Followers

Tuesday, 12 May 2020

ಗರುಡ ಪುರಾಣ (ಧರ್ಮ ವೃಕ್ಷ )

ಓಂ ಶ್ರೀ ಗುರುಭ್ಯೋ ನಮಃ ||
ಓಂ ಗಂ ಗಣಪತಯೇ ನಮಃ ||
ಸಂ ಸರಸ್ವತೈ ನಮಃ ||
ಓಂ ಬಸವೇಶ್ವರ ಸ್ವಾಮೀನೇ ಭ್ಯೋನಮಃ 
ಓಂ ಪಾರ್ವತಿ ಪತಿಭ್ಯೋನಮಃ 
ಓಂ ನಮೋ ಭಗವತೇ ವಾಸುದೇವಾಯ ।
ವಾಗರ್ಥಾವಿವ ಸಂಪೃಕ್ತೌ ವಾಗರ್ಥಪ್ರತಿಪತ್ತಯೇ ।
ಜಗತಃ ಪಿತರೌ ವಂದೇ ಪಾರ್ವತೀಪರಮೇಶ್ವರೌ ॥



ಅಥ ಗರುಡ ಪುರಾಣಂ  
ಉತ್ತರ ಖಂಡಃ । ಪ್ರಥಮೋಧ್ಯಾಯಃ ।
[ಪಾಪಿನಾಂ ಐಹಿಕಾ ಮುಷ್ಮಿಕ ದುಃಖ ನಿರೂಪಣಂ]                         

    [ಪಾಪಿಗಳ ಇಹ ಪರ ದುಃಖಂಗಳ ನಿರೂಪಣೆ]

ಧರ್ಮದೃಢಬದ್ಧಮೂಲೋ ವೇದಸ್ಕಂಧಃ ಪುರಾಣಶಾಖಾಢ್ಯಃ ।
ಕ್ರತುಕುಸುಮೋ ಮೋಕ್ಷಫಲೋ ಮಧುಸೂದನ ಪಾದಪೋ ಜಯತಿ ॥೦೧॥

" ಧರ್ಮವೇ ದೃಢವಾದ ಬೇರಾಗಿಯೂ, ವೇದವೇ ಕಾಂಡವಾಗಿಯೂ, ಪುರಾಣಗಳೇ ಕೊಂಬೆಗಳಾಗಿಯೂ, ಯಜ್ಞಗಳೇ ಹೂವಾಗಿಯೂ, ಮೋಕ್ಷವೇ ಫಲವಾಗಿಯೂ ಇಂತಹ  ಮಧಸೂದನರೂಪೀ ವೃಕ್ಷಕ್ಕೆ ಜಯವಾಗಲಿ "

(ಧರ್ಮವೇ ಜಗತ್ತಿನ ಬೇರು, ಧರ್ಮಸ್ವರೂಪನೂ, ಧರ್ಮದ ಅಧಿಕಾರೀಯೂ ಆಗಿ  ಆ ಭಗವಂತನ ಭಕ್ತಿಗೆ ಆರಾಧಿಸಬೇಕ್ಕಾದ್ದು ಪ್ರತಿಯೊಬ್ಬ ಮನುಷ್ಯನ ಕರ್ತವ್ಯ. ವೇದ, ಶಾಸ್ತ್ರ, ಪುರಾಣಗಳಲ್ಲಿ ವಿವರಿಸಲ್ಪಟ್ಟ ಆ ಧರ್ಮವು ಪರಿಶುದ್ಧವಾದ್ದು. ಇಡೀ ವೇದವ ವಿಭಜಿಸಿ ನಾಲ್ಕು ವೇದಗಳಾಗಿಯೂ, ಆ ವೇದವ ಮತ್ತೆ ಭಗವಂತನ ಅನೇಕ ನಾಮರೂಪಗಳ ಆಧಾರಲ್ಲಿ ಹದಿನೆಂಟು ಪುರಾಣಗಳಾಗಿಯೂ ರಚಿಸಿದ್ದದು ಭಗವದ್ ಸ್ವರೂಪಿ ವೇದವ್ಯಾಸ. ನೀತಿ ಶಾಸ್ತ್ರಗಳಿಗೆ  ಚಾರಿತ್ರಿಕ ಘಟನೆಗಳಿಗೆ ಅಧ್ಯಾತ್ಮ ತತ್ತ್ವಗಳಿಗೆ , ಸಮಾಜದ ಧ್ಯೇಯಗಳಿಗೆ ದೃಷ್ಟಾಂತಗಳೊಟ್ಟಿಗೆ ವಿವರಿಸಲ್ಪಟ್ಟ ಪಠ್ಯ ಪುಸ್ತಕಗಳೇ ಈ ಪುರಾಣಗಳು . ಇನ್ನು, ಯಜ್ಞಗಳಲ್ಲಿ ಮಾಡಲ್ಪಡುವ ಪಶು ವಧೆ ಆ ಮೂಕ ಪ್ರಾಣಿಗಳ ವಧೆ ಮಾಡುವದಕ್ಕೆ ಅಲ್ಲ. ಇದರ ತಿಳಿಯದ್ದೆ ಪೂರ್ವ ಕಾಲಲ್ಲಿ ಯಜ್ಞದ ಒಟ್ಟಿಗೆ ಪಶುವಧೆ ನಡಕ್ಕೊಂಡಬಂದಿದ್ದು. ಈ ಯಜ್ಞಗಳಲ್ಲಿ ಮಾಡಬೇಕ್ಕಾಗಿದ್ದದು ಮೂಕ ಪಶುಗಳ ವಧೆ ಅಲ್ಲ. ಆಧ್ಯಾತ್ಮಿಕ ಭಾಶೆಲಿ ಅಸಲಿ ಪಶು ಹೇಳಿರೆ ಜೀವ ಭಾವ, ಅಹಂಕಾರ ಎಂದರ್ಥ. ಜೀವದೆಶೆಯೇ ಪಶುತ್ವ. ಈ ಅಹಂತ್ವವ ವಧಿಸುವದೇ ಯಜ್ಞಗಳಲ್ಲಿ ನಿಜವಾದ ಪಶುವಧೆ. ಅಜ್ಞಾನ ನಮ್ಮ ಪಶುಗಳನ್ನಾಗಿಸುತ್ತು. ಹಾಗಾಗಿ ಜ್ಞಾನದ ಮೂಲಕ ನಮ್ಮ ಅಜ್ಞಾನ ಪಶುವ ಬಲಿಕೊಡಬೇಕು . ಮೋಹದ ಕ್ಷಯವೇ ಮೋಕ್ಷ, ಹೇಳಿರೆ., ಸುಖದುಃಖಗಳೆರಡರ ಬಂಧನದ ಬಿಡುಗಡೆ ಹೊಂದುವದು. ಮಧುಸೂದನ ಹೇಳಿರೆ ಭಗವಂತನ ಹಲವು ಹೆಸರುಗಳಲ್ಲಿ ಒಂದು. ‘ಮಧು’ ಹೇಳವ ರಾಕ್ಷಸನ ಕೊಂದವ ಹೇಳಿ ಸರಳವಾದ ನೇರ ಅರ್ಥ. ಹಾಗೇ, ಮಧು ಹೇಳಿರೆ ಜೇನ (ಸಿಹಿ). ಎಲ್ಲೋರಿಂಗೂ ಸಿಹಿ / ಮಧುರವಾಗಿದದ್ದು ಅಹಂ’. ಭಗವಂತ ಆ ‘ಅಹಂ’ ನಾಶಮಾಡುತ್ತ . ಹಾಗಾಗಿ ಅವ ಮಧುಸೂದನ. ನಿಜವಾದ ಜ್ಞಾನಿ ಆದವನಲ್ಲಿ ‘ಅಹಂ’ ಇರದೆ . ಭಗವಂತನ ಬಗ್ಗೆ ನಿಜ ಜ್ಞಾನವಗಳಿ ಸಬೇಕ್ಕಾದ್ದು ಮನುಷ್ಯನ ಕರ್ತವ್ಯ. ಹಾಗೆ ಆ ನಿರಂತರ ಪ್ರಯತ್ನಲ್ಲಿ ಮುಂದುವರೆದಾಗ, ಭಗವಂತ ನಮ್ಮ ಆ  ‘ಅಹಂ’ನ ನಾಶಮಾಡುತ್ತ . ಅದು ನಾಶವಾಗದ್ದೆ ಭಗವಂತ ನಮಗೆ ದೊರಕುತ್ತನೆ . ಇನ್ನು ಮಧುಸೂದನ ಪಾದವ – ಭಗವಂತನ ಧರ್ಮದ ವೃಕ್ಷವಾಗಿ ವರ್ಣಿಸಲ್ಪಟ್ಟಿದು. ಮಧುಸೂದನ ವೃಕ್ಷ ಹೇಳಿ ಹೆಸರು. ವೃಕ್ಷ ತನ್ನ ಆಸರೆಯ ಬಯಸಿ ಬರೋರಿಂಗೆಲ್ಲ ನೆರಳ ಆಶ್ರಯವ ನೀಡುತ್ತಾ ಹಾಗೇ ಧರ್ಮವೇ ಗಟ್ಟಿ ಬೇರುಗಳಾಗಿ, ಧರ್ಮದ ವಿಚಾರವೇ ಬಲವಾಗಿ ಆ ವೇದವೇ ಬುಡವಾಗಿ (ಕಾಂಡ), ಮರಬೆಳದು ಪುರಾಣಗಳೇ ಆ ಧರ್ಮವೃಕ್ಷದ ಶಾಖೆಗಳಾಗಿ, ಆ ವೃಕ್ಷದ ಕುಸುಮವೇ ಎಲ್ಲರನ್ನೂ ತನ್ನೆಡೆ ಆಕರ್ಶಿಸುವ ಯಜ್ಞಗಳಾಗಿ, ಮೋಕ್ಷ ಹೇಳವ ಫಲವ ನೀಡುವ ಆ ಮಧುಸೂದನ ವೃಕ್ಷಕ್ಕೆ ಸರ್ವಥಾ ಜಯ ಹೇಳಿ ಇಲ್ಲಿ ವರ್ಣಿತವಾಗಿದ್ದು).

ನೈಮಿಷೇsನಿಮಿಷಕ್ಷೇತ್ರೇ ಋಷಯಃ ಶೌನಕಾದಯಃ ।
ಸತ್ರಂ ಸ್ವರ್ಗಾಯ ಲೋಕಾಯ ಸಹಸ್ರಸಮಮಾಸತ ॥೦೨॥

ದೇವತಾಕ್ಷೇತ್ರವಾದ ನಿಮಿಷಾರಣ್ಯಲ್ಲಿ ಶೌನಕಾದಿ ಋಷಿಯು ಸ್ವರ್ಗ ಪ್ರಾಪ್ತಿ ಬೇಕಾಗಿ ಸಹಸ್ರವರ್ಷ ನಡದ  ಒಂದು ಸತ್ಯಯಾಗವ ಮಾಡಿ.
(ನೈಮಿಷಾರಣ್ಯಲ್ಲಿ ಯಾವುದೇ ಚಂಚಲವಾದ ಮನಸ್ಸು ಪರಮಾತ್ಮನಲ್ಲಿ ಲೀನವಾಯಿತು  ಹಾಗಾಗಿ ಪವಿತ್ರವಾದ ಈ ವನಪ್ರದೇಶ ವಿಷ್ಣುವಿನದ್ದು, ದೇವತೆಗಳ ಪ್ರಿಯ ಸ್ಥಳ ಹೇಳಿಯೂ, ಇದಕ್ಕೆ ನೈಮಿಷಾರಣ್ಯ ಎಂದು ಹೆಸರು ಬಂತು. ಸ್ವರ್ಗ ಹೇಳಿ  ಸಂತೋಷ. ನಿರಂತರ ಸಂತೋಷ ಆ ಭಗವಂತನಲ್ಲೇ. ಹಾಗಾಗಿ ಸ್ವರ್ಗಾಯ ಲೋಕಾಯ ಹೇಳಿ ಆ ಭಗವಂತನ ಲೋಕವ ಪಡೆಯಲೇ ಬೇಕಾಗಿ ಎಂದು ಅರ್ಥ. ಅರ್ಥಾತ್ ಮೋಕ್ಷಪ್ರಾಪ್ತಿಗಾಗಿ ಶೌನಕಾದಿ ಋಷಿಗೊ ಅಲ್ಲಿ ತಪಸ್ಸು ನಿರತರಾಗಿದ್ದ . ಅಂತಹ ಒಂದು ದಿನಲ್ಲಿ ದೀರ್ಘ ಕಾಲದ ಸತ್ರ (ಯಾಗ ) ಮಾಡಿಕೊಂಡಿದ್ದರು 


ತ ಏಕದಾ ತು ಮುನಃ ಪ್ರಾತರ್ಹುತಹುತಾಗ್ನಯಃ ।
ಸತ್ಕೃತಂ ಸೂತಮಾಸೀನಂ ಪ್ರಪ್ರಚ್ಛುರಿದಮಾದರಾತ್ ॥೦೩॥

ಒಂದು ದಿನ ಋಷಿಗಳು ಉದಯ ಕಾಲದಲ್ಲಿ  ಆಹುತಿಗಳ ಮುಗಿಸಿ ತನ್ನ ಆಸನಲ್ಲಿ ಕೂತಿದ್ದ ಸೂತಪುರಾಣಿಕರ ಆದರದಿಂದ  ಉಪಚರಿಸಿ (ಸತ್ಕರಿಸಿ) ಕೇಳಿದರು 
(ಯಾಗ ಹೇಳಿದ  ದಿನದ ೨೪ ಗಂಟೆಯೂ ಹೋಮ ಆಗಿನಡೆವ ಕಲ್ಪನೆ ಅಲ್ಲ. ಹೊತ್ತು ಹೊತ್ತಿಗೆ ಹೋಮ ಮುಗಿಸಿಕೊಂಡು , ಮತ್ತೆ ಉಳಿದ ಸಮಯಾವಕಾಶಲ್ಲಿ ಶಾಸ್ತ್ರಾಸ್ತ್ರ ಚಿಂತನೆಗೆ , ಮಂಥನಗೆ  ನಡೀತಿತ್ತು ಹಾಗಿದ್ದಲ್ಲಿ ಒಂದಿನ ಅಲ್ಲಿ ಸೇರಿದ ಋಷಿಗೊ ಒಟ್ಟಿಂಗೆ ಕೂಡಿಗೊಂಡು (ಗುಂಪಾಗಿ) ಹೋಗಿ ಗುರುಗಳಾದ ಸೂತಪುರಾಣಿಕರ ಬಳಿ ಹೋಗಿ ಅವರ ಸೇವೋಪಚಾರ ಮಾಡಿ ಅವರ ಹತ್ತಿರ  ಹೆಚ್ಚಿನ ಜ್ಞಾನವ ತಿಳಿವಳಿಕೆ ಅವರಲ್ಲಿ ಕೇಳಿದವು

No comments:

ನರನಾಡಿಗಳು

*ನರನಾಡಿಗಳು ಎಂದರೇನು ?* *ಇವುಗಳ ಮಹತ್ವ ಏನು ? ದೇಹದಲ್ಲಿ ಇವುಗಳು ಪ್ರತ್ಯೇಕವಾಗಿ ಇರುತ್ತವೆ  *ನರ(nerves) -* *ಮೆದುಳು,ಮೆದುಳು* *ಬಳ್ಳಿ(ಬೆನ್ನು ಹುರಿ) ಮತ್ತು* *ಅ...