ತ್ವಙ್ಮಾಂಸರುಧಿರಸ್ನಾಯುಮೇಧಾಮಜ್ಜಾಸ್ಥಿ ಸಂಕುಲಮ್ |
ಪೂರ್ಣಂ ಮೂತ್ರಪುರೀಷಾಭ್ಯಾಂ ಸ್ಥೂಲಂ ನಿಂದ್ಯಮಿದಂ ವಪುಃ ||
ತ್ವಕ್ (ಚರ್ಮ), ಮಾಂಸ. ನೆತ್ತರು, ಸ್ನಾಯು, ಮೇಧಸ್ಸು, ಮಜ್ಜಾ, ಎಲುಬು, ಮಲ, ಮೂತ್ರಂಗಳಿಂದ ಕೂಡಿದ ಸ್ಥೂಲ ದೇಹ.
ವಾಗಾದಿ ಪಂಚ ಶ್ರವಣಾದಿ ಪಂಚ ಪ್ರಾಣಾದಿ ಪಂಚ ಅಭ್ರಮುಖಾನಿ ಪಂಚ |
ಬುಧ್ವಾದ್ಯವಿದ್ಯಾಪಿ ಚ ಕಾಮಕರ್ಮಣೀ ಪುರ್ಯಷ್ಟಕಂ ಸೂಕ್ಷ್ಮ ಶರೀರಮಾಹುಃ ||
ಸೂಕ್ಷ್ಮ ಶರೀರ ಹೇಳಿರೆ- ವಾಕ್ ಆದಿ ಐದು ಕರ್ಮೇಂದ್ರಿಯಗೊ – (ವಾಕ್, ಪಾಣಿ, ಪಾದ, ವಾಯು, ಉಪಸ್ಥ), ಶ್ರವಣಾದಿ ಐದು ಜ್ಞಾನೇಂದ್ರಿಯಗಳು – (ತ್ವಕ್, ಚಕ್ಷು, ಶ್ರೋತ್ರ, ಜಿಹ್ವಾ, ಪ್ರಾಣ), ಪ್ರಾಣಾಪಾನಾದಿ ಪಂಚ ಪ್ರಾಣಗಳು – (ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ), ಆಕಾಶಾದಿ ಪಂಚ ಭೂತಗಳು – (ಪೃಥಿವಿ, ನೀರು, ಅಗ್ನಿ, ವಾಯು, ಆಕಾಶ), ನಾಕು ಅಂತಃಕರಣಗಳು – (ಮನಸ್ಸು, ಬುದ್ಧಿ, ಚಿತ್ತ, ಅಹಂಕಾರ), ಅವಿದ್ಯಾ, ಕಾಮ, ಕರ್ಮ ಇವುಗಳ ಸಮುದಾಯವೇ ಸೂಕ್ಷ್ಮ ಶರೀರ. ಇದನ್ನೇ ಲಿಂಗ ಶರೀರ ಹೇಳುವುದು . ಕರ್ಮ ಫಲವನ್ನು ಅನುಭವಿಸುವುದು ಎಂದು ಹೇಳುವುದು
ನಮ್ಮ ಕಣ್ಣುಗಳಿಗೆ ಗೋಚರಿಸುವ ಸ್ಥೂಲ ಶರೀರ ಪೃಥ್ವಿ, ಜಲ, ತೇಜಸ್ಸು, ವಾಯು, ಆಕಾಶ ಭೌತಿಕ ವಸ್ತುಗಳಿಂದ ಉಂಟಾದ್ದದು . ದೇವತೆಗಳ ಶರೀರ ತೈಜಸ್ಸಿನಿಂದ ಕೂಡಿದೆ ಅದರಲ್ಲಿ ಅಗ್ನಿತತ್ವ ಪ್ರಧಾನವಾಗಿರುವುದು . ಜಲಚರ ಜೀವಿಗಳಲ್ಲಿ ಜಲತತ್ವಕ್ಕೆ ಪ್ರಾಧಾನ್ಯ. ಪಕ್ಷಿಗಳಲ್ಲಿ ಆಕಾಶತತ್ವ ಅಧಿಕ. ಶರೀರದಲ್ಲಿ ಕಠಿಣತೆ ಪಾರ್ಥಿವಾಂಸಂದ ಬಾರದು ಶರೀರದಲ್ಲಿ ಉಷ್ಣತೆ ಅಗ್ನಿತತ್ವದ್ದು ಶರೀರದ ಸ್ಪಂದನ ವಾಯುತತ್ವದ್ದು . ಜೀವಾತ್ಮ ಈ ತರದ ಪಂಚತತ್ವಗಳಿಂದ ಬೇರೆಯೇ ಆಗಿದ್ದ. ಈ ಪಂಚತತ್ವಗಳು ಪ್ರಕೃತಿಯ ಅಕ್ಷಯ ಕೋಶದಿಂದ ಉಂಟಾದ್ದು. ಶರೀರಲ್ಲಿ ಒಟ್ಟಿಗೆ ನೆಲೆಸಿದ ಈ ತತ್ವಗಳು ಮರಣಾ ನಂತರ ಬೇರೆ ಬೇರೆ ಆಗಿ ತಮ್ಮ ತಮ್ಮ ಮೂಲ ತತ್ವಗಳಲ್ಲಿ ವಿಲೀನ ಆಗುವವು . ಪಾರ್ಥಿವ ತತ್ವ ತನ್ನ ಮೂಲವಾದ ಭೂಮಿಲಿ ಸೇರುವುದು
ಮೃತ ಶರೀರವ ಬಿಟ್ಟು ಮತ್ತೆ ಹೊಸ ಶರೀರ ಸೇರುವುದು ಮುಸುಕಿ ಶ್ಮಶಾನ ಭೂಮಿಗೆ ಸೇರುತ್ತದೆ ಅಲ್ಲಿ ಹೇಳುವ ಮಂತ್ರಗಳಲ್ಲಿ ಆ ತತ್ವಗಳೊಟ್ಟಿಗೆ ವಿಲೀನವಾಗಲಿ ಎಂದು ಹೇಳುವ ಅರ್ಥದಲ್ಲಿದೆ . ಮತ್ತೆ ಚಿತೆಗೆ ಅಗ್ನಿಸ್ಪರ್ಶ ಮಾಡುವದು. ಪ್ರಾಣಸಹಿತನಾದ ಜೀವಾತ್ಮಈ ರೀತಿಲಿ ಶರೀರದ ಬೇರೆ ಆಗಿ ಬಿಟ್ಟ ಮತ್ತೆ ತನ್ನ ಮುಂದಿನ ಯಾತ್ರೆಯ ಸುರುಮಾಡುವದು. ಇಂದ್ರಿಯಗಳು ಅವುಗಳ ಅಧಿಷ್ಥಾನ ದೇವತೆಗಳ ಅಧೀನದ ವಿರಹಿತವಾದ ಅವುಗಳ ಕ್ರಿಯೆಗಳು ನಿಂತು ಹೋಗುವವು ದೃಷ್ಟಿಯು ಸೂರ್ಯನಲ್ಲಿ ವಿಲೀನ ಆಗುವವು , ವಾಣಿಯು ಅಗ್ನಿಲಿ ವಿಲೀನ ಆಯಿತು ಪ್ರಾಣವು ವಾಯುವಿಲ್ಲಿ ವಿಲೀನ ಆಯಿತು ಶ್ರೋತ್ರಗಳು ದಿಕ್ಕುಗಳಲ್ಲಿ, ಶರೀರವು ಭೂಮಿಲಿ ವಿಲೀನಗೊಳ್ಳುವುದು ರಕ್ತವು ಜಲದಲ್ಲಿ ವಿಲೀನ ಆಯಿತು
ವಾಯು ಪ್ರಾಣಶಕ್ತಿ ಆಗಿದ್ದು. ಇಂದ್ರಿಯಕ್ಕೆ ಶಕ್ತಿ ಪ್ರಾಣದಿಂದಲೇ ಹರಿದು ಬರುವುದು . ಶರೀರದ ಚಲನೆಗೆ ಕಾರಣ ಪ್ರಾಣವೇ ಆಗಿದ್ದು. ಅನ್ನವು ಪಚನ ಅಗಿದ್ದು ಪ್ರಾಣದ, ರಕ್ತಸಂಚಾರ, ಮಲಮೂತ್ರ ವಿಸರ್ಜನೆ ಪ್ರಾಣದ ಕಾರ್ಯಗಳು . ಮರಣ ಕಾಲಲ್ಲಿ ಉದಾನ ವಾಯು ಸೂಕ್ಷ್ಮಶರೀರವ ಸ್ಥೂಲ ಶರೀರದ ಪ್ರತ್ಯೇಕಿಸುವುದು . ಉದಾನ ವಾಯುವು ಎಲ್ಲ ಪ್ರಾಣಕ್ಕೂ ಆಶ್ರಯ ಆಗಿದ್ದು. ಭೋಜನವ ಉದರದೊಳಗೆ ತಳ್ಳುವದು ಉದಾನ ವಾಯುವಿನ ಕೆಲಸ. ಆಯಾಯ ಇಂದ್ರಿಯಗಳ ಮೂಲಕ ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳ ಹೀರಲು ಪ್ರಾಣವಾಯು ಸಹಕರಿಸುತ್ತದೆ . ಸ್ಥೂಲಪ್ರಾಣವು ಶ್ವಾಸೋಚ್ಛ್ವಾಸಗಳಲ್ಲಿ ಗೋಚರಿಸುವುದು . ಜೀವನ ಶಕ್ತಿ ಸೂಕ್ಷ್ಮಪ್ರಾಣದ. ಗಾಢ ನಿದ್ರೆಲಿ ಆನಂದಮಯ ಕೋಶಲ್ಲಿ ಜೀವ ಪ್ರವೇಶಿಸುವಾಗ ಆನಂದದ ಬಾಗಿಲ ಈ ವಾಯು ತೆಗವದು. ಉದಾನ ವಾಯುವಿನ ನಿವಾಸ ಸ್ಥಾನ ಕಂಠ.
ಪ್ರಾಣ, ಮನಸ್ಸು, ಇಂದ್ರಿಯ, ಸ್ಥೂಲ ಶರೀರಕ್ಕೆ ಆತ್ಮವೇ ಆಧಾರ ಆಗಿದ್ದು. ಹೃದಯದ ಅಂತರಾಳಲ್ಲಿ ಜೀವಾತ್ಮ ನೆಲೆಸಿರುತ್ತದೆ .
ಜೀವನ್ಮುಕ್ತ ಯೋಗಿಗೆ ಪುನರ್ಜನ್ಮ ಇಲ್ಲೆ. ಭಿನ್ನ ಭಿನ್ನ ಲೋಕಗಳ ಸಂಪರ್ಕವೂ ಅವು ಇಲ್ಲೆ. ಯೋಗಿಗಳ ಮನಸ್ಸು, ಪ್ರಾಣ ಬ್ರಹ್ಮನಲ್ಲಿ ವಿಲೀನ ಆಗುವುದು . ಅಂದಾಗ ಅವರ ಜೀವಾತ್ಮ ಪರಬ್ರಹ್ಮಲ್ಲಿ ವಿಲೀನಗೊಳ್ಳುವುದು . ವೈರಾಗ್ಯದ ಮೂಲಕ ರಾಗದ್ವೇಷ ವಿರಹಿತನಾದ ಯೋಗಿ ಮರಣಾನಂತರ ಬ್ರಹ್ಮಲ್ಲಿ ವಿಲೀನವಾಗುತ್ತೆ . ಆದರೆ ಇಂತಹ ಯೋಗಿಗೊ ಅತಿ ದುರ್ಲಭ. ಗೀತೆಲಿ ಭಗವಂತ ಹೇಳಿದಾಗೆ –
ಮನುಷ್ಯಾಣಾಂ ಸಹಸ್ರೇಷು ಕಶ್ಚಿದ್ಯತತಿ ಸಿದ್ಧಯೇ । ಯತತಾಮಪಿ ಸಿದ್ಧಾನಾಂ ಕಶ್ಚಿನ್ಮಾಂ ವೇತ್ತಿ ತತ್ತ್ವತಃ ॥ (ಭ.ಗೀ. ೭.೩)


1 comment:
ನೀವು ಸ್ವಲ್ಪ ಹಳೆ ಗನ್ನಡ ಸೇರಿಸಿ ಬರೆದಿದ್ದೀರಿ ಹೊಸ ಕನ್ನಡದಲ್ಲಿ ಪೂರ್ತಿಯಾಗಿ ಬರೆಯಿರಿ
ಧನ್ಯವಾದಗಳು
Post a Comment