ಪುರಾಣ – ಅಧ್ಯಾಯ 2 – 2
ತಸ್ಮಿನ್ಪುರೇ ರಮ್ಯೇ ಪ್ರೇತಾನಾಂ ಚ ಗಣೋ ಮಹಾನ್ ।ಪುಷ್ಪಭದ್ರಾ ನದೀ ತತ್ರ ನ್ಯಗ್ರೋಧಃ ಪ್ರಿಯದರ್ಶನಃ ॥೪೪॥
ಆ ಸೌಮ್ಯಪುರೀ ಹೇಳುವ ಮನೋಹರವಾದ ಶ್ರೇಷ್ಠ ನಗರಲ್ಲಿ ಅತೀ ದೊಡ್ಡದಾದ ಪ್ರೇತಗಳ ಒಂದು ಗಣ ಇದ್ದು. ಮತ್ತೆ ಅಲ್ಲಿ ಪುಷ್ಪಭದ್ರಾ ಹೇಳುವ ನದಿಯೂ, ನೋಡಲು ಪ್ರಿಯವಾದ ಒಂದು ವಟವೃಕ್ಷವೂ ಇದ್ದು.
ಪುರೇ ತತ್ರ ಸ ವಿಶ್ರಾಮಂ ಪ್ರಾಪ್ಯತೇ ಯಮಕಿಂಕರೈಃ ।
ದಾರಾಪುತ್ರಾದಿಕಂ ಸೌಖ್ಯಂ ಸ್ಮರತೇ ತತ್ರ ದುಃಖಿತಃ ॥೪೫॥
ಆ ಪುರದಲ್ಲಿ ಅವ ಯಮಕಿಂಕರಿಂದ ತುಸು ವಿಶ್ರಾಂತಿ ಪಡಕ್ಕೊಳ್ಳುತ್ತ. ಅಲ್ಲಿ ತನ್ನ ಪತ್ನಿ, ಮಕ್ಕಳ ಕ್ಷೇಮವ ನೆನೆಸಿಕೊಂಡು ದುಃಖಿಸುತ್ತನೆ .
ಧನಾನಿ ಭೃತ್ಯಮಾತ್ರಾಣಿ ಸರ್ವಂ ಶೋಚತಿ ವೈ ಯದಾ ।
ತದಾ ಪ್ರೇತಾಂಸ್ತು ತತ್ರತ್ಯಾಃ ಕಿಂಕರಾಶ್ಚೇದ ಮಬ್ರುವನ್ ॥೪೬॥
ಧನವನ್ನೂ ತನ್ನ ಕುಟುಂಬದವರನ್ನೂ ಎಲ್ಲವನ್ನೂ ಅವನು ಚಿಂತಿಸುತ್ತಿರುವಾಗ ಅಲ್ಲಿಯಣ ಪ್ರೇತಗಳೂ, ಯಮಕಿಂಕರುಗಳೂ ಹೀಗೆ ಹೇಳುವವು –
ಕ್ವ ಧನಂ ಕ್ವ ಸುತಾ ಜಾಯಾ ಕ್ವ ಸುಹೃತ್ಕ್ವ ಚ ಬಾಂಧವಾಃ ।
ಸ್ವ ಕರ್ಮೋಪಾರ್ಜಿತಂ ಭೋಕ್ತಾ ಮೂಢ ಯಾಹಿ ಚಿರಂ ಪಥಿ ॥೪೭॥
“ಏ ಮೂಢನೇ!, ಎಲ್ಲಿ ಧನ?, ಎಲ್ಲಿ ಮಕ್ಕಳು?, ಎಲ್ಲಿ ಹೆಂಡತಿ?, ಎಲ್ಲಿ ಮಿತ್ರರು? ಮತ್ತೆ ಎಲ್ಲಿ ಬಂಧುಗಳು?. ನಿನ್ನ ಕರ್ಮಗಳಿಂದ ಗಳಿಸಿದ್ದರ ಮಾತ್ರ ಅನುಭವಿಸಿಕೊಂಡು ಈ ಮಾರ್ಗಲ್ಲಿ ನಡೆ.
ಜಾನಾಸಿ ಸಂಬಲಬಲಂ ಬಲಮಧ್ವಗಾನಾಂ ನೋ ಸಂಬಲಾಯ ಯತಸೇ ಪರಲೋಕಪಾಂಥ ।
ಗಂತವ್ಯಮಸ್ತಿ ತವ ನಿಶ್ಚಿತಮೇವ ತೇನಮಾರ್ಗೇಣ ಯತ್ರ ಭವತಿ ಕ್ರಯವಿಕ್ರಯೋಹಿ ॥೪೮॥
ಬುತ್ತಿಯೇ ಪಥಿಕನ ಶಕ್ತಿ ಹೇಳುವುದು ನಿನಗೆ ಗೊತಿದ್ದು. ಆದರೆ ನೀನು ಆ ಭಕ್ತಿಗೋಸ್ಕರ ಯತ್ನ ಮಾಡಲಿಲ್ಲ. ಏ ಪರಲೋಕ ಪ್ರಯಾಣಿಕನೇ!, ಆದರೂ ಕ್ರಯವಿಕ್ರಯಗಳಿಲ್ಲದ್ದ ಆ ಮಾರ್ಗಲ್ಲಿ ನೀನು ಹೋಗಲೇ ಬೇಕು,
ಆಬಾಲಖ್ಯಾತಮಾರ್ಗೋsಯಂ ನೈವ ಮರ್ತ್ಯ ಶ್ರುತಸ್ತ್ವಯಾ ।
ಪುರಾಣಸಂಭವಂ ವಾಕ್ಯಂ ಕಿಂ ದ್ವಿಜೇಭ್ಯೋsಪಿ ನ ಶ್ರುತಮ್ ॥೪೯॥
ಏ ಮರ್ತ್ಯನೇ!, ಮಕ್ಕಳಿಗೆ ಗೊತಿದ್ದ ಮಾರ್ಗವ ನಿನ್ನಂದ ಕೇಳಲ್ಪಟ್ಟಿದ್ದಿಯಾ? ಪುರಾಣಂಗಳಲ್ಲಿ ಹೇಳಿದ ಈ ವಿಷಯಗಳನ್ನು ದ್ವಿಜರಿಂದ ಹೇಳಲ್ಪಟ್ಟಿದ್ದಿಯ ?”
ಏವಮುಕ್ತಸ್ತತೋ ದೂತೈಸ್ತಾಡ್ಯಮಾನಶ್ಚ ಮುದ್ಗರೈಃ ।
ನಿಪತನ್ನುತ್ಪತಂಧಾವನ್ಪಾಶೈರಾಕೃಷ್ಯತೇ ಬಲಾತ್ ॥೫೦॥
ಹೀಗೆ ಹೇಳಿಗೊಂಡು ಆ ಯಮದೂತರುಗಳು ಸಿಟ್ಟಿಗೆದ್ದು ಬಡಿವಾಗ ಅವ ಬಿದ್ದುಗೊಡು ಎದ್ದುಗೊಡು ಓಡುತ್ತಿದಂತೆ ಪಾಶದಿಂದ ಬಲವಂತವಾಗಿ ಎಳೆಯಲ್ಪಡುತ್ತ ನೆ
ಅತ್ರ ದತ್ತಂ ಸುತೈಃ ಪೌತ್ರೈಃ ಸ್ನೇಹಾದ್ವಾ ಕೃಪಯಾsಥವಾ ।
ಮಾಸಿಕಂ ಪಿಂಡಮಶ್ನಾತಿ ತತಃ ಸೌರಿಪುರಂ ವ್ರಜೇತ್ ॥೫೧॥
ಇಲ್ಲಿ ಮಕ್ಕಳು ಮೊಮ್ಮಕ್ಕಳು ಸ್ನೇಹಭಾವದ ಅಥವಾ ಕೃಪೆಮಾಡಿ ಕೊಟ್ಟಂತಹ ಮಾಸಿಕ ಪಿಂಡವ ಅಲ್ಲಿ ತಿಂದು ಅಲ್ಲಿಂದ ಸೌರಿಪುರಕ್ಕೆ ಹೋರಟವು
ತತ್ರ ನಾಮ್ನಾಸ್ತಿ ರಾಜಾ ವೈ ಜಂಗಮಃ ಕಾಲರೂಪಧೃಕ್ ।
ತದ್ದೃಷ್ಟ್ವಾ ಭಯಭೀತೋsಸೌ ವಿಶ್ರಾಮೇ ಕುರತೇ ಮತಿಮ್ ॥೫೨॥
ಅಲ್ಲಿ ಯಮನ ರೂಪವ ಧರಿಸಿದ ‘ಜಂಗಮ’ ಹೇಳುವ ಹೆಸರಿನ ರಾಜ ಇದ್ದ. ಅವನ ನೋಡಿ ಭಯಭೀತನಾಗಿ ಇವನ ಮನಸ್ಸು ಯೋಚನಾಶೂನ್ಯವಾದವು
ಉದಕಂ ಚಾನ್ನ ಸಂಯುಕ್ತಂ ಭುಂಕ್ತೇ ತತ್ರ ಪುರೇ ಗತಃ ।
ತ್ರೈಪಾಕ್ಷಿಕೇ ವೈ ಯದ್ದತ್ತಂ ಸ ತತ್ಪುರಮತಿಕ್ರಮೇತ್ ॥೫೩॥
ಆ ಊರಿಗೆ ಹೋದವ ಅಲ್ಲಿ ತ್ರೈಪಾಕ್ಷಿಕಲ್ಲಿ ಕೊಟ್ಟ ಅನ್ನ ನೀರು ತಿಂದಿಕ್ಕಿ ಅವ ಆ ಪುರದಿಂದ ಹರಡುತ್ತನೆ
ತತೋ ನಗೇಂದ್ರಭವನಂ ಪ್ರೇತೋ ಯಾತಿ ತ್ವರಾನ್ವಿತಃ ।
ವನಾನಿ ತತ್ರ ರೌದ್ರಾಣಿ ದೃಷ್ಟ್ವಾ ಕ್ರಂದತಿ ದುಃಖಿತಃ ॥೫೪॥
ಅಲ್ಲಿಂದ ಪ್ರೀತಜೀವ ನಗೇಂದ್ರ ಭವನಕ್ಕೆ ಅತಿ ಶೀಘ್ರಲ್ಲಿ ಹೋಗಿ ತಲಪುತ್ತರೆ . ಅಲ್ಲಿ ಭಯಂಕರವಾದ ಕಾಡುಗಳ ನೋಡಿ ದುಃಖಿತನಾಗಿ ರೋದಿಸುತ್ತ
ನಿರ್ಘೃಣೈಃ ಕೃಷ್ಯಮಾಣಸ್ತು ರುದತೇ ಚ ಪುನಃ ಪುನಃ ।
ಮಾಸದ್ವಯಾವಸಾನೇ ತು ತತ್ಪುರಂ ವ್ಯಥಿತೋ ವ್ರಜೇತ್ ॥೫೫॥
ನಿರ್ದಯವಾಗಿ ಎಳೆಯಲ್ಪಟ್ಟು ಪುನಃ ಪುನಃ ರೋದಿಸಿಗೊಂಡು ಎರಡು ತಿಂಗಳ ಅಂತ್ಯಲ್ಲಿ ಅವನು ° ದುಃಖಿಸಿಕೊಂಡು ಆ ಪುರದ ಬಳಿ ಹೊರಡುತ್ತರೆ
ಭುಂಕ್ತ್ವಾ ಪಿಂಡಂ ಜಲಂ ವಸ್ತ್ರಂ ದತ್ತಂ ಯದ್ಬಾಂಧವೈರಿತಃ ।
ಕೃಷ್ಯಮಾಣಃ ಪುನಃ ಪಾಶೈರ್ನಿಯತೇsಗ್ರೇ ಚ ಕಿಂಕರೈಃ ॥೫೬॥
ತನ್ನ ಬಂಧುಗಳ ಕೊಟ್ಟ ಪಿಂಡ, ಜಲ, ವಸ್ತುಗಳ ಪಡೆದು ಕ್ಕೊಂಡು ಪುನಃ ಪಾಶದಿಂದ ಎಳೆಯಲ್ಪಡುತ್ತ ಯಮಕಿಂಕರಿಂದ ಮುಂದಂತಾಗಿ ಕರೆದೊಯ್ಯಲ್ಪಡುತ್ತನೆ
ಮಾಸೇ ತೃತೀಯೇ ಸಂಪ್ರಾಪ್ತೇ ಪ್ರಾಪ್ಯ ಗಂಧರ್ವಪತ್ತನಮ್ ।
ತೃತೀಯಮಾಸಿಕಂ ಪಿಂಡಂ ತತ್ರ ಭುಕ್ತ್ವಾ ಪ್ರಸರ್ಪತಿ ॥೫೭॥
ಮೂರನೆ ತಿಂಗಳು ಆದಗ ‘ಗಂಧರ್ವ ಪಟ್ಟಣ’ವ ತಲಪುತ್ತರೆ °. ಅಲ್ಲಿ ಮೂರನೇ ತಿಂಗಳು ಕೊಟ್ಟ ಪಿಂಡವ ಭಜಿಸಿ ಮುಂದೆ ಹೊರಡುತ್ತರೆ
ಶೈಲಾಗಮಂ ಚತುರ್ಥೇ ಚ ಮಾಸಿ ಪ್ರಾಪ್ನೋತಿ ವೈ ಪುರಮ್ ।
ಪಾಷಾಣಸ್ತತ್ರ ವರ್ಷಂತಿ ಪ್ರೇತಸ್ಯೋಪರಿ ಭೂರಿಶಃ ॥೫೮॥
ನಾಲ್ಕನೇ ತಿಂಗಳಿಗೆ ‘ಶೈಲಾಗಮ’ ಹೇಳುವ ಪುರವ ತಲಪುತ್ತಾರೆ ಅಲ್ಲಿ ಆ ಪ್ರೇತಜೀವಿಯ ಮೇಲೆ ಕಲ್ಲುಗಳ ಮಳೆಯೇ ಭಾರೀ ಗಾತ್ರದಲ್ಲಿ ಸುರಿತ್ತಿ ತು
ಚತುರ್ಥಮಾಸಿಕಂ ಪಿಂಡಂ ಭುಕ್ತ್ವಾಕಿಂಚಿತ್ಸುಖೀ ಭವೇತ್ ।
ತತೋ ಯಾತಿ ಪುರಂ ಪ್ರೇತಃ ಕ್ರೌಂಚಂ ಮಾಸೇsಥ ಪಂಚಮೇ ॥೫೯॥
ಅಲ್ಲಿ ನಾಲ್ಕನೇ ತಿಂಗಳಿನ ಪಿಂಡವ ಭುಂಜಿಸಿ ರಜಾ ಸುಖಿಯಾವುತ್ತ ಮತ್ತೆ ಅಲ್ಲಿಂದ ಹೊರಟು ಐದನೇ ತಿಂಗಳ್ಳಿ ‘ಕ್ರೌಂಚಪುರ’ಕ್ಕೆ ಹೋಗಿ ಸೇರುತ್ತರೆ
ಹಸ್ತದತ್ತಂ ತದಾ ಭುಂಕ್ತೇ ಪ್ರೇತಃ ಕ್ರೌಂಚಪುರೇ ಸ್ಥಿತಃ ।
ಯತ್ಪಂಚಮಾಸಿಕಂ ಪಿಂಡಂ ಭುಕ್ತ್ವಾ ಕ್ರೂರಪುರಂ ವ್ರಜೇತ್ ॥೬೦॥
ಅಲಿಂದ ಕ್ರೌಂಚಪುರಲ್ಲಿ ನೆಲೆಸಿದ ಆ ಪ್ರೇತಜೀವಿ ಕೈದ ಕೊಡಲ್ಪಟ್ಟ ಐದನೇ ತಿಂಗಳ ಪಿಂಡವ ಉಣ್ಣುತ್ತ. ಉಡಿಕ್ಕಿ ಮತ್ತೆ ‘ಕ್ರೂರಪುರ’ಕ್ಕೆ ಹೋಗುತ್ತವೆ
ಸಾರ್ಧಕೈಃ ಪಂಚಭಿರ್ಮಾಸೈನ್ಯೂರ್ನಷಾಣ್ಮಾಸಿಕಂ ವ್ರಜೇತ್ ।
ತತ್ರ ದತ್ತೇನ ಪಿಂಡೇನ ಘಟೇನಾಪ್ಯಾಯಿತಃ ಸ್ಥಿತಃ ॥೬೧॥
ಐದೂವರೆ ತಿಂಗಲಿನಲ್ಲಿ ನ್ಯೂನ ಷಣ್ಮಾಸಿಕ ಶ್ರಾದ್ಧಲ್ಲಿ ಕೊಡಲ್ಪಟ್ಟ ಪಿಂಡವನ್ನೂ, ಚೆಂಬನ್ನೂ ಪಡದು ತೃಪ್ತಿ ಹೊಂದಿ ಅಲ್ಲಿ ನೆಲೆಸುತ್ತವೆ
ಮುಹೂರ್ತಾರ್ಧಂ ತು ವಿಶ್ರಾಮ್ಯ ಕಂಪಮಾನಃ ಸುದುಃಖಿತಃ ।
ತತ್ಪುರಂ ತು ಪರಿತ್ಯಜ್ಯ ತರ್ಜಿತೋ ಯಮಕಿಂಕರೈಃ ॥೬೨॥
ಅರ್ಧಮುಹೂರ್ತದಷ್ಟು ಹೊತ್ತು ಅಲ್ಲಿ ವಿಶ್ರಮಿಸಿ, ಅತಿ ದುಃಖಿತನಾಗಿ ನಡುಗಿಕೊಂಡು ಯಮಕಿಂಕರರಿಂದ ಹೆದರಿಸಲ್ಪಟ್ಟು ಆ ಪುರವ ಬಿಟ್ಟಿಹೊರಟವು
ಪ್ರಯಾತಿ ಚಿತ್ರಭವನಂ ವಿಚಿತ್ರೋ ನಾಮ ಪಾರ್ಥಿವಃ ।
ಯಮಸ್ಯೈವಾನುಜೋ ಭ್ರಾತಾ ಯತ್ರ ರಾಜ್ಯಂ ಪ್ರಶಾಸ್ತಿ ಹಿ ॥೬೩॥
ಚಿತ್ರಭವನ’ಕ್ಕೆ ಹೋಗುತ್ತ ಅಲ್ಲಿ ಯಮನ ತಮ್ಮ ‘ವಿಚಿತ್ರ ಹೇಳುವ ಹೆಸರಿನವ ರಾಜ ರಾಜ್ಯ ಆಳುತ್ತನೆ
ವಿಲೋಕ್ಯ ಮಹಾಕಾಯಂ ಯದಾ ಭೀತಃ ಪಲಾಯತೇ ।
ತದಾ ಸಂಮುಖ ಆಗತ್ಯ ಕೈವರ್ತಾ ಇದಮಬ್ರುವನ್ ॥೬೪॥
ಅವನ ಮಹಾಕಾಯವ ನೋಡಿ ಭಯಭೀತನಾಗಿ ಓಡುತ್ತನೆ ಅಷ್ಟ ಅವನ ಮುಂದೆ ಬಂದು ಕೆಲವು ನಾವಿಕರು ಈ ರೀತಿ ಹೇಳುತ್ತಾರೆ
ವಯಂ ತೇ ತರ್ತುಕಾಮಾಯ ಮಹಾವೈತರಣೀ ನದೀಮ್ ।
ನಾವಮಾದಾಯ ಸಂಪ್ರಾಪ್ತಾ ಯದಿ ತೇ ಪುಣ್ಯಮೀದೃಶಮ್ ॥೬೫॥
“ಮಹಾ ವೈತರಣೀ ನದಿಯ ದಾಟಿ ಹೇಗೊ ನಿನಗೆ ದೋಣಿಯ ತಂದೆಯೋ ಒಂದು ವೇಳೆ ನಿನ್ನಲ್ಲಿ ಅಷ್ಟು ಪುಣ್ಯ ಇದ್ದರೆ ಇದು ನಿನಗೆ ದೊರಕುತಿತ್ತು.
ದಾನಂ ವಿತರಣಂ ಪ್ರೋಕ್ತಂ ಮುನಿಭಿಸ್ತತ್ತ್ವದರ್ಶಿಭಿಃ ।
ಇಯಂ ಸಾ ತೀರ್ಯತೇ ಯಸ್ಮಾತ್ತಸ್ಮಾದ್ವೈತರಣೀ ಸ್ಮೃತಾ ॥೬೬॥
ತತ್ತ್ವದರ್ಶಿಗೊಗಳಾದ ಋಷಿಗಳು ದಾನವ ‘ವಿತರಣ’ ಎಂದು ಹೇಳಿದ್ದವು. ಈ ನದಿಯ ದಾನದ ದಾಟಲಿಕ್ಕೆ ಹಾಗಾಗಿ ಇದಕ್ಕೆ ‘ವೈತರಣೀ’ ಎಂದು ಹೇಳುತ್ತರೆ
ಯದಿ ತ್ವಯಾ ಪ್ರದತ್ತಾ ಗೌಸ್ತದಾ ನೌರುಪಸರ್ಪತಿ ।
ನಾನ್ಯಥೇತಿ ವಚಸ್ತೇಷಾಂ ಶ್ರುತ್ವಾ ಹಾ ದೈವ ಭಾಷತೇ ॥೬೭॥
ಒಂದುವೇಳೆ ನೀನು ಗೋದಾನ ಮಾಡಿದ್ದರೆ, ದೋಣಿ ಹತ್ತ
ಬೇಕು ಇಲ್ಲದ್ರೆ ಇಲ್ಲೆ”. ಹೀಗೆ ಅವರ ಮಾತುಗಳ ಕೇಳಿ ‘ಹಾ ದೈವವೇ’ ಎಂದು ಉದ್ಗಾರಮಾಡುತ್ತನೆ
ತಂ ದೃಷ್ಟ್ವಾ ಕ್ವಥತೇ ಸಾ ತು ದೃಷ್ಟ್ವಾ ಸೋsತಿಕ್ರಂದತೇ ।
ಅದತ್ತ ದಾನಃ ಪಾಪಾತ್ಮಾ ತಸ್ಯಾಮೇವ ನಿಮಜ್ಜತಿ ॥೬೮॥
ಅವನ ನೋಡಿ ಅದು (ನದಿ) ಉಕ್ಕಿ ಬತ್ತು. ಅದರ ನೋಡಿ ಅವ ಅತಿಯಾಗಿ ರೋದಿಸುತ್ತ. ದಾನ ಮಾಡದ ಇಂತಹ ಪಾಪಿಗೊ ಅದರ್ಲಿಯೇ ಮುಣುಗಿ ಹೋಗುತ್ತರೆ
ತನ್ಮುಖೇ ಕಂಟಕಂ ದತ್ವಾ ದೂತೈರಾಕಾಶಸಂಸ್ಥಿತೈಃ ।
ಬಡಿಶೇನ ಯಥಾ ಮತ್ಸ್ಯಸ್ತಥಾ ಪಾರಂ ಪ್ರಣೀಯತೇ ॥೬೯॥
ಅಷ್ಟರಲ್ಲಿ ಆಕಾಶಲ್ಲಿದ್ದ ದೂತರು ಅವನ ಬಾಯಿಗೆ ಮುಳ್ಳಿನ ಗಾಳವ ಹಾಕಿ ಗಾಳದ ಕೊಕ್ಕೆಯಿಂದ ಮೀನಿನ ಎಳದ ಹಾಗೆ ಎಳಕ್ಕೊಂಡು ದಡಕ್ಕೆ ಕರೆತಂದರು
ಷಾಣ್ಮಾಸಿಕಂ ಚ ಯತ್ಪಿಂಡಂ ತತ್ರ ಭುಕ್ತ್ವಾ ಪ್ರಸರ್ಪತಿ ।
ಮಾರ್ಗೇ ಸ ವಿಲಪನ್ಯಾತಿ ಬುಭುಕ್ಷಾ ಪೀಡಿತೋ ಹ್ಯಲಮ್ ॥೭೦॥
ಅಲ್ಲಿ ಆರನೇ ತಿಂಗಳ ಪಿಂಡವ ಭುಂಜಿಸಿ ಮುಂದೆ ನಡೆಯುತ್ತ°. ಆ ಮಾರ್ಗಲ್ಲಿ ಅವರು ರೋದಿಸಿ ಅತಿಯಾದ ಹಸಿವಿಂದ ಪೀಡಿತನಾಗಿ ಮುಂದೆ ಹೋದರು
ಸಪ್ತಮೇ ಮಾಸಿ ಸಂಪ್ರಾಪ್ರೇ ಪುರಂ ಬಹ್ವಾಪದಂ ವ್ರಜೇತ್ ।
ತತ್ರ ಭುಂಕ್ತೇ ಪ್ರದತ್ತಂ ಯತ್ಸಪ್ತಮೇ ಮಾಸಿ ಪುತ್ರಕೈಃ ॥೭೧॥
ಏಳನೇ ತಿಂಗಳು ಆದಗ ‘ಬಹ್ವಾಪದ’ ಹೇಳುವ ಪುರಕ್ಕೆ ಹೋಗಿ ಸೇರುತ್ತರೆ ಅಲ್ಲಿ ಏಳನೇ ತಿಂಗಳಿಗೆ ಮಕ್ಕಳು ಕೊಟ್ಟದರಲ್ಲಿ ತಿನ್ನುತ್ತಾನೆ
ತತ್ಪುರಂ ತು ವ್ಯತಿಕ್ರಮ್ಯ ದುಃಖದಂ ಪುರಮೃಚ್ಛತಿ ।
ಮಹದುಃಖಮವಾಪ್ನೋತಿ ಖೇ ಗಚ್ಛನ್ಖೇಚರೇಶ್ವರ ॥೭೨॥
ಏ ಪಕ್ಷಿರಾಜನೇ!, ಆ ಪುರವ ದಾಟಿದ ಮತ್ತೆ ಅವ ‘ದುಃಖದ’ ಹೇಳುವ ಊರಿಂಗೆ ಹೋಗುತ್ತರೆ ಆಕಾಶಲ್ಲಿ ಹೋಗುವಾಗ ಬಹಳ ದುಃಖವ ಅನುಭವಿಸುತ್ತರೆ
ಮಾಸ್ಯಷ್ಟಮೇ ಪ್ರದತ್ತಂ ಯತ್ಪಿಂಡಂ ಭುಕ್ತ್ವಾ ಪ್ರಸರ್ಪತಿ ।
ನವಮೇ ಮಾಸಿ ಸಂಪೂರ್ಣೇ ನಾನಾಕ್ರಂದ ಪುರಂ ವ್ರಜೇತ್ ॥೭೩॥
ಎಂಟನೇ ತಿಂಗಳ್ಳಿ ಕೊಡಲ್ಪಟ್ಟ ಪಿಂಡವ ಭುಂಜಿಸಿ ಮುಂದೆ ನಡೆತ್ತ. ಒಂಬತ್ನೇ ತಿಂಗಳು ಸಂಪೂರ್ಣ ಆದಾಗ ‘ನಾನಾಕ್ರಂದ’ಪುರಕ್ಕೆ ಹೋಗುತ್ತರೆ
ನಾನಕ್ರಂದಗಣಾನ್ ದೃಷ್ಟ್ವಾ ಕ್ರಂದಮಾನಾನ್ಸುದಾರುಣಾನ್ ।
ಸ್ವಯಂ ಚ ಶೂನ್ಯ ಹೃದಯಃ ಸಮಾಕ್ರಂದತಿ ದುಃಖಿತಃ ॥೭೪॥
ಅಲ್ಲಿ ದಾರುಣವಾಗಿ ನಾನಾರೀತಿಲಿ ಗಟ್ಟಿಯಾಗಿ ಕೂಗಿಕೋoಡಿದ್ದ ಅನೇಕ ಗಣಗಳ ನೋಡಿ, ತಾನೂ ಶೂನ್ಯ ಹೃದಯದವನಾಗಿ ಅದೇ ರೀತಿ ದುಃಖದಿಂದ ಒಳ್ಳೆ ಗಟ್ಟಿಗೆ ಕೂಗುತ್ತನೆ
ವಿಹಾಯ ತತ್ಪುರಂ ಪ್ರೇತಸ್ತರ್ಜಿತೋ ಯಮಕಿಂಕರೈಃ ।
ಸುತಪ್ತಭವನಂ ಗಚ್ಛೇದ್ದಶಮೇ ಮಾಸಿ ಕೃಚ್ಛೃತಃ ॥೭೫॥
ಆ ಪುರವ ಬಿಟ್ಟಿಕ್ಕಿ ಯಮಕಿಂಕರರಿಂದ ಹೆದರಿಸಲ್ಪಟ್ಟು ಹತ್ತನೇ ತಿಂಗಳಿಲಿ ‘ಸುತಪ್ತ ಭವನ’ಕ್ಕೆ ಬಹು ಕಷ್ಟಂದ ಹೋಗುತ್ತರೆ
ಪಿಂಡದಾನಂ ಜಲಂ ತತ್ರ ಭುಕ್ತ್ವಾಪಿ ನ ಸುಖೀ ಭವೇತ್ ।
ಮಾಸಿ ಚೈಕಾದಶೇ ಪೂರ್ಣೇ ಪುರಂ ರೌದ್ರಂ ಸ ಗಚ್ಛತಿ ॥೭೬॥
ಅಲ್ಲಿ ಪಿಂಡದಾನವನ್ನೂ, ಜಲವನ್ನೂ ಉಂಡರೂ ಕೂಡ ಸುಖವಿಲ್ಲದೆ . ಹನ್ನೊಂದನೇ ತಿಂಗಳು ಪೂರ್ತಿಯಾದ ಅವರು ‘ರೌದ್ರಪುರ’ಕ್ಕೆ ಹೋಗುತ್ತರೆ
ದಶೈಕ ಮಾಸಿಕಂ ತತ್ರ ಭುಂಕ್ತೇ ದತ್ತಂ ಸುತಾದಿಭಿಃ ।
ಸಾರ್ದೇ ಚೈಕಾದಶೇ ಮಾಸಿ ಪಯೋವರ್ಷಣಮೃಚ್ಛತಿ ॥೭೭॥
ಅಲ್ಲಿ ಹನ್ನೊಂದನೇ ತಿಂಗಳಿಲ್ಲಿ ಮಕ್ಕಳು ಕೊಟ್ಟದರಲ್ಲಿ ತಿಂದು ಹನ್ನೊಂದುವರೆ ತಿಂಗಳಿಗೆ ‘ಪಯೋವರ್ಷಣ’ ಹೇಳುವ ಊರಿಗೆ ಹೋಗುತ್ತರೆ
ಮೇಘಾಸ್ತತ್ರ ಪ್ರವರ್ಷಂತಿ ಪ್ರೇತಾನಾಂ ದುಃಖದಾಯಕಾಃ ।
ನ್ಯೂನಾಬ್ದಿಕಂ ಚ ಯಚ್ಛ್ರಾದ್ಧಂ ತತ್ರ ಭುಂಕ್ತೇ ಸ ದುಃಖಿತಃ ॥೭೮॥
ಅಲ್ಲಿ ಮೇಘಗಳು ಜೋರಾಗಿ ಮಳೆಯ ಸುರುಸಿ ಆ ಜೀವಿಗೆ ದುಃಖವ ಉಂಟುಮಾಡುವವು . ಅಲ್ಲಿ ನ್ಯೂನಾಬ್ದಿಕ ಶ್ರಾದ್ಧಲ್ಲಿ ಕೊಡಲ್ಪಟ್ಟ ಪಿಂಡವ ದುಃಖಿತನಾಗಿ ಅವರು ಉಣ್ಣುತ್ತರೆ
ಸಂಪೂರ್ಣೇ ತು ತತೋ ವರ್ಷೇ ಶೀತಾಢ್ಯ ನಗರಂ ವ್ರಜೇತ್ ।
ಹಿಮಾಚ್ಛತಗುಣಂ ತತ್ರ ಮಹಾಶೀತಂ ತಪತ್ಯಪಿ ॥೭೯॥
ಒಂದು ವರ್ಷ ಪೂರ್ತಿಯಾದಗ ಶೀತಾಡ್ಯ’ ಹೇಳುವ ಪುರವ ಸೇರುತ್ತರೆ ಅಲ್ಲಿ ಹಿಮಾಲಯದಲ್ಲಿ ಬೀಳುವ ನೂರು ಪಾಲು ಹೆಚ್ಚಾಗಿ ಹಿಮ ಬೀಳುತ್ತಿತ್ತು
ಶೀತಾರ್ತಃ ಕ್ಷುಧಿತಃ ಸೋsಪಿ ವೀಕ್ಷತೇ ಹಿ ದಿಶೋ ದಶ ।
ತಿಷ್ಠತೇ ಬಾಂಧವಃ ಕೋಪಿ ಯೋ ಮೇ ದುಃಖಂ ವ್ಯಪೋಹತಿ ॥೮೦॥
ಅಲ್ಲಿ ಶೀತದಿಂದ ಆರ್ತನಾಗಿ, ಹಸಿವಿಂದ ಪೀಡಿತನಾಗಿ ಅವ ‘ಯಾರಾರು ಬಂಧುಗಳು ಎನ್ನ ಈ ದುಃಖವ ದೂರಮಾಡಲು ನಿಂತು ಕೋoಡಿದ್ದರೋ ’ ಎಂದು ಹತ್ತು ದಿಕ್ಕುಗಳನ್ನೂ ನೋಡುತ್ತನೆ
ಕಿಂಕರಾಸ್ತೇ ವದಂತ್ಯತ್ರ ಕ್ವತೇ ಪುಣ್ಯಂ ಹಿ ತಾದೃಶಮ್ ।
ಭುಕ್ತ್ವಾ ಚ ವಾರ್ಷಿಕಂ ಪಿಂಡಂ ಧೈರ್ಯಮಾಲಂಬತೇ ಪುನಃ ॥೮೧॥
ಅಗ ಅಲ್ಲಿದ್ದ ಯಮಕಿಂಕರರು ‘ನೀನು ಅಂತಹ ಎನು ಪುಣ್ಯ ಮಾಡಿದ್ದೆ?’ ಎಂದು ಕೇಳುತ್ತರೆ ಅಲ್ಲಿ ವಾರ್ಷಿಕ ಪಿಂಡವ ಉಂಡು ಅವ ಧೈರ್ಯವ ಪಡೆಯುತ್ತಾನೆ
ತತಃ ಸಂವತ್ಸರಸ್ಯಾಂತೇ ಪ್ರತ್ಯಾಸನ್ನೇ ಯಮಾಲಯೇ ।
ಬಹುಭೀತಿಪುರೇ ಗತ್ವಾ ಹಸ್ತಮಾತ್ರಂ ಸಮುತ್ಸೃಜೇತ್ ॥೮೨॥
ಅಲ್ಲಿಂದ ಆ ಜೀವ ಒಂದು ಸಂವತ್ಸರದ ಅಕೇರಿಲಿ ಯಮಾಲಯದ ಹತ್ತಿರ ಇರುವ ಬಹುಭೀತಿ’ಪುರಕ್ಕೆ ಹೋಗಿ ಅಲ್ಲಿ ಕೈ ಮಾತ್ರದ (ಕೈ ಗಾತ್ರದ ಅವನ ಶರೀರವ) ಶರೀರವ ಬಿಡುತ್ತರೆ
.ಅಂಗುಷ್ಠಮಾತ್ರೋ ವಾಯುಶ್ಚ ಕರ್ಮಭೋಗಾಯ ಖೇಚರ ।
ಯಾತನಾದೇಹಮಾಸಾದ್ಯ ಸಹ ಯಾಮೈಃ ಪ್ರಯಾತಿ ಚ ॥೮೩॥
ಎಲೈ ಗರುಡನೇ!, ಆ ಜೀವಿಯು ಹೆಬ್ಬೆರಳು ಗಾತ್ರದವನಾಗಿ ವಾಯು ರೂಪಲ್ಲಿ ತನ್ನ ಕರ್ಮವ ಅನುಭವಿಸಲು
ಯಾತನಾದೇಹವ ಪಡೆದು ಯಮಕಿಂಕರರ ಒಟ್ಟಿಗೆ ಮುಂದೆ ಹೋಗುತ್ತಾರೆ
ಔರ್ಧ್ವದೇಹಿಕದಾನಾನಿ ಯೈರ್ನ ದತ್ತಾನಿ ಕಾಶ್ಯಪ ।
ಏವ ಕಷ್ಟೇನ ತೇ ಯಾಂತಿ ಗೃಹೀತಾ ದೃಢಬಂಧನೈಃ ॥೮೪॥
ಎಲೈ ಕಶ್ಯಪನ ಮಗನೇ!, ಪರಲೋಕದ ನಿಮಿತ್ತವಾಗಿ ದಾನಗಳ ಕೊಡದೆ ಇದ್ದರೆ ಈ ರೀತಿ ಕಷ್ಟಪಟ್ಟು ದೃಢವಾದ ಬಂಧನದ ಬಂಧಿಸಲ್ಪಟ್ಟು ಬಿಡುತ್ತಾರೆ
ಧರ್ಮರಾಜಪುರೇ ಸಂತಿ ಚತುರ್ದ್ವಾರಾಣಿ ಖೇಚರ ।
ತತ್ರಾಯಂ ದಕ್ಷಿಣದ್ವಾರಮಾರ್ಗಸ್ತೇ ಪರಿಕೀರ್ತಿತಃ ॥೮೫॥
ಎಲೈ ಗರುಡ!, ಯಮಧರ್ಮರಾಜನ ಪುರಲ್ಲಿ ನಾಲ್ಕು ದ್ವಾರಗಳು ಇದ್ದು. ಅವುಗಳಲ್ಲಿ ದಕ್ಷಿಣ ದ್ವಾರದ ಮಾರ್ಗವ ನಿನಗೆ ವಿವರಿಸಿಯಾಯಿತು
ಅಸ್ಮಿನ್ಪಥಿ ಮಹಾಘೋರೇ ಕ್ಷುತ್ತೃಷಾಶ್ರಮ ಪೀಡಿತಾಃ ।
ಯಥಾ ಯಾಂತಿ ತಥಾ ಪ್ರೋಕ್ತಂ ಕಿಂ ಭೂಯಃ ಶ್ರೋತುಮಿಚ್ಛಸಿ ॥೮೬॥
ಮಹಾಘೋರವಾದ ಆ ಮಾರ್ಗಲ್ಲಿ ಬಹು ಶ್ರಮ ಪೀಡಿತರಾಗಿ ಜೀವಿಗಳು ಹೇಗೆ ಹೋಗುತ್ತವೋ ಅದರ ಇಷ್ಟನ್ನು ನಿನಗೆ ಹೇಳಲ್ಪಟ್ಟತ್ತು. ಇನ್ನೆಂತಹ ಹೆಚ್ಚಿಗೆ ಕೇಳಲು ನೀನು ಇಚ್ಚಿಸುತ್ತಿಯ?
ಇತಿ ಶ್ರೀ ಗರುಡಪುರಾಣೇ ಸಾರೋದ್ಧಾರೇ ಯಮಮಾರ್ಗ ನಿರೂಪಣಂ ನಾಮ ದ್ವಿತೀಯೋsಧ್ಯಾಯಃ ॥
ಇಲ್ಲಿಗೆ ಗರುಡಪುರಾಣಲ್ಲಿ ಸಕಲ ಶಾಸ್ತ್ರಗಳ ಸಾರವಾದ ‘ಸಾರೋದ್ಧಾರ’ ಹೇಳ್ವ ವಿಭಾಗಲ್ಲಿ ‘ಯಮಮಾರ್ಗ ನಿರೂಪಣೆ’ ಹೇಳುವ ಎರಡನೆ ಅಧ್ಯಾಯ ಮುಗಿತು
No comments:
Post a Comment