Followers

Friday, 8 May 2020

ಗರುಡ ಪುರಾಣ ಪ್ರಸ್ತಾವನೆ

ಗರುಡ ಪುರಾಣ………… 
ಬರೇ ಓದೋಕೆ ಹೇಳಿ ಮಾತ್ರ ಅಲ್ಲ ಕೆಲವು ಜನ ಗರುಡ ಪುರಾಣ ಪುಸ್ತಕವ ಮನೆಲಿ ಮಡಿಕೊಂಡಿದ್ರು ಹೊರಗಡೆ ತೆಗೆಯಲ್ಲ ಅದರ ಬಗೆ ಏನು ಗೊತ್ತಿಲ್ಲ – ಅದೂ ಇರ್ಲಿ ಬಿಡಿ.
ಯಾವುದೇ ಪುರಾಣವಾಗಲಿ, ಗ್ರಂಥವಾಗಲಿ – ಅದು ಅತ್ಯಮೂಲ್ಯ ಸಾಹಿತ್ಯವನ್ನೂ ಅರ್ಥವನ್ನೂ ಸೂಕ್ಷ್ಮರೂಪಲ್ಲಿ ಹೊಂದಿಸುವುದು . ಅದರ ಆಳ ಚಿಂತನೆ ಮಾಡಿದಷ್ಟೂ ಆಳವೇ ಹಾಗು ವಿಶಾಲವೇ ಹೆಚ್ಚು ಬರೇ ಸಾಮಾನ್ಯ ಜ್ಞಾನಂದ ಜನ  ಅದರ ಅರ್ಥ ಜೀರ್ಣಿಸಿ ಕೊಳ್ಳಲು ಕಷ್ಟವೇ. ಅಷ್ಟಕ್ಕೂ ಊಹಾತ್ಮಕ ಚಿಂತನೆಗೊ ಪ್ರಾರಂಭದ ವಿಷಯ ಎಲ್ಲಿಂದ ಎಲ್ಲಿಗೋ ಹೇಗಿ ಏನಕ್ಕೇನೋ ಅರ್ಥಗಳು ವಿವರಣೆಗಳೂ ಸೃಷ್ಟಿಯಾಗುವವು ಅದರ ನಿಜ ಮೌಲ್ಯ ಕಳಕ್ಕೊಳ್ಳತ್ತವೆ 
ಗರುಡ ಪುರಾಣಲ್ಲಿ ಮನುಷ್ಯ ಜೀವನದ ಮತ್ತೆ ಸಾವಿನ ನಂತರದ ವಿಚಾರ  ಹೇಳಲ್ಪಟ್ಟಿದು. ಧರ್ಮ ಅರ್ಥ ಕಾಮ ಮೋಕ್ಷ ಅಂತ ಹೇಳಲ್ವಾ ಈ ನಾಲ್ಕು ವಿಧ ಪುರುಷಾರ್ಥ ಜೀವನದಲ್ಲಿ ಸುರು ಮಾಡಿ ಸಾಂಸರಿಕ ಜೀವನಲ್ಲಿ ಅನುಭವಿಸಿ ಮುಂದೆ ಸಂನ್ಯಾಸ ಸ್ವೀಕರಿಸಿ ಮೋಕ್ಷ ಸಾಧನೆ ಮಾಡಬೇಕು ಎನ್ನುತ್ತೆ. ಈ  ಗರುಡ ಪುರಾಣವನ್ನು ಅದರ ಆಳವಾಗಿ ಚಿಂತನೆ ಮಾಡಿರೆ ಈ ಜೀವನಲ್ಲಿ ಜಿಗುಪ್ಸೆ, ವೈರಾಗ್ಯ ಬರುವ ಸಾಧ್ಯತೆ ಇದ್ದು. ಇದರಿಂದ ಸಾಂಸಾರಿಕ ಜೀವನಲ್ಲಿ ಮಾಡಬೇಕಾದ ಕರ್ತವ್ಯದ ಚ್ಯುತಿಗೆ ಬಲಿಯಗುವ ಸಾಧ್ಯವಿದೆ ಹಾಗೂ ಸಾಧ್ಯತೆ ಇದ್ದು ಹೇಳಿ ಕೆಲವರ ವಾದ. ಆಗಿರಲೂ ಸಾಕು – ಅದೂ ಇರ್ಲಿ ಬಿಡಿ.
ಹಾಗಾದರೆ ಗರುಡ ಪುರಾಣ ಏನು ಹೇಳುತ್ತೆ ಅಂತ ನೋಡೋಬೇಕಾದರೆ ನಾವು ಮೊದಲು ಯಾವುದೇ ವಿಷಯವ ಜ್ಞಾನದ ದೃಷ್ಟಿಂದ ಓಡಬೇಕು. ಮತ್ತೆ ಅದರ  ಬುದ್ಧಿಪೂರ್ವಕವಾಗಿ ಚಿಂತನೆ ಮಾಡಿ ಪ್ರಯೋಗದ ಬಗ್ಗೆ ನಿರ್ಧರಿಸಬೇಕು 
ನಿಮಗು  ಗರುಡ ಪುರಾಣ ವಿಷಯ ಗೊತ್ತಿರಲಿಕ್ಕೂ  ಸಾಕು, ಆದರೆ ಮೊದಲನೇ ಪುಟ ಬಿಡಿಸಿದಾಗ ಕಂಡಿತು 

ಪ್ರಜ್ಞಾಹೀನಸ್ಯ ಪಠನಂ ಯಥಾಂಧಸ್ಯ ಚ ದರ್ಪಣಮ್ ।
ಅತಃ ಪ್ರಜ್ಞಾವತಾಂ ಶಾಸ್ತ್ರಂ ತತ್ತ್ವಜ್ಞಾನಸ್ಯ ಲಕ್ಷಣಮ್ ॥

(ಬುದ್ಧಿಹೀನಂಗೆ ಓದುವದು ಕುರುಡನು ಕನ್ನಡಿಯಲ್ಲಿ ಮುಖ ನೋಡಿಕೊಂಡಂತೆ ಆಯಿತು ಹಾಂಗಾಗಿ ಪ್ರಜ್ಞಾವಂತರಿಂಗೆ ಇಂತಹ  ಶಾಸ್ತ್ರಂಗಳೂ, ತತ್ತ್ವಜ್ಞಾನ ನಿರ್ದೇಶಕರು ಇದ್ದಹಾಗೆ ) 

– ಈ ವಿಷಯ ಎಲ್ಲಿಗೆ ಎತ್ತಿತ್ತು ಹೇಳಿರೆ ಅರ್ಥೈಸಿಕೊಳ್ಳುವ  ಶಕ್ತಿ ಇಲ್ಲದ್ದೆ ಓದಿರೆ, ತಥಾಕಲ್ಪಿತ ಅಸಮ್ಮತ ವ್ಯಾಖ್ಯಾನಕ್ಕೆ ಕಾರಣ ಅಂತ ಆರೋಪ ಸರಿ ಕಾಣುತ್ತೇ 

ಫಲಶ್ರುತಿಲಿ ಭಗವಂತ° ಹೇಳುತ್ತಾನೆ 

ಪುರಾಣಂ ಗಾರುಡಂ ಪುಣ್ಯಂ ಪವಿತ್ರಂ ಪಾಪನಾಶನಮ್ ।
ಶೃಣ್ವತಾಂ ಕಾಮನಾಪೂರಂ ಶ್ರೋತವ್ಯಂ ಸರ್ವದೈವ ಹಿ ॥

(ಈ ಗರುಡ ಪುರಾಣ ಪುಣ್ಯಕರವೂ ಪವಿತ್ರವೂ ಪಾಪನಾಶಕವೂ ಆಗಿದ್ದು. ಇದರ ಕೇಳಿದವನ ಇಚ್ಛೆ ಪೂರೈಸಲ್ಪಡುತ್ತು. ಹಾಂಗಾಗಿ ಇದನ್ನು ಯಾವಾಗಲು ಕೇಳಬೇಕು )
 ಗರುಡಪುರಾಣ ‘ಓದುವಾಗ ‘ಹೇಳುವ  ಮಾತಿನ ಅರ್ಥ ಬೇರೆಯೇ ಏನೋ ಇದ್ದು. ಗರುಡಪುರಾಣವೂ ಓದಿ ಅರ್ಥೈಸತಕ್ಕುದಾದ್ದೇ ಆಗಿದ್ದು ಹೇಳುವಲ್ಲಿ ಸಂಶಯವೇ ಇಲ್ಲ ಪಿತೃಗಳಿಗೆ ಮುಕ್ತಿಪ್ರದಾಯಕವಾದ, ಪುತ್ರವಿಷಯ ಅಭಿಲಾಷೆಗಳ ಪೂರ್ಣಗೊಳುಸುವ, ಇಹ-ಪರಲೋಕಗಳಲ್ಲಿ ಸುಖ ಪ್ರದಾನಿಯಾದ ಈ ಗರುಡ ಪುರಾಣವ ಯಾರು ಶ್ರವಣ ಮಾಡುವರೋ ಯಾರು , ಶ್ರವಣ ಮಾಡುಸುತ್ತರೋ  ಅವರಿಬ್ಬರ ಪಾಪಗಳೂ ತೊಳದು ಹೋಗಿ ಸದ್ಗತಿ ಪ್ರಾಪ್ತಿಯಾಗುತ್ತೆ ಹಾಗಾಗಿ ಸಮಸ್ತ ದುಃಖ ವಿನಾಶ ಮಾಡುವ, ಧರ್ಮ ಅರ್ಥ ಕಾಮ ಮೋಕ್ಷ- ಈ ಚತುರ್ವಿಧ ಪುರುಷಾರ್ಥಗಳ ಸಾದಿಸುವಲ್ಲಿ ಸಹಕಾರಿಯಾದ ಈ ಗರುಡಪುರಾಣ ಪ್ರೇತಕಲ್ಪ ( ಗರುಡ ಪುರಾಣ ಉತ್ತರ ಖಂಡ = ಪುರಾಣ ಸಾರೋದ್ಧಾರ) ಎಲ್ಲರು ಅಗತ್ಯ ಶ್ರವಣ ಮಾಡಬೇಕ್ಕಾದ್ದೇ ಹಾಗೂ ಇದರ ಫಲಶ್ರುತಿ. ಗರುಡ ಪುರಾಣ ಮನುಷ್ಯನ ದುಃಖವ ದೂರ ಮಾಡುವ ಅಮೂಲ್ಯ ಗ್ರಂಥ. ಹಾಗಾಗಿ ಇದು ಸಾವಿನ ದುಃಖವ ನಿವಾರಿಸಲೆ ಬೇಕಾಗಿ ಕುಟುಂಬದವರೊಂದಿಗೆ ಓದುಸೋದು ಹೇಳಿ ಒಂದು ಅರ್ಥಶೂನ್ಯ ವಾದ. ಶರೀರ ಸಂಬಂಧದ ವ್ಯಾಮೋಹಲ್ಲಿ ಆಳವಾಗಿ ನಾಟಿಹೋದ ಮನಸ್ಸಿಂಗೆ ಸೂತಕದ ಮನೆಲಿ ಗರುಡಪುರಾಣ ಏಕಾಏಕಿ ಶ್ರವಣ ಅವನ ದುಃಖ ನೀಗುಸುವಲ್ಲಿ ಅದೆಷ್ಟು ಸಫಲಕಾರಿ  ಮೃತನಲ್ಲಿ ತನಗಿದ್ದ ಸಂಬಂಧದ ಮರುಪರುಶೀಲನೆ ಚಿಂತನೆ ಮಾಡಲು ಇದೆ ಸರಿಯಾದ ಸಮಯ ಮತ್ತು ಜ್ಞಾನಮಯ ವಿಷಯ ಹಾಗಾಗಿ ಇದರ ಆ ದೃಷ್ಟಿಂದ ಮನಸ್ಸಿಲ್ಲಿ ಸ್ಥಾಪಿಸಿಗೊಂಡು ಗರುಡ ಪುರಾಣ ಓದಿರೆ ದುಃಖ ನಿರ್ಮೂಲನೆ ಆಗಿ ಮೋಕ್ಷ ಸಿಕ್ಕುವುದು. ದುಃಖ ಬರದು ಹಾಗಾಗಿ ಇದು ಜ್ಞಾನಕ್ಕಾಗಿ ಇಂತ ಅಮೂಲ್ಯ ಗ್ರಂಥ ಹೇಳಿಯೇ ತಿಳಿದು ಓದಿ ಅರ್ಥೈಸಿಕೊಂಡಾಗಲೇ ಮೋಕ್ಷ ನೋಡಲು ಸಾಧ್ಯ ನೋಡಕು. ಬಾಕಿದ್ದ ವಿವರಗಳ ಆಯಾ ಸಂದರ್ಭಲ್ಲಿ ಓದಿಗೊಂಡ್ದು 
ಮಾನವನ ಇತಿಹಾಸಲ್ಲಿ ಯಕ್ಷಪ್ರಶ್ನೆಯಾಗಿ ಉಳಿದುಕೊಂಡು ಹುಟ್ಟು ಸಾವಿಗು . ಹುಟ್ಟಿನ ಹಿಂದೆ , ಸಾವಿನ ಮುಂದೆ ಎಂತಹ ನಿರ್ಧಾರವನ್ನು ವೇದಾಂತಿಯೂ ಒಂದೊಂದು ರೀತಿಲಿ ತೀರ್ಮಾನವ ಹೇಳಿದ್ದರೆ  ನಾವು ಅಷ್ಟು ಹೇಳಿ ನಂಬಿಗೊಂಡು ಹೋದಷ್ಟೆ. ಇದು ಪ್ರತ್ಯಕ್ಷಕ್ಕೆ ಅನುಭವಕ್ಕೆ ಸಿಕ್ಕುತ್ತಿಲ್ಲ ಅನುಮಾನ ದಿಂದ ನಿರ್ಧರುಸುವ ಸುಲಭ ವಿಷಯವೂ ಅಲ್ಲ. ಹಾಂಗಾಗಿ ಈ ಹುಟ್ಟು ಸಾವುಗಳ ಅಭೇದ್ಯ ಸಮಸ್ಯೆಯ ಉತ್ತರಕ್ಕೆ ಜಿಜ್ಞಾಸುಗೊ ಆಗಮ ಶಾಸ್ತ್ರಗಳನ್ನೇ ನಂಬಿದ್ದವೆ ವೇದಾರ್ಥ ತತ್ವಸಾರವ ನೀಡುವದು ಪುರಾಣಂಗಳಿಗೆ ಸಾಕ್ಷಾತ್ ನಾರಾಯಣಾವತಾರವಾದ ಶ್ರೀ ವೇದವ್ಯಾಸರೇ ಇವುಗಳ ಕರ್ತೃ ಹೇಳುವರು ಆಸ್ತೀಕ ಮತ. ಹೀಗೆ ಹದಿನೆಂಟು ಪುರಾಣಂಗಳಲ್ಲಿ  (ಪ್ರಧಾನ ಪುರಾಣಗಳು ಹದಿನೆಂಟು + ಉಪಪುರಾಣಗಳು ನಾಲ್ಕು) ಗರುಡ ಪುರಾಣವೂ ಒಂದು.
ಮನುಷ್ಯ  ಜೀವಿ ಈ ಲೋಕವ ಬಿಟ್ಟಮತ್ತೆ ತನ್ನ ಪರಲೋಕದ ಜೀವನವ ಯಾವ ಪ್ರಕಾರ ಸುಖ-ಸಮೃದ್ಧ ಹಾಗೂ ಶಾಂತಿಪ್ರದವಾಗಿ ಮಾಡಲಿಕ್ಕೆ  ಮತ್ತೆ ಮರಣಾನಂತರ ಆ ಜೀವಿಯ ಉದ್ಧಾರಕ್ಕಾಗಿ ಅವನ ಪುತ್ರಾದಿ ಕುಟುಂಬದೋರ ಕರ್ತವ್ಯ ಬಗ್ಗೆ ಹೇಳುವ ವಿಚಾರ ಗರುಡ ಪುರಾಣಲ್ಲಿ ಇದ್ದು.
ಭಕ್ತನಾದ ಗರುಡನಿಗೆ ಶ್ರೀಮನ್ನಾರಯಣ ಪ್ರೇಮಪುರಸ್ಸರವಾಗಿ ಹೇಳಿದ ಪುರಾಣ ಇದು. ಹಾಂಗಾಗಿ ಇದಕ್ಕೆ ಪ್ರಮಾಣ ಗ್ರಂಥ ಎಂದು ಹೆಸರು. ಸಕಲ ವೇದ ಶಾಸ್ತ್ರ ಪುರಾಣ ಇತಿಹಾಸಗಳ ಸಾರವಾದ ಗರುಡ ಪುರಾಣಲ್ಲಿ, ಪೂರ್ವಖಂಡ ಮತ್ತೆ ಉತ್ತರ ಖಂಡ ಹೇಳಿ ಎರಡು ಭಾಗ. ಪೂರ್ವ ಖಂಡಲ್ಲಿ ಒಟ್ಟು 229 ಅಧ್ಯಾಯದಲ್ಲಿ  (8800 ಶ್ಲೋಕಗಳು ಇವೆ ) – ಅಗಸ್ತ್ಯ ಸಂಹಿತೆ, ಬೃಹಸ್ಪತಿ ಸಂಹಿತೆ ಮತ್ತೆ ಧನ್ವಂತರಿ ಸಂಹಿತೆಗೊ. ಅವುಗಳಲ್ಲಿ ದೇವಪೂಜಾವಿಧಿಗೊ, ದಾನ, ವ್ರತ, ನೀತಿ, ವ್ಯಾಕರಣ, ಮಂತ್ರ, ರಕ್ಷೆಣೆಗೊ ಔಷಧಿಗ ಸಾಮುದ್ರಿಕ ಶಾಸ್ತ್ರ, ನವರತ್ನ .. ಇತ್ಯಾದಿ ವಿಷಯಗಳಿವೆ . ಮತ್ತೆ ಉತ್ತರ ಖಂಡಲ್ಲಿ 35 ಅಧ್ಯಾಯಂಗೊ (1280 ಶ್ಲೋಕಇವೆ ) ಜೀವಿಯ ಮರಣಾನಂತರದ ಗತಿಯ ನಿರೂಪಣೆ, ಪಾಪ ಪುಣ್ಯಂಗಳ ಫಲಗಳ ವಿವರಣೆ, ಮತ್ತೆ ಮನುಷ್ಯಗೆ ಪ್ರೇತತ್ವ ತಪ್ಪುಸುವ ಅಪರ ಕರ್ಮಗಳ ಸಂಕ್ಷೇಪ ವಿಷಯವು  ಅಡಕವಾಗಿದೇ ಗರುಡ ಪುರಾಣದ ಈ ಭಾಗಕ್ಕೆ ‘ಪ್ರೇತಕಲ್ಪ’ ಹೇಳಿ ಹೆಸರಿದ್ದು. ಇಡೀ ಗರುಡ ಪುರಾಣ ಭಗವಾನ್ ವೇದವ್ಯಾಸರಿಂದ ರಚಿತವಾದ್ದು. ಇದಕ್ಕೆ (ಈ ಗರುಡ ಪುರಾಣ ಉತ್ತರ ಖಂಡಕ್ಕೆ) ‘ಪುರಾಣ ಸಾರೋದ್ಧಾರ’ ಅಥವಾ ‘ಸಾರೋದ್ಧಾರ’ ಹೇಳಿಯೂ ಹೆಸರಿದ್ದು. ಧರ್ಮದ ಸಕಲ ತತ್ತ್ವಗಳೂ ಈ ಪುರಾಣಲ್ಲಿ ಕ್ರೋಢೀಕೃತವಾಗಿದ್ದು. ಗರುಡಲ್ಲಿ ಪ್ರತ್ಯೇಕವಾಗಿ ಇಂತದ್ದು ಹೇಳಿ ಹೊಸ ವಿಷಯವನ್ನು ಇಲ್ಲೆ. ವೇದ ಅರ್ಥಂಗ ಅಷ್ಟಾದಶ ಪುರಾಣಲ್ಲಿ ಬೇರೆ ಬೇರೆ ಆಯಾಮಲ್ಲಿ ವಿವರಿಸಿದ್ದದು. ಹಾಗೇ ಗರುಡ ಪುರಾಣದಲ್ಲಿ ಇರುವ ವಿಷಯ ಭಾಗವತ ಹಾಗೂ ಇತರ ಪುರಾಣಗಳಲ್ಲಿ ಮತ್ತು ಭಗವದ್ಗೀತೆಲಿ ಹೇಳಿದ ಆಶಯಗಳೇ.  ಇಲ್ಲಿ ಬಂದಂತಹ ವಿಚಾರ ಭಗವಂತ° ಇತರ ಭಾಗಲ್ಲಿ ಹೇಳಿದ ವಿಚಾರಗಳೇ. ಇತರ ಪುರಾಣಗಳಲ್ಲಿ ಇದೆ ಸಾರವ ಇಲ್ಲಿ ಹೇಳಿದರಿಂದ ಇದಕ್ಕೆ ಪುರಾಣ ಸಾರೋದ್ಧಾರ ಎಂದು ಹೇಳಿ ಹೆಸರು. ಹಾಗಾಗಿ ಇದಕ್ಕೆ ವಿಷ್ಣುಭಕ್ತರಾಗಲಿ, ಶಿವಭಕ್ತರಾಗಲಿ, ಶಕ್ತಿ ಆರಾಧಕರಾಗಿರಲಿ ಅಥವಾ ಇನ್ಯಾವುದೇ ಪೂಜಕರಾಗಿರಲಿ, ಎಲ್ಲೋರಿಗೂ ಇದು ಪೂಜ್ಯ ಮತ್ತೆ ಉಪಯುಕ್ತ. ಇಲ್ಲಿ ನಿರೂಪಿತವಾಗಿ ದೇವರು ಸಾಕ್ಷಾತ್ ಆ ಶ್ರೀಮನ್ನಾರಯಣನಾದ ಭಗವಂತನೆ. ದೇವರ ನಂಬದವರೂ, ನೀತಿಯುತ ಜೀವನವ ಗೌರವಿಸುವಲ್ಲಿ ಇದು ಉಪಯುಕ್ತ ಗ್ರಂಥ ಹೇಳಿ ವಿಮರ್ಶಕರು ಹೇಳಿದ್ದರೆ 
ಜೀವಾತ್ಮವು (ಮನುಷ್ಯ°) ಸ್ಥೂಲ ಶರೀರವ ಬಿಟ್ಟಮತ್ತೆ (ಮರಣಾನಂತರ) ಸೂಕ್ಷ್ಮ ದೇಹವ ಹೊಂದಿ (ಪ್ರೇತತ್ವ) ಹತ್ತು ದಿನ ಮರಣ ಹೊಂದಿದ ಮನೆ ಹತ್ರೆವೇ ಇದ್ದು ಬಂಧುಮಿತ್ರರು ಮಾಡುವ ಎಲ್ಲ ಕಾರ್ಯಗಳನ್ನೂ ನೋಡಿಕೊಂಡು ಕೇಳಿಕೊಂಡು ಇರುತ್ತವೆ  ಆ ಸಮಯಲ್ಲಿ ಗರುಡ ಪುರಾಣ ಪಾರಾಯಣ ಮಾಡುವದರಿಂದ ಮೃತ ವ್ಯಕ್ತಿಗೂ ಪುಣ್ಯ ಮತ್ತು ಮನೆಯವಕ್ಕೂ ಪುಣ್ಯ ಲಭಿಸುತ್ತದೆ 

ವಿಚಾರಪೂರ್ಣವಾಗಿಯೂ, ವೈಜ್ಞಾನಿಕವಾಗಿಯೂ, ಕಾವ್ಯದೃಷ್ಟಿಂದಲೂ, ಮಾನವ ಶಾಸ್ತ್ರ, ಸಮಾಜ ಶಾಸ್ತ್ರ, ಇತಿಹಾಸ, ಮನಃಶಾಸ್ತ್ರ ದೃಷ್ಟಿಂದಲೂ ಗರುಡಪುರಾಣ ಅಮೂಲ್ಯವಾಗಿದ್ದು ಹೇಳಿ ವಿಮರ್ಶಕರ ಅಭಿಪ್ರಾಯ.
ಸಾವಿನ ಆಚೆಗಿನ  ಜೀವನದ ಬಗ್ಗೆ ಗರುಡಪುರಾಣ ವಿವರವ ನೀಡುತ್ತೆ  . ಗರುಡ ಪುರಾಣಲ್ಲಿ ದೇಹತ್ಯಾಗ ಮಾಡಿದ ‘ಆತ್ಮ’ದ ಸಂಚಾರವ ತನ್ನ ಗುರಿ ಮುಟ್ಟುತ್ತವರೇಗೆ ಇಂತಹ  ವಿಚಾರಗಳನ್ನು ವಿವರಿಸಲ್ಪಟ್ಟಿದು. ಅದಕ್ಕೆ ಅಮ್ಮ ಅಪ್ಪ ಗುರು ಹಿರಿಯರಲ್ಲಿ ಭಕ್ತಿ, ಜೀವನದ ವಿವಿಧ ಹಂತಂಗಳಲ್ಲಿ ಅನುಸರಿಸುವ  ನೀತಿ ಗರುಡಪುರಾಣಲ್ಲಿ ಉಲ್ಲೇಖವಾಗಿದರಿಂದ ಇದು ಎಲ್ಲ ಸಮಯಲ್ಲೂ ಎಲ್ಲ ಮನೆಗಳಲ್ಲಿಯೂ ಓದಬೇಕಾಗದ ಗ್ರಂಥ ಇದು ವಿಮರ್ಶಕರ ನುಡಿ. ಮಾನವನ ಆಚಾರ ವಿಚಾರಗಳಿಗೆ  ಸತ್ಕರ್ಮ ದುಷ್ಕರ್ಮಗಳ ನಿರೂಪಣೆ ಅವುಗಳ ಫಲಗಳಾದ ಪುಣ್ಯಪಾಪಗಳ ಗತಿ, ಮಾತಾಪಿತೃಗಳಿಗೆ ಮಾಡಬೇಕದ ಕಾರ್ಯಗಳು , ಸ್ಥೂಲ, ಸೂಕ್ಷ್ಮ ಇತ್ಯಾದಿ ದೇಹಗಳ ವಿವರಣೆ, ಪಾರಮಾರ್ಥಿಕ ತತ್ತ್ವಗಳ ಸರಳ ಪರಿಚಯ, ಸಾಕಾರ ನಿರಾಕಾರ ಬ್ರಹ್ಮನ ಅನುಸಂಧಾನ .. ಇವೆಲ್ಲ ಗರುಡಪುರಾಣಲ್ಲಿ ವಿವರಿಸಲ್ಪಟ್ಟ ಮುಖ್ಯ ಸಂಗತಿಗೊ.
‘ಗರುಡ ಪುರಾಣ -ಸಾರೋದ್ಧಾರ’ದ ಶ್ರವಣ ಮತ್ತೆ ಪಠನೆಂದ ಸಹಜವಾಗಿಯೇ ಪುಣ್ಯಲಾಭ, ಅಂತಃಕರಣದ ಪರಿಶುದ್ಧಿ., ಮತ್ತೆ , ಭಗವಂತನಲ್ಲಿ ಆಸಕ್ತಿ ಹಾಂಗೂ ಲೌಕಿಕ ವಸ್ತು ಭೋಗ ವಿಷಯಗಳಲ್ಲಿ ವಿರಕ್ತಿ ಆಗಿ ಹೋದಾಗಲೆ ಸಾಧ್ಯ ಆಗುತ್ತೆ  ಇದರಿಂದ ಮನಸ್ಸು ಶುಭ್ರವಾಗಿ ತನ್ನ ಉದ್ಧಾರಕ್ಕಾಗಿ ಎನು ಮಾಡಬೇಕು ಹೇಳಬೇಕು ಇದರ ಬಗ್ಗೆ ಚಿಂತನೆ ಮಾಡವ ಒಳ್ಳೆ ಅವಕಾಶ ಇದ್ದು. ವ್ಯಕ್ತಿಗೆ ಇಹ-ಪರ ಲೋಕದ ಹಾನಿ ಲಾಭದ ಯಥಾರ್ಥ ಜ್ಞಾನವು / ಪರಿಚಯವು ಸಿಕ್ಕಿ ತನ್ನ ಕರ್ತವ್ಯದ ಬಗ್ಗೆ ಜಾಗೃತಿ ಮೂಡಿಸತ್ತದೆ  ಒಳ್ಳೆಯದೇ ಆಯಿತು . ಯಾವುದೇ ವೇದ, ಶಾಸ್ತ್ರ, ಪುರಾಣವಾಗಲಿ ಅದರ ಬರೇ ಓದುವ ಹವ್ಯಾಸದಿಂದ ಓದಿರೆ ಬರೇ ಸಾಹಿತ್ಯ ಜ್ಞಾನ ಮಾತ್ರ ಸಿಕ್ಕುಗಷ್ಟೆ. ಅದರಲ್ಲಿ ಭಕ್ತಿ, ನಂಬಿಕೆ ವಿಶ್ವಾಸ ಮಡಿಕ್ಕೊಂಡು ಓದಿ ತಿಳಿವ ಮನಸ್ಸಿಂದ ಓದಿರೆ ತನ್ನ ಯಶಸ್ಸಿಗೆ ಉತ್ತಮ ಒಂದು ಮಾರ್ಗ ಸಾಧನವು ಆಗುತ್ತೆ 
ಗರುಡ° ಹೇಳಿರೆ ಒಂದು ಮಹಾ ಅದ್ಭುತ ಶಕ್ತಿ. ಅವ ಸ್ವರ್ಗದ ಭೂಲೋಕಕ್ಕೆ ಅಮೃತವ ತಂದ ಮಹಾ ವೈದ್ಯ. ಈ ಅಮೃತ ದೇಹ ಮನಸ್ಸುಗಳ ಕಾಯಿಲೆಹೋಗುವ  ಮದ್ದು ಅಲ್ಲ, ಅದು ಅಮರತ್ವವ ಪಡವ ಜ್ಞಾನಾಮೃತ. ಚೂಪಾದ ಕೊಕ್ಕು ಇರುವ ಗರುಡ° ಏಕಾಗ್ರದೃಷ್ಟಿಯ, ನಾಸಿಕಾಗ್ರಲ್ಲಿ ಏಕಾಗ್ರದೃಷ್ಟಿಯ ಮಡಿಕ್ಕೊಂಡು ಧ್ಯಾನ ಮಾಡುವ ಯೋಗಿಯ ಸಂಕೇತ. ಅತೀ ಎತ್ತರಕ್ಕೆ ಹಾರುವ ಪಕ್ಷಿಯಾದ ಅವ  ಮಾನವರಲ್ಲೇ ಅತೀ ಉನ್ನತ ಮಟ್ಟಲ್ಲಿ ಯೋಚಿಸುವ ಜ್ಞಾನಿಯ ಸಂಕೇತ, ಭಗವಂತನ ದರ್ಶನ, ಸ್ಪರ್ಶನ, ಸಂಭಾಷಣ, ಸಹಚರಣ ಮಾಡಿಂಡು ಅವನನ್ನೇ ಯಾವತ್ತೂ ಹೊತ್ತ ಒಯ್ಯುವ ಗರುಡ° ಭಗವಂತನನ್ನೇ ಪವಿತ್ರ ಮನಸ್ಸಿನ ಮತ್ತೆ ಬ್ರಹ್ಮ ಕರ್ಮ ಸಂಯೋಜನೆ ಮಾಡುವ ಮಹಾಭಕ್ತನ ಸಂಕೇತ, ಚಂದ್ರಲೋಕಂದ ಅಮೃತವ ತಂದ ಗರುಡ° ಪ್ರಶಾಂತ ಪ್ರಕಾಶಸ್ವರೂಪ°, ಹುಟ್ಟು ಸಾವುಗಳ ದೂರ ಮಾಡುವ ಜ್ಞಾನದ ಸಂಕೇತ, ಭವ ಬಂಧನದ ದಾಸ್ಯಂದ ಬಿಡುಗಡೆಗೊಳುಸುವ ಸಂಕೇತ, ಸರ್ಪಂಗಳ ದಾಸ್ಯಂದ ತನ್ನತಾಯಿಯ ಬಿಡುಗಡೆ ಗೊಳುಸಿದ ಗರುಡ ಸರ್ವವಿಷಾಪಹಾರಿ ಜ್ಞಾನಾಮೃತದ ಸಂಕೇತ  ಎಂದು ತಿಳುದೋರು ಹೇಳಿದ್ದದು.

ಗರುಡಪುರಾಣಲ್ಲಿ ಮರಣಾನಂತರ ಜೀವಿಯು ಯಾವಯಾವ ಅವಸ್ಥೆಗಳ ಹೊಂದುತ್ತದೆ ಎಂದು  ಹೇಳುವ ವಿಷಯಗಳ ಕೂಲಂಕುಷವಾಗಿ ವಿಚಾರ ಮಾಡಿದ್ದು. ಧರ್ಮ, ನಿಷ್ಠೆ, ಸತ್ಯದ ಬಲಗಳಿಂದ ಮರಣವನ್ನೂ ಜಯಿಸಲು ಹೇಳಿದ್ದು ., ಆತ್ಮವು ಸೃಷ್ಟಿಕರ್ತನಲ್ಲಿ ಐಕ್ಯವಾಗಿ ಜನ್ಮರಹಿತ ಮೋಕ್ಷವ ಪಡೆದಾಗಲೇ ಮರಣಾನಂತರ ಅನೇಕ ಕರ್ಮಾಂಗಗಳ ಕಟ್ಟುನಿಟ್ಟಾಗಿ ಆಚರಿಸುವುದು ಅಗತ್ಯ. ಮೋಕ್ಷ, ಸಾಧನೆ ಇಲ್ಲದೆ  ಮುಕ್ತಿ ಸಿಕ್ಕುತ್ತ ಪುರಾಣ ಹೇಳಿದ ಹಾಗೆ . “ಪಾಪವೇ ನರಕ, ಪುಣ್ಯವೇ ಸ್ವರ್ಗ”. ಇದು ಗರುಡಪುರಾಣದ ಅತೀ ಮುಖ್ಯ ಸಂದೇಶ.
ದೇಹದ ನಶ್ವರತೆಯನ್ನೂ ಆತ್ಮದ ಅಮರತ್ವವನ್ನೂ ಬೋಧುಸುವ ಈ ಗ್ರಂಥ, ವಿಯೋಗ ದುಃಖವನ್ನೂ, ಮರಣಭಯವನ್ನೂ ದೂರಮಾಡಲು  ಸಹಾಯಕ ಹಾಗಾಗಿ ಇದನ್ನು ಸಾವಿನ ಮನೆಲಿ ಓದಬೇಕು ಎಂದು ಹೇಳಿ ಮಾಡಿಕೊಂಡ ಅಂದರೆ ಯಥಾರ್ಥವಾಗಿ ವಿಯೋಗ ಸಮಯಲ್ಲಿ ಮಾಂತ್ರ ಅಲ್ಲ, ಇದು ಎಲ್ಲ ಸಮಯಲ್ಲಿಯೂ ಓದೇಕದ ಗ್ರಂಥ  ತಿಳುದೋರ ಅಭಿಪ್ರಾಯ. ಮನುಷ್ಯ ಬಾಲ್ಯ ಯೌವ್ವನ ಮತ್ತೆ ವೃದ್ಧಾಪ್ಯಲ್ಲಿ ಮಾಡುವ ಕೆಲಸಗಳಲ್ಲಿ ಯಾವುದು ಸರಿ, ಯಾವುದು ತಪ್ಪು ಹೇಳುವುದೇ ಆಗಿದೆ ಗರುಡ ಪುರಾಣದಲ್ಲಿ ಅನುಮಾನ ಇಲ್ಲದ್ದೆ ನಿಖರವಾಗಿ ಉಲ್ಲೇಖಿಸಲ್ಪಟ್ಟಿದು. ಈ ಬೋಧನೆಗಳ ಮುಪ್ಪಿಲ್ಲಿ ಕೇಳಿ ಪ್ರಯೋಜನ ಆದರೂ ಎಂತಹದು ?!. ಅವುಗಳ ಅನುಷ್ಠಾನಕ್ಕೆ ತಪ್ರಲು ಬೇಕಾದ ಜೀವನದ ಆಯಸ್ಸಿನ ಬಹುತೇಕ ಪ್ರಾಯವೇ ಕಳದು ಹೋಗಿಬಿಟ್ಟಿರುತ್ತೆ  ಹಾಗಾಗಿ ಗರುಡಪುರಾಣದ ನೀತಿಯ ತಿಳಿಯೇಕ್ಕಾದ್ದು ಸಣ್ಣಪ್ರಾಯಲ್ಲಿಯೇ ಹೊರತು ಅಪ್ಪಗ ಅಲ್ಲ. ಮಕ್ಕಳ ಮನಸ್ಸಿಲ್ಲಿ ಗರುಡ ಪುರಾಣದ ಬೋಧನಾ ವಿಧಾನ ಜೀವನ ನೀತಿಯಲ್ಲಿ ಬೇರೂರಬೇಕು ಎಂದು ಪ್ರಾಜ್ಞರ ಅಭಿಪ್ರಾಯ. 
ಜೀವನದ ಭವಿಷ್ಯವ ಸನ್ಮಾರ್ಗಲ್ಲಿ ರೂಪಿಸಲು  ಸಹಾಯಕ, ಸಾಧನಾಪಥಲ್ಲಿ ಉಪಯುಕ್ತ , ಮಾನವೀಯ ಮೌಲ್ಯಗಳ ಎತ್ತಿ ಹಿಡಿವ, ಮರಣಾನಂತರ ಜೀವಿಯ ಗತಿಯ ವಿವರುಸುವ ಈ ಗರುಡ ಪುರಾಣಲ್ಲಿ ಭಗವಂತ ಗರುಡನ ಮೂಲಕ ನಮಗೆ ಹೇಳಿಸಿದ್ದು ಹಾಗೂ  ಹೇಳಿದ್ದ° ಹೇಳಿದ್ದರಿಂದ ನಾವಿಲ್ಲಿ ಓದುವೋ°. ಗರುಡ ಪುರಾಣವ ಮೃತ ಸಂದರ್ಭಲ್ಲಿ ಓದವರ /ಓದಿಸುವವರ ಬದಲು ಎಲ್ಲೋರು ಸಣ್ಣಪ್ರಾಯದಲೇ ಶ್ರವಣ / ಪಾರಾಯಣ ಮಾಡಿಗೊಂಡು ಹೋಗ್ಗಿ ಕೊಂಡಿದ್ದರೆ ಸದಾಚಾರ ಪ್ರವೃತ್ತಿ ಮನುಷ್ಯರಲ್ಲಿ ಇನ್ನೂ ಹೆಚ್ಚು ಉಳಿತಾಯಆಗುತ್ತಿತ್ತೇನೋ  ಏನೋ! ಹೇಳದು ವೈಯಕ್ತಿಕ ಅಭಿಪ್ರಾಯ. ಬಹುಶಃ ಕೆಲವು ಅಧ್ಯಾಯಗಳ ಓದಿದ ಮೇಲೆ ನಿಂಮಗೂ ಹಾಗೇ ಅನುಸಲೂ ಸಾಕು.

ಇಲ್ಲಿ ಸಂಪೂರ್ಣ ಗರುಡ ಪುರಾಣವ ಬರೆಯುತ್ತಲೇ . ಸಾಮಾನ್ಯವಾಗಿ ನಮ್ಮಲ್ಲಿ ಪ್ರಚಲಿತ ಪಾರಾಯಣದ ಭಾಗ, ಹೇಳಿದರೆ  , ಗರುಡ ಪುರಾಣದ ಉತ್ತರ ಖಂಡ = ಪ್ರೇತಕಾಂಡ (ಉತ್ತರಖಂಡ = ಸಕಲ ಶಾಸ್ತ್ರಂಗಳ ಸಾರ = ಪುರಾಣ ಸಾರೋದ್ಧಾರ)ವ ತೆಗೇದುಕೊಂಡು.  [ಇಲ್ಲಿ ಬರವ ತೆಗೆದುಕೊಂಡುರೆ ಮೂಲ ಗರುಡ ಪುರಾಣ ಅಲ್ಲ. ಇದು ಸಾಮಾನ್ಯ ನಮ್ಮಲ್ಲಿ ಪ್ರಚಲಿತಲಿಪ್ಪ ಪಾರಾಯಣಕ್ಕೆ ಬಳಸುವ ಮೂಲ ಗರುಡಪುರಾಣದ ಭಟ್ಟಿ ಇಳಿಸಿದ ರೂಪ.  ಮೂಲಗರುಡಪುರಾಣದ ಆಶಯವ ವಿದ್ವಾಂಸರು ಸಂಸ್ಕರಿಸಿ ಸುಲಭ ಪಾರಾಯಣಕ್ಕೆ ಅನುಕೂಲ ಅಗಳೆಂದೇ ಸಂಸ್ಕರಿಸಿ ಬರದ ಗರುಡಪುರಾಣ ಇದಾಗಿದ್ದು. ಮೂಲ ಗರುಡಪುರಾಣ ಬೇಕಾರೆ ಇಲ್ಲಿದ್ದು –      ಇದರಲ್ಲಿ ಶುರುವಿಂದ ಮುಗಿವರೆಗೆ ವಿಸ್ತೃತವಾಗಿ ಇದ್ದು.] 

ಸಾಹಿತ್ಯ ಶಿರೋಮಣಿ ಶ್ರೀಯುತ  ವೆಂಕಪ್ಪ ಭಟ್ಟರು ಬರದ “ಪುನರ್ಜನ್ಮ – ಮರಣೋತ್ತರ ಜೀವನ” ಪುಸ್ತಕಲ್ಲಿ ಮರಣೋತ್ತರ ಜೀವನದ ಬಗ್ಗೆ ಬೇರೆ ಬೇರೆ ಪುರಾಣಗಳಲ್ಲಿ ಪ್ರತಿಪಾದಿತ ವಿಷಯಂಗಳ ಉದ್ಧರಿಸಿ ವ್ಯಾಖ್ಯಾನಿಸಿ ಅತಿ ಉಪಯುಕ್ತ ಮಾಹಿತಿಯ ನೀಡಿದ್ದವು. ನಾವೆಲ್ಲರೂ ನಿಶ್ಚಯವಾಗಿ ಆ ಪುಸ್ತಕವ ಓದಿ ವಿಷಯವ ತಿಳುಕ್ಕೊಳ್ಳ ಬೇಕಾದ ವಿಷಯ ಇಲ್ಲಿ  ಹೇಳ ಬಯಸುತ್ತೆನೇ 
ಗರುಡಪುರಾಣ ಉತ್ತರಖಂಡಲ್ಲಿ ಹೇಳಿದ  ಆ ಸಾರವ ಹೀರುವ ಪ್ರಯತ್ನ ಇಲ್ಲಿ ಮಾಡುವೋ°.  ದೀರ್ಘ ವ್ಯಾಖ್ಯಾನಕ್ಕೆ ಹೋಗದ್ದೆ ಶ್ಲೋಕವನ್ನೂ ಶ್ಲೋಕಾರ್ಥವನ್ನು ಅರ್ಥೈಸಿಗೊಂಡು ಸರಳಾರ್ಥಲ್ಲಿ ಬರವಲ್ಲಿ ಈ  ಕಾರ್ಯಕ್ಕೆ ಎಲ್ಲೋರು ಪ್ರೋತ್ಸಾಹಿಸುತ್ತಿರ ಹಾಗೂ ಎಲ್ಲೋರಿಗೂ ಉಪಯೋಗವಾಗಲಿ, ಎಲ್ಲೋರಿಂಗೂ ಒಳ್ಳೆದಾಗಲಿ ಸದಾಶಯಂದ ನಮ್ಮ ಆರಧ್ಯ ಗುರುಗಳಾದ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳ ಸ್ಮರಿಸಿಗೊಂಡು, ನನ್ನ ಅಮ್ಮ ಅಪ್ಪ° ಕುಲಗುರು ಹಿರಿಯರ ನಂಬಿಗೊಂಡು, ಎಲ್ಲರ ಅಶೀರ್ವಾದವ ಬೇಡಿಗೊಂಡು, ಅವಿಘ್ನಮಸ್ತು ಹೇಳಿ ವಿಘ್ನನಿವಾರಕನಾದ  ಗಣಪತಿಯ ಮನಸಾ ಧ್ಯಾನಿಸಿ, ವಿದ್ಯಾವಾರಿಧಿ ಶಾರದೆಗೆ ನಮಿಸಿ, ಸರ್ವಶಕ್ತ ಭಗವಂತನ ಸೇವೆ ಎಂದು ಸಂಕಲ್ಪಿಸಿ, ‘ಶಾರದಮ್ಮ ಧಾರ್ಮಿಕ ಪ್ರಕಾಶನ’ದವರ ಮತ್ತು ‘ಶ್ರೀನಿಧಿ ಪಬ್ಲಿಕೇಶನ್’ನವರ ‘ಗರುಡ ಪುರಾಣ’, ವೆಂಕಪ್ಪ ಭಟ್ಟರ ‘ಪುನರ್ಜನ್ಮ’ ಪುಸ್ತಕಂಗಳ ಆಧಾರವಾಗಿ ಮಡಿಕ್ಕೊಂಡು ಬರವ ಈ ಗರುಡಪುರಾಣದ ಉತ್ತರಖಂಡ ಭಾಗವ ಕಂತು ಕಂತಾಗಿ ನಿಮ್ಮಗಳ  ಮುಂದೆ ಇಡುತ್ತೇನೆ

No comments:

ನರನಾಡಿಗಳು

*ನರನಾಡಿಗಳು ಎಂದರೇನು ?* *ಇವುಗಳ ಮಹತ್ವ ಏನು ? ದೇಹದಲ್ಲಿ ಇವುಗಳು ಪ್ರತ್ಯೇಕವಾಗಿ ಇರುತ್ತವೆ  *ನರ(nerves) -* *ಮೆದುಳು,ಮೆದುಳು* *ಬಳ್ಳಿ(ಬೆನ್ನು ಹುರಿ) ಮತ್ತು* *ಅ...