ಗರುಡ ಪುರಾಣ ಅಧ್ಯಾಯ 08 – 02
ವಿಷ್ಣೋಃ ಪಾದಾಂಬು ನಾಮಾನಿ ಮರಣೇ ಮುಕ್ತಿದಾನಿ ಚ ॥೨೬॥
ಏಕಾದಶೀವ್ರತ, ಗೀತಾ, ಗಂಗಾಜಲ, ತುಲಸೀದಳ, ವಿಷ್ಣುವಿನ ಪಾದತೀರ್ಥ ಮತ್ತೆ ನಾಮಗಳು ಇವೆಲ್ಲವೂ ಮರಣ ಕಾಲಲ್ಲಿ ಮುಕ್ತಿಯ ಕೊಡುತ್ತವೆ
ತತಃ ಸಂಕಲ್ಪಯೇದನ್ನಂ ಸಘೃತಂ ಚ ಸಕಾಂಚನಮ್ ।
ಸವತ್ಸಾ ಧೇನವೋ ದೇಯಾಃ ಶ್ರೋತ್ರಿಯಾಯ ದ್ವಿಜಾತಯೇ ॥೨೭॥
ಇದರ ಮತ್ತೆ, ತುಪ್ಪ ಮತ್ತೆ ಸುವರ್ಣ ಸಹಿತ ಅನ್ನದಾನದ ಸಂಕಲ್ಪ ಮಾಡಬೇಕು ಶ್ರೋತ್ರಿಯನಾದ ದ್ವಿಜನಿಗೆ ಕಂಜಿ ಸಮೇತವಾದ ದನವ ದಾನ ಕೊಡಬೇಕು
ಅಂತೇ ಜನೋ ಯದ್ದದಾತಿ ಸ್ವಲ್ಪಂ ವಾ ಯದಿ ವಾ ಬಹು ।
ತದಕ್ಷಯಂ ಭವೇತ್ತಾರ್ಕ್ಷ್ಯ ಯತ್ಪುತ್ರಸ್ಚಾನುಮೋದತೇ ॥೨೮॥
ಏ ಗರುಡನೇ!, ಅಂತ್ಯಕಾಲಲ್ಲಿ ಜನರು ರಜಾ ಆಗಲೀ, ಬಹುವಾಗಲೀ, ಯಾವುದನ್ನು ದಾನ ಮಾಡುತ್ತರೋ ಯಾವುದರ ಮಲೆ ಅನುಮೋದಿಸುತ್ತನೋ ಅದು ಅಕ್ಷಯವಾವಗುವುದು
ಅಂತಕಾಲೇ ತು ಸತ್ಪುತ್ರಃ ಸರ್ವದಾನಾನಿ ದಾಪಯೇತ್ ।
ಯತ್ತದರ್ಥಂ ಸುತೋ ಲೋಕೇ ಪ್ರಾರ್ಥ್ಯತೇ ಧರ್ಮಕೋವಿದೈಃ ॥೨೯॥
ಅಂತ್ಯಕಾಲಲ್ಲಿ ಸತ್ಪುತ್ರನಾದವ ತನ್ನ ಅಪ್ಪನಿಂದ ಎಲ್ಲ ದಾನಗಳನ್ನು ಮಾಡಬೇಕು. ಈ ಉದ್ದೇಶಂದಲೇ ಧರ್ಮವ ತಿಳಿದೋರು ಲೋಕಲ್ಲಿ ಪುತ್ರಪ್ರಾಪ್ತಿಗೋಸ್ಕರವಾಗಿ ಪ್ರಾರ್ಥಿಸುತ್ತರೆ
ಭೂಮಿಷ್ಠಂ ಪಿತರಂ ದೃಷ್ಟ್ವಾ ಅರ್ಧೋನ್ಮೀಲಿತಲೋಚನಮ್ ।
ಪುತ್ರೈಸ್ತೃಷ್ಣಾನ ಕರ್ತವ್ಯಾ ತದ್ಧನೇ ಪೂರ್ವಸಂಚಿತೇ ॥೩೦॥
ಭೂಶಾಯಿಯಾದ, ಅರ್ಧ ಬಿಡುಸಿದ ಕಣ್ಣುಗಳು ಅಪ್ಪನ ನೋಡಿ ಮಕ್ಕಳು ಅವರು ಹಿಂದೆ ಸಂಪಾದುಸಿದ ಸಂಪತ್ತಿಗೆ ಆಸೆಪಡಬೇಡ
ಸತದ್ದದಾತಿ ಸತ್ಪುತ್ರೋ ಯಾವಜ್ಜೀವತ್ಯಸೌ ಚಿರಮ್ ।
ಅತಿವಾಹಸ್ತು ತನ್ಮಾರ್ಗೇ ದುಃಖಂ ನ ಲಭತೇ ಯತಃ ॥೩೧॥
ಸತ್ಪುತ್ರ ಬಹುಕಾಲ ಜೀವನಾಧಾರವಪ್ಪ ದಾನವ ಕೊಡುತ್ತ ಮರಣಕಾಲದ ದಾನದಿಂದ ಯಮಮಾರ್ಗಲ್ಲಿ ಪ್ರೇತಕ್ಕೆ ದುಃಖವು ಉಂಟಾಗಿ
ಆತುರೇ ಚೋಪರಾಗೇ ಚ ದ್ವಯಂ ದಾನಂ ವಿಶಿಷ್ಯತೇ ।
ಅತೋsವಶ್ಯಂ ಪ್ರತಾತವ್ಯಮಷ್ಟದಾನಂ ತಿಲಾದಿಕಮ್ ॥೩೨॥
ಮರಣಕಾಲ, ಗ್ರಹಣಕಾಲ – ಈ ಎರಡರಲ್ಲಿ ಕೊಡುವ ದಾನಗಳು ಎಲ್ಲ ದಾನಗಳಿಗಿಂತ ವಿಶೇಷವಾದ್ದು. ಆದ್ದರಿಂದ ಎಳ್ಳು ಮುಂತಾದ ಎಂಟು ದಾನಗಳನ್ನು ಅವಶ್ಯವಾಗಿ ಕೊಡಲೆ ಬೇಕು.
ತಿಲಾ ಲೋಹಂ ಹಿರಣ್ಯಂ ಚ ಕಾರ್ಪಾಸೋ ಲವಣಂ ತಥಾ ।
ಸಪ್ತದಾನಂ ಕ್ಷಿತಿರ್ಗಾವಂ ಏಕೈಕಂ ಪಾವನಂ ಸ್ಮೃತಮ್ ॥೩೩॥
ಎಳ್ಳು, ಲೋಹ, ಚಿನ್ನ, ಹತ್ತಿಯ ವಸ್ತು, ಉಪ್ಪು, ಸಪ್ತಧಾನ್ಯಗಳು ಭೂಮಿ, ಗೋವು – ಇವುಗಳು ಒಂದೊಂದು ದಾನವೂ ಪವಿತ್ರ ಎಂದು ಹೇಳಲಾಗುತ್ತದೆ
ಏತಾದಷ್ಟಮಹಾದಾನಂ ಮಹಾಪಾತಕನಾಶನಮ್ ।
ಅಂತಕಾಲೇ ಪ್ರದಾತವ್ಯಂ ಶ್ರುಣು ತಸ್ಯ ಚ ಸತ್ಫಲಮ್ ॥೩೪॥
ಈ ಎಂಟು ಮಹಾದಾನಗಳು ಮಹಾಪಾಪಗಳ ನಾಶಮಾಡುತ್ತದೆ ಮರಣ ಕಾಲಲ್ಲಿ ಈ ದಾನಗಳ ಮಾಡಿದರೆ ಉಂಟು ಸತ್ಫಲಗಳ ಬಗ್ಗೆ ಕೇಳು –
ಮಮ ಸ್ವೇದಸಮುದ್ಭೂತಾಃ ಪವಿತ್ರಾಸ್ತ್ರಿವಿಧಾಸ್ತಿಲಾಃ ।
ಅಸುರಾ ದಾನವಾ ದೈತ್ಯಾಸ್ತೃಪ್ಯಂತಿ ತಿಲದಾನತಃ ॥೩೫॥
ನನ್ನ ಬೆವರಿಂದ, ಪವಿತ್ರವಾದ ಮೂರು ವಿಧವಾದ ಎಳ್ಳುಗಳು ಉತ್ಪನ್ನವಯಿತು ಎಳ್ಳಿನ ದಾನ ಮಾಡುವದರಿಂದ ಅಸುರರು, ದಾನವರು, ದೈತ್ಯರು ತೃಪ್ತಿ ಹೊಂದುತ್ತರೆ
ತಿಲಾಃ ಶ್ವೇತಾಸ್ತಥಾ ಕೃಷ್ಣಾ ದಾನೇನ ಕಪಿಲಾಸ್ತಿಲಾಃ ।
ಸಂಹರಂತಿ ತ್ರಿಧಾ ಪಾಪಂ ವಾಙ್ಮನಃ ಕಾಯಸಂಚಿತಮ್ ॥೩೬॥
ಬೆಳಿ, ಕಪ್ಪು ಮತ್ತೆ ಕಂದು- ಈ ಮೂರು ವಿಧ ಬಣ್ಣದ ಎಳ್ಳುಗಳ ದಾನಮಾಡುವದರಿಂದ ವಾಚಾ, ಮನಸಾ, ಕಾಯಾ ಮಾಡಿದ ಪಾಪಗಳು ನಾಶವಾಗುವವು
.
ಲೋಹದಾನಂ ಚ ದಾತವ್ಯಂ ಭೂಮಿಯುಕ್ತೇನ ಪಾಣಿನಾ ।
ಯಮಸೀಮಾಂ ನ ಚಾಪ್ನೋತಿ ನ ಗಚ್ಛೇತ್ತಸ್ಯ ವರ್ತ್ಮನಿ ॥೩೭॥
ಭೂಮಿಯಲ್ಲಿ ಕೈಯಮಡುಗಿ ಲೋಹದಾನವ ಮಾಡಬೇಕು. ಹಾಗೆ ಮಾಡಿದವ ಯಮಪುರಿಯ ಸೀಮೆಯೊಳಗೆ ಹೋಗುವುದೀಲ್ಲ ಹಾಗೂ ಯಮನ ಮಾರ್ಗಲ್ಲಿಯೂ ಹೋಗುವುದಿಲ್ಲ
ಕುಠಾರೋ ಮುಸಲೋ ದಂಡಃ ಖಡ್ಗಶ್ಚ ಛುರಿಕಾ ತಥಾ ।
ಶಸ್ತ್ರಾಣಿ ಯಮಹಸ್ತೇ ಚ ನಿಗ್ರಹೇ ಪಾಪಕರ್ಮಣಾಮ್ ॥೩೮॥
ಕೊಡಲಿ, ಒನಕೆ, ದೊಣ್ಣೆ, ಖಡ್ಗ, ಮತ್ತೆ ಚೂರಿ – ಈ ಶಸ್ತ್ರಗಳ ಪಾಪಿಯ ಪಾಪಕರ್ಮಕ್ಕೆ ಶಿಕ್ಷೆ ವಿದೀಸಲೆ ಯಮಧರ್ಮರಾಜ ತನ್ನ ಹಸ್ತಲ್ಲಿ ಧರಿಸಿರುತ್ತನೆ
ಯಮಾಯುಧಾನಾಂ ಸಂತುಷ್ಟೈ ದಾನಮೇತದುದಾಹೃತಮ್ ।
ತಸ್ಮಾದ್ದದ್ಯಾಲ್ಲೋಹದಾನಂ ಯಮಲೋಕೇ ಸುಖಾವಹಮ್ ॥೩೯॥
ಯಮನ ಆಯುಧಗಳ ಪ್ರಸನ್ನಗೊಳುಸಲು ಈ ದಾನವು ಹೇಳಲ್ಪಟ್ಟಿದು. ಹಾಗಾಗಿ ಯಮಲೋಕಲ್ಲಿ ಸುಖವನ್ನುಂಟುಮಾಡುವ ಲೋಹದಾನವ ಮಾಡಬೇಕು
ಊರಣಃ ಶ್ಯಾಮಸೂತ್ರಶ್ಚ ಶುಂಡಾಮರ್ಕೋsಪ್ಯುದಂಬರಃ ।
ಶೇಷಂಬಲೋ ಮಹಾದೂತಾ ಲೋಹದಾನಾತ್ಸುಖಪ್ರದಾಃ ॥೪೦॥
ಊರುಣ, ಶ್ಯಾಮಸೂತ್ರ, ಶುಂಡಾಮರ್ಕ, ಉದುಂಬರ, ಶೇಷಂಬಲ ಹೇಳುವ ಯಮನ ಮಹಾದೂತರು ಲೋಹದಾನದಿಂದ ಸುಖಕೊಡುವವಾಗಿದ್ದವೆ
ಶ್ರುಣು ತಾರ್ಕ್ಷ್ಯ ಪರಂ ಗುಹ್ಯಂ ದಾನಾನಾಂ ದಾನಮುತ್ತಮಮ್ ।
ದತ್ತೇನ ತೇನ ತುಷ್ಯಂತಿ ಭೂರ್ಭುವಃಸ್ವರ್ಗವಾಸಿನಃ ॥೪೧॥
ಏ ಗರುಡನೇ!, ಎಲ್ಲ ದಾನಗಳಲ್ಲಿ ಅತಿ ಉತ್ತಮವೂ, ಅತಿ ಗುಪ್ತವೂ ಆದ ದಾನವ ಕೇಳು. ಆ ದಾನದ ಭೂಲೋಕ, ಭುವರ್ಲೋಕ, ಸ್ವರ್ಗಲೋಕಗಳ ನಿವಾಸಿಗೊ ಸಂತೋಷಪಡುತ್ತರೆ
ಬ್ರಹ್ಮಾದ್ಯಾ ಋಷಯೋ ದೇವಾ ಧರ್ಮರಾಜಸಭಾಸದಾಃ ।
ಸ್ವರ್ಣದಾನೇನ ಸಂತುಷ್ಟಾ ಭವಂತಿ ವರದಾಯಕಃ ॥೪೨॥
ಬ್ರಹ್ಮಾದಿಗಳು , ಋಷಿಗಳು ದೇವತೆಗಳು ಮತ್ತೆ ಧರ್ಮರಾಜನ ಸಭಾಸದರು ಸುವರ್ಣದಾನದಿಂದ ಸಂತುಷ್ಟರಾಗಿ ವರದಾಯಕರಾಗುವರು
ತಸ್ಮಾದ್ದೇಯಂ ಸ್ವರ್ಣದಾನಂ ಪ್ರೇತೋದ್ಧರಣ ಹೇತವೇ ।
ನ ಯಾತಿ ಯಮಲೋಕಂ ಸ ಸ್ವರ್ಗತಿಂ ತಾತ ಗಚ್ಛತಿ ॥೪೩॥
ಏ ಪ್ರಿಯ ಗರುಡನೇ!, ಹಾಗಾಗಿ ಪ್ರೇತದ ಉದ್ದಾರಕ್ಕಾಗಿ ಸುವರ್ಣದಾನವ ಮಾಡಬೇಕು . ಅದರಿಂದ ಅಂವ ಯಮಲೋಕಕ್ಕೆ ಹೋಗದೆ ಸ್ವರ್ಗಲೋಕಕ್ಕೆ ಹೋಗುತ್ತನೆ
ಚಿರಂ ವಸೇತ್ಸತ್ಯಲೋಕೇ ತತೋ ರಾಜಾ ಭವೇದಿಹ ।
ರೂಪವಾನ್ಧಾರ್ಮಿಕೋ ವಾಗ್ಮೀ ಶ್ರೀಮಾನತುಲಕ್ರಮಃ ॥೪೪॥
ಅವ ಬಹುಕಾಲದವರೇಗೆ ಸತ್ಯಲೋಕಲ್ಲಿ ವಾಸಮಾಡಿಕೊಂಡಿದ್ದು ಮತ್ತೆ ಇಹಲೋಕಲ್ಲಿ ರೂಪವಂತನೂ, ಧರ್ಮಾತ್ಮನೂ, ವಾಗ್ಮಿಯೂ, ಶ್ರೀಮಂತನೂ, ಅತಿ ಪರಾಕ್ರಮಶಾಲಿಯೂ ಆದ ರಾಜನಾಗುತ್ತಾನೆ .
ಕಾರ್ಪಾಸಸ್ಯ ತು ದಾನೇನ ದೂತೇಭ್ಯೋ ನ ಭಯಂ ಭವೇತ್ ।
ಲವಣಂ ದೀಯತೇ ಯಚ್ಚ ತೇನ ನೈವ ಭಯಂ ಯಮಾತ್ ॥೪೫॥
ಹತ್ತಿಯ ಸಾಮಾನುಗಳ ದಾನದಿಂದ ಯಮದೂತರ ಭಯ ಇರುವುದಿಲ್ಲ ಮತ್ತೆ ಉಪ್ಪು ದಾನ ಮಾಡುವದರಿಂದ ಯಮಧರ್ಮರಾಜನ ಭಯ ಇರುವುದಿಲ್ಲ
ಅಯೋಲವಣಕಾರ್ಪಾಸತಿಲಕಾಂ ಚನದಾನತಃ ।
ಚಿತ್ರಗುಪ್ತಾದಯಸ್ತುಷ್ಟಾ ಯಮಸ್ಯ ಪುರವಾಸಿನಃ ॥೪೬॥
ಲೋಹ, ಉಪ್ಪು, ಹತ್ತಿಯ ಸಾಮಾನು, ಎಳ್ಳು, ಬಂಗಾರ ದಾನಗಳಿಂದ ಯಮನ ಪಟ್ಟಣಲ್ಲಿ ವಾಸಮಾಡಿಕೊಂಡಿರುವ ಚಿತ್ರಗುಪ್ತ ಮೊದಲಾದವರು ಸಂತುಷ್ಟರಾಗುವರು
ಸಪ್ತಧಾನ್ಯ ಪ್ರದಾನೇನ ಪ್ರೀತೋ ಧರ್ಮಧ್ವಜೋ ಭವೇತ್ ।
ತುಷ್ಟಾ ಭವಂತಿ ಯೇsನ್ಯೇsಪಿ ತ್ರಿಷು ದ್ವಾರೇಷ್ವಧಿಷ್ಠಿತಾಃ ॥೪೭॥
ಸಪ್ತಧಾನ್ಯಗಳ ದಾನ ಮಾಡುವದರಿಂದ ಧರ್ಮದ್ವಜ ಪ್ರಸನ್ನನಾಗುತ್ತಾನೆ ಮತ್ತೆ ಇನ್ನುಳುದ ಮೂರು ದ್ವಾರಗಳಲ್ಲಿರುವವರು ಪ್ರಸನ್ನರಾಗುತ್ತಾರೆ .
ವ್ರೀಹಯೋ ಯವಗೋಧೂಮಾ ಮುದ್ಗಾ ಮಾಷಾಃ ಪ್ರಿಯಂಗವಃ ।
ಚಣಕಾಃ ಸಪ್ತಮಾ ಜ್ಞೇಯಾಃ ಸಪ್ತಧಾನ್ಯಮುದಾಹೃತಮ್ ॥೪೮॥
ಭತ್ತ, ಜವೆಗೋಧಿ, ಗೋಧಿ, ಹಸರು, ಉದ್ದು, ನವಣೆ, ಕಡಲೆ- ಇವೇಳು ಸಪ್ತಧಾನ್ಯಗಳು ಎಂದು ಹೇಳಲ್ಪಟ್ಟಿದೆ
ಗೋಚರ್ಮಮಾತ್ರಂ ವಸುಧಾ ದತ್ತಾ ಪಾತ್ರೇ ವಿಧಾನತಃ ।
ಪುನಾತಿ ಬ್ರಹ್ಮಹತ್ಯಾಯಾ ದೃಷ್ಟಮೇತನ್ಮುನೀಶ್ವರೈಃ ॥೪೯॥
ಒಂದು ಗೋಚರ್ಮದಷ್ಟು* ಭೂಮಿಯ ಸತ್ಪಾತ್ರಜೆಗೆ ವಿಧಿಪೂರ್ವಕವಾಗಿ ಕೊಟ್ಟ ದಾನವು ಬ್ರಹ್ಮಹತ್ಯಾದೋಷದಿಂದ ಪರಿಶುದ್ಧಗೊಳ್ಳು ವನು ಎಂದು ಮುನೀಶ್ವರರಿಂದ ಕಂಡುಗೊಂಡಿದದು
ನ ವ್ರತೇಭ್ಯೋ ನ ತೀರ್ಥೇಭ್ಯೋ ನಾನ್ಯದ್ದಾನಾದ್ವಿನಶ್ಯತಿ ।
ರಾಜ್ಯೇ ಕೃತಂ ಮಹಾಪಾಪಂ ಭೂಮಿದಾನಾದ್ವಿಲೀಯತೇ ॥೫೦॥
ರಾಜತ್ವದಲ್ಲಿ ಮಾಡಿದ ಮಹಾಪಾಪಗಳು ವ್ರತಗಳಿಂದಲಾಗಲೀ, ತೀರ್ಥಗಳಿಂದಾಗಲೀ, ಅನ್ಯ ದಾನಗಳಿಂದಲಾಗಲೀ ನಾಶವಾಗುವುದಿಲ್ಲ . ಆದರೆ ಭೂದಾನದಿಂದ ಅವುಗಳು ನಾಶವಾಗುವವು .
ಪೃಥಿವೀಂ ಸಸ್ಯಸಂಪೂರ್ಣಾಂ ಯೋ ದದಾತಿ ದ್ವಿಜಾತಯೇ ।
ಸ ಪ್ರಯಾತೀಂದ್ರಭುವನೇ ಪೂಜ್ಯಮಾನಃ ಸುರಾಸುರೈಃ ॥೫೧॥
ಯಾವಾತ ಸಸ್ಯಭರಿತವಾದ ಭೂಮಿಯ ದ್ವಿಜನಿಗೆ ದಾನಮಾಡುತ್ತನೋ ಅವನು ಸುರಾಸುರರಿಂದ ಪೂಜಿತನಾಗಿ ಇಂದ್ರಲೋಕಕ್ಕೆ ಹೋಗುತ್ತಾನೆ
ಅತ್ಯಲ್ಪಫಲದಾನಿ ಸ್ಯುರನ್ಯದಾನಾನಿ ಕಾಶ್ಯಪ ।
ಪೃಥಿವೀದಾನಜಂ ಪುಣ್ಯಮಹನ್ಯಹನಿ ವರ್ಧತೇ ॥೫೨॥
ಹೇ ಕಾಶ್ಯಪನೇ!, ಇತರ ದಾನಗಳಿಂದ ಅತಿ ಕಮ್ಮಿ ಫಲವು ಬರುವುದು ಆದರೆ ಭೂದಾನ ಮಾಡುವದರಿಂದ ಮಾಡುವವನ ಪುಣ್ಯವು ದಿನೇ ದಿನೇ ವೃದ್ಧಿಯಾಗುವುದು

No comments:
Post a Comment