ಆದಿತ್ಯಚಂದ್ರಾವನಿಲೋsನಲಶ್ಚ ದ್ಯೌರ್ಭೂಮಿರಾಪೋ ಹೃದಯಂ ಯಮಶ್ಚ ।
ಅಹಶ್ಚ ರಾತ್ರಿಶ್ಚ ಉಭೇ ಚ ಸಂಧ್ಯೇ ಧರ್ಮಶ್ಚ ಜಾನಾತಿ ನರಸ್ಯ ವೃತ್ತಮ್॥೧೬॥
ಸೂರ್ಯ, ಚಂದ್ರ, ಅಗ್ನಿ, ವಾಯು, ಆಕಾಶ, ಭೂಮಿ, ನೀರು, ಹೃದಯ, ಯಮ, ಹಗಲು, ಇರುಳು, ಎರಡು ಸಂಧ್ಯಾಕಾಲಕ್ಕೆ ಮತ್ತೆ ಧರ್ಮ- ಇವುಗಳ ಮನುಷ್ಯನ ವೃತ್ತಾಂತವನ್ನು ತಿಳ್ಕೊಂಡಿರುತ್ತರೆ
ಧರ್ಮರಾಜಶ್ಚಿತ್ರಗುಪ್ತಃ ಶ್ರವಣಾ ಭಾಸ್ಕರಾದಯಃ ।
ಕಾಯಸ್ಥಂ ತತ್ರ ಪಶ್ಯಂತಿ ಪಾಪಂ ಪುಣ್ಯಂ ಚ ಸರ್ವಶಃ ॥೧೭॥
ಧರ್ಮರಾಜ, ಚಿತ್ರಗುಪ್ತ, ಶ್ರವಣ, ಸೂರ್ಯ ಮೊದಲಾದೋರು ಈ ಶರೀರಲ್ಲಿದ್ದುಗೊಂಡು ಪಾಪಪುಣ್ಯಗಳೆಲ್ಲವ ನೋಡುತ್ತರೆ
.ಏವಂ ಸುನಿಶ್ಚಯಂ ಕೃತ್ವಾ ಪಾಪಿನಾಂ ಪಾತಕಂ ಯಮಃ ।
ಆಹೂಯ ತಾನ್ನಿಜಂ ರೂಪಂ ದರ್ಶಯತ್ಯತಿಭೀಷಣಮ್ ॥೧೮॥
ಈ ರೀತಿ ಪಾಪಿಯ ಪಾಪಗಳ ನಿಶ್ಚಯಮಾಡಿ, ಯಮಧರ್ಮರಾಜ ಅವನನ್ನು ಕರೆಸಿ ಅತಿಭಯಂಕರವಾದ ತನ್ನ ನಿಜರೂಪವ ತೋರುಸುತ್ತನೆ
ಪಾಪಿಷ್ಠಾಸ್ತೇ ಪ್ರಪಶ್ಯಂತಿ ಯಮರೂಪಂ ಭಯಂಕರಮ್ ।
ದಂಡಹಸ್ತಂ ಮಹಾಕಾಯಂ ಮಹಿಷೋಪರಿ ಸಂಸ್ಥಿತಮ್ ॥೧೯॥
ಆ ಪಾಪಿಷ್ಠರು ದಂಡಪಾಣಿಯಾದ, ಮಹಾಕಾಯನಾದ, ಕೋಣನ ಮೇಲೆ ಕೂಳಿತು ಕೊಂಡಿದ್ದ ಭಯಂಕರನಾದ ಯಮನ ರೂಪವ ನೋಡುತ್ತರೆ
ಪ್ರಲಯಾಂಬುದನಿರ್ಘೋಷಂ ಕಜ್ಜಲಾಚಲಸನ್ನಿಭಮ್ ।
ವಿದ್ಯುತ್ಪ್ರಭಾಯುಧೈರ್ಭೀಮಂ ದ್ದ್ವಾತ್ರಿಂಶದ್ಭುಜಸಂಯುತಮ್ ॥೨೦॥
ಪ್ರಳಯಕಾಲದ ಮೇಘಗಳ ಗರ್ಜನೆ ಹಾಗೆ ಗರ್ಜುಸುವ, ಕಾಡಿಗೆಯ ಪರ್ವತದ ಹಾಗೆ ಕಪ್ಪಾಗಿ, ಮಿಂಚಿನಾಗೆ ಹೊಳವ ಆಯುಗಳಿಂದ ಒಡಗೂಡಿ ಭಯಂಕರನಾದ ಮೂವತ್ತೆರಡು ಭುಜಗಳ ಹೊಂದಿದ್ದ
ಯೋಜನತ್ರಯವಿಸ್ತಾರಂ ವಾಪೀತುಲ್ಯವಿಲೋಚನಮ್ ।
ದಂಷ್ಟ್ರಾಕರಾಲವದನಂ ರಕ್ತಾಕ್ಷಂ ದೀರ್ಘನಾಸಿಕಮ್ ॥೨೧॥
ಮೂರು ಯೋಜನ ವಿಸ್ತಾರದ (ದೇಹಾಕಾಯ ), ಬಾವಿಯ ಹಾಗೆ ಕಣ್ಣುಗಳು ಕೋರೆಹಲ್ಲಿನ ಭಯಂಕರವಾದ ಮೋರೆಯಿದ್ದು , ರಕ್ತರಂಜಿತ ಕಣ್ಣುಗಳಿದ್ದು , ಉದ್ದವಾದ ಮೂಗಿನ ಯಮರಾಜನ ಸ್ವರೂಪ ( ಈ ರೀತಿ ಭಯಂಕರವಾದ್ದು).
ಮೃತ್ಯುಜ್ವರಾದಿಭಿರ್ಯುಕ್ತಶ್ಚಿತ್ರಗುಪ್ತೋsಪಿ ಭೀಷಣಃ ।
ಸರ್ವೇ ದೂತಾಶ್ಚ ಗರ್ಜಂತಿ ಯಮತುಲ್ಯಾಸ್ತದಂತಿಕೇ ॥೨೨॥
ಮೃತ್ಯುಜರಾದಿಗಳಿಂದ ಕೂಡಿದ ಚಿತ್ರಗುಪ್ತನೂ ಭಯಂಕರನಾಗಿದ್ದ ಯಮರೂಪಕ್ಕೆ ತುಲ್ಯವಾದ ರೂಪವ ಹೊಂದಿ ಎಲ್ಲ ದೂತರು ಗರ್ಜಿಸಿಕೊಂಡು ಅವನ ಹತ್ತಿರ ಇದ್ದರು .
ತಂ ದೃಷ್ಟ್ವಾಭಯಭೀತಸ್ತು ಹಾಹೇತಿ ವದತೇ ಖಲಃ ।
ಅದತ್ತದಾನಃ ಪಾಪಾತ್ಮಃ ಕಂಪತೇ ಕ್ರಂದತೇ ಪುನಃ ॥೨೩॥
ಯಮನ ನೋಡಿ ಭಯಭೀತನಾಗಿ ಆ ದುಷ್ಟ ಹಾ ಹಾ ಎಂದು ಕಿರುಚುತ್ತ . ದಾನವನ್ನೂ ಮಾಡದ್ದೆ ಇಂತಹ ಪಾಪಿ ನಡುಗಿಕೋಂಡು ಮತ್ತೆ ವಿಲಪಿಸುತ್ತನೆ
ತತೋ ವದತಿ ತಾನ್ಸರ್ವಾನ್ ಕ್ರಂದಮಾನಾಂಶ್ಚ ಪಾಪಿನಃ ।
ಶೋಚಂತಃ ಸ್ವಾನಿ ಕರ್ಮಾಣಿ ಚಿತ್ರಗುಪ್ತೋ ಯಮಾಜ್ಞಯಾ ॥೨೩॥
ಮತ್ತೆ ವಿಲಾಪಿಸುತ್ತಿದ್ದ ಹಾಗೂ ತಾವು ಮಾಡಿದ ಕರ್ಮಗಳ ಕುರಿತು ಶೋಕಿಸಿಕೋಂಡು ಇದ್ದ ಎಲ್ಲ ಪಾಪಿಗಳು ಯಮನ ಅಪ್ಪಣೆ ಪ್ರಕಾರ ಚಿತ್ರಗುಪ್ತ ಹೇಳುತ್ತನೆ
ಭೋಃ ಭೋಃ ಪಾಪಾ ದುರಾಚಾರಾ ಅಹಂಕಾರಪ್ರದೂಷಿತಾಃ ।
ಕಿಮರ್ಥಮರ್ಜಿತಂ ಪಾಪಂ ಯುಷ್ಮಾಭಿರವಿವೇಕಿಭಿಃ ॥೨೫॥
“ಎಲೈ ಪಾಪಿಗಳೇ, ಕೆಟ್ಟ ನಡತೆಯಿoದ ಅಹಂಕಾರದ ತುಂಬಿಕೊಂಡ, ಅವಿವೇಕಿಗಳೇ, ಪಾಪವ ಎತಕೆ ಬೇಕಾಗಿ ಸಂಪಾದಿಸಿದ್ದಿರಿ
ಕಾಮಕ್ರೋಧಾದ್ಯದುತ್ಪನ್ನಂ ಸಂಗಮೇನ ಚ ಪಾಪಿನಾಮ್ ।
ತತ್ಪಾಪಂ ದುಃಖದಂ ಮೂಢಾಃ ಕಿಮರ್ಥಂ ಚರಿತಂ ಜನಾಃ ॥೨೬॥
“ಕಾಮ, ಕ್ರೋಧಗಳಿಂದ ಪಾಪಿಗಳ ಸಹವಾಸದ ಉತ್ಪನ್ನವಾದ ದುಃಖದಾಯಕವಾದ ಆ ಪಾಪಗಳು ಏ ಮೂಢರೇ, ಎತಕೆ ಮಾಡಿದಿರಿ
ಕೃತವಂತಃ ಪುರಾ ಯೂಯಂ ಪಾಪಾನ್ಯತ್ಯಂತಹರ್ಷಿತಾಃ ।
ತಥೈವ ಯಾತನಾ ಭೋಗ್ಯಾಃ ಕಿಮಿದಾನೀಂ ಪರಾಙ್ಮುಖಾಃ ॥೨೭॥
“ನಿನಗ ಮೊದಲೆ ಅತ್ಯಂತ ಹರ್ಷಿತರಾಗಿ ಪಾಪಗಳ ಮಾಡಿದ್ದಿ. ಹಾಗೇ ಈಗ ಯಾತನೆಗಳ ಅನುಭವುಸಿ. ಈಗ ಎತಕೆ ಮೋರೆ ತಿರುಗುಸುತ್ತಿರಿ ?”
ಕೃತ್ಯಾನಿ ಯಾನಿ ಪಾಪಾನಿ ಯುಷ್ಮಭಿಃ ಸುಬಹೂನ್ಯಪಿ ।
ತಾನಿ ಪಾಪಾನಿ ದುಃಖಸ್ಯ ಕಾರಣಂ ಚ ನ ವಂಚನಾ ॥೨೮॥
“ನಿನನ್ನಿಂದ ಬಹಳವಾಗಿ ಏವ ಪಾಪಗಳನ್ನು ಮಾಡಲ್ಪಟ್ಟತ್ತೋ ಆ ಪಾಪಗಳೇ ಈಗ ದುಃಖದ ಕಾರಣಗಳ . ಅದರಲ್ಲಿ ವಂಚನೆ ಏನೂ ಇಲ್ಲವೆ "
ಮೂರ್ಖೇsಪಿ ಪಂಡಿತೇ ವಾಪಿ ದರಿದ್ರೇ ವಾ ಶ್ರಿಯಾನ್ವಿತೇ ।
ಸಬಲೇ ನಿರ್ಬಲೇ ವಾಪಿ ಸಮವರ್ತೀ ಯಮಃ ಸ್ಮೃತಃ ॥೨೯॥
“ಮೂರ್ಖನಾಗಲೀ, ಪಂಡಿತನಾಗಲಿ, ದರಿದ್ರನಾಗಲಿ ಧನವಂತನಾಗಲಿ, ಬಲವಂತನಾಗಲಿ ಬಲಹೀನನಾಗಿರಲಿ ಯಮಧರ್ಮರಾಜ ಸಮಾನ ಭಾವನೆಯಿಂದ ವರ್ತಿಸುತ್ತನೆ ಎಂದು ಹೇಳಿದ ವಿಷಯ”.
ಚಿತ್ರಗುಪ್ತಸ್ಯೇತಿ ವಾಕ್ಯಂ ಶ್ರುತ್ವಾ ತೇ ಪಾಪಿನಸ್ತದಾ ।
ಶೋಚಂತಃ ಸ್ವಾನಿ ಕರ್ಮಾಣಿ ತೂಷ್ಣೀಂ ತಿಷ್ಠಂತಿ ನಿಶ್ಚಲಾಃ ॥೩೦॥
ಚಿತ್ರಗುಪ್ತನ ಈ ಮಾತುಗಳ ಕೇಳಿ ಆ ಪಾಪಿಗಳು ತಾವು ಮಾಡಿದ ಕರ್ಮಗಳ ಶೋಕಿಸಿಕೋಂಡು ನಿಶ್ಯಬ್ದರಾಗಿ ನಿಶ್ಚಲರಾಗಿ ನಿottu ಬಿಟ್ಟರು
ಧರ್ಮರಾಜೋsಪಿ ತಾನ್ ದೃಷ್ಟ್ವಾ ಚೋರವನ್ನಿಶ್ಚಲಾನ್ ಸ್ಮಿತಾನ್ ।
ಆಜ್ಞಾಪಯತಿ ಪಾಪಾನಾಂ ಶಾಸ್ತಿಂ ಚೈವ ಯಥೋಚಿತಾಮ್ ॥೩೧॥
ಕಲ್ಲುಗಳಾಗೆ ನಿಶ್ಚಲರಾಗಿ ನಿಂತಿದ್ದರು ಅವರನ್ನ ಯಮಧರ್ಮರಾಯ ನೋಡಿ, ಅವರ ಪಾಪಕ್ಕೆ
ಯಥೋಚಿತವಾದ ಶಿಕ್ಷೆಯ ಆಜ್ಞಾಪಿಸುತ್ತನೆ
ತತಸ್ತೇ ನಿರ್ದಯಾ ದೂತಾಸ್ತಾಡಯಿತ್ವಾ ವದಂತಿ ಚ ।
ಗಚ್ಛ ಪಾಪಿನ್ ಮಹಾಘೋರಾನ್ನರಕಾನತಿಭೀಷಣಾನ್ ॥೩೨॥
ಮತ್ತೆ ನಿರ್ದಯಿಗಳಾದ ಆ ಯಮದೂತರು ಬಡಿದು ಹೇಳುತ್ತರೆ – ಏ ಪಾಪಾತ್ಮನೇ, ಘೋರವಾದ ಅತಿ ಭಯಂಕರವಾದ ನರಕಕ್ಕೆ ಹೋಗು”.
ಯಮಾಜ್ಞಾಕಾರಿಣೋ ದೂತಾಃ ಪ್ರಚಂಡ ಚಂಡಕಾದಯಃ ।
ಏಕಪಾಶೇನ ತಾನ್ಬದ್ಧ್ವಾ ನಯಂತಿ ನರಕಾನ್ಪ್ರತಿ ॥೩೩॥
ಯಮಧರ್ಮರಾಯನ ಆಜ್ಞಾನುವರ್ತಿಗಳು ಆದ ಪ್ರಚಂಡ ಚಂಡಕ ಮೊದಲಾದ ದೂತರುಗಳು , ಒಂದೇ ಪಾಶದಿಂದ ಅವರ ಕಟ್ಟಿ ಘೋರ ನರಕದ ಕಡೇಗೆ ಕರ್ಕಂಡು ಹೋಗುತ್ತಾರೆ
No comments:
Post a Comment