Followers
Thursday, 9 February 2023
ನರನಾಡಿಗಳು
*ನರನಾಡಿಗಳು ಎಂದರೇನು ?* *ಇವುಗಳ ಮಹತ್ವ ಏನು ? ದೇಹದಲ್ಲಿ ಇವುಗಳು ಪ್ರತ್ಯೇಕವಾಗಿ ಇರುತ್ತವೆ
*ನರ(nerves) -* *ಮೆದುಳು,ಮೆದುಳು* *ಬಳ್ಳಿ(ಬೆನ್ನು ಹುರಿ) ಮತ್ತು* *ಅವುಗಳಿಂದ ಹೊರ ಹರಿದು ಮಾಂಸ,ಚರ್ಮ,ಸಂದು ಮತ್ತು ಬೇರೆ,ಬೇರೆ ಅಂಗಾಂಗಗಳಿಗೆ ಹಾಗು ಪಂಚೇಂದ್ರಿಯಗಳು ವೈಶಿಷ್ಟ್ಯಪೂರ್ಣವಾದ ಕೆಲಸ ಮಾಡುವುದಕ್ಕೆ ಶಕ್ತಿ ಕೊಡುವುದು.*
ನಾಡಿ(pulse)- ರಕ್ತನಾಳಗಳು (ದಮನಿ/ಅಪದಮನಿ) ಹೃದಯದಿಂದ,ಹೃದಯದ ಕಡೆಗೆ ಹರಿದು, ದೇಹದ ಎಲ್ಲಾ ಭಾಗಗಳಿಗೆ ಅತ್ಯಗತ್ಯವಾದ ಆಹಾರದ ಅಂಶ ,ಆಮ್ಲಜನಕ ತಲುಪಿಸುವುದು ಮತ್ತು ಅಂಗಾಂಗಗಳಲ್ಲಿ ಆಗುವ ರಾಸಾಯನಿಕ ಕ್ರಿಯೆಗಳಿಂದ ಉತ್ತಾದನೆಯಾಗುವ ಕಲ್ಮಶಗಳನ್ನು ಹೊತ್ತು ತರುವ ಕೆಲಸ,ರಕ್ತಚಲನೆಯ ಮೂಲಕ. ಇವೆರಡೂ ಇಡೀ ದೇಹವನ್ನು ಆವರಿಸಿವೆ.
ನರಗಳು ಮೆದುಳಿನಿಂದ ಬೆನ್ನುಹುರಿ ಮೂಲಕ ಅಡಿಯಿಂದ ಮುಡಿಯವರಗಿನ ದೇಹದ ಅಂಗಾಂಗಗಳಳಿಗೆ ಸಂಪರ್ಕ ಮತ್ತು ಅದರ ಚಲನೆ ತಿರುಗಿಸುವ ಕ್ರಿಯಗಳನ್ನು ಹತೋಟಿ ಮಾಡುವ ಒಂದು ತಂತು ಜಾಲವಾಗರುತ್ತದೆ.
ಯೋಗದ ಪ್ರಕಾರ ನಾವು ಮೂರು ನಾಡಿಗಳನ್ನು ಮುಖ್ಯ ವಾಗಿ ಗುರುತಿಸುತ್ತೇವೆ. ಅದನ್ನು ಸೂರ್ಯ ನಾಡಿ ಚಂದ್ರ ನಾಡಿ ಮತ್ತು ಸುಷಮ್ನ ನಾಡಿ ಎಂದು ಹೇಳಲ್ಪಟ್ಟಿದೆ ನಮ್ಮಉಸಿರಾಟ ಈ ಎರಡು ನಾಡಿಗಳ ಮೂಲಕ ಅನಿವರತ ನಡೆಯುತ್ತಿರುತ್ತದೆ.
ಇದು ಸಹಜ ಕ್ರಿಯೆ ಇದು ಮೆದುಳು ಶ್ವಾಸಕೋಶದ ಮೂಲಕ ಗಾಳಿಯನ್ನು ಮೂಗಿನ ದ್ವಾರದಿಂದ ಹೀರಿ ಕೊಳವೆಯಮೂಲಕ ಶ್ವಾಸಕೋಶ ತುಂಬಿ ರಕ್ತನಾಳಗಳಿಗೆ ಆಮ್ಲಜನಕದ ರವಾನೆ ಮತ್ತು ಇಂಗಾಲಾಮ್ಲದ ಹೊರಹಾಕುವಿಕೆಯ ಕ್ರಿಯೆಯು ಸಹಜವಾಗಿ ನಡೆಯುತ್ತಿರುತ್ತದೆ.
ಇದಲ್ಲದೆ ಯೋಗವು ಸುಷಮ್ನ ನಾಡಿಯಬಗ್ಗೆ ತಿಳಿಸುತ್ತದೆ ಇದು ಯೋಗಕ್ರಿಯೆಯಲ್ಲಿ ಆಧ್ಯಾತ್ಮಿಕ ಸಾಧನೆಗೆ ಬೇಕಾದ ಸೂಕ್ಷ್ಮ ನಾಡಿ ಇದು. ಇದು ಮೂಲಾದಾರ ಚಕ್ರದಿಂದ ಸಹಸ್ರಾರು ಚಕ್ರದವರೆವಿಗೆ ಸಂಪರ್ಕ ಕಲ್ಪಿಸುವ ಆಧ್ಯಾತ್ಮಿಕ ನಾಡಿ.
ಇದನ್ನು ಯೋಗರೀತಿಯಲ್ಲಿ ಸಾಧಕರು ಪ್ರಚೋದಿಸುವುದನ್ನು ಸಾಧಿಸಿರುತ್ತಾರೆ. ಅವರಿಗೆ ಈ ನಾಡಿಯನ್ನು ತೆರೆಯುವ ಸಾಮರ್ಥ್ಯ ಇರುತ್ತದೆ. ಈ ನಾಡಿ ಮೇಲೆ ಹೇಳಿದ ಸೂರ್ಯ ನಾಡಿ ಮತ್ತು ಚಂದ್ರ ನಾಡಿಳ ನಡುವೆ ಇರುವ ಸೂಕ್ಷ್ಮ ಕೊಳವೆಯಾಗಿದ್ದು ಆರು ಚಕ್ರಗಳ ಮೂಲಕ ಹಾದು ಸಹಸ್ರಾರವನ್ನು ತಲುಪಿದರೆ ಆಗುವ ಆಧ್ಯಾತ್ಮಿಕ ಅನುಭವವೆ ಬೇರೆ ಎಂದು ಯೋಗಿ ಮತ್ತು ಮಹಾತ್ಮರನ್ನು ನೋಡಿ ಅರಿಯಬೇಕು.
ನಾಡಿ ಪ್ರಕರಣ ಸಂಧಿ..
ನಾಡಿಗಳನ್ನು ಸುನಾಡಿ ಅಂತ ದಾಸರು ಕರೆದಿದ್ದಾರೆ .. ಅತೀಂದ್ರಿಯವಾಗಿ, ತೇಜೋ ಮಯವಾಗಿ ಇರುವುದರಿಂದ .. ಸುನಾಡಿ .. ಅಂತ ಹೇಳಿದ್ದಾರೆ.
ನಿಷಾ ನಾಡಿಗಳೆಂದರೆ ಎಡ ಪಾರ್ಶ್ವದ ಸ್ತ್ರೀ ನಾಡಿಗಳಿಗೆ ನಿಷಾ ನಾಡಿ ಎಂತಲೂ ಅಥವಾ ರಾತ್ರಿ ನಾಡಿಗಳು ಎಂತಲೂ ಕರೆಯುತ್ತಾರೆ
ಪರ ನಾಮಕ ಅಂತ ಶ್ರೀ ಲಕ್ಷ್ಮೀದೇವಿಗೆ ಕರೆಯುತ್ತಾರೆ.
ಸ್ತೂಲ ದೇಹಗತ ಎಡ ಬಲ ಪಾರ್ಶ್ವದ 72000 ನಾಡಿಗಳ ವ್ಯೂಹಗಳ ಹಂಚಿಕೆ ಹೀಗಿದೆ ..
ನಮ್ಮ ದೇಹದ .. ಸೊಂಟದಿಂದ ಕಾಲಿನ ಬೆರಳಿನ ತುದಿಯ ವರೆಗೆ .. ಎಡ . 12000. ಬಲಕ್ಕೆ..12000.
ಕಂಠದಿಂದ ಕಟಿಯ ಅಂದರೆ ಮಧ್ಯ ದೇಹ ಪರ್ಯಂತ ಎಡ. 14000 ಮತ್ತು. ಬಲ .. 14000. ಶಿರಸ್ಸಿನಿಂದ ಕಂಠದ ಪರ್ಯಂತ ..6000 + 6000 .
ಹಸ್ತ ಭುಜದಿಂದ ಬೆರಳಿನ ತುದಿಯವರೆಗೆ..
4000 + 4000 = ಒಟ್ಟು ಎಡಕ್ಕೆ 36000 ಮತ್ತು ಬಲಕ್ಕೆ 36000 = 72000 ನಾಡಿಗಳು.
ಶ್ರೀ ವಾಸುದೇವ ಪರಮಾತ್ಮನು ನಾಡಿಗತ ಭೃಹತೀ ಛಂದಸ್ಸಿನಿಂದ ಕರೆಸಿಕೊಳ್ಳುತ್ತ ಪ್ರತಿ ಪಾದ್ಯನಾಗಿದ್ದಾನೆ. ಪರಮಾತ್ಮ ಪೂರ್ಣ , ಸರ್ವತ್ರ ವ್ಯಾಪ್ತ ಸರ್ವ ಪ್ರಕಾರದಿಂದಲೋ ಪರಿ ಪೂರ್ಣ ಅದಕ್ಕೆ ಇವನಿಗೆ ಭೃಹತೀ ಅಂತ ಕರೆಯುತ್ತಾರೆ .
ವ್ಯಾನ ರೂಪ ಪರಮಾತ್ಮ ...
ವ್ಯಾನವಾಯುವು ಮೇಲಕ್ಕೆ ಪ್ರವಹಿಸುತ್ತದೆ. ಇದು ಶರೀರದ ಎಲ್ಲಾ 72 ಸಾವಿರ ನಾಡಿಗಳಲ್ಲಿ ಪ್ರವಹಿಸುವ ಶಕ್ತಿಯಾಗಿದೆ.
ವ್ಯಾನವು ಇಡೀ ದೇಹವನ್ನು ವ್ಯಾಪಿಸುತ್ತದೆ, ಎಲ್ಲಾ ಚಲನೆಯನ್ನು ನಿಯಂತ್ರಿಸುತ್ತದೆ ಮತ್ತು ಇತರ ಪ್ರಾಣಗಳನ್ನು ಸಂಯೋಜಿಸುತ್ತದೆ. ಇದು ಇತರ ಪ್ರಾಣಗಳಿಗೆ ಮೀಸಲು ಶಕ್ತಿಯಾಗಿ ಕಾರ್ಯನಿರ್ವಹಿಸುತ್ತದೆ.
ವ್ಯಾನ ಸ್ನಾಯು ವ್ಯವಸ್ಥೆಯನ್ನು ಸಹ ನಿಯಂತ್ರಿಸುತ್ತದೆ, ಸಮತೋಲನವನ್ನು ಕಾಪಾಡುತ್ತದೆ,
ವ್ಯಾನವು ಇಡೀ ದೇಹವನ್ನು ವ್ಯಾಪಿಸುತ್ತದೆ, ಎಲ್ಲಾ ಚಲನೆಯನ್ನು ನಿಯಂತ್ರಿಸುತ್ತದೆ ಮತ್ತು ಇತರ ಪ್ರಾಣಗಳನ್ನು ಸಂಯೋಜಿಸುತ್ತದೆ. ಇದು ಇತರ ಪ್ರಾಣಗಳಿಗೆ ಮೀಸಲು ಶಕ್ತಿಯಾಗಿ ಕಾರ್ಯನಿರ್ವಹಿಸುತ್ತದೆ.
ವ್ಯಾನ ಸ್ನಾಯು ವ್ಯವಸ್ಥೆಯನ್ನು ಸಹ ನಿಯಂತ್ರಿಸುತ್ತದೆ, ಸಮತೋಲನವನ್ನು ಕಾಪಾಡುತ್ತದೆ, ಇದು ಇಡೀ ದೇಹವನ್ನು ವ್ಯಾಪಿಸುತ್ತಿರುವಾಗ, ವ್ಯಾನ ವಿಶೇಷವಾಗಿ ಅಂಗಗಳಲ್ಲಿ ಸಕ್ರಿಯವಾಗಿದೆ.
*ವ್ಯಾನ ವಾಯುವು* *ವಿಚಲಿತವಾದಾಗ, ದೇಹ ಮತ್ತು ಮನಸ್ಸು ಎರಡೂ ವಿಘಟಿತವಾಗುತ್ತವೆ ಮತ್ತು ದುರ್ಬಲಗೊಳ್ಳುತ್ತವೆ, ಇದರ ಪರಿಣಾಮವಾಗಿ ಅಸಮಂಜಸ ಪ್ರಯತ್ನಗಳು, ವಿವಿಧ* *ಕಾಯಿಲೆಗಳು ಮತ್ತು ಮಾನಸಿಕ ಅಸ್ವಸ್ಥತೆ, ಆತಂಕ ಉಂಟಾಗುತ್ತದೆ.
Thursday, 26 January 2023
asti bhāti priyaṃ rūpaṃ ಅಸ್ತಿ ಭಾತಿ ಪ್ರಿಯಂ ರೂಪಂ
*Shloka 20*
*अस्ति भाति प्रियं रूपं नाम चेत्यंशपञ्चकम्।**आद्यत्रयं ब्रह्मरूपं जगद्रूपं ततो द्वयं ।।२०।।*
asti bhāti priyaṃ rūpaṃ nāma cetyaṃśapañcakam ।
ādyatrayaṃ brahmarūpaṃ jagadrūpaṃ tato dvayam ॥ 20॥
20. Every entity has five characteristics, viz, existence, cognizability, attractiveness, form, and name. Of these, the first three belong to *Brahman* and the next two to the world.
*Commentary by Sri Paramarthananda:*
What is said in the previous verse is further clarified and consolidated. It was said that through enquiry the seeker differentiates between what is *Brahman* and what is creation. The differentiation is an intellectual process because they can be never separated. The objects can be physically separated from each other because they are limited. But *Brahman* being limitless cannot be physically separated from the objects. Existence and consciousness being all-pervading cannot be physically separated from the world. Only intellectual separation is possible and actually intellectual separation alone is enough. At the objective level pure existence cannot be seen separately. At the subjective level, I cannot physically separate consciousness from the three bodies. In the waking state, the gross body continues, in the dream state, the dream body continues, in the deep sleep state and even in the *samādhi* state, the causal body continues. I am never going to experience pure consciousness, but it is only in terms of discriminative understanding that the differentiation is done. How is that discrimination done? The author presents the method of discrimination in this verse. This is a very oft-quoted verse. We are experiencing five factors outside. All our experiences have five components. Three of those components belong to *Brahman* and two belong to the creation. Three are factual and two are material. Thus all our experiences are mixed. The five components are: *Asti:* existence; words like ‘is’, ‘am’, ‘are’ refer to existence. I never experience anything as nonexistent. Even non-existent is referred to as ‘nothing is existent’. *Asti* is otherwise known as *sat*. It is common to all experiences but I take existence for granted. *Vedānta* is not helping me to experience the existence because it is always experienced. *Vedānta’s* aim is only drawing my attention to the already experienced fact and giving some additional information about that fact. *Bhāti*: it is known to me; *it is*, it is known or experienced. Everything that is experienced is known. It is known because if it is not known, I will never say, ‘it is’. The very talk about existence presupposes experience. The existence of what we do not experience cannot be talked about. No one can talk about an unknown thing. For example, if I say that I do not know Chinese language, the fact that I do not know Chinese language is known to me. Everything is known to me as known or unknown. ‘Known’ refers to knowledge of a known entity or an unknown entity. Knowledge is associated with consciousness. Thus *bhāti* = known = associated with knowledge = associated with consciousness ( *cit*). Everything is associated with existence and consciousness. *Priyaṃ*: dear; everything is associated with dearness. Everything is an object of my or someone’s liking. Objects are liked by me in two different ways. Some are liked when they come and some are liked when they go. Some people give happiness wherever they go and some others give happiness whenever they go. Every object is associated with like or dislike. Even disliked objects are liked when they go. Liking is associated with *ānanda*. *priyaṃ rūpaṃ* means *ānandasvarūpa*. Everything in the creation has *sat*, *cit* and *ānanda*. *Nāma*: everything is associated with a name. *Rūpa*: form, refers to any property. All our experiences have *sat, cit, ānanda*, *nāma* and *rūpa*. A wise person is one who knows that the first three belong to *Brahman* and the last two belong to the world.
In all our experiences five factors are involved. One is *asti*. I use the word ‘is’ but I never pay attention to the *‘is-ness’*. In every statement that is made every word should correspond to an entity. I am taking the word ‘is’ for granted when it is used in statements. *Vedānta* draws our attention to that. ‘Is-ness’ is factor 1. Whenever I say that something is, I have experienced that object and known the object. I can never talk about the ‘is-ness’ of an unknown object. Thus ‘is-ness’ presupposes ‘known-ness’. I can never talk about the existence of an object without making it an object of knowledge. Known-ness is possible only when I am conscious of the object. Therefore, the author says *bhāti* is the second factor. ‘Something is known’ means that consciousness is associated with that object whose existence I talk about. *Asti* means *sat* association, *Bhāti* means *cit* association. *Sat* and *cit* are in every object. *Cit* is present as ‘known’. *Sat* is present as ‘is’. Every object is associated with *ānanda* also. This association with *ānanda* is expressed in statements such as ‘I like this clip’. Every object is liked by someone or the other. *Priyaṃ* means *ānanda* association, which is the third factor. Two more factors are *nāma* and *rūpa*, name and form. In this context, *rūpa* can be taken to be any attribute or object. These two are the variable factors. All these five factors are experienced simultaneously. Of these five, three are present unchangingly everywhere, especially two. *Priyaṃ* can change, but two are unchanging and uniform. Whatever is unchanging and uniform is not paid attention to normally. *Vidyāraṇya* describes this fact in the 10th chapter of *Pañcadaśī*. He asks us to consider the situation after a play is over and all the actors have retired to the green room and the scene set has been removed. If someone in the audience is asked what or who is there on the stage, that person would invariably say, ‘no one or nothing is on the stage’. That statement shows that the light, because of which we could see the actors earlier and also know that no one is on the stage now, is missed. Even though the light plays such an important role, it is not noticed because it is uniform and changeless. Similarly space that is everywhere is not noticed. Statements like empty space is a contradiction because space is always present. Whatever is uniform and changeless is taken for granted. Only the moving gets human attention. *Asti, bhāti*, and *priyaṃ* are *brahma-rūpam*, which are uniform and everywhere. *Nāma-rūpa* abounds in variety and are always changing. People do not notice the *brahma-rūpam*, which is the truth but fall in love with the variety, which is the untruth. Untruth is attractive and truth is not attractive. Thus *māyā* always wins. One should enjoy *māyā* holding on to *Brahman*. *Asti*, existence, *bhāti*, consciousness, *priyaṃ*, happiness, *rūpam*, form, and *nāma*, name are the five components. Of these, the first three, *sat-cit-ānanda* belong to *Brahman*, which is uniform. A question may come up as to how *ānanda* can be uniform because *ānanda* is experienced to be changing. The *ānanda* that manifests in the mind is never uniform. Experiential pleasure is not *brahma-ānanda*, but it is the *ānanda* that is reflected in the mind. Since the mind has fluctuations, the *ānanda* seems to have fluctuations. The original *atmānanda* in every living being is the same, but when that original *ānanda* reflects in the mind it varies according to the condition ( *sattva, rajas or tamas*) of the mind. The other two, *rūpam* and *nāma* belong to the unstable, changing *mithyā* world and are unreliable.
*ಅಸ್ತಿ ಭಾತಿ ಪ್ರಿಯಂ ರೂಪಂ ನಾಮ ಚೇತ್ಯಂಶಪಂಚಕಮ್ ।*
*ಆದ್ಯತ್ರಯಂ ಬ್ರಹ್ಮರೂಪಂ ಜಗದ್ರೂಪಂ ತತೋ ದ್ವಯಮ್ ।।೨೦।।*
ಪ್ರತಿಯೊಂದು ಪದಾರ್ಥದಲ್ಲಿಯೂ ಅಸ್ತಿತ್ವ -ಸತ್, ಪ್ರಕಾಶ-ಚಿತ್, ಪ್ರಿಯವಾಗಿರುವಿಕೆ-ಆನಂದ, ರೂಪ ಅಥವಾ ಆಕಾರ ಮತ್ತು ಹೆಸರು ಎಂಬ ಐದು ಅಂಶಗಳಿವೆ. ಇವುಗಳಲ್ಲಿ ಮೊದಲನೆಯ ಮೂರು ಎಂದರೆ ಸಚ್ಚಿದಾನಂದಗಳು ಬ್ರಹ್ಮ ಸ್ವರೂಪ, ನಂತರದ ಎರಡು ಅಂದರೆ ನಾಮರೂಪಗಳು, ಜಗದ್ರೂಪ, ಅರ್ಥಾತ್ ಪ್ರಪಂಚದ ರೂಪವಾಗಿದೆ.
Sunday, 1 January 2023
ಭಾರತೀಯರ ಕಾಲ ಗಣನೆಯೆ ಬದುಕಿನ ವಿಜ್ಞಾನ
Sunday, 25 December 2022
ವೀರಶೈವ ಜಗದ್ಗುರು ಪರಂಪರೆ
ರೇವಣಾರಾಧ್ಯ (ರೇವಣಸಿದ್ಧ)ರು - ಶ್ರೀ ಕೊಲನುಪಾಕದ (ಕೊಲ್ಲಿಪಾಕಿ) ಶ್ರೀ ಸೋಮೇಶ್ವರ ಶಿವಲಿಂಗದಿಂದ ಆವಿರ್ಭವಿಸಿದ ಶ್ರೀ ಜಗದ್ಗುರು ರೇವಣಾರಾಧ್ಯರು ಪ್ರತಿಯೊಂದು ಯುಗದಲ್ಲೂ ಅವತರಿಸುತ್ತಾ ಬಂದಿದ್ದಾರೆ. ಕೃತಯುಗದಲ್ಲಿ ಇವರಿಗೆ ಶ್ರೀ ಏಕಾಕ್ಷರ ಶಿವಾಚಾರ್ಯ, ತ್ರೇತಾಯುಗದಲ್ಲಿ ಶ್ರೀ ಏಕವಕ್ತ್ರ ಶಿವಾಚಾರ್ಯ, ದ್ವಾಪರಯುಗದಲ್ಲಿ ಶ್ರೀ ರೇಣುಕ ಶಿವಾಚಾರ್ಯ ಮತ್ತು ಕಲಿಯುಗದಲ್ಲಿ ಶ್ರೀ ರೇವಣಾರಾಧ್ಯ ಅಥವಾ ಶ್ರೀ ರೇವಣಸಿದ್ಧ ಎಂಬ ಹೆಸರುಗಳಿದ್ದವೆಂದು 'ಸುಪ್ರಭೇದಾಗಮಾಂತರ್ಗತ ಪಂಚಾಚಾರ್ಯ ಪಂಚಮೋತ್ಪತ್ತಿ ಪ್ರಕರಣ'ದ ಪುಟ-2ರಲ್ಲಿ ಮತ್ತು 'ವೀರಶೈವ ಸದಾಚಾರ ಸಂಗ್ರಹ'ದ ಪ್ರಥಮ ಪ್ರಕರಣದಲ್ಲಿ ಪ್ರತಿಪಾದಿಸಲ್ಪಟ್ಟಿದೆ.
ಅಥ ತ್ರಿಲಿಂಗವಿಷಯೇ ಕುಲ್ಯಪಾಕಾಭಿದೇ ಸ್ಥಲೇ | ಸೋಮೇಶ್ವರ ಮಹಾಲಿಂಗಾತ್ ಪ್ರಾದುರಾಸೀತ್ ಸ ರೇಣುಕಃ || (ಸಿ.ಶಿ. 4-1)
ಸಿದ್ಧಾಂತ ಶಿಖಾಮಣಿಯ ಈ ಉಕ್ತಿಗನುಸಾರವಾಗಿ ದ್ವಾಪರಯುಗದ ಶ್ರೀ ಜಗದ್ಗುರು ರೇಣುಕ ಶಿವಾಚಾರ್ಯ ಭಗವತ್ಪಾದರು ಕೊಲ್ಲಿಪಾಕಿ ಕ್ಷೇತ್ರದ ಶ್ರೀ ಸೋಮೇಶ್ವರ ಮಹಾಲಿಂಗದಿಂದ ಪ್ರಾದುರ್ಭವಿಸಿ, ಮಲಯ ಪರ್ವತದಲ್ಲಿ ವಾಸಿಸುತ್ತಿದ್ದ ಮಹಾಮಹಿಮರಾದ ಶ್ರೀ ಅಗಸ್ತ್ಯ ಮಹರ್ಷಿಗಳಿಗೆ ವೀರಶೈವ ಸಿದ್ಧಾಂತವನ್ನು ಉಪದೇಶಿಸಿದರು. ಆ ಉಪದೇಶವನ್ನೇ ಶ್ರೀಶಿವಯೋಗಿ ಶಿವಾಚಾರ್ಯರು ಸಂಗ್ರಹಿಸಿ ಬರೆದಿಟ್ಟಿದ್ದಾರೆ. ಆ ಸಂಗ್ರಹವೇ ಇಂದು ಸಿದ್ಧಾಂತ ಶಿಖಾಮಣಿ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಈ ಆಚಾರ್ಯರು ಧರ್ಮಪ್ರಚಾರಕ್ಕಾಗಿ ಮಲಯ ಪರ್ವತದಲ್ಲಿಯೇ ಒಂದು ಪೀಠವನ್ನು ಸಂಸ್ಥಾಪಿಸಿದರು. ಅದು ಇಂದು 'ವೀರಸಿಂಹಾಸನ' ಇಲ್ಲವೇ 'ರಂಭಾಪುರೀ ಪೀಠ' ಎಂಬ ಹೆಸರಿನಿಂದ ಕನಾ೯ಟಕದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುಪ್ರಸಿದ್ಧವಾಗಿದೆ. ಈ ಪೀಠದ ಆಚಾರ್ಯರು ಶ್ರೀ ರೇಣುಕ ಶಾಖಾ ಮತ್ತು ವೀರಗೋತ್ರದ ಅಧಿಪತಿಗಳಾಗಿದ್ದಾರೆ.
ತಸ್ಯೇತಿ ವಚನಂ ಶ್ರುತ್ವಾ ರಾಕ್ಷಸೇಂದ್ರಸ್ಯ ಧೀಮತಃ | ತಥೇತಿ ಪ್ರತಿಸುಶ್ರಾವ ಸರ್ವಜ್ಞೋ ಗಣನಾಯಕಃ || ತತ್ರ ಸಂತುಷ್ಟಚಿತ್ತಸ್ಯ ಪೌಲಸ್ತ್ಯಸ್ಯೇಷ್ಟ ಸಿದ್ಧಿಯೇ | ಕೋಟಿತ್ರಯಂ ತು ಲಿಂಗಾನಾಂ ಯಥಾಶಾಸ್ತ್ರಂ ಯಥಾವಿಧಿ || ತ್ರಿಕೋಟ್ಯಾಚಾರ್ಯ ರೂಪೇಣ ಸ್ಥಾಪಿತಂ ತೇನ ತತ್ಕ್ಷಣೇ | (ಸಿ.ಶಿ.21/30-31)
ಶ್ರೀ ಸಿದ್ಧಾಂತ ಶಿಖಾಮಣಿಯಲ್ಲಿಯ ಈ ಶ್ಲೋಕಗಳ ಆಧಾರದಿಂದ ಶ್ರೀ ಜಗದ್ಗುರು ರೇಣುಕಾಚಾರ್ಯರು ವಿಭೀಷಣನ ಪ್ರಾರ್ಥನಾನುಸಾರವಾಗಿ ಏಕಕಾಲದಲ್ಲಿಯೇ ಮೂರುಕೋಟಿ ಗುರುರೂಪವನ್ನು ಧರಿಸಿ, ಮೂರುಕೋಟಿ ಶಿವಲಿಂಗಗಳನ್ನು ಸಂಸ್ಥಾಪಿಸಿದರೆಂದು ತಿಳಿದುಬರುತ್ತದೆ.
ಯುದ್ಧಭೂಮಿಯಲ್ಲಿ ಶ್ರೀರಾಮಚಂದ್ರನ ಬಾಣಗಳಿಂದ ಆಹತನಾಗಿ ತನ್ನ ಪ್ರಾಣಬಿಡುವ ಪೂರ್ವದಲ್ಲಿ ರಾವಣನು-
ನವಕಂ ಕೋಟಿಲಿಂಗಾನಾಂ ಪ್ರತಿಷ್ಠಾಪ್ಯಮಿಹ ಸ್ಥಲೇ | ಇತಿ ಸಂಕಲ್ಪಿತಂ ಪೂರ್ವ ಮಯಾತದವಶಿಷ್ಯತೇ || ಕೋಟಿಷಟ್ಕಂ ತು ಲಿಂಗಾನಾಂ ಮಯಾ ಸಾಧು ಪ್ರತಿಷ್ಠಿತಂ | ಕೋಟಿತ್ರಯಂ ತು ಲಿಂಗಾನಾಂ ಸ್ಥಾಪನೀಯಮತಸ್ತ್ವಯಾ || (ಸಿ.ಶಿ. 21/24-25)
ಹೇ ತಮ್ಮನಾದ ಪ್ರಿಯ ವಿಭೀಷಣನೇ! ಒಂಭತ್ತು ಕೋಟಿ ಶಿವಲಿಂಗಗಳನ್ನು ಪ್ರತಿಷ್ಠಾಪಿಸಬೇಕೆಂದು ನಾನು ಸಂಕಲ್ಪವನ್ನು ಮಾಡಿ ಆರು ಕೋಟಿ ಶಿವಲಿಂಗಗಳನ್ನು ಸಂಸ್ಥಾಪಿಸಿದ್ದೇನೆ. ಆದರೆ ನನ್ನ ಸಂಕಲ್ಪದ ಪ್ರಕಾರ ಇನ್ನೂ ಮೂರುಕೋಟಿ ಶಿವಲಿಂಗಗಳನ್ನು ಸ್ಥಾಪಿಸುವುದಿದೆ. ಅವುಗಳನ್ನು ನೀನು ಪ್ರತಿಷ್ಠಾಪಿಸು ಎಂಬುದಾಗಿ ಹೇಳಿ ಅಸುನೀಗಿದನು. ಅಣ್ಣನ ಸಂಕಲ್ಪವನ್ನು ಪೂರ್ಣ ಮಾಡುವುದು ಹೇಗೆಂದು ಬಹುದಿನಗಳಿಂದ ವಿಭೀಷಣನು ಚಿಂತಿಸುತ್ತಿರುವಾಗ, ಅವನ ಪುಣ್ಯವೇ ಮೂರ್ತಿರೂಪ ತಾಳಿ ಬಂದಂತೆ ಶ್ರೀ ಜಗದ್ಗುರು ರೇಣುಕ ಭಗವತ್ಪಾದರು ಲಂಕೆಗೆ ಬರುತ್ತಾರೆ. ಆಕಾಶಮಾರ್ಗವಾಗಿ ಬಂದ ಅವರ ಮಹಿಮೆಯನ್ನರಿತ ವಿಭೀಷಣನು ವಿಧಿವತ್ತಾಗಿ ಅವರ ಪಾದಪೂಜೆಯನ್ನು ಮಾಡಿ, ತನ್ನ ಅಣ್ಣನ ಸಂಕಲ್ಪವನ್ನು ನಿವೇದಿಸಿಕೊಂಡಾಗ, ಶ್ರೀ ಜಗದ್ಗುರು ರೇಣುಕ ಭಗವತ್ಪಾದರು ಅದೇ ಕ್ಷಣದಲ್ಲಿ ಮೂರುಕೋಟಿ ಆಚಾರ್ಯರ ರೂಪವನ್ನು ಧರಿಸಿ, ಶಿವಲಿಂಗಗಳನ್ನು ಏಕಕಾಲದಲ್ಲಿಯೇ ಸ್ಥಾಪಿಸಿ, ವಿಭೀಷಣನಿಗೆ ಅಭಯ, ಆಶೀರ್ವಾದಗಳನ್ನಿತ್ತು, ಕೆಲವು ದಿವಸ ಗುಪ್ತವಾಗಿಯೂ ಮತ್ತೆ ಕೆಲವು ದಿವಸ ಪ್ರಕಟವಾಗಿಯೂ ಭೂಮಂಡಲದಲ್ಲೆಲ್ಲ ಸಂಚರಿಸಿ ತಾವು ಅವತರಿಸಿದ ಕಾರ್ಯವು ಪೂರ್ಣವಾದೊಡನೆ ಪುನಃ ಕೊಲ್ಲಿಪಾಕಿ ಕ್ಷೇತ್ರಕ್ಕೆ ದಯಮಾಡಿಸಿ ಅದೇ ಸೋಮೇಶ್ವರ ಶಿವಲಿಂಗದಲ್ಲಿಯೇ ಲೀನವಾದರು.
ಶ್ರೀ ಜಗದ್ಗುರು ರೇಣುಕ ಭಗವತ್ಪಾದರು ಲಂಕೆಗೆ ಹೋಗಿ ಮೂರುಕೋಟಿ ಶಿವಲಿಂಗಗಳನ್ನು ಸ್ಥಾಪಿಸಿದ ವಿಷಯ ಕಾಲ್ಪನಿಕ ಪೌರಾಣಿಕ ಕಥೆಯಲ್ಲ. ಸಿಂಹಳದ ಜಾಫ್ನಾದಿಂದ 15 ಕಿ.ಮೀ. ದೂರವಿರುವ ಕಿರುಮಲಾಯ್ ಎಂಬ ಗ್ರಾಮದಲ್ಲಿ ಈಗಲೂ ಇರುವ ರೇಣುಕಾಶ್ರಮ ಮತ್ತು ರೇಣುಕವನ ಮಠಗಳು ಹಾಗೂ ಅಲ್ಲಿರುವ ನೂರಾರು ವೀರಶೈವರ ಮನೆತನಗಳು ಐತಿಹಾಸಿಕ ಘಟನೆಯ ಪ್ರತ್ಯಕ್ಷ ನಿದರ್ಶನಗಳಾಗಿವೆ.
ಬೆಂಗಳೂರಿನ ದಾರುಕಾಚಾರ್ಯ ಆಶ್ರಮದ ಶ್ರೀ ವೇ. ವೀರಯ್ಯ ಸ್ವಾಮಿ ಶಾಸ್ತ್ರಿಮಠ ಇವರು 1969ನೇ ಜೂನ್ ತಿಂಗಳಲ್ಲಿ ಸಿಂಹಳಕ್ಕೆ ಹೋಗಿ, ಅಲ್ಲಿಯ ರೇಣುಕಾಶ್ರಮ, ರೇಣುಕವನ ಹಾಗೂ ತಾನಕೇಸಂತುರೈಯಲ್ಲಿಯ ಶ್ರೀ ಗುರು ವೀರಭದ್ರ ದೇವಾಲಯಗಳ ಸಂದರ್ಶನವನ್ನು ಮಾಡಿ, ಅಲ್ಲಿಯ ಅನೇಕ ವೀರಶೈವರ ಜೊತೆ ಸಂದರ್ಶನ ಮಾಡಿ ಅಲ್ಲಿಂದ ಬರುವಾಗ ತಾಮ್ರಪಟದಲ್ಲಿ ಚಿತ್ರಿತವಾದ ಶ್ರೀ ಜಗದ್ಗುರು ರೇಣುಕಾಚಾರ್ಯರ ಲಿಂಗೋದ್ಭವ ಮೂರ್ತಿಯನ್ನು ತಂದಿರುವ ವಿಷಯಗಳು ನಿಜವಾಗಿಯೂ ಇತಿಹಾಸತಜ್ಞರ ಜಿಜ್ಞಾಸೆಯನ್ನು ಕೆರಳಿಸದೆ ಇರಲಾರವು.
ಶ್ರೀಮದ್ರೇವಣಸಿದ್ಧಸ್ಯ ಕುಲ್ಯಪಾಕಪುರೋತ್ತಮೇ | ಸೋಮೇಶಲಿಂಗಾಜ್ಜನನಮಾವಾಸಃ ಕದಲೀಪುರೇ ||
ಎಂಬ ಸ್ವಾಯಂಭುವ ಆಗಮದ ಪ್ರಮಾಣಾನುಸಾರವಾಗಿ ಶ್ರೀ ಜಗದ್ಗುರು ರೇಣುಕಾಚಾರ್ಯರೇ ಪುನಃ ಕಲಿಯುಗದ ಆರಂಭದಲ್ಲಿ ಶ್ರೀ ಜಗದ್ಗುರು ರೇವಣಸಿದ್ಧರೆಂಬ ಹೆಸರಿನಿಂದ ಅವತರಿಸಿ, 1400 ವರ್ಷಗಳವರೆಗೆ ವೀರಶೈವರ ತತ್ತ್ವೋಪದೇಶವನ್ನು ಮಾಡುತ್ತ ಅನಂತಲೀಲೆಗಳನ್ನು ಮಾಡಿದ್ದಾರೆ. ಇವರೇ ಶ್ರೀ ಜಗದ್ಗುರು ಆದಿಶಂಕರಾಚಾರ್ಯರಿಗೆ ಚಂದ್ರಮೌಳೀಶ್ವರಲಿಂಗ ಹಾಗೂ ರತ್ನಗರ್ಭ ಗಣಪತಿಯನ್ನು ದಯಪಾಲಿಸಿ ಅನುಗ್ರಹಿಸಿದ್ದಾರೆ. ಆದಿಶಂಕರರ ಚರಿತ್ರೆಯನ್ನು ಪ್ರತಿಪಾದಿಸುವ ಅನೇಕ ಗ್ರಂಥಗಳಲ್ಲಿ ಗುರುವಂಶ ಕಾವ್ಯವೂ ಒಂದಾಗಿದೆ. ಇದು ಶೃಂಗೇರಿ ಪೀಠದ ಆಸ್ಥಾನ ವಿದ್ವಾಂಸರಾದ ಪಂಡಿತ ಕಾಶೀ ಲಕ್ಷ್ಮಣ ಶಾಸ್ತ್ರಗಳಿಂದ ವಿರಚಿತವಾಗಿದೆ. ಇದು ವಾಣೀವಿಲಾಸ ಮುದ್ರಣಾಲಯ ಶ್ರೀರಂಗಂ ದಿಂದ ಮುದ್ರಿತವಾಗಿದೆ. ಈ ಪುಸ್ತಕದಲ್ಲಿ-
ಶ್ರೀಚಂದ್ರಮೌಳೀಶ್ವರಲಿಂಗಮಸ್ಮೈ ಸದ್ರತ್ನಗರ್ಭಂ ಗಣನಾಯಕಂ ಚ| ಸ ವಿಶ್ವರೂಪಾಯ ಸುಸಿದ್ಧದತ್ತಂ ದತ್ವಾನ್ಯಗಾದೀಚ್ಚಿರಮರ್ಚಯೇತಿ || (ಗುರುವಂಶ ಕಾವ್ಯ 3-33)
ಶ್ರೀ ಜಗದ್ಗುರು ಆದಿಶಂಕರಾಚಾರ್ಯರು ಶೃಂಗೇರಿಯಿಂದ ಕಾಂಚಿಗೆ ಬರುವ ಸಮಯದಲ್ಲಿ ತಮ್ಮ ಮೊದಲನೆಯ ಶಿಷ್ಯರಾದ ಶ್ರೀ ಸುರೇಶ್ವರಾಚಾರ್ಯರನ್ನು ಕರೆದು ಶ್ರೀ ರೇವಣಸಿದ್ಧ ಶಿವಯೋಗಿಗಳಿಂದ ಪ್ರಾಪ್ತವಾದ ಶ್ರೀ ಚಂದ್ರಮೌಳೀಶ್ವರಲಿಂಗ ಮತ್ತು ರತ್ಮಗರ್ಭ ಗಣಪತಿಯನ್ನು ಅವರಿಗೆ ಅರ್ಪಿಸಿ, ಅವುಗಳನ್ನು ಪೂಜಿಸುವ ಹೊಣೆಯನ್ನು ಹೊರಿಸಿದರು ಎಂಬ ವಿಷಯವು ಪ್ರತಿಪಾದಿಸಲ್ಪಟ್ಟಿದೆ. ಮೇಲೆ ಹೇಳಿದ ಈ ಶ್ಲೋಕದ ವ್ಯಾಖ್ಯಾನವನ್ನು ಬರೆಯುವಾಗ ಗ್ರಂಥಕಾರರೇ ಸುಸಿದ್ಧದತ್ತಂ ಸುಸಿದ್ಧೇನ ರೇವಣಸಿದ್ಧ ಮಹಾಯೋಗಿನಾ ದತ್ತಂ ಶ್ರೀ ಚಂದ್ರಮೌಳೀಶ್ವರಲಿಂಗಮ್ ಎಂದು ಇಲ್ಲಿ 'ಸುಸಿದ್ಧ' ಶಬ್ದದ ಅರ್ಥವನ್ನು ರೇವಣಸಿದ್ಧ ಮಹಾಯೋಗಿ ಎಂಬುದಾಗಿ ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ ಇಂದಿನವರೆಗೆ ಶ್ರೀ ಶೃಂಗೇರಿ ಪೀಠದಲ್ಲಿ ಪೂಜೆಗೊಳ್ಳುತ್ತಿರುವ ಶ್ರೀ ಚಂದ್ರಮೌಳೀಶ್ವರಲಿಂಗವು ವೀರಶೈವ ಶಿವಾಚಾರ್ಯರಾದ ಶ್ರೀ ರೇವಣಸಿದ್ಧರಿಂದ ಕೊಡಲ್ಪಟ್ಟದ್ದೆಂದು ತಿಳಿದುಬರುತ್ತದೆ.
ಜಗದ್ಗುರು ಮರುಳಾರಾಧ್ಯರು
ಶಿವನ ವಾಮದೇವಮುಖ ಸಂಜಾತರಾದ ಶ್ರೀ ಜಗದ್ಗುರು ಮರುಳಾರಾಧ್ಯರು ಶಿವನ ಅಪ್ಪಣೆಯ ಮೇರೆಗೆ ವೀರಶೈವ ಮತ ಸಂಸ್ಥಾಪನೆಗಾಗಿ ಕ್ಷಿಪ್ರಾನದಿಯ ತಟದಲ್ಲಿರುವ ವಟಕ್ಷೇತ್ರದ ಶ್ರೀ ಸಿದ್ಧೇಶ್ವರ ಲಿಂಗದಿಂದ ಪ್ರತಿಯೊಂದು ಯುಗದಲ್ಲೂ ಅವತರಿಸುತ್ತಾ
ಬಂದಿದ್ದಾರೆ. ಕೃತಯುಗದಲ್ಲಿ ದ್ವ್ಯಕ್ಷರ ಶಿವಾಚಾರ್ಯ, ತ್ರೇತಾಯುಗದಲ್ಲಿ ದ್ವಿವಕ್ತ್ರ ಶಿವಾಚಾರ್ಯ, ದ್ವಾಪರಯುಗದಲ್ಲಿ ಶ್ರೀದಾರುಕ ಶಿವಾಚಾರ್ಯ ಮತ್ತು ಕಲಿಯುಗದಲ್ಲಿ ಶ್ರೀ ಮರುಳಾರಾಧ್ಯ ಶಿವಾಚಾರ್ಯ ಎಂಬ ಹೆಸರುಗಳು ಇವರಿಗೆ ಇದ್ದುದಾಗಿ (ಸುಪ್ರಭೇದಾಗಮಾಂತರ್ಗತ ಪಂಚಾಚಾರ್ಯ ಪಂಚಮೋತ್ಪತ್ತಿ ಪ್ರಕರಣ, ಪುಟ-2) (ವೀರಶೈವ ಸದಾಚಾರ ಸಂಗ್ರಹ 1/37-39); (ಹಿಂದುತ್ವ, ಪುಟ-695) ಗ್ರಂಥಾಧಾರಗಳಿಂದ ತಿಳಿದುಬರುತ್ತದೆ.
ಈ ಪೀಠದ ದ್ವಾಪರಯುಗದ ಆಚಾರ್ಯರಾದ ಶ್ರೀ ಜಗದ್ಗುರು ದಾರುಕಾಚಾರ್ಯರು ನೈಮಿಷಾರಣ್ಯದಲ್ಲಿ ವಾಸಮಾಡುತ್ತಿರುವ ಶ್ರೀ ದಧೀಚಿ ಮಹಿರ್ಷಿಗಳಿಗೆ ಶಿವಾದ್ವೈತ ಸಿದ್ಧಾಂತವನ್ನು ಬೋಧಿಸಿ ಸಕಲ ಶಿಷ್ಯಸಮೇತರಾದ ಅವರನ್ನು ಕೃತಾರ್ಥರನ್ನಾಗಿ ಮಾಡಿದರು.
ತದ್ವನ್ಮರುಳಸಿದ್ಧಸ್ಯ ವಟಕ್ಷೇತ್ರೇ ಮಹತ್ತರೇ |
ಸಿದ್ಧೇಶಲಿಂಗಾಜ್ಜನನಂ ಸ್ಥಾನಮುಜ್ಜಯಿನೀಪುರೇ ||
ಸ್ವಾಯಂಭುವಾಗಮದ ಈ ವಚನಾನುಸಾರವಾಗಿ ಕಲಿಯುಗದ ಆಚಾರ್ಯರಾದ ಶ್ರೀ ಜಗದ್ಗುರು ಮರುಳಾರಾಧ್ಯರು, ಅಂದು ಮಾಳವ ದೇಶವೆಂದು ಪ್ರಸಿದ್ಧವಾದ ಇಂದಿನ ಮಧ್ಯಪ್ರದೇಶದ ಕ್ಷಿಪ್ರಾ ನದಿಯ ದಡದಲ್ಲಿರುವ ಮಹಾಕಾಲ ಉಜ್ಜಯಿನಿಯ ವಟಕ್ಷೇತ್ರದ ಸುಪ್ರಸಿದ್ಧವಾದ ಶ್ರೀ ಸಿದ್ಧೇಶ್ವರ ಮಹಾಲಿಂಗದಿಂದ ಪ್ರಾದುರ್ಭವಿಸಿ, ವೀರಶೈವ ಧರ್ಮೋಪದೇಶಕ್ಕಾಗಿ ಒಂದು ಪೀಠವನ್ನು ಸಂಸ್ಥಾಪಿಸಿದರು. ಅದುವೇ ಸದ್ಧರ್ಮ ಸಿಂಹಾಸನವೆಂಬ ಹೆಸರಿನಿಂದ ಪ್ರಸಿದ್ಧಿಯನ್ನು ಪಡೆಯಿತು.
ಕಾಲಕಾಲನಾದ ಮಹಾಕಾಲೇಶ್ವರ ಜ್ಯೋರ್ತಿಲಿಂಗದಿಂದಲೂ, ಭಕ್ತರ ಪಾಪವನ್ನು ಕ್ಷಿಪ್ರದಲ್ಲಿಯೇ ನಾಶಪಡಿಸುವ ಮಹಿಮೆಯಿಂದ ಕೂಡಿದ ಕ್ಷಿಪ್ರಾ ನದಿಯಿಂದಲೂ, ಸದ್ಧರ್ಮವನ್ನು ಉಪದೇಶಿಸುವ ಈ ಗುರುಪೀಠದಿಂದಲೂ ಪರಮ ಪವಿತ್ರವಾದ ಈ ಉಜ್ಜಯಿನಿಯಲ್ಲಿ ಶ್ರೌತಪಾಲ ಮತ್ತು ಭಾನುಮತಿ ಎಂಬ ರಾಜದಂಪತಿಗಳು ಪ್ರಜಾಪಾಲನೆಯನ್ನು ಮಾಡುತ್ತಿದ್ದರು.
ಒಂದು ಸಾರಿ ಶ್ರೀ ಶ್ರೌತಪಾಲ ರಾಜನು ಸ್ವರ್ಗದ ಅಭಿಲಾಷೆಯಿಂದ ಅಶ್ವಮೇಧ ಯಾಗವನ್ನು ಮಾಡಲುದ್ಯುಕ್ತನಾದಾಗ, ಯಜ್ಞದಲ್ಲಿ ಸಂಭವಿಸಬಹುದಾದ ಪ್ರಾಣಿಹಿಂಸೆ, ಮಾಂಸಭಕ್ಷಣ, ಸುರಾಪಾನ ಮತ್ತು ವ್ಯಭಿಚಾರಾದಿಗಳ ಬಗ್ಗೆ ರಾಜನಿಗೆ ಅರಿವನ್ನುಂಟುಮಾಡಿದ ಶ್ರೀ ಉಜ್ಜಯಿನೀ ಸದ್ಧರ್ಮ ಸಿಂಹಾಸನಾಧೀಶ್ವರರಾದ ಶ್ರೀ ಜಗದ್ಗುರು ಮರುಳಾರಾಧ್ಯರು ರಾಜದಂಪತಿಗಳಿಗೆ ಶಿವದೀಕ್ಷೆಯನ್ನು ಅನುಗ್ರಹಿಸಿ, ಸಾತ್ವಿಕ ಪೂಜಾವಿಧಾನವನ್ನು ತಿಳಿಸಿ, ಅವರಿಗೆ ವೀರಶೈವ ಧರ್ಮದ ಪ್ರಮುಖ ತತ್ತ್ವಗಳಾದ ಅಷ್ಟಾವರಣ, ಪಂಚಾಚಾರ ಮತ್ತು ಷಟ್ಸ್ಥಲಗಳ ಅರಿವನ್ನು ಮಾಡಿಕೊಟ್ಟರು.
ನಂತರ ಹಿಮಾಲಯದ ಗಂಗಾ-ಯಮುನಾ ನದಿಗಳ ಮಧ್ಯಭಾಗದಲ್ಲಿ ವಿರಾಜಿಸುವ ದಾರುಕವನಕ್ಕೆ ದಯಮಾಡಿಸಿ ಅಲ್ಲಿಯ ಋಷಿಮುನಿಗಳಿಗೆಲ್ಲ ಶಿವಾದ್ವೈತ ಸಿದ್ಧಾಂತವನ್ನು ಬೋಧಿಸಿ, ಅಲ್ಲಿಂದ ಕಾಶೀಕ್ಷೇತ್ರಕ್ಕೆ ದಯಮಾಡಿಸುತ್ತಾರೆ. ಕಾಶಿಯಲ್ಲಿ ಶ್ರೀ ಜಗದ್ಗುರು ವಿಶ್ವಾರಾಧ್ಯರನ್ನು ಸಂದರ್ಶಿಸಿ ಕಾಶಿಯಲ್ಲಿಯೇ 400 ವರ್ಷಗಳವರೆಗೆ ಯೋಗಸಮಾಧಿಯಲ್ಲಿ ಲೀನರಾಗುತ್ತಾರೆ. ಶಿವಯೋಗ ಸಮಾಧಿಯಿಂದ ಎಚ್ಚರಾದ ಬಳಿಕ, ಶ್ರೀ ಜಗದ್ಗುರು ವಿಶ್ವಾರಾಧ್ಯರ ಅಪ್ಪಣೆಯನ್ನು ಪಡೆದು ಶ್ರೀಶೈಲ ಮಲ್ಲಿಕಾರ್ಜುನ ದೇವಾಲಯಕ್ಕೆ ಹೋಗಿ ಅಲ್ಲಿಯ ಸೂರ್ಯಸಿಂಹಾಸನಾಧೀಶ್ವರ ಶ್ರೀ ಜಗದ್ಗುರು ಪಂಡಿತಾರಾಧ್ಯರೊಡನೆ ಧಾರ್ಮಿಕ ಪರ್ಯಲೋಚನೆಯನ್ನು ಮಾಡಿ ಅಲ್ಲಿಯ ಅನೇಕ ಋಷಿಮುನಿಗಳಿಗೆ ಶಿವಾದ್ವೈತ ತತ್ತ್ವವನ್ನು ಉಪದೇಶಿಸಿ ಕಾಶ್ಮೀರಕ್ಕೆ ದಯಮಾಡಿಸುತ್ತಾರೆ. ಅಲ್ಲಿ ಶ್ರೀ ಸರಸ್ವತೀ ಪೀಠವೆಂಬ ಮಠವನ್ನು ಸಂಸ್ಥಾಪಿಸಿ ಶಿವಭಕ್ತಿಯ ಪ್ರಚಾರವನ್ನು ಗೈಯುತ್ತಾರೆ. ಇವರ ಈ ಉಪದೇಶದ ಕಾರಣದಿಂದಾಗಿಯೇ ಕಾಶ್ಮೀರದಲ್ಲಿ ಶಿವಭಕ್ತಿಯು ವಿಶೇಷವಾಗಿ ಪ್ರಚಾರವಾಯಿತು.
ಮುಂದೆ ಶ್ರೀ ಜಗದ್ಗುರು ಮರುಳಾರಾಧ್ಯರು ತಮ್ಮ ಅವತಾರದ ಸಮಾಪ್ತಿಯ ಸಮಯವು ಸನ್ನಿಹಿತವಾಗಿರುವುದನ್ನು ಅರಿತು, ಶ್ರೀ ಕೇದಾರ ಕ್ಷೇತ್ರಕ್ಕೆ ದಯಮಾಡಿಸಿ, ಅಲ್ಲಿಯ ಶ್ರೀ ವೈರಾಗ್ಯ ಸಿಂಹಾಸನಾಧೀಶ್ವರರಾದ ಶ್ರೀ ಜಗದ್ಗುರು ಏಕೋರಾಮಾರಾಧ್ಯರನ್ನು ಸಂದರ್ಶಿಸಿಸುತ್ತಾರೆ. ನಂತರ ಈರ್ವರೂ ಸ್ನಾನಕ್ಕಾಗಿ ಗೌರೀಕುಂಡಕ್ಕೆ ಬಂದು, ಆ ಕುಂಡದಲ್ಲಿ ಮಿಂದು ಹೊರಬರುವಷ್ಟರಲ್ಲಿ ದಿವ್ಯಶಕ್ತಿಯೊಂದು ಆ ಕುಂಡದಿಂದ ಉದ್ಭವಿಸಿತು. ಆಗ ಉಭಯರೂ ಆ ದಿವ್ಯ ವಟುವನ್ನು ನೋಡಿ ಪರಮಾನಂದಗೊಂಡರು. ಆಗ ಏಕೋರಾಮರು ಶ್ರೀ ನಂದೀಶ್ವರನೇ ಈ ರೂಪದಿಂದ ಅವತರಿಸಿರುವನು. ಈ ವಟುವಿಗೆ ಮುಕ್ತಿಮುನಿ ಎಂದು ನಾಮಕರಣವನ್ನು ಮಾಡುತ್ತೇವೆ. ಈತನೇ ಉಜ್ಜಯಿನಿ ಸದ್ಧರ್ಮ ಪೀಠಕ್ಕೆ ಉತ್ತರಾಧಿಕಾರಿಯಾಗಲಿ ಎಂಬುದಾಗಿ ಅಪ್ಪಣೆ ಕೊಡಿಸಿದರು.
ನಂತರ ಎಲ್ಲರೂ ಉಜ್ಜಯಿನಿ ಕ್ಷೇತ್ರಕ್ಕೆ ದಯಮಾಡಿಸಿ, ಅಕ್ಷಯ ತೃತೀಯ ಶುಭಮುಹೂರ್ತದಲ್ಲಿ ಶ್ರೀ ಮುಕ್ತಿಮುನಿಗಳಿಗೆ ಪಟ್ಟಾಧಿಕಾರವನ್ನು ವಹಿಸಿ, ಸ್ರೀ ಜಗದ್ಗುರು ಮರುಳಾರಾಧ್ಯರು ಪುನಃ ವಟಕ್ಷೇತ್ರದ ಶ್ರೀ ಸಿದ್ಧೇಶ್ವರ ಲಿಂಗದಲ್ಲಿಯೇ ಲೀನರಾದರು.
ಶ್ರೀ ಜಗದ್ಗುರು ಮುಕ್ತಿಮುನಿಗಳು ಪಟ್ಟಾಧಿಕಾರವನ್ನು ಹೊಂದಿ 300 ವರ್ಷಗಳ ಪರ್ಯಂತ ಸದ್ಧರ್ಮ ಪೀಠವನ್ನು ಅಲಂಕರಿಸಿ, ವೀರಶೈವ ಮತವನ್ನು ಸಾಕಷ್ಟು ಪ್ರಚಾರಗೊಳಿಸಿ, ತಮ್ಮ ಅಂತಿಮ ಸಮಯದಲ್ಲಿ ಶ್ರೀ ಜಗದ್ಗುರು ಸಿದ್ಧಮುನಿಗಳಿಗೆ ಪೀಠಾಧಿಕಾರವನ್ನು ಒಪ್ಪಿಸಿ ಲಿಂಗೈಕ್ಯರಾದರು.
ಹೀಗೆ ಈ ಪೀಠ ಪರಂಪರೆಯಲ್ಲಿ ಶ್ರೀ ಜಗದ್ಗುರು ಸಿದ್ಧಮುನಿಗಳು 200 ವರ್ಷ, ಶ್ರೀ ಜಗದ್ಗುರು ಶಿವಮುನೀಂದ್ರ ಸ್ವಾಮಿಗಳು 125 ವರ್ಷ, ಶ್ರೀ ಜಗದ್ಗುರು ಶಾಂತಮುನಿಗಳು 70 ವರ್ಷ, ಶ್ರೀ ಜಗದ್ಗುರು ಭವಭೂತಿ ಮುನಿಗಳು 100 ವರ್ಷ ಸಿಂಹಾಸನಾರೂಢರಾಗಿದ್ದರು. ಶ್ರೀ ಜಗದ್ಗುರು ಭವಭೂತಿ ಮುನಿಗಳು ಮಹಾತಪಸ್ವಿಗಳೂ, ಘನ ವಿದ್ವಾಂಸರೂ ಆಗಿದ್ದರು. ಉಜ್ಜಯಿನಿಯ ಭೋಜರಾಜ ಹಾಗೂ ಅವನ ಆಸ್ಥಾನ ಕವಿಗಳಾದ ಕಾಳಿದಾಸಾದಿಗಳಿಂದ ಇವರು ಮನ್ನಣೆಯನ್ನು ಪಡೆದವರಾಗಿದ್ದರು. ತಮ್ಮ ತರುವಾಯ ಶ್ರೀ ಜಗದ್ಗುರು ಇಮ್ಮಡಿ ಮುಕ್ತಿಮುನಿಗಳಿಗೆ ಪೀಠಾಧಿಕಾರವನ್ನು ಕೊಟ್ಟು ಲಿಂಗೈಕ್ಯರಾದರು.
ಇದೇ ಪ್ರಕಾರ ಶ್ರೀ ಜಗದ್ಗುರು ಇಮ್ಮಡಿ ಮುಕ್ತಿಮುನಿಗಳು 50 ವರ್ಷ, ಶ್ರೀಜಗದ್ಗುರು ಶಕ್ತಿಮುನಿಗಳು 200ವರ್ಷ. ಶ್ರೀ ಜಗದ್ಗುರು ಇಮ್ಮಡಿ ಸಿದ್ಧಮುನಿಗಳು 40 ವರ್ಷ, ಶ್ರೀ ಜಗದ್ಗುರು ಇಮ್ಮಡಿ ಶಾಂತಮುನಿಗಳು 90 ವರ್ಷ, ಶ್ರೀ ಜಗದ್ಗುರು ಮುಮ್ಮಡಿ ಸಿದ್ಧಮುನಿಗಳು 55 ವರ್ಷ, ಶ್ರೀ ಜಗದ್ಗುರು ಸಾಂಬಮುನಿಗಳು 100 ವರ್ಷ, ಶ್ರೀ ಜಗದ್ಗುರು ಇಮ್ಮಡಿ ಶಿವಮುನಿಗಳು 30 ವರ್ಷ ಮತ್ತು ಶ್ರೀ ಜಗದ್ಗುರು ಈಶಾನ್ಯಮುನಿಗಳು 75 ವರ್ಷ ಧರ್ಮ ಸಿಂಹಾಸನಾಸೀನರಾಗಿ ಮಧ್ಯಪ್ರದೇಶದಲ್ಲಿ ವೀರಶೈವ ಧರ್ಮವನ್ನು ಬಹಳಷ್ಟು ಪ್ರಚಾರಗೊಳಿಸಿದರು.
ಇವರ ತರುವಾಯ ಶ್ರೀ ಜಗದ್ಗುರು ಶಂಭುಮುನಿಗಳು ಈ ಪೀಠ ಪರಂಪರೆಯಲ್ಲಿ 15ನೆಯ ಪೀಠಾಧಿಪತಿಗಳಾಗಿ ಅಧಿಕಾರವನ್ನು ಸ್ವೀಕರಿಸಿದ್ದಾರೆ. ಇಷ್ಟು ಹೊತ್ತಿಗೆ ಜೈನಧರ್ಮವು ಬಹಳಷ್ಟು ಪ್ರಚಾರದಲ್ಲಿತ್ತು. ಆಗ ಜೈನಧರ್ಮದವನಾದ ಶ್ರೀ ವೀರಸೇನ ರಾಜನು ವೀರಶೈವ ಧರ್ಮವನ್ನು ನಾಶಗೊಳಿಸಲು ಪಣತೊಟ್ಟವನಾಗಿದ್ದನು. ಶ್ರೀ ಜಗದ್ಗುರು ಶಂಭುಮುನಿಗಳು ಶಠೇ ಶಾಠ್ಯಂ ಸಮಾಚರೇತ್ ಎಂಬ ನೀತಿಗನುಸಾರವಾಗಿ, ರಾಜನೊಡನೆ ಪ್ರತಿಭಟಿಸಲು ಸೈನ್ಯವನ್ನು ಸಂಗ್ರಹಿಸಿ ಕೊನೆಗೆ ವೀರಸೇನ ರಾಜನೊಡನೆ ಹೋರಾಡಿ ವಿಜಯವನ್ನು ಸಂಪಾದಿಸಿದರು.
ಈ ಯುದ್ಧದಲ್ಲಿ ವಿಜಯವನ್ನು ಸಂಪಾದಿಸಿದರೂ ಶ್ರೀ ಜಗದ್ಗುರು ಶಂಭುಮುನಿಗಳಿಗೆ ಸಮಾಧಾನವಾಗಲಿಲ್ಲ. ಆಗ ಅವರು ಈ ತರಹದ ಕಲಹವೇ ಬೇಡವೆಂದು ಭಾವಿಸಿ, ಉಜ್ಜಯಿನಿಯನ್ನು ಬಿಟ್ಟು ಅಡವಿಯಲ್ಲಿ ಪ್ರಶಾಂತ ಸ್ಥಳದಲ್ಲಿ ಪರ್ಣಕುಟೀರವನ್ನು ನಿರ್ಮಿಸಿಕೊಂಡು 70 ವರ್ಷಗಳವರೆಗೆ ಧರ್ಮಕಾರ್ಯವನ್ನು ಮಾಡಿ ಕೊನೆಗೆ ತಮ್ಮ ಪ್ರೀತಿಯ ಶಿಷ್ಯರಾದ ಶ್ರೀ ಮರುಳಸಿದ್ಧರಿಗೆ ಜಗದ್ಗುರು ಪಟ್ಟಾಧಿಕಾರವನ್ನು ವಹಿಸಿ ಲಿಂಗೈಕ್ಯರಾದರು.
ಶ್ರೀ ಸದ್ಧರ್ಮ ಪೀಠದ ಸ್ಥಳಾಂತರ :
ಶ್ರೀ ಜಗದ್ಗುರು ಶಂಭುಮುನಿಗಳು ಲಿಂಗೈಕ್ಯರಾದ ನಂತರ ಶ್ರೀ ಜಗದ್ಗುರು ಮರುಳಸಿದ್ಧರು ಮುಸ್ಲಿಂರಾಜರ ಉಪದ್ರವಕ್ಕಾಗಿ ಮಧ್ಯಪ್ರದೇಶದ ಉಜ್ಜಯಿನಿಯ ಪರಿಸರವನ್ನು ತ್ಯಾಗಮಾಡಿ ಶಿಷ್ಯ ಸಮೇತರಾಗಿ ಮಹಾರಾಷ್ಟ್ರದ ವಿಭಿನ್ನ ಸ್ಥಾನಗಳಲ್ಲಿ ಸಂಚರಿಸುತ್ತ ಅಲ್ಲಲ್ಲಿಯ ಭಕ್ತರ ಸಹಯೋಗ, ಸಹಕಾರಗಳಿಂದ ಮಠಗಳನ್ನು ನಿರ್ಮಿಸಿ ಅಲ್ಲಲ್ಲಿ ಒಬ್ಬೊಬ್ಬ ಶಿಷ್ಯರನ್ನು ಇರಿಸುತ್ತ, ಪರಳಿ ಮುಂತಾದ ಜ್ಯೋತಿರ್ಲಿಂಗಗಳ ಸ್ಥಾನವನ್ನು ಸಂದರ್ಶಿಸಿ ಕೊಲ್ಹಾಪುರ ಸಮೀಪದ ಸಿದ್ಧಗಿರಿ ಎಂಬ ಸ್ಥಾನಕ್ಕೆ ದಯಮಾಡಿಸುತ್ತಾರೆ. ಶ್ರೀ ಜಗದ್ಗುರು ಮರುಳಸಿದ್ಧರು ಹೀಗೆ ಮಹಾರಾಷ್ಟ್ರದ ಅನೇಕ ಭಾಗಗಳಲ್ಲಿ ಸಂಚರಿಸಿದುದರಿಂದ ಮಹಾರಾಷ್ಟ್ರದಲ್ಲಿ ಉಜ್ಜಯಿನೀ ಶಾಖಾಮಠಗಳು ಅಧಿಕವಾಗಿರುತ್ತವೆ.
ಶ್ರೀ ಜಗದ್ಗುರು ಮರುಳಸಿದ್ಧರು ಸಿದ್ಧಗಿರಿಗೆ ಆಗಮಿಸಿದಾಗ ಅಲ್ಲಿ ಶ್ರೀ ಜಗದ್ಗುರು ರೇವಣಸಿದ್ಧರ ಸಂದರ್ಶನವಾಗುತ್ತದೆ. ಇಂದಿನ ಈ ಸಿದ್ಧಗಿರಿಮಠವು ರಂಭಾಪುರಿ ಶಾಖಾಮಠವಾಗಿರುತ್ತದೆ. ಶ್ರೀ ಜಗದ್ಗುರು ಮರುಳಸಿದ್ಧರ ಮಹಾಕಾಲ ಉಜ್ಜಯಿನಿಯ ಸದ್ಧರ್ಮ ಪೀಠಕ್ಕೆ ಬಂದೊದಗಿದ ವಿಪತ್ತನ್ನರಿತ ಶ್ರೀ ಜಗದ್ಗುರು ರೇವಣಸಿದ್ಧರು ಶ್ರೀ ಜಗದ್ಗುರು ಮರುಳಸಿದ್ಧರಿಗೆ ಸಾಂತ್ವನವನ್ನು ಹೇಳಿ ಕರ್ನಾಟಕ ಪ್ರದೇಶದ ಕೊಟ್ಟೂರು ಬಳಿಯಲ್ಲಿಯೇ ಉಜ್ಜಯಿನಿ ಎಂಬ ಹೊಸ ಪಟ್ಟಣವನ್ನು ನಿರ್ಮಣಗೊಳಿಸಿ ಅಲ್ಲಿಯೇ ಸದ್ಧರ್ಮ ಪೀಠವನ್ನು ಪುನಃ ಸ್ಥಾಪಿಸಲು ಸಲಹೆಯನ್ನು ಕೊಡುತ್ತಾರೆ.
ಶ್ರೀ ಜಗದ್ಗುರು ರೇವಣಸಿದ್ಧರ ಆದೇಶದಂತೆ ಶ್ರೀ ಜಗದ್ಗುರು ಮರುಳಸಿದ್ಧರು ಕೊಲ್ಹಾಪುರದ ಶ್ರೀ ಮಾಯಾದೇವಿಯ ಗರ್ವಪಹರಣವನ್ನು ಮಾಡಿ ಅಪಾರ ಕೀರ್ತಿಯನ್ನು ಸಂಪಾದಿಸಿದರು. ಅಲ್ಲದೇ ಅಲ್ಲಿಯ ಕರಟಾಸುರನಿಗೆ ಮತ್ತು ಅವನ ಪರಿವಾರದವರಿಗೆಲ್ಲ ಶಿವದೀಕ್ಷೆಯನ್ನು ಮಾಡಿ ಅನುಗ್ರಹಿಸಿದರು. ನಂತರ ಓರಂಗಲ್ಲಿಗೆ ಹೋಗಿ ಅಲ್ಲಿಯ ಕಾಕತೀಯ ರಾಜವಂಶದ ಗಣಪತಿ ರಾಜನನ್ನು ಮತ್ತು ಹೊಸ ಕಲ್ಯಾಣದ ಶ್ರೀ ಸೋಮೇಶ್ವರ ರಾಜನನ್ನು ಕಂಡರು. ಅವರ ಸಹಾಯದಿಂದ ಶ್ರೀ ಜಕ್ಕಣಚಾರ್ಯರ ಶಿಲ್ಪಸೇವೆಯಿಂದ ಹೊಸದಾಗಿ ಸ್ಥಾಪಿಸಲ್ಪಟ್ಟ ಉಜ್ಜಯಿನಿಯಲ್ಲಿ ಸದ್ಧರ್ಮ ಪೀಠವನ್ನು ನಿರ್ಮಾಣಗೊಳಿಸಿ, ಆ ಪೀಠದಲ್ಲಿ ಮೂಲ ಮರುಳಾರಾಧ್ಯರ ತರುವಾಯದ ಹದಿನಾಲ್ಕು ಜನ ಗುರುಪರಂಪರೆಯ ಮೂರ್ತಿಗಳನ್ನು ಮತ್ತು ಮೂಲ ಮರುಳಾರಾಧ್ಯರ ಒಂದು ಲಿಂಗವನ್ನೂ ಸಂಸ್ಥಾಪಿಸಿದರು. ಈ ಪೀಠದಲ್ಲಿಯ ಒಳಭಾಗವು ಅನೇಕ ಕಲಾಕೃತಿಯಿಂದ ಕೂಡಿಕೊಂಡಿದೆ. ಅಂತೆಯೇ ಹಂಪೆಯ ಗುಡಿ ಹೊರಗೆ ನೋಡಬೇಕು, ಉಜ್ಜಯಿನಿಯ ಮಠದ ಒಳಗೆ ನೋಡಬೇಕು ಎಂಬುದು ಇಂದಿಗೂ ಗಾದೆಯ ಮಾತಿನಂತಿದೆ.
ಹೀಗೆ ವಿನೂತನವಾಗಿ ನಿರ್ಮಣಗೊಂಡ ಕರ್ಣಟಕದ ಉಜ್ಜಯಿನೀ ಸದ್ಧರ್ಮ ಸಿಂಹಾಸನಕ್ಕೆ ಶ್ರೀ ಜಗದ್ಗುರು ಮರುಳಸಿದ್ಧರನ್ನು ಪೀಠಾಧ್ಯಕ್ಷರನ್ನಾಗಿ ಮಾಡಲಾಯಿತು ಈ ಮಂಗಲಕಾರ್ಯಕ್ಕೆ ಶ್ರೀ ಜಗದ್ಗುರು ರೇವಣಸಿದ್ಧರು, ಶ್ರೀ ಜಗದ್ಗುರು ಪಂಡಿತಾರಾಧ್ಯರು ದಯಮಾಡಿಸಿದರು ಹಾಗೂ ರಾಷ್ಟ್ರಕೂಟ, ಓರಂಗಲ್ ಪುರಿಗಳ ಭೂಪಾಲರೂ ಆಗಮಿಸಿ ತಮ್ಮ ಭಕ್ತಿಕಾಣಿಕೆಯನ್ನು ಸಮರ್ಪಿಸಿದರಲ್ಲದೇ ಭುವನೈಕಮಲ್ಲ ಶ್ರೀ ಸೋಮೇಶ್ವರನು ಸಮ್ಮಾನಪೂರ್ವಕವಾಗಿ 120 ಮಠಗಳನ್ನು ತನ್ನ ರಾಜ್ಯದಲ್ಲಿಯೇ ಉಂಬಳಿಯಾಗಿ ಕೊಟ್ಟನು.
ಈ ರೀತಿಯಾಗಿ ವೈಭವದ ಅಧಿಕಾರವನ್ನು ಹೊಂದಿದ ನಂತರ ಭಕ್ತವೃಂದದ ಮತ್ತು ಅನೇಕ ಮಹಾರಾಜರ ಬಯಕೆಗಳನ್ನು ಈಡೇರಿಸುತ್ತ ಓರಂಗಲ್ಲ, ಹಂಪೆ, ಕೂಡಲಸಂಗಮ, ಕಪ್ಪತಗುಡ್ಡ, ಹರಪುರಿ ಮುಂತಾದ ಸ್ಥಳಗಳಲ್ಲಿ ಸಂಚರಿಸಿ ವೀರಶೈವ ಧರ್ಮೋ ಪದೇಶವನ್ನು ಮಾಡುತ್ತಿರುವಾಗ ಬಹಳಷ್ಟು ಜೈನ ಧರ್ಮಿಯರು ಇವರಿಂದ ಲಿಂಗದೀಕ್ಷೆಯನ್ನು ಪಡೆದರು. ಶ್ರೀ ಜಗದ್ಗುರು ಮರುಳಸಿದ್ಧರು 170 ವರ್ಷಗಳವರೆಗೆ ಉಜ್ಜಯಿನಿಯ ಸದ್ಧರ್ಮ ಸಿಂಹಾಸನಾಧಿಪತಿಗಳಾಗಿದ್ದು ಕೊನೆಗೆ ಶ್ರೀ ಸಿದ್ಧಪಂಡಿತರಿಗೆ ಪಟ್ಟವನ್ನು ವಹಿಸಿ ತಾವು ಲಿಂಗೈಕ್ಯರಾದರು.
Saturday, 24 December 2022
ಸದ್ಗುರುವಿನ ಶ್ರೀ ಪಾದ
Sunday, 11 December 2022
ವೇದ ಹಾಗು ಯಶಸ್ಸಿನ ಗುಟ್ಟು.
ವೇದಗಳಲ್ಲಿದೆ ಯಶಸ್ಸಿನ ಗುಟ್ಟು.
ಈ 12 ಸೂತ್ರಗಳನ್ನು ಅಳವಡಿಸಿಕೊಳ್ಳಿ..
ವೇದಗಳಲ್ಲಿ ಯಶಸ್ಸಿಗೆ 12 ಸೂತ್ರಗಳನ್ನು ನೀಡಲಾಗಿದೆ. ಯಾವುದೇ ಗುರಿ ಸಾಧನೆಗೆ ಈ 12 ಸೂತ್ರಗಳ ಪಾಲನೆ ಅತ್ಯಗತ್ಯ ಎಂಬುದನ್ನು ವೇದ ಪ್ರತಿಪಾದಿಸುತ್ತದೆ. ಇವುಗಳನ್ನು ಅನುಸರಿಸಿ ಗೆಲುವು ನಿಮ್ಮದೇ ಆಗಿರುತ್ತೆ
ದೀಕ್ಷಾ, ಅಲ್ಲಿ ನೀವು ಆಯ್ಕೆ ಮಾಡಿದ ಕ್ರಿಯೆಗೆ ಸಾಧ್ಯವಿರುವ ಎಲ್ಲ ವಿಧಾನಗಳಿಂದ ನಿಮ್ಮನ್ನು ಒಪ್ಪಿಸಿಕೊಳ್ಳುತ್ತೀರಿ.
ಅಭ್ಯಾಸ(Practice)
ಅಭ್ಯಾಸ- ಯಾವುದೇ ಕೆಲಸದಲ್ಲಿ ಜಯ ಬೇಕೆಂದರೆ ಅದಕ್ಕಾಗಿ ನಿರಂತರ ಅಭ್ಯಾಸ ಅಗತ್ಯ. ಕಲಿಯದೆ ಯಾವೊಂದೂ ಒಲಿಯುವುದಿಲ್ಲ. ನಿಗದಿತ ವಿಧಾನಗಳ ನಿಯಮಿತ ಮತ್ತು ನಿರಂತರ ಅಭ್ಯಾಸದ ಮೂಲಕ ನೀವು ಗುರಿಗೆ ಬೇಕಾದ ಕೌಶಲಗಳನ್ನು ಹಾಗೂ ವಿದ್ಯೆಯನ್ನು ಕರಗತಗೊಳಿಸಿಕೊಳ್ಳುತ್ತೀರಿ.
ಶ್ರದ್ಧೆ
ಶ್ರದ್ಧೆ- ನಿಮ್ಮ ವಿಧಾನಗಳು, ನಂಬಿಕೆಗಳು ಮತ್ತು ಗುರಿಗಳಲ್ಲಿ ನಂಬಿಕೆ ಮತ್ತು ದೃಢತೆಯನ್ನು ಹೊಂದಿರಿ. ಸಾಕಷ್ಟು ಮನಸ್ಸನ್ನು ಚಂಚಲಗೊಳಿಸುವ ವಿಷಯಗಳು ಅಡ್ಡ ಬರಬಹುದು. ಆದರೆ, ಗೆಲ್ಲುವ ಛಲ, ಕಲಿಯುವ ಶ್ರದ್ಧೆ ಇದ್ದರೆ ನಿಮ್ಮನ್ನು ಗುರಿಯಿಂದ ವಿಚಲಿತಗೊಳಿಸಲು ಯಾವುದೇ ಆಮಿಶದಿಂದಲೂ ಸಾಧ್ಯವಿಲ್ಲ.
ವೀರ್ಯಾ
ವೀರತ್ವ- ಅಡೆತಡೆಗಳನ್ನು ಜಯಿಸಲು ಮತ್ತು ಯಶಸ್ವಿಯಾಗಲು ಧೈರ್ಯ ಮತ್ತು ಆತ್ಮವಿಶ್ವಾಸ ಬೇಕು. ಧೈರ್ಯವಿಲ್ಲದೆ ಹೋದರೆ, ಮುನ್ನುಗ್ಗದೆ ಹೋದರೆ ನಿಮ್ಮಲ್ಲಿ ಎಷ್ಟೇ ಪ್ರತಿಭೆ, ಕೌಶಲಗಳಿದ್ದರೂ ಉಪಯೋಗಕ್ಕೆ ಬರುವುದಿಲ್ಲ.
ಸ್ವಾಧ್ಯಾಯ
ಸ್ವಾಧ್ಯಾಯ, ನಿಮ್ಮ ಅಭ್ಯಾಸಕ್ಕೆ ಪ್ರಮುಖವಾದ ಅಂಶ ಜ್ಞಾನ ಸಾಧನೆಗೆ ಬೇಕಾದ ಜ್ಞಾನವನ್ನು ಸ್ವಯಂ ಪ್ರಯತ್ನದಿಂದ ಕಲಿಯಿರಿ.
ಸ್ಮೃತಿ
ಸ್ಮೃತಿ- ಇತರರಿಂದ, ಹಾಗು ನಿಮ್ಮ ಗುರುಗಳಿಂದ ಮತ್ತು ನಿಮ್ಮ ಮತ್ತು ಇತರರ ಹಿಂದಿನ ವೈಫಲ್ಯಗಳಿಂದ ಕಲಿತ ಪಾಠವನ್ನು ನೆನಪಿಸಿಕೊಳ್ಳುವುದು ಮತ್ತು ಕಲಿಯುವುದು ನಿರಂತರ ನಡೆಯುತ್ತಲೇ ಇರಬೇಕು. ಕಲಿತದ್ದನ್ನು ಸ್ಮೃತಿಯಲ್ಲಿ ಇರಿಸಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.
ಪ್ರಜ್ಞಾ
ಪ್ರಜ್ಞೆ- ಸಮಸ್ಯೆಗಳನ್ನು ಮುಂಗಾಣುವ ಮತ್ತು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಬುದ್ಧಿವಂತಿಕೆ, ಪ್ರಜ್ಞೆ ಇರಬೇಕು.
ಸಮಾಧಿ
ಏಕಾಗ್ರತೆ ಮತ್ತು ನೀವು ಏನು ಮಾಡುತ್ತಿದ್ದೀರಿ ಮತ್ತು ನೀವು ಏನನ್ನು ಬಯಸುತ್ತೀರಿ ಎಂಬುದರ ಸಂಪೂರ್ಣ ಗ್ರಹಿಕೆ ಇರಬೇಕು. ಕಲಿಯುವಾಗ ಸಮಾಧಿ ಸ್ಥಿತಿ ಎಂಬಷ್ಟು ಏಕಾಗ್ರತೆ ಇರಬೇಕು.
ವೈರಾಗ್ಯ
ನಿಮ್ಮ ಭಾವೋದ್ರೇಕ ಮತ್ತು ಭಾವನೆಗಳನ್ನು ನಿರ್ಲಿಪ್ತತೆಯಿಂದ ನಿಯಂತ್ರಣದಲ್ಲಿಟ್ಟುಕೊಳ್ಳುವ ಸ್ವಭಾವವು ಜಯದ ಹಾದಿಯಲ್ಲಿ ಪ್ರಮುಖವಾಗಿರುತ್ತದೆ.
ತಪಃ
ಯಾವುದೇ ಒಂದು ಗುರಿ ಸಾಧನೆ ಎಂದರೆ ತಪಸ್ಸೇ ಸರಿ. ಮನಸ್ಸು, ದೇಹ ಮತ್ತು ಮಾತಿನ ತಪಸ್ಸು ನಿರಂತರ ನಡೆಯುತ್ತಲೇ ಇರಬೇಕು.
ಸಮತ್ವಮ್
ಯಶಸ್ಸು ಮತ್ತು ವೈಫಲ್ಯ ಎರಡರಲ್ಲೂ ಸಮಾನತೆ ಕಾಣುವ ಮನಸ್ಥಿತಿ ರೂಢಿಸಿಕೊಳ್ಳಬೇಕು. ಏಕೆಂದರೆ, ಸೋಲಾದರೂ ಕಲಿತ ವಿದ್ಯೆ ಎಲ್ಲಿಯೂ ಹೋಗುವುದಿಲ್ಲ
Sunday, 16 August 2020
ವೀರಶೈವ ಚತುರ್ವಿಂಶತಿ ಪುರುಷರು - 3
ಜಗದ್ಗುರು ರೇವಣಾರಾಧ್ಯ
(ರೇವಣಸಿದ್ಧ)ರು - ಶ್ರೀ ಕೊಲನುಪಾಕದ (ಕೊಲ್ಲಿಪಾಕಿ) ಶ್ರೀ ಸೋಮೇಶ್ವರ ಶಿವಲಿಂಗದಿಂದ ಆವಿರ್ಭವಿಸಿದ ಶ್ರೀ ಜಗದ್ಗುರು ರೇವಣಾರಾಧ್ಯರು ಪ್ರತಿಯೊಂದು ಯುಗದಲ್ಲೂ ಅವತರಿಸುತ್ತಾ ಬಂದಿದ್ದಾರೆ. ಕೃತಯುಗದಲ್ಲಿ ಇವರಿಗೆ ಶ್ರೀ ಏಕಾಕ್ಷರ ಶಿವಾಚಾರ್ಯ, ತ್ರೇತಾಯುಗದಲ್ಲಿ ಶ್ರೀ ಏಕವಕ್ತ್ರ ಶಿವಾಚಾರ್ಯ, ದ್ವಾಪರಯುಗದಲ್ಲಿ ಶ್ರೀ ರೇಣುಕ ಶಿವಾಚಾರ್ಯ ಮತ್ತು ಕಲಿಯುಗದಲ್ಲಿ ಶ್ರೀ ರೇವಣಾರಾಧ್ಯ ಅಥವಾ ಶ್ರೀ ರೇವಣಸಿದ್ಧ ಎಂಬ ಹೆಸರುಗಳಿದ್ದವೆಂದು 'ಸುಪ್ರಭೇದಾಗಮಾಂತರ್ಗತ ಪಂಚಾಚಾರ್ಯ ಪಂಚಮೋತ್ಪತ್ತಿ ಪ್ರಕರಣ'ದ ಪುಟ-2ರಲ್ಲಿ ಮತ್ತು 'ವೀರಶೈವ ಸದಾಚಾರ ಸಂಗ್ರಹ'ದ ಪ್ರಥಮ ಪ್ರಕರಣದಲ್ಲಿ ಪ್ರತಿಪಾದಿಸಲ್ಪಟ್ಟಿದೆ.
ಅಥ ತ್ರಿಲಿಂಗವಿಷಯೇ ಕುಲ್ಯಪಾಕಾಭಿದೇ ಸ್ಥಲೇ | ಸೋಮೇಶ್ವರ ಮಹಾಲಿಂಗಾತ್ ಪ್ರಾದುರಾಸೀತ್ ಸ ರೇಣುಕಃ || (ಸಿ.ಶಿ. 4-1)
ಸಿದ್ಧಾಂತ ಶಿಖಾಮಣಿಯ ಈ ಉಕ್ತಿಗನುಸಾರವಾಗಿ ದ್ವಾಪರಯುಗದ ಶ್ರೀ ಜಗದ್ಗುರು ರೇಣುಕ ಶಿವಾಚಾರ್ಯ ಭಗವತ್ಪಾದರು ಕೊಲ್ಲಿಪಾಕಿ ಕ್ಷೇತ್ರದ ಶ್ರೀ ಸೋಮೇಶ್ವರ ಮಹಾಲಿಂಗದಿಂದ ಪ್ರಾದುರ್ಭವಿಸಿ, ಮಲಯ ಪರ್ವತದಲ್ಲಿ ವಾಸಿಸುತ್ತಿದ್ದ ಮಹಾಮಹಿಮರಾದ ಶ್ರೀ ಅಗಸ್ತ್ಯ ಮಹರ್ಷಿಗಳಿಗೆ ವೀರಶೈವ ಸಿದ್ಧಾಂತವನ್ನು ಉಪದೇಶಿಸಿದರು. ಆ ಉಪದೇಶವನ್ನೇ ಶ್ರೀಶಿವಯೋಗಿ ಶಿವಾಚಾರ್ಯರು ಸಂಗ್ರಹಿಸಿ ಬರೆದಿಟ್ಟಿದ್ದಾರೆ. ಆ ಸಂಗ್ರಹವೇ ಇಂದು ಸಿದ್ಧಾಂತ ಶಿಖಾಮಣಿ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಈ ಆಚಾರ್ಯರು ಧರ್ಮಪ್ರಚಾರಕ್ಕಾಗಿ ಮಲಯ ಪರ್ವತದಲ್ಲಿಯೇ ಒಂದು ಪೀಠವನ್ನು ಸಂಸ್ಥಾಪಿಸಿದರು. ಅದು ಇಂದು 'ವೀರಸಿಂಹಾಸನ' ಇಲ್ಲವೇ 'ರಂಭಾಪುರೀ ಪೀಠ' ಎಂಬ ಹೆಸರಿನಿಂದ ಕನಾ೯ಟಕದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುಪ್ರಸಿದ್ಧವಾಗಿದೆ. ಈ ಪೀಠದ ಆಚಾರ್ಯರು ಶ್ರೀ ರೇಣುಕ ಶಾಖಾ ಮತ್ತು ವೀರಗೋತ್ರದ ಅಧಿಪತಿಗಳಾಗಿದ್ದಾರೆ.
ತಸ್ಯೇತಿ ವಚನಂ ಶ್ರುತ್ವಾ ರಾಕ್ಷಸೇಂದ್ರಸ್ಯ ಧೀಮತಃ | ತಥೇತಿ ಪ್ರತಿಸುಶ್ರಾವ ಸರ್ವಜ್ಞೋ ಗಣನಾಯಕಃ || ತತ್ರ ಸಂತುಷ್ಟಚಿತ್ತಸ್ಯ ಪೌಲಸ್ತ್ಯಸ್ಯೇಷ್ಟ ಸಿದ್ಧಿಯೇ | ಕೋಟಿತ್ರಯಂ ತು ಲಿಂಗಾನಾಂ ಯಥಾಶಾಸ್ತ್ರಂ ಯಥಾವಿಧಿ || ತ್ರಿಕೋಟ್ಯಾಚಾರ್ಯ ರೂಪೇಣ ಸ್ಥಾಪಿತಂ ತೇನ ತತ್ಕ್ಷಣೇ | (ಸಿ.ಶಿ.21/30-31)
ಶ್ರೀ ಸಿದ್ಧಾಂತ ಶಿಖಾಮಣಿಯಲ್ಲಿಯ ಈ ಶ್ಲೋಕಗಳ ಆಧಾರದಿಂದ ಶ್ರೀ ಜಗದ್ಗುರು ರೇಣುಕಾಚಾರ್ಯರು ವಿಭೀಷಣನ ಪ್ರಾರ್ಥನಾನುಸಾರವಾಗಿ ಏಕಕಾಲದಲ್ಲಿಯೇ ಮೂರುಕೋಟಿ ಗುರುರೂಪವನ್ನು ಧರಿಸಿ, ಮೂರುಕೋಟಿ ಶಿವಲಿಂಗಗಳನ್ನು ಸಂಸ್ಥಾಪಿಸಿದರೆಂದು ತಿಳಿದುಬರುತ್ತದೆ.
ಯುದ್ಧಭೂಮಿಯಲ್ಲಿ ಶ್ರೀರಾಮಚಂದ್ರನ ಬಾಣಗಳಿಂದ ಆಹತನಾಗಿ ತನ್ನ ಪ್ರಾಣಬಿಡುವ ಪೂರ್ವದಲ್ಲಿ ರಾವಣನು-
ನವಕಂ ಕೋಟಿಲಿಂಗಾನಾಂ ಪ್ರತಿಷ್ಠಾಪ್ಯಮಿಹ ಸ್ಥಲೇ | ಇತಿ ಸಂಕಲ್ಪಿತಂ ಪೂರ್ವ ಮಯಾತದವಶಿಷ್ಯತೇ || ಕೋಟಿಷಟ್ಕಂ ತು ಲಿಂಗಾನಾಂ ಮಯಾ ಸಾಧು ಪ್ರತಿಷ್ಠಿತಂ | ಕೋಟಿತ್ರಯಂ ತು ಲಿಂಗಾನಾಂ ಸ್ಥಾಪನೀಯಮತಸ್ತ್ವಯಾ || (ಸಿ.ಶಿ. 21/24-25)
ಹೇ ತಮ್ಮನಾದ ಪ್ರಿಯ ವಿಭೀಷಣನೇ! ಒಂಭತ್ತು ಕೋಟಿ ಶಿವಲಿಂಗಗಳನ್ನು ಪ್ರತಿಷ್ಠಾಪಿಸಬೇಕೆಂದು ನಾನು ಸಂಕಲ್ಪವನ್ನು ಮಾಡಿ ಆರು ಕೋಟಿ ಶಿವಲಿಂಗಗಳನ್ನು ಸಂಸ್ಥಾಪಿಸಿದ್ದೇನೆ. ಆದರೆ ನನ್ನ ಸಂಕಲ್ಪದ ಪ್ರಕಾರ ಇನ್ನೂ ಮೂರುಕೋಟಿ ಶಿವಲಿಂಗಗಳನ್ನು ಸ್ಥಾಪಿಸುವುದಿದೆ. ಅವುಗಳನ್ನು ನೀನು ಪ್ರತಿಷ್ಠಾಪಿಸು ಎಂಬುದಾಗಿ ಹೇಳಿ ಅಸುನೀಗಿದನು. ಅಣ್ಣನ ಸಂಕಲ್ಪವನ್ನು ಪೂರ್ಣ ಮಾಡುವುದು ಹೇಗೆಂದು ಬಹುದಿನಗಳಿಂದ ವಿಭೀಷಣನು ಚಿಂತಿಸುತ್ತಿರುವಾಗ, ಅವನ ಪುಣ್ಯವೇ ಮೂರ್ತಿರೂಪ ತಾಳಿ ಬಂದಂತೆ ಶ್ರೀ ಜಗದ್ಗುರು ರೇಣುಕ ಭಗವತ್ಪಾದರು ಲಂಕೆಗೆ ಬರುತ್ತಾರೆ. ಆಕಾಶಮಾರ್ಗವಾಗಿ ಬಂದ ಅವರ ಮಹಿಮೆಯನ್ನರಿತ ವಿಭೀಷಣನು ವಿಧಿವತ್ತಾಗಿ ಅವರ ಪಾದಪೂಜೆಯನ್ನು ಮಾಡಿ, ತನ್ನ ಅಣ್ಣನ ಸಂಕಲ್ಪವನ್ನು ನಿವೇದಿಸಿಕೊಂಡಾಗ, ಶ್ರೀ ಜಗದ್ಗುರು ರೇಣುಕ ಭಗವತ್ಪಾದರು ಅದೇ ಕ್ಷಣದಲ್ಲಿ ಮೂರುಕೋಟಿ ಆಚಾರ್ಯರ ರೂಪವನ್ನು ಧರಿಸಿ, ಶಿವಲಿಂಗಗಳನ್ನು ಏಕಕಾಲದಲ್ಲಿಯೇ ಸ್ಥಾಪಿಸಿ, ವಿಭೀಷಣನಿಗೆ ಅಭಯ, ಆಶೀರ್ವಾದಗಳನ್ನಿತ್ತು, ಕೆಲವು ದಿವಸ ಗುಪ್ತವಾಗಿಯೂ ಮತ್ತೆ ಕೆಲವು ದಿವಸ ಪ್ರಕಟವಾಗಿಯೂ ಭೂಮಂಡಲದಲ್ಲೆಲ್ಲ ಸಂಚರಿಸಿ ತಾವು ಅವತರಿಸಿದ ಕಾರ್ಯವು ಪೂರ್ಣವಾದೊಡನೆ ಪುನಃ ಕೊಲ್ಲಿಪಾಕಿ ಕ್ಷೇತ್ರಕ್ಕೆ ದಯಮಾಡಿಸಿ ಅದೇ ಸೋಮೇಶ್ವರ ಶಿವಲಿಂಗದಲ್ಲಿಯೇ ಲೀನವಾದರು.
ಶ್ರೀ ಜಗದ್ಗುರು ರೇಣುಕ ಭಗವತ್ಪಾದರು ಲಂಕೆಗೆ ಹೋಗಿ ಮೂರುಕೋಟಿ ಶಿವಲಿಂಗಗಳನ್ನು ಸ್ಥಾಪಿಸಿದ ವಿಷಯ ಕಾಲ್ಪನಿಕ ಪೌರಾಣಿಕ ಕಥೆಯಲ್ಲ. ಸಿಂಹಳದ ಜಾಫ್ನಾದಿಂದ 15 ಕಿ.ಮೀ. ದೂರವಿರುವ ಕಿರುಮಲಾಯ್ ಎಂಬ ಗ್ರಾಮದಲ್ಲಿ ಈಗಲೂ ಇರುವ ರೇಣುಕಾಶ್ರಮ ಮತ್ತು ರೇಣುಕವನ ಮಠಗಳು ಹಾಗೂ ಅಲ್ಲಿರುವ ನೂರಾರು ವೀರಶೈವರ ಮನೆತನಗಳು ಐತಿಹಾಸಿಕ ಘಟನೆಯ ಪ್ರತ್ಯಕ್ಷ ನಿದರ್ಶನಗಳಾಗಿವೆ.
ಬೆಂಗಳೂರಿನ ದಾರುಕಾಚಾರ್ಯ ಆಶ್ರಮದ ಶ್ರೀ ವೇ. ವೀರಯ್ಯ ಸ್ವಾಮಿ ಶಾಸ್ತ್ರಿಮಠ ಇವರು 1969ನೇ ಜೂನ್ ತಿಂಗಳಲ್ಲಿ ಸಿಂಹಳಕ್ಕೆ ಹೋಗಿ, ಅಲ್ಲಿಯ ರೇಣುಕಾಶ್ರಮ, ರೇಣುಕವನ ಹಾಗೂ ತಾನಕೇಸಂತುರೈಯಲ್ಲಿಯ ಶ್ರೀ ಗುರು ವೀರಭದ್ರ ದೇವಾಲಯಗಳ ಸಂದರ್ಶನವನ್ನು ಮಾಡಿ, ಅಲ್ಲಿಯ ಅನೇಕ ವೀರಶೈವರ ಜೊತೆ ಸಂದರ್ಶನ ಮಾಡಿ ಅಲ್ಲಿಂದ ಬರುವಾಗ ತಾಮ್ರಪಟದಲ್ಲಿ ಚಿತ್ರಿತವಾದ ಶ್ರೀ ಜಗದ್ಗುರು ರೇಣುಕಾಚಾರ್ಯರ ಲಿಂಗೋದ್ಭವ ಮೂರ್ತಿಯನ್ನು ತಂದಿರುವ ವಿಷಯಗಳು ನಿಜವಾಗಿಯೂ ಇತಿಹಾಸತಜ್ಞರ ಜಿಜ್ಞಾಸೆಯನ್ನು ಕೆರಳಿಸದೆ ಇರಲಾರವು.
ಶ್ರೀಮದ್ರೇವಣಸಿದ್ಧಸ್ಯ ಕುಲ್ಯಪಾಕಪುರೋತ್ತಮೇ | ಸೋಮೇಶಲಿಂಗಾಜ್ಜನನಮಾವಾಸಃ ಕದಲೀಪುರೇ ||
ಎಂಬ ಸ್ವಾಯಂಭುವ ಆಗಮದ ಪ್ರಮಾಣಾನುಸಾರವಾಗಿ ಶ್ರೀ ಜಗದ್ಗುರು ರೇಣುಕಾಚಾರ್ಯರೇ ಪುನಃ ಕಲಿಯುಗದ ಆರಂಭದಲ್ಲಿ ಶ್ರೀ ಜಗದ್ಗುರು ರೇವಣಸಿದ್ಧರೆಂಬ ಹೆಸರಿನಿಂದ ಅವತರಿಸಿ, 1400 ವರ್ಷಗಳವರೆಗೆ ವೀರಶೈವರ ತತ್ತ್ವೋಪದೇಶವನ್ನು ಮಾಡುತ್ತ ಅನಂತಲೀಲೆಗಳನ್ನು ಮಾಡಿದ್ದಾರೆ. ಇವರೇ ಶ್ರೀ ಜಗದ್ಗುರು ಆದಿಶಂಕರಾಚಾರ್ಯರಿಗೆ ಚಂದ್ರಮೌಳೀಶ್ವರಲಿಂಗ ಹಾಗೂ ರತ್ನಗರ್ಭ ಗಣಪತಿಯನ್ನು ದಯಪಾಲಿಸಿ ಅನುಗ್ರಹಿಸಿದ್ದಾರೆ. ಆದಿಶಂಕರರ ಚರಿತ್ರೆಯನ್ನು ಪ್ರತಿಪಾದಿಸುವ ಅನೇಕ ಗ್ರಂಥಗಳಲ್ಲಿ ಗುರುವಂಶ ಕಾವ್ಯವೂ ಒಂದಾಗಿದೆ. ಇದು ಶೃಂಗೇರಿ ಪೀಠದ ಆಸ್ಥಾನ ವಿದ್ವಾಂಸರಾದ ಪಂಡಿತ ಕಾಶೀ ಲಕ್ಷ್ಮಣ ಶಾಸ್ತ್ರಗಳಿಂದ ವಿರಚಿತವಾಗಿದೆ. ಇದು ವಾಣೀವಿಲಾಸ ಮುದ್ರಣಾಲಯ ಶ್ರೀರಂಗಂ ದಿಂದ ಮುದ್ರಿತವಾಗಿದೆ. ಈ ಪುಸ್ತಕದಲ್ಲಿ-
ಶ್ರೀಚಂದ್ರಮೌಳೀಶ್ವರಲಿಂಗಮಸ್ಮೈ ಸದ್ರತ್ನಗರ್ಭಂ ಗಣನಾಯಕಂ ಚ| ಸ ವಿಶ್ವರೂಪಾಯ ಸುಸಿದ್ಧದತ್ತಂ ದತ್ವಾನ್ಯಗಾದೀಚ್ಚಿರಮರ್ಚಯೇತಿ || (ಗುರುವಂಶ ಕಾವ್ಯ 3-33)
ಶ್ರೀ ಜಗದ್ಗುರು ಆದಿಶಂಕರಾಚಾರ್ಯರು ಶೃಂಗೇರಿಯಿಂದ ಕಾಂಚಿಗೆ ಬರುವ ಸಮಯದಲ್ಲಿ ತಮ್ಮ ಮೊದಲನೆಯ ಶಿಷ್ಯರಾದ ಶ್ರೀ ಸುರೇಶ್ವರಾಚಾರ್ಯರನ್ನು ಕರೆದು ಶ್ರೀ ರೇವಣಸಿದ್ಧ ಶಿವಯೋಗಿಗಳಿಂದ ಪ್ರಾಪ್ತವಾದ ಶ್ರೀ ಚಂದ್ರಮೌಳೀಶ್ವರಲಿಂಗ ಮತ್ತು ರತ್ಮಗರ್ಭ ಗಣಪತಿಯನ್ನು ಅವರಿಗೆ ಅರ್ಪಿಸಿ, ಅವುಗಳನ್ನು ಪೂಜಿಸುವ ಹೊಣೆಯನ್ನು ಹೊರಿಸಿದರು ಎಂಬ ವಿಷಯವು ಪ್ರತಿಪಾದಿಸಲ್ಪಟ್ಟಿದೆ. ಮೇಲೆ ಹೇಳಿದ ಈ ಶ್ಲೋಕದ ವ್ಯಾಖ್ಯಾನವನ್ನು ಬರೆಯುವಾಗ ಗ್ರಂಥಕಾರರೇ ಸುಸಿದ್ಧದತ್ತಂ ಸುಸಿದ್ಧೇನ ರೇವಣಸಿದ್ಧ ಮಹಾಯೋಗಿನಾ ದತ್ತಂ ಶ್ರೀ ಚಂದ್ರಮೌಳೀಶ್ವರಲಿಂಗಮ್ ಎಂದು ಇಲ್ಲಿ 'ಸುಸಿದ್ಧ' ಶಬ್ದದ ಅರ್ಥವನ್ನು ರೇವಣಸಿದ್ಧ ಮಹಾಯೋಗಿ ಎಂಬುದಾಗಿ ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ ಇಂದಿನವರೆಗೆ ಶ್ರೀ ಶೃಂಗೇರಿ ಪೀಠದಲ್ಲಿ ಪೂಜೆಗೊಳ್ಳುತ್ತಿರುವ ಶ್ರೀ ಚಂದ್ರಮೌಳೀಶ್ವರಲಿಂಗವು ವೀರಶೈವ ಶಿವಾಚಾರ್ಯರಾದ ಶ್ರೀ ರೇವಣಸಿದ್ಧರಿಂದ ಕೊಡಲ್ಪಟ್ಟದ್ದೆಂದು ತಿಳಿದುಬರುತ್ತದೆ.
ಜಗದ್ಗುರು ಮರುಳಾರಾಧ್ಯರು ಃ
ಶಿವನ ವಾಮದೇವಮುಖ ಸಂಜಾತರಾದ ಶ್ರೀ ಜಗದ್ಗುರು ಮರುಳಾರಾಧ್ಯರು ಶಿವನ ಅಪ್ಪಣೆಯ ಮೇರೆಗೆ ವೀರಶೈವ ಮತ ಸಂಸ್ಥಾಪನೆಗಾಗಿ ಕ್ಷಿಪ್ರಾನದಿಯ ತಟದಲ್ಲಿರುವ ವಟಕ್ಷೇತ್ರದ ಶ್ರೀ ಸಿದ್ಧೇಶ್ವರ ಲಿಂಗದಿಂದ ಪ್ರತಿಯೊಂದು ಯುಗದಲ್ಲೂ ಅವತರಿಸುತ್ತಾ
ಬಂದಿದ್ದಾರೆ. ಕೃತಯುಗದಲ್ಲಿ ದ್ವ್ಯಕ್ಷರ ಶಿವಾಚಾರ್ಯ, ತ್ರೇತಾಯುಗದಲ್ಲಿ ದ್ವಿವಕ್ತ್ರ ಶಿವಾಚಾರ್ಯ, ದ್ವಾಪರಯುಗದಲ್ಲಿ ಶ್ರೀದಾರುಕ ಶಿವಾಚಾರ್ಯ ಮತ್ತು ಕಲಿಯುಗದಲ್ಲಿ ಶ್ರೀ ಮರುಳಾರಾಧ್ಯ ಶಿವಾಚಾರ್ಯ ಎಂಬ ಹೆಸರುಗಳು ಇವರಿಗೆ ಇದ್ದುದಾಗಿ (ಸುಪ್ರಭೇದಾಗಮಾಂತರ್ಗತ ಪಂಚಾಚಾರ್ಯ ಪಂಚಮೋತ್ಪತ್ತಿ ಪ್ರಕರಣ, ಪುಟ-2) (ವೀರಶೈವ ಸದಾಚಾರ ಸಂಗ್ರಹ 1/37-39); (ಹಿಂದುತ್ವ, ಪುಟ-695) ಗ್ರಂಥಾಧಾರಗಳಿಂದ ತಿಳಿದುಬರುತ್ತದೆ.
ಈ ಪೀಠದ ದ್ವಾಪರಯುಗದ ಆಚಾರ್ಯರಾದ ಶ್ರೀ ಜಗದ್ಗುರು ದಾರುಕಾಚಾರ್ಯರು ನೈಮಿಷಾರಣ್ಯದಲ್ಲಿ ವಾಸಮಾಡುತ್ತಿರುವ ಶ್ರೀ ದಧೀಚಿ ಮಹಷರ್ಿಗಳಿಗೆ ಶಿವಾದ್ವೈತ ಸಿದ್ಧಾಂತವನ್ನು ಬೋಧಿಸಿ ಸಕಲ ಶಿಷ್ಯಸಮೇತರಾದ ಅವರನ್ನು ಕೃತಾರ್ಥರನ್ನಾಗಿ ಮಾಡಿದರು.
ತದ್ವನ್ಮರುಳಸಿದ್ಧಸ್ಯ ವಟಕ್ಷೇತ್ರೇ ಮಹತ್ತರೇ |
ಸಿದ್ಧೇಶಲಿಂಗಾಜ್ಜನನಂ ಸ್ಥಾನಮುಜ್ಜಯಿನೀಪುರೇ ||
ಸ್ವಾಯಂಭುವಾಗಮದ ಈ ವಚನಾನುಸಾರವಾಗಿ ಕಲಿಯುಗದ ಆಚಾರ್ಯರಾದ ಶ್ರೀ ಜಗದ್ಗುರು ಮರುಳಾರಾಧ್ಯರು, ಅಂದು ಮಾಳವ ದೇಶವೆಂದು ಪ್ರಸಿದ್ಧವಾದ ಇಂದಿನ ಮಧ್ಯಪ್ರದೇಶದ ಕ್ಷಿಪ್ರಾ ನದಿಯ ದಡದಲ್ಲಿರುವ ಮಹಾಕಾಲ ಉಜ್ಜಯಿನಿಯ ವಟಕ್ಷೇತ್ರದ ಸುಪ್ರಸಿದ್ಧವಾದ ಶ್ರೀ ಸಿದ್ಧೇಶ್ವರ ಮಹಾಲಿಂಗದಿಂದ ಪ್ರಾದುರ್ಭವಿಸಿ, ವೀರಶೈವ ಧಮರ್ೋಪದೇಶಕ್ಕಾಗಿ ಒಂದು ಪೀಠವನ್ನು ಸಂಸ್ಥಾಪಿಸಿದರು. ಅದುವೇ ಸದ್ಧರ್ಮ ಸಿಂಹಾಸನವೆಂಬ ಹೆಸರಿನಿಂದ ಪ್ರಸಿದ್ಧಿಯನ್ನು ಪಡೆಯಿತು.
ಕಾಲಕಾಲನಾದ ಮಹಾಕಾಲೇಶ್ವರ ಜ್ಯೋತಿಲರ್ಿಂಗದಿಂದಲೂ, ಭಕ್ತರ ಪಾಪವನ್ನು ಕ್ಷಿಪ್ರದಲ್ಲಿಯೇ ನಾಶಪಡಿಸುವ ಮಹಿಮೆಯಿಂದ ಕೂಡಿದ ಕ್ಷಿಪ್ರಾ ನದಿಯಿಂದಲೂ, ಸದ್ಧರ್ಮವನ್ನು ಉಪದೇಶಿಸುವ ಈ ಗುರುಪೀಠದಿಂದಲೂ ಪರಮ ಪವಿತ್ರವಾದ ಈ ಉಜ್ಜಯಿನಿಯಲ್ಲಿ ಶ್ರೌತಪಾಲ ಮತ್ತು ಭಾನುಮತಿ ಎಂಬ ರಾಜದಂಪತಿಗಳು ಪ್ರಜಾಪಾಲನೆಯನ್ನು ಮಾಡುತ್ತಿದ್ದರು.
ಒಂದು ಸಾರಿ ಶ್ರೀ ಶ್ರೌತಪಾಲ ರಾಜನು ಸ್ವರ್ಗದ ಅಭಿಲಾಷೆಯಿಂದ ಅಶ್ವಮೇಧ ಯಾಗವನ್ನು ಮಾಡಲುದ್ಯುಕ್ತನಾದಾಗ, ಯಜ್ಞದಲ್ಲಿ ಸಂಭವಿಸಬಹುದಾದ ಪ್ರಾಣಿಹಿಂಸೆ, ಮಾಂಸಭಕ್ಷಣ, ಸುರಾಪಾನ ಮತ್ತು ವ್ಯಭಿಚಾರಾದಿಗಳ ಬಗ್ಗೆ ರಾಜನಿಗೆ ಅರಿವನ್ನುಂಟುಮಾಡಿದ ಶ್ರೀ ಉಜ್ಜಯಿನೀ ಸದ್ಧರ್ಮ ಸಿಂಹಾಸನಾಧೀಶ್ವರರಾದ ಶ್ರೀ ಜಗದ್ಗುರು ಮರುಳಾರಾಧ್ಯರು ರಾಜದಂಪತಿಗಳಿಗೆ ಶಿವದೀಕ್ಷೆಯನ್ನು ಅನುಗ್ರಹಿಸಿ, ಸಾತ್ವಿಕ ಪೂಜಾವಿಧಾನವನ್ನು ತಿಳಿಸಿ, ಅವರಿಗೆ ವೀರಶೈವ ಧರ್ಮದ ಪ್ರಮುಖ ತತ್ತ್ವಗಳಾದ ಅಷ್ಟಾವರಣ, ಪಂಚಾಚಾರ ಮತ್ತು ಷಟ್ಸ್ಥಲಗಳ ಅರಿವನ್ನು ಮಾಡಿಕೊಟ್ಟರು.
ನಂತರ ಹಿಮಾಲಯದ ಗಂಗಾ-ಯಮುನಾ ನದಿಗಳ ಮಧ್ಯಭಾಗದಲ್ಲಿ ವಿರಾಜಿಸುವ ದಾರುಕವನಕ್ಕೆ ದಯಮಾಡಿಸಿ ಅಲ್ಲಿಯ ಋಷಿಮುನಿಗಳಿಗೆಲ್ಲ ಶಿವಾದ್ವೈತ ಸಿದ್ಧಾಂತವನ್ನು ಬೋಧಿಸಿ, ಅಲ್ಲಿಂದ ಕಾಶೀಕ್ಷೇತ್ರಕ್ಕೆ ದಯಮಾಡಿಸುತ್ತಾರೆ. ಕಾಶಿಯಲ್ಲಿ ಶ್ರೀ ಜಗದ್ಗುರು ವಿಶ್ವಾರಾಧ್ಯರನ್ನು ಸಂದಶರ್ಿಸಿ ಕಾಶಿಯಲ್ಲಿಯೇ 400 ವರ್ಷಗಳವರೆಗೆ ಯೋಗಸಮಾಧಿಯಲ್ಲಿ ಲೀನರಾಗುತ್ತಾರೆ. ಶಿವಯೋಗ ಸಮಾಧಿಯಿಂದ ಎಚ್ಚರಾದ ಬಳಿಕ, ಶ್ರೀ ಜಗದ್ಗುರು ವಿಶ್ವಾರಾಧ್ಯರ ಅಪ್ಪಣೆಯನ್ನು ಪಡೆದು ಶ್ರೀಶೈಲ ಮಲ್ಲಿಕಾಜರ್ುನ ದೇವಾಲಯಕ್ಕೆ ಹೋಗಿ ಅಲ್ಲಿಯ ಸೂರ್ಯಸಿಂಹಾಸನಾಧೀಶ್ವರ ಶ್ರೀ ಜಗದ್ಗುರು ಪಂಡಿತಾರಾಧ್ಯರೊಡನೆ ಧಾಮರ್ಿಕ ಪಯರ್ಾಲೋಚನೆಯನ್ನು ಮಾಡಿ ಅಲ್ಲಿಯ ಅನೇಕ ಋಷಿಮುನಿಗಳಿಗೆ ಶಿವಾದ್ವೈತ ತತ್ತ್ವವನ್ನು ಉಪದೇಶಿಸಿ ಕಾಶ್ಮೀರಕ್ಕೆ ದಯಮಾಡಿಸುತ್ತಾರೆ. ಅಲ್ಲಿ ಶ್ರೀ ಸರಸ್ವತೀ ಪೀಠವೆಂಬ ಮಠವನ್ನು ಸಂಸ್ಥಾಪಿಸಿ ಶಿವಭಕ್ತಿಯ ಪ್ರಚಾರವನ್ನು ಗೈಯುತ್ತಾರೆ. ಇವರ ಈ ಉಪದೇಶದ ಕಾರಣದಿಂದಾಗಿಯೇ ಕಾಶ್ಮೀರದಲ್ಲಿ ಶಿವಭಕ್ತಿಯು ವಿಶೇಷವಾಗಿ ಪ್ರಚಾರವಾಯಿತು.
ಮುಂದೆ ಶ್ರೀ ಜಗದ್ಗುರು ಮರುಳಾರಾಧ್ಯರು ತಮ್ಮ ಅವತಾರದ ಸಮಾಪ್ತಿಯ ಸಮಯವು ಸನ್ನಿಹಿತವಾಗಿರುವುದನ್ನು ಅರಿತು, ಶ್ರೀ ಕೇದಾರ ಕ್ಷೇತ್ರಕ್ಕೆ ದಯಮಾಡಿಸಿ, ಅಲ್ಲಿಯ ಶ್ರೀ ವೈರಾಗ್ಯ ಸಿಂಹಾಸನಾಧೀಶ್ವರರಾದ ಶ್ರೀ ಜಗದ್ಗುರು ಏಕೋರಾಮಾರಾಧ್ಯರನ್ನು ಸಂದಶರ್ಿಸುತ್ತಾರೆ. ನಂತರ ಈರ್ವರೂ ಸ್ನಾನಕ್ಕಾಗಿ ಗೌರೀಕುಂಡಕ್ಕೆ ಬಂದು, ಆ ಕುಂಡದಲ್ಲಿ ಮಿಂದು ಹೊರಬರುವಷ್ಟರಲ್ಲಿ ದಿವ್ಯಶಕ್ತಿಯೊಂದು ಆ ಕುಂಡದಿಂದ ಉದ್ಭವಿಸಿತು. ಆಗ ಉಭಯರೂ ಆ ದಿವ್ಯ ವಟುವನ್ನು ನೋಡಿ ಪರಮಾನಂದಗೊಂಡರು. ಆಗ ಏಕೋರಾಮರು ಶ್ರೀ ನಂದೀಶ್ವರನೇ ಈ ರೂಪದಿಂದ ಅವತರಿಸಿರುವನು. ಈ ವಟುವಿಗೆ ಮುಕ್ತಿಮುನಿ ಎಂದು ನಾಮಕರಣವನ್ನು ಮಾಡುತ್ತೇವೆ. ಈತನೇ ಉಜ್ಜಯಿನಿ ಸದ್ಧರ್ಮ ಪೀಠಕ್ಕೆ ಉತ್ತರಾಧಿಕಾರಿಯಾಗಲಿ ಎಂಬುದಾಗಿ ಅಪ್ಪಣೆ ಕೊಡಿಸಿದರು.
ನಂತರ ಎಲ್ಲರೂ ಉಜ್ಜಯಿನಿ ಕ್ಷೇತ್ರಕ್ಕೆ ದಯಮಾಡಿಸಿ, ಅಕ್ಷಯ ತೃತೀಯ ಶುಭಮುಹೂರ್ತದಲ್ಲಿ ಶ್ರೀ ಮುಕ್ತಿಮುನಿಗಳಿಗೆ ಪಟ್ಟಾಧಿಕಾರವನ್ನು ವಹಿಸಿ, ಸ್ರೀ ಜಗದ್ಗುರು ಮರುಳಾರಾಧ್ಯರು ಪುನಃ ವಟಕ್ಷೇತ್ರದ ಶ್ರೀ ಸಿದ್ಧೇಶ್ವರ ಲಿಂಗದಲ್ಲಿಯೇ ಲೀನರಾದರು.
ಶ್ರೀ ಜಗದ್ಗುರು ಮುಕ್ತಿಮುನಿಗಳು ಪಟ್ಟಾಧಿಕಾರವನ್ನು ಹೊಂದಿ 300 ವರ್ಷಗಳ ಪರ್ಯಂತ ಸದ್ಧರ್ಮ ಪೀಠವನ್ನು ಅಲಂಕರಿಸಿ, ವೀರಶೈವ ಮತವನ್ನು ಸಾಕಷ್ಟು ಪ್ರಚಾರಗೊಳಿಸಿ, ತಮ್ಮ ಅಂತಿಮ ಸಮಯದಲ್ಲಿ ಶ್ರೀ ಜಗದ್ಗುರು ಸಿದ್ಧಮುನಿಗಳಿಗೆ ಪೀಠಾಧಿಕಾರವನ್ನು ಒಪ್ಪಿಸಿ ಲಿಂಗೈಕ್ಯರಾದರು.
ಹೀಗೆ ಈ ಪೀಠ ಪರಂಪರೆಯಲ್ಲಿ ಶ್ರೀ ಜಗದ್ಗುರು ಸಿದ್ಧಮುನಿಗಳು 200 ವರ್ಷ, ಶ್ರೀ ಜಗದ್ಗುರು ಶಿವಮುನೀಂದ್ರ ಸ್ವಾಮಿಗಳು 125 ವರ್ಷ, ಶ್ರೀ ಜಗದ್ಗುರು ಶಾಂತಮುನಿಗಳು 70 ವರ್ಷ, ಶ್ರೀ ಜಗದ್ಗುರು ಭವಭೂತಿ ಮುನಿಗಳು 100 ವರ್ಷ ಸಿಂಹಾಸನಾರೂಢರಾಗಿದ್ದರು. ಶ್ರೀ ಜಗದ್ಗುರು ಭವಭೂತಿ ಮುನಿಗಳು ಮಹಾತಪಸ್ವಿಗಳೂ, ಘನ ವಿದ್ವಾಂಸರೂ ಆಗಿದ್ದರು. ಉಜ್ಜಯಿನಿಯ ಭೋಜರಾಜ ಹಾಗೂ ಅವನ ಆಸ್ಥಾನ ಕವಿಗಳಾದ ಕಾಳಿದಾಸಾದಿಗಳಿಂದ ಇವರು ಮನ್ನಣೆಯನ್ನು ಪಡೆದವರಾಗಿದ್ದರು. ತಮ್ಮ ತರುವಾಯ ಶ್ರೀ ಜಗದ್ಗುರು ಇಮ್ಮಡಿ ಮುಕ್ತಿಮುನಿಗಳಿಗೆ ಪೀಠಾಧಿಕಾರವನ್ನು ಕೊಟ್ಟು ಲಿಂಗೈಕ್ಯರಾದರು.
ಇದೇ ಪ್ರಕಾರ ಶ್ರೀ ಜಗದ್ಗುರು ಇಮ್ಮಡಿ ಮುಕ್ತಿಮುನಿಗಳು 50 ವರ್ಷ, ಶ್ರೀಜಗದ್ಗುರು ಶಕ್ತಿಮುನಿಗಳು 200ವರ್ಷ. ಶ್ರೀ ಜಗದ್ಗುರು ಇಮ್ಮಡಿ ಸಿದ್ಧಮುನಿಗಳು 40 ವರ್ಷ, ಶ್ರೀ ಜಗದ್ಗುರು ಇಮ್ಮಡಿ ಶಾಂತಮುನಿಗಳು 90 ವರ್ಷ, ಶ್ರೀ ಜಗದ್ಗುರು ಮುಮ್ಮಡಿ ಸಿದ್ಧಮುನಿಗಳು 55 ವರ್ಷ, ಶ್ರೀ ಜಗದ್ಗುರು ಸಾಂಬಮುನಿಗಳು 100 ವರ್ಷ, ಶ್ರೀ ಜಗದ್ಗುರು ಇಮ್ಮಡಿ ಶಿವಮುನಿಗಳು 30 ವರ್ಷ ಮತ್ತು ಶ್ರೀ ಜಗದ್ಗುರು ಈಶಾನ್ಯಮುನಿಗಳು 75 ವರ್ಷ ಧರ್ಮ ಸಿಂಹಾಸನಾಸೀನರಾಗಿ ಮಧ್ಯಪ್ರದೇಶದಲ್ಲಿ ವೀರಶೈವ ಧರ್ಮವನ್ನು ಬಹಳಷ್ಟು ಪ್ರಚಾರಗೊಳಿಸಿದರು.
ಇವರ ತರುವಾಯ ಶ್ರೀ ಜಗದ್ಗುರು ಶಂಭುಮುನಿಗಳು ಈ ಪೀಠ ಪರಂಪರೆಯಲ್ಲಿ 15ನೆಯ ಪೀಠಾಧಿಪತಿಗಳಾಗಿ ಅಧಿಕಾರವನ್ನು ಸ್ವೀಕರಿಸಿದ್ದಾರೆ. ಇಷ್ಟು ಹೊತ್ತಿಗೆ ಜೈನಧರ್ಮವು ಬಹಳಷ್ಟು ಪ್ರಚಾರದಲ್ಲಿತ್ತು. ಆಗ ಜೈನಧರ್ಮದವನಾದ ಶ್ರೀ ವೀರಸೇನ ರಾಜನು ವೀರಶೈವ ಧರ್ಮವನ್ನು ನಾಶಗೊಳಿಸಲು ಪಣತೊಟ್ಟವನಾಗಿದ್ದನು. ಶ್ರೀ ಜಗದ್ಗುರು ಶಂಭುಮುನಿಗಳು ಶಠೇ ಶಾಠ್ಯಂ ಸಮಾಚರೇತ್ ಎಂಬ ನೀತಿಗನುಸಾರವಾಗಿ, ರಾಜನೊಡನೆ ಪ್ರತಿಭಟಿಸಲು ಸೈನ್ಯವನ್ನು ಸಂಗ್ರಹಿಸಿ ಕೊನೆಗೆ ವೀರಸೇನ ರಾಜನೊಡನೆ ಹೋರಾಡಿ ವಿಜಯವನ್ನು ಸಂಪಾದಿಸಿದರು.
ಈ ಯುದ್ಧದಲ್ಲಿ ವಿಜಯವನ್ನು ಸಂಪಾದಿಸಿದರೂ ಶ್ರೀ ಜಗದ್ಗುರು ಶಂಭುಮುನಿಗಳಿಗೆ ಸಮಾಧಾನವಾಗಲಿಲ್ಲ. ಆಗ ಅವರು ಈ ತರಹದ ಕಲಹವೇ ಬೇಡವೆಂದು ಭಾವಿಸಿ, ಉಜ್ಜಯಿನಿಯನ್ನು ಬಿಟ್ಟು ಅಡವಿಯಲ್ಲಿ ಪ್ರಶಾಂತ ಸ್ಥಳದಲ್ಲಿ ಪರ್ಣಕುಟೀರವನ್ನು ನಿಮರ್ಿಸಿಕೊಂಡು 70 ವರ್ಷಗಳವರೆಗೆ ಧರ್ಮಕಾರ್ಯವನ್ನು ಮಾಡಿ ಕೊನೆಗೆ ತಮ್ಮ ಪ್ರೀತಿಯ ಶಿಷ್ಯರಾದ ಶ್ರೀ ಮರುಳಸಿದ್ಧರಿಗೆ ಜಗದ್ಗುರು ಪಟ್ಟಾಧಿಕಾರವನ್ನು ವಹಿಸಿ ಲಿಂಗೈಕ್ಯರಾದರು.
ಶ್ರೀ ಸದ್ಧರ್ಮ ಪೀಠದ ಸ್ಥಳಾಂತರ :
ಶ್ರೀ ಜಗದ್ಗುರು ಶಂಭುಮುನಿಗಳು ಲಿಂಗೈಕ್ಯರಾದ ನಂತರ ಶ್ರೀ ಜಗದ್ಗುರು ಮರುಳಸಿದ್ಧರು ಜೈನರಾಜರ ಉಪದ್ರವಕ್ಕಾಗಿ ಮಧ್ಯಪ್ರದೇಶದ ಉಜ್ಜಯಿನಿಯ ಪರಿಸರವನ್ನು ತ್ಯಾಗಮಾಡಿ ಶಿಷ್ಯ ಸಮೇತರಾಗಿ ಮಹಾರಾಷ್ಟ್ರದ ವಿಭಿನ್ನ ಸ್ಥಾನಗಳಲ್ಲಿ ಸಂಚರಿಸುತ್ತ ಅಲ್ಲಲ್ಲಿಯ ಭಕ್ತರ ಸಹಯೋಗ, ಸಹಕಾರಗಳಿಂದ ಮಠಗಳನ್ನು ನಿಮರ್ಿಸಿ, ಅಲ್ಲಲ್ಲಿ ಒಬ್ಬೊಬ್ಬ ಶಿಷ್ಯರನ್ನು ಇರಿಸುತ್ತ, ಪರಳಿ ಮುಂತಾದ ಜ್ಯೋತಿಲರ್ಿಂಗಗಳ ಸ್ಥಾನವನ್ನು ಸಂದಶರ್ಿಸಿ, ಕೊಲ್ಹಾಪುರ ಸಮೀಪದ ಸಿದ್ಧಗಿರಿ ಎಂಬ ಸ್ಥಾನಕ್ಕೆ ದಯಮಾಡಿಸುತ್ತಾರೆ. ಶ್ರೀ ಜಗದ್ಗುರು ಮರುಳಸಿದ್ಧರು ಹೀಗೆ ಮಹಾರಾಷ್ಟ್ರದ ಅನೇಕ ಭಾಗಗಳಲ್ಲಿ ಸಂಚರಿಸಿದುದರಿಂದ ಮಹಾರಾಷ್ಟ್ರದಲ್ಲಿ ಉಜ್ಜಯಿನೀ ಶಾಖಾಮಠಗಳು ಅಧಿಕವಾಗಿರುತ್ತವೆ.
ಶ್ರೀ ಜಗದ್ಗುರು ಮರುಳಸಿದ್ಧರು ಸಿದ್ಧಗಿರಿಗೆ ಆಗಮಿಸಿದಾಗ ಅಲ್ಲಿ ಶ್ರೀ ಜಗದ್ಗುರು ರೇವಣಸಿದ್ಧರ ಸಂದರ್ಶನವಾಗುತ್ತದೆ. ಇಂದಿನ ಈ ಸಿದ್ಧಗಿರಿಮಠವು ರಂಭಾಪುರಿ ಶಾಖಾಮಠವಾಗಿರುತ್ತದೆ. ಶ್ರೀ ಜಗದ್ಗುರು ಮರುಳಸಿದ್ಧರ ಮಹಾಕಾಲ ಉಜ್ಜಯಿನಿಯ ಸದ್ಧರ್ಮ ಪೀಠಕ್ಕೆ ಬಂದೊದಗಿದ ವಿಪತ್ತನ್ನರಿತ ಶ್ರೀ ಜಗದ್ಗುರು ರೇವಣಸಿದ್ಧರು ಶ್ರೀ ಜಗದ್ಗುರು ಮರುಳಸಿದ್ಧರಿಗೆ ಸಾಂತ್ವನವನ್ನು ಹೇಳಿ ಕನರ್ಾಟಕ ಪ್ರದೇಶದ ಕೊಟ್ಟೂರು ಬಳಿಯಲ್ಲಿಯೇ ಉಜ್ಜಯಿನಿ ಎಂಬ ಹೊಸ ಪಟ್ಟಣವನ್ನು ನಿಮರ್ಾಣಗೊಳಿಸಿ ಅಲ್ಲಿಯೇ ಸದ್ಧರ್ಮ ಪೀಠವನ್ನು ಪುನಃ ಸ್ಥಾಪಿಸಲು ಸಲಹೆಯನ್ನು ಕೊಡುತ್ತಾರೆ.
ಶ್ರೀ ಜಗದ್ಗುರು ರೇವಣಸಿದ್ಧರ ಆದೇಶದಂತೆ ಶ್ರೀ ಜಗದ್ಗುರು ಮರುಳಸಿದ್ಧರು ಕೊಲ್ಹಾಪುರದ ಶ್ರೀ ಮಾಯಾದೇವಿಯ ಗವರ್ಾಪಹರಣವನ್ನು ಮಾಡಿ ಅಪಾರ ಕೀತರ್ಿಯನ್ನು ಸಂಪಾದಿಸಿದರು. ಅಲ್ಲದೇ ಅಲ್ಲಿಯ ಕರಟಾಸುರನಿಗೆ ಮತ್ತು ಅವನ ಪರಿವಾರದವರಿಗೆಲ್ಲ ಶಿವದೀಕ್ಷೆಯನ್ನು ಮಾಡಿ ಅನುಗ್ರಹಿಸಿದರು. ನಂತರ ಓರಂಗಲ್ಲಿಗೆ ಹೋಗಿ ಅಲ್ಲಿಯ ಕಾಕತೀಯ ರಾಜವಂಶದ ಗಣಪತಿ ರಾಜನನ್ನು ಮತ್ತು ಹೊಸ ಕಲ್ಯಾಣದ ಶ್ರೀ ಸೋಮೇಶ್ವರ ರಾಜನನ್ನು ಕಂಡರು. ಅವರ ಸಹಾಯದಿಂದ ಶ್ರೀ ಜಕ್ಕಣಚಾರ್ಯರ ಶಿಲ್ಪಸೇವೆಯಿಂದ ಹೊಸದಾಗಿ ಸ್ಥಾಪಿಸಲ್ಪಟ್ಟ ಉಜ್ಜಯಿನಿಯಲ್ಲಿ ಸದ್ಧರ್ಮ ಪೀಠವನ್ನು ನಿಮರ್ಾಣಗೊಳಿಸಿ, ಆ ಪೀಠದಲ್ಲಿ ಮೂಲ ಮರುಳಾರಾಧ್ಯರ ತರುವಾಯದ ಹದಿನಾಲ್ಕು ಜನ ಗುರುಪರಂಪರೆಯ ಮೂತರ್ಿಗಳನ್ನು ಮತ್ತು ಮೂಲ ಮರುಳಾರಾಧ್ಯರ ಒಂದು ಲಿಂಗವನ್ನೂ ಸಂಸ್ಥಾಪಿಸಿದರು. ಈ ಪೀಠದಲ್ಲಿಯ ಒಳಭಾಗವು ಅನೇಕ ಕಲಾಕೃತಿಯಿಂದ ಕೂಡಿಕೊಂಡಿದೆ. ಅಂತೆಯೇ ಹಂಪೆಯ ಗುಡಿ ಹೊರಗೆ ನೋಡಬೇಕು, ಉಜ್ಜಯಿನಿಯ ಮಠದ ಒಳಗೆ ನೋಡಬೇಕು ಎಂಬುದು ಇಂದಿಗೂ ಗಾದೆಯ ಮಾತಿನಂತಿದೆ.
ಹೀಗೆ ವಿನೂತನವಾಗಿ ನಿಮರ್ಾಣಗೊಂಡ ಕನರ್ಾಟಕದ ಉಜ್ಜಯಿನೀ ಸದ್ಧರ್ಮ ಸಿಂಹಾಸನಕ್ಕೆ ಶ್ರೀ ಜಗದ್ಗುರು ಮರುಳಸಿದ್ಧರನ್ನು ಪೀಠಾಧ್ಯಕ್ಷರನ್ನಾಗಿ ಮಾಡಲಾಯಿತು ಈ ಮಂಗಲಕಾರ್ಯಕ್ಕೆ ಶ್ರೀ ಜಗದ್ಗುರು ರೇವಣಸಿದ್ಧರು, ಶ್ರೀ ಜಗದ್ಗುರು ಪಂಡಿತಾರಾಧ್ಯರು ದಯಮಾಡಿಸಿದರು ಹಾಗೂ ರಾಷ್ಟ್ರಕೂಟ, ಓರಂಗಲ್ ಪುರಿಗಳ ಭೂಪಾಲರೂ ಆಗಮಿಸಿ ತಮ್ಮ ಭಕ್ತಿಕಾಣಿಕೆಯನ್ನು ಸಮಪರ್ಿಸಿದರಲ್ಲದೇ ಭುವನೈಕಮಲ್ಲ ಶ್ರೀ ಸೋಮೇಶ್ವರನು ಸಮ್ಮಾನಪೂರ್ವಕವಾಗಿ 120 ಮಠಗಳನ್ನು ತನ್ನ ರಾಜ್ಯದಲ್ಲಿಯೇ ಉಂಬಳಿಯಾಗಿ ಕೊಟ್ಟನು.
ಈ ರೀತಿಯಾಗಿ ವೈಭವದ ಅಧಿಕಾರವನ್ನು ಹೊಂದಿದ ನಂತರ ಭಕ್ತವೃಂದದ ಮತ್ತು ಅನೇಕ ಮಹಾರಾಜರ ಬಯಕೆಗಳನ್ನು ಈಡೇರಿಸುತ್ತ ಓರಂಗಲ್ಲ, ಹಂಪೆ, ಕೂಡಲಸಂಗಮ, ಕಪ್ಪತಗುಡ್ಡ, ಹರಪುರಿ ಮುಂತಾದ ಸ್ಥಳಗಳಲ್ಲಿ ಸಂಚರಿಸಿ ವೀರಶೈವ ಧಮರ್ೋಪದೇಶವನ್ನು ಮಾಡುತ್ತಿರುವಾಗ ಬಹಳಷ್ಟು ಜೈನ ಧಮರ್ೀಯರು ಇವರಿಂದ ಲಿಂಗದೀಕ್ಷೆಯನ್ನು ಪಡೆದರು. ಶ್ರೀ ಜಗದ್ಗುರು ಮರುಳಸಿದ್ಧರು 170 ವರ್ಷಗಳವರೆಗೆ ಉಜ್ಜಯಿನಿಯ ಸದ್ಧರ್ಮ ಸಿಂಹಾಸನಾಧಿಪತಿಗಳಾಗಿದ್ದು ಕೊನೆಗೆ ಶ್ರೀ ಸಿದ್ಧಪಂಡಿತರಿಗೆ ಪಟ್ಟವನ್ನು ವಹಿಸಿ ತಾವು ಲಿಂಗೈಕ್ಯರಾದರು.
Friday, 14 August 2020
ವೀರಶೈವ ಚತುರ್ವಿಂಶತಿ ಪುರುಷರು - 2
ವೀರಭದ್ರ ಸ್ವಾಮಿ ಹಿನ್ನಲೆ
ಅಹಾ ವೀರಾ; ಆಹ ಹಾ ರುದ್ರ ;
ನಮ್ಮ ಶ್ರೀ ವೀರಭದ್ರದೇವರು ಹೇಗಿರ್ದರೆಂದರೆ :
ಅಯ್ಯಾ ಪ್ರಳಯದುರಿ ಮೂರ್ತಿಗೊಂಡಂತೆ : ಕಿಡಿಯನುಗುಳುವ ಕಣ್ಣು:ಲಲಾಟದಲ್ಲಿ ಪುಂಡ್ರ;
ಕೈಯಲ್ಲಿ ಮಸೆದೆಲಗು:ರಣಚೂರಿ ಕಠಾರಿ;
ವೀರಬಾಣ ಹೊಗೆಬಾಡಾ;
ವಜ್ರಬಾಣ ರತ್ನಗತ್ತಿ;ಉರುಲಿನ ಹಗ್ಗ; ಇಂತೀ ಆಯುಧ ಸನ್ನದ್ದನಾಗಿ; ಹೋ ಎಂದು ಕೂಗಿ ಆರ್ಭಟಿಸಿ; ದಕ್ಷನ ಯಜ್ಞಭೂಮಿಯನ್ನು ಹೊಕ್ಕು; ; ಅಲ್ಲಿ ಕೂಡಿದ ಕೋಟಿಗಟ್ಟಲೆ ದೇವತೆಗಳನ್ನು ಕಂಡು; ಕಮ್ಮನೇ ಕೆಮ್ಮಲು;ಕೆಂಡದುಂಡಿಗಳು ಉರಿದೆದ್ದವಯ್ಯ:
ಎಂಬ ಈ ವಡಬು ದಕ್ಷನ ಯಜ್ಞವನ್ನು ವೀರಭದ್ರ ನಾಶಪಡಿಸುವ ಕಥೆಯನ್ನು ಒಳಗೊಂಡಿದ್ದು ಇಂಥ ಅನೇಕ ಒಡಬುಗಳನ್ನು ಪುರವಂತರು ಗುಗ್ಗಳಸಂದರ್ಭದಲ್ಲಿ ಹೇಳುವುದನ್ನು ಕಂಡರೆ ಮೈರೋಮಾಂಚನಗೊಳ್ಳುವುದು,
ಅಹಹಾ ವೀರಾ, ಅಹಹಾ ಶರಬಾ, ಅಹಹಾ ರುದ್ರ, ಧನಿಕರೆಂದು ಹೇಳುವವರನ್ನು ದಾರಿದ್ರ್ಯಕ್ಕೆ ಒಳಗು ಮಾಡಿತಯ್ಯಾ ನಿಮ್ಮ ಮಾಯೆ! ಸತ್ಯವೆಂದು ಹೇಳುವವರನ್ನು ಅಸತ್ಯಕ್ಕೆ ಒಳ ಮಾಡಿತಯ್ಯಾ ಮಾಯೆ! ಭಕ್ಷ್ಯಭೋಜನಗಳನ್ನೂಂಡು ಕೇಕೇ ಹಾಕುವುದಕ್ಕೆ ಹುಟ್ಟಿಕೊಂಡು ಬಂದವ ನಲ್ಲ ಈ ವೀರಭದ್ರ ತಿಳಿಯೇ ಮರುಳೇ ಖಡೇ ಖಡೇ’ ಎಂದು ವೀರಗಾಸೆಯ ಹೆಜ್ಜೆ ಹಾಕುತ್ತ ವೀರಭದ್ರ ದೇವರ ಒಡಪುಗಳನ್ನು ಅತ್ಯಾಕರ್ಷಕವಾಗಿ ಉಣಬಡಿಸಿದ ಪುರವಂತರ ಸೇವೆ ನಿಜಕ್ಕೂ ಅದ್ಬುತ
Ilಬೃಂಗಿ , ಬೃಂಗೀಶ್ವರ II
ಶಿವನ ಪರಿವಾರ ದೇವತೆಗಳಲ್ಲಿ ಒಂದಾದ
ಬೃಂಗಿ ಋಷಿ, ಪರಮೇಶ್ವರನ ಭಕ್ತ. ಸದಾಕಾಲವೂ ಶಿವನ ಧ್ಯಾನದಲ್ಲಿ ಮಗ್ನನಾಗಿ ಶಿವನನ್ನು ಕುರಿತು ಧ್ಯಾನಿಸುತ್ತಾನೆ. ಆದರೆ, ಶಕ್ತಿರೂಪಿಣಿಯಾದ ಪಾರ್ವತಿಯ ಬಗ್ಗೆ ಅಷ್ಟಕ್ಕಷ್ಟೇ. ಪಾರ್ವತಿಯನ್ನು ಎಂದೂ ಆರಾಧಿಸುವ ಮನಸ್ಸಿಲ್ಲ. ಕಾರಣ, ಪರಶಿವನನ್ನು ಆರಾಧಿಸಿದಮೇಲೆ ಇತರ ದೇವತೆಗಳನ್ನು ಆರಾಧಿಸುವ ಅಗತ್ಯವಿಲ್ಲ ಎಂಬ ಅಭಿಪ್ರಾಯ.ಬೃಂಗಿಯು, ಒಂದು ದಿನ ಪರಶಿವನನ್ನು ಕಾಣಲು ಕೈಲಾಸಕ್ಕೆ ತೆರಳಿದ.ಕೈಲಾಸದಲ್ಲಿ ಶಿವ ಪಾರ್ವತಿಯರು ಪಕ್ಕ ಪಕ್ಕದಲ್ಲಿ ಕುಳಿತಿದ್ದರು.
ಬೃಂಗಿ ಕೇವಲ ಪರಶಿವನಿಗೆ ಮಾತ್ರ ಪ್ರದಕ್ಷಿಣೆ ಮಾಡಲು ಮುಂದಾದ.ಆಗ ಪಾರ್ವತಿಯು, ನೀನು ಸತಿ ಪತಿಗಳಾದ ನಮ್ಮಿಬ್ಬರಿಗೂ ಒಟ್ಟಾಗಿ ಪ್ರದಕ್ಷಿಣೆ ಮಾಡಬೇಕು, ಕೇವಲ ಶಿವನಿಗೆ ಮಾತ್ರ ಪ್ರದಕ್ಷಿಣೆ ಸಲ್ಲದು ಎಂದಳು.ಅದೇಕೋ ಶಿವ ಪಾರ್ವತಿ ಇಬ್ಬರಿಗೂ ಒಟ್ಟಾಗಿ ಪ್ರದಕ್ಷಿಣೆ ಮಾಡಲಾರೆ ಎಂದ.
ತಕ್ಷಣವೇ, ಪಾರ್ವತಿಯು ಶಿವನ ತೊಡೆಯ ಮೇಲೆ ಕುಳಿತು, ಈಗ ಶಿವನಿಗೆ ಮಾತ್ರ ಹೇಗೆ ಪ್ರದಕ್ಷಿಣೆ ಮಾಡುತ್ತೀಯ?, ನೋಡುತ್ತೇನೆ ಎಂದಳು.
ಬೃಂಗಿಯು ತಕ್ಷಣವೇ ದುಂಬಿಯ (ಬೃಂಗ) ರೂಪವನ್ನು ತಾಳಿ, ಶಿವನತಲೆಯ ಸುತ್ತಿ ಪ್ರದಕ್ಷಿಣೆ ಮಾಡಲು ಪ್ರಾರಂಭಿಸಿದ.ಇದರಿಂದಾಗಿ ಕೋಪಗೊಂಡ ಪಾರ್ವತಿ ಶಿವನಲ್ಲಿ ತನ್ನ ಅಹವಾಲು ತಿಳಿಸಿದಳು.ಶಿವ ಪಾರ್ವತಿಯರು ಆಗ ಅರ್ಧನಾರೀಶ್ವರ ರೂಪವನ್ನು ತಾಳಿದರು.ಆಗ ಬೃಂಗಿಯು ಇಲಿಯ ರೂಪ ತಾಳಿ ಪರಶಿವನ ಕಾಲನ್ನು ಮಾತ್ರ ಪ್ರದಕ್ಷಿಣೆ ಮಾಡಲು ಪ್ರಾರಂಭಿಸಿದ.ಪಾರ್ವತಿಗೆ ಮತ್ತಷ್ಟು ಕೋಪ ಬಂದು, ನಿನಗೆ ನಿನ್ನ ತಾಯಿಯ ದೇಹದಿಂದ ಬಂದ ಅಂಶಗಳಾದ ರಕ್ತ, ಮಾಂಸಗಳು ಇಲ್ಲದಾಗಲಿ ಎಂಬ ಶಾಪ ನೀಡಿದಳು. ತಕ್ಷಣವೇ ಬೃಂಗಿಯ ದೇಹವು ರಕ್ತಮಾಂಸಗಳಿಲ್ಲದೆ, ತನ್ನ ತಂದೆಯ ಅಂಶದಿಂದ ಬಂದ ಮೂಳೆ,ರಕ್ತನಾಳಗನ್ನು ಮಾತ್ರವೇ ಹೊಂದಿದ.
ರಕ್ತ ಮಾಂಸಗಳಿಲ್ಲದ ನಿಶ್ಯಕ್ತ ದೇಹ ಅಲ್ಲೇ ಕುಸಿದು ಬಿತ್ತು.ತನ್ನ ತಪ್ಪಿನ ಅರಿವಾಗಿ ಶಿವ ಪಾರ್ವತಿಯರನ್ನು ಪ್ರಾರ್ಥಿಸಿದ.
|ಮೂರು ಕಾಲಿನ ಬೃಂಗೀಶ್ವರ |
ಆಗ ಪರಶಿವನು ಬೃಂಗಿಗೆ ಎದ್ದು ನಿಲ್ಲಲು ಆಧಾರವಾಗಿ ಮೂರನೇ ಕಾಲನ್ನು ಕರುಣಿಸಿದ ಬೃಂಗಿಗೆ, 'ಬೃಂಗೀಶ್ವರ' ಎಂಬುದಾಗಿ ಮರುನಾಮಕರಣ ಮಾಡಿದ. ಅಂದಿನಿಂದ, ಬೃಂಗಿಗೆ ದೇಹದಲ್ಲಿ ಕೇವಲ ಮೂಳೆಗಳು ಮತ್ತು ರಕ್ತನಾಳಗಳು ಮಾತ್ರ ಇರುವಂತಾಯಿತು.
ಶಿವಾಯಗಳ ಮಹಾದ್ವಾರಗಳಲ್ಲಿ ಮೂರು ಕಾಲಿನ ಬೃಂಗಿಯಮೂ ರ್ತಿಯನ್ನು ಕಾಣಬಹುದು.
ವೀರಶೈವ ಚತುರ್ವಿಂಶತಿ ಪುರುಷರು
ನಮ್ಮ ಮೂಲ ಪುರುಷ /ಆಚಾರ್ಯ ಹೆಸರನ್ನು ಹೇಳುವುದು. ಅದಕ್ಕೆ ಗೋತ್ರ ಎಂದು ಹೆಸರು. ಗುರುಪೀಠಗಳಿಗೆ ನಿಷ್ಠೆಯಿಂದ ನಡೆದುಕೊಳ್ಳುವುದೇ ಮತ್ತು ಗುರು ಭಕ್ತಿ ತೊರುವುದು ಅದನ್ನು ತೋರಿಸುವುದೇ ಈ ಗೋತ್ರ, ಪ್ರವರ ಸೂತ್ರ ಎನ್ನುವುದು. ಗೋತ್ರ, ಪ್ರವರ ಸೂತ್ರ ವಿಚಾರ ಪ್ರಕಾರ ಈ ರೀತಿ ಐದು ಜನ ಮೂಲಪುರುಷರಿಂದ ಉತ್ಪನ್ನರಾದ ಗೋತ್ರಕಾರರು ಅವರವರ ವಂಶದಲ್ಲಿ (ಸಗೋತ್ರ) ಹೆಣ್ಣು ಕೊಟ್ಟು ತರುವುದು ನಿಷೇಧವು. ಒಂದು ಗೋತ್ರದವರು ಇನ್ನೊಂದು ಗೋತ್ರದವರಲ್ಲಿ ಹೆಣ್ಣು ಕೊಟ್ಟು ವಿವಾಹಾದಿಗಳನ್ನು ಮಾಡಬಹುದು.
ವೀರಶೈವ ಗೋತ್ರ ಪುರುಷರ ಬಗ್ಗೆ ವಿವರಣೆ:-
ಮಂಡ್ಯಾ ತಾಲೂಕು ರಾಯಿಶೆಟ್ಟಿಪುರ ಶಾಸನವು ಕ್ರಿ.ಶ 1185 ರಲ್ಲಿ ಸೋಮನಾಥ ದೇವರಿಗೆ ವೀರಶೈವ ಗಣಾಚಾರ ಸೂಚಿತ ದಾನ ಹೇಳುತ್ತದೆ. ಕ್ರಿ.ಶ.1305 ರ ಮರಡಿಪುರ ಶಾಸನದಲ್ಲಿ ವೀರಭದ್ರ, ಬೃಂಗಿನಾಥ ,ಘಂಟಾಕರ್ಣ, ಧಾರುಕ, ರೇಣುಕ, ಎಂಬ ಉಲ್ಲೇಖ ಸಿಗುತ್ತದೆ. ಪಂಚಪೀಠಗಳ ಗೋತ್ರ ಪುರುಷರ ಸ್ಮರಣೆ ಕಾಣಬಹುದು.
ಪಂಚಾಚಾರ್ಯರನ್ನು ಶಿವಸ್ವರೂಪದಲಿ ಶಿವನನ್ನು ಕಂಡುಕೊಳ್ಳುವ ಬಗೆ ಆಗಿದೆ. ಸಕಲದಲ್ಲಿ ಸರ್ವಾಂಗ ಸ್ವರೂಪ ಶಿವದ ವಿಕಸನವೆನಿಸಿದೆ.ಲಿಂಗ ಲಿಂಗದ ಪಂಚಮುಖಗಳು (ಸಧ್ಯೊಜಾತ ,ವಾಮದೇವ, ಅಘೋರ, ತತ್ಪುರುಷ, ಈಶಾನ)ಲಿಂಗದ ಮೂರ್ತಿರೂಪ ಶಿವ ಹೀಗೆ ತಾತ್ವಿಕ ವರ್ಣನೆಗಳು ಶಾಸನ ಮತ್ತು ಶಿಲ್ಪಗಳಲ್ಲಿ ಕಾಣಿಸಿಕೊಂಡಿದೆ.
ಕಮಂಡಲು, ಮಂತ್ರ, ಪ್ರವರ ಮುಂತಾದವು ಕಾಣಬಹುದು. ಏಕಾಕ್ಷರ ಪ್ರವರದಿಂದ ಪಂಚಾಕ್ಷರ ಪ್ರವರವೂ ಅವರಿಗಿದೆ. “ನ” ಕಾರ ಮಂತ್ರ ಬೀಜದಿಂದ “ಯ”ಕಾರ ಮಂತ್ರ ಬೀಜದವರೆಗೆ ನಮಃಶಿವಾಯ ಮಂತ್ರ ವ್ಯಾಪ್ತಿ ವಿಸ್ತರಿಸಲಾಗಿದೆ. ಪ್ರತಿ ಆಚಾರ್ಯ ಪೀಠಕ್ಕೆ ಮಹಾಸೂತ್ರಕ್ಕೆ 12 ಉಪಸೂತ್ರಗಳು ಇವೆ. ಶಿವಾಚಾರ್ಯ ರ ಹೆಸರನ್ನು ವರಗೊತ್ರ ಪುರುಷರನ್ನು ಕಾಣಬಹುದು.
ವೀರ, ನಂದಿ,ಬೃಂಗಿ,ವೃಷಭ ಮತ್ತು ಸ್ಕಂದರೆಂಬ ಐದು ಜನ ಶಿವಗಣರಿಂದ ವೀರಶೈವರು ಉತ್ಪನ್ನರಾಗಿರುತ್ತಾರೆ.
” ಈಶಾನಮುಖಸಂಜಾತಾ ವೀರಶೈವಾ ಮಹೌಜಸಃ| ವೀರೋ ನಂದೀ ತಥಾ ಬೃಂಗೀ ವೃಷಭಃ ಸ್ಕಂದ ಏವ ಚ || ( ಪಾಶುಪತ ತಂತ್ರ) ಅತಿವರ್ಣಾಶ್ರಮಾಃ ಪೂರ್ವೇ ನಂದ್ಯಾದಿಪ್ರಮಥಾಃ ಸ್ಮತಾಃ| ತತ್ಸಂತತಿಸಮಾಯಾತಾ ವೀರಶೈವಾ ಇತಿ ಶ್ರುತಾಃ|| ( ವೀರಶೈವ ಸದಾಚಾರ ಸಂಗ್ರಹ) ಹೀಗೆ ಐವರು ವೀರಶೈವರ ಗೋತ್ರಪುರುಷರೆಂದು ಕರೆಸಿಕೊಳ್ಳುತ್ತಾರೆ.
ಹಾಗಾದರೆ ವಿರಶೈವ ಗೋತ್ರಪುರುಷರ ಪತ್ನಿಯರಾರು? ಎಂಬ ಜಿಜ್ಞಾಸೆಯು ಉಂಟಾಗುತ್ತದೆ. ಅದಕ್ಕೆ ” ಕ್ರೀಯಾಸಾರ” ಮತ್ತು ” ವೀರಶೈವಾನಂದ- ಚಂದ್ರಿಕಾ” “ಲಿಂಗಪುರಾಣ” ಮುಂತಾದ ಗ್ರಂಥಗಳಲ್ಲಿ ಶಿವಗಣರ ಪತ್ನಿಯರು ಪ್ರತಿಪಾದಿಸಲ್ಪಟ್ಟಿದ್ದಾರೆ.
” ವೀರಭದ್ರೋಮಹಾತೇಜಾ ಹಿಮಕುಂದೇಂದುಸನ್ನಿಭಃ| ಭದ್ರಕಾಳೀಪ್ರೀಯೋ ನಿತ್ಯಂ ಮಾತೃಣಾಮಭಿರಕ್ಷಕಃ|| ( ಲಿಂಗ ಪುರಾಣ) ಲಿಂಗಪುರಾಣದ ಶ್ಲೋಕದಂತೆ “ವೀರ” ಅಥವಾ ” ವೀರಭದ್ರ’ ನೆಂಬ ಶಿವಗಣನಿಗೆ “ಭದ್ರಕಾಳಿ” ಎಂಬ ಪತ್ನಿ ಇದ್ದಳೆಂದು ಪ್ರತಿಪಾದಿಸಲ್ಪಟ್ಟಿದೆ. ಇಂದಿಗೂ ಕೂಡಾ ವೀರಭದ್ರ ದೇವಾಲಯದ ಪಕ್ಕದಲ್ಲಿಯೇ ಭದ್ರಕಾಳಿಯ ಮಂದಿರಗಳಿರುವುದನ್ನು ಕಾಣುತ್ತೇವೆ.
ವೀರಶೈವ ಕ್ರೀಯಾಸಾರ ಗ್ರಂಥದಲ್ಲಿ ಹೇಳಿದೆ ಒಂದೆಡೆ ” ಕುಂಡಲಿನೀಸಹಿತಾಯ ನಂದಿಕೇಶ್ವರಾಯ ನಮಃ, ಹ್ಲಾದಿನೀಸಹಿತಾಯ ಭೃಂಗಿಣೇ ನಮಃ, ಭದ್ರಸಹಿತಾಯ ವೃಷಭಾಯ ನಮಃ, ದೇವಯಾನೀಸಹಿತಾಯ ಸ್ಕಂದಾಯ ನಮಃ, (ಕ್ರೀಯಾಸಾರ ಭಾಗ2 ಪುಟ278 O.R.I ಮೈಸೂರು ಪ್ರಕಾಶನ) ಎಂಬುದಾಗಿ ನಂದೀಶ್ವರನಿಗೆ ಕುಂಡಲಿನೀ, ಬೃಂಗಿಗೆ ಹ್ಲಾದಿನೀ, ವೃಷಭನಿಗೆ ಭದ್ರಾ, ಸ್ಕಂದನಿಗೆ ದೇವಯಾನೀ ಎಂಬ ಪತ್ನಿಯರ ಉಲ್ಲೇಖ ಮಾಡುತ್ತಾರೆ.
ಶ್ರೀ ಮರಿತೊಂಟದಾರ್ಯರು ವೀರಶೈವನಂದಚಂದ್ರೀಕೆಯ ವಾದಕಾಂಡದಲ್ಲಿ ನಂದೀಕೇಶ್ವರನಿಗೆ “ಸುಯಶಾ” ಎಂಬ ಪತ್ನಿ ಇದ್ದಳೆಂಬುದನ್ನು ಪ್ರತಿಪಾದಿಸಿದ್ದಾರೆ. ಹೀಗೆ ವೀರಶೈವ ಗೋತ್ರ ಪುರುಷರಾದ ವೀರಭದ್ರನು ಭದ್ರಕಾಳಿಯನ್ನು, ನಂದಿಯು ಕುಂಡಲಿನೀ ಅಥವಾ ಸುಯಶಾಳನ್ನೂ, ಬೃಂಗಿಯು ಹ್ಲಾದಿನಿಯನ್ನೂ, ವೃಷಭನು ಭದ್ರಾಳನ್ನೂ ಮತ್ತು ಸ್ಕಂದನು ದೇವಯಾನಿಯನ್ನೂ ಪತ್ನಿಯರನ್ನಾಗಿ ಪರಿಗ್ರಹಿಸಿರುವುದು ಸಿದ್ದವಾಗುತ್ತದೆ.
” ಅಥ ಯದಿ ಸ್ತ್ರೀಲೋಕಕಾಮೋ ಭವತಿ” ಎಂಬ ಶ್ರುತಿಪ್ರಮಾಣಾನುಸಾರವಾಗಿ ನಿತ್ಯಮುಕ್ತರೂ, ಅನಾದಿಮುಕ್ತರೂ ಆದ ವೀರ,ನಂದಿ, ಬೃಂಗಿ, ವೃಷಭ ಮತ್ತು ಸ್ಕಂದರೆಂಬ ಈ ಶಿವಗಣರಿಗೆ ಸರ್ವಸ್ವಾತಂತ್ತ್ರ್ಯವಿರುವುದರಿಂದ ಲೀಲಾ ವಿನೋದಕ್ಕಾಗಿ ಇವರು ಸ್ತ್ರೀ ಪರಿಗ್ರಹವನ್ನು ಮಾಡಿರುವುದರಿಂದ ಇವರು ಸಂಸಾರಬಂಧನಕ್ಕೊಳಗಾಗಲಾರರು. ಇಂತಹ ಶಿವಗಣರ ಸಂತಾನವೇ ವೀರಶೈವರು. ಆದಕಾರಣ ವೀರಶೈವ ಕೆಲ ಸಮುದಾಯದವರು ಪೂಜಾದಿ ಕ್ರೀಯೆ ಮಾಡುವಾಗ ಸಂಕಲ್ಪದಲ್ಲಿ ತಮ್ಮ ಗೋತ್ರದ ಮೂಲಪುರುಷರ ಹೆಸರುಗಳನ್ನು ಹೇಳುವ ಪದ್ದತಿ ಇದೆ.
ಗೋತ್ರೊತ್ಪನ್ನರಾದ ವೀರಶೈವರಿಗೆಲ್ಲ ಆದಿಗುರುಗಳಾಗಿರುತ್ತಾರೆ.
ಪಂಚ ಗಣಾಧೀಶ್ವರರು
1 ರೇಣುಕಾ 4 ದಾರುಕ 3 ಘಂಟಾಕರ್ಣ 4 ಧೇನುಕರ್ಣ 5 ವಿಶ್ವಕರ್ಣ ಗಣಾಧ್ವೀಶ್ವರರು
ಕಲಿಯುಗದಲ್ಲಿ
1 ರೇಣುಕಾರಾಧ್ಯ 2 ಮುರುಳರಾಧ್ಯ 3 ಏಕೋರಾಮರಾಧ್ಯ 4 ಪಂಡಿತಾರಾಧ್ಯ 5 ವಿಶ್ವರಾದ್ಯ
ಪಂಚ ಗೋತ್ರ ಪುರುಷರು (ಗೋತ್ರಗಳು)*
1 ವೀರ (ವೀರಭದ್ರ) 2 ನಂದಿ 3 ಭೃಂಗಿ 4 ವೃಷಭ 5 ಸ್ಕಂದ (ಸುಬ್ರಮಣ್ಯ) ಗೋತ್ರಗಳು
ಪಂಚಾಚಾರ್ಯರ ಪಂಚ ಸೂತ್ರಗಳು*
1 ಪಡ್ವಿಡಿ ( ಕಾಮಿಕಾಗಮ), 2 ವೃಷ್ಷಿ ( ದೀಪ್ತಾಗಮ), 3 ಲಂಬನ (ವಿಜಯಾಗಮ), 4 ಮುಕ್ತಾ ಗುಚ್ಛ (ರೌರವಾಗಮ) 5 ಪಂಚವರ್ಣ (ಪ್ರೋದ್ಗಿತಾಗಮ), ಸೂತ್ರಗಳು
( ಈ ಮೇಲಿನ 5 ಸೂತ್ರಗಳಿಗೂ ಮತ್ತೆ ಉಪಸೂತ್ರಗಳು ಇರುತ್ತವೆ )
ವೀರಶೈವ ಗ್ರಂಥಗಳಾಧರಿಸಿ…
ನಂದಿ
ನಂದಿಯು ಈಶ್ವರನ ವಾಹನವಾದ ವೃಷಭ, ಶಿವ ಪ್ರಥಮಗಣಗಳ ಮುಖಂಡ. ಈತನನ್ನು ನಂದೀಶ್ವರ ಎಂದೂ ಕರೆಯಲಾಗಿದೆ. ಈತನ ತಾಯಿ ಕಾಮಧೇನು. ಸಹೋದರಿ ನಂದಿನಿ. ಶಾಲಂಕ ಮುನಿಯ ಮಗನಾದ, ಶಿಲೆಯನ್ನು ಆಹಾರ ಮಾಡಿಕೊಂಡು ತಪಸ್ಸು ಮಾಡುತ್ತಿದ್ದ ಶಿಲಾದಮುನಿ ಪುತ್ರ ಸಂತಾನಾರ್ಥವಾಗಿ ಮೂರು ಕೋಟಿ ವರ್ಷ ತಪಸ್ಸು ಮಾಡಿದ. ಈತನ ತಪಸ್ಸಿಗೆ ಮೆಚ್ಚಿದ ಶಿವ ಆಯೋನಿಜನಾದ ಮಗನನ್ನು ಅನುಗ್ರಹಿಸಿದ. ಋಷಿ ಯಜ್ಞಕ್ಕಾಗಿ ಭೂಶುದ್ಧಿಯಲ್ಲಿ ತೊಡಗಿರಲು ನಂದಿ ಶಿಶುರೂಪದಿಂದ ಕಾಣಿಸಿಕೊಂಡ.ಎಂದು ಕೆಲವು ಕಡೆ ಹೇಳುತ್ತಾರೆ
ತುಲಾ ತೇ ಕಥಿಕಾ ಹೈಷಾ ಆದ್ಯಾ ಸಾಮಾನ್ಯರೂಪಿಣೀ |
ಹಿರಣ್ಯ ಗರ್ಭ೦ ವಕ್ಷ್ಯಾಮಿ ದ್ವಿತೀಯಂ ಸರ್ವ ಸಿದ್ಧಿದಂ
ಹೈಮ ಮೇವಂ ಶುಭಂ ಕುರ್ಯ ತ್ಸರ್ವಾಲಂಕಾರ ಸ೦ಯುತಂ |
ಅಧಃ ಪಾತ್ರ ಸ್ಮರೇದ್ದೇನೀಂ ಗುಣತ್ರಯ ಸಮನ್ವಿತಾಂ
ಚತುರ್ವಿಂಶತಿ ಕಾಂ ದೇವೀಂ ಬ್ರಹ್ಮವಿಷ್ಣ್ವಗ್ನಿ ರೂಪಿಣೀಂ
|| ೧ ||
Thursday, 13 August 2020
ಶ್ರೀಶಿವರಹಸ್ಯಾಂತರ್ಗತಾ ಋಭುಗೀತಾ ಭಾಗ - 12
ನರನಾಡಿಗಳು
*ನರನಾಡಿಗಳು ಎಂದರೇನು ?* *ಇವುಗಳ ಮಹತ್ವ ಏನು ? ದೇಹದಲ್ಲಿ ಇವುಗಳು ಪ್ರತ್ಯೇಕವಾಗಿ ಇರುತ್ತವೆ *ನರ(nerves) -* *ಮೆದುಳು,ಮೆದುಳು* *ಬಳ್ಳಿ(ಬೆನ್ನು ಹುರಿ) ಮತ್ತು* *ಅ...
-
ಗರುಡ ಪುರಾಣ………… ಬರೇ ಓದೋಕೆ ಹೇಳಿ ಮಾತ್ರ ಅಲ್ಲ ಕೆಲವು ಜನ ಗರುಡ ಪುರಾಣ ಪುಸ್ತಕವ ಮನೆಲಿ ಮಡಿಕೊಂಡಿದ್ರು ಹೊರಗಡೆ ತೆಗೆಯಲ್ಲ ಅದರ ಬಗೆ ಏನು ಗೊತ್ತಿಲ್ಲ – ಅದೂ ಇರ್...
-
*Shloka 20* *अस्ति भाति प्रियं रूपं नाम चेत्यंशपञ्चकम्।* *आद्यत्रयं ब्रह्मरूपं जगद्रूपं ततो द्वयं ।।२०।।* asti bhāti priyaṃ rūpaṃ nāma cetya...
-
ಶ್ರೀ ಚಕ್ರ, ಶ್ರೀ ವಿಧ್ಯೆ ಪ್ರಸಕ್ತ ಕಾಲದಲ್ಲಿ ಶ್ರೀ ವಿಧ್ಯಾ ಎಂದರೆ ಒಂದು ಶಕ್ತಿ ದೇವತೆಯ ಉಪಾಸನೆ ಎಂದು ಅರ್ಥೈಸಿದ್ದಾರೆ. ಅಲ್ಲದೆ ಅದಕ್ಕೆ ಒಂದು ಯಂತ್ರ...
-
ಶ್ರೀ ಚಕ್ರ, ಶ್ರೀ ವಿಧ್ಯೆ - 2 ವಿನಾಶಕಾರೀ ಕ್ಷುದ್ರೋಪಾಸನೆ! ಎಚ್ಚರ!! (ಋತ್ವಿಕ್ ವಾಣಿ ಪತ್ರಿಕೆ - ಫೆಬ್ರವರಿ ೧೯೯೯) ಇನ್ನು ಪ್ರಸಕ್ತ ಕಾಲದಲ್ಲಿ ಬಳೆಯಲ್...
-
ಗರುಡ ಪುರಾಣ ಅಧ್ಯಾಯ – 8 ಆತುರದಾನನಿರೂಪಣಮ್ ಮರಣಕಾಲದಲ್ಲಿ ಮಾಡಬೇಕಾದ ದಾನಗಳ ನಿರೂಪಣೆ ಗರುಡ ಉವಾಚ ಆಮುಷ್ಮಿ ಕೀಂ ಕ್ರಿಯಾಂ...
-
💐 ಗೋಪುರ, ಕಳಶ, ಧ್ವಜಸ್ತಂಭ ಇವುಗಳಿಗೂ ದೇವಾಲಯಕ್ಕೂ ಏನು ಸಂಬಂಧ ✍️ ಕೆಲ ಪ್ರಾಂತ್ಯಗಳಲ್ಲಿ ದೇವಾಲಯಗಳಿಗೆ ಗೋಪುರವಿರುತ್ತದೆ. ಅವುಗಳಲ್ಲಿ ಮಹಾದ್ವಾರದ ಮೇಲ...
-
* ಭಾರತೀಯರ ಕಾಲ ಗಣನೆಯೆ - ಬದುಕಿನ ವಿಜ್ಞಾನವಿದು* ಪ್ರಕೃತಿಯೇ ಒಪ್ಪದ ಜನವರಿ 01 ರಂದು ಹೊಸ ವರ್ಷ ಆರಂಭ ಆಗವುದೆಂತು ? ಡಿಸೆಂಬರ್ ತಿಂಗಳು ಬಂತು ಅಂದರೆ ಸಾಕು, ಎಲ್ಲರ ...
-
*ನರನಾಡಿಗಳು ಎಂದರೇನು ?* *ಇವುಗಳ ಮಹತ್ವ ಏನು ? ದೇಹದಲ್ಲಿ ಇವುಗಳು ಪ್ರತ್ಯೇಕವಾಗಿ ಇರುತ್ತವೆ *ನರ(nerves) -* *ಮೆದುಳು,ಮೆದುಳು* *ಬಳ್ಳಿ(ಬೆನ್ನು ಹುರಿ) ಮತ್ತು* *ಅ...
-
ಶ್ರೀಶಿವರಹಸ್ಯಾಂತರ್ಗತಾ ಋಭುಗೀತಾ 3 ॥ ತೃತೀಯೋಽಧ್ಯಾಯಃ ॥ ಸೂತಃ – ತತೋ ಮಹೇಶಾತ್ ಸಂಶ್ರುತ್ಯ ಸೂತ್ರಾಣಿ ಋಭುರೇವ ಹಿ । ಕೈಲಾಸೇಶಂ ಮಹಾದೇವಂ ತುಷ್ಟಾವ ವಿನಯ...
-
✍️ಎಲ್ಲವನ್ನೂ ಮರೆತು ಏಕಾಗ್ರತೆಯಿಂದ ಹೋಗುವ ದೇವಾಲಯದ ಪ್ರವೇಶ ದ್ವಾರದಲ್ಲೇ ಮಿಥುನ ಶಿಲ್ಪ ಹಾಗೂ ರಾಕ್ಷಸ ಶಿಲ್ಪದ ಅವಶ್ಯಕತೆ ಏನು? 💐ದೇವಾಲಯ ರಚನಾ ವಿಧಾನ ನಿಯಮದಂತೆ ಪ್...