Followers

Monday, 11 May 2020

ಆತ್ಮ ಎಂದರೆ?

ಕೆಲವರು ಕೇಳಿದರು ಆತ್ಮ ಎಂದರೆ ಏನು ಅಂತ ಅದಕ್ಕೆ ಈಗ ಈ ಬರಹವನ್ನು ಬರೆಯುತ್ತಿದ್ದೇವೆ ತಡವಾಗಿದ್ದಕ್ಕೆ ಕ್ಷಮಿಸಿ

ಇದರಲ್ಲಿ ಏನಾದರು ತಪ್ಪಿದ್ದರೆ ತಿದ್ದಿ ತಿಳಿಸಿಕೊಡಿ

ಆತ್ಮವು ಎರಡು ವಿಧ. ಒಂದು ವ್ಯಕ್ತಿಗತ ಆತ್ಮಾ. ಇನ್ನೊಂದು ಪರಮಾತ್ಮ. ವ್ಯಕ್ತಿಗತ ಆತ್ಮ ಸರ್ವೋತ್ತಮ ಆತ್ಮದ (ಪರಮಾತ್ಮನ) ಪ್ರತಿಬಿಂಬ ಪ್ರತಿಮೂರ್ತಿ. ಒಬ್ಬನೇ ಆದ ಸೂರ್ಯ ಭಿನ್ನ ಭಿನ್ನ ಜಲಪಾತ್ರೆಲಿ ಬೇರೆ ಬೇರೆಯಾಗಿ ಪ್ರತಿಬಿಂಬಿಸುತ್ತದೆ ಹಾಗೆ  ಪರಮಪುರುಷನ ಪ್ರತಿಬಿಂಬ ಭಿನ್ನ ಭಿನ್ನ ವ್ಯಕ್ತಿಗಳ ಅಂತಃಕರಣಲ್ಲಿ ಪ್ರತಿಬಿಂಬಿಸುವಾಗ ಆ ಪ್ರತಿಬಿಂಬವೇ ಜೀವ ಎನಿಸುತ್ತದೆ
ಆತ್ಮವು ಚೈತನ್ಯಮಯ. ಅದು ಭೌತಿಕ ಪದಾರ್ಥ ಅಲ್ಲ. ಅದು ಬುದ್ಧಿರೂಪಲ್ಲಿಯೇ ಶರೀರಲ್ಲಿ ನೆಲೆಸಿದ್ದು. ಪ್ರತಿಬಿಂಬದಲ್ಲಿ ಲಿಂಗ ಶರೀರಲ್ಲಿ ನೆಲೆಸಿದ ಪೂರ್ವಜನ್ಮಗಳ ಸಂಸ್ಕಾರಕ್ಕೆ ತಕ್ಕ ಹಾಂಗೆ ನವೀನ ಕ್ರಿಯೆಗೊ ರೂಪೀಕರಿಸಲ್ಪಡುತ್ತದೆ ಮರಣಾನಂತರ  ಯಾವುದೇ ಯೋನಿಗೆ ದಾಟಿದರೂ ಇಂದ್ರಿಯ, ಮನಸ್ಸು, ಪ್ರಾಣ, ಸಂಸ್ಕಾರ, ವಾಸನಾ ಭಾವನೆಗೊ ಅವನ ಹಿಂಬಾಲುಸುತ್ತದೆ ಅಂದರೆ
ಅಭಿಮಾನ, ಅಹಂಕಾರ, ಲೋಭ, ಕಾಮ, ರಾಗ, ದ್ವೇಷಗಳಿಂದ ಜೀವಾತ್ಮ ಅಶುದ್ಧನಾವುತ್ತದೆ  ಪರಿಣಾಮವಾಗಿ ಅವ ಸೀಮಿತನಾಗುತ್ತನೆ , ಅಲ್ಪಜ್ಞ, ಅಲ್ಪ ಶಕ್ತಿವಂತನಾಗುತ್ತಾನೆ  ಪರಮಾತ್ಮ- ಅನಂತ, ಅವ್ಯಯ, ನಿರ್ವಿಕಾರ,  ಸರ್ವಶಕ್ತನಾಗಿದ್ದ. ಜ್ಞಾನಸ್ವರೂಪನೂ, ಸಚ್ಚಿದಾನಂದ ಸ್ವರೂಪನೂ ಅವನೇ.
ಅಜ್ಞಾನಂದ ಜೀವಾತ್ಮ ಬಂಧನಲ್ಲಿ ಸಿಲುಕಿರುತ್ತ ಹಾಗಾಗಿ ಮನಸ್ಸು, ಶರೀರ, ಇಂದ್ರಿಯಂಗಳ ನಿಯಮಿತ ಗಡಿಯೊಳಗೆ ಮಾತ್ರ ಸಂಚರುಸುತ್ತದೆ . ಇದಕ್ಕೆ ಪ್ರಕೃತಿಯ ಮಾಯೆ/ತ್ರಿಗುಣಗಳೇ  ಕಾರಣ. ಜೀವಾತ್ಮ ಮನಸ್ಸು ಮತ್ತು ಇಂದ್ರಿಯಗಳಿಗೆ  ಪ್ರೇರಣೆಯ ಕೊಡುತ್ತದೆ  ಇದರಿಂದ ಅವನ  ಕರ್ಮಕ್ಕೆ ತೊಡಗುತ್ತದೆ
ಮರಣಾನಂತರ ಶರೀರವ ಬಿಟ್ಟ ಜೀವಾತ್ಮಗೆ ಪ್ರೇತ ಎಂದು ಹೆಸರು. ಈವರೇಗೆ ಗೋಚರವಾಗಿದ್ದ ಸ್ಥೂಲ ಶರೀರವ ಬಿಟ್ಟವ ಎಂದು  ಅರ್ಥ. ಕರ್ಮಫಲಕ್ಕನುಸಾರವಾಗಿ ಇನ್ನೊಂದು ಶರೀರವ ಪ್ರವೇಶ ಸಿಕ್ಕಾರೆ ಕರ್ಮಫಲವ ಅನುಭವಿಸಬೇಕು. ಅದಕ್ಕೆ ಕೆಲವು ಕಾಲ ಸಮಯ ಹಿಡಿತ್ತದೆ . ಕರ್ಮಫಲವ ಅನುಭವುಸಲು ಪರಲೋಕಯಾತ್ರೆ ಇಲ್ಲಿಂದ ಸುರುವಾವಗುವುದು ಜೀವವು ಹತ್ತು ದಿನಗಳವರೇಗೆ ತನ್ನ ಪರಿಚಿತ ಮನೆಲಿಯೇ (ಮನೆಪರಿಸರದಲ್ಲೇ) ವಾಸಿಸುತ್ತು. ಈ ಹತ್ತು ದಿನಗಳಲ್ಲಿ ಪ್ರೇತದ ಸೂಕ್ಷ್ಮ ಶರೀರಕ್ಕೆ – ಲಿಂಗಶರೀರಕ್ಕೆ ಪ್ರತಿದಿನ ಸಾಕಾರ ರೂಪ ಉಂಟಾಗಿ  ಹನ್ನೊಂದನೇ ದಿನ ಶರೀರಕ್ಕೆ ಆಕಾರವೂ ಪೂರ್ಣಗೊಳ್ಳುತ್ತದೆ  ತಿಲೋದಕ, ಬಲಿ, ಪಿಂಡ ತರ್ಪಣಗಳಿಂದ ಲಿಂಗ ಶರೀರಕ್ಕೆ ಬಲವುಂಟಾಗುವುದು ಹನ್ನೊಂದನೇ ದಿನ ಜೀವಂಗೆ ಒಂದು ಸಾಕಾರವಾದ ಶರೀರ ಲಭಿಸುತ್ತು. ಅಲ್ಲಿಂದ ಯಮಲೋಕಕ್ಕೆ ಪ್ರಯಾಣ ಆರಂಭ. ಈ ಯಮಲೋಕ ದಾರಿ ಸುಲಭವಾದ್ದಲ್ಲ. ಅತ್ಯಂತ ಕಠಿಣ ಹಾಗೂ ಕ್ಲೇಶದಾಯಕವಾದ್ದು. ಪಿಂಡದಾನ, ಮಾಸಿಕಶ್ರಾದ್ಧ, ತರ್ಪಣ, ಬ್ರಾಹ್ಮಣಭೋಜನ ಇತ್ಯಾದಿ ಕ್ರಿಯೆಗಳಿಂದ ಕಷ್ಟವು  ಸಾಧ್ಯತೆ ಇದ್ದು. ಜನನ ಮರಣ ಅಪರಿಹಾರ್ಯವಾದ್ದರಿಂದ ಬಂಧು ಮಿತ್ರರ  ರೋದನ ಆಕ್ರಂದನಂಗಳಿಂದ ಸತ್ತವರಿಗೆ ಯಾವ ಉಪಕಾರವೂ ಆಗುವುದಿಲ್ಲ  ಪಿಂಡದಾನ ತಿಲತರ್ಪಣಂಗಳಿಂದ ಮಾತ್ರ ಅವಕ್ಕೆ ಸದ್ಗತಿ ಉಂಟಾವುದು

No comments:

ನರನಾಡಿಗಳು

*ನರನಾಡಿಗಳು ಎಂದರೇನು ?* *ಇವುಗಳ ಮಹತ್ವ ಏನು ? ದೇಹದಲ್ಲಿ ಇವುಗಳು ಪ್ರತ್ಯೇಕವಾಗಿ ಇರುತ್ತವೆ  *ನರ(nerves) -* *ಮೆದುಳು,ಮೆದುಳು* *ಬಳ್ಳಿ(ಬೆನ್ನು ಹುರಿ) ಮತ್ತು* *ಅ...