದು. ಸತ್ಯವಾದಿಗೊ ಆದ ಆ ಶ್ರವಣರು ಮನುಷ್ಯನ ಕರ್ಮಗಳ ಹೇಳುತ್ತರೆ 

ವ್ರತೈರ್ದಾನೈಶ್ಚ ಸತ್ಯೋಕ್ತ್ಯಾ ಯಸ್ತೋಷಯತಿ ತಾನ್ನರಃ ।
ಭವಂತಿ ತಸ್ಯ ತೇ ಸೌಮ್ಯಾಃ ಸ್ವರ್ಗಮೋಕ್ಷಪ್ರದಾಯಿನಃ ॥೧೪॥

ಯಾವ ಮನುಷ್ಯ ವ್ರತ, ದಾನ, ಸತ್ಯವಾಕ್ಯದಿಂದಲೂ ಅವರ ಸಂತೋಷಪಡಿಸುತ್ತನೋ ಅವನಿಗೆ ಅವ್ವು ಸೌಮ್ಯರಾಗಿ ಸ್ವರ್ಗಮೋಕ್ಷಗಳ ದಯಪಾಲುಸುತ್ತರೆ 

ಪಾಪಿನಾಂ ಪಾಪಕರ್ಮಾಣಿ ಜ್ಞಾತ್ವಾ ತೇ ಸತ್ಯವಾದಿನಃ ।
ಧರ್ಮರಾಜಪುರಃ ಪ್ರೋಕ್ತಾ ಜಾಯಂತೇ ದುಃಖದಾಯಿನಃ ॥೧೫॥

ಆ ಸತ್ಯವಾದಿಗೆ  ಪಾಪಿಗಳ ದುಷ್ಕರ್ಮಗಳನ್ನೂ ತಿಳಿದು ಕೋಂ ಡು ಧರ್ಮರಾಜನೆದುರು ಹೇಳಿ ದುಃಖದಾಯಕರಾದರು 


Sunday, 24 May 2020

ಯಮ ಮರ್ಗ (ಗ, ಪು )

ಪುರಾಣ – ಅಧ್ಯಾಯ 2 – 2

ತಸ್ಮಿನ್ಪುರೇ ರಮ್ಯೇ ಪ್ರೇತಾನಾಂ ಚ ಗಣೋ ಮಹಾನ್ ।ಪುಷ್ಪಭದ್ರಾ ನದೀ ತತ್ರ ನ್ಯಗ್ರೋಧಃ ಪ್ರಿಯದರ್ಶನಃ ॥೪೪॥

ಆ ಸೌಮ್ಯಪುರೀ ಹೇಳುವ ಮನೋಹರವಾದ ಶ್ರೇಷ್ಠ ನಗರಲ್ಲಿ ಅತೀ ದೊಡ್ಡದಾದ ಪ್ರೇತಗಳ ಒಂದು ಗಣ ಇದ್ದು. ಮತ್ತೆ ಅಲ್ಲಿ ಪುಷ್ಪಭದ್ರಾ ಹೇಳುವ  ನದಿಯೂ, ನೋಡಲು ಪ್ರಿಯವಾದ ಒಂದು ವಟವೃಕ್ಷವೂ ಇದ್ದು.

ಪುರೇ ತತ್ರ ಸ ವಿಶ್ರಾಮಂ ಪ್ರಾಪ್ಯತೇ ಯಮಕಿಂಕರೈಃ ।

ದಾರಾಪುತ್ರಾದಿಕಂ ಸೌಖ್ಯಂ ಸ್ಮರತೇ ತತ್ರ ದುಃಖಿತಃ ॥೪೫॥

ಆ ಪುರದಲ್ಲಿ ಅವ ಯಮಕಿಂಕರಿಂದ ತುಸು ವಿಶ್ರಾಂತಿ ಪಡಕ್ಕೊಳ್ಳುತ್ತ. ಅಲ್ಲಿ ತನ್ನ ಪತ್ನಿ, ಮಕ್ಕಳ ಕ್ಷೇಮವ ನೆನೆಸಿಕೊಂಡು  ದುಃಖಿಸುತ್ತನೆ .                       

ಧನಾನಿ ಭೃತ್ಯಮಾತ್ರಾಣಿ ಸರ್ವಂ ಶೋಚತಿ ವೈ ಯದಾ ।

ತದಾ ಪ್ರೇತಾಂಸ್ತು ತತ್ರತ್ಯಾಃ ಕಿಂಕರಾಶ್ಚೇದ ಮಬ್ರುವನ್ ॥೪೬॥

ಧನವನ್ನೂ ತನ್ನ ಕುಟುಂಬದವರನ್ನೂ ಎಲ್ಲವನ್ನೂ ಅವನು ಚಿಂತಿಸುತ್ತಿರುವಾಗ  ಅಲ್ಲಿಯಣ ಪ್ರೇತಗಳೂ, ಯಮಕಿಂಕರುಗಳೂ ಹೀಗೆ ಹೇಳುವವು –

ಕ್ವ ಧನಂ ಕ್ವ ಸುತಾ ಜಾಯಾ ಕ್ವ ಸುಹೃತ್ಕ್ವ ಚ ಬಾಂಧವಾಃ ।

ಸ್ವ ಕರ್ಮೋಪಾರ್ಜಿತಂ ಭೋಕ್ತಾ ಮೂಢ ಯಾಹಿ ಚಿರಂ ಪಥಿ ॥೪೭॥

“ಏ ಮೂಢನೇ!, ಎಲ್ಲಿ ಧನ?, ಎಲ್ಲಿ ಮಕ್ಕಳು?, ಎಲ್ಲಿ ಹೆಂಡತಿ?, ಎಲ್ಲಿ ಮಿತ್ರರು? ಮತ್ತೆ ಎಲ್ಲಿ ಬಂಧುಗಳು?. ನಿನ್ನ ಕರ್ಮಗಳಿಂದ ಗಳಿಸಿದ್ದರ ಮಾತ್ರ ಅನುಭವಿಸಿಕೊಂಡು  ಈ ಮಾರ್ಗಲ್ಲಿ ನಡೆ.

ಜಾನಾಸಿ ಸಂಬಲಬಲಂ ಬಲಮಧ್ವಗಾನಾಂ ನೋ ಸಂಬಲಾಯ ಯತಸೇ ಪರಲೋಕಪಾಂಥ ।

ಗಂತವ್ಯಮಸ್ತಿ ತವ ನಿಶ್ಚಿತಮೇವ ತೇನಮಾರ್ಗೇಣ ಯತ್ರ ಭವತಿ ಕ್ರಯವಿಕ್ರಯೋಹಿ ॥೪೮॥

ಬುತ್ತಿಯೇ ಪಥಿಕನ ಶಕ್ತಿ ಹೇಳುವುದು ನಿನಗೆ ಗೊತಿದ್ದು. ಆದರೆ ನೀನು ಆ ಭಕ್ತಿಗೋಸ್ಕರ ಯತ್ನ ಮಾಡಲಿಲ್ಲ. ಏ ಪರಲೋಕ ಪ್ರಯಾಣಿಕನೇ!, ಆದರೂ ಕ್ರಯವಿಕ್ರಯಗಳಿಲ್ಲದ್ದ ಆ ಮಾರ್ಗಲ್ಲಿ ನೀನು ಹೋಗಲೇ ಬೇಕು, 

ಆಬಾಲಖ್ಯಾತಮಾರ್ಗೋsಯಂ ನೈವ ಮರ್ತ್ಯ ಶ್ರುತಸ್ತ್ವಯಾ ।

ಪುರಾಣಸಂಭವಂ ವಾಕ್ಯಂ ಕಿಂ ದ್ವಿಜೇಭ್ಯೋsಪಿ ನ ಶ್ರುತಮ್ ॥೪೯॥

ಏ ಮರ್ತ್ಯನೇ!, ಮಕ್ಕಳಿಗೆ ಗೊತಿದ್ದ ಮಾರ್ಗವ ನಿನ್ನಂದ ಕೇಳಲ್ಪಟ್ಟಿದ್ದಿಯಾ? ಪುರಾಣಂಗಳಲ್ಲಿ ಹೇಳಿದ ಈ ವಿಷಯಗಳನ್ನು ದ್ವಿಜರಿಂದ ಹೇಳಲ್ಪಟ್ಟಿದ್ದಿಯ ?”

ಏವಮುಕ್ತಸ್ತತೋ ದೂತೈಸ್ತಾಡ್ಯಮಾನಶ್ಚ ಮುದ್ಗರೈಃ ।

ನಿಪತನ್ನುತ್ಪತಂಧಾವನ್ಪಾಶೈರಾಕೃಷ್ಯತೇ ಬಲಾತ್ ॥೫೦॥

ಹೀಗೆ ಹೇಳಿಗೊಂಡು ಆ ಯಮದೂತರುಗಳು ಸಿಟ್ಟಿಗೆದ್ದು  ಬಡಿವಾಗ ಅವ ಬಿದ್ದುಗೊಡು ಎದ್ದುಗೊಡು ಓಡುತ್ತಿದಂತೆ  ಪಾಶದಿಂದ ಬಲವಂತವಾಗಿ ಎಳೆಯಲ್ಪಡುತ್ತ ನೆ 

ಅತ್ರ ದತ್ತಂ ಸುತೈಃ ಪೌತ್ರೈಃ ಸ್ನೇಹಾದ್ವಾ ಕೃಪಯಾsಥವಾ ।

ಮಾಸಿಕಂ ಪಿಂಡಮಶ್ನಾತಿ ತತಃ ಸೌರಿಪುರಂ ವ್ರಜೇತ್ ॥೫೧॥

ಇಲ್ಲಿ ಮಕ್ಕಳು ಮೊಮ್ಮಕ್ಕಳು  ಸ್ನೇಹಭಾವದ ಅಥವಾ ಕೃಪೆಮಾಡಿ ಕೊಟ್ಟಂತಹ ಮಾಸಿಕ ಪಿಂಡವ ಅಲ್ಲಿ ತಿಂದು ಅಲ್ಲಿಂದ ಸೌರಿಪುರಕ್ಕೆ ಹೋರಟವು 

ತತ್ರ ನಾಮ್ನಾಸ್ತಿ ರಾಜಾ ವೈ ಜಂಗಮಃ ಕಾಲರೂಪಧೃಕ್ ।

ತದ್ದೃಷ್ಟ್ವಾ ಭಯಭೀತೋsಸೌ ವಿಶ್ರಾಮೇ ಕುರತೇ ಮತಿಮ್ ॥೫೨॥

ಅಲ್ಲಿ ಯಮನ ರೂಪವ ಧರಿಸಿದ  ‘ಜಂಗಮ’ ಹೇಳುವ ಹೆಸರಿನ ರಾಜ ಇದ್ದ. ಅವನ ನೋಡಿ ಭಯಭೀತನಾಗಿ ಇವನ ಮನಸ್ಸು ಯೋಚನಾಶೂನ್ಯವಾದವು

ಉದಕಂ ಚಾನ್ನ ಸಂಯುಕ್ತಂ ಭುಂಕ್ತೇ ತತ್ರ ಪುರೇ ಗತಃ ।

ತ್ರೈಪಾಕ್ಷಿಕೇ ವೈ ಯದ್ದತ್ತಂ ಸ ತತ್ಪುರಮತಿಕ್ರಮೇತ್ ॥೫೩॥

ಆ ಊರಿಗೆ ಹೋದವ ಅಲ್ಲಿ ತ್ರೈಪಾಕ್ಷಿಕಲ್ಲಿ ಕೊಟ್ಟ ಅನ್ನ ನೀರು ತಿಂದಿಕ್ಕಿ ಅವ ಆ ಪುರದಿಂದ ಹರಡುತ್ತನೆ 

ತತೋ ನಗೇಂದ್ರಭವನಂ ಪ್ರೇತೋ ಯಾತಿ ತ್ವರಾನ್ವಿತಃ ।

ವನಾನಿ ತತ್ರ ರೌದ್ರಾಣಿ ದೃಷ್ಟ್ವಾ ಕ್ರಂದತಿ ದುಃಖಿತಃ ॥೫೪॥

ಅಲ್ಲಿಂದ ಪ್ರೀತಜೀವ ನಗೇಂದ್ರ ಭವನಕ್ಕೆ ಅತಿ ಶೀಘ್ರಲ್ಲಿ ಹೋಗಿ ತಲಪುತ್ತರೆ . ಅಲ್ಲಿ ಭಯಂಕರವಾದ ಕಾಡುಗಳ ನೋಡಿ ದುಃಖಿತನಾಗಿ ರೋದಿಸುತ್ತ

ನಿರ್ಘೃಣೈಃ ಕೃಷ್ಯಮಾಣಸ್ತು ರುದತೇ ಚ ಪುನಃ ಪುನಃ ।

ಮಾಸದ್ವಯಾವಸಾನೇ ತು ತತ್ಪುರಂ ವ್ಯಥಿತೋ ವ್ರಜೇತ್ ॥೫೫॥

ನಿರ್ದಯವಾಗಿ ಎಳೆಯಲ್ಪಟ್ಟು ಪುನಃ ಪುನಃ ರೋದಿಸಿಗೊಂಡು ಎರಡು ತಿಂಗಳ ಅಂತ್ಯಲ್ಲಿ ಅವನು ° ದುಃಖಿಸಿಕೊಂಡು  ಆ ಪುರದ ಬಳಿ ಹೊರಡುತ್ತರೆ 

ಭುಂಕ್ತ್ವಾ ಪಿಂಡಂ ಜಲಂ ವಸ್ತ್ರಂ ದತ್ತಂ ಯದ್ಬಾಂಧವೈರಿತಃ ।

ಕೃಷ್ಯಮಾಣಃ ಪುನಃ ಪಾಶೈರ್ನಿಯತೇsಗ್ರೇ ಚ ಕಿಂಕರೈಃ ॥೫೬॥

ತನ್ನ ಬಂಧುಗಳ ಕೊಟ್ಟ ಪಿಂಡ, ಜಲ, ವಸ್ತುಗಳ ಪಡೆದು ಕ್ಕೊಂಡು ಪುನಃ ಪಾಶದಿಂದ  ಎಳೆಯಲ್ಪಡುತ್ತ ಯಮಕಿಂಕರಿಂದ ಮುಂದಂತಾಗಿ ಕರೆದೊಯ್ಯಲ್ಪಡುತ್ತನೆ 

ಮಾಸೇ ತೃತೀಯೇ ಸಂಪ್ರಾಪ್ತೇ ಪ್ರಾಪ್ಯ ಗಂಧರ್ವಪತ್ತನಮ್ ।

ತೃತೀಯಮಾಸಿಕಂ ಪಿಂಡಂ ತತ್ರ ಭುಕ್ತ್ವಾ ಪ್ರಸರ್ಪತಿ ॥೫೭॥

ಮೂರನೆ  ತಿಂಗಳು ಆದಗ  ‘ಗಂಧರ್ವ ಪಟ್ಟಣ’ವ ತಲಪುತ್ತರೆ °. ಅಲ್ಲಿ ಮೂರನೇ  ತಿಂಗಳು ಕೊಟ್ಟ ಪಿಂಡವ ಭಜಿಸಿ ಮುಂದೆ ಹೊರಡುತ್ತರೆ 

ಶೈಲಾಗಮಂ ಚತುರ್ಥೇ ಚ ಮಾಸಿ ಪ್ರಾಪ್ನೋತಿ ವೈ ಪುರಮ್ ।

ಪಾಷಾಣಸ್ತತ್ರ ವರ್ಷಂತಿ ಪ್ರೇತಸ್ಯೋಪರಿ ಭೂರಿಶಃ ॥೫೮॥

ನಾಲ್ಕನೇ ತಿಂಗಳಿಗೆ ‘ಶೈಲಾಗಮ’ ಹೇಳುವ ಪುರವ ತಲಪುತ್ತಾರೆ ಅಲ್ಲಿ ಆ ಪ್ರೇತಜೀವಿಯ ಮೇಲೆ  ಕಲ್ಲುಗಳ ಮಳೆಯೇ ಭಾರೀ ಗಾತ್ರದಲ್ಲಿ ಸುರಿತ್ತಿ ತು 

ಚತುರ್ಥಮಾಸಿಕಂ ಪಿಂಡಂ ಭುಕ್ತ್ವಾಕಿಂಚಿತ್ಸುಖೀ ಭವೇತ್ ।

ತತೋ ಯಾತಿ ಪುರಂ ಪ್ರೇತಃ ಕ್ರೌಂಚಂ ಮಾಸೇsಥ ಪಂಚಮೇ ॥೫೯॥

ಅಲ್ಲಿ ನಾಲ್ಕನೇ ತಿಂಗಳಿನ ಪಿಂಡವ ಭುಂಜಿಸಿ ರಜಾ ಸುಖಿಯಾವುತ್ತ ಮತ್ತೆ ಅಲ್ಲಿಂದ ಹೊರಟು ಐದನೇ ತಿಂಗಳ್ಳಿ ‘ಕ್ರೌಂಚಪುರ’ಕ್ಕೆ ಹೋಗಿ ಸೇರುತ್ತರೆ 

ಹಸ್ತದತ್ತಂ ತದಾ ಭುಂಕ್ತೇ ಪ್ರೇತಃ ಕ್ರೌಂಚಪುರೇ ಸ್ಥಿತಃ ।

ಯತ್ಪಂಚಮಾಸಿಕಂ ಪಿಂಡಂ ಭುಕ್ತ್ವಾ ಕ್ರೂರಪುರಂ ವ್ರಜೇತ್ ॥೬೦॥

ಅಲಿಂದ  ಕ್ರೌಂಚಪುರಲ್ಲಿ ನೆಲೆಸಿದ ಆ ಪ್ರೇತಜೀವಿ ಕೈದ ಕೊಡಲ್ಪಟ್ಟ ಐದನೇ ತಿಂಗಳ ಪಿಂಡವ ಉಣ್ಣುತ್ತ. ಉಡಿಕ್ಕಿ ಮತ್ತೆ ‘ಕ್ರೂರಪುರ’ಕ್ಕೆ ಹೋಗುತ್ತವೆ 

ಸಾರ್ಧಕೈಃ ಪಂಚಭಿರ್ಮಾಸೈನ್ಯೂರ್ನಷಾಣ್ಮಾಸಿಕಂ ವ್ರಜೇತ್ ।

ತತ್ರ ದತ್ತೇನ ಪಿಂಡೇನ ಘಟೇನಾಪ್ಯಾಯಿತಃ ಸ್ಥಿತಃ ॥೬೧॥

ಐದೂವರೆ ತಿಂಗಲಿನಲ್ಲಿ  ನ್ಯೂನ ಷಣ್ಮಾಸಿಕ ಶ್ರಾದ್ಧಲ್ಲಿ ಕೊಡಲ್ಪಟ್ಟ ಪಿಂಡವನ್ನೂ, ಚೆಂಬನ್ನೂ ಪಡದು ತೃಪ್ತಿ ಹೊಂದಿ ಅಲ್ಲಿ ನೆಲೆಸುತ್ತವೆ 

ಮುಹೂರ್ತಾರ್ಧಂ ತು ವಿಶ್ರಾಮ್ಯ ಕಂಪಮಾನಃ ಸುದುಃಖಿತಃ ।

ತತ್ಪುರಂ ತು ಪರಿತ್ಯಜ್ಯ ತರ್ಜಿತೋ ಯಮಕಿಂಕರೈಃ ॥೬೨॥

ಅರ್ಧಮುಹೂರ್ತದಷ್ಟು ಹೊತ್ತು ಅಲ್ಲಿ ವಿಶ್ರಮಿಸಿ, ಅತಿ ದುಃಖಿತನಾಗಿ ನಡುಗಿಕೊಂಡು ಯಮಕಿಂಕರರಿಂದ ಹೆದರಿಸಲ್ಪಟ್ಟು ಆ ಪುರವ ಬಿಟ್ಟಿಹೊರಟವು 

ಪ್ರಯಾತಿ ಚಿತ್ರಭವನಂ ವಿಚಿತ್ರೋ ನಾಮ ಪಾರ್ಥಿವಃ ।

ಯಮಸ್ಯೈವಾನುಜೋ ಭ್ರಾತಾ ಯತ್ರ ರಾಜ್ಯಂ ಪ್ರಶಾಸ್ತಿ ಹಿ ॥೬೩॥

ಚಿತ್ರಭವನ’ಕ್ಕೆ ಹೋಗುತ್ತ ಅಲ್ಲಿ ಯಮನ ತಮ್ಮ  ‘ವಿಚಿತ್ರ ಹೇಳುವ ಹೆಸರಿನವ ರಾಜ ರಾಜ್ಯ ಆಳುತ್ತನೆ 

ವಿಲೋಕ್ಯ ಮಹಾಕಾಯಂ ಯದಾ ಭೀತಃ ಪಲಾಯತೇ ।

ತದಾ ಸಂಮುಖ ಆಗತ್ಯ ಕೈವರ್ತಾ ಇದಮಬ್ರುವನ್ ॥೬೪॥

ಅವನ ಮಹಾಕಾಯವ ನೋಡಿ ಭಯಭೀತನಾಗಿ ಓಡುತ್ತನೆ ಅಷ್ಟ ಅವನ ಮುಂದೆ ಬಂದು ಕೆಲವು ನಾವಿಕರು ಈ ರೀತಿ ಹೇಳುತ್ತಾರೆ 

ವಯಂ ತೇ ತರ್ತುಕಾಮಾಯ ಮಹಾವೈತರಣೀ ನದೀಮ್ ।

ನಾವಮಾದಾಯ ಸಂಪ್ರಾಪ್ತಾ ಯದಿ ತೇ ಪುಣ್ಯಮೀದೃಶಮ್ ॥೬೫॥

“ಮಹಾ ವೈತರಣೀ ನದಿಯ ದಾಟಿ  ಹೇಗೊ ನಿನಗೆ ದೋಣಿಯ ತಂದೆಯೋ ಒಂದು ವೇಳೆ ನಿನ್ನಲ್ಲಿ ಅಷ್ಟು ಪುಣ್ಯ ಇದ್ದರೆ ಇದು ನಿನಗೆ ದೊರಕುತಿತ್ತು.

ದಾನಂ ವಿತರಣಂ ಪ್ರೋಕ್ತಂ ಮುನಿಭಿಸ್ತತ್ತ್ವದರ್ಶಿಭಿಃ ।

ಇಯಂ ಸಾ ತೀರ್ಯತೇ ಯಸ್ಮಾತ್ತಸ್ಮಾದ್ವೈತರಣೀ ಸ್ಮೃತಾ ॥೬೬॥

ತತ್ತ್ವದರ್ಶಿಗೊಗಳಾದ ಋಷಿಗಳು ದಾನವ ‘ವಿತರಣ’ ಎಂದು ಹೇಳಿದ್ದವು. ಈ ನದಿಯ ದಾನದ ದಾಟಲಿಕ್ಕೆ  ಹಾಗಾಗಿ ಇದಕ್ಕೆ ‘ವೈತರಣೀ’ ಎಂದು ಹೇಳುತ್ತರೆ 

ಯದಿ ತ್ವಯಾ ಪ್ರದತ್ತಾ ಗೌಸ್ತದಾ ನೌರುಪಸರ್ಪತಿ ।

ನಾನ್ಯಥೇತಿ ವಚಸ್ತೇಷಾಂ ಶ್ರುತ್ವಾ ಹಾ ದೈವ ಭಾಷತೇ ॥೬೭॥

ಒಂದುವೇಳೆ ನೀನು ಗೋದಾನ ಮಾಡಿದ್ದರೆ, ದೋಣಿ ಹತ್ತ

ಬೇಕು ಇಲ್ಲದ್ರೆ ಇಲ್ಲೆ”.  ಹೀಗೆ ಅವರ ಮಾತುಗಳ ಕೇಳಿ ‘ಹಾ ದೈವವೇ’ ಎಂದು ಉದ್ಗಾರಮಾಡುತ್ತನೆ 

ತಂ ದೃಷ್ಟ್ವಾ ಕ್ವಥತೇ ಸಾ ತು ದೃಷ್ಟ್ವಾ ಸೋsತಿಕ್ರಂದತೇ ।

ಅದತ್ತ ದಾನಃ ಪಾಪಾತ್ಮಾ ತಸ್ಯಾಮೇವ ನಿಮಜ್ಜತಿ ॥೬೮॥

ಅವನ ನೋಡಿ ಅದು (ನದಿ) ಉಕ್ಕಿ ಬತ್ತು. ಅದರ ನೋಡಿ ಅವ  ಅತಿಯಾಗಿ ರೋದಿಸುತ್ತ. ದಾನ ಮಾಡದ ಇಂತಹ ಪಾಪಿಗೊ ಅದರ್ಲಿಯೇ ಮುಣುಗಿ ಹೋಗುತ್ತರೆ 

ತನ್ಮುಖೇ ಕಂಟಕಂ ದತ್ವಾ ದೂತೈರಾಕಾಶಸಂಸ್ಥಿತೈಃ ।

ಬಡಿಶೇನ ಯಥಾ ಮತ್ಸ್ಯಸ್ತಥಾ ಪಾರಂ ಪ್ರಣೀಯತೇ ॥೬೯॥

ಅಷ್ಟರಲ್ಲಿ ಆಕಾಶಲ್ಲಿದ್ದ ದೂತರು ಅವನ ಬಾಯಿಗೆ ಮುಳ್ಳಿನ ಗಾಳವ ಹಾಕಿ ಗಾಳದ ಕೊಕ್ಕೆಯಿಂದ ಮೀನಿನ ಎಳದ  ಹಾಗೆ ಎಳಕ್ಕೊಂಡು ದಡಕ್ಕೆ ಕರೆತಂದರು 

ಷಾಣ್ಮಾಸಿಕಂ ಚ ಯತ್ಪಿಂಡಂ ತತ್ರ ಭುಕ್ತ್ವಾ ಪ್ರಸರ್ಪತಿ ।

ಮಾರ್ಗೇ ಸ ವಿಲಪನ್ಯಾತಿ ಬುಭುಕ್ಷಾ ಪೀಡಿತೋ ಹ್ಯಲಮ್ ॥೭೦॥

ಅಲ್ಲಿ ಆರನೇ ತಿಂಗಳ ಪಿಂಡವ ಭುಂಜಿಸಿ ಮುಂದೆ ನಡೆಯುತ್ತ°. ಆ ಮಾರ್ಗಲ್ಲಿ ಅವರು ರೋದಿಸಿ ಅತಿಯಾದ ಹಸಿವಿಂದ ಪೀಡಿತನಾಗಿ ಮುಂದೆ ಹೋದರು 

ಸಪ್ತಮೇ ಮಾಸಿ ಸಂಪ್ರಾಪ್ರೇ ಪುರಂ ಬಹ್ವಾಪದಂ ವ್ರಜೇತ್ ।

ತತ್ರ ಭುಂಕ್ತೇ ಪ್ರದತ್ತಂ ಯತ್ಸಪ್ತಮೇ ಮಾಸಿ ಪುತ್ರಕೈಃ ॥೭೧॥

ಏಳನೇ ತಿಂಗಳು ಆದಗ ‘ಬಹ್ವಾಪದ’ ಹೇಳುವ ಪುರಕ್ಕೆ  ಹೋಗಿ ಸೇರುತ್ತರೆ ಅಲ್ಲಿ ಏಳನೇ ತಿಂಗಳಿಗೆ ಮಕ್ಕಳು ಕೊಟ್ಟದರಲ್ಲಿ ತಿನ್ನುತ್ತಾನೆ 

ತತ್ಪುರಂ ತು ವ್ಯತಿಕ್ರಮ್ಯ ದುಃಖದಂ ಪುರಮೃಚ್ಛತಿ ।

ಮಹದುಃಖಮವಾಪ್ನೋತಿ ಖೇ ಗಚ್ಛನ್ಖೇಚರೇಶ್ವರ ॥೭೨॥

ಏ ಪಕ್ಷಿರಾಜನೇ!, ಆ ಪುರವ ದಾಟಿದ ಮತ್ತೆ ಅವ  ‘ದುಃಖದ’ ಹೇಳುವ ಊರಿಂಗೆ ಹೋಗುತ್ತರೆ ಆಕಾಶಲ್ಲಿ ಹೋಗುವಾಗ ಬಹಳ ದುಃಖವ ಅನುಭವಿಸುತ್ತರೆ 

ಮಾಸ್ಯಷ್ಟಮೇ ಪ್ರದತ್ತಂ ಯತ್ಪಿಂಡಂ ಭುಕ್ತ್ವಾ ಪ್ರಸರ್ಪತಿ ।

ನವಮೇ ಮಾಸಿ ಸಂಪೂರ್ಣೇ ನಾನಾಕ್ರಂದ ಪುರಂ ವ್ರಜೇತ್ ॥೭೩॥

ಎಂಟನೇ ತಿಂಗಳ್ಳಿ ಕೊಡಲ್ಪಟ್ಟ ಪಿಂಡವ ಭುಂಜಿಸಿ ಮುಂದೆ ನಡೆತ್ತ. ಒಂಬತ್ನೇ ತಿಂಗಳು ಸಂಪೂರ್ಣ ಆದಾಗ ‘ನಾನಾಕ್ರಂದ’ಪುರಕ್ಕೆ ಹೋಗುತ್ತರೆ 

ನಾನಕ್ರಂದಗಣಾನ್ ದೃಷ್ಟ್ವಾ ಕ್ರಂದಮಾನಾನ್ಸುದಾರುಣಾನ್ ।

ಸ್ವಯಂ ಚ ಶೂನ್ಯ ಹೃದಯಃ ಸಮಾಕ್ರಂದತಿ ದುಃಖಿತಃ ॥೭೪॥

ಅಲ್ಲಿ ದಾರುಣವಾಗಿ ನಾನಾರೀತಿಲಿ ಗಟ್ಟಿಯಾಗಿ ಕೂಗಿಕೋoಡಿದ್ದ ಅನೇಕ ಗಣಗಳ ನೋಡಿ, ತಾನೂ ಶೂನ್ಯ ಹೃದಯದವನಾಗಿ ಅದೇ ರೀತಿ ದುಃಖದಿಂದ ಒಳ್ಳೆ ಗಟ್ಟಿಗೆ ಕೂಗುತ್ತನೆ 

ವಿಹಾಯ ತತ್ಪುರಂ ಪ್ರೇತಸ್ತರ್ಜಿತೋ ಯಮಕಿಂಕರೈಃ ।

ಸುತಪ್ತಭವನಂ ಗಚ್ಛೇದ್ದಶಮೇ ಮಾಸಿ ಕೃಚ್ಛೃತಃ ॥೭೫॥

ಆ ಪುರವ ಬಿಟ್ಟಿಕ್ಕಿ ಯಮಕಿಂಕರರಿಂದ ಹೆದರಿಸಲ್ಪಟ್ಟು ಹತ್ತನೇ ತಿಂಗಳಿಲಿ ‘ಸುತಪ್ತ ಭವನ’ಕ್ಕೆ ಬಹು ಕಷ್ಟಂದ ಹೋಗುತ್ತರೆ 

ಪಿಂಡದಾನಂ ಜಲಂ ತತ್ರ ಭುಕ್ತ್ವಾಪಿ ನ ಸುಖೀ ಭವೇತ್ ।

ಮಾಸಿ ಚೈಕಾದಶೇ ಪೂರ್ಣೇ ಪುರಂ ರೌದ್ರಂ ಸ ಗಚ್ಛತಿ ॥೭೬॥

ಅಲ್ಲಿ ಪಿಂಡದಾನವನ್ನೂ, ಜಲವನ್ನೂ ಉಂಡರೂ ಕೂಡ ಸುಖವಿಲ್ಲದೆ . ಹನ್ನೊಂದನೇ ತಿಂಗಳು ಪೂರ್ತಿಯಾದ ಅವರು ‘ರೌದ್ರಪುರ’ಕ್ಕೆ ಹೋಗುತ್ತರೆ 

ದಶೈಕ ಮಾಸಿಕಂ ತತ್ರ ಭುಂಕ್ತೇ ದತ್ತಂ ಸುತಾದಿಭಿಃ ।

ಸಾರ್ದೇ ಚೈಕಾದಶೇ ಮಾಸಿ ಪಯೋವರ್ಷಣಮೃಚ್ಛತಿ ॥೭೭॥

ಅಲ್ಲಿ ಹನ್ನೊಂದನೇ ತಿಂಗಳಿಲ್ಲಿ ಮಕ್ಕಳು  ಕೊಟ್ಟದರಲ್ಲಿ ತಿಂದು ಹನ್ನೊಂದುವರೆ ತಿಂಗಳಿಗೆ ‘ಪಯೋವರ್ಷಣ’ ಹೇಳುವ ಊರಿಗೆ ಹೋಗುತ್ತರೆ 

ಮೇಘಾಸ್ತತ್ರ ಪ್ರವರ್ಷಂತಿ ಪ್ರೇತಾನಾಂ ದುಃಖದಾಯಕಾಃ ।

ನ್ಯೂನಾಬ್ದಿಕಂ ಚ ಯಚ್ಛ್ರಾದ್ಧಂ ತತ್ರ ಭುಂಕ್ತೇ ಸ ದುಃಖಿತಃ ॥೭೮॥

ಅಲ್ಲಿ ಮೇಘಗಳು  ಜೋರಾಗಿ ಮಳೆಯ ಸುರುಸಿ ಆ ಜೀವಿಗೆ ದುಃಖವ ಉಂಟುಮಾಡುವವು . ಅಲ್ಲಿ ನ್ಯೂನಾಬ್ದಿಕ ಶ್ರಾದ್ಧಲ್ಲಿ ಕೊಡಲ್ಪಟ್ಟ ಪಿಂಡವ ದುಃಖಿತನಾಗಿ ಅವರು ಉಣ್ಣುತ್ತರೆ 

ಸಂಪೂರ್ಣೇ ತು ತತೋ ವರ್ಷೇ ಶೀತಾಢ್ಯ ನಗರಂ ವ್ರಜೇತ್ ।

ಹಿಮಾಚ್ಛತಗುಣಂ ತತ್ರ ಮಹಾಶೀತಂ ತಪತ್ಯಪಿ ॥೭೯॥

ಒಂದು ವರ್ಷ ಪೂರ್ತಿಯಾದಗ ಶೀತಾಡ್ಯ’ ಹೇಳುವ ಪುರವ ಸೇರುತ್ತರೆ  ಅಲ್ಲಿ ಹಿಮಾಲಯದಲ್ಲಿ ಬೀಳುವ ನೂರು ಪಾಲು ಹೆಚ್ಚಾಗಿ ಹಿಮ ಬೀಳುತ್ತಿತ್ತು 

ಶೀತಾರ್ತಃ ಕ್ಷುಧಿತಃ ಸೋsಪಿ ವೀಕ್ಷತೇ ಹಿ ದಿಶೋ ದಶ ।

ತಿಷ್ಠತೇ ಬಾಂಧವಃ ಕೋಪಿ ಯೋ ಮೇ ದುಃಖಂ ವ್ಯಪೋಹತಿ ॥೮೦॥

ಅಲ್ಲಿ ಶೀತದಿಂದ  ಆರ್ತನಾಗಿ, ಹಸಿವಿಂದ ಪೀಡಿತನಾಗಿ ಅವ ‘ಯಾರಾರು ಬಂಧುಗಳು  ಎನ್ನ ಈ ದುಃಖವ ದೂರಮಾಡಲು ನಿಂತು ಕೋoಡಿದ್ದರೋ ’ ಎಂದು ಹತ್ತು ದಿಕ್ಕುಗಳನ್ನೂ ನೋಡುತ್ತನೆ 

ಕಿಂಕರಾಸ್ತೇ ವದಂತ್ಯತ್ರ ಕ್ವತೇ ಪುಣ್ಯಂ ಹಿ ತಾದೃಶಮ್ ।

ಭುಕ್ತ್ವಾ ಚ ವಾರ್ಷಿಕಂ ಪಿಂಡಂ ಧೈರ್ಯಮಾಲಂಬತೇ ಪುನಃ ॥೮೧॥

ಅಗ ಅಲ್ಲಿದ್ದ ಯಮಕಿಂಕರರು ‘ನೀನು ಅಂತಹ ಎನು  ಪುಣ್ಯ ಮಾಡಿದ್ದೆ?’ ಎಂದು ಕೇಳುತ್ತರೆ ಅಲ್ಲಿ ವಾರ್ಷಿಕ ಪಿಂಡವ ಉಂಡು ಅವ ಧೈರ್ಯವ ಪಡೆಯುತ್ತಾನೆ 

ತತಃ ಸಂವತ್ಸರಸ್ಯಾಂತೇ ಪ್ರತ್ಯಾಸನ್ನೇ ಯಮಾಲಯೇ ।

ಬಹುಭೀತಿಪುರೇ ಗತ್ವಾ ಹಸ್ತಮಾತ್ರಂ ಸಮುತ್ಸೃಜೇತ್ ॥೮೨॥

ಅಲ್ಲಿಂದ ಆ ಜೀವ  ಒಂದು ಸಂವತ್ಸರದ ಅಕೇರಿಲಿ ಯಮಾಲಯದ ಹತ್ತಿರ ಇರುವ ಬಹುಭೀತಿ’ಪುರಕ್ಕೆ ಹೋಗಿ ಅಲ್ಲಿ ಕೈ ಮಾತ್ರದ (ಕೈ ಗಾತ್ರದ ಅವನ ಶರೀರವ) ಶರೀರವ ಬಿಡುತ್ತರೆ 

.ಅಂಗುಷ್ಠಮಾತ್ರೋ ವಾಯುಶ್ಚ ಕರ್ಮಭೋಗಾಯ ಖೇಚರ ।

ಯಾತನಾದೇಹಮಾಸಾದ್ಯ ಸಹ ಯಾಮೈಃ ಪ್ರಯಾತಿ ಚ ॥೮೩॥

ಎಲೈ ಗರುಡನೇ!, ಆ ಜೀವಿಯು ಹೆಬ್ಬೆರಳು ಗಾತ್ರದವನಾಗಿ ವಾಯು ರೂಪಲ್ಲಿ ತನ್ನ ಕರ್ಮವ ಅನುಭವಿಸಲು

ಯಾತನಾದೇಹವ ಪಡೆದು ಯಮಕಿಂಕರರ ಒಟ್ಟಿಗೆ ಮುಂದೆ ಹೋಗುತ್ತಾರೆ 

ಔರ್ಧ್ವದೇಹಿಕದಾನಾನಿ ಯೈರ್ನ ದತ್ತಾನಿ ಕಾಶ್ಯಪ ।

ಏವ ಕಷ್ಟೇನ ತೇ ಯಾಂತಿ ಗೃಹೀತಾ ದೃಢಬಂಧನೈಃ ॥೮೪॥

ಎಲೈ ಕಶ್ಯಪನ ಮಗನೇ!, ಪರಲೋಕದ ನಿಮಿತ್ತವಾಗಿ ದಾನಗಳ ಕೊಡದೆ  ಇದ್ದರೆ ಈ ರೀತಿ ಕಷ್ಟಪಟ್ಟು ದೃಢವಾದ ಬಂಧನದ ಬಂಧಿಸಲ್ಪಟ್ಟು ಬಿಡುತ್ತಾರೆ 

ಧರ್ಮರಾಜಪುರೇ ಸಂತಿ ಚತುರ್ದ್ವಾರಾಣಿ ಖೇಚರ ।

ತತ್ರಾಯಂ ದಕ್ಷಿಣದ್ವಾರಮಾರ್ಗಸ್ತೇ ಪರಿಕೀರ್ತಿತಃ ॥೮೫॥

ಎಲೈ ಗರುಡ!, ಯಮಧರ್ಮರಾಜನ ಪುರಲ್ಲಿ ನಾಲ್ಕು ದ್ವಾರಗಳು ಇದ್ದು. ಅವುಗಳಲ್ಲಿ ದಕ್ಷಿಣ ದ್ವಾರದ ಮಾರ್ಗವ ನಿನಗೆ ವಿವರಿಸಿಯಾಯಿತು 

ಅಸ್ಮಿನ್ಪಥಿ ಮಹಾಘೋರೇ ಕ್ಷುತ್ತೃಷಾಶ್ರಮ ಪೀಡಿತಾಃ ।

ಯಥಾ ಯಾಂತಿ ತಥಾ ಪ್ರೋಕ್ತಂ ಕಿಂ ಭೂಯಃ ಶ್ರೋತುಮಿಚ್ಛಸಿ ॥೮೬॥

ಮಹಾಘೋರವಾದ ಆ ಮಾರ್ಗಲ್ಲಿ ಬಹು  ಶ್ರಮ ಪೀಡಿತರಾಗಿ ಜೀವಿಗಳು ಹೇಗೆ ಹೋಗುತ್ತವೋ ಅದರ ಇಷ್ಟನ್ನು  ನಿನಗೆ ಹೇಳಲ್ಪಟ್ಟತ್ತು. ಇನ್ನೆಂತಹ ಹೆಚ್ಚಿಗೆ ಕೇಳಲು ನೀನು ಇಚ್ಚಿಸುತ್ತಿಯ?

ಇತಿ ಶ್ರೀ ಗರುಡಪುರಾಣೇ ಸಾರೋದ್ಧಾರೇ ಯಮಮಾರ್ಗ ನಿರೂಪಣಂ ನಾಮ ದ್ವಿತೀಯೋsಧ್ಯಾಯಃ ॥

ಇಲ್ಲಿಗೆ ಗರುಡಪುರಾಣಲ್ಲಿ ಸಕಲ ಶಾಸ್ತ್ರಗಳ ಸಾರವಾದ ‘ಸಾರೋದ್ಧಾರ’ ಹೇಳ್ವ ವಿಭಾಗಲ್ಲಿ ‘ಯಮಮಾರ್ಗ ನಿರೂಪಣೆ’ ಹೇಳುವ  ಎರಡನೆ ಅಧ್ಯಾಯ ಮುಗಿತು 

Wednesday, 20 May 2020

ದಾನದ ಫಲ


ದಾನದ ಪ್ರತಿ ರೂಪ

ಪತಿತಾಸ್ತತ್ಪ್ರವಾಹೇ ಚ ಕ್ರಂದಂತಿ ಬಹು ಪಾಪಿನಃ ।
ಹಾ ಭ್ರಾತಃ ಪುತ್ರ ತಾತೇತಿ ಪ್ರಲಪಂತಿ ಮುಹುರ್ಮುಹುಃ ॥೨೧॥

ಬಹು ಪಾಪ ಮಾಡಿದವು ಆ ಪ್ರವಾಹಲ್ಲಿ ಬಿದ್ದು ಕೂಗುತ್ತಿವೆ  ‘ಹಾ ಒಡಹುಟ್ಟಿದವನೇ , ಹೇ ಮಗನೇ, ಹೇ ತಾತ’ ಹೇಳಿ ಪುನಃ ಪುನಃ ಪ್ರಲಾಪಿಸುತ್ತಾರೆ 

ಕ್ಷುಧಿತಾಸ್ತೃಷಿತಾಃ ಪಾಪಾಃ ಪಿಬಂತಿ ಕಿಲ ಶೋಣಿತಮ್ ।
ಸಾ ಸರಿದ್ರುಧಿರಾಪೂರಂ ವಹಂತಿ ಫೇನಿಲಂ ಬಹು ॥೨೨॥

ಬಹು ಆವಸರ ಕೂಡಿದ ಪಾಪಿಗಳು  ನಿಶ್ಚಯವಾಗಿ ಅಲ್ಲಿ ನೆತ್ತರಿನ ಕುಡಿತ್ತಿವೆ . ಆ ನದಿ ರಕ್ತಪೂರ್ಣವಾಗಿ ಬಹು ನೊರೆಯಿಂದ ಕೂಡಿ ಹರಿತ್ತಿತ್ತು 

ಮಹಾಘೋರಾತಿಘರ್ಜಂತೀ ದುರ್ನಿರೀಕ್ಷ್ಯಾ ಭಯಾವಹಾ ।
ತಸ್ಯಾ ದರ್ಶನಮಾತ್ರೇಣ ಪಾಪಾಃ ಸ್ಯುರ್ಗತಚೇತನಾಃ ॥೨೩॥

ಮಹಾಘೋರವಾದ, ಅತಿಯಾಗಿ ಘರ್ಜುಸುವ ಆ ನದಿ ನೋಡಲು ಎದೆ ಹೊಡೆಯುವಷ್ಟು ಭಯಾನಕವಾಗಿದ್ದು. ಅದರ ನೋಡಿದ ಮಾತ್ರಕ್ಕೆ ಪಾಪಿಗಳ  ಚೇತನಶೂನ್ಯರಾಗಿಬಿಡುತ್ತದ್ದವು 

ಬಹುವೃಶ್ಚಿಕಸಂಕೀರ್ಣಾ ಸೇವಿತಾ ಕೃಷ್ಣಪನ್ನಗೈಃ ।
ತನ್ಮಧ್ಯೇ ಪತಿತಾನಾಂ ಚ ತ್ರಾತಾ ಕೋsಪಿ ನ ವಿದ್ಯತೇ ॥೨೪॥

ಅನೇಕ ಚೇಳುಗಳಿಂದ ತುಂಬಿದ  ಘೋರಕೃಷ್ಣ ಸರ್ಪಗಳು ಆಶ್ರಿತವಾದ ಆ ನದಿಯ ಮಧ್ಯಲ್ಲಿ ಬಿದ್ದಿ ಪಾಪಿಗಳು ರಕ್ಷಕರು ಯಾರೆ ಆಗಿರಲಿ 

ಆವರ್ತ ಶಸಾಹಸ್ತ್ರೈಃ ಪಾತಾಲೇ ಯಾಂತಿ ಪಾಪಿನಃ ।
ಕ್ಷಣಂ ತಿಷ್ಠಂತಿ ಪಾತಾಲೇ ಕ್ಷಣಾದುಪರಿವರ್ತಿನಃ ॥೨೫॥

ಅಲ್ಲಿ  ಸುತ್ತಿ ಲಕ್ಷಾಂತರ ಸರ್ತಿ ಸುತ್ತಿಕ್ಕೂoಡು ಪಾಪಿಗಳು  ಆ ನದಿಯ ತಳಕ್ಕೆ ಹೋಗುತ್ತಿದ್ದವು ಅಲ್ಲಿ ಒಂದು ಕ್ಷಣ ನಿಂತು  ಮತ್ತೆ ಕ್ಷಣಮಾತ್ರಲ್ಲಿ ಮೇಲೆ ಬರುತ್ತಿದ್ದವು 
.
ಪಾಪಿನಾಂ ಪತನಾಯೈವ ನಿರ್ಮಿತಾ ಸಾ ನದೀ ಖಗ ।
ನಾಪರಂ ದೃಶ್ಯತೇ ತಸ್ಯಾ ದುಸ್ತರಾ ಬಹುದುಃಖದಾ ॥೨೬॥

ಏ ಪಕ್ಷಿಯೇ!, ಪಾಪಿಗಳ ಬೀಳುವದಕ್ಕೇಳಿಯೇ ಆ ನದಿ ನಿರ್ಮಿಸಲ್ಪಟ್ಟಿದು. ಅದರ ದಡ ಕಾಣುತ್ತಿದೆ  ಅದು ದಾಟಲು ದುಸ್ಸಾಧ್ಯವೂ, ಬಹು ದುಃಖಮಯವೂ ಆಗಿದ್ದು.

ಏವಂ ಬಹುವಿಧಕ್ಲೇಶೇ ಯಮಮಾರ್ಗೇsತಿದುಃಖಿದೇ ।
ಕ್ರೋಶಂತಶ್ಚ ರುದಂತಶ್ಚ ದುಃಖಿತಾ ಯಾಂತಿ ಪಾಪಿನಃ ॥೨೭॥

ಹೀಗೆ ಬಹುವಿಧವಾಗಿ ಕ್ಲೇಶವ ಅನುಭವಿಕೊಂಡು ಬಹು ದುಃಖಕರವಾದ ಯಮ ಮಾರ್ಗಲ್ಲಿ ಅಕ್ರೋಶ ಮಾಡಿಕೊಂಡು, ರೋದಿಸಿಕೊಂಡು  ದುಃಖಿತರಾದ ಪಾಪಿಗಳು ಹೋಗುತ್ತವೆ 

ಪಾಶೇನ ಯಂತ್ರಿತಾಃ ಕೇಚಿತ್ತೃಷ್ಯಮಾಣಾಸ್ತಥಾಂಕುಶೈಃ ।
ಶಸ್ತ್ರಾಗ್ರೈಃ ಪೃಷ್ಠತಃ ಪ್ರೋತೈರ್ನಿಯಮಾನಾಶ್ಚ ಪಾಪಿನಃ ॥೨೮॥

ಪಾಶದಿಂದ  ಬಂಧಿಸಿ, ಕೆಲವರ ಅಂಕುಶದಿಂದ ಎಳದು ಕ್ಕೊಂಡು, ಬೆನ್ನಿಗೆ ಶಸ್ತ್ರಗಳ ಮೊನೆಯಿಂದ  ಚುಚ್ಚಿಕೊಂಡು (ಯಮದೂತರುಗೊ) ಪಾಪಿಗಳ ಕರದುಕ್ಕೊಂಡು ಹೋಗುತ್ತಿದ್ದರು 

ನಾಸಾಗ್ರಪಾಶಕೃಷ್ಟಾಶ್ಚ ಕರ್ಣಪಾಶೈಸ್ತಥಾ ಪರೇ ।
ಕಾಲಪಾಶೈಃ ಕೃಷ್ಯಮಾಣಾಃ ಕಾಕೈಃ ಕೃಷ್ಯಾಸ್ತಥಾಪರೇ ॥೨೯॥

ಕೆಲವರಿಗೆ ಮೂಗಿನ ಕೊoಡಿಯಲಿಯೂ, ಕೆಲವರಿಗೆ ಕಿವುಯಲ್ಲಿ  ಪಾಶವ ಹಾಕಿ ಎಳೆದುಕೊಂಡು ಕೆಲವರ ಕಾಲಪಾಶದಿಂದ ಬಂಧಿಸಿ ಕಾಕೆಯ ಹಾಗೆ ಎಳೆದು ಕರದುಕ್ಕೊಂಡಹೋಗುತ್ತಿದ್ದರು 

ಗ್ರೀವಾಬಾಹುಷು ಪಾದೇಷು ಬದ್ಧಾಃ ಪೃಷ್ಠೇ ಚ ಶೃಂಖಲೈಃ ।
ಅಯೋಭಾರಚಯಂ ಕೇಚಿದ್ವಹಂತಃ ಪಥಿ ಯಾಂತಿ ಯೇ ॥೩೦॥

ಕೆಲವರ ಕೊರಳಿಲ್ಲಿ, ತೋಳು, ಪಾದ ಮತ್ತೆ ಬೆನ್ನುಗಳಲ್ಲಿ ಸಂಕೊಲೆಂಯಿಂದ ಬಂಧಿಸಿ ಕಬ್ಬಿಣದ ಭಾರವ ಹೊರ್ಸಿಗೊಂಡು ಯಮಮಾರ್ಗಲ್ಲಿ ಹೋಗುತ್ತಿದ್ದರು 

ಯಮದೂತೈರ್ಮಹಾಘೋರೈಸ್ತಾಡ್ಯಮಾನಾಶ್ಚ ಮುದ್ಗರೈಃ ।
ವಮಂತೋ ರುಧಿರಂ ವಕ್ತ್ರಾತ್ತದೇವಾಶ್ನಂತಿ ತೇ ಪುನಃ ॥೩೧॥

ಮಹಾಘೋರರಾದ ಯಮದೂತರಿಂದ ಸುತ್ತಿಗೆಲಿ ಬಡಿಸಿ ಗೊಂಡು ಬಾಯಿಂದ ನೆತ್ತರ ಕಾರಿಕೊಂಡು  ಅದನ್ನೇ ಮತ್ತೆ ಮತ್ತೆ ತಿನ್ನುತ್ತಿದ್ದವು 

ಶೋಚಂತಿ ಸ್ವಾನಿ ಕರ್ಮಾಣಿ ಗ್ಲಾನಿಂ ಗಚ್ಛಂತಿ ಜಂತವಃ ।
ಅತೀವ ದುಃಖಸಂಪನ್ನಾಃ ಪ್ರಯಾಂತಿ ಯಮಮಂದಿರಮ್ ॥೩೨॥

ತಾವು ಮಾಡಿದ ಕರ್ಮಂಗಳ ಚಿಂತೆಮಾಡಿಕೋಂಡು, ಮನಸ್ಸಿಲ್ಲಿ ನೊಂದು  (ಅಸಹಾಯಕತೆ/ಅಶಕ್ತತೆ) ಹೊಂದಿ, ಅತೀ ದುಃಖವ ಹೊಂದಿ ಆ ಪಾಪಿ ಜೀವಿಗಳು ಯಮನಾಲಯಕ್ಕೆ ಪ್ರಯಾಣ ಮಾಡುತ್ತಿದ್ದವು 

ತಥಾ ಚ ಸ ವ್ರಜನ್ಮಾರ್ಗೇ ಪುತ್ರ ಪೌತ್ರ ಇತಿ ಬ್ರುವನ್ ।
ಹಾಹೇತಿ ಪ್ರರುದನ್ನಿತ್ಯಮನುತಪ್ಯತಿ ಮಂದಧೀಃ ॥೩೩॥

ಆ ಮಂದಬುದ್ಧಿಯ ಪಾಪಿಯು ಯಮಮಾರ್ಗಲ್ಲಿ ಹೋಗತ್ತ 
‘ಏ ಮಗಾ, ಏ ಮಗಳೇ’   ಎಂದು ಹಾಹಾಕಾರ ಮಾಡಿಕೊಂಡು, ರೋದಿಸಿಕೊಂಡು  ದಿನಾ ಪಶ್ಚಾತ್ತಾಪ ಪಡುತ್ತ

ಮಹತಾ ಪುಣ್ಯಯೋಗೇನ ಮಾನುಷಂ ಜನ್ಮ ಲಭ್ಯತೇ ।
ತತ್ಪ್ರಾಪ್ಯ ನ ಕೃತೋ ಧರ್ಮಃ ಕೀದೃಶಂ ಹಿ ಮಯಾ ಕೃತಮ್ ॥೩೪॥

ಬಹುಪುಣ್ಯಫಲದ ಮನುಷ್ಯ ಜನ್ಮ ಸಿಕ್ಕುವುದು. ಅದನ್ನ ಪಡದಮೇಲೆ ಧರ್ಮವ ಆಚರಿಸಿ, ಮತ್ತಿತರ ಆನು ಮಾಡಿದರು 

ಮಯಾ ನ ದತ್ತಂ ನ ಹುತಂ ಹುತಾಶನೇ ತಪೋ ನ ತಪ್ತಂ ತ್ರಿದಶಾ ನ ಪೂಜಿತಾಃ ।
ನ ತೀರ್ಥಸೇವಾ ವಿಹಿತಾ ವಿಧಾನತೋ ದೇಹಿನ್ಕ್ವಚಿನ್ನಸ್ತರ ಯತ್ತ್ವಯಾ ಕೃತಮ್ ॥೩೫॥

ನನ್ನಂದ ದಾನ ಕೊಡಲ್ಪಟ್ಟಿಲ್ಲ , ಅಗ್ನಿಗೆ ಹವಿಸ್ಸು ಸಮರ್ಪಣೆ ಮಾಡದೇ , ತಪಸ್ಸು ಆಚರಿಸದೆ , ದೇವತೆಗಳ  ಪೂಜಿಸಲ್ಪಡದೆ , ವಿಧಿಪೂರ್ವಕ ತೀರ್ಥಸೇವನೆ ಮಾಡಲ್ಪಡದೆ . ಏ ದೇಹವೆ ! ನಿನ್ನಂದ ಎನು ಮಾಡಲ್ಪಟ್ಟತ್ತೋ ಎಲ್ರು ಪರಿಹರಿಸಿಕೊಳ್ಳಿ 


ನ ಪೂಜಿತಾ ವಿಪ್ರಗಣಾಃ ಸುರಪಗಾ ನ ಚಾಶ್ರಿತಾಃ ಸತ್ಪುರುಷಾ ನ ಸೇವಿತಾಃ ।
ಪರೋಪಕಾರ ನ ಕೃತಾಃ ಕದಾಚನ ದೇಹಿನ್ಕ್ವಚಿನ್ನಿಸ್ತರ ಯತ್ತ್ವಯಾ ಕೃತಮ್ ॥೩೬॥

ನನ್ನಿಂದ ಒಂದು ಸರ್ತಿಯಾದರು ವೇದವಿದರುಗಳನ್ನ  (ವಿಪ್ರರು) ಪೂಜಿಸಲ್ಪಟ್ಟಿಲ್ಲದಿದ್ದರೆ , ಗಂಗೆಲಿ (ಸುರಪಗಾ = ಗಂಗೆ) ಮೀಯಲ್ಪಟ್ಟಿಲ್ಲದಿದ್ದರೆ ಸತ್ಪುರುಷ ಸೇವೆಯೂ ಮಾಡಲ್ಪಟ್ಟಿಲ್ಲವೇ  ಏ ದೇಹವೆ ! ನಿನ್ನಂದ ಎನು ಮಾಡಲ್ಪಟ್ಟತ್ತೋ ಎಲ್ಲವನ್ನು ನೀವು ಪರಿಹರಿಸಿಕೋಳ್ಳಿ 

ಜಲಾಶಯೋ ನೈವ ಕೃತೋ ಹಿ ನಿರ್ಜಲೇ ಮನುಷ್ಯ ಹೇತೋಃ ಪಶುಪಕ್ಷಿ ಹೇತವೇ ।
ಗೋವಿಪ್ರವೃತ್ತ್ಯರ್ಥಮಕಾರಿ ನಾಣ್ವಪಿ ದೇಹಿನ್ಕ್ವಚಿನ್ನಿಸ್ತರ ಯತ್ತ್ವಯಾ ಕೃತಮ್ ॥೩೭॥

ನೀರಿಲ್ಲದಿದ್ದಲ್ಲಿ ಮನುಷ್ಯರಿಗೆ ಬೇಕಾಗಿ, ಪಶುಪಕ್ಷಿಗಳಿಗೆ  ಬೇಕಾಗಿ ಒಂದು ಜಲಾಶಯವೂ ನಿರ್ಮಿಸಲ್ಪಟ್ಟಿದೆ . ಗೋಬ್ರಾಹ್ಮಣರ ಜೀವಿತಕ್ಕೋಸ್ಕರವಾಗಿ ಎನ್ನಿಂದ ಕಿಂಚಿತ್ ಸಹಾಯವೂ ಮಾಡಲ್ಪಟ್ಟಿಲ್ಲವೇ. ಏ ದೇಹವೆ ! ನಿನ್ನಂದ ಎನು ಮಾಡಲ್ಪಟ್ಟಲ್ಲವೋ ಎಲ್ಲವನ್ನು  ನೀವು ಪರಿಹರಿಸಿಕೋಳ್ಳಿ 

ನ ನಿತ್ಯದಾನಂ ನ ಗವಾಹ್ನಿಕಂ ಕೃತಂ ನ ವೇದಶಾಸ್ತ್ರಾರ್ಥವಚಃ ಪ್ರಮಾಣಿತಂ ।
ಶ್ರುತಂ ಪುರಾಣಂ ನ ಚ ಪೂಜಿತೋ ಜ್ಞೋ ದೇಹಿನ್ಕ್ವಚಿನ್ನಸ್ತರ ಯತ್ತ್ವಯಾ ಕೃತಮ್ ॥೩೮॥

ನಿತ್ಯದಾನ ಮಾಡಲ್ಪಟ್ಟಿಲ್ಲವೇ  ನಿತ್ಯವೂ ಒಂದು ಗೋವಿಂಗೆ ತೃಪ್ತಿಯಷ್ಟು ಆಹಾರವನ್ನೂ  ಕೊಡಲ್ಪಟ್ಟಿಲ್ಲವೇ ವೇದಶಾಸ್ತ್ರ ಪುರಾಣ ವಚನಗಳನ್ನು ಕೇಳಲ್ಪಟ್ಟಿಲ್ಲವೇ  ಜ್ಞಾನಿಗಳ (ಜ್ಞೋ = ಜ್ಞಃ) ಪೂಜಿಸಲ್ಪಟ್ಟಿಲ್ಲವೇ . ಏ ದೇಹವೆ ! ನಿನ್ನಂದ ಎನು ಮಾಡಲ್ಪಟ್ಟಲ್ಲವೋ  ನೀವು ಎಲ್ಲವನ್ನು ಪರಿಹರಿಸಿಕೋಳ್ಳಿ 

ಭರ್ತುರ್ಮಯಾ ನೈವ ಕೃತಂ ಹಿತಂ ವಚಃ ಪತಿವ್ರತಂ ನೈವ ಕದಾಪಿ ಪಾಲಿತಂ ।
ನ ಗೌರವಂ ಕ್ವಾಪಿ ಕೃತಂ ಗುರೂಚಿತಂ ದೇಹಿನ್ಕ್ವಚಿನ್ನಿಸ್ತರ ಯತ್ತ್ವಯಾ ಕೃತಮ್ ॥೩೯॥

ಪತಿಯ ಹಿತವಚನಗಳ ನನ್ನಿಂದ ಪಾಲಿಸಲ್ಪಟ್ಟಿಲ್ಲವೋ ಪಾತಿವ್ರತ್ಯ ನನ್ನಿಂದ ಎಂದೂ ಕಾಪಾಡಲ್ಪಟ್ಟಿಲ್ಲವೋ  ಶ್ರೇಷ್ಠರಾದ ಗುರುಗಳು ಯೋಗ್ಯರೀತಿಲಿ ಎನ್ನಿಂದ ಗೌರವಿಸಲ್ಪಟ್ಟಿಲ್ಲವೋ . ಏ ದೇಹವೆ ! ನಿನ್ನಂದ ಎನು ಮಾಡಲ್ಪಟ್ಟಲ್ಲವೋ ನೀವು ಎಲ್ಲರು ಪರಿಹರಿಸಿಕೊಳ್ಳಿ 

ಧರ್ಮಬುದ್ಧ್ಯಾ ಪತಿರೇವ ಸೇವಿತೋ ವಹ್ನಿಪ್ರವೇಶೋ ನ ಕೃತೋ ಮೃತೇ ಪತೌ ।
ವೈಧವ್ಯಮಾಸಾದ್ಯ ತಪೋ ನ ಸೇವಿತಂ ದೇಹಿನ್ಕಚಿನ್ನಿಸ್ತರ ಯತ್ತ್ವಯಾ ಕೃತಮ್ ॥೪೦॥

ಧರ್ಮಬುದ್ಧಿಂದ ಪತಿಯ ಮಾತುಗಳು ಸೇವಿಸಲ್ಪಟ್ಟಿದ್ದಿಲ್ಲವೋ  ಪರಿ ಸತ್ತು ಮತ್ತೆ ಸಹಗಮನ (ಅಗ್ನಿಪ್ರವೇಶ) ಮಾಡಲ್ಪಟ್ಟಿದ್ದಿಲ್ಲವೊ ವಿಧವೆ ಆದರೂ ತಪಸ್ಸು ಆಚರಿಸಲ್ಪಟ್ಟಿದ್ದಿಲ್ಲವೊ . ಏ ದೇಹವೆ  ನಿನ್ನಂದ ಎನು ಮಾಡಲ್ಪಟ್ಟತ್ತೋ ಎಲ್ಲರು ಪರಿಹರಿಸಿಕೊಳ್ಳಿ 

ಮಾಸೋಪವಾಸೈರ್ನವಿಶೋಷಿತಂ ಮಯಾ ಚಾಂದ್ರಾಯಣೈರ್ವಾ ನಿಯಮೈಃ ಸವಿಸ್ತರೈಃ ।
ನಾರೀಶರೀರಂ ಬುಹುದುಃಖಭಾಜನಂ ಲಬ್ಧಂ ಮಯಾ ಪೂರ್ವ ಕೃತೈರ್ವಿಕರ್ಮಭಿಃ ॥೪೧॥

ನನ್ನಿಂದ ಚಾಂದ್ರಾಯಣ ಮಾಸಿಕ ಉಪವಾಸವಾಗಲೀ, ವಿಸ್ತಾರವಾದ ವ್ರತನಿಯಮಗಳಾಗಲೀ ದೇಹದ ತಳದ್ದದ್ದಿ ಬಹುದುಃಖವನ್ನು ಅನುಭವುಸುವ ಈ ನಾರೀ ಶರೀರ ನಿನ್ನಂದ ಪೂರ್ವಲ್ಲಿ ಮಾಡಲ್ಪಟ್ಟ ದುಷ್ಕ್ರರ್ಮಗಳ ಫಲವಾಗಿಯೇ ಲಭಿಸಿದ್ದದು.

ಏವಂ ವಿಲಪ್ಯ ಬಹುಶಃ ಸ ಸ್ಮರನ್ಪೂರ್ವದೈಹಿಕಮ್ ।
ಮಾನುಷತ್ವಂ ಮಮ ಕುತ ಇತಿ ಕ್ರೋಶಸ್ಪ್ರಸರ್ಪತಿ ॥೪೨॥

ಹೀಗೆ ಬಹು ಪ್ರಲಾಪಿಸಿಗೊಂಡು ಜೀವಿ ಪೂರ್ವ ಜೀವನವ ಸ್ಮರಿಸಿಗೊಂಡು ‘ಆ ಎನ್ನ ಮಾನುಷತ್ವ ಎಲ್ಲಿ ?!’ ಎಂದು ಅಕ್ರೋಶ ಮಾಡಿಗೊಂಡು ಮುಂದೆ ನಡೆಯುತ್ತ

ದಶಸಪ್ತ ದಿನಾನ್ಯೇಕೋ ವಾಯುವೇಗೇನ ಗಚ್ಛತಿ ।
ಅಷ್ಟಾದಶೇ ದಿನೇ ತಾರ್ಕ್ಷ್ಯ ಪ್ರೇತಃ ಸೌಮ್ಯಪುರಂ ವ್ರಜೇತ್ ॥೪೩॥

ಏ ಗರುಡ!, ಹದಿನೇಳು ದಿನಗಳು  ಒಂಟಿಯಾಗಿ ವಾಯುವೇಗದಿಂದ ಹೋಗುತ್ತಿತ್ತು . ಹದಿನೆಂಟನೇ ದಿನ ಆ ಜೀವ ಸೌಮ್ಯಪುರವ ತಲುಪೀತು 

ನರನಾಡಿಗಳು

*ನರನಾಡಿಗಳು ಎಂದರೇನು ?* *ಇವುಗಳ ಮಹತ್ವ ಏನು ? ದೇಹದಲ್ಲಿ ಇವುಗಳು ಪ್ರತ್ಯೇಕವಾಗಿ ಇರುತ್ತವೆ  *ನರ(nerves) -* *ಮೆದುಳು,ಮೆದುಳು* *ಬಳ್ಳಿ(ಬೆನ್ನು ಹುರಿ) ಮತ್ತು* *ಅ...