‘ಗುರು’ ಹೇಳುವ ಪದಕ್ಕೆ – ಗು = ಅಂಧಕಾರ, ರು = ತೇಜಸ್ಸು. ಅಜ್ಞಾನ ಅಂಧಕಾರವ ತೊಲಗಿಸಿ ಜ್ಞಾನ ತೇಜಸ್ಸಿಂದ ಬೆಳಗಿಸಿ ಪ್ರಕಾಶಿಸುವದು. ಗುರು ನಿತ್ಯಸಿದ್ಧ°, ಬುದ್ಧ°, ನಿರ್ಮಲ ಸ್ವರೂಪ ನಾಗಿರುವ . ಗು – ಗುಣಾತೀತ°, ರು – ರೂಪಾತೀತ. ಅಂಥವರೆ ಗುರುಃ ಬ್ರಹ್ಮ ಗುರುಃ ವಿಷ್ಣು ಗುರುಃ ದೇವಃ ಮಹೇಶ್ವರಃ, ಗುರುಃ ಸಾಕ್ಷಾತ್ ಪರಂಬ್ರಹ್ಮ ., ಅಂತಹ ಗುರುವಿಗೆ ನಮಸ್ಕಾರ (ತಸ್ಮೈ ಶ್ರೀ ಗುರುವೇ ನಮಃ). ಈ ಗುಣಗಳು ಇಲ್ಲದ್ರೆ ಅದು ಬರೇ ಭಾರ ಹೇಳುವ ಅರ್ಥವ ಕೊಡುತ್ತದೆ ಅಂಥ ಗುರುವ ಸ್ತುತಿಸಿ ವಂದಿಸಿ ಎಂತ ಗುಣವೂ ಇಲ್ಲೆ. ಮೇಲ್ಮೈ ನೇರ ಸರಳಾರ್ಥ. ಇದರ ಅಂತರಾರ್ಥ – ಬ್ರಹ್ಮನೇ ಗುರು, ವಿಷ್ಣುಮೂರ್ತಿಯೇ ಗುರು, ಮಹೇಶ್ವರನೇ ಗುರು, ಸಾಕ್ಷಾತ್ ಪರಬ್ರಹ್ಮನೇ ನಿನ್ನ ಗುರು ಎಂದು ತಿಳಿದು ಮುಕ್ತನಾಗು. ವಿಷಯ ವಾಸನೆಗಳಲ್ಲಿ ಸಂಬಂಧ ಇಲ್ಲದ್ದ ಗುರು ಸಿಕ್ಕುವದು ಸುಲಭ ಅಲ್ಲದ್ದರಿಂದ ನಮ್ಮಲ್ಲಿ ಅಂತರ್ಯಾಮಿಯಾಗಿ ಪರಮಾತ್ಮನನ್ನೇ ಗುರು ಎಂದು ಪ್ರಾರ್ಥಿಸಿರೆ ನವಗೆ ನಮ್ಮ ಹೃದಯಂದ ಆ ಪರಮಾತ್ಮ ಸದ್ಭೋದನೆ ನೀಡಿ ನಮ್ಮ ಮುಕ್ತನನ್ನಾಗಿ ಮಾಡುತ್ತ. ಮಾನವಗೆ ಜ್ಞಾನ ಲಭಿಸುವದು ಗುರುವಿನ ಮೂಲಕ. ಗುರುವಿಂದ ವಿದ್ಯೆ (ಜ್ಞಾನ) ಸಿಕ್ಕರೆ ನಾವು ಗುರುವಿಗೆ ಸಂಪೂರ್ಣವಾಗಿ ವಿನೀತರಾಗಿ ಶರಣಾಗು . ಗುರು ಹೇಳಿರೆ ಭಗವಂತನ ಪ್ರತಿನಿಧಿ. ಗುರುವಿಗೆ ಶರಣಾಗತನಗು ಹೇಳಿ ಆ ಭಗವಂತಂಗೇ ಶರಣಾಗತನಾದಾಗೇ. ಯಾರು ಭಗವಂತನಿಗೆ ಅನನ್ಯ ಭಕ್ತಿ ವಿಶ್ವಾಸದಿಂದ ಶರಣಾಗತನಾಗುವನೋ ಅವನ ಯೋಗಕ್ಷೇಮವ ಆ ಭಗವಂತ ನೋಡಿಕೊಳ್ಳುತ್ತಾನೆ . ಅವನಲ್ಲಿ ಸದ್ಬುದ್ಧಿಯ ಪ್ರಚೋದಿಸಿ, ಸನ್ಮಾರ್ಗಲ್ಲಿ ನಿರತನಾಗಿ, ಸಿದ್ಧಿಯ ದಾರಿಲಿ ಮುನ್ನೆಡೆದರೆ ಆ ಭಗವಂತ° ಅನುಕೂಲ ಮಾಡಿಕೊದುತ್ತನೆ °.)
(ಶ್ರವಣಂ, ಕೀರ್ತನಂ, ವಿಷ್ಣೋಃ ಸ್ಮರಣಂ, ಪಾದಸೇವನಂ, ವಂದನಂ, ಅರ್ಚನಂ, ದಾಸ್ಯಂ, ಸ್ನೇಹಂ, ಆತ್ಮ ನಿವೇದನಂ ಇವು ಒಂಬತ್ತು ವಿಧಗಳು . ಇದರಲ್ಲಿ ಯಾವುದಾದರೊಂದರನ್ನಾರು ಸರಿಯಾಗಿ ಆಚರಿಸಿರೆ ಭಗವಂತಂಗೆ ಸಂಪೂರ್ಣ ಶರಣಾಗತನಾದರೆ ಆವ ಭಗವಂತ ಅವನಿಗೆ ಒಲುದು ಅವನಿಗೆ ಮಾರ್ಗದರ್ಶನವ ನೀಡಿ ಸಲಹುತ್ತನೆ .
ಗರುಡ ಉವಾಚ-
ಭಕ್ತಿಮಾರ್ಗೋ ಬಹುವಿಧಃ ಕಥಿತೋ ಭವತಾ ಮಮ ।
ತಥಾ ಚ ಕಥಿತಾ ದೇವಭಕ್ತಾನಾಂ ಗತಿರುತ್ತಮ ॥೦೯॥
ಅಧುನಾ ಶ್ರೋತುಮಿಚ್ಛಾಮಿ ಯಮಮಾರ್ಗಂ ಭಯಂಕರಮ್ ।
ತ್ವದ್ಭಕ್ತಿವಿಮುಖಾನಾಂ ಚ ತತ್ರೈವ ಗಮನಂ ಶ್ರುತಮ್ ॥೧೦॥
ಸುಗಮಂ ಭಗವನ್ನಾಮ ಜಿಹ್ವಾ ಚ ವಶವರ್ತಿನೀ ।
ತಥಾಪಿ ನರಕಂ ಯಾಂತಿ ಧಿಗ್ ಧಿಗಸ್ತು ನರಾಧಮಾನ್ ॥೧೧॥
ಅತೋ ಮೇ ಭಗವನ್ಬ್ರೂಹಿ ಪಾಪಿನಾಂ ಯಾ ಗತಿರ್ಭವೇತ್ ।
ಯಮಮಾರ್ಗಸ್ಯ ದುಃಖಾನಿ ಯಥಾ ತೇ ಪ್ರಾಪ್ನುವಂತಿ ವೈ ॥೧೨॥
ಗರುಡ ಹೇಳಿದ°-
ಬಹುವಿಧವಾದ ಭಕ್ತಿಮಾರ್ಗಗಳಿಗೆ ನಿನ್ನಂದ ಎನಗೆ ಹೇಳಲ್ಪಟ್ಟತ್ತು, ಹಾಗೇ ದೈವಭಕ್ತರಿಗೆ ಸಿಕ್ಕುವ ಉತ್ತಮ ಗತಿಯೂ ತಿಲಿಸಲ್ಪಟ್ಟಿತು
ಈಗ ಆನು ಭಯಂಕರವಾದ ಯಮಮಾರ್ಗವ ಕುರಿತಾಗಿ ಕೇಳಲು ಇಚ್ಛೆಪಡುತ್ತೆನೆ ನಿನ್ನಲ್ಲಿ ಭಕ್ತಿ ( ದೈವಭಕ್ತಿ ) ಇಲ್ಲದವರು ಕೂಡಾ ಅದೇ ಮಾರ್ಗಲ್ಲಿ ಹೋಗುವವು ಹೇಳಿ ಕೇಳಿದ್ದೆ.
ಭಗವಂತನ ನಾಮವೂ ಸುಲಭ, ನಾಲಗೆಯೂ ನಮ್ಮ ವಶವೇ ಆಗಿದ್ದು. ಅದರೂ ನರಕಕ್ಕೆ ಕೂಪ ನರಾಧಮರಿಗೆ ಧಿಕ್ಕಾರ ಧಿಕ್ಕಾರ.
ಹಾಗಾಗಿ ಹೇ ಭಗವನ್, ಪಾಪಿಗಳಿಗೆಕ್ಕೆ ಏವ ಗತಿ ಉಂಟಾಗುವವು , ಅವು ಯಾವ ರೀತಿಲಿ ಯಮಮಾರ್ಗದ ದುಃಖಗಳ ಅನುಭವಿಸುವವು ಎನಗೆ ನೀನು ತಿಳಿಹೇಳು.
(ಶ್ರವಣಂ, ಕೀರ್ತನಂ, ವಿಷ್ಣೋಃ ಸ್ಮರಣಂ, ಪಾದಸೇವನಂ, ವಂದನಂ, ಅರ್ಚನಂ, ದಾಸ್ಯಂ, ಸ್ನೇಹಂ, ಆತ್ಮ ನಿವೇದನಂ ಇವು ಭಕ್ತಿ ಮಾರ್ಗದ ಒಂಬತ್ತು ವಿಧ ಇದರಲ್ಲಿ ಯಾವುದಾದರೊಂದರನ್ನಾರು ಸರಿಯಾಗಿ ಆಚರಿಸಿರೆ ಭಗವಂತನಿಗೆ ಸಂಪೂರ್ಣ ಶರಣಾಗತನಾದನಿಗೆ, ಭಗವಂತ° ಅವನಿಗೆ ಒಲಿದು ಅವನಿಗೆ ಮಾರ್ಗದರ್ಶನವ ನೀಡಿ ಸಲಹುತ್ತನೆ . ಇದು ಭಗವಂತಂಗೆ ವಿನೀತನ ಲಕ್ಷಣಗಳು ಭಗವಂತನ ಭಕ್ತಿಮಾರ್ಗ ಹಿಡಿವದರಿಂದ ಮನುಷ್ಯಂಗೆ ಜೀವನದ ಮುಂದಾಣ ದಾರಿ ಸುಗಮ, ಜೀವನದ ಅಂತ್ಯವೂ ಸುಖಪ್ರದವಾಗಿ, ಮರಣೋತ್ತರ ದಾರಿಯೂ ಆನಂದದಾಯಕವಾಗಿ, ಮುಂದೆ ಹೋಗಿ ಆ ಸಚ್ಚಿದಾನಂದನ ಪರಮಾನಂದ ಭಾಗ್ಯವ ಪಡೆದು ಚಿಂತುಸಲು ಬುದ್ಧಿಶಕ್ತಿ ಇದ್ದು, ಉಚ್ಚರಿಸುಲು ಸುಲಭವಾದ ಭಗವನ್ನಾಮ ಇದ್ದು, ಉಚ್ಚರುಸುವ ನಾಲಗೆ ನಮ್ಮ ಅಧೀನಲ್ಲಿ ಇದ್ದರೂ ಮನುಷ್ಯ ಅದರ ಅಂದಾಜಿಯನ್ನ ಮಾಡದ್ದೆ ತನ್ನ ಜೀವನ ಕಷ್ಟಕರವನ್ನಾಗಿ ತಾನೇ ಮಾಡಿಗೊಳ್ಳುತ್ತಾನಲ್ಲದ್ದೆ, ಜೀವನದ ಅಂತ್ಯಲ್ಲಿ ನರಕಯಾತನೆಯ ಅನುಭವಿಸಿ, ಮರಣಾನಂತರ ಭಯಂಕರವಾದ ನರಕದಾರಿಲಿ ಸಾಗಿ ಘೋರನರಕವ ಸೇರಿ ಕಷ್ಟಪಡುವದು ನಿಜಕ್ಕೂ ದುರದೃಷ್ಟ. ಅಂತಹ ಮನುಷ್ಯ ಜೀವನಕ್ಕೆ ಧಿಕ್ಕಾರ. ಹಾಗಾಗಿ, ಭಕ್ತಿಮಾರ್ಗದ ಸುಖವ ವಿವರಿಸಿದ ನೀನು ಯಮಮಾರ್ಗದ ಕಷ್ಟವನ್ನೂ ವಿವರಿಸಿ ತಿಳಿಸಾಕೆಂದು ಭಗವಂತನಾದ ಶ್ರೀಮಹಾವಿಷ್ಣುವಿನ ಹತ್ತಿರ ವಿನೀತನಾಗಿ ಗರುಡ° ಕೇಳಿಕೊಳ್ಳುತ್ತಾನೆ
ಮೂಲ ಲೇಖಕಕರು :-ಸಾಹಿತ್ಯ ಶಿರೋಮಣಿ ಶ್ರೀಯುತ ವೆಂಕಪ್ಪ ಭಟ್ಟರು


No comments:
Post a Comment