Followers

Saturday, 16 May 2020

ಕರ್ಮ ಫಲ ಮಾರ್ಗ (ಗ, ಪು, ೨)

ಗರುಡ ಉವಾಚ

ಕೀದೃಶೋ ಯಮಲೋಕಸ್ಯ ಪಂಥಾ ಭವತಿ ದುಃಖದಃ 

ತತ್ರ ಯಾಂತಿ ಯಥಾ ಪಾಪಸ್ತನ್ಮೇ ಕಥಯ ಕೇಶವ ॥೦೧॥

ಗರುಡ° ಹೇಳಿದ°- ಏ ಕೇಶವ!, ಯಮಲೋಕದ ಮಾರ್ಗ ಯಾವ ರೀತಿಲಿ ದುಃಖಪ್ರದವಾಗಿದೆ ಪಾಪಿಗಳು  ಯಾವ ರೀತಿಲಿ ಅಲ್ಲಿಗೆ ಹೋಗುತ್ತವೆ ಹೇಳು ಹೆಚ್ಚಿನ ರೀತಿ ವಿವರಿಸಿ ಹೇಳು.


ಶ್ರೀ ಭಗವಾನ್ ಉವಾಚ

ಯಮಮಾರ್ಗಂ ಮಹದ್ದುಃಖಪ್ರದಂ ತೇ ಕಥಯಾಮ್ಯಹಮ್ ।

ಮಮ ಭಕ್ತೋsಪಿ ತಚ್ಛೃತ್ವಾ ತ್ವಂ ಭವಿಷ್ಯತಿ ಕಂಪಿತಃ ॥೦೨॥

ಭಗವಂತ ಹೇಳಿದ° – ಮಹಾದುಃಖಪ್ರದವಾದ ಯಮಮಾರ್ಗವ ನಿನಗೆ ವಿವರಿಸಿ ಹೇಳ್ತೆನೆ ನೀನು ಎನ್ನ ಭಕ್ತನಾಗಿದ್ದರೂ ಕೂಡ ಅದರ ಕೇಳಿದ ಕೂಡಲೇ ನೀನು ನಡುಕಹುಟ್ಟುತ್ತದೆ 

ವೃಕ್ಷಚ್ಛಾಯಾ ನ ತತ್ರಾಸ್ತಿ ಯತ್ರ ವಿಶ್ರಮತೇ ನರಃ ।

ಯಸ್ಮಿನ್ಮಾರ್ಗೇನ ಚಾನ್ನಾದ್ಯಂ ಯೇನ ಪ್ರಾಣಾನ್ಸಮುದ್ಧರೇತ್ ॥೦೩॥

ಮನುಷ್ಯ ವಿಶ್ರಮಿಸಿಕೊಳ್ಳಲು  ಅಲ್ಲಿ ಮರದ ನೆರಳು ಇದೆ ಪ್ರಾಣರಕ್ಷಣೆಗೆ ಬೇಕಾದ ಅನ್ನಾದಿಗಳೂ (ಆಹಾರಾದಿಗಳೂ) ಇದೆ 

ನ ಜಲಂ ದೃಶ್ಯತೇ ಕ್ವಾಪಿ ತೃಷಿತೋsತೀವ ಯಃ ಪಿಬೇತ್ ।

ತಪಂತೇ ದ್ವಾದಶಾದಿತ್ಯಾಃ ಪ್ರಲಯಾಂತೇ ಯಥಾ ಖಗ ॥೦೪॥

ಏ ಪಕ್ಷಿಯೇ, ಅತ್ಯಂತ ಆಯಾಸಗಿ ಕುಡಿಯಲು  ಬೇಕಾರೆ ಎಲ್ಲಿಯೂ ನೀರು ಕಾಣಲು ಸಿಕ್ಕುತ್ತಿಲ್ಲ . ದ್ವಾದಶಾದಿತ್ಯರು ಪ್ರಳಯಾಂತ್ಯಲ್ಲಿ ಹೊತ್ತಿಗೊಂಡಹಾಗೆ ಪ್ರಜ್ವಲಿಸಿಗೊಂಡು 

ತಸ್ಮಿನ್ ಗಚ್ಛತಿ ಪಾಪಾತ್ಮಾ ಶೀತವಾತೇನ ಪೀಡಿತಃ ।

ಕಂಟಕೈರ್ವಿಧ್ಯತೇ ಕ್ವಾಪಿ ಕ್ವಚಿತ್ಸರ್ಪೈರ್ಮಹಾವಿಷ್ಯೆಃ ॥೫॥

ಅಲ್ಲಲ್ಲಿ ಶೀತಲ ವಾಯುವಿಂದ ಪೀಡಿತನಾಗಿ, ಕೆಲವುoದಕ್ಕೆ ಮುಳ್ಳುಗಳೂ ಚುಚ್ಚಿಗೊಂಡು, ವಿಷಸರ್ಪಂಗಳೂ ಕಚ್ಚಿಗೊಂಡು ಆ ಮಾರ್ಗಲ್ಲಿ ಪಾಪಿಯಾದವನು  ನಡೆಯಬೇಕು 

ಸಿಂಹೈರ್ವಾಘ್ರೈಃ ಶ್ವಭಿರ್ಗೋರೈರ್ಭಕ್ಷ್ಯತೇ ಕ್ವಾsಪಿ ಪಾಪಕೃತ್ ।

ವೃಶ್ಚಿಕೈರ್ದಶ್ಯತೇ ಕ್ವಾಪಿ ಕ್ವಚಿದ್ದಹ್ಯತಿ ವಹ್ನಿನಾ ॥೦೬॥

ಪಾಪಮಾಡಿದವನ ಕೆಲವುದoಕ್ಕೆ ಘೋರವಾದ ಸಿಂಹ, ಹುಲಿ, ನಾಯಿಗೊ ತಿನ್ನುವವು. ಅಲ್ಲಲ್ಲಿ ಚೇಳುಗಳು  ಕಚ್ಚುತ್ತವೆ . ಕೆಲವು ದಿಕ್ಕೆ ಕಿಚ್ಚಿದಕ್ಕೆ ಸುಡುತ್ತದೆ 

ತತಃ ಕ್ವಚಿನ್ಮಹಾಘೋರಮಸಿಪತ್ರವನಂ ಮಹತ್ ।

ಯೋಜನಾನಾಂ ಸಹಸ್ರೇ ದ್ವೇ ವಿಸ್ತಾರಾಯಾಮತಃ ಸ್ಮೃತಮ್ ॥೦೭॥

ಮತ್ತೆ ಒಂದಕ್ಕೆ ಮಹಾಘೋರವಾದ, ಎನ್ನದಾoಜಿ ವಿಶಾಲ ಎರಡು ಸಾವಿರ ಯೋಜನ ವಿಸ್ತಾರದ ಅಸಿಪತ್ರ (ಕತ್ತಿಯಾಗೆ ಹರಿತವಾದ ಎಲೆಗಳ ) ವನ ಇದ್ದು.

ಕಾಕೋಲೂಕವಟಗೃಧ್ರ ಸರಹಾದಂಸಂಕುಲಮ್ ।

ಸದಾವಾಗ್ನಿ ಚ ತತ್ಪತ್ರೈಶ್ಛಿನ್ನಭಿನ್ನಃ ಪ್ರಜಾಯತೇ ॥೦೮॥

ಕಾಕೆ ಗೂಬೆ ಗಿಡುಗ ಹದ್ದು ಜೇನಹುಳು ನುಸಿ ಕಾಡ್ಗಿಚ್ಚು ಮತ್ತೆ ಅದರಲ್ಲಿ ಕತ್ತಿ ಹಾಗೆ ಎಲೆ ಇವುಗಳಿಂದ ಛಿನ್ನಭಿನ್ನವಾಗುತ್ತ

ಕ್ವಚಿತ್ಪತತ್ಯಂಧಕೂಪೇ ವಿಕಟಾತ್ಪರ್ವತಾತ್ಕ್ವಚಿತ್ ।

ಗಚ್ಛತೇ ಕ್ಷುರಧಾರಾಸು ಸಂಕೂನಾಮುಪರಿ ಕ್ವಚಿತ್ ॥೦೯॥

ಒಂದಕಡೇ  ಕತ್ತಲೆಯಾದ ಬಾವಿಗಳಲ್ಲಿ, ಇನ್ನೊಂದು ಕಡೆ ಕಡೆಕರಾಳ ಪರ್ವತಗಳಿಂದ ಬೀಳುತ್ತ ಮತ್ತೊಂದು ಕಡೆ ಹರಿತವಾದ ಕತ್ತಿಯ ಅಲಗು ಮತ್ತೆ ಭರ್ಜಿಗಳ ಮೇಲೆ ನಡೆಯಬೇಕು 

ಸ್ಖಲತ್ಯಂಧೇ ತಮಸ್ಯುಗ್ರೇ ಜಲೇ ನಿಪತತಿ ಕ್ವಚಿತ್ ।

ಕ್ವಚಿತ್ಪಂಕೇ ಜಲೌಕಾಢ್ಯೇ ಕ್ವಚಿತ್ಸಂತಪ್ತ ಕರ್ದಮೇ ॥೧೦॥

ಒಂದು ಕಡೆ  ಭಯಂಕರವಾದ ಕಗ್ಗತ್ತಲೆಲಿ ಮುಗ್ಗರಿಸಿ ನೀರಿಲ್ಲಿ ಬೀಳುತ್ತ  ಇನ್ನೊಂದು ಕಡೆ ಜಿಗಣೆಗಳಿಂದ ಕೂಡಿದ ಕೆಸರಿಲ್ಲಿಯೂ ಮತ್ತೊಂದುಕಡೆ  ಸುಡುತ್ತಿರುವ ಕೆಸರಿಲ್ಲಿಯೂ ಬೀಳುತ್ತ 

ಸಂತಪ್ತ ವಾಲುಕಾಕೀರ್ಣೇ ಧ್ಮಾತತಾಮ್ರಮಯೇ ಕ್ವಚಿತ್ ।

ಕ್ವಚಿದಂಗಾರರಾಶೌ ಚ ಮಹಾಧೂಮಾಕುಲೇ ಕ್ವಚಿತ್ ॥೧೧॥

ಒಂದುಕಡೆ  ಸುಡುತ್ತ ಹೊಯಿಗೆ ತುಂಬಿ, ಕಾದ ತಾಮ್ರಮಯವಾದ ಜಾಗ ಇದ್ದು. ಇನ್ನೊಂದುಕಡೆ  ಕೆಂಡದ ರಾಶಿ ಇದ್ದು, ಮತ್ತೊಂದು ದಿಕ್ಕಿಗೆ ಕಪ್ಪು ಹೊಗೆ ತುಂಬಿಗೊಂಡಿದೆ 

ಕ್ವಚಿದಂಗಾರವೃಷ್ಟಿಶ್ಚ ಶಿಲಾವೃಷ್ಟಿಃ ಸವಜ್ರಕಾ ।

ರಕ್ತವೃಷ್ಟಿಃ ಶಸ್ತ್ರವೃಷ್ತಿಃ ಕ್ವಚಿದುಷ್ಣಾಂಬುವರ್ಷಣಮ್ ॥೧೨॥

ಅಲ್ಲಲ್ಲಿ ಕೆಂಡದ ಮಳೆಯೂ, ವಜ್ರಂದೊಡಗೂಡಿದ ಕಲ್ಲುಗಳ ಮಳೆಯೂ, ನೆತ್ತರಿನ ಮಳೆಯೂ, ಶಸ್ತ್ರಗಳ ಮಳೆಯೂ ಮತ್ತೆ ಕಾದ ನೀರಿನ ಮಳೆಯೂ ಸುರಿತ್ತು. (ಕ್ವಚಿತ್ = ಕೆಲವುoದಿಕ್ಕೆ . ಇಲ್ಲಿ ಅಲ್ಲಲ್ಲಿ ಹೇಳಿದ ಅವೆಲ್ಲವ ಒಟ್ಟಿಗೆ ಸೇರ್ಸಿ ಹೇಳಿದ್ದದು)


ಕ್ಷಾರಕರ್ದಮವೃಷ್ಟಿಶ್ಚ ಮಹಾನಿಮ್ನಾನಿ ಚ ಕ್ವಚಿತ್ ।

ವಪ್ರಪ್ರರೋಹಣಂ ಕ್ವಾಪಿ ಕಂದರೇಷು ಪ್ರವೇಶನಮ್ ॥೧೩॥

ಕೆಲವುoದಕ್ಕೆ ಕ್ಷಾರ ತುಂಬಿದ ಕೆಸರಿನ ಮಳೆ, ಒಂದುಕಡೆ ಅತೀ ಆಳವಾದ ಹೊಂಡ, ಇನ್ನೊಂದಿಕ್ಕೆ ಅತ್ಯಂತ ಎತ್ತರದ ಜಾಗವನ್ನು ಹತ್ತಿ ಗುಹೆಗಳನ್ನೂ ಪ್ರವೇಶಿಬೇಕು 

.ಗಾಢಾಂಧಕಾರಸ್ತತ್ರಾಸ್ತಿ ದುಃಖಾರೋಹಶಿಲಾಃ ಕ್ವಚಿತ್ ।

ಪೂಯಶೋಣಿತಪೂರ್ಣಾಶ್ಚ ವಿಷ್ಠಾಪೂರ್ಣ ಹೃದಾ ಕ್ವಚಿತ್ ॥೧೪॥

ಅಲ್ಲಿ ಗಾಢಾಂಧಕಾರ ತುಂಬಿಗೊಂಡಿದ್ದು ಮತ್ತೆ ಬಹುಕಷ್ಟಪಟ್ಟು ದುಃಖಿಸಿಕೊಂಡು  ಹತ್ತಬೇಕ್ಕಾದ ಶಿಲೆಗಳು . ಅಲ್ಲಲ್ಲಿ ರೆಶಿಗೆ, ನೆತ್ತರು ಮತ್ತೆ ಮಲ ತುಂಬಿದ ಹೊಂಡಗಳು  ಇದ್ದು.

ಮಾರ್ಗಮಧ್ಯವಹತ್ಯುಗ್ರಾ ಘೋರಾ ವೈತರಣೀ ನದೀ ।

ಸಾ ದೃಷ್ಟಾ ದುಃಖದಾ ಕಿಂವಾ ಯಸ್ಯಾ ವಾರ್ತಾ ಭಯಾವಹಾ ॥೧೫॥

ಮಾರ್ಗಮಧ್ಯಲ್ಲಿ ಅತಿಘೋರವಾದ ವೈತರಣೀ ನದಿ ಹರಿತ್ತು. ಅದರ ವಿಷಯ ಕೇಳಿದರೆ  ಹೆದರಿಕೆಯಗುತ್ತದೆ ಇನ್ನು ನೋಡಿರೆ ದುಃಖವುಂಟಾಗುವುದು 

ಶತಯೋಜನ ವಿಸ್ತೀರ್ಣ ಪೂಯಶೋಣಿತವಾಹಿನೀ ।

ಅಸ್ಥಿವೃಂದತಟಾ ದುರ್ಗಾ ಮಾಂಸಶೋಣಿತಕರ್ದಮಾ ॥೧೬॥

ನೂರುಯೋಜನ ವಿಸ್ತೀರ್ಣ ಇರುವ, ರೆಶಿಗೆ ನೆತ್ತರಿಂದ ತುಂಬಿಗೊಂಡು ಹರಿವ ಆ ನದಿಯ ದಡ ಅಸ್ಥಿರಾಶಿಗಾಳಿoದಲೂ, ರಕ್ತ  ಮಾಂಸಂಗಳಿಂದಲೂ ಕೂಡಿ ದುರ್ಗಮವಾಗಿದೆ 

ಅಗಾಧಾ ದುಸ್ತರಾ ಪಾಪೈಃ ಕೇಶಶೈವಾಲದುರ್ಗಮಾ ।

ಮಹಾಗ್ರಾಹಸಮಾಕೀರ್ಣಾ ಘೋರಪಕ್ಷಿ ಶತೈರ್ವೃತಾ ॥೧೭॥

ಆ ನದಿ ಬಹು ಅಗಾಧವಾಗಿ ಪಾಪಿಗಳು ದಾಟಿ  ಕಷ್ಟಕರವಾಗಿಯೂ, ಕೇಶದ ರಾಶಿತುಂಬಿದ ಚೆಂಡಿನಹಾಗೆ ತುಂಬಿ ದುರ್ಗಮವಾಗಿ, ದೊಡ್ಡ ಮೊಸಳೆಗಳಿಂದ ಕೂಡಿ ನೂರಾರು ಘೋರಪಕ್ಷಿಗಳಿಂದ ಪರಿವೃತವಾಗಿದ್ದು.

ಆಗತಂ ಪಾಪಿನಂ ದೃಷ್ಟ್ವಾ ಜ್ವಾಲಾಧೂಮಸಮಾಕುಲಾ ।

ಕ್ವಥತೇ ಸಾ ನದೀ ತಾರ್ಕ್ಷ್ಯ ಕಟಾಹಾಂತರ್ಘೃತಂ ಯಥಾ ॥೧೮॥

ಏ ಗರುಡ!, ಹತ್ತಿರ  ಬಾ ಪಾಪಿಯ ನೋಡಿ ಆ ನದಿಯ ಜ್ವಾಲೆ ಮತ್ತೆ ಹೊಗೆ  ತುಂಬಿಗೊಂಡು, ಕೊಪ್ಪರಿಗೆಲಿ ತುಪ್ಪ ಕೊದಿವ ಹಾಗೆ ಕೊದಿತ್ತಿತ್ತು 

ಕೃಮಿಭಿಃ ಸಂಕುಲಾ ಘೋರೈಃ ಸೂಚೀವಕ್ತ್ರೈ ಸಮಂತತಃ ।

ವಜತುಂಡೈರ್ಮಹಾಗೃಧ್ರೈರ್ವಾಯಸೈಃ ಪರಿವಾರಿತಾಃ ॥೧೯॥

ಸೂಜಿಯಾಂಗೆ ಮೋರೆ ಇಪ್ಪ, ಘೋರವಾದ ಹುಳುಗಳ ಗುಂಪಿನ  ಆ ನದಿ ಇದ್ದು. ವಜ್ರದ ಸಮಾನವಾದ ಕೊಕ್ಕುಗಳು ಇದ್ದು ದೊಡ್ಡ ಹದ್ದುಗಳಿಂದಲೂ, ಕಾಕೆಗಳಿಂದಲೂ ಪರಿವೃತವಾಗಿದ್ದು.

ಶಿಶುಮಾರೈಶ್ಚ ಮಕರೈರ್ಜಲೌಕೋಮತ್ಸ್ಯಕಚ್ಛಪೈಃ ।

ಅನ್ಯೈರ್ಜಲಸ್ಥ ಜೀವೈಶ್ಚ ಪೂರಿತಾ ಮಾಂಸಭೇದಕೈಃ ॥೨೦॥

ಸಮುದ್ರಹಂದಿಗಳು , ಮೊಸಳೆಗಳು  ಜಿಗಣೆಗಳು , ಮೀನು, ಆಮೆ ಇನ್ನೂ ಮುಂತಾದ ನೀರಿಲ್ಲಿಯೇ ವಾಸಮಾಡುವಂತಹ ಮಾಂಸಗಳ ತಿನ್ನುವಂತಹ ಪ್ರಾಣಿಗಳಿಂದ ಆ ನದಿ ಕೂಡಿದ್ದು.

1 comment:

Raja swamy said...

ಸ್ವಾಮಿಗಳೇ ಕಡೆಯ(ಹಿಂದಿನ ಅಧ್ಯಾಯದ) ಮೂರು ಸ್ಲೋಕಗಳನ್ನು ತಾವು ಮರೆತಿರಾ ??

ನರನಾಡಿಗಳು

*ನರನಾಡಿಗಳು ಎಂದರೇನು ?* *ಇವುಗಳ ಮಹತ್ವ ಏನು ? ದೇಹದಲ್ಲಿ ಇವುಗಳು ಪ್ರತ್ಯೇಕವಾಗಿ ಇರುತ್ತವೆ  *ನರ(nerves) -* *ಮೆದುಳು,ಮೆದುಳು* *ಬಳ್ಳಿ(ಬೆನ್ನು ಹುರಿ) ಮತ್ತು* *ಅ...