Followers

Wednesday, 20 May 2020

ದಾನದ ಫಲ


ದಾನದ ಪ್ರತಿ ರೂಪ

ಪತಿತಾಸ್ತತ್ಪ್ರವಾಹೇ ಚ ಕ್ರಂದಂತಿ ಬಹು ಪಾಪಿನಃ ।
ಹಾ ಭ್ರಾತಃ ಪುತ್ರ ತಾತೇತಿ ಪ್ರಲಪಂತಿ ಮುಹುರ್ಮುಹುಃ ॥೨೧॥

ಬಹು ಪಾಪ ಮಾಡಿದವು ಆ ಪ್ರವಾಹಲ್ಲಿ ಬಿದ್ದು ಕೂಗುತ್ತಿವೆ  ‘ಹಾ ಒಡಹುಟ್ಟಿದವನೇ , ಹೇ ಮಗನೇ, ಹೇ ತಾತ’ ಹೇಳಿ ಪುನಃ ಪುನಃ ಪ್ರಲಾಪಿಸುತ್ತಾರೆ 

ಕ್ಷುಧಿತಾಸ್ತೃಷಿತಾಃ ಪಾಪಾಃ ಪಿಬಂತಿ ಕಿಲ ಶೋಣಿತಮ್ ।
ಸಾ ಸರಿದ್ರುಧಿರಾಪೂರಂ ವಹಂತಿ ಫೇನಿಲಂ ಬಹು ॥೨೨॥

ಬಹು ಆವಸರ ಕೂಡಿದ ಪಾಪಿಗಳು  ನಿಶ್ಚಯವಾಗಿ ಅಲ್ಲಿ ನೆತ್ತರಿನ ಕುಡಿತ್ತಿವೆ . ಆ ನದಿ ರಕ್ತಪೂರ್ಣವಾಗಿ ಬಹು ನೊರೆಯಿಂದ ಕೂಡಿ ಹರಿತ್ತಿತ್ತು 

ಮಹಾಘೋರಾತಿಘರ್ಜಂತೀ ದುರ್ನಿರೀಕ್ಷ್ಯಾ ಭಯಾವಹಾ ।
ತಸ್ಯಾ ದರ್ಶನಮಾತ್ರೇಣ ಪಾಪಾಃ ಸ್ಯುರ್ಗತಚೇತನಾಃ ॥೨೩॥

ಮಹಾಘೋರವಾದ, ಅತಿಯಾಗಿ ಘರ್ಜುಸುವ ಆ ನದಿ ನೋಡಲು ಎದೆ ಹೊಡೆಯುವಷ್ಟು ಭಯಾನಕವಾಗಿದ್ದು. ಅದರ ನೋಡಿದ ಮಾತ್ರಕ್ಕೆ ಪಾಪಿಗಳ  ಚೇತನಶೂನ್ಯರಾಗಿಬಿಡುತ್ತದ್ದವು 

ಬಹುವೃಶ್ಚಿಕಸಂಕೀರ್ಣಾ ಸೇವಿತಾ ಕೃಷ್ಣಪನ್ನಗೈಃ ।
ತನ್ಮಧ್ಯೇ ಪತಿತಾನಾಂ ಚ ತ್ರಾತಾ ಕೋsಪಿ ನ ವಿದ್ಯತೇ ॥೨೪॥

ಅನೇಕ ಚೇಳುಗಳಿಂದ ತುಂಬಿದ  ಘೋರಕೃಷ್ಣ ಸರ್ಪಗಳು ಆಶ್ರಿತವಾದ ಆ ನದಿಯ ಮಧ್ಯಲ್ಲಿ ಬಿದ್ದಿ ಪಾಪಿಗಳು ರಕ್ಷಕರು ಯಾರೆ ಆಗಿರಲಿ 

ಆವರ್ತ ಶಸಾಹಸ್ತ್ರೈಃ ಪಾತಾಲೇ ಯಾಂತಿ ಪಾಪಿನಃ ।
ಕ್ಷಣಂ ತಿಷ್ಠಂತಿ ಪಾತಾಲೇ ಕ್ಷಣಾದುಪರಿವರ್ತಿನಃ ॥೨೫॥

ಅಲ್ಲಿ  ಸುತ್ತಿ ಲಕ್ಷಾಂತರ ಸರ್ತಿ ಸುತ್ತಿಕ್ಕೂoಡು ಪಾಪಿಗಳು  ಆ ನದಿಯ ತಳಕ್ಕೆ ಹೋಗುತ್ತಿದ್ದವು ಅಲ್ಲಿ ಒಂದು ಕ್ಷಣ ನಿಂತು  ಮತ್ತೆ ಕ್ಷಣಮಾತ್ರಲ್ಲಿ ಮೇಲೆ ಬರುತ್ತಿದ್ದವು 
.
ಪಾಪಿನಾಂ ಪತನಾಯೈವ ನಿರ್ಮಿತಾ ಸಾ ನದೀ ಖಗ ।
ನಾಪರಂ ದೃಶ್ಯತೇ ತಸ್ಯಾ ದುಸ್ತರಾ ಬಹುದುಃಖದಾ ॥೨೬॥

ಏ ಪಕ್ಷಿಯೇ!, ಪಾಪಿಗಳ ಬೀಳುವದಕ್ಕೇಳಿಯೇ ಆ ನದಿ ನಿರ್ಮಿಸಲ್ಪಟ್ಟಿದು. ಅದರ ದಡ ಕಾಣುತ್ತಿದೆ  ಅದು ದಾಟಲು ದುಸ್ಸಾಧ್ಯವೂ, ಬಹು ದುಃಖಮಯವೂ ಆಗಿದ್ದು.

ಏವಂ ಬಹುವಿಧಕ್ಲೇಶೇ ಯಮಮಾರ್ಗೇsತಿದುಃಖಿದೇ ।
ಕ್ರೋಶಂತಶ್ಚ ರುದಂತಶ್ಚ ದುಃಖಿತಾ ಯಾಂತಿ ಪಾಪಿನಃ ॥೨೭॥

ಹೀಗೆ ಬಹುವಿಧವಾಗಿ ಕ್ಲೇಶವ ಅನುಭವಿಕೊಂಡು ಬಹು ದುಃಖಕರವಾದ ಯಮ ಮಾರ್ಗಲ್ಲಿ ಅಕ್ರೋಶ ಮಾಡಿಕೊಂಡು, ರೋದಿಸಿಕೊಂಡು  ದುಃಖಿತರಾದ ಪಾಪಿಗಳು ಹೋಗುತ್ತವೆ 

ಪಾಶೇನ ಯಂತ್ರಿತಾಃ ಕೇಚಿತ್ತೃಷ್ಯಮಾಣಾಸ್ತಥಾಂಕುಶೈಃ ।
ಶಸ್ತ್ರಾಗ್ರೈಃ ಪೃಷ್ಠತಃ ಪ್ರೋತೈರ್ನಿಯಮಾನಾಶ್ಚ ಪಾಪಿನಃ ॥೨೮॥

ಪಾಶದಿಂದ  ಬಂಧಿಸಿ, ಕೆಲವರ ಅಂಕುಶದಿಂದ ಎಳದು ಕ್ಕೊಂಡು, ಬೆನ್ನಿಗೆ ಶಸ್ತ್ರಗಳ ಮೊನೆಯಿಂದ  ಚುಚ್ಚಿಕೊಂಡು (ಯಮದೂತರುಗೊ) ಪಾಪಿಗಳ ಕರದುಕ್ಕೊಂಡು ಹೋಗುತ್ತಿದ್ದರು 

ನಾಸಾಗ್ರಪಾಶಕೃಷ್ಟಾಶ್ಚ ಕರ್ಣಪಾಶೈಸ್ತಥಾ ಪರೇ ।
ಕಾಲಪಾಶೈಃ ಕೃಷ್ಯಮಾಣಾಃ ಕಾಕೈಃ ಕೃಷ್ಯಾಸ್ತಥಾಪರೇ ॥೨೯॥

ಕೆಲವರಿಗೆ ಮೂಗಿನ ಕೊoಡಿಯಲಿಯೂ, ಕೆಲವರಿಗೆ ಕಿವುಯಲ್ಲಿ  ಪಾಶವ ಹಾಕಿ ಎಳೆದುಕೊಂಡು ಕೆಲವರ ಕಾಲಪಾಶದಿಂದ ಬಂಧಿಸಿ ಕಾಕೆಯ ಹಾಗೆ ಎಳೆದು ಕರದುಕ್ಕೊಂಡಹೋಗುತ್ತಿದ್ದರು 

ಗ್ರೀವಾಬಾಹುಷು ಪಾದೇಷು ಬದ್ಧಾಃ ಪೃಷ್ಠೇ ಚ ಶೃಂಖಲೈಃ ।
ಅಯೋಭಾರಚಯಂ ಕೇಚಿದ್ವಹಂತಃ ಪಥಿ ಯಾಂತಿ ಯೇ ॥೩೦॥

ಕೆಲವರ ಕೊರಳಿಲ್ಲಿ, ತೋಳು, ಪಾದ ಮತ್ತೆ ಬೆನ್ನುಗಳಲ್ಲಿ ಸಂಕೊಲೆಂಯಿಂದ ಬಂಧಿಸಿ ಕಬ್ಬಿಣದ ಭಾರವ ಹೊರ್ಸಿಗೊಂಡು ಯಮಮಾರ್ಗಲ್ಲಿ ಹೋಗುತ್ತಿದ್ದರು 

ಯಮದೂತೈರ್ಮಹಾಘೋರೈಸ್ತಾಡ್ಯಮಾನಾಶ್ಚ ಮುದ್ಗರೈಃ ।
ವಮಂತೋ ರುಧಿರಂ ವಕ್ತ್ರಾತ್ತದೇವಾಶ್ನಂತಿ ತೇ ಪುನಃ ॥೩೧॥

ಮಹಾಘೋರರಾದ ಯಮದೂತರಿಂದ ಸುತ್ತಿಗೆಲಿ ಬಡಿಸಿ ಗೊಂಡು ಬಾಯಿಂದ ನೆತ್ತರ ಕಾರಿಕೊಂಡು  ಅದನ್ನೇ ಮತ್ತೆ ಮತ್ತೆ ತಿನ್ನುತ್ತಿದ್ದವು 

ಶೋಚಂತಿ ಸ್ವಾನಿ ಕರ್ಮಾಣಿ ಗ್ಲಾನಿಂ ಗಚ್ಛಂತಿ ಜಂತವಃ ।
ಅತೀವ ದುಃಖಸಂಪನ್ನಾಃ ಪ್ರಯಾಂತಿ ಯಮಮಂದಿರಮ್ ॥೩೨॥

ತಾವು ಮಾಡಿದ ಕರ್ಮಂಗಳ ಚಿಂತೆಮಾಡಿಕೋಂಡು, ಮನಸ್ಸಿಲ್ಲಿ ನೊಂದು  (ಅಸಹಾಯಕತೆ/ಅಶಕ್ತತೆ) ಹೊಂದಿ, ಅತೀ ದುಃಖವ ಹೊಂದಿ ಆ ಪಾಪಿ ಜೀವಿಗಳು ಯಮನಾಲಯಕ್ಕೆ ಪ್ರಯಾಣ ಮಾಡುತ್ತಿದ್ದವು 

ತಥಾ ಚ ಸ ವ್ರಜನ್ಮಾರ್ಗೇ ಪುತ್ರ ಪೌತ್ರ ಇತಿ ಬ್ರುವನ್ ।
ಹಾಹೇತಿ ಪ್ರರುದನ್ನಿತ್ಯಮನುತಪ್ಯತಿ ಮಂದಧೀಃ ॥೩೩॥

ಆ ಮಂದಬುದ್ಧಿಯ ಪಾಪಿಯು ಯಮಮಾರ್ಗಲ್ಲಿ ಹೋಗತ್ತ 
‘ಏ ಮಗಾ, ಏ ಮಗಳೇ’   ಎಂದು ಹಾಹಾಕಾರ ಮಾಡಿಕೊಂಡು, ರೋದಿಸಿಕೊಂಡು  ದಿನಾ ಪಶ್ಚಾತ್ತಾಪ ಪಡುತ್ತ

ಮಹತಾ ಪುಣ್ಯಯೋಗೇನ ಮಾನುಷಂ ಜನ್ಮ ಲಭ್ಯತೇ ।
ತತ್ಪ್ರಾಪ್ಯ ನ ಕೃತೋ ಧರ್ಮಃ ಕೀದೃಶಂ ಹಿ ಮಯಾ ಕೃತಮ್ ॥೩೪॥

ಬಹುಪುಣ್ಯಫಲದ ಮನುಷ್ಯ ಜನ್ಮ ಸಿಕ್ಕುವುದು. ಅದನ್ನ ಪಡದಮೇಲೆ ಧರ್ಮವ ಆಚರಿಸಿ, ಮತ್ತಿತರ ಆನು ಮಾಡಿದರು 

ಮಯಾ ನ ದತ್ತಂ ನ ಹುತಂ ಹುತಾಶನೇ ತಪೋ ನ ತಪ್ತಂ ತ್ರಿದಶಾ ನ ಪೂಜಿತಾಃ ।
ನ ತೀರ್ಥಸೇವಾ ವಿಹಿತಾ ವಿಧಾನತೋ ದೇಹಿನ್ಕ್ವಚಿನ್ನಸ್ತರ ಯತ್ತ್ವಯಾ ಕೃತಮ್ ॥೩೫॥

ನನ್ನಂದ ದಾನ ಕೊಡಲ್ಪಟ್ಟಿಲ್ಲ , ಅಗ್ನಿಗೆ ಹವಿಸ್ಸು ಸಮರ್ಪಣೆ ಮಾಡದೇ , ತಪಸ್ಸು ಆಚರಿಸದೆ , ದೇವತೆಗಳ  ಪೂಜಿಸಲ್ಪಡದೆ , ವಿಧಿಪೂರ್ವಕ ತೀರ್ಥಸೇವನೆ ಮಾಡಲ್ಪಡದೆ . ಏ ದೇಹವೆ ! ನಿನ್ನಂದ ಎನು ಮಾಡಲ್ಪಟ್ಟತ್ತೋ ಎಲ್ರು ಪರಿಹರಿಸಿಕೊಳ್ಳಿ 


ನ ಪೂಜಿತಾ ವಿಪ್ರಗಣಾಃ ಸುರಪಗಾ ನ ಚಾಶ್ರಿತಾಃ ಸತ್ಪುರುಷಾ ನ ಸೇವಿತಾಃ ।
ಪರೋಪಕಾರ ನ ಕೃತಾಃ ಕದಾಚನ ದೇಹಿನ್ಕ್ವಚಿನ್ನಿಸ್ತರ ಯತ್ತ್ವಯಾ ಕೃತಮ್ ॥೩೬॥

ನನ್ನಿಂದ ಒಂದು ಸರ್ತಿಯಾದರು ವೇದವಿದರುಗಳನ್ನ  (ವಿಪ್ರರು) ಪೂಜಿಸಲ್ಪಟ್ಟಿಲ್ಲದಿದ್ದರೆ , ಗಂಗೆಲಿ (ಸುರಪಗಾ = ಗಂಗೆ) ಮೀಯಲ್ಪಟ್ಟಿಲ್ಲದಿದ್ದರೆ ಸತ್ಪುರುಷ ಸೇವೆಯೂ ಮಾಡಲ್ಪಟ್ಟಿಲ್ಲವೇ  ಏ ದೇಹವೆ ! ನಿನ್ನಂದ ಎನು ಮಾಡಲ್ಪಟ್ಟತ್ತೋ ಎಲ್ಲವನ್ನು ನೀವು ಪರಿಹರಿಸಿಕೋಳ್ಳಿ 

ಜಲಾಶಯೋ ನೈವ ಕೃತೋ ಹಿ ನಿರ್ಜಲೇ ಮನುಷ್ಯ ಹೇತೋಃ ಪಶುಪಕ್ಷಿ ಹೇತವೇ ।
ಗೋವಿಪ್ರವೃತ್ತ್ಯರ್ಥಮಕಾರಿ ನಾಣ್ವಪಿ ದೇಹಿನ್ಕ್ವಚಿನ್ನಿಸ್ತರ ಯತ್ತ್ವಯಾ ಕೃತಮ್ ॥೩೭॥

ನೀರಿಲ್ಲದಿದ್ದಲ್ಲಿ ಮನುಷ್ಯರಿಗೆ ಬೇಕಾಗಿ, ಪಶುಪಕ್ಷಿಗಳಿಗೆ  ಬೇಕಾಗಿ ಒಂದು ಜಲಾಶಯವೂ ನಿರ್ಮಿಸಲ್ಪಟ್ಟಿದೆ . ಗೋಬ್ರಾಹ್ಮಣರ ಜೀವಿತಕ್ಕೋಸ್ಕರವಾಗಿ ಎನ್ನಿಂದ ಕಿಂಚಿತ್ ಸಹಾಯವೂ ಮಾಡಲ್ಪಟ್ಟಿಲ್ಲವೇ. ಏ ದೇಹವೆ ! ನಿನ್ನಂದ ಎನು ಮಾಡಲ್ಪಟ್ಟಲ್ಲವೋ ಎಲ್ಲವನ್ನು  ನೀವು ಪರಿಹರಿಸಿಕೋಳ್ಳಿ 

ನ ನಿತ್ಯದಾನಂ ನ ಗವಾಹ್ನಿಕಂ ಕೃತಂ ನ ವೇದಶಾಸ್ತ್ರಾರ್ಥವಚಃ ಪ್ರಮಾಣಿತಂ ।
ಶ್ರುತಂ ಪುರಾಣಂ ನ ಚ ಪೂಜಿತೋ ಜ್ಞೋ ದೇಹಿನ್ಕ್ವಚಿನ್ನಸ್ತರ ಯತ್ತ್ವಯಾ ಕೃತಮ್ ॥೩೮॥

ನಿತ್ಯದಾನ ಮಾಡಲ್ಪಟ್ಟಿಲ್ಲವೇ  ನಿತ್ಯವೂ ಒಂದು ಗೋವಿಂಗೆ ತೃಪ್ತಿಯಷ್ಟು ಆಹಾರವನ್ನೂ  ಕೊಡಲ್ಪಟ್ಟಿಲ್ಲವೇ ವೇದಶಾಸ್ತ್ರ ಪುರಾಣ ವಚನಗಳನ್ನು ಕೇಳಲ್ಪಟ್ಟಿಲ್ಲವೇ  ಜ್ಞಾನಿಗಳ (ಜ್ಞೋ = ಜ್ಞಃ) ಪೂಜಿಸಲ್ಪಟ್ಟಿಲ್ಲವೇ . ಏ ದೇಹವೆ ! ನಿನ್ನಂದ ಎನು ಮಾಡಲ್ಪಟ್ಟಲ್ಲವೋ  ನೀವು ಎಲ್ಲವನ್ನು ಪರಿಹರಿಸಿಕೋಳ್ಳಿ 

ಭರ್ತುರ್ಮಯಾ ನೈವ ಕೃತಂ ಹಿತಂ ವಚಃ ಪತಿವ್ರತಂ ನೈವ ಕದಾಪಿ ಪಾಲಿತಂ ।
ನ ಗೌರವಂ ಕ್ವಾಪಿ ಕೃತಂ ಗುರೂಚಿತಂ ದೇಹಿನ್ಕ್ವಚಿನ್ನಿಸ್ತರ ಯತ್ತ್ವಯಾ ಕೃತಮ್ ॥೩೯॥

ಪತಿಯ ಹಿತವಚನಗಳ ನನ್ನಿಂದ ಪಾಲಿಸಲ್ಪಟ್ಟಿಲ್ಲವೋ ಪಾತಿವ್ರತ್ಯ ನನ್ನಿಂದ ಎಂದೂ ಕಾಪಾಡಲ್ಪಟ್ಟಿಲ್ಲವೋ  ಶ್ರೇಷ್ಠರಾದ ಗುರುಗಳು ಯೋಗ್ಯರೀತಿಲಿ ಎನ್ನಿಂದ ಗೌರವಿಸಲ್ಪಟ್ಟಿಲ್ಲವೋ . ಏ ದೇಹವೆ ! ನಿನ್ನಂದ ಎನು ಮಾಡಲ್ಪಟ್ಟಲ್ಲವೋ ನೀವು ಎಲ್ಲರು ಪರಿಹರಿಸಿಕೊಳ್ಳಿ 

ಧರ್ಮಬುದ್ಧ್ಯಾ ಪತಿರೇವ ಸೇವಿತೋ ವಹ್ನಿಪ್ರವೇಶೋ ನ ಕೃತೋ ಮೃತೇ ಪತೌ ।
ವೈಧವ್ಯಮಾಸಾದ್ಯ ತಪೋ ನ ಸೇವಿತಂ ದೇಹಿನ್ಕಚಿನ್ನಿಸ್ತರ ಯತ್ತ್ವಯಾ ಕೃತಮ್ ॥೪೦॥

ಧರ್ಮಬುದ್ಧಿಂದ ಪತಿಯ ಮಾತುಗಳು ಸೇವಿಸಲ್ಪಟ್ಟಿದ್ದಿಲ್ಲವೋ  ಪರಿ ಸತ್ತು ಮತ್ತೆ ಸಹಗಮನ (ಅಗ್ನಿಪ್ರವೇಶ) ಮಾಡಲ್ಪಟ್ಟಿದ್ದಿಲ್ಲವೊ ವಿಧವೆ ಆದರೂ ತಪಸ್ಸು ಆಚರಿಸಲ್ಪಟ್ಟಿದ್ದಿಲ್ಲವೊ . ಏ ದೇಹವೆ  ನಿನ್ನಂದ ಎನು ಮಾಡಲ್ಪಟ್ಟತ್ತೋ ಎಲ್ಲರು ಪರಿಹರಿಸಿಕೊಳ್ಳಿ 

ಮಾಸೋಪವಾಸೈರ್ನವಿಶೋಷಿತಂ ಮಯಾ ಚಾಂದ್ರಾಯಣೈರ್ವಾ ನಿಯಮೈಃ ಸವಿಸ್ತರೈಃ ।
ನಾರೀಶರೀರಂ ಬುಹುದುಃಖಭಾಜನಂ ಲಬ್ಧಂ ಮಯಾ ಪೂರ್ವ ಕೃತೈರ್ವಿಕರ್ಮಭಿಃ ॥೪೧॥

ನನ್ನಿಂದ ಚಾಂದ್ರಾಯಣ ಮಾಸಿಕ ಉಪವಾಸವಾಗಲೀ, ವಿಸ್ತಾರವಾದ ವ್ರತನಿಯಮಗಳಾಗಲೀ ದೇಹದ ತಳದ್ದದ್ದಿ ಬಹುದುಃಖವನ್ನು ಅನುಭವುಸುವ ಈ ನಾರೀ ಶರೀರ ನಿನ್ನಂದ ಪೂರ್ವಲ್ಲಿ ಮಾಡಲ್ಪಟ್ಟ ದುಷ್ಕ್ರರ್ಮಗಳ ಫಲವಾಗಿಯೇ ಲಭಿಸಿದ್ದದು.

ಏವಂ ವಿಲಪ್ಯ ಬಹುಶಃ ಸ ಸ್ಮರನ್ಪೂರ್ವದೈಹಿಕಮ್ ।
ಮಾನುಷತ್ವಂ ಮಮ ಕುತ ಇತಿ ಕ್ರೋಶಸ್ಪ್ರಸರ್ಪತಿ ॥೪೨॥

ಹೀಗೆ ಬಹು ಪ್ರಲಾಪಿಸಿಗೊಂಡು ಜೀವಿ ಪೂರ್ವ ಜೀವನವ ಸ್ಮರಿಸಿಗೊಂಡು ‘ಆ ಎನ್ನ ಮಾನುಷತ್ವ ಎಲ್ಲಿ ?!’ ಎಂದು ಅಕ್ರೋಶ ಮಾಡಿಗೊಂಡು ಮುಂದೆ ನಡೆಯುತ್ತ

ದಶಸಪ್ತ ದಿನಾನ್ಯೇಕೋ ವಾಯುವೇಗೇನ ಗಚ್ಛತಿ ।
ಅಷ್ಟಾದಶೇ ದಿನೇ ತಾರ್ಕ್ಷ್ಯ ಪ್ರೇತಃ ಸೌಮ್ಯಪುರಂ ವ್ರಜೇತ್ ॥೪೩॥

ಏ ಗರುಡ!, ಹದಿನೇಳು ದಿನಗಳು  ಒಂಟಿಯಾಗಿ ವಾಯುವೇಗದಿಂದ ಹೋಗುತ್ತಿತ್ತು . ಹದಿನೆಂಟನೇ ದಿನ ಆ ಜೀವ ಸೌಮ್ಯಪುರವ ತಲುಪೀತು 

No comments:

ನರನಾಡಿಗಳು

*ನರನಾಡಿಗಳು ಎಂದರೇನು ?* *ಇವುಗಳ ಮಹತ್ವ ಏನು ? ದೇಹದಲ್ಲಿ ಇವುಗಳು ಪ್ರತ್ಯೇಕವಾಗಿ ಇರುತ್ತವೆ  *ನರ(nerves) -* *ಮೆದುಳು,ಮೆದುಳು* *ಬಳ್ಳಿ(ಬೆನ್ನು ಹುರಿ) ಮತ್ತು* *ಅ...