ಶ್ರೀ ವೆಂಕಪ್ಪ ಬರೆದ ‘ಪುನರ್ಜನ್ಮ – ಮರಣೋತ್ತರ ಜೀವನ’ ಪುಸ್ತಕಲ್ಲಿ ಈ ಬಗ್ಗೆ ಒಳ್ಳೆಯ ವಿಮರ್ಶಾತ್ಮಕ ಸುದ್ದಿ ಬಂದವು ಸ್ಥೂಲ ಶರೀರದ ಜೀವಾತ್ಮನ ಬೇರ್ಪಡಿಕೆಯೇ ಮರಣ. ಮರಣದ ನಂತರ ಇನ್ನೊಂದು ವಿಧದ ನವೀನ ಜೀವನ ಆರಂಭ ಹುಟ್ಟಲಿದ್ದು. ನೂತನ ಜೀವನದ ಪ್ರವೇಶದ್ವಾರವೆ ಜನನ. ಜನನ ಮರಣಗಳಿಗೆ ಮಾಯೆಯ ಇಂದ್ರಜಾಲದ ನಂಟು . ಸಂಸಾರ ಹೇಳುವ ರಂಗಸ್ಥಳಕ್ಕೆ ಪ್ರವೇಶದ್ವಾರ ಜನನ. ಸಂಸಾರ ಸಾಗರದ ನಿರ್ಗಮನ ದ್ವಾರ ಮರಣ. ಮರಣವೇ ಜೀವನ, ಜೀವನವೇ ಮರಣ. ಸೂಕ್ಷ್ಮ ದೃಷ್ಟಿಂದ ಪರಿಶೀಲಿಸಿದರೆ ಯಾರೂ ಹುಟ್ಟುತ್ತಲೆ ಯಾರು ಸಾಯುತ್ತಲೆ ಇರಲಿಲ್ಲ ಶರೀರದಲ್ಲಿ ಚೈತನ್ಯ (ಬ್ರಹ್ಮ) ಶಾಶ್ವತ.
ಒಂದು ಮನೆಯಿಂದ ಹೊರಟು ಇನ್ನೊಂದು ಮನೆಯ ಪ್ರವೇಶಿಸಿದ ಹಾಗೆ ಜೀವಾತ್ಮ ಹೊಸ ಅನುಭವಕ್ಕಾಗಿ ಹಿಂದಿನ ಶರೀರವ ಬಿಟ್ಟು ಹೊಸತಾದ ಇನ್ನೊಂದು ಶರೀರ ಪ್ರವೇಶಿಸುತ್ತೆ . ಗೀತೆಯಲ್ಲಿ ಹೇಳಿದಹಾಗೆ
“ವಾಸಾಂಸಿ ಜೀರ್ಣಾನಿ ಯಥಾ ವಿಹಾಯ । ನವಾನಿ ಗೃಹ್ಣಾತಿ ನರೋಪರಾಣಿ ॥ ತಥಾ ಶರೀರಾಣಿ ವಿಹಾಯ ಜೀರ್ಣಾನ್ಯನ್ಯಾನಿ ಸಂಯಾತಿ ನವಾನಿ ದೇಹೀ॥(ಭ.ಗೀ ೨.೨೨)
– ಒಬ್ಬ ಮನುಷ್ಯ ಹಳೆ ವಸ್ತ್ರವ ಬಿಟ್ಟು ಹೊಸ ವಸ್ತ್ರವ ಸ್ವೀಕರುಸುವ ಹಾಗೆ ಜೀವಾತ್ಮ ತನಗೆ ಉಪಾಧಿಯಾದ ಆಶ್ರಯವಾಗಿದ್ದ ಜರಾಜೀರ್ಣವಾದ ಹಳೆ ಶರೀರವ ಬಿಟ್ಟ ಹೊಸ ಶರೀರವ ಪಡಕ್ಕೊಳ್ಳುತ್ತದೆ ಜೀವಾತ್ಮ ಎಂದಿಂಗೂ ಶಾಶ್ವತ° –
ನೈನಂ ಛಿಂದಂತಿ ಶಸ್ತ್ರಾಣಿ ನೈನಂ ದಹತಿ ಪಾವಕಃ । ನ ಚೈನಂ ಕ್ಲೇದಯಂತ್ಯಾಪೋ ನ ಶೋಷಯತಿ ಮಾರುತಃ ॥ (ಭ.ಗೀ.೨.೨೩)
– ಆತ್ಮವನ್ನು ಶಸ್ತ್ರಗಳಿಂದ ತುಂಡು ತುಂಡಾಗಿ ಕತ್ತರಿಸಲು ಅಗ್ನಿಯಿಂದ ಸುಡಲು , ನೀರು ಚಂಡಿಮಾಡಲು, ಮತ್ತೆ , ಗಾಳಿಯಿಂದ ಒಣಗಿಸಲು ಸಾಧ್ಯವಿಲ್ಲ
ಪ್ರತಿಯೊಬ್ಬ ಜೀವನೂ ತನ್ನ ಕರ್ಮದ ಫಲಾನುಭವಕ್ಕಾಗಿ ಇನ್ನೊಂದು ಶರೀರವನ್ನು ಸೇರುತ್ತ . ಆ ಶರೀರಲ್ಲಿ ನಿರ್ದಿಷ್ಟವಾದ ಫಲಾನುಭವದ ಮತ್ತೆ ಅವ ಅಲ್ಲಿಂದ ಹೊರಡುತ್ತೆ ಹೀಗೆ ಮೃತ್ಯು ಅನಿವಾರ್ಯ ಘಟನೆಯಾಗಿದ್ದು. ವಿವೇಕಿಗು ಜ್ಞಾನಿಗು ಮೃತ್ಯುವಿನ ಭಯ ಇಲ್ಲ. ಮರಣವು ನವೀನ ಜೀವನದ ಪ್ರವೇಶ ಹೇಳಿ ಅವಕ್ಕೆ ಗೊತಿದ್ದು. ಸರ್ವೋತ್ತಮ ಸರ್ವಾತಿಶಾಯಿ ಆತ್ಮ – ಪರಮಾತ್ಮ. ಅವನೇ ಪುರುಷೋತ್ತಮ. ಅವನೆ ಮೃತ್ಯು ವಿರಹಿತ. ದೇಶ, ಕಾಲ, ಕಾರಣರಹಿತ . ಶರೀರ, ಇಂದ್ರಿಯ, ಪ್ರಾಣ, ಮನಸ್ಸಿಗೊ ಆಶ್ರಯದಾತ ಭೌತಿಕ ವಸ್ತುಗಳಿಂದ ಸಿದ್ಧವಾದ ಶರೀರಕ್ಕೆ ಮಾತ್ರ ಮೃತ್ಯು. ಜನನ ಮರಣಂಗಳಿಂದ ಮುಕ್ತಿ ಸಿಕ್ಕೆರೆ ಕರ್ಮಫಲದಲ್ಲಿ ಆಸೆ ಎಲ್ಲಕು. ಕರ್ಮದ ಫಲಸ್ವರೂಪವೇ ಶರೀರ. ರಾಗ-ದ್ವೇಷಗಳ ಬಿಟ್ಟವನೇ ಮೋಕ್ಷಕ್ಕೆ ಅರ್ಹ. ಆದರೆ ಅದು ಅಷ್ಟು ಸುಲಭವಲ್ಲ !
ಶರೀರಕ್ಕೆ ಮೂಲಕಾರಣ ಅಜ್ಞಾನ. ತಾನು ಯಾರು ಏನು ತಿಳಿಯದ್ದಿದೇ ಅಜ್ಞಾನದ ಮೂಲ. ಎಲ್ಲಿಂದ ಈ ಶರೀರ ಬಂದು ಸೇರಿತ್ತು? ಮುಂದೆ ಎಲ್ಲಿಗೆ? ಅಥವಾ ಪಂಚಕೋಶಲ್ಲಿ ವಿಹರಿಸುವ ಜೀವ° ಅವುಗಳಿಂದ ಪ್ರತ್ಯೇಕವಾಗಿ ಇದ್ದು ಹೇಳುವ ಜ್ಞಾನ ಇಲ್ಲದ್ದಿದ್ದರೆ ಅಜ್ಞಾನ. ಆತ್ಮವು ಶಬ್ದ, ಸ್ಪರ್ಶ, ರೂಪ, ರಸ, ಗಂಧಂಗಳಿಂದ ವಿರಹಿತವಾದ್ದು. ಅದು ಸ್ವಯಂ ನಿರಾಕಾರ ನಿರ್ಗುಣವಾಗಿದ್ದು ಪ್ರಕೃತಿಂದ ಪ್ರತ್ಯೇಕವಾದ್ದು. ಆತ್ಮವು ಸ್ಥೂಲ, ಸೂಕ್ಷ್ಮ, ಕಾರಣ ಶರೀರಂಗಳಿಂದಲೂ, ಅನ್ನಮಯ , ಪ್ರಾಣಮಯ, ಮನೋಮಯ, ವಿಜ್ಞಾನಮಯ, ಆನಂದಮಯ ಕೋಶಂಗಳಿಂದಲೂ ಪ್ರತ್ಯೇಕವಾಗಿದು. ಸ್ವಯಂಪ್ರಕಾಶ ಆತ್ಮದ ಸಾಕ್ಷಾತ್ಕಾರ ಲಭಿಸಿರೆ ಕಾಲದ ವಶಂದ ಬಿಡುಗಡೆ ಹೊಂದಲೆ ಬೇಕು
ಶುಕ್ರಶೋಣಿತ ಸಂಯೋಗಾತ್ ಪಿಂಡೋತ್ಪತ್ತಿಃ ಪ್ರಜಾಯತೇ । (ಗ.ಪು) ॥
– ಸ್ತ್ರೀಯ ಶೋಣಿತ, ಪುರುಷನ ಶುಕ್ರ ಇವುಗಳ ಸಮ್ಮಿಶ್ರಣ ಕ್ರಿಯೆಂದ ಗರ್ಭೋತ್ಪತ್ತಿ ಉಂಟಾವ್ತು. ಇದು ಗರ್ಭದ ಪೂರ್ವ ರೂಪ.
ಸುಕೃತಂ ದುಷ್ಕೃತಂ ವಾಪಿ ಭುಕ್ತ್ವಾಪೂರ್ವಂ ಯಥಾರ್ಚಿತಮ್ । ಕರ್ಮಯೋಗಾತ್ತದಾ ತಸ್ಯ ಕಶ್ಚಿದ್ವಾಧಿಃ ಪ್ರಜಾಯತೇ ॥ –
ಪೂರ್ವಾರ್ಜಿತ ಪಾಪ ಕರ್ಮ ದುಷ್ಟ ಕರ್ಮಗಳಿಗೆ ಅನುಗುಣವಾಗಿ ಫಲವ ಅನುಭವಿಸಿದಾಗ ಕರ್ಮಸಂಬಂಧಂದ ಜೀವಿಗೆ ಯಾವುದಾದರೊಂದು ವ್ಯಾಧಿ ಉಂಟಾವುದು . ಶರೀರಲ್ಲಿ ಉಂಟದ ವ್ಯಾಧಿಗಳಿಂದ ನಾಡಿಗಳ ಶಕ್ತಿ ಕ್ಷೀಣಿಸುತ್ತೆ . ಅದರ ಪರಿಣಾಮವಾಗಿ ನಾಡಿಗಳ ಸಂಕೋಚ, ವಿಕಾಸ ಗತಿಗೊ ತಮ್ಮ ನಿತ್ಯದ ಕ್ರಮಂದ ವಿರಹಿತವಾಗುವುದು . ನಾಡಿಗಳ ಕ್ರಮ ತಪ್ಪಿದ ಸಂಕೋಚ ವಿಕಾಸಂದ ಒಳಾಣ ಶ್ವಾಸೋಚ್ಛಾಸ ತಡೆ ಉಂಟಾವುದು . ಇದರಿಂದ ಚೇಷ್ಟಾ ವಿರಹಿತನಾಗಿ ಮರಣವ ಹೊಂದುತ್ತನೆ . ಅಷ್ಟಗಿ ಅವನ ಇಂದ್ರಿಯಗಳಿಗೂ ಸಂಸ್ಕಾರವು ಹಿಂಬಾಲಿಸಲು . ತನ್ನ ಪೂರ್ವಜನ್ಮ ಸಂಸ್ಕಾರಗಳೊಟ್ಟಿಗೆ ಅವನ ಕರ್ಮಫಲ ಅನುಭವುಸಲು ಸ್ಥೂಲಶರೀರದಿಂದ ಹೊರಡುತ್ತ ಅಂದರೆ . ಮದಲಾಣ ಶರೀರವ ಕಳಕ್ಕೊಂಡ ಅವ ಕೆಲವು ಕಾಲ ವಾಯುವಿನೊಟ್ಟಿಗೆ ಸೂಕ್ಷ್ಮ ಶರೀರದಿಂದ ನೆಲೆಸುತ್ತದೆ ಇದೆ ರೀತಿ ವಾಯುಮಂಡಲದಲ್ಲಿ ಈ ತೆರದ ಸಾವಿರಾರು ಸೂಕ್ಷ್ಮಶರೀರಗಳು ನೆಲೆಸಿದ್ದು. ಸೂಕ್ಷ್ಮ ಶರೀರವು ತನ್ನ ಹಿಂದಿನ ಅನುಭವದಾಗೆ ಪ್ರಾಣಮಯವಾಗಿಯೇ ಇದ್ದು ವಾಯುಮಂಡಲಲ್ಲಿ ಇರುತ್ತದೆ . ಅದನ್ನೇ ‘ಪ್ರೇತ’ ಎಂದು ಹೇಳುವದು. ಪ್ರೇತ ಶರೀರಲ್ಲಿದ್ದಗ ಅದರ ಅನುಭವವೇ ಬೇರೆ ವಿಧವಾಗಿರುತ್ತದೆ


No comments:
Post a Comment