Followers

Thursday, 25 June 2020

ಗರುಡ ಪುರಾಣ ಅಧ್ಯಾಯ 8

ಗರುಡ ಪುರಾಣ ಅಧ್ಯಾಯ – 8



ಆತುರದಾನನಿರೂಪಣಮ್                                   


ಮರಣಕಾಲದಲ್ಲಿ ಮಾಡಬೇಕಾದ ದಾನಗಳ ನಿರೂಪಣೆ

 

ಗರುಡ ಉವಾಚ


ಆಮುಷ್ಮಿ ಕೀಂ ಕ್ರಿಯಾಂ ಸರ್ವಾಂ ವದ ಸುಕೃತಿನಾಂ ಮಮ ।

ಕರ್ತವ್ಯಾ ಸಾ ಯಥಾ ಪುತ್ರೈಸ್ತಥಾ ಚ ಕಥಯ ಪ್ರಭೋ ॥೦೧॥


ಗರುಡ  ಹೇಳಿದ – ಹೇ ಪ್ರಭೋ!, ಸತ್ಕಾರ್ಯಗಳ ಮಾಡಿದವರ ಪರಲೋಕ ಕ್ರಿಯೆಗಳು  ಎಲ್ಲವನ್ನೂ ನನಗೆ ಹೇಳು. ಅವರ ಮಕ್ಕಳಿಂದ ಆ ಕ್ರಿಯೆಗಳನ್ನು ಯಾವರೀತಿಯೆಲ್ಲ ಮಾಡಬೇಕು ಹೇಳುವುದೆಲ್ಲವನ್ನೂ  ಯಥಾವತ್ತಾಗಿ ಎನಗೆ ಹೇಳು.


ಶ್ರೀ ಭಗವಾನುವಾಚ


ಸಾಧು ಪೃಷ್ಟಂ ತ್ವಯಾ ತಾರ್ಕ್ಷ್ಯ ಮಾನುಷಾಣಾಂ ಹಿತಾಯ ವೈ ।

ಧಾರ್ಮಿಕಾರ್ಹಂ ಚ ಯತ್ಕೃತ್ಯಂ ತತ್ಸರ್ವಂ ಕಥಯಾಮಿ ತೇ ॥೦೨॥


ಭಗವಂತ  ಹೇಳಿದ – ಏ ಗರುಡನೇ!, ಮಾನವರ ಹಿತಕ್ಕಾಗಿ ನಿನ್ನಂದ ಒಳ್ಳೆದನ್ನೇ ಕೇಳಿದ್ದಿಯ  ಯಾವ ಕಾರ್ಯಗಳನ್ನು ಧರ್ಮಾತ್ಮನಾದವ ಮಾಡಲು ಯೋಗ್ಯವೋ ಅವುಗಳೆಲ್ಲವನ್ನೂ ನಿನಗೆ ಹೇಳುತ್ತೆನೆ 


ಸುಕೃತೀ ವಾರ್ದ್ಧಕೇ ದೃಷ್ಟ್ವಾ ಶರೀರಂ ವ್ಯಾಧಿ ಸಂಯುತಮ್ ।

ಪ್ರತಿಕೂಲನ್ದ್ರಹಾಂಶ್ಚೈವ ಪ್ರಾಣಘೋಷಸ್ಯ ಚಾಶ್ರುತಿಮ್ ॥೦೩॥


ಧರ್ಮಾತ್ಮನು ಮುಪ್ಪಿಲ್ಲಿ ರೋಗಪೀಡಿತವಾದ ತನ್ನ ಶರೀರವ ನೋಡಿ ಗ್ರಹಗಳ ಪ್ರತಿಕೂಲವಾಗಿದರ ಅರಿತು ಪ್ರಾಣವಾಯುವಿನ ನಾದ ಕೇಳಿದೆ 


ತದಾ ಸ್ವಮರಣಂ ಜ್ಞಾತ್ವಾ ನಿರ್ಭಯಃ ಸ್ಯಾದತಂದ್ರಿತಃ ।

ಅಜ್ಞಾತಜ್ಞಾತಪಾಪಾನಂ ಪ್ರಾಯಶ್ಚಿತ್ತಂ ಸಮಾಚರೇತ್ ॥೦೪॥


ಆವಾಗ, ತನ್ನ ಮರಣ ಸಮೀಪಿಸಿದ್ದರ ತಿಳಿದು ನಿರ್ಭಯನಾಗಿ, ಆಲಸ್ಯ ರಹಿತನಾಗಿ, ತಿಳಿದೋ ತಿಳಿಯದೆಯೋ ಮಾಡಿದ ಪಾಪಗಳ ಪ್ರಾಯಶ್ಚಿತ್ತವ ಮಾಡಿಕೊಳ್ಳಬೇಕು.


ಯದಾ ಸ್ಯಾದಾತುರಃ ಕಾಲಸ್ತದಾ ಸ್ನಾನಂ ಸಮಾರಭೇತ್ ।

ಪೂಜನಂ ಕಾರಯೇದ್ವಿಷ್ಣೋಃ ಶಾಲಗ್ರಾಮಸ್ವರೂಪಿಣಃ ॥೦೫॥


ಏವಾಗ ಅವನ ಅಂತ್ಯಕಾಲ ಸಮೀಪಿಸುತ್ತೋ ಅವಗ ಶಾಲಗ್ರಾಮ ಸ್ವರೂಪನಾದ ವಿಷ್ಣುವ ಪೂಜೆಯ ಮಾಡಿಸಬೇಕು.


ಅರ್ಚಯೇದ್ಗಂಧಪುಷ್ಪೈಶ್ಚ ಕುಂಕುಮೈಸ್ತುಲಸೀದಲೈಃ ।

ಧೂಪೈರ್ದೀಪೈಶ್ಚ ನೈವೇದ್ಯೈರ್ಬಹುಭಿರ್ಮೋದಕಾದಿಭಿಃ ॥೦೬॥


ಗಂಧಪುಷ್ಪಗಳಿಂದ, ಕುಂಕುಮ ತುಳಸೀದಳಗಳಿಂದ, ಧೂಪದೀಪಗಳಿಂದ, ವಿವಿಧ ಮೋದಕಾದಿ ನೈವೇದ್ಯಗಳಿಂದ ಪೂಜಿಸಬೇಕು.


ದತ್ವಾ ಚ ದಕ್ಷಿಣಾಂ ವಿಪ್ರಾನ್ನೈ ವೇದ್ಯಾದೇವ ಭೋಜಯೇತ್ ।

ಅಷ್ಟಾಕ್ಷರಂ ಜಪೇನ್ಮಂತ್ರಂ ದ್ವಾದಶಾಕ್ಷರಮೇವ ಚ ॥೦೭॥


ಬ್ರಾಹ್ಮಣರಿಗೆ ದಕ್ಷಿಣೆಯ ಕೊಟ್ಟು, ನೈವೇದ್ಯದಲ್ಲೇ ಭೋಜನಮಾಡಿಸಿ, ಅಷ್ಟಾಕ್ಷರೀ ಮಂತ್ರ (ಓಂ ನಮೋ ನಾರಾಯಣಾಯ)ವ ಮತ್ತು ದ್ವಾದಶಾಕ್ಷರೀ ಮಂತ್ರ (ಓಂ ನಮೋ ಭಗವತೇ ವಾಸುದೇವಾಯ)ವನ್ನೂ ಜಪಿಸಬೇಕು.


ಸಂಸ್ಮರೇಚ್ಛೃಣುಯಾಚ್ಚೈವ ವಿಷ್ಣೋರ್ನಾಮ ಶಿವಸ್ಯ ಚ ।

ಹರೇರ್ನಾಮ ಹರೇತ್ಪಾಪಂ ನೃಣಾಂ ಶ್ರವಣಗೋಚರಮ್ ॥೦೮॥


ವಿಷ್ಣುವಿನ ಮತ್ತು ಶಿವನ ನಾಮಗಳನ್ನು  ಸ್ಮರಿಸಬೇಕು ಮತ್ತು ಕೇಳಬೇಕು ಹರಿಯ ನಾಮವು ಮನುಷ್ಯರ ಕಿವಿಗೆ  ಬಿದ್ದರೆ ಸಾಕು ಅವರ ಪಾಪಗಳೆಲ್ಲವೂ ನಾಶವಾಗುತ್ತವೆ 

.

ರೋಗಿಣೋಂsತಿಕಮಾಸಾದ್ಯ ಶೋಚನೀಯಂ ನ ಬಾಂಧವೈಃ ।

ಸ್ಮರಣೀಯಂ ಪವಿತ್ರಂ ಮೇ ನಾಮ ಧ್ಯೇಯಂ ಮುಹುರ್ಮುಹುಃ ॥೦೯॥


ರೋಗಿಯ ಹತ್ತಿರ  ಬಂದು ಅವನ ಬಂಧುಗಳು  ದುಃಖಿಸಲಾಗಿ . ಎನ್ನ ಪವಿತ್ರವಾದ ನಾಮವ ಮತ್ತೆ ಮತ್ತೆ ಸ್ಮರಿಸಬೇಕು


ಮತ್ಸ್ಯಃ ಕೂರ್ಮೋ ವರಾಹಶ್ಚ ನರಸಿಂಹಶ್ಚ ವಾಮನಃ ।

ರಾಮೋ ರಾಮಶ್ಚ ಕೃಷ್ಣಶ್ಚ ಬುದ್ಧಃ ಕಲ್ಕೀ ತಥೈವ ಚ ॥೧೦॥


ಮರ್ತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ರಾಮ, ಕೃಷ್ಣ, ಬುದ್ಧ, ಹಾಗೂ ಕಲ್ಕಿ


ಏತಾನಿ ದಶ ನಾಮಾನಿ ಸ್ಮರ್ತವ್ಯಾನಿ ಸದಾ ಬುಧೈಃ ।

ಸಮೀಪೇ ರೋಗಿಣೋ ಬ್ರೂಯುರ್ಬಾಂಧವಾಸ್ತೇ ಪ್ರಕೀರ್ತಿತಾಃ ॥೧೧॥


ಈ ಹತ್ತು ನಾಮಗಳ ಬುದ್ಧಿವಂತರು ಯಾವತ್ತೂ ಸ್ಮರಿಸುತ್ತಿರಬೇಕು. ರೋಗಿಯ ಸಮೀಪಲ್ಲಿ ಈ ನಾಮಗಳನ್ನು  ಹೇಳುವ ಬಾಂಧವರು ಎಂದು ಹೇಳಲ್ಪಡುತ್ತಿರಬೇಕು 


ಕೃಷ್ಣೇತಿ ಮಂಗಲಂ ನಾಮ ಯಸ್ಯ ವಾಚಿ ಪ್ರವರ್ತತೇ ।

ತಸ್ಯ ಭಸ್ಮೀಭವಂತ್ಯಾಶು ಮಹಾಪಾತಕಕೋಟಯಃ ॥೧೨॥


ಕೃಷ್ಣ  ಹೇಳುವ ಮಂಗಳ ನಾಮವು ಯಾರ ಬಾಯಿಂದ ಹೊರಡುತ್ತೋ ಅವನ ಕೋಟಿ ಮಹಾ ಪಾತಕಗಳು ಸುಟ್ಟು ಭಸ್ಮವಾಗುವವು 


ಮ್ರಿಯಮಾಣೋ ಹರೇರ್ನಾಮ ಗೃಣನ್ಪುತ್ರೋಪಚಾರಿತಮ್ ।

ಅಜಾಮಿಲೋsಪ್ಯಗಾದ್ಧಾಮ ಕಿಂ ಪುನಃ ಶ್ರದ್ಧಯಾ ಗೃಣನ್ ॥೧೩॥


ಸಾಯುತಲಿದ್ದ ಅಜಾಮಿಳ  ತನ್ನ ಮಗನ ಹೆಸರಾದ ಹರಿಯ ನಾಮವ ಉಚ್ಛರಿಸಿ ಸ್ವರ್ಗವ ಸೇರಿದ. ಮತ್ತೆ ಶ್ರದ್ಧೆಯಿಂದ ಉಚ್ಛರಿಸಿರೆ ಅದರ ಫಲ (ಶಕ್ತಿ) ಎಷ್ಟ!


ಹರಿರ್ಹರತಿ ಪಾಪಾನಿ ದುಷ್ಟಚಿತ್ತೈರಪಿಸ್ಮೃತಃ ।

ಅನಿಚ್ಛಯಾಪಿ ಸಂಸ್ಪೃಷ್ಟೋ ದಹತ್ಯೇವ ಹಿ ಪಾವಕಃ ॥೧೪॥


ದುಷ್ಟಚಿತ್ತನೂ ಹರಿನಾಮವ ಸ್ಮರಿಸಿರೆ ಹರಿ ಅವನ ಪಾಪಗಳೆಲ್ಲವ ನಾಶ ಮಾಡುತ್ತದೆ . ಅಗ್ನಿಯ ಇಚ್ಛೆಯಿಲ್ಲದ್ದೆ ಮುಟ್ಟಿದರೂ  ಅದು ಸುಟ್ಟೇ ಸುಡುತ್ತದೆ 

.

ಹರೇರ್ನಾಮಶ್ಚ ಯಾ ಶಕ್ತಿಃ ಪಾಪನಿರ್ಹರಣೇ ದ್ವಿಜ ।

ತಾವತ್ಕರ್ಮ ಸಮರ್ಥೋ ನ ಪಾತಕಂ ಪಾತಕೀ ಜನಃ ॥೧೫॥


ಎಲೈ ಗರುಡನೇ!, ಹರಿಯ ನಾಮದಲ್ಲಿ ಪಾಪಗಳ ನಾಶಮಾಡುವ ಶಕ್ತಿ ಎಷ್ಟು ಇದ್ದೋ ಅಷ್ಟು ಪಾಪಗಳ ಮಾಡಲು ಪಾಪಿಗಳು  ಅಸಮರ್ಥರಾಗಿದ್ದವು.


ಕಿಂಕರೇಭ್ಯೋ ಯಮಃ ಪ್ರಾಹಾನಯಧ್ವಂ ನಾಸ್ತಿ ಕಂ ಜನಮ್ ।

ನೈವಾನಯತ ಭೋ ದೂತಾಃ ಹರಿನಾಮಸ್ಮರಂ ನರಮ್ ॥೧೬॥


ಯಮಧರ್ಮರಾಜ ತನ್ನ ದೂತರಿಗೆ ಹೇಳಿದ್ದ – “ಎಲೈ ದೂತರೇ, ನಾಸ್ತಿಕ ಜನರ ಇಲ್ಲಿಗೆ ಕರದುಕ್ಕೊಂಡು ಬನ್ನಿ ಮತ್ತೆ ಹರಿನಾಮಸ್ಮರಣೆ ಮಾಡದ  ಜನರ ಇಲ್ಲಿಗೆ ಕರೆದುಕೋಂಡು ಬನ್ನಿ .


ಅಚ್ಯುತಂ ಕೇಶವಂ ರಾಮನಾರಾಯಣಂ ಕೃಷ್ಣದಾಮೋದರಂ ವಾಸುದೇವಂ ಹರಿಮ್ ।

ಶ್ರೀಧರಂ ಮಾಧವಂ ಗೋಪಿಕಾವಲ್ಲಭಂ ಜಾನಕೀನಾಯಕಂ ರಾಮಚಂದ್ರಂ ಭಜೇ ॥೧೭॥


ಅಚ್ಯುತ, ಕೇಶವ, ರಾಮ, ನಾರಾಯಣ, ಕೃಷ್ಣ, ದಾಮೋದರ, ವಾಸುದೇವ, ಹರಿ, ಶ್ರೀಧರ, ಮಾಧವ, ಗೋಪಿಕಾವಲ್ಲಭ, ಜಾನಕೀನಾಯಕ, ಶ್ರೀರಾಮಚಂದ್ರ ಹೀಂಗೆ ಭಜಿಸಬೇಕು 


ಕಮಲನಯನ ವಾಸುದೇವ ವಿಷ್ಣೋ ಧರಣೀಧರಾಚ್ಯುತ ಶಂಖಚಕ್ರಪಾಣೇ ।

ಭವ ಶರಣಮಿತೀರಯಂತಿ ಯೇ ವೈ ತ್ಯಜ ಭಟ ದೂರತರೇಣ ತಾನಪಾಪಾನ್ ॥೧೮॥


ಎಲೈ ಭಟರೇ, ಯಾವ ಮನುಷ್ಯರು “ಹೇ ಕಮಲನಯನ, ಹೇ ವಾಸುದೇವ, ಹೇ ವಿಷ್ಣೋ, ಹೇ ಧರಣೀಧರ, ಹೇ ಅಚ್ಯುತ, ಹೇ ಶಂಖಚಕ್ರಧಾರಿ, ಈ ಸಂಸಾರಲ್ಲಿ ಎನ್ನ ರಕ್ಷಕನೇ ಎಂದು ಸ್ತುತಿಸಿಗೊಂಡು ಇರುತ್ತರೋ  ಅಂತಹ ಪಾಪಹೀನರ ದೂರದಲೇ ಬಿಟ್ಟ ಬಿಡಿ 


ತಾನಾನಯಧ್ವಮಸತೋ ವಿಮುಖಾನ್ಮುಕುಂದಪಾದಾರವಿಂದ ಮಕರಂದರಸಾದಜಸ್ರಮ್ ।

ನಿಷ್ಕಿಂಚನೈಃ ಪರಮಹಂಸಕುಲೈ ರಸಜ್ಞೈರ್ಜುಷ್ಟಾದ್ಗೃಹೇ ನಿರಯವರ್ತ್ಮನಿ ಬದ್ಧತೃಷ್ಣಾನ್ ॥೧೯॥


ಪಾಪಕರ್ಮಗಳಿಂದ ವಿಮುಖರಾಗಿ ಸರ್ವವನ್ನೂ ಪರಿತ್ಯಜಿಸಿ, ಬ್ರಹ್ಮರಸಾನುಭವಿಗಳಾದ ಪರಮಹಂಸರ ಕುಲದವರಿಂದ ಸೇವಿಸಲ್ಪಟ್ಟ ಮುಕುಂದನ ಪಾದಾರವಿಂದಗಳ ಮಕರಂದದ ಆಸ್ವಾದನೆಂದ ವಿಮುಖರಾಗಿ  ಮತ್ತೆ ನರಕದ ದಾರಿಯಾದ ಸಂಸಾರದ ತೃಷ್ಣೆಯಿಂದ ಬಂಧಿತರಾದ ಆ ಪಾಪಿಗಳ ಕರಕ್ಕೊಂಡು ಬನ್ನಿ.


ಜಿಹ್ವಾ ನ ವಕ್ತಿ ಭಗವದ್ಗುಣನಾಮಧೇಯಂ ಚೇತಶ್ಚನ ಸ್ಮರತಿ ತಚ್ಚರಣಾರವಿಂದಮ್ ।

ಕೃಷ್ಣಾಯ ನೋ ನಮತಿ ಯಚ್ಚಿರ ಏಕದಾಪಿ ತಾನನಯಧ್ವಮಸತೋsಕೃತವಿಷ್ಣುಕೃತ್ಯಾನ್ ॥೨೦॥


ಯಾರ ನಾಲಗೆ ಭಗವಂತನ ಗುಣಗಳನ್ನೂ ನಾಮಗಳನ್ನೂ ಹೇಳುತ್ತಿಲ್ಲವೆಯೋ, ಯಾರ ಮನಸ್ಸು ಆ ಭಗವಂತನ ಚರಣಾರವಿಂದಗಳ ಸ್ಮರಿಸುತ್ತಿಲ್ಲವೊ , ಯಾರ ಶಿರವು ಒಂದು ಸರ್ತಿಯೂ ತಲೆಬಾಗಿ ಕೃಷ್ಣನ ನಮಸ್ಕರಿಸುತ್ತಿಲ್ಲವೊ , ಯಾರು ಈ ವಿಷ್ಣುವಿನ (ಪೂಜಾದಿ) ಕಾರ್ಯಗಳ ಮಾಡುತ್ತಿಲ್ಲವೊ ಅಂತಹ ಪಾಪಿಗಳ ಕರಕ್ಕೊಂಡು ಬನ್ನಿ”.


ತಸ್ಮಾತ್ಸಂಕೀರ್ತನಂ ವಿಷ್ಣೋರ್ಜಗನ್ಮಂಗಲಮಂಹಸಾಮ್ ।

ಮಹತಾಮಪಿ ಪಕ್ಷೀಂದ್ರ ವಿದ್ಧೈಕಾಂತಿಕನಿಷ್ಕೃತಿಮ್ ॥೨೧॥


ಎಲೈ ಪಕ್ಷೀಂದ್ರನೇ!, ಹಾಗಾಗಿ ಭಗವಾನ್ ವಿಷ್ಣುವಿನ ನಾಮ ಸಂಕೀರ್ತನೆ ಜಗತ್ತಿಲ್ಲಿ ಮಂಗಳಕರವಾದ್ದು ಹಾಗೂ ಅತಿ ದೊಡ್ಡ ಪಾಪಕ್ಕೂ ಏಕಮಾತ್ರ ಪ್ರಾಯಶ್ಚಿತ್ತರೂಪವಾದ್ದು.


ಪ್ರಾಯಶ್ಚಿತ್ತಾನಿ ಚೀರ್ಣಾನಿ ನಾರಾಯಣಪರಾಙ್ಮುಖಮ್ ।

ನ ನಿಷ್ಪುನಂತಿ ದುರ್ಬುದ್ಧಿಂ ಸುರಾಕುಂಭಮಿವಾಪಗಾಃ ॥೨೨॥


ಹೆಂಡದ ಗಡಿಗೆ  ಹೇಗೆ ನದಿಯುನ್ನು   ಪ್ರವಿತ್ರಗೊಳಿಸದೋ, ಹಾಗೇ, ಪಾಪಗಳು ಮಾಡಲ್ಪಟ್ಟ ಪ್ರಾಯಶ್ಚಿತ್ತಗಳೂ ನಾರಾಯಣನಿಂದ ವಿಮುಖನಾದ ದುಷ್ಟಬುದ್ಧಿಯ ಮನುಷ್ಯನ ಪವಿತ್ರತೆಯನ್ನು  ಮಾಡಲಾರ 


ಕೃಷ್ಣನಾಮ್ನಾ ನ ನರಕಂ ಪಶ್ಯಂತಿ ಗತಕಿಲ್ಬಿಷಾಃ ।

ಯಮಂ ಚ ತದ್ಭಟಾಶ್ಚೈವ ಸ್ವಪ್ನೇsಪಿ ನ ಕದಾಚನ ॥೨೩॥


ಕೃಷ್ಣನ ನಾಮಸ್ಮರಣೆಯಿಂದ ಪಾಪಗಳು ಕಳದು ಹೋಗಿ . ಮತ್ತೆ ಅಂತವು ನರಕವನ್ನ  ಆಗಲೀ, ಯಮನನ್ನ ಆಗಲೀ ಅಥವ ಅವನ ಭಟರನ್ನಾಗಲೀ ಏವತ್ತೂ ಸ್ವಪ್ನಲ್ಲಿಯೂ ಕೂಡ ನೋಡುದಿಲ್ಲ 


ಮಾಂಸಾಸ್ಥಿ ರಕ್ತವತ್ಕಾಯೇ ವೈತರಣ್ಯಾಂ ಪತೇನ್ನ ಸಃ ।

ಯೋಂsತೇ ದದ್ಯಾದ್ದ್ವಿಜೇಭ್ಯಶ್ಚ ನಂದನಂದನ ಗಾಮಿತಿ ॥೨೪॥


ಯಾರು ಅಂತ್ಯಕಾಲದಲ್ಲಿ ಗೋವಿನ ನಂದನಂದನಗೆ ಎಂದು ದ್ವಿಜನಿಗೆ ದಾನ ಮಾಡುತ್ತರೋ  ಅವು ಮಾಂಸ, ಮೂಳೆ, ರಕ್ತಗಳಿಂದ ಉಂಟಾದ ದೇಹವೆಂಬ ವೈತರಿಣಿಲಿ ಬೀಳುವುದಿಲ್ಲ 


ಅತಃ ಸ್ಮರೇನ್ಮಹಾವಿಷ್ಣೋರ್ನಾಮ ಪಾಪೌಘನಾಶನಮ್ ।

ಗೀತಾ ಸಹಸ್ರನಾಮಾನಿ ಪಠೇದ್ವಾ ಶ್ರುಣುಯಾದಪಿ ॥೨೫॥


ಹಾಗಾಗಿ, ಪಾಪಗಳ ಸಮೂಹವನ್ನೇ ನಾಶಮಾಡುವಂತಹ ಮಹಾವಿಷ್ಣುವಿನ ನಾಮಗಳನ್ನು  ಸ್ಮರಿಸಬೇಕು ಗೀತೆ ಮತ್ತೆ ಸಹಸ್ರನಾಮಗಳ ಪಠಿಸಬೇಕು ಅಥವಾ ಕೇಳಬೇಕು 



No comments:

ನರನಾಡಿಗಳು

*ನರನಾಡಿಗಳು ಎಂದರೇನು ?* *ಇವುಗಳ ಮಹತ್ವ ಏನು ? ದೇಹದಲ್ಲಿ ಇವುಗಳು ಪ್ರತ್ಯೇಕವಾಗಿ ಇರುತ್ತವೆ  *ನರ(nerves) -* *ಮೆದುಳು,ಮೆದುಳು* *ಬಳ್ಳಿ(ಬೆನ್ನು ಹುರಿ) ಮತ್ತು* *ಅ...