ಗ ಪು - 4 – ಭಾಗ 1
ನರಕಪ್ರದಪಾಪಚಿಹ್ನನಿರೂಪಣಮ್ ನರಕಗಳ ಉಂಟುಮಾಡುವ ಪಾಪಚಿಹ್ನೆಗಳ ನಿರೂಪಣೆ
ಗರುಡ ಉವಾಚ
ಕೈರ್ಗಚ್ಛಂತಿ ಮಹಾಮಾರ್ಗೇ ವೈತರಣ್ಯಾಂ ಪತಂತಿ ಕೈಃ ।
ಕೈಃ ಪಾಪೈರ್ನರಕೇ ಯಾಂತಿ ತನ್ಮೇ ಕಥಯ ಕೇಶವ ॥೦೧॥
ಗರುಡ ಹೇಳಿದ – “ಏ ಕೇಶವನೇ!, ಪಾಪಿಗಳು ಯಾವಕಾರಣದಿಂದ (ಯಾವ ಪಾಪದ ಕಾರಣದಿಂದ ಲಾಗಿ)ಹೋಗುವವು ಯಾವುದರಿಂದಲಾಗಿ ವೈತರಣೀ ನದಿಲಿ ಬೀಳುತ್ತವೆ . ಯಾವ ಪಾಪಗಳಿಂದಲಾಗಿ ನರಕಕ್ಕೆ ಹೋಗುವವು ಎನಗೆ ಹೇಳು.”
ಶ್ರೀಭಗವಾನ್ ಉವಾಚ
ಸದೈವಾಕರ್ಮನಿರತಾಃ ಶುಭಕರ್ಮಪರಾಙ್ಮುಖಾಃ।ನರಕಾನ್ನರಕಂ ಯಾಂತಿ ದುಃಖಾದ್ದುಃಖಂ ಭಯಾದ್ಭಯಮ್ ॥೦೨॥
ಭಗವಂತ ಹೇಳಿದ°- ಏವತ್ತೂ ಅಶುಭಕರ್ಮಗಳಲ್ಲೇ ನಿರತರಾಗಿರುವ , ಶುಭಕರ್ಮಗಳಿಂದ ವಿಮುಖರಾಗಿರೋರು ಒಂದು ನರಕದ ಇನ್ನೊಂದು ನರಕಕ್ಕೂ, ಒಂದು ದುಃಖದಿಂದ ಇನ್ನೊಂದು ದುಃಖಕ್ಕೂ, ಒಂದು ಭಯದಿಂದ ಇನ್ನೊಂದು ಭಯಕ್ಕೂ ಹೋಗುವವು
ಧರ್ಮರಾಜಪುರೇ ಯಾಂತಿ ತ್ರಿಭಿರ್ದ್ವಾರೈಸ್ತು ಧಾರ್ಮಿಕಾಃ ।
ಪಾಪಸ್ತು ದಕ್ಷಿಣದ್ವಾರಮಾರ್ಗೇಣೈವ ವ್ರಜಂತಿ ತತ್ ॥೦೩॥
ಧಾರ್ಮಿಕರು ಧರ್ಮರಾಜನ ಪುರಕ್ಕೆ ಮೂರು ದ್ವಾರಗಳಿಂದ ಹೋಗುವರು ಪಾಪಿಗಳು ದಕ್ಷಿಣದ್ವಾರದ ಮಾರ್ಗದಲೇ ಹೋಗುವವು.
ಅಸ್ಮಿನ್ನೇವ ಮಹಾದುಃಖೇ ಮಾರ್ಗೇ ವೈತರಣೀ ನದೀ ।
ತತ್ರ ಯೇ ಪಾಪಿನೋ ಯಾಂತಿ ತಾನಹಂ ಕಥಯಾಮಿ ತೇ ॥೦೪॥
ಮಹಾದುಃಖಕರವಾದ ವೈತರಣೀ ನದಿ ಇದೇ ಮಾರ್ಗಲ್ಲಿ ಯಾವ ಪಾಪಿಗಳು ಹೋಗುತ್ತವೋ ಅದರ ಬಗ್ಗೆ ನಿನಗೆ ಹೇಳುತ್ತೆನೆ
ಬ್ರಹ್ಮಘ್ನಾಶ್ಚ ಸುರಾಪಾಶ್ಚ ಗೋಘ್ನಾ ವಾ ಬಾಲಘಾತಕಾಃ ।
ಸ್ತ್ರೀಘಾತೀ ಗರ್ಭಪಾತೀ ಚ ಯೇ ಚ ಪ್ರಚ್ಛನ್ನಪಾಪಿನಃ ॥೦೫॥
ಬ್ರಹ್ಮಹತ್ಯೆ ಮಾಡುವವು, ಸುರಾಪಾನ ಮಾಡುವವು, ಗೋಹತ್ಯೆ ಮಾಡುವವು, ಶಿಶುಹತ್ಯೆ ಮಾಡುವವು, ಸ್ತ್ರೀಹತ್ಯೆ ಮಾಡುವವು, ಗರ್ಭಪಾತ ಮಾಡುಸುವವು ಮತ್ತೆ ಗುಟ್ಟಿನಲ್ಲಿ ಪಾಪಗಳ ಮಾಡುವವು,
ಯೇ ಹರಂತಿ ಗುರೋರ್ದ್ರವ್ಯಂ ದೇವದ್ರವ್ಯಂ ದ್ವಿಜಸ್ಯ ವಾ ।
ಸ್ತ್ರೀದ್ರವ್ಯಹಾರಿಣೋ ಯೇ ಚ ಬಾಲದ್ರವ್ಯಹರಾಶ್ಚ ಯೇ ॥೦೬॥
ಯಾರು ಗುರುಗಳ ದ್ರವ್ಯವ (ವಸ್ತು/ಧನ/ಸಂಪತ್ತು) ಅಥವಾ ದೇವರ ಪೈಸೆಯ (ವಸ್ತು/ಸಂಪತ್ತು/ದ್ರವ್ಯ) ಅಥವಾ ದ್ವಿಜರ ಪೈಸೆಯ ಅಪಹರುಸುತ್ತಾ ರೋ , ಯಾರು ಹೆಣ್ಣುಮ್ಮಕ್ಕಳ (ಕೂಸುಗಳ) ಧನವ ಅಪಹರಿಸುತ್ತಾರೋ , ಯಾರು ಮಕ್ಕಳ ಪೈಸೆಯ ಅಪಹರಿಸುತ್ತರೋ ,
ಯೇ ಋಣಂ ನ ಪ್ರಯಚ್ಛಂತಿ ಯೇ ವೈ ನ್ಯಾಸಾಪಹಾರಕಾಃ ।
ವಿಶ್ವಾಸಘಾತಕಾ ಯೇ ಚ ಸವಿಷಾನ್ನೇನ ಮಾರಕಾಃ ॥೦೭॥
ಯಾರು ಇನ್ನೊಬ್ಬರ ಹತ್ತಿರ ತೆಗೆದು ಕೋಂಡ ಸಾಲವ ತೀರುಸುವುದಿಲ್ಲಯೋ, ಯಾರು ಇನ್ನೊಬ್ಬರು ಒತ್ತೆ ಮಡಿಗಿದ್ದರ ಅಪಹರುಸುತ್ತರೋ , yaaರು ವಿಶ್ವಾಸಘಾತಕರೋ, ಮತ್ತೆ ಯಾ ರು ಚಾರುವಿನಲ್ಲಿ ವಿಷ ಹಾಕಿ ಕೊಲ್ಲುತ್ತರೋ
ದೋಷಗ್ರಾಹೀ ಗುಣಾಶ್ಲಾಘೀ ಗುಣವತ್ಸು ಸಮತ್ಸರಾಃ ।
ನೀಚಾನುರಾಗಿಣೋ ಮೂಢಾಃ ಸತ್ಸಂಗತಿಪರಾಙ್ಮುಖಾಃ ॥೦೮॥
ಯಾರು ಪರರ ದೋಷವ ಗ್ರಹಣಮಾಡುತ್ತಾರೋ ಉತ್ತಮ ಗುಣಗಳ ಪ್ರಶಂಸಿಸುವುದಿಲ್ಲವೊ ಗುಣವಂತರಲ್ಲಿ ಮತ್ಸರಪಡುತ್ತರೋ , ನೀಚರ ಪ್ರೀತಿಸುತ್ತರು , ಮೂಢರು, ಸತ್ಸಂಗಂದ ವಿಮುಖರಾದೋರು,
ತೀರ್ಥಸಜ್ಜನಸತ್ಕರ್ಮಗುರುದೇವನಿಂದಕಾಃ ।
ಪುರಾಣವೇದಮೀಮಾಂಸಾನ್ಯಾಯವೇದಾಂತದೂಷಕಾಃ ॥೦೯॥
ತೀರ್ಥ, ಸಜ್ಜನ, ಸತ್ಕರ್ಮ, ಗುರು, ಮತ್ತೆ ದೇವರ ನಿಂದನೆ ಮಾಡುವರೋ ಪುರಾಣ, ವೇದ, ಮೀಮಾಂಸ, ನ್ಯಾಯ ಮತ್ತೆ ವೇದಾಂತಂಗಳ ದೂಷಣೆ ಮಾಡುವರೋ
ಹರ್ಷಿತಾ ದುಃಖಿತಂ ದೃಷ್ಟ್ವಾ ಹರ್ಷಿತೇ ದುಃಖದಾಯಕಾಃ ।
ದುಷ್ಟವಾಕ್ಯಸ್ಯ ವಕ್ತಾರೋ ದುಷ್ಟಚಿತ್ತಾಶ್ಚ ಯೇ ಸದಾ ॥೧೦॥
ದುಃಖಿತರ ನೋಡಿ ಸಂತೋಷ ಪಡುವರೋ ಹರ್ಷಿತರಾಗಿದ್ದವರನ್ನು ದುಃಖಿಗಳಾಗಿ ಮಾಡುವರೋ ಬೇಡಗಟ್ಟೆ ಮಾತುಗಳ ಆಡುವರೋ , ಯಾವತ್ತೂ ದುರಾಲೋಚನೆಲಿ ಇರುವರೋ
ನ ಶೃಣ್ವಂತಿ ಹಿತಂ ವಾಕ್ಯಂ ಶಾಸ್ತ್ರವಾರ್ತಾಂ ಕದಾಪಿ ನ ।
ಆತ್ಮಸಂಭಾವಿತಾಃ ಸ್ತಬ್ಧಾ ಮೂಢಾಃ ಪಂಡಿತಮಾನಿನಃ ॥೧೧॥
ಹಿತವಚನಗಳನ್ನೂ, ಶಾಸ್ತ್ರದ ವಿಷಯಗಳನ್ನೂ ಯಾವತ್ತೂ ಕೇಳದ್ದೇ ಇದ್ದವರು ಆತ್ಮಶ್ಲಾಘನೆಯನ್ನೇ ಮಾಡುತ್ತರೋ (ತಾನೇ ಸಂಭಾವಿತ, ದೊಡ್ಡವ ಎಂದು ತಿಳ್ಕೊಂಡಿರುವವರು), ಕಠಿಣ ಹೃದಯಿಗಳು , ಮೂಢರು, ತಮ್ಮನ್ನೇ ಪಂಡಿತ ಎಂದು ತಿಳ್ಕೊಂಡವರು
ಏತೇ ಚಾನ್ಯೇ ಚ ಬಹವಃ ಪಾಪಿಷ್ಠಾ ಧರ್ಮವರ್ಜಿತಾಃ ।
ಗಚ್ಛಂತಿ ಯಮಮಾರ್ಗೇ ಹಿ ರೋದಮಾನಾ ದಿವಾನಿಶಮ್ ॥೧೨॥
ಇವೆಲ್ಲೋರೂ, ಪಾಪಿಗಳೂ, ಧರ್ಮಹೀನರೂ ಆದ ಇನ್ನೂ ಅನೇಕರು ಯಮಮಾರ್ಗಲ್ಲಿ ಹಗಲು ಇರುಳು ಕೂಗಿಕೋಂಡು ಹೋಗುವವು.
ಯಮದೂತೈಸ್ತಾಡ್ಯಮಾನಾ ಯಾಂತಿ ವೈತರಣೀಂ ಪ್ರತಿ ।
ತಸ್ಯಾಂ ಪತಂತಿ ಯೇ ಪಾಪಾಸ್ತಾನಹಂ ಕಥಯಾಮಿ ತೇ ॥೧೩॥
ಯಮದೂತರಿಂದ ಬಡುಸಿಕೋಂಡು, ವೈತರಣೀ ನದಿಯ ಕಡೆಗೆ ಹೋವವು. ಯಾವ ಪಾಪಿಗಳು ಅದರಲ್ಲಿ ಬೀಳುತ್ತವೆ ಎಂದು ನಾನು ನಿನಗೆ ಹೇಳುತ್ತೆನೆ ಕೇಳು
ಮಾತರಂ ಯೇsವಮನ್ಯಂತೇ ಪಿತರಂ ಗುರುಮೇವ ಚ ।
ಆಚಾರ್ಯಂ ಚಾಪಿ ಪೂಜ್ಯಂ ಚ ತಸ್ಯಾಂ ಮಜ್ಜಂತಿ ತೇ ನರಾಃ ॥೧೪॥
ಯಾರು ಅಮ್ಮ ಅಪ್ಪ° ಗುರು ಆಚಾರ್ಯ° ಮತ್ತೆ ಪೂಜ್ಯರ ಅವಮಾನಿಸುತ್ತರೋ ಆ ಮನುಷ್ಯರು ಅದರಲ್ಲಿ ಮುಳುಗುತ್ತವೆ
ಪತಿವ್ರತಾಂ ಸಾಧುಶೀಲಾಂ ಕುಲೀನಾಂ ವಿನಯಾನ್ವಿತಾಮ್ ।
ಸ್ತ್ರಿಯಂ ತ್ಯಜಂತಿ ಯೇ ದ್ವೇಷಾದ್ವೈತರಣ್ಯಾಂ ಪತಂತಿ ತೇ ॥೧೫॥
ಆರು ಪತಿವ್ರತೆಯೂ, ಸಾಧುಶೀಲೆಯೂ, ಕುಲೀನಳೂ, ವಿನಯಶೀಲೆಯೂ ಆದ ಸ್ತ್ರೀಯರ ದ್ವೇಷ ತ್ಯಜಿಸುವುದಿಲ್ಲವೋ ಅವರು ವೈತರಣೀ ನದಿಲಿ ಬೀಳುತ್ತವು.
ಸತಾಂ ಗುಣಸಹಸ್ರೇಷು ದೋಷಾನಾರೋಪಯಂತಿ ಯೇ ।
ತೇಷ್ವವಜ್ಞಾಂ ಚ ಕುರ್ವಂತಿ ವೈತರಣ್ಯಾಂ ಪತಂತಿ ತೇ ॥೧೬॥
ಯಾರು ಸಾವಿರಾರು ಗುಣಗಳಿದ್ದವರ ಮೇಲೆ ದೋಷಾರೋಪಣೆ ಮಾಡುತ್ತರೋ ಮತ್ತೆ ಅವರನ್ನು ತಿರಸ್ಕಾರ ಮಾಡುತ್ತರೋ ಅವು ವೈತರಣೀ ನದಿಲಿ ಬೀಳುತ್ತಾ ರೆ
ಬ್ರಾಹ್ಮಣಾಯ ಪ್ರತಿಶ್ರುತ್ಯ ಯಥಾರ್ಥಂ ನ ದದಾತಿ ಯಃ ।
ಆಹೂಯ ನಾಸ್ತಿ ಯೋ ಬ್ರೂಯಾತ್ತ ಯೋರ್ವಾಸಶ್ಚ ಸಂತತಮ್ ॥೧೭॥
ಯಾರು ಬ್ರಾಹ್ಮಣರಿಗೆ ಪ್ರತಿಜ್ಞೆ ಮಾಡಿ ಅದರ ಪ್ರಕಾರವಾಗಿ ಕೊಡುವುದಿಲ್ಲವೋ, ಅವರ ದ್ವನಿಗೊಂಡಿಕ್ಕಿ (ಆಹ್ವಾನಿಸಿ) ಎಂತದೂ ಇಲ್ಲ ಎಂದು ಹೇಳುತ್ತರೋ ಅವು ಏವತ್ತೂ ಅಲ್ಲೇ ವಾಸ ಮಾಡುತ್ತರೆ
ಸ್ವಯಂ ದತ್ತಾಪಹರ್ತಾ ಚ ದಾನಂ ದತ್ವಾsನುತಾಪಕಃ ।
ಪರವೃತ್ತಿ ಹರಶ್ಚೈವ ದಾನೇ ದತ್ತೇ ನಿವಾರಕಃ ॥೧೮॥
ತಾನೇ ದಾನ ಕೊಟ್ಟದ್ದರ ಕಿತ್ತುಕೊಂಡವ ದಾನವ ಕೊಟ್ಟು ಪಶ್ಚಾತ್ತಾಪ ಪಡುವವರು ಪರರ ಜೀವನ ಅಪಹರಿಸುವವ, ಮತ್ತೊಬ್ಬ ದಾನ ಕೊಟ್ಟರೆ ನಿಷೇಧಿಸುವವ
ಯಜ್ಞವಿಧ್ವಂಸಕಶ್ಚೈವ ಕಥಭಂಗಕರಶ್ಚ ಯಃ ।
ಕ್ಷೇತ್ರಸೀಮಾಹರಶ್ಚೈವ ಯಶ್ಚ ಗೋಚರಕರ್ಷಕಃ ॥೧೯॥
ಯಜ್ಞವ ಧ್ವಂಸ ಮಾಡುವವ, ಪುರಾಣ ಕಥಗೆ ವಿಘ್ನವುಂಟುಮಾಡುವವ, ಹೊಲದ ಮೇರೆಯ ಅಪಹರುಸುವವ (ಜಾಗೆಯ ಗಡಿಯ ಅತಿಕ್ರಮಣ ಮಾಡುವಂವ), ಗೋಮಳವ (ಭೂಮಿಯ/ಪ್ರದೇಶವ) ಅಪಹರುಸುವವ
ಬ್ರಾಹ್ಮಣೋ ರಸವಿಕ್ರೇತಾ ಯದಿಸ್ಯಾದ್ ವ್ಯಷಲೀಪತಿಃ ।
ವೇದೋಕ್ತಯಜ್ಞಾದನ್ಯತ್ರ ಸ್ವಾತ್ಮಾರ್ಥಂ ಪಶುಮಾರಕಃ ॥೨೦॥
ಬ್ರಾಹ್ಮಣನಾಗಿಯೂ ರಸವಿಕ್ರಯ (ಮಾದಕ ದ್ರವ ಪದಾರ್ಥವ ಮಾರುವವ) ಮಾಡುವವ ಕೀಳ್ದರ್ಜೆಸ್ತ್ರೀಯ ವರಿಸುವವ ವೇದೋಕ್ತಯಜ್ಞಂಗೊಕ್ಕೆ ವ್ಯತಿರಿಕ್ತವಾಗಿ ಸ್ವಾನಂದಕ್ಕಾಗಿ ಪಶುಹತ್ಯೆಮಾಡುವವ
ಬ್ರಹ್ಮಕರ್ಮಪರಿಭ್ರಷ್ಟೋ ಮಾಂಸಭೋಕ್ತಾ ಚ ಮದ್ಯಪಃ ।
ಉಚ್ಛೃಂಖಲಿಸ್ವಭಾವೋ ಯಃ ಶಾಸ್ತ್ರಾಧ್ಯಯನವರ್ಜಿತಃ ॥೨೧॥
ಬ್ರಹ್ಮಕರ್ಮವ ಮಾಡದ ಇರುವವರು ಮಾಂಸ ಭಕ್ಷಣೆ ಮಾಡುವವ, ಮದ್ಯಪಾನ ಮಾಡುವವ ಸ್ವೇಚ್ಛಾಚಾರಿಯಾದವ, ಶಾಸ್ತ್ರಾಧ್ಯಯನ ಮಾಡದೆ ಇದ್ದವ
ವೇದಾಕ್ಷರಂ ಪಠೇಚ್ಛೂದ್ರಃ ಕಾಪಿಲಂ ಯಃ ಪಯಃ ಪಿಬೇತ್ ।
ಧಾರಯೇದ್ ಬ್ರಹ್ಮಸೂತ್ರಂ ಚ ಭವೇದ್ವಾ ಬ್ರಾಹ್ಮಣೀ ಪತಿಃ ॥೨೨॥
ಯಾವ ಶೂದ್ರನಾದವ ವೇದಾಕ್ಷರವ ಪಠಿಸುತ್ತನೋ, ಕಪಿಲೆಯ ಹಾಲ ಕುಡಿತ್ತನೋ, ಯಜ್ಞೋಪವೀತವ ಧರುಸುತ್ತನೋ, ಬ್ರಾಹ್ಮಣ ಸ್ತ್ರೀಯ ಗಂಡನಾಗುತ್ತಾನೋ,
ರಾಜಭಾರ್ಯಾಭಿಲಾಷೀ ಚ ಪರದಾರಾಪಹಾರಕಃ ।
ಕನ್ಯಾಯಾಂ ಕಾಮುಕಶ್ಛೈವ ಸತೀನಾಂ ದೂಶಕಶ್ಚ ಯಃ ॥೨೩॥
ರಾಜನ ಪತ್ನಿಯ ಇಚ್ಛಿಸುವವ, ಮತ್ತೆ ಪರಸ್ತ್ರೀಯರ ಅಪಹರಿ ಸುವವ ಕನ್ಯೆಯರ ಕಾಮಿಸುವವ ಮತ್ತೆ ಪತಿವ್ರತಾ ಸ್ತ್ರೀಯರ ದೂಷಿಸುವವ
ಏತೇ ಚಾನ್ಯೇ ಚ ಬಹವೋ ನಿಷಿದ್ಧಾಚರಣೋತ್ಸುಕಾಃ ।
ವಿಹಿತತ್ಯಾಗಿನೋ ಮೂಢಾ ವೈತರಣ್ಯಾಂ ಪತಂತಿ ತೇ ॥೨೪॥
ಇವಲ್ಲರೂ, ನಿಷಿದ್ಧವಾದ ಆಚರಣೆಲಿ ಉತ್ಸುಕರಾದೋರು, ಶಾಸ್ತ್ರವಿದಿತ ಕರ್ಮಗಳ ತ್ಯಜಿಸಿದ ಮೂಢರು ಮತ್ತೆ ಇನ್ನೂ ಅನೇಕರು ವೈತರಣೀ ನದಿಲಿ ಬೀಳುತ್ತಾರೆ
ಸರ್ವಂ ಮಾರ್ಗಮತಿಕ್ರಮ್ಯ ಯಾಂತಿ ಪಾಪಾ ಯಮಾಲಯೇ ।
ಪುನರ್ಯಮಾಜ್ಞಯಾಗತ್ಯ ದೂತಾಸ್ತಸ್ಯಾಂ ಕ್ಷಿಪಂತಿ ತಾನ್ ॥೨೫॥
ಮಾರ್ಗಗಳೆಲ್ಲವ ದಾಟಿ ಪಾಪಿ ಯಮಾಲಯಕ್ಕೆ ಹೋಗುವವು. ಅಲ್ಲಿ ಯಮನ ಆಜ್ಞೆ ಪ್ರಕಾರ ದೂತರು ಅವರ ಪುನಃ ಅದೇ ವೈತರಣೀ ನದಿಲಿ ಬೀಳುತ್ತಾರೆ
ಯಾ ವೈ ದುರಂಧರಾ ಸರ್ವಧೌರೇಯಾಣಾಂ ಖಗಾಧಿಪ ।
ಅತಸ್ತಸ್ಯಾಂ ಪ್ರಕ್ಷಿಪಂತಿ ವೈತರಣ್ಯಾಂ ಚ ಪಾಪಿನಃ ॥೨೬॥
ಏ ಪಕ್ಷಿರಾಜನೇ!, ನರಕಗಳಲ್ಲಿ ಅತಿ ಮುಖ್ಯವಾದ ವೈತರಣಿಲಿ ಆ ಪಾಪಿಗಳ ಅವು ಅಂಬಗ ಇಡಿದು ಕೊಳ್ಳುತ್ತಾರೆ
ಕೃಷ್ಣಾ ಗೌರ್ಯಾದಿ ನೋ ದತ್ತಾ ನೋರ್ಧ್ವದೇಹಕ್ರಿಯಾಃ ಕೃತಾಃ ।
ತಸ್ಯಾಂ ಭುಕ್ತ್ವಾ ಮಹದುಃಖಂ ಯಾಂತಿ ವೃಕ್ಷಂ ತಟೋದ್ಭವಮ್ ॥೨೭॥
ಕೃಷ್ಣವರ್ಣದ ಗೋವಿನ ದಾನಕೊಡದೆ ಇದ್ದವರು ಔರ್ಧ್ವದೇಹಕ್ರಿಯೆಯ ಮಾಡದ್ದೆ ಇದ್ದವರು ಅದರಲ್ಲಿ ಮಹಾದುಃಖವ ಅನುಭವಿಸಿ, ಆ ನದಿಯ ದಡಲ್ಲಿ ಹುಟ್ಟಿದ ಮರದ ಹತ್ತ್ತಿರ ಹೋಗುತ್ತವೆ
ಕೂಟಸಾಕ್ಷ್ಯಪ್ರದಾತಾರಃ ಕೂಟಧರ್ಮಪರಾಯಣಾಃ ।
ಛಲೇನಾರ್ಜಸಂಸಕ್ತಾಶ್ಚೌರ್ಯವೃತ್ತ್ಯಾ ಚ ಜೀವಿನಃ ॥೨೮॥
ಸುಳ್ಳು ಸಾಕ್ಷಿ ಹೇಳುವವರು ಮಿಥ್ಯಾಧರ್ಮಲ್ಲಿ ಪ್ರವೃತ್ತರಾಗಿರುವವರು ಮೋಸದಿಂದ ಸಂಪಾನೆ ಮಾಡುವವರು ಕದ್ದು ಜೀವನ ಮಾಡುವವರು
ಛೇದಯಂತ್ಯತಿವೃಕ್ಷಾಂಶ್ಚ ವನಾರಾಮವಿಭಂಜಕಾಃ ।
ವ್ರತಂ ತೀರ್ಥಂ ಪರಿತ್ಯಜ್ಯ ವಿಧವಾಶೀಲನಾಶಕಾಃ ॥೨೯॥
ದೊಡ್ಡ ಮರಗಳು ಕತ್ತರಿಸುವವು, ಕಾಡುಗಳ, ತೋಟಗಳ ನಾಶಮಾಡುವವು, ವ್ರತಗಳನ್ನೂ ತೀರ್ಥಗಳನ್ನೂ ತ್ಯಜಿಸುವವರು ವಿಧವೆಯ ಶೀಲವ ನಾಶಮಾಡುವವರು
ಭರ್ತಾರಂ ದೂಷಯೇನ್ನಾರೀ ಪರಂ ಮನಸಿ ಧಾರಯೇತ್ ।
ಇತ್ಯಾದ್ಯಾಃ ಶಾಲ್ಮಲೀವೃಕ್ಷೇ ಭುಜಂತೇ ಬಹುತಾಡನಮ್ ॥೩೦॥
ತನ್ನ ಪತಿಯ ದೂಷಿಸಿ, ಪರರ ಮನಸ್ಸಿಲ್ಲಿ ಧ್ಯಾನುಸುವ ಸ್ತ್ರೀ ಮೊದಲಾದವರು ಶಾಲ್ಮಲೀ ವೃಕ್ಷದ ಹತ್ತಿರ ಬಹಳ ಪೆಟ್ಟು ತಿನ್ನುವರು
ತಾಡನಾತ್ಪತಿತಾ ದೂತಾಃ ಕ್ಷಿಪಂತಿ ನರಕೇಷು ತಾನ್ ।
ಪತಂತಿ ತೇಷು ಯೇ ಪಾಪಾಸ್ತಾನಹಂ ಕಥಯಾಮಿ ತೇ ॥೩೧॥
ಆ ಹೊಡೆತದಿಂದ ಕೆಳಗೆ ಬಿದ್ದರು ದೂತರು ಎಳದು ನರಕದೊಳಗೆ ಬಿಡುತ್ತಾರೆ . ಯಾವ ಪಾಪಿಗಳು ಅದರಲ್ಲಿ ಬೀಳುತ್ತರೋ ಎಂದು ನಿನಗೆ ಹೇಳುತ್ತೆನೆ
No comments:
Post a Comment