ವಕ್ಷ್ಯೇಹಂ ಶ್ರುಣು ಪಕ್ಷೀಂದ್ರ ಯಮಮಾರ್ಗಂ ಚ ಯೇನ ಯೇ ।
ನರಕೇ ಪಾಪಿನೋ ಯಾಂತಿ ಶೃಣ್ವತಾಮಪಿ ಭೀತಿದಮ್ ॥೧೩॥
ಭಗವಂತ° ಹೇಳಿದ -
ಏ ಪಕ್ಷಿರಾಜನೇ!, ಯಾವ ಮಾರ್ಗಲ್ಲಿ ಪಾಪಿಗಳು ನರಕದ ಯಾತ್ರೆ ಮಾಡುತ್ತವೆಯೋ , ಯಾವುದರ ಕೇಳಿದ ಮಾತ್ರಕ್ಕೆ ಜನರು ಹೆದರಿಕೊಳ್ಳುತ್ತಾರೋ ಅಂಥ ಯಮಮಾರ್ಗದ ಕುರಿತಾಗಿ ಹೇಳುವೆ, ಕೇಳು-
(ಭಗವಂತ° ಹೇಳಿರೆ – ಭ=ಸೃಷ್ಟಿ, ಗ=ಸಂರಕ್ಷಣೆ, ವ=ಪರಿವರ್ತನೆ. ಈ ಮೂರರನ್ನೂ ಮಾಡಲು ಸಮರ್ಥನಾಗಿರುವವನು = ಭಗವಂತ.)
ಯೇಹಿ ಪಾಪರತಾಸ್ತಾರ್ಕ್ಷ್ಯ ದಯಾಧರ್ಮವಿವರ್ಜಿತಾಃ ।
ದುಷ್ಟ ಸಂಗಾಶ್ಚ ಸಚ್ಛಾಸ್ತ್ರ ಸತ್ಸಂಗತಿಪರಾಙ್ಮುಖಾಃ ॥೧೪॥
ಆತ್ಮಸಂಭಾವಿತಾಃ ಸ್ತಬ್ಧಾ ಧನಮಾನಮದಾನ್ವಿತಾಃ ॥
ಆಸುರಂ ಭಾವಮಾಪನ್ನಾ ದೈವೀಸಂಪದ್ವಿವರ್ಜಿತಾಃ ॥೧೫॥
ಅನೇಕಚಿತ್ತ ವಿಭ್ರಾಂತಾ ಮೋಹಜಾಲಸಮಾವೃತಾಃ ।
ಪ್ರಸಕ್ತಾಃ ಕಾಮಭೋಗೇಷು ಪತಂತಿ ನರಕೇsಶುಚೌ॥೧೬॥
ಯಾರು ಪಾಪಕಾರ್ಯಗಳಲ್ಲಿ ಇಚ್ಛೆಯುಳ್ಳವರಾಗಿದ್ದರೋ , ಯಾರು ದಯೆ ಮತ್ತೆ ಧರ್ಮವ ಬಿಡುವರೋ, ಯಾರು ದುಷ್ಟರ ಸಹವಾಸಲ್ಲಿರುತ್ತರೋ , ಯಾರು ಒಳ್ಳೆಯ ಶಾಸ್ತ್ರಗಳಿಂದಲೂ, ಒಳ್ಳೆವರ ಸಹವಾಸದಲೂ ಮಿಮುಖರಾಗಿರುತ್ತರೋ ,
ಯಾರು ದುರಹಂಕಾರಿಗಳೋ, ಯಾರು ಕಠಿಣ ಹೃದಯರೋ, ಯಾರು ಧನಮಾನಗಳ ಗರ್ವದಿಂದ ಕೂಡಿಕೊಂಡಿದ್ದರೋ , ಯಾರು ಆಸುರೀ ಭಾವ ಹೊಂದಿಗೊಡಿದ್ದರೋ , ಯಾರು ದೈವೀ ಸಂಪತ್ತಿನ್ನು ದೂರ ಮಾಡಿಗೊಂಡಿದ್ದರೋ ,
ಯಾರ ಮನಸ್ಸು ಮೋಹದ ಬಲೆಯಲ್ಲಿ ಸಿಕ್ಕಿ ಅನೇಕ ರೀತಿಲಿ ಭ್ರಾಂತಿಗೊಂಡಿರುತ್ತರೋ , ಯಾರು ಕಾಮಭೋಗಲ್ಲಿ ಆಸಕ್ತರಾಗಿದ್ದರೋ ಅವೆಲ್ಲರೂ ಕಲ್ಮಶಪೂರಿತವಾದ ನರಕಲ್ಲಿ ಬೀಳುವರು
ಯೇ ನರಾ ಜ್ಞಾನಶೀಲಾಶ್ಚ ತೇ ಯಾಂತಿ ಪರಮಾಂ ಗತಿಮ್ ।
ಪಾಪಶೀಲಾ ನರಾ ಯಾಂತಿ ದುಃಖೇನ ಯಮಯಾತನಾಮ್ ॥೧೭॥
ಯಾವ ಮನುಷ್ಯರು ಜ್ಞಾನಶೀಲರಾಗುವರೋ, ಅವರು ಉತ್ತಮ ಗತಿಯ ಪಡೆಯುತ್ತರೆ . ಪಾಪಶೀಲರಾದರು ದುಃಖಂದ ಯಮಯಾತನೆಯ ಅನುಭವುಸುವರು
ಪಾಪಿನಾಮೈಹಿಕಂ ದುಃಖಂ ಯಥಾ ಭವತಿ ತಚ್ಛೃಣು ।
ತತಸ್ತೇ ಮರಣಂ ಪ್ರಾಪ್ಯ ಯಥಾ ಗಚ್ಛಂತಿ ಯಾತನಾಃ ॥೧೮॥
ಪಾಪಿಗಳಿಂದ ಈ ಲೋಕದ ದುಃಖಗಳು ಹೇಗೆ ಉಂಟಾದvo ಮರಣಹೊಂದಿದ ಮತ್ತೆ ಯಾತನೆಗಳ ಅವು ಹೇಗೆ ಪಡೆದವು ಹೇಳುವುದನ್ನು ಕೇಳು.
ಸುಕೃತಂ ದುಷ್ಕೃತಂ ವಾಪಿ ಭುಕ್ತ್ವಾಪೂರ್ವಂ ಯಥಾರ್ಜಿತಮ್ ।
ಕರ್ಮಯೋಗಾತ್ತದಾ ತಸ್ಯ ಕಶ್ಚಿದ್ವ್ಯಾಧಿಃ ಪ್ರಜಾಯತೇ ॥೧೯॥
ಹಿಂದೆ ಸಂಪಾದಿಸಿದ ಸತ್ಕರ್ಮಗಳ ಮತ್ತೆ ದುಷ್ಕರ್ಮಗಳ ಫಲವನ್ನೂ ಕರ್ಮನಿಯಮಾನುಸಾರವಾಗಿ ಅನುಭವಿಸಿದವನಿಗೆ ಏವುದಾರು ಒಂದು ರೋಗ ಬರುತ್ತೆ
ಆಧಿವ್ಯಾಧಿಸಮಾಯುಕ್ತಂ ಜೀವಿತಾಶಾಸಮುತ್ಸುಕಮ್ ।
ಕಾಲೋ ಬಲೀಯಾನಹಿವದಜ್ಞಾತಃ ಪ್ರತಿಪದ್ಯತೇ ॥೨೦॥
ಮಾನಸಿಕ ಮತ್ತೆ ದೈಹಿಕ ಕಾಯಿಲೆಂದ ಕೂಡಿದ್ದರೂ ಬದುಕುವುದಕ್ಕೆ ಹೇಳುವ ಆಸೆಯ ಉತ್ಸುಕನಾಗಿರುವವನು ಅವನಿಗೆ ಗೊತಾಗದ್ದ ಹಾಗೆ ಬಲಶಾಲಿಯಾದ ಕಾಲ° ಹಾವಿನ ಹಾಗೆ ಅವನ ಮೇಲೆ ಬೀಳುತ್ತದೆ
ತತ್ರಾಪ್ಯಜಾತನಿರ್ವೇದೋ ಭ್ರಿಯಮಾಣಃ ಸ್ವಯಂಭೃತೈಃ ।
ಜರಯೋಪಾತ್ತವೈರೂಪ್ಯೋ ಮರಣಾಭಿಮುಖೋ ಗೃಹೇ ॥೨೧॥
ಜೀವನಲ್ಲಿ ಇನ್ನೂ ತಾತ್ಸಾರ ಹೊಂದದ್ದೆ ತಾನು ಪೋಷಿಸದವರಿಂದಲೇ ಸಾಕಲ್ಪಟ್ಟು ಮುದಿತನದಿಂದ ವಿರೂಪನಾಗಿ ಮರಣಾಭಿಮುಖನಾಗಿ ಮನೇಲಿ ಇರುವವನು
.
ಆಸ್ತೇsವಮತ್ಯೋಪನ್ಯಸ್ತಂ ಗೃಹಪಾಲ ಇವಾಹರನ್ ।
ಆಮಯಾವ್ಯಪ್ರದೀಪ್ತಾಗ್ನಿರಲ್ಪಾಹಾರೋsಲ್ಪಚೇಷ್ಟಿತಃ ॥೨೨॥
ತನ್ನ ಮನೆಯೋರು ತಿರಸ್ಕಾರಭಾವದಿಂದ ಹಾಕಿದ ಅಶನವ ನಾಯಿಯ ಹಾಂಗೆ ತಿನ್ನುತ್ತ. ರೋಗದಿಂದ ಜಠರಾಗ್ನಿ ದುರ್ಬಲವಾಗಿ ಅಲ್ಪಾಹಾರವ ತಿಂದುಗೊಂಡು ನಡವಲೂ ಶಕ್ತಿಯಿಲ್ಲದವನಾಗುತ್ತಾನೆ
ವಾಯುನೋತ್ಕ್ರಮತೋತ್ತಾರಃ ಕಫಸಂರುದ್ಧನಾಡಿಕಃ ।
ಕಾಸಶ್ವಾಸಕೃತಾಯಾಸಃ ಕಂಠೇ ಘುರಘುರಾಯತೇ ॥೨೩॥
ಉಸಿರಿನಲ್ಲಿ , ಕಫ ತುಂಬಿದ ಶ್ವಾಸನಾಳಗಳಿಂದ ಹೊರ ಬಾರದ ಕಣ್ಣಗುಡ್ಡೆ ಮೇಲಾಗಿ ತಿರುಗಿ, ಕೆಮ್ಮು ದಮ್ಮುಗಳಿಂದ ಆಯಾಸಪಟ್ಟುಗೊಂಡು ಅವನ ಗಂಟಲ್ಲಿಲಿ ಘುರುಘುರು ಶಬ್ದ ಬಂದು
ಶಯಾನಃ ಪರಿಶೋಚದ್ಭಿಃ ಪರಿವೀತಃ ಸ್ವಬಂಧುಭಿಃ ।
ವಾಚ್ಯಮಾನೋsಪಿ ನ ಬ್ರೂತೇ ಕಾಲಪಾಶವಶಂಗತಃ ॥೨೪॥
ದುಃಖಪಟ್ಟುಗೊಂಡು ತನ್ನ ನೆಂಟ್ರುಗಳಿಂದ ಸುತ್ತುವರಿದು ಹಾಸಿಗೆಲಿ ಮಲಗಿದ್ದ ಅವನನ್ನು ಕಾಲಪಾಶಕ್ಕೆ ಅಧೀನವಾಗಿ ಮಾತಾಡಿಸಿದರು ಮಾತಾದಲಾಗದೆ
ಏವಂ ಕುಟುಂಬಭರಣೇ ವ್ಯಾಪೃತಾತ್ಮಾsಜಿತೇಂದ್ರಿಯಃ ।
ಮ್ರಿಯತೇ ರುದತಾಂ ಸ್ವಾನಾಮುರುವೇದನಯಾsಸ್ತಧೀಃ ॥೨೫॥
ಈ ರೀತಿ ತನ್ನ ಕುಟುಂಬದ ಪೋಷಣೆಲಿಯೇ ಇದ್ದವನು ಮನಸ್ಸಿನ ಇಂದ್ರಿಯಂಗಳ ಗೆಲ್ಲದವನು ಆದ ಅವ ಬಂಧುಗೊ ರೋದಿಸಿ ಒಳ್ಳೆತನ ಎನೆಂದು ತಿಳಿಯದೆ ಮೂರ್ಛಿತನಾಗಿ ಮರಣ ಹೊಂದುತ್ತನೆ
ತಸ್ಮಿನ್ನಂತಕ್ಷಣೇ ತಾರ್ಕ್ಷ್ಯ ದೈವೀ ದೃಷ್ಟಿಃ ಪ್ರಜಾಯತೇ ।
ಏಕೀಭೂತಂ ಜಗತ್ಸರ್ವಂ ನ ಕಿಂಚಿದ್ವಕ್ತುಮೀಹತೇ ॥೨೬॥
ಆ ಅಂತಿಮ ಕ್ಷಣಲ್ಲಿ ಅವನಿಗೆ ದೈವೀದೃಷ್ಟಿಯು ಬoತ್ತು.ಅದರಿಂದ ಅವನು ಇಡೀ ಜಗತ್ತಿನ (ಇಹಲೋಕ, ಪರಲೋಕ) ಏಕೀಭೂತವಾಗಿ ನೋಡುತ್ತನೆ . ಆದರೆ ಯಾವುದನ್ನೂ ಬಾಯಿಬಿಟ್ಟು ಹೇಳದವನು ಆಗುತ್ತಾನೆ
ವಿಕಲೇಂದ್ರಿಯ ಸಂಘಾತೇ ಚೈತನ್ಯೇ ಜಡತಾಂ ಗತೇ ।
ಪ್ರಚಲಂತಿ ತತಃ ಪ್ರಾಣಾ ಯಾಮ್ಯೈರ್ನಿಕಟವರ್ತಿಭಿಃ ॥೨೭॥
ಇಂದ್ರಿಯಗಳ ವಿಕಲತೆಯಿಂದ ದ ಚೈತನ್ಯವು ಜಡವಾಗುತ್ತೆ ಯಮದೂತರು ಹತ್ತಿರ ಬಂದಕ್ಷಣ . ಅಷ್ಟರಲ್ಲಿ ಪ್ರಾಣ ಹೋಗುತ್ತೆ
ಸ್ವಸ್ಥಾನಾಚ್ಚಲಿತೇ ಶ್ವಾಸೇ ಕಲ್ಪಾಖ್ಯೋ ಹ್ಯಾತುರಕ್ಷಣಃ ।
ಶತವೃಶ್ಚಿಕದಷ್ಟಸ್ಯ ಯಾ ಪೀಡಾ ಸಾನುಭೂಯತೇ ॥೨೮॥
ಸ್ವಸ್ಥಾನಂದ ಶ್ವಾಸವು ಹೊರಡುವಾಗ ಮರಣಕಾಲದ ಒಂದು ಕ್ಷಣ ಒಂದು ಕಲ್ಪದಾಹಾಗೆ ತೋರುತ್ತಿತ್ತು . ಅಷ್ಟೊತ್ತಿಗೆ ನೂರು ಚೇಳು ಕಚ್ಚಿದಷ್ಟು ಬೇನೆಯ ಅನುಭವುಸುತ್ತನೆ
.
ಫೇನಮುದ್ಗಿರತೇ ಸೋsಥ ಮುಖಂ ಲಾಲಾಕುಲಂ ಭವೇತ್ ।
ಅಧೋದ್ವಾರೇಣ ಗಚ್ಛಂತಿ ಪಾಪಿನಾಂ ಪ್ರಾಣವಾಯವಃ ॥೨೯॥
ನೊರೆ ಉಕ್ಕಿ ಬಂದು ಬಾಯಿ ಇಡೀ ಜೊಲ್ಲಿಂದ ತುಂಬಿರುತ್ತು. ಪಾಪಿಯ ಪ್ರಾಣವಾಯು ಕೆಳಗಿನ ದ್ವಾರದ ಹೊರಗೆ ಹೋಗುತ್ತೆ


No comments:
Post a Comment