ಗರುಡ ಉವಾಚ
ಯಮಮಾರ್ಗಮತಿಕ್ರಮ್ಯ ಗತ್ವಾ ಪಾಪೀ ಯಮಾಲಯೇ ।
ಕೀದೃಶೀಂ ಯಾತನಾಂ ಭುಂಕ್ತೇ ತನ್ಮೇ ಕಥಯ ಕೇಶವ ॥೦೧॥
ಗರುಡ ಹೇಳಿದ - ಏ ಕೇಶವನೇ!, ಪಾಪಿಯಾದವ ಯಮ ಮಾರ್ಗವ ದಾಟಿ ಯಮಾಲಯಕ್ಕೆ ಹೋಗಿ ಅಲ್ಲಿ ಯಾವ ರೀತಿಯ ಕಷ್ಟಗಳ ಅನುಭವುಸುತ್ತರೆ ಎನಗೆ ಹೇಳು.
ಶ್ರೀ ಭಗವಾನ್ ಉವಾಚ
ಆದ್ಯಂತಂ ಚ ಪ್ರವಕ್ಷ್ಯಾಮಿ ಶ್ರುಣುಷ್ವ ವಿನತಾತ್ಮಜ ।
ಕಥ್ಯಮಾನೇsಪಿ ನರಕೇ ತ್ವಂ ಭವಿಷ್ಯಸಿ ಕಂಪಿತಃ ॥೦೨॥
ಭಗವಂತ ಹೇಳಿದ – ಏ ವಿನತೆಯ ಮಗನೇ!, ಸುರುವಿದ ಅಕೇರಿವರೇಗೆ ಹೇಳುತ್ತೇನೆ ಕೇಳು. ನರಕದ ವರ್ಣನೆಯ ಕೇಳುವುದರಿಂದಲೇ ನೀನು ನಡುಗಿ ಹೋಗುವೆ
ಚತ್ವಾರಿಂಶದ್ಯೋಜನಾನಿ ಚತುರ್ಯುಕ್ತಾನಿ ಕಾಶ್ಯಪ ।
ಬಹುಭೀತಿಪುರಾದಗ್ರೇ ಧರ್ಮರಾಜಪುರಂ ಮಹತ್ ॥೦೩॥
ಏ ಕಾಶ್ಯಪ, ಬಹುಭೀತಿಪುರದ ಮುಂದೆ ನಲ್ವತ್ತ ನಾಲ್ಕು ಯೋಜನ ವಿಸ್ತೀರ್ಣಲ್ಲಿ ವಿಶಾಲವಾದ ಧರ್ಮರಾಯನ ಪುರ ಇದ್ದು.
ಹಾಹಾಕಾರಸಮಾಯುಕ್ತಂ ದೃಷ್ಟ್ವಾಕ್ರಂದತಿ ಪಾತಕೀ ।
ತತ್ಕ್ರಂದಿತಂ ಸಮಾಕರ್ಣ್ಯ ಯಮಸ್ಯ ಪುರಚಾರಿಣಃ ॥೦೪॥
(ಆ ಊರು) ಹಾಹಾಕಾರ ಕೂಗಿನಿಂದ ಕೂಡಿದ್ದು. ಅದರ ನೋಡಿದರೆ ಪಾಪಿ ಕಿರುಚುತ್ತರೆ ಆ ಕಿರುಚಾಟವ ಕೇಳಿ ಯಮನ ಊರಿನವರು
ಗತ್ವಾ ಚ ತತ್ರ ತೇ ಸರ್ವೇ ಪ್ರತೀಹಾರಂ ವದಂತಿ ಹಿ ।
ಧರ್ಮಧ್ವಜಃ ಪ್ರತೀಹಾರಸ್ತತ್ರ ತಿಷ್ಠತಿ ಸರ್ವದಾ ॥೦೫॥
ಅವು ದ್ವಾರಪಾಲಕನ ಹತ್ರ ಹೋಗಿ ಎಲ್ಲವನ್ನೂ ಹೇಳುತ್ತನೆ ಅಲ್ಲಿ ಧರ್ಮಧ್ವಜ ಹೇಳುವ ದ್ವಾರಪಾಲಕ ಇರುತ್ತಾನೆ
ಸ ಗತ್ವಾ ಚಿತ್ರಗುಪ್ತಾಯ ಬ್ರೂತೇ ತಸ್ಯ ಶುಭಾಶುಭಮ್ ।
ತತಸ್ತಂ ಚಿತ್ರಗುಪ್ತೋsಪಿ ಧರ್ಮರಾಜಂ ನಿವೇದಯೇತ್ ॥೦೬॥
ಅವ ಹೋಗಿ ಚಿತ್ರಗುಪ್ತನಿಗೆ ಆ ಪಾಪಿಯ ಶುಭಾಶುಭ ಕರ್ಮಗಳೆಲ್ಲವ ಹೇಳುತ್ತನೆ ಮತ್ತೆ ಚಿತ್ರಗುಪ್ತ ಯಮಧರ್ಮರಾಜನತ್ ಹತ್ತಿರ ನಿವೇದಿಸುತ್ತಾನೆ
ನಾಸ್ತಿಕಾ ಯೇ ನರಾಸ್ತಾರ್ಕ್ಷ್ಯ ಮಹಾಪಾಪರತಾಃ ಸದಾ ।
ತಾಂಶ್ಚ ಸರ್ವಾನ್ಯಥಾಯೋಗ್ಯಂ ಸಮ್ಯಗ್ಜಾನಾತಿ ಧರ್ಮರಾಟ್ ॥೦೭॥
ಯಾವ ಮನುಷ್ಯರು ನಾಸ್ತಿಕರೋ ಮತ್ತೆ ಪಾಪಕಾರ್ಯಗಳಲ್ಲೇ ನಿರತರಾಗಿರುತ್ತಾರೋ ಅವೆರೆಲ್ಲರನ್ನೂ ಧರ್ಮರಾಜ° ತಿಳಿದು ಕೋoಡಿರುತ್ತನೆ
ತಥಾಪಿ ಚಿತ್ರಗುಪ್ತಾಯ ತೇಷಾಂ ಪಾಪಂ ಸ ಪೃಚ್ಛತಿ ।
ಚಿತ್ರಗುಪ್ತೋsಪಿ ಸರ್ವಜ್ಞಃ ಶ್ರವಣಾನ್ಪರಿಪೃಚ್ಛತಿ ॥೦೮॥
ಅಂದರೂ ಅವ ಚಿತ್ರಗುಪ್ತನ ಹತ್ತಿರ ಅವರ ಪಾಪಗಳ ವಿಷಯವಾಗಿ ಕೇಳುತ್ತನೆ. ಚಿತ್ರಗುಪ್ತ ಎಲ್ಲವನ್ನೂ ತಿಳುದವನಾಗಿದ್ದರೂ ಶ್ರವಣ ಮಾಡುತ್ತಾನೆ
ಶ್ರವಣಾ ಬ್ರಹ್ಮಣಃ ಪುತ್ರಾಃ ಸ್ವರ್ಭೂಪಾತಾಲಚಾರಿಣಃ ।
ದೂರಶ್ರವಣವಿಜ್ಞಾನಾ ದೂರದರ್ಶನಚಕ್ಷುಷಃ ॥೦೯॥
ಬ್ರಹ್ಮನ ಮಕ್ಕ ಆದ ಶ್ರವಣರು ಸ್ವರ್ಗ, ಭೂಮಿ, ಪಾತಾಳಗಳಲ್ಲಿ ಸಂಚರಿಸುವವು. ಅವಕ್ಕೆ ದೂರದಿಂದಲೇ ಕೇಳಿ ತಿಳ್ಕೊಂದು ಬಾ ಹಾಗೇ ದೂರದಿಂದಲೇ ನೋಡಲು ವಿಶೇಷ ಜ್ಞಾನಶಕ್ತಿ ಮತ್ತೆ ವೀಕ್ಷಣಾಶಕ್ತಿ ಇದ್ದು.
ತೇಷಾಂ ಪತ್ನ್ಯಸ್ತಥಾಭೂತಾಃ ಶ್ರವಣ್ಯಃ ಪೃಥಗಾಹ್ವಯಾಃ ।
ಸ್ತ್ರೀಣಾಂ ವಿಚೇಷ್ಟಿತಂ ಸರ್ವಂ ತಾ ವಿಜಾನಂತಿ ತತ್ತ್ವತಃ ॥೧೦॥
ಅವರ ಪತ್ನಿಗೊ ಅಂತಹ ಶಕ್ತಿ ಇದ್ದು. ಹಾಗಾಗಿ ಅವರ ಶ್ರವಣಿಯರು ಎಂದು ಹೇಳುತ್ತರೆ ಸ್ತ್ರೀಯರು ಮಾಡೋದೆಲ್ಲವ ಅವು ಯಥಾರ್ಥರೂಪಲ್ಲಿ ತಿಳ್ಕೊಂಡಿರುತ್ತರೆ
ನರೈಃ ಪ್ರಚ್ಛನ್ನಪ್ರತ್ಯಕ್ಷಂ ಯತ್ಪ್ರೋಕ್ತಂ ಚ ಕೃತಂ ಚ ಯತ್ ।
ಸರ್ವಮಾವೇಯಂತ್ಯೇವ ಚಿತ್ರಗುಪ್ತಾಯ ತೇ ಚ ತಾಃ ॥೧೧॥
ಮನುಷ್ಯರು ಗುಪ್ತವಾಗಿಯೂ ಬಹಿರಂಗವಾಗಿಯೂ ಹೇಳಿದ್ದನ್ನೂ ಮಾಡಿದ್ದನ್ನೂ ಅವು ಚಿತ್ರಗುಪ್ತನಿಗೆ ಹೇಳುವರು
ಚಾರಾಸ್ತೇ ಧರ್ಮರಾಜಸ್ಯ ಮನುಷ್ಯಾಣಾಂ ಶುಭಾಶುಭಮ್ ।
ಮನೋವಾಕಾಯರಂ ಕರ್ಮ ಸರ್ವಂ ಜಾನಂತಿ ತತ್ತ್ವತಃ ॥೧೨।।
ಯಮಧರ್ಮರಾಜನ ಗುಪ್ತಚರರು ಆದ ಇವು ಮನುಷ್ಯರ ಶುಭಾಶುಭಂಗಳನ್ನೂ ಮನೋವಾಕ್ಕಾಯಗಳಿಂದ ಮಾಡುವ ಎಲ್ಲ ಕರ್ಮಗಳನ್ನೂ ಸರಿಯಾಗಿ ತಿಳುದುಕೊಂಡಿರುತ್ತರೆ
ಏವಂ ತೇಷಾಂ ಶಕ್ತಿರಸ್ತಿ ಮರ್ತ್ಯಾಮರ್ತ್ಯಾಧಿಕಾರಿಣಾಮ್ ।
ಕಥಯಂತಿ ನೃಣಾಂ ಕರ್ಮ ಶ್ರವಣಾಃ ಸತ್ಯವಾದಿನಃ ॥೧೩॥
ಮರ್ತ್ತ್ಯರಿಗೂ ಅಮರರಿಗೂ ಅಧಿಕಾರಿಗಳಾಗಿರುವ ಅವರಿಗೆ ಇಷ್ಟು ಶಕ್ತಿ ಇದ್ದು. ಸತ್ಯವಾದಿಗೊ ಆದ ಆ ಶ್ರವಣರು ಮನುಷ್ಯನ ಕರ್ಮಗಳ ಹೇಳುತ್ತರೆ
ವ್ರತೈರ್ದಾನೈಶ್ಚ ಸತ್ಯೋಕ್ತ್ಯಾ ಯಸ್ತೋಷಯತಿ ತಾನ್ನರಃ ।
ಭವಂತಿ ತಸ್ಯ ತೇ ಸೌಮ್ಯಾಃ ಸ್ವರ್ಗಮೋಕ್ಷಪ್ರದಾಯಿನಃ ॥೧೪॥
ಯಾವ ಮನುಷ್ಯ ವ್ರತ, ದಾನ, ಸತ್ಯವಾಕ್ಯದಿಂದಲೂ ಅವರ ಸಂತೋಷಪಡಿಸುತ್ತನೋ ಅವನಿಗೆ ಅವ್ವು ಸೌಮ್ಯರಾಗಿ ಸ್ವರ್ಗಮೋಕ್ಷಗಳ ದಯಪಾಲುಸುತ್ತರೆ
ಪಾಪಿನಾಂ ಪಾಪಕರ್ಮಾಣಿ ಜ್ಞಾತ್ವಾ ತೇ ಸತ್ಯವಾದಿನಃ ।
ಧರ್ಮರಾಜಪುರಃ ಪ್ರೋಕ್ತಾ ಜಾಯಂತೇ ದುಃಖದಾಯಿನಃ ॥೧೫॥
ಆ ಸತ್ಯವಾದಿಗೆ ಪಾಪಿಗಳ ದುಷ್ಕರ್ಮಗಳನ್ನೂ ತಿಳಿದು ಕೋಂ ಡು ಧರ್ಮರಾಜನೆದುರು ಹೇಳಿ ದುಃಖದಾಯಕರಾದರು
No comments:
Post a Comment