ಕಥಿತೋ ಭವತಾ ಸಮ್ಯಗ್ದೇವಮಾರ್ಗಃ ಸುಖಪ್ರದಃ ।
ಇದಾನೀಂ ಶ್ರೋತುಮಿಚ್ಛಾಮೋ ಯಮಮಾರ್ಗಂ ಭಯಪ್ರದಮ್ ॥೦೪॥
ತಥಾ ಸಂಸಾರದುಃಖಾನಿ ತತ್-ಕ್ಲೇಶಕ್ಷಯಸಾಧನಮ್ ।
ಐಹಿಕಾಮುಷ್ಮಿಕಾನ್-ಕ್ಲೇಶಾನ್-ಯಥಾವದ್ವಕ್ತುಮರ್ಹಸಿ ॥೦೫॥
ಋಷಿಗೊ ಹೇಳಿದವು – ಸುಖಕರವಾದ ದೇವಮಾರ್ಗದ ವಿಷಯವಾಗಿ ವಿವರವಾಗಿ ಅರ್ಥವಾಗುವ ಹಾಗೆ ಹೇಳಿದ್ದಿರಿ ಈಗ ಭಯಂಕರವಾದ (ಭಯ ಹುಟ್ಟುಸುವಂತ) ಯಮ ಮಾರ್ಗದ ವಿಷಯವ ಕೇಳ್ಳೆ ಇಚ್ಛೆಪಡುತ್ತೆವೆ .
ಸಂಸಾರ ದುಃಖಗಳನ್ನೂ ಮತ್ತೆ ಅದರ ಪರಿಹರಿಸುವ ವಿಧಾನವನ್ನೂ, ಇಹ ಪರ ಲೋಕಗಳಲ್ಲಿ ಉಂಟಾದ ಕಷ್ಟನೋವುಗಳ ಪರಿಹರಿಸಲು ಸಮರ್ಥನೆ ನೀಡಿ
ದೇವ ಮಾರ್ಗದ ವಿವರಣೆ ಗರುಡಪುರಾಣದ ಪೂರ್ವ ಭಾಗಲ್ಲಿ ಬರುವುದು ದೇವಪೂಜಾವಿಧಿಗೊ, ದಾನ, ವ್ರತ, ನೀತಿ, ವ್ಯಾಕರಣ, ಮಂತ್ರ, ರಕ್ಷೆ , ಔಷಧಿ, ಸಾಮುದ್ರಿಕ ಶಾಸ್ತ್ರ, ನವರತ್ನ.. ಇತ್ಯಾದಿ ವಿಷಯಗಳ . ದೇವಮಾರ್ಗದ ವರ್ಣನೆ ಇರುವುದು ಅದೇ ಪದ್ಮ ಪುರಾಣದ ಭೂಮಿ ಖಾಂಡಲ್ಲಿ 14ನೇ ಅಧ್ಯಾಯದ 19-41 ಶ್ಲೋಕಗಳಲ್ಲಿ. ನಿಷ್ಠಾವಂತ ಸತ್ಕರ್ಮಿಯಾಗಿ ಪುಣ್ಯವಂತನಾದವನಿಗೆ ದೊರಕುವ ಸುಖ ಮತ್ತೆ ಮರಣ ನಂತರ ಅವ ಪರಲೋಕಕ್ಕೆ ಹೋದ ದೇವಮಾರ್ಗ ಅಲ್ಲಿ ವರ್ಣಿಸಲ್ಪಟ್ಟಿದು.
ಹಾಗೆಯೇ ಶಾರದಮ್ಮ ಧಾರ್ಮಿಕ ಪ್ರಕಾಶನದ ‘ಸಾಯಿಬೋಧಾಮೃತಾಗರ’ ಪುಸ್ತಕದಲ್ಲಿ ಈ ರೀತಿಯಾಗಿ ವಿವರಿಸಿದ್ದವು – ಸತ್ಯ, ಶುಚಿತ್ವ, ಕ್ಷಮೆ, ಶಾಂತಿ, ತೀರ್ಥಸ್ನಾನ, ಪುಣ್ಯಕಾರ್ಯಗಳಿಂದ ಧರ್ಮವ ಪಾಲುಸುವವನಿಗೆ ಉಂಟಪ್ಪ ಮರಣ – ಅವಂಗೆ ರೋಗ ಬತ್ತಿಅವನ ದೇಹಕ್ಕೆ ಸುಖ ಸಂತೋಷ ಇತ್ಯಾದಿ ಉಂಟಾಗಿ ದಿವ್ಯರೂಪವ ಧರಿಸಿದ, ಸಂಗೀತವಿಶಾರದರಾದ ಗಂಧರ್ವರು, ವೇದಪಾರಾಯಣ ಮಾಡುವ ಬ್ರಾಹ್ಮರು ಅವನ ಹತ್ತಿರ ಬಂದು ಮಧುರವಾಗಿ ಸ್ತೋತ್ರ ಮಾಡುತ್ತರೆ ಅವನು ಆರೋಗ್ಯವಾಗಿದ್ದು, ದೇವರ ಪೂಜೆ ಮಾಡಿ, ತೀರ್ಥವ ತೆಗೆದುಕ್ಕೊಂಡು, ಸುಖಾಸನಲ್ಲಿ ಕೂತೊಡೆ ಅಗ್ನಿಹೋತ್ರದ ಕೋಣೆ, ದನದ ಹಟ್ಟಿ, ದೇವಸ್ಥಾನ, ತೋಟ, ಕೆರೆ, ಅಶ್ವತ್ಠ, ಆಲ, ತುಳಸೀ, ಬಿಲ್ವ, ಅಶೋಕ, ಮಾವು ಇವುಗಳ ಹತ್ತಿರ ಕುದುರೆ ಲಾಯ, ಗಜಶಾಲೆ, ಬ್ರಹ್ಮಜ್ಞಾನಿಯ ಸನ್ನಿಧಿ, ಅರಮನೆ ಅಥವಾ ರಣಭೂಮಿ – ಈ ಜಾಗದಲಿ ಮರಣ ಹೊಂದುತ್ತ. ಈ ಪುಣ್ಯಕರವಾದ ಮೃತ್ಯು ಸ್ಥಾನದಲ್ಲಿ ಧರ್ಮದ ಫಲವಾಗಿ ಪ್ರಾಪ್ತವಾಗಿ . ಪರಿಶುದ್ಧವಾದ ಧರ್ಮವ ನಿತ್ಯವೂ ಆಚರಿಸುವ ಧರ್ಮಾತ್ಮನೂ, ಧರ್ಮವತ್ಸಲನೂ ಆದವ, ಮೃತ್ಯು ಬಂದಗ ಈ ಸ್ಥಾನವ ಹೊಂದುತ್ತ. ಪುಣ್ಯವಂತ ತಾಯಿಯ , ಅಪ್ಪನ, ಸಹೋದರರ.. ಇನ್ನಿತರ ಬಂಧುಮಿತ್ರರ ನೋಡುತ್ತ ಆ ಪುಣ್ಯವಂತನ ವಂದಿಗೆ ಪುನಃ ಪುನಃ ಸ್ತುತಿಸುತ್ತವು. ಅವ ಪಾಪಿಷ್ಠರ ನೋಡುತ್ತಲೆ ಗಂಧರ್ವರು ಗೀತೆ ಹಾಡುತ್ತವು. ಸ್ತುತಿ ಪಾಠಕರು ಸ್ತುತಿ ಗೈತ್ತವು. ವೇದಪಾರಂಗತರು ವೇದಪಾರಾಯಣ ಮಾಡುತ್ತವು. ತಾಯಿಯ ಪ್ರೀತಿಂದ ಮಾತಾಡಿಸಿಗೊಂಡಿರುತ್ತು. ಅಪ್ಪನೂ, ಸಜ್ಜನರೂ ಇದ್ದಲ್ಲಿ ಧರ್ಮಾತ್ಮನೂ, ಮಹಾಮತಿವಂತನೂ ಆದವ ಈ ರೀತಿ ಪುಣ್ಯ ಸ್ಥಳಲ್ಲಿ ಮರಣವ ಹೊಂದುವನು . ಸ್ನೇಹಭಾವಂದಲೂ ಇದ್ದಾಗ ಯಮದೂತರು ಪ್ರತ್ಯಕ್ಷರಾದಾರು ಸ್ವಪ್ನ, ಮೋಹ, ಕ್ಲೇಶಗಳು ಇರುತ್ತಿರಲಿಲ್ಲ “ಮಹಾಪ್ರಾಜ್ಞನಾದ ಧರ್ಮರಾಜ ಹೀಗೆ ಇಲ್ಲಿಗೆ ಬಾ” ಎಂದು ಅವನಿಗೆ ದೂತರು ನಿವೇದಿಸುತ್ತರೆ ಅವನಿಗೆ ಮೋಹವಾಗಲೀ, ದುಃಖವಾಗಲೀ, ವಿಸ್ಮೃತಿಯಾಗಲೀ, ಸಂದೇಹವಾಗಲೀ ಉಂಟಾಗಿಲ್ಲ. ಪ್ರಸನ್ನವದನನಾಗಿರುತ್ತಿದ್ದ . ಜ್ಞಾನವಿಜ್ಞಾನ ಸಂಪನ್ನನಾಗಿ ಅವ ಜನಾರ್ದನನ ಸ್ಮರಿಸುತ್ತ. ಅವರ (ದೂತರ) ಒಟ್ಟಿಗೆ ಸಂತೋಷಚಿತ್ತದಿಂದ ಹೋದನು . ದೇಹವ ಬಿಡುವಾಗ ಅವಗೆ ಎಲ್ಲವೊ ಒಂದಾಗಿ ಕಾಣುತ್ತು. ಹತ್ತನೇ ದ್ವಾರದ (ಬ್ರಹ್ಮರಂಧ್ರ) ಅವನ ಆತ್ಮ ಹೊರಗಡೆ ಹೋಯಿತು . ಅವಂಗೆ ಹಂಸಾಯಾನಂದ ಕೂಡಿದ ಮನೋಹರವಾದ ಪಲ್ಲಕಿ ಬತ್ತು. ಅಂತಹ ವಿಮಾನಲ್ಲಿ ಕೂದು ಪಾವನವಾದ ಪುಣ್ಯವಾದ ಹರಿಯ ಲೋಕಕ್ಕೆ ಹೋದನು. ಧರ್ಮಾತ್ಮ ಗೀತೆಯನ್ನೂ, ಪಂಡಿತರ, ವಾದಿಗಳ, ವೇದಪಾರಂಗತರಾದ ಬ್ರಾಹ್ಮಣರ ಮತ್ತೆ ಸಾಧುಗಳ ಸ್ತುತಿಗಳ ಕೇಳಿಗೊಂಡು ಸರ್ವ ಸೌಖ್ಯ ಕೂಡಿದವನಾಗಿ, ಪುಣ್ಯ, ದಾನ ಪ್ರಭಾವದಿಂದ ಉಂಟಾದ ಫಲವ ಅವ ಅಲ್ಲಿ ಪಡೆದನು
ಸೂತ ಉವಾಚ-
ಶ್ರುಣುಧ್ವಂ ಭೋ ವಿವಕ್ಷ್ಯಾಮಿ ಯಮಮಾರ್ಗಂ ಸುದುರ್ಗಮಮ್ ।
ಸುಖದಂ ಪುಣ್ಯಶೀಲಾನಾಂ ಪಾಪಿನಾಂ ದುಃಖದಾಯಕಮ್ ॥೦೬॥
ಯಥಾ ಶ್ರೀವಿಷ್ಣುನಾ ಪ್ರೋಕ್ತಂ ವೈನತೇಯಾಯ ಪೃಚ್ಛತೇ ।
ತಥೈವ ಕಥಯಿಷ್ಯಾಮಿ ಸಂದೇಹಚ್ಛೇದನಾಯವಃ ॥೦೭॥
ಕದಾಚಿತ್ಸುಖಮಾಸೀನಂ ವೈಕುಂಠೇ ಶ್ರೀ ಹರಿಂ ಗುರುಮ್ ।
ವಿನಯಾವನತೋ ಭೂತ್ವಾ ಪಪ್ರಚ್ಛ ವಿನತಾಸುತಃ ॥೦೮॥
ಸೂತ° ಹೇಳಿದ° – ಎಲೈ ಋಷಿಗಳೇ, ಕೇಳಿ., ಪುಣ್ಯವಂತರಿಂಗೆ ಸುಖಕರವಾಗಿಯೂ ಪಾಪಿಗೊಕ್ಕೆ ದುಃಖದಾಯಕವೂ ಆಗಿ ದುರ್ಗಮವಾದ ಯಮಮಾರ್ಗದ ವಿವರುಸುತ್ತೆನೆ
ವಿನತೆಯ ಮಗನಾದ ಗರುಡ° (ವೈನತೇಯ°) ಕೇಳಿದ್ದಕ್ಕೆ ಶ್ರೀವಿಷ್ಣುವು ಎನು ಹೇಳಿದ್ದನೋ ಅದನ್ನೇ ಹಾಗೇ ನಿಮ್ಮ ಸಂದೇಹ ನಿವಾರಿಸಲು ವಿವರುಸುತ್ತೆನೆ
ಒಂದು ದಿನ ವೈಕುಂಠಲ್ಲಿ ಜಗದ್ಗುರುವಾದ ಶ್ರೀಹರಿ ಸುಖಾಸೀನನಾಗಿ ಕುಳಿತಾಗ ವಿನೀತನಾಗಿ (ನಮಸ್ಕರಿಸಿ ವಿನಮ್ರಭಾವಂದ ಶ್ರೀ ಹರಿಯ ಬಳಿ ) ಕೇಳಿದ°
ಮೂಲ ಲೇಖಕಕರು :-ಸಾಹಿತ್ಯ ಶಿರೋಮಣಿ ಶ್ರೀಯುತ ವೆಂಕಪ್ಪ ಭಟ್ಟರು

No comments:
Post a Comment