Followers

Tuesday, 30 June 2020

ಗರುಡ ಪುರಾಣ ಅಧ್ಯಾಯ 9

ಗರುಡ ಪುರಾಣ ಅಧ್ಯಾಯ 9 

ಅಧ್ಯಾಯ 9


ಮ್ರಿಯಮಾಣ ಕೃತ್ಯ ನಿರೂಪಣಮ್                                    


ಮರಣಕಾಲದ ವಿಧಿಗಳ ನಿರೂಪಣೆ

 

ಗರುಡ ಉವಾಚ


ಕಥಿತಂ ಭವತಾ ಸಮ್ಯಗ್ದಾನಮಾತುರಕಾಲಿಕಮ್ ।images

ಮ್ರಿಯಮಾಣಸ್ಯ ಯತ್ಕೃತ್ಯಂ ತದಿದಾನೀಂ ವದ ಪ್ರಭೋ ॥೦೧॥


ಗರುಡ° ಹೇಳಿದ – ಹೇ ಪ್ರಭೋ!, ರೋಗಪೀಡಿತನಾದ ಕಾಲಲ್ಲಿ ಮಾಡಬೇಕಾದ ದಾನಗಳ ಬಗ್ಗೆ ಲಾಯಕಕ್ಕೆ ನಿನ್ನಂದ ಹೇಳಲ್ಪಟ್ಟತ್ತು. ಈಗ, ಮರಣ ಕಾಲಲ್ಲಿ ಮಾಡೇಕಾದ ಕರ್ಮಗಳ ಬಗ್ಗೆ ಹೇಳು.


ಶ್ರೀ ಭಗವಾನ್ ಉವಾಚ


ಶ್ರಣು ತಾರ್ಕ್ಷ್ಯ ಪ್ರವಕ್ಷ್ಯಾಮಿ ದೇಹತ್ಯಾಗಸ್ಯ ತದ್ವಿಧಿಮ್ ।

ಮೃತಾ ಯೇನ ವಿಧಾನೇನ ಸದ್ಗತಿಂ ಯಾಂತಿ ಮಾನವಾಃ ॥೦೨॥


ಭಗವಂತ  ಹೇಳಿದ – ಹೇ ಗರುಡನೇ!, ಯಾವ ವಿಧಿದಲ್ಲಿ ಮನುಷ್ಯ  ಸತ್ತಮಲೆ ಸದ್ಗತಿಯ ಪಡೆಯುತ್ತನೋ ಆ ದೇಹತ್ಯಾಗದ ವಿಧಿಯ ನಾನು ನಿನಗೆ ಹೇಳುತ್ತೆನೆ , ಕೇಳು –


ಕರ್ಮಯೋಗಾದ್ಯದಾ ದೇಹೀ ಮುಂಚತ್ಯತ್ರ ನಿಜಂ ವಪುಃ ।

ತುಲಸೀಸನ್ನಿಧೌ ಕುರ್ಯಾನ್ಮಂಡಲಂ ಗೋಮಯೇನ ತು ॥೦೩॥


ಯಾವಾಗ ದೇಹಿಯ ಕರ್ಮಗಳ ಫಲವಾಗಿ ತನ್ನ ದೇಹತ್ಯಾಗ ಮಾಡುತ್ತನೋ, ಅಗ ತುಳಸಿ ಗಿಡದ ಹತ್ತಿರ ದನದ ಸಗಣಿಯಿಂದ ಮಂಡಲ ಮಾಡಬೇಕು (ಸಗಣಿ ಬಳಿಯೆಕು).


ತಿಲಾಂಶ್ಚೈವ ವಿಕೀರ್ಯಾಥ ದರ್ಭಾಂಶ್ಚೈವ ವಿನಿಕ್ಷಿಪೇತ್ ।

ಸ್ಥಾಪಯೇದಾಸನೇ ಶುಭ್ರೇ ಶಾಲಗ್ರಾಮಶಿಲಾಂ ತದಾ ॥೦೪॥


ಅಲ್ಲಿ (ಆ ಮಂಡಲದ ಮೇಲೆ ) ಎಳ್ಳು ಚೆಲ್ಲಿ ದರ್ಭೆಗಳ ಹರಡೆಕು. ಮತ್ತೆ, ಒಂದು ಶುಭ್ರವಾದ ಆಸನದ ಮೇ ಶಾಲಗ್ರಾಮ ಶಿಲೆಯ ಇಡಬೇಕು 


ಶಾಲಗ್ರಾಮಶಿಲಾ ಯತ್ರ ಪಾಪದೋಷಭಯಾಪಹಾ ।

ತತ್ಸನ್ನಿಧಾನಮರಣಾನ್ಮುಕ್ತಿರ್ಜಂತೋಃ ಸುನಿಶ್ಚಿತಾಃ ॥೦೫॥


ಯಾವ ಜಾಗದಲ್ಲಿ  ಪಾಪ ದೋಷ ಭಯಗಳ ನಾಶಮಾಡುವ ಶಾಲಗ್ರಾಮ ಶಿಲೆ ಇರುತ್ತೋ, ಅದರ ಹತ್ತಿರ  ಮರಣ ಹೊಂದಿದರೆ ಜೀವಾತ್ಮ ನಿಶ್ಚಯವಾಗಿಯೂ ಮುಕ್ತಿಯ ಹೊಂದುತ್ತದೆ 


ತುಲಸೀವಿಟಪಚ್ಛಾಯಾ ಯತ್ರಾಸ್ತಿ ಭವತಾಪಹಾ ।

ತತ್ರೈವ ಮರಣಾನ್ಮುಕ್ತಿಃ ಸರ್ವದಾ ದಾನದುರ್ಲಭಾ ॥೦೬॥


ಸಂಸಾರತಾಪವ ನಾಶಮಾಡುವ ತುಳಸೀ ಗಿಡವು  ಎಲ್ಲಿ ಇರುತ್ತೋ ಅಲ್ಲಿ ಮರಣ ಹೊಂದಿರೆ ದುರ್ಲಭವಾದ ಮುಕ್ತಿಯು ಸಿಕ್ಕುತ್ತು.


ತುಲಸೀವಿಟಾಪಸ್ಥಾನಂ ಗೃಹೇ ಯಸ್ಯಾವತಿಷ್ಠತೇ ।

ತದ್ಗೃಹಂ ತೀರ್ಥರೂಪಂ ಹಿ ನ ಯಾಂತಿ ಯಮಕಿಂಕರಾಃ ॥೦೭॥


ಯಾರ ಮನೆಲಿ ತುಳಸೀ ಗಿಡವು  ಸ್ಥಾಪನೆಯಾಗಿದ್ದೋ, ಆ ಮನೆ ತೀರ್ಥಸ್ಥಳವಾಗಿದ್ದು. ಅಲ್ಲಿಗೆ ಯಮಕಿಂಕರರು ಬರುವುದಿಲ್ಲ 


ತುಲಸೀಮಂಜರೀಯುಕ್ತೋ ಯಸ್ತು ಪ್ರಾಣಾನ್ವಿಮುಂಚತಿ ।

ಯಮಸ್ತಂ ನೇಕ್ಷಿತುಂ ಶಕ್ತೋ ಯುಕ್ತಂ ಪಾಪಶತೈರಪಿ ॥೦೮॥


ಯಾರು ತುಳಸೀ ದಳದೊಟ್ಟಿಗೆ ಪ್ರಾಣವ ಬಿಡುತ್ತರೋ  ಅವರು ನೂರಾರು ಪಾಪಗಳ ಮಾಡಿದ್ದರು ಯಮ° ಅವರ ಕಡೆಗೆ ನೋಡಲು ಕೂಡ ಶಕ್ತನಾಗಿರುವುದಿಲ್ಲ 


ತಸ್ಯಾದಲಂ ಮುಖೇ ಕೃತ್ವಾ ತಿಲದರ್ಭಾಸನೇ ಮೃತಃ ।

ನರೋ ವಿಷ್ಣುಪುರಂ ಯಾತಿ ಪುತ್ರಹೀನೋsಪ್ಯಸಂಶಯಃ ॥೦೯॥


ತುಳಸೀದಳವ ಬಾಯಲಿಮಡಿಕ್ಕೊಂಡು ಎಳ್ಳು ದರ್ಭೆಗಳ ಆಸನದ ಮೇಲೆ ಮರಣವ ಹೊಂದಿದ ಮನುಷ್ಯ ಪುತ್ರಹೀನನಾಗಿದ್ದರೂ ನಿಸ್ಸಂದೇಹವಾಗಿ ವಿಷ್ಣುಪುರಕ್ಕೆ ಹೋಗುತ್ತನೆ 


ತಿಲಾಃ ಪವಿತ್ರಾ ಸ್ತ್ರಿವಿಧಾ ದರ್ಭಾಶ್ಚ ತುಲಸೀರಪಿ ।

ನರಂ ನಿವಾರಯಂತ್ಯೇತೇ ದುರ್ಗತಿಂ ಯಾಂ ತಮಾತುರಮ್ ॥೧೦॥


ಎಳ್ಳು, ದರ್ಭೆ ಮತ್ತೆ ತುಳಸೀ ಎಸಳು – ಈ ಮೂರು ಪವಿತ್ರವಾದ ವಸ್ತುಗಳು  ಕಾಯಿಲೆಯ ಮನುಷ್ಯ ದುರ್ಗತಿ ಪಡುವುದರಿಂದ ನಿವಾರಿಸುತ್ತದೆ 


ಮಮ ಸ್ವೇದಸಮದ್ಭೂತಾ ಯತಸ್ತೇ ಪಾವನಾಸ್ತಿಲಾಃ ।

ಅಸುರಾ ದಾನವಾ ದೈತ್ಯಾ ವಿದ್ರವಂತಿ ತಿಲೈಸ್ತತಃ ॥೧೧॥


ಎಳ್ಳು ನನ್ನ ಬೆವರಿಂದ ಹುಟ್ಟಿದ್ದದು. ಹಾಗಾಗಿ ಅದು ಪವಿತ್ರವಾಗಿದೆ . ಎಳ್ಳಿನಿಂದ ಅಸುರರು, ದಾನವರು, ದೈತ್ಯರು ಓಡಿಹೋಗುವರು 


ದರ್ಭಾ ವಿಭೂತಿರ್ಮೇ ತಾರ್ಕ್ಷ್ಯ ಮಮ ರೋಮಸಮುದ್ಭವಾಃ ।

ಅತಸ್ತತ್ಸ್ಪರ್ಶನಾದೇವ ಸ್ವರ್ಗಂ ಗಚ್ಛಂತಿ ಮಾನವಾಃ ॥೧೨॥


ಹೇ ಗರುಡ!, ನನ್ನ ರೋಮಗಳಿಂದ ಹುಟ್ಟಿದ ದರ್ಭೆ ನನ್ನ ವಿಭೂತಿ. ಹಾಗಾಗಿ ಅದರ ಸ್ಪರ್ಶಮಾತ್ರದಿಂದಲೇ ಮನುಷ್ಯರು ಸ್ವರ್ಗಕ್ಕೆ ಹೋಗುತ್ತಾರೆ .


ಕುಶಮೂಲೆ ಸ್ಥಿತೋ ಬ್ರಹ್ಮಾ ಕುಶಮಧ್ಯೇ ಜನಾರ್ದನಃ ।

ಕುಶಾಗ್ರೇ ಶಂಕರೋ ದೇವಸ್ತ್ರಯೋ ದೇವಾಃ ಕುಶೇ ಸ್ಥಿತಾಃ ॥೧೩॥


ದರ್ಭೆಯ ಮೂಲಲ್ಲಿ ಬ್ರಹ್ಮನೂ, ದರ್ಭೆಯ ಮಧ್ಯಲ್ಲಿ ಜನಾರ್ದನನೂ, ದರ್ಭೆಯ ಕೊಡಿಲಿ ಶಂಕರ ದೇವನೂ ನೆಲೆಸಿದ್ದರೆ . ಈ ರೀತಿ ಮೂರು ದೇವರ ದರ್ಭೆಲಿ ನೆಲೆಸಿರುವ .

ಅತಃ ಕುಶಾ ವಹ್ನಿಮಂತ್ರ ತುಲಸೀವಿಪ್ರಧೇನವಃ ।

ನೈತೇ ನಿರ್ಮಾಲ್ಯತಾಂ ಯಾಂತಿ ಕ್ರಿಯಾಮಾಣಾಃ ಪುನಃ ಪುನಃ ॥೧೪॥


ಹಾಗಾಗಿ ದರ್ಭೆ, ಅಗ್ನಿ, ಮಂತ್ರ, ತುಳಸಿ, ಬ್ರಾಹ್ಮಣ, ಗೋವು ಇವುಗಳು ಮತ್ತೆ ಮತ್ತೆ ಕಾರ್ಯಲ್ಲಿ ಉಪಯೋಗಿಸಿರೂ ಅಶುದ್ಧವಾಗುವುದಿಲ್ಲ 


ದರ್ಭಾಃ ಪಿಂಡೇಷು ನಿರ್ಮಾಲ್ಯಾ ಬ್ರಾಹ್ಮಣಾಃ ಪ್ರೇತಭೋಜನೇ ।

ಮಂತ್ರಾಗೌಸ್ತುಲಸೀ ನೀಚೇ ಚಿತಾಯಾಂ ಚ ಹುತಾಶನಃ ॥೧೫॥


ದರ್ಭೆಯು ಪಿಂಡದಲ್ಲಿ, ಬ್ರಾಹ್ಮಣ  ಪ್ರೇತಭೋಜನದಲ್ಲಿ, ಮಂತ್ರ, ಗೋವು ಮತ್ತೆ ತುಳಸಿ ನೀಚನಲ್ಲಿ ಮತ್ತೆ ಅಗ್ನಿ ಚಿತೆಲಿ ಅಶುದ್ಧರಾಗಿದ್ದವು.


ಗೋಮಯೇನೋಪಲಿಪ್ತೇತು ದರ್ಭಾಸ್ತರಣಸಂಸ್ಕೃತೇ ।

ಭೂತಲೇ ಹ್ಯಾತುರಂ ಕುರ್ಯಾದಂತರಿಕ್ಷಂ ವಿವರ್ಜಯೇತ್ ॥೧೬॥


ದನದ ಸಗನಿಯಿಂದ ನೆಲಸಾರ್ಸಿ, ದರ್ಭೆಯ ಹರಡಿ ಸಂಸ್ಕಾರ ಮಾಡಿ, ಮರಣೋನ್ಮುಖನಾದವನ ಆ ಭೂಮಿಯ ಮೇಲೆ ಮಲಗಿಸಬೇಕು. ಅಂತರಿಕ್ಷವ ವರ್ಜಿಸಬೇಕು – ಅಂತರಿಕ್ಷದಲ್ಲಿ ಹೇಳಿರೆ ಎತ್ತರದಲ್ಲಿ/ ಮಂಚಲ್ಲಿ ಮಲಗಿಸಲಾಗಿ 


ಬ್ರಹ್ಮಾ ವಿಷ್ಣುಶ್ಚ ರುದ್ರಶ್ಚ ಸರ್ವೇ ದೇವಾ ಹುತಾಶನಃ ।

ಮಂಡಲೋಪರಿ ತಿಷ್ಠಂತಿ ತಸ್ಮಾತ್ಕುರ್ವೀತ ಮಂಡಲಮ್ ॥೧೭॥


ಬ್ರಹ್ಮ, ವಿಷ್ಣು, ರುದ್ರ ಈ ಎಲ್ಲ ದೇವರುಗೊ, ಯಜ್ಞೇಶ್ವರನೂ ಕೂಡ ಮಂಡಲದ  ಮೇಗೆ ನೆಲೆಸಿಗೊಂಡಿರುತ್ತರೆ ಹಾಗಾಗಿ ಮಂಡಲವನ್ನು ಹಾಕಬೇಕು 


ಸರ್ವತ್ರ ವಸುಧಾ ಪೂತಾ ಲೇಪೋ ಯತ್ರ ನ ವಿದ್ಯತೇ ।

ಯತ್ರ ಲೇಪಃ ಕೃತಸ್ತತ್ರ ಪುನರ್ಲೇಪೇನ ಶುಧ್ಯತಿ ॥೧೮॥


ಯಾವ ಭೂಮಿ (ಜಾಗೆ/ಸ್ಥಳ) ಲೇಪರಹಿತವಾಗಿದ್ದೋ (ಮಲ ಮೂತ್ರಾದಿ ಕೊಳಕ್ಕುರಹಿತವಾಗಿದ್ದೋ) ಅದು ಪವಿತ್ರವಾಗಿರುತ್ತು. ಎಲ್ಲಿ ಮೊದಲೇ ಗೋಮಯ ಲೇಪನವಾಗಿದ್ದೋ ಅಲ್ಲಿ ಪುನಃ ಗೋಮಯ ಬಳುದರೆ ಶುದ್ಧವಾಗುತ್ತದೆ 


ರಾಕ್ಷಸಾಶ್ಚ ಪಿಶಾಚಾಶ್ಚ ಭೂತಾಃ ಪ್ರೇತಾ ಯಮಾನುಗಾಃ ।

ಅಲಿಪ್ತದೇಶೇ ಖಟ್ವಾಯಾಮಂತರಿಕ್ಷೇ ವಿಶಂತಿ ಚ ॥೧೯॥


ರಾಕ್ಷಸರು, ಪಿಶಾಚಿಗಳು  ಭೂತಗಳು ಪ್ರೇತಗಳು ಮತ್ತೆ ಯಮದೂತರು ನೆಲಸಾರಿಸಿದ ಜಾಗೆಯ, ಭೂಮಿಯಿಂದ ಎತ್ತರಲ್ಲಿ ಮಂಚವ ಪ್ರವೇಶಿಸುತ್ತವೆ 


ಅತೋsಗ್ನಿ ಹೋತ್ರಂ ಶ್ರಾದ್ಧಂ ಚ ಬ್ರಹ್ಮಭೋಜ್ಯಂ ಸುರಾರ್ಜನಮ್ ।

ಮಂಡಲೇನ ವಿನಾ ಭೂಮ್ಯಾ ಮಾತುರಂ ನೈವ ಕಾರಯೇತ್ ॥೨೦॥


ಹಾಗಾಗಿ ಅತ್ನಿಹೋತ್ರ, ಶ್ರಾದ್ಧ, ಬ್ರಾಹ್ಮಣ ಭೋಜನ ಮತ್ತೆ ದೇವತಾಪೂಜೆ ಇವುಗಳ ಮಂಡಲ  ಮಾಡದೆ ಇದ್ದ ಭೂಮಿಯ ಮೇಲೆ ಮಾದಿದ ಮರಣ ಹೊಂದಿದವನ ಅಂತಹ ನೆಲದಲಿ ಮಡುಗಿದರೆ 


ಲಿಪ್ತಭೂಮ್ಯಾಮತಃ ಕೃತ್ವಾ ಸ್ವರ್ಣರತ್ನಂ ಮುಖೇ ಕ್ಷಿಪೇತ್ ।

ವಿಷ್ಣೋಃ ಪಾದೋದಕಂ ದದ್ಯಾಚ್ಛಾಲಗ್ರಾಮಸ್ವರೂಪಿಣಃ ॥೨೧॥


ಹಾಗಾಗಿ ಲೇಪಿಸಲ್ಪಟ್ಟ ಭೂಮಿಯ ಮೇಲೆ ಅವನ ಮಲಗಿಸಿ  ಅವನ ತುಟಿಗಳ ಮೇಲೆ ಬಂಗಾರವನ್ನೂ, ರತ್ನವನ್ನಗಲಿ ಇಡಬೇಕು , ಶಾಲಗ್ರಾಮ ಸ್ವರೂಪವಾದ ವಿಷ್ಣುವಿನ ಪಾದೋದಕವ ಬಿಡಬೇಕು.


ಶಾಲಗ್ರಾಮಶಿಲಾತೋಯಂ ಯಃ ಪಿಬೇದ್ಬಿಂದು ಮಾತ್ರಕಮ್ ।

ಸ ಸರ್ವಪಾಪನಿರ್ಮುಕ್ತೋ ವೈಕುಂಠಭುವನಂ ವ್ರಜೇತ್ ॥೨೨॥


ಶಾಲಗ್ರಾಮ ಶಿಲೆಯ ನೀರ ಯಾವಾತನು  ಒಂದು ಬಿಂದುವಾದರೂ ಕುಡಿಯುತ್ತನೋ ಅವನ  ಎಲ್ಲ ಪಾಪಗಳಿಂದ ಮುಕ್ತನಾಗಿ ವೈಕುಂಠಕ್ಕೆ ಹೋವುತ್ತನೆ .


ತತೋ ಗಂಗಾಜಲಂ ದದ್ಯಾನ್ಮಹಾಪಾತಕನಾಶನಮ್ ।

ಸರ್ವತೀರ್ಥಕೃತಸ್ನಾನದಾನಪುಣ್ಯಫಲಪ್ರದಮ್ ॥೨೩॥


ಮತ್ತೆ ಮಹಾಪಾಪಗಳ ನಾಶಮಾಡುವಂತಹ ಗಂಗಾಜಲವ ಕೊಡಬೇಕು. ಅದು ಎಲ್ಲ ತೀರ್ಥಗಳಲ್ಲಿ ಮಾಡಿದ ಸ್ನಾನ, ದಾನಗಳ ಪುಣ್ಯಫಲ  ಕೊಡುವಂತಾದ್ದು.


ಚಾಂದ್ರಾಯಣಂ ಚರೇದ್ಯಸ್ತು ಸಹಸ್ತಂ ಕಾಶಶೋಧನಮ್ ।

ಪಿಬೇದ್ಯಶ್ಚೈವ ಗಂಗಾಂಭಃ ಸಮೌ ಸ್ಯಾತಾಮುಭಾವಪಿ ॥೨೪॥


ಶರೀರವ ಶುದ್ಧಿಮಾಡುವ ಒಂದು ಸಾವಿರ ಚಾಂದ್ರಾಯಣ ವ್ರತವ ಆಚರಿಸುವವ  ಮತ್ತು ಗಂಗಾಜಲವ ಕುಡಿದವರು ಇಬ್ಬರು ಸಮಾನ ಎಂದು ಪರಿಗಣಿಸಲ್ಪಟ್ಟಿದು.


ಅಗ್ನಿಂ ಪ್ರಾಪ್ಯ ಯಥಾ ತಾರ್ಕ್ಷ್ಯ ತೂಲರಾಶಿರ್ವಿನಶ್ಯತಿ ।

ತಥಾ ಗಂಗಾಂಬುಪಾನೇನ ಪಾತಕಂ ಭಸ್ಮಸಾದ್ಭವೇತ್ ॥೨೫॥


ಹೇ ಗರುಡ!, ಏವ ರೀತಿ ಹತ್ತಿಯ ರಾಶಿ ಕಿಚ್ಚಿಗೆ ಸಿಕ್ಕಿ ನಾಶವಾಗುವವೋ , ಅದೇ ರೀತಿ ಗಂಗಾಜಲವ ಕುಡಿವದರಿಂದ ಪಾಪಗಳು  ಭಸ್ಮೀಭೂತವಾಗುವವು 


ಯಸ್ತು ಸೂರ್ಯಾಂಶುಸಂತಪ್ತಂ ಗಾಂಗಂ ಯಃ ಸಲಿಲಂ ಪಿಬೇತ್ ।

ಸ ಸರ್ವಯೋನಿನಿರ್ಮುಕ್ತಃ ಪ್ರಯಾತಿ ಸದನಂ ಹರೇಃ ॥೨೬॥


ಯಾವಾತನು  ಸೂರ್ಯನ ಕಿರಣಗಳಿಂದ ತಪಿಸಲ್ಪಟ್ಟ ಗಂಗಾಜಲವ ಕುಡಿಯುತ್ತನೋ, ಅವ  ಎಲ್ಲ ಜನ್ಮಗಳಿಂದಲೂ ಬಿಡುಗಡೆಹೊಂದಿ ಶ್ರೀ ಹರಿಯ ನಿವಾಸಕ್ಕೆ ಹೋಗುತ್ತನೆ 


ನದ್ಯೋ ಜಲಾವಗಾಹೇನ ಪಾವಯಂತೀತರಾ ಜನಾನ್ ।

ದರ್ಶನಾತ್ಸ್ಪರ್ಶನಾತ್ಪಾನಾತ್ತಥಾ ಗಂಗೇತಿ ಕೀರ್ತನಾತ್ ॥೨೭॥


ಇತರ ನದಿಗಳಿಂದ ಸ್ನಾನ ಮಾಡಿದರಿಂದ ಜನರ ಶುದ್ಧರಾಗುತ್ತಾರೋ ಆದರೆ, ಗಂಗಾನದಿಯ ದರ್ಶನ, ಸ್ಪರ್ಶನ, ಪಾನಗಳಿಂದ ಮತ್ತು ಸಂಕೀರ್ತನೆಯಿಂದ ಪವಿತ್ರವಾಗುತ್ತಾರೆ 


ಪುನಾತ್ಯಪುಣ್ಯಾನ್ಪುರುಷಾನ್ ಶತಶೋsಥ ಸಹಸ್ರಶಃ ।

ಗಂಗಾ ತಸ್ಮಾತ್ಪಿಬೇತ್ತಸ್ಯಾ ಜಲಂ ಸಂಸಾರತಾರಕಮ್ ॥೨೮॥


ನೂರಾರು, ಸಾವಿರಾರು ಪುಣ್ಯಹೀನ ಪುರುಷರ ಗಂಗಾಜಲವು ಪವಿತ್ರರನ್ನಗಿಸುತ್ತದೆ  ಹಾಗಾಗಿ ಈ ಸಂಸಾರವ ದಾಟಿಸುವಂತಹ ಗಂಗಾಜಲವ ಕುಡಿಯಬೇಕು.


ಗಂಗಾ ಗಂಗೇತಿ ಯೋ ಬ್ರೂಯಾತ್ಪ್ರಾಣೈಃ ಕಂಠಗತೈರಪಿ ।

ಮೃತೋ ವಿಷ್ಣುಪುರಂ ಯಾತಿ ನ ಪುನರ್ಜಾಯತೇ ಭುವಿ ॥೨೯॥


ಯಾವಾತನ ಪ್ರಾಣ ಕೊರಳಿಗೆ ಬಂದಗ ಗಂಗಾ-ಗಂಗಾ’ ಎಂದು ಹೇಳುತ್ತನೋ, ಅವ  ಮರಣಾನಂತ್ರ ವಿಷ್ಣುಪುರಕ್ಕೆ ಹೋಗುತ್ತನೆ. ಭೂಮಿಲಿ ಮತ್ತೆ ಹುಟ್ಟುವುದಿಲ್ಲ


ಉತ್ಕ್ರಾಮದ್ಭಿಶ್ಚ ಯಃ ಪ್ರಾಣೈಃ ಪುರುಷಃ ಶ್ರದ್ಧಯಾನ್ವಿತಃ ।

ಚಿಂತಯೇನ್ಮನಸಾ ಗಂಗಾಂ ಸೋsಪಿ ಯಾತಿ ಪರಾಂ ಗತಿಮ್ ॥೩೦॥


ಯಾವಾತನು  ಮನುಷ್ಯ ಪ್ರಾಣ ಹೋಗುವಾಗ  ಶ್ರದ್ಧೆಯಿಂದ ಮನಸ್ಸಿಲ್ಲಿಯೇ ಗಂಗೆಯ ಸ್ಮರಣೆ ಮಾಡುತ್ತನೋ ಅವನೂ ಪರಮಗತಿಯ ಹೊಂದುತ್ತನೆ 

.

ಅತೋ ದ್ಯಾಯೇನ್ನಮೇದ್ಗಂಗಾಂ ಸಂಸ್ಮರೇತ್ತಜ್ಜಲಂ ಪಿಬೇತ್ ।

ತತೋ ಭಾಗವತಂ ಕಿಂಚಿಚ್ಛೃಣುಯಾನ್ಮೋಕ್ಷದಾಯಕಮ್ ॥೩೧॥


ಹಾಗಾಗಿ ಗಂಗೆಯ ಧ್ಯಾನಿಸಬೇಕು. ನಮಸ್ಕರಿಸಬೇಕು. ನಾಮಸ್ಮರಣೆ ಮಾಡಬೇಕು ಮತ್ತು ಅದರ ಜಲವ ಕುಡಿಯಬೇಕು. ಮತ್ತೆ ಮೋಕ್ಷದಾಯಕವಾದ ಭಾಗವತವ ರಜಾರು ಕೇಳಬೇಕು.


ಶ್ಲೋಕಂ ಶ್ಲೋಕಾರ್ಧಪಾದಂ ವಾ ಯೋsಂತೇ ಭಾಗವತಂ ಪಠೇತ್ ।

ನ ತಸ್ಯ ಪುನರಾವೃತ್ತಿ ರ್ಬ್ರಹ್ಮಲೋಕಾತ್ಕದಾಚನ ॥೩೨॥


ಯಾರು ತನ್ನ ಅಂತ್ಯಕಾಲಲ್ಲಿ ಭಾಗವತದ ಒಂದು ಶ್ಲೋಕವನ್ನಾಗಲಿ, ಅರ್ಧಶ್ಲೋಕವನ್ನಾಗಲೀ ಅಥವಾ ನಾಲ್ಕನೇ ಒಂದು ಭಾಗ ಶ್ಲೋಕವನ್ನಾಗಲೀ ಪಠಿಸುತ್ತನೋ ಅವನು

 ಬ್ರಹ್ಮಲೋಕದಿಂದ ಮತ್ತೆ ಎಂದಿಂಗೂ ಹಿಂದಿರಿಗಿ ಬರುವುದಿಲ್ಲ 

.

ವೇದೋಪನಿಷದಾಂ ಪಾಠಾಚ್ಛಿವ ವಿಷ್ಣುಸ್ತವಾದಪಿ ।

ಬ್ರಾಹ್ಮಣಕ್ಷತ್ರಿಯ ವಿಶಾಂ ಮರಣಂ ಮುಕ್ತಿದಾಯಕಮ್ ॥೩೩॥


ಬ್ರಾಹ್ಮಣ ಕ್ಷತ್ರಿಯ ವೈಶ್ಯರಿಗೆ ಮರಣಕಾಲಲ್ಲಿ ವೇದೋಪನಿಷತ್ತು (ಭಗವದ್ಗೀತೆಯ) ಪಠಣ, ಶಿವ ವಿಷ್ಣು ಸ್ತುತಿ ಮುಕ್ತಿದಾಯಕವಾಗಿದ್ದು.


ಪ್ರಾಣಪ್ರಯಾಣಸಮಯೇ ಕುರ್ಯಾದನಶನಂ ಖಗ ।

ದದ್ಯಾದಾತುರಸಂನ್ಯಾಸಂ ವಿರಕ್ತಸ್ಯ ದ್ವಿಜನ್ಮನಃ ॥೩೪॥


ಹೇ ಖಗನೇ! ಪ್ರಾಣ ಹೊರಟು ಹೋಗುವ ಸಮಯಲ್ಲಿ ಉಪವಾಸವ ಮಾಡಬೇಕು. ಮನಸಾ ವಿರಕ್ತನಾದ ದ್ವಿಜನಿಗೆ ಆತುರ ಸಂನ್ಯಾಸವ ಕೊಡಬೇಕು.


ಸಂನ್ಯಸ್ತಮಿತಿ ಯೋ ಬ್ರೂಯಾತ್ಪ್ರಾಣೈಃ ಕಂಠಗತ್ರೈರಪಿ ।

ಮೃತೋ ವಿಷ್ಣುಪುರಂ ಯಾತಿ ನ ಪುನರ್ಜಾಯತೇ ಭುವಿ ॥೩೫॥


ಪ್ರಾಣ ಕೊರಳಿಗೆ ಬಂದರೂ ‘ನಾನು ಸಂನ್ಯಾಸ ತೆಕ್ಕೊಂಡಿದೆ’ ಎಂದು ಯಾವಾತನು ಹೇಳುತ್ತನೋ, ಅವ ಮರಣಹೊಂದಿ 

ವಿಷ್ಣುಪುರಕ್ಕೆ ಹೋಗುತ್ತನೆ  ಭೂಮಿಲಿ ಮತ್ತೆ ಹುಟ್ಟುವುದಿಲ್ಲ 


ಏವಂ ಜಾತವಿಧಾನಸ್ಯ ಧಾರ್ಮಿಕಸ್ಯ ತದಾ ಖಗ ।

ಊರ್ಧ್ವಚ್ಛಿದ್ರೇಣ ಗಚ್ಛಂತಿ ಪ್ರಾಣಾಸ್ತಸ್ಯ ಸುಖೇನ ಹಿ ॥೩೬॥


ಹೇ ಪಕ್ಷಿ!, ಈ ರೀತಿ ವಿಧಿಪೂರ್ವಕವಾಗಿ ಧಾರ್ಮಿಕ ಕ್ರಿಯೆಗಳನ್ನು ಮಾಡಿದರೆ ಅವಾಗ ಅವನ ಪ್ರಾಣವು ಊರ್ಧ್ವ ಮಾರ್ಗವಾಗಿ ಬ್ರಹ್ಮರಂಧ್ರಂದ ಸುಖವಾಗಿ ಹೊರ ಹೋಗುವುದು 


ಮುಖಂ ಚ ಚಕ್ಷುಷೀ ನಾಸೇ ಕರೌ ದ್ವಾರಾಣಿ ಸಪ್ತ ಚ ।

ಏಭ್ಯಃ ಸುಕೃತಿನೋ ಯಾಂತಿ ಯೋಗಿನಸ್ತಾಲುರಂಧ್ರತಃ ॥೩೭॥


ಬಾಯಿ, ಕಣ್ಣು, ಮೂಗಿನ ಹೊಳ್ಳೆ, ಕಿವಿ  – ಇವ್ವೇಳು ಸಪ್ತದ್ವಾರಗಳು . ಈ ದ್ವಾರಗಳಿಂದ ಸುಕೃತಿಗಳ ಪ್ರಾಣವು ಹೋಗುತ್ತದೆ  ಯೋಗಿಯ ಪ್ರಾಣವು ತಾಲುರಂಧ್ರದ (ಗಂಟಲ ಮೇಲ್ಬಾಗ) ಮೂಲಕ ಹೋಗುತ್ತದೆ 


ಅಪಾನಾನ್ಮಿಲಿತಪ್ರಾಣೌ ಯದಾ ಹಿ ಭವತಃ ಪೃಥಕ್ ।

ಸೂಕ್ಷ್ಮೀಭೂತ್ವಾ ತದಾ ವಾಯುರ್ವಿನಿಷ್ಕ್ರಾಮತಿ ಪುತ್ತಲಾತ್ ॥೩೮॥


ಅಪಾನದ ಒಟ್ಟಿಗೆ ಮಿಲಿತವಾಗಿದ್ದ ಪ್ರಾಣವು ಯಾವಾಗ ಬೇರೆ ಆಗುತ್ತವೋ , ಆಗ ಪ್ರಾಣವಾಯುವು ಈ ಜಡ ಶರೀರದ ಸೂಕ್ಷ್ಮ ರೂಪಲ್ಲಿ ನಿರ್ಗಮಿಸುತ್ತದೆ 


ಶರೀರಂ ಪತತೇ ಪಶ್ಚಾನ್ನಿರ್ಗತೇ ಮರುತೀಶ್ವರೇ ।

ಕಾಲಾಹತಂ ಪತತ್ಯೇವಂ ನಿರಾಧಾರೋ ಯಥಾ ದ್ರುಮಃ ॥೩೯॥


ಮುಖ್ಯ ಪ್ರಾಣವು ನಿರ್ಗಮಿಸಿದ ಮತ್ತೆ ಶರೀರ ಕಾಲವಶವಾಗಿ, ನಿರಾಧಾರವಾಗಿ ಮರದ ಹಾಗೆ ಬಿದ್ದು ಹೋಗುತ್ತದೆ 


ನಿರ್ವಿಚೇಷ್ಟಂ ಶರೀರಂ ಪ್ರಾಣೈರ್ಮುಕ್ತಂ ಜುಗುಪ್ಸಿತಮ್ ।

ಅಸ್ಪೃಶ್ಯಂ ಜಾಯತೇ ಸದ್ಯೇ ದುರ್ಗಂಧಂ ಸರ್ವನಿಂದಿತಮ್ ॥೪೦॥


ಪ್ರಾಣವು ಹೊರಟು ಹೋದಮಲೆ  ಶರೀರ ಚೇತನಾರಹಿತವಾಗಿ, ಅಸಹ್ಯವಾಗಿ, ಮುತ್ತಲು  ಯೋಗ್ಯವಲ್ಲದುದಾಗಿ, 

ದುರ್ಗಂಧಯುಕ್ತವಾಗಿ ಎಲ್ಲರಿಂದಲೂ ನಿಂದಿಸಲ್ಪಡುತ್ತದೆ .

ತ್ರಿಧಾವಸ್ಥಾ ಶರೀರಸ್ಯ ಕೃಮಿವಿಡ್ಭಸ್ಮರೂಪತಃ ।

ಕಿಂ ಗರ್ವಃ ಕ್ರಿಯತೇ ದೇಹೇ ಕ್ಷಣವಿಧ್ವಂಸಿಭಿರ್ನರೈಃ ॥೪೧॥


ಕ್ರಿಮಿ, ಮಲ, ಭಸ್ಮ ಇವು ಮೂರು ರೂಪಗಳಲ್ಲಿ ಶರೀರದ ಅವಸ್ಥೆಗಳಿಗೆ  ಒಂದು ಕ್ಷಣಲ್ಲಿ ಧ್ವಂಸವಾಗುವ ಶರೀರದ ಮೇಲೆ ಮನುಷ್ಯರು ಎಂತಕೆ ಗರ್ವ ಪಡುತ್ತರೋ 


ಪೃಥಿವ್ಯಾಂ ಲೀಯತೇ ಪೃಥ್ವೀ ಆಪಶ್ಚೈವ ತಥಾsಪ್ಸು ಚ ।

ತೇಜಸ್ತೇಜಸಿ ಲೀಯೇತ ಸಮೀರಸ್ತು ಸಮೀರಣೇ ॥೪೨॥


ಪೃಥ್ವಿಲಿ ಪೃಥ್ವಿ, ನೀರಿಲ್ಲಿ ನೀರು, ತೇಜಸ್ಸಿಲ್ಲಿ ತೇಜಸ್ಸು ಲೀನ ಆಗುತ್ತದೆ  ಮತ್ತೆ ವಾಯುವಿಲ್ಲಿ ವಾಯು ಲೀನವಾಗುತ್ತದೆ .

ಆಕಾಶಶ್ಚ ತಥಾಕಾಶೇ ಸರ್ವವ್ಯಾಪೀ ಚ ಶಂಕರಃ ।

ನಿತ್ಯಮುಕ್ತೋ ಜಗತ್ಸಾಕ್ಷೀ ಆತ್ಮಾ ದೇಹೇಷ್ವಜೋಮರಃ ॥೪೩॥


ಹಾಗೇ ಆಕಾಶಲ್ಲಿ ಆಕಾಶವು ಲೀನ ಆಗುತ್ತದೆ  ಆದರೆ ಈ ಆತ್ಮ ಸರ್ವವ್ಯಾಪಿ, ಚಿದಾನಂದದಾಯಕ, ನಿತ್ಯಮುಕ್ತ, ಜಗತ್ತಿಗೆ ಸಾಕ್ಷಿ ಮತ್ತು ಹುಟ್ಟು ಸಾವುಗಳು ಇಲ್ಲದ್ದು.


ಸರ್ವೇಂದ್ರಿಯಯುತೋ ಜೀವಃ ಶಬ್ದಾದಿವಿಷಯೈರ್ವೃತಃ ।

ಕಾಮರಾಗಾದಿಭಿರ್ಯುಕ್ತಃ ಕರ್ಮಕೋಶಸಮನ್ವಿತಃ ॥೪೪॥


ಜೀವ  ಸರ್ವೇಂದ್ರಿಯಗಳಿಂದ ಕೂಡಿ, ಶಬ್ದ ಮೊದಲಾದಿ ವಿಷಯಗಳಿಂದ ಸುತ್ತುವರ್ಕೊಂಡು ಕಾಮರಾಗಾದಿಗಳಿಂದ ತುಂಬಿ, ಕರ್ಮಗಳ ಕೋಶದಿಂದ ಒಡಗೂಡಿ

ಪುಣ್ಯವಾಸನಯಾ ಯುಕ್ತೋ ನಿರ್ಮಿತೇ ಸ್ವೇನ ಕರ್ಮಣಾ ।

ಸ ಪ್ರವಿಶ್ಯ ನವೇ ದೇಹೇ ಗೃಹೇ ದಗ್ಧೇ ಯಥಾ ಗೃಹೀ ॥೪೫॥


ಪುಣ್ಯವಾಸೆನೆಯಿಂದ ಕೂಡಿ ತನ್ನ ಮನೆ ಸುಟ್ಟುಹೋದ ಗೃಹಸ್ಥ ಮಾಡುತ್ತಾನೆ  ತನ್ನ ಕರ್ಮಗಳಿಗೆ ಆನುಸಾರವಾಗಿ 

ನಿರ್ಮಿತವಾದ ಹೊಸ ದೇಹವ ಪ್ರವೇಶಿಸುತ್ತನೆ .


ತದಾ ವಿಮಾನಮಾದಾಯ ಕಿಂಕಿಣೀ ಜಾಲಮಾಲಿ ಯತ್ ।

ಆಯಾಂತಿ ದೇವದೂಶ್ಚ ಲಸಚ್ಚಾಮರಶೋಭಿತಾಃ ॥೪೬॥


ಅಷ್ಟರಲ್ಲಿ ಕಿಂಕಿಣಿಯ ಜಾಳಿಗೆಗಳ ಮಾಲೆಗಳಿಂದ ಕೂಡಿದ ವಿಮಾನದಲ್ಲಿ ಕುಡಿಸಿಕೊಂಡು, ಹೊಳವ ಚಾಮರಗಳಿಂದ ಶೋಭಿತರಾಗಿ ದೇವದೂತರು ಬರುತ್ತಾರೆ 


ದರ್ಮತತ್ತ್ವವಿದಃ ಪ್ರಾಜ್ಞಾಃ ಸದಾ ಧಾರ್ಮಿಕವಲ್ಲಭಾಃ ।

ತದೈನಂ ಕೃತಕೃತ್ಯಂ ಸ್ವರ್ವಿಮಾನೇನ ನಯಂತಿ ತೇ ॥೪೭॥


ಧರ್ಮತತ್ವಗಳ ತಿಳಿದಿರುವ  ಪಂಡಿತರಾದ ಮತ್ತು ಯಾವತ್ತೂ ಧಾರ್ಮಿಕವ ಪ್ರೀತುಸುವವರು ಕೃತಕೃತ್ಯನಾದ ಅವನ ವಿಮಾನಲ್ಲಿ ಸ್ವರ್ಗಕ್ಕೆ ಕರಕ್ಕೊಂಡು ಹೋಗುತ್ತಾರೆ

ಸುದಿವ್ಯದೇಹೋ ವಿರಜಾಂಬರಸ್ರಕ್ಸುವರ್ಣರತ್ನಾಭರಣೈರುಪೇತಃ ।

ದಾನಪ್ರಭಾವಾತ್ಸ ಮಹಾನುಭಾವಃ ಪ್ರಾಪ್ನೋತಿ ನಾಕಂ ಸುವಪೂಜ್ಯಮಾನಃ ॥೪೮॥


ದಿವ್ಯವಾದ ದೇಹವ ಪಡೆದು, ಶುಭ್ರವಾದ ವಸ್ತ್ರ ಮತ್ತೆ ಮಾಲೆಗಳ ಧರಿಸಿ, ಸುವರ್ಣ ಮತ್ತೆ ರತ್ನದಿ  ಆಭರಣಗಳಿಂದ ಕೂಡಿದವರಾಗಿ, ದಾನದ ಪ್ರಭಾವದ ಆ ಮಹಾನುಭಾವ ಸ್ವರ್ಗವ ಸೇರಿ, ಅಲ್ಲಿ ದೇವತೆಗಳಿಂದ ಗೌರವಿಸಲ್ಪಡುತ್ತನೆ 

 

ಇತಿ ಶ್ರೀಗರುಡಪುರಾಣೇ ಸಾರೋದ್ಧಾರೇ ಮ್ರಿಯವಾಣ ಕೃತ್ಯ ನಿರೂಪಣಂ ನಾಮ ನವಮೋsಧ್ಯಾಯಃ ॥


ಇಲ್ಲಿಗೆ ಗರುಡಪುರಾಣಲ್ಲಿ ಸಕಲ ಶಾಸ್ತ್ರಗಳ ಸಾರವಾದ ‘ಸಾರೋದ್ಧಾರ’ ವಿಭಾಗಲ್ಲಿ ‘ಮರಣಕಾಲದ ವಿಧಿಗಳ ನಿರೂಪಣೆ’ ಹೇಳುವ ಒಂಬತ್ತನೇ ಅಧ್ಯಾಯ ಮುಗಿದದ್ದೂ 


No comments:

ನರನಾಡಿಗಳು

*ನರನಾಡಿಗಳು ಎಂದರೇನು ?* *ಇವುಗಳ ಮಹತ್ವ ಏನು ? ದೇಹದಲ್ಲಿ ಇವುಗಳು ಪ್ರತ್ಯೇಕವಾಗಿ ಇರುತ್ತವೆ  *ನರ(nerves) -* *ಮೆದುಳು,ಮೆದುಳು* *ಬಳ್ಳಿ(ಬೆನ್ನು ಹುರಿ) ಮತ್ತು* *ಅ...