*ಬಿಡಬೇಡ ದೇವನ ಪಾದಗಳ*
**************************
ಬಿಡಬೇಡ ದೇವನ ಪಾದಗಳ
ಬಿಡಬೇಡ ಸದ್ಗುರುವಿನ ಪಾದಗಳ || ಪ ||
ಭಕ್ತರ ಕಷ್ಟವನ್ನು ಹರಿಸುವ ಶ್ರೀಪಾದ
ಚಂದನ ಪೂಸಿರುವ ಚಂದದ ಪಾದ
ದುಷ್ಟತನ ಮೆಟ್ಟಿದ ವಿಶಿಷ್ಟನ ಶ್ರೀಪಾದ
ಬಿಟ್ಟರೆ ಸಿಗದಂತ ಸದ್ಗುರುವಿನ ಪಾದ || ೧ ||
ಬಿಡಬೇಡ ದೇವನ ಪಾದಗಳ
ಬಿಡಬೇಡ ಸದ್ಗುರುವಿನ ಪಾದಗಳ || ಪ ||
ಪಾಪ ಶಾಪಗಳ ಕಳೆಯುವ ಶ್ರೀಪಾದ
ಕೋಪ ತಾಪಗಳ ತಣಿಸುವ ಪಾದ
ದೀನರನ್ನು ಉದ್ದಾರ ಮಾಡುವ ಶ್ರೀಪಾದ
ಬಿಡದೇ ಹಿಡಿದವರ ರಕ್ಷಿಸುವ ಪಾದ || ೨ ||
ಬಿಡಬೇಡ ದೇವನ ಪಾದಗಳ
ಬಿಡಬೇಡ ಸದ್ಗುರುವಿನ ಪಾದಗಳ || ಪ ||
ಕಷ್ಟದ ಪರ್ವತವ ದಾಟಿಸೊ ಶ್ರೀಪಾದ
ನಷ್ಟವ ಪರಿಹರಿಸಿ ಕಾಯುವ ಪಾದ
ದೃಷ್ಟಿ ಹೀನರಿಗೆ ಬೆಳಕು ಕೊಡುವ ಶ್ರೀಪಾದ
ಸೃಷ್ಟಿಗೊಡೆಯನ ಆ ದಿವ್ಯ ಪಾದ || ೩ ||
ಬಿಡಬೇಡ ದೇವನ ಪಾದಗಳ
ಬಿಡಬೇಡ ಸದ್ಗುರುವಿನ ಪಾದಗಳ || ಪ ||
ಕರುಣಾ ಸಾಗರನ ಸ್ವರ್ಣದ ಶ್ರೀಪಾದ
ಶರಣು ಬಂದವರ ರಕ್ಷಿಪ ಪಾದ
ಧರಣಿಯೊಳಪರೂಪ ಆಗಿಹ ಶ್ರೀಪಾದ
ಮರಣಕಾಲದಲಿ ಮುಕ್ತಿ ಕೊಡುವ ಪಾದವನು || ೪ ||
ಬಿಡಬೇಡ ದೇವನ ಪಾದಗಳ
ಬಿಡಬೇಡ ಸದ್ಗುರುವಿನ ಪಾದಗಳ || ಪ ||
No comments:
Post a Comment