ಗ ಪು -ಅಧ್ಯಾಯ - 5 ಭಾಗ 2
ದ್ರವ್ಯಾರ್ಥಂ ದೇವತಾಪೂಜಾಂ ಯಃ ಕರೋತಿ ದ್ವಿಜಾಧಮಃ ।
ಸ ವೈ ದೇವಲಕೋ ನಾಮ ಹವ್ಯಕವೇಷು ಗರ್ಹಿತಃ ॥೩೩॥
ಯಾವ ಬ್ರಾಹ್ಮಣ ಬರೇ ದ್ರವ್ಯಸಂಪಾದನಗೆ ಬೇಕಾಗಿ ದೇವತಾಪೂಜೆ ಮಾಡುತ್ತನೋ ಅವ ಖಂಡಿತವಾಗಿಯೂ ದೇವತಾಕಾರ್ಯಕ್ಕೆ ಎಂದು ಅನರ್ಹನಾಗಿರುತ್ತಾನೆ ಮತ್ತೆ ಅವ ಹವ್ಯ-ಕವ್ಯಗಳಲ್ಲಿ (ದೇವಕಾರ್ಯ, ಪಿತೃಕಾರ್ಯ) ಅನರ್ಹನಾಗಿರುತ್ತನೆ (ನಿಂದನೀಯನಾಗಿರುತ್ತಾನೆ ).
ಮಹಾಪಾತಕಜಾನ್ಘೋರಾನ್ನರಕಾನ್ಪ್ರಾಪ್ಯ ದಾರುಣಾನ್ ।
ಕರ್ಮಕ್ಷಯೇ ಪ್ರಜಾಯಂತೇ ಮಹಾಪಾತಕಿನಸ್ತ್ವಿಹ ॥೩೪॥
ಮಹಾಪಾತಕಗಳ ಮಾಡಿದವು ತಮ್ಮ ಪಾಪಗಳಿಂದ ಘೋರವಾದ ನರಕಲ್ಲಿ ದಾರುಣವಾದ ಫಲವ ಅನುಭವುಸಿ, ಪಾತಕಿ ಕರ್ಮ ಕ್ಷಯವಾದಗ ಮತ್ತೆ ಇಹಲೋಕಲ್ಲಿ ಹುಟ್ಟುತ್ತರೆ
ಖರೋಷ್ಟ್ರಮಹಿಷೀಣಾಂ ಹಿ ಬ್ರಹ್ಮಹಾ ಯೋನಿಮೃಚ್ಛತಿ ।
ವೃಕಾಶ್ವಾನಶೃಗಾಲಾನಾಂ ಸುರಾಪಾ ಯಾಂತಿ ಯೋನಿಷು ॥೩೫॥
ಬ್ರಹ್ಮ ಹತ್ಯೆ ಮಾಡುವವ ಕತ್ತೆ, ಒಂಟೆ, ಎಮ್ಮೆ ಗರ್ಭಲ್ಲಿ ಹುಟ್ಟುತ್ತನೆ , ಮದ್ಯಪಾನ ಮಾಡುವವ ತೋಳ, ನಾಯಿ, ನರಿಗಳ ಗರ್ಭದಲ್ಲಿ ಹುಟ್ಟುತ್ತಾನೆ .
ಕೃಮಿಕೀಟಪತಂಗತ್ವಂ ಸ್ವರ್ಣಸ್ತೇಯೀ ಸಮಾಪ್ನುಯಾತ್ ।
ತೃಣಗುಲ್ಮಲ ಲತಾತ್ವಂ ಚ ಕ್ರಮಶೋ ಗುರುತಲ್ಪಗಃ ॥೩೬॥
ಚಿನ್ನವ ಅಪಹರುಸುವವ ಕ್ರಿಮಿ, ಕೀಟ, ಪತಂಗ ಮುಂತಾದವಾಗಿ ಗುರುಪತ್ನಿಯ ಅನುಭವುಸುವವ ಹುಲ್ಲು, ಪೊದರು, ಬಳ್ಳಿ ಮುಂತಾದ ಜನ್ಮಗಳ ಕ್ರಮವಾಗಿ ಹೊಂದುತ್ತಾನೆ
ಪರಸ್ಯ ಯೋಷಿತಂ ಹೃತ್ವಾ ನ್ಯಾಸಾಪಹರಣೇನ ಚ ।
ಬ್ರಹ್ಮಸ್ವಹರಣಾಚ್ಚೀವ ಜಾಯತೇ ಬ್ರಹ್ಮರಾಕ್ಷಸಃ ॥೩೭॥
ಪರಸ್ತ್ರೀಯ ಅಪಹರುಸುವವ ಒತ್ತೆ ಮಡಿಗಿದ್ದರ ತಿಂದು ಹಾಕುವವ, ಬ್ರಹ್ಮಜ್ಞಾನಿಯ ಸೊತ್ತನ್ನು ಅಪಹರುಸುವವ ಬ್ರಹ್ಮರಾಕ್ಷಸ ಆಗುತ್ತಾನೆ
ಬ್ರಹ್ಮಸ್ವಂ ಪ್ರಣಯಾಧ್ಬುಕ್ತಂ ದಹತ್ಯಾಸಪ್ತಮಂ ಕುಲಮ್ ।
ಬಲಾತ್ಕಾರೇಣ ಚೌರ್ಯೇಣ ದಹತ್ಯಾಚಂದ್ರತಾರಕಮ್ ॥೩೮॥
ಬ್ರಹ್ಮಜ್ಞಾನಿಯ ಆಸ್ತಿಯ ಗೆಳೆಯನ ಹಾಗೆ ನಟಿಸಿ ತಿನ್ನುವವನು (ಪಾಪತ್ವ) ಏಳು ತಲೆಮಾರುಗಳವರೇಗೆ ಸುಡುತ್ತುನೆ .
ಬಲಾತ್ಕಾರದಿಂದ ಮತ್ತೆ ಕಳ್ಳತನದಿಂದ ತಿನ್ನುವನು ಚಂದ್ರ ನಕ್ಷತ್ರಗಳು ಇಪ್ಪನ್ನಾರ ಸುಡುತ್ತದೆ
ಲೋಹಚೂರ್ಣಾಶ್ಮ ಚೂರ್ಣೇ ಚ ವಿಷಂ ಚ ಜರಯೇನ್ನರಃ ।
ಬ್ರಹ್ಮಸ್ವಂ ತ್ರಿಷು ಲೋಕೇಷು ಕಃ ಪುಮಾಂಜರಯಿಷ್ಯತಿ ॥೩೯॥
ಲೋಹದ ಚೂರ್ಣ, ಕಲ್ಲಿನ ಚೂರ್ಣ (ಹುಡಿ) ಮತ್ತೆ ವಿಷವ ಮನುಷ್ಯ ಜೀರ್ಣಿಸಿಕೊಂಡಂತೆ ಆದರೆ ಬ್ರಹ್ಮಜ್ಞಾನಿಯ ಸೊತ್ತಿನ ಅಪಹರಿಸುವವ ಮೂರು ಲೋಕಗಳಲ್ಲಿಯೂ ಯಾವ ಮನುಷ್ಯ ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ
ಬ್ರಹ್ಮಸ್ವರಸಪುಷ್ಟಾನಿ ವಾಹನಾನಿ ಬಲಾನಿ ಚ ।
ಯುದ್ಧಕಾಲೇ ವಿಶೀರ್ಯಂತೇ ಸೈಕತಾಃ ಸೇತವೋ ಯಥಾ ॥೪೦॥
ಬ್ರಹ್ಮಜ್ಞಾನಿಯ ಧನದಿಂದ ರಸವತ್ತಾಗಿ ಪುಷ್ಟಿಹೊಂದಿದ ವಾಹನ ಮತ್ತೆ ಸೈನ್ಯಗಳು ಯುದ್ಧಕಾಲಲ್ಲಿ ಮರಳಿನ ಸೇತುವೆಯ ಹಾಗೆ ಒಡದು ಪುಡಿಪುಡಿಯಾಗುವವು
ದೇವದ್ರವ್ಯೋಪಭೋಗೇನ ಬ್ರಹ್ಮಸ್ವಹರಣೇನ ಚ ।
ಕುಲಾನ್ಯಕುಲತಾಂ ಯಾಂತಿ ಬ್ರಾಹ್ಮಣಾತಿಕ್ರಮೇಣ ಚ ॥೪೧॥
ದೇವರ ದ್ರವ್ಯವ ಉಪಭೋಗುಸುವದರಿಂದ ಮತ್ತೆ ಬ್ರಹ್ಮಸ್ತ್ವವನ್ನು ಅಪಹರಿಸುವದರಿಂದ, ಬ್ರಾಹ್ಮಣನ ಅನಾದರಣೆ ಮಾಡುವದರಿಂದ ಅವನ ಕುಲವು ನಷ್ಟವಾಗಿ ಹೋಗುವವು
ಸ್ವಮಾಶ್ರಿತಂ ಪರಿತ್ಯಜ್ಯ ವೇದಶಾಸ್ತ್ರ ಪರಾಯಣಮ್ ।
ಅನ್ಯೇಭ್ಯೋ ದೀಯತೇ ದಾನಂ ಕಥ್ಯತೇsಯಮತಿಕ್ರಮಃ ॥೪೨॥
ತನ್ನ ಆಶ್ರಯಿಸಿಪ್ದ ವೇದಶಾಸ್ತ್ರಪಾರಂಗತ ಬಿಟ್ಟು ಇತರರಿಗೆ ದಾನ ಕೊಟ್ರೆ ಅದು (ಬ್ರಾಹ್ಮಣನ) ಅತಿಕ್ರಮ ಎಂದು ಹೇಳಲ್ಪಡುತ್ತದೆ
.ಬ್ರಾಹ್ಮಣಾತಿಕ್ರಮೋ ನಾಸ್ತಿ ವಿಪ್ರೇ ವೇದವಿವರ್ಜಿತೇ ।
ಜ್ವಲಂತಮಗ್ನಿಮುತ್ಸೃಜ್ಯ ನಹಿ ಭಸ್ಮನಿ ಹೂಯತೇ ॥೪೩॥
ವೇದವ ತ್ಯಜಿಸಿದ ವಿಪ್ರನ ಬಿಡುವದು ಬ್ರಾಹ್ಮಣಾತಿಕ್ರಮ ಎನಿಸುತ್ತಿಲ್ಲವೇ . ಉರಿವ ಅಗ್ನಿಯ ಬಿಟ್ಟಕಿ ಬೂದಿಲಿ ಹೋಮ ಮಾಡಿದಂತೆ
ಅತಿಕ್ರಮೇ ಕೃತೇ ತಾರ್ಕ್ಷ್ಯ ಭುಕ್ತ್ವಾ ಚ ನರಕಾನ್ಕ್ರಮಾತ್ ।
ಜನ್ಮಾಂಧಃ ಸಂದರಿದ್ರಃ ಸ್ಯಾನ್ನ ದಾತಾ ಕಿಂತು ಯಾಚಕಃ ॥೪೪॥
ಹೇ ಪಕ್ಷಿಯೇ (ಗರುಡನೇ)!, ಬ್ರಾಹ್ಮಣನ ಅನಾದರ (ಅತಿಕ್ರಮ) ಮಾಡಿದವ ಕ್ರಮವಾಗಿ ನರಕವ ಅನುಭವುಸಿ ಮತ್ತೆ ಹುಟ್ಟುಕುರುಡನೂ, ದರಿದ್ರನೂ ಆಗಿ ದಾನಿಯಾಗದೆ ಯಾಚಕ (ಬೇಡುವವ) ಆಗುತ್ತಾನೆ
.ಸ್ವದತ್ತಾಂ ಪರದತ್ತಾಂ ವಾ ಯೋ ಹರೇಚ್ಚ ವಸುಂಧರಾಮ್ ।
ಷಷ್ಟಿವರ್ಷ ಸಹಸ್ರಾಣಿ ವಿಷ್ಥಾಯಾಂ ಜಾಯತೇ ಕೃಮಿಃ ॥೪೫॥
ತಾನೇ ದಾನ ಕೊಟ್ಟಂತ ಅಥವಾ ಇತರರು ದಾನ ಕೊಟ್ಟಿಂತ ಭೂಮಿಯ ಅಪಹರಿಸುವವ ಅರುವತ್ತು ಸಾವಿರ ವರ್ಷಗಳ ಕಾಲ ಮಲದಲ್ಲಿ ಕ್ರಿಮಿಯಾಗಿ ಇರುತ್ತನೆ
ಸ್ವಯಮೇವ ಚ ಯೋ ದತ್ತ್ವಾ ಸ್ವಯಮೇವಾಪಕರ್ಷತಿ ।
ಸ ಪಾಪೀ ನರಕಂ ಯಾತಿ ಯಾವದಾಭೂತಸಂಪ್ಲವಮ್ ॥೪೬॥
ತನ್ನಿಂದಲೇ ದಾನ ಕೊಡಲ್ಪಟ್ಟವನು ತಾನೇ ಕಿತ್ತುಕೊಂಡರೆ ಪಾಪಿಯು ಪ್ರಳಯ ಕಾಲದವರೆಗೆ ನರಕಲ್ಲಿ ಇರುತ್ತನೆ
ದತ್ತ್ವಾ ವೃತ್ತಿಂ ಭೂಮಿದಾನಂ ಯತ್ನತಃ ಪರಿಪಾಲಯೇತ್ ।
ನ ರಕ್ಷತಿ ಹರೇದ್ಯಸ್ತು ಸ ಪಂಗುಃ ಶ್ವಾsಭಿಜಾಯತೇ ॥೪೭॥
ಉದ್ಯೋಗವನ್ನೂ (ವೃತ್ತಿ = ಜೀವಿಕೆ- ಜೀವನ ನಿರ್ವಹಣೆಯ ಸಾಧನ), ಭೂದಾನವನ್ನೂ ಕೊಟ್ಟು ಅದರ ಪ್ರಯತ್ನಪೂರ್ವಕವಾಗಿ ಪಾಲಿಸಬೇಕು ಅದರ ರಕ್ಷಿಸಬೇಕು ಅಪಹರಿಸುವವ ಕುಂಟನಾಯಿ ಆಗುತ್ತಾನೆ
ವಿಪ್ರಸ್ಯ ವೃತ್ತಿಕರಣೇ ಲಕ್ಷಧೇನುಫಲಂ ಭವೇತ್ ।
ವಿಪ್ರಸ್ಯ ವೃತ್ತಿಹರಣಾನ್ಮರ್ಕಟಃ ಶ್ವಾ ಕಪಿರ್ಭವೇತ್ ॥೪೮॥
ವಿಪ್ರನಿಗೆ ಜೀವನವ (ಜೀವಿಕೆ) ಕೊಟ್ರೆ ಒಂದು ಲಕ್ಷ ಗೋವುಗಳ ದಾನ ಮಾಡಿದ ಫಲ ಬರುತ್ತೆ . ವಿಪ್ರನ ಜೀವಿಕೆಯ ಅಪಹರಿ ಸುವವ ಜೇಡ ನಾಯಿ ಮತ್ತೆ ಕಪಿಯಾಗಿ ಹುಟ್ಟುತ್ತನೆ
ಏವಮಾದೀನಿ ಚಿಹ್ನಾನಿ ಯೋನಯಶ್ಚ ಖಗೇಶ್ವರ ।
ಸ್ವಕರ್ಮವಿಹಿತಾ ಲೋಕೇ ದೃಷ್ಯಂತೇsತ್ರ ಶರೀರಿಣಾಮ್ ॥೪೯॥
ಎಲೈ ಪಕ್ಷೀಂದ್ರ!, ತಮ್ಮ ಕರ್ಮಕ್ಕನುಸಾರವಾಗಿ ಈ ಲೋಕಲ್ಲಿ ಇವೇ ಮೊದಲಾದ ಚಿಹ್ನೆಗಳು ಮತ್ತೆ ಜನ್ಮಗಳು ಶರೀರಧಾರಿಗಳಲ್ಲಿ ಕಂಡುಬರುತ್ತದೆ
ಏವಂ ದುಷ್ಕರ್ಮಕರ್ತಾರೋ ಭುಕ್ತ್ವಾ ನಿರಯಯಾತನಾವ್ ।
ಜಾಯಂತೇ ಪಾಪಶೇಷೇಣ ಪ್ರೋಕ್ತಾ ಸ್ವೇತಾಸು ಯೋನಿಷು ॥೫೦॥
ಈ ರೀತಿ ಬೇಡಗಟ್ಟೆ ಕೆಲಸಗಳ ಮಾಡಿದವರು ನರಕಯಾತನೆಯ ಅನುಭವುಸಿ ಉಳಿದ ಪಾಪಗಳ ಅನುಭವುಸಲೇಬೇಕು ಈಗ ಹೇಳಿದ ಈ ಜೀವ ವರ್ಗಗಳಲ್ಲಿ ಹುಟ್ಟುತ್ತರೆ .
ತತೋ ಜನ್ಮ ಸಹಸ್ರೇಷು ಪ್ರಾಪ್ಯ ತಿರ್ಯಕ್ಶರೀರತಾವ್ ।
ದುಃಖಾನಿ ಭಾರವಹನೋದ್ಭವಾದೀನಿ ಲಭಂತಿ ತೇ ॥೫೧॥
ಮತ್ತೆ ಸಾವಿರಾರು ಜನ್ಮಗಳಲ್ಲಿ ಪ್ರಾಣಿ (ತಿರ್ಯಕ್) ಶರೀರಗಳ ಪಡದು, ಭಾರ ಹೊರ್ತದು ಮುಂತಾದ ದುಃಖಗಳ ಪಡೆಯುತ್ತಾರೆ
ಪಕ್ಷಿದುಃಖಂ ತತೋ ಭುಕ್ತ್ವಾ ವೃಷ್ಟಿಶೀತಾತಪೋದ್ಭವಮ್।
ಮಾನುಷಂ ಲಭತೇ ಪಶ್ಚಾತ್ಸಮೀಭೂತೇ ಶುಭಾಶುಭೇ ॥೫೨॥
ಮತ್ತೆ ಪಕ್ಷಿಯಾಗಿ ಮಳೆ ಶೀತ ಮತ್ತೆ ಬಿಸಿಲಿನಿಂದ ಉಂಟದ ದುಃಖವ ಅನುಭವುಸಿ ಮತ್ತೆ ಶುಭಾಶುಭ ಕರ್ಮಗಳನ್ನು ಸಮವಾದಾಗ ಮನುಷ್ಯ ಶರೀರವ ಪಡೆತ್ತನೆ
ಸ್ತ್ರೀಪುಂಸೋಸ್ತು ಪ್ರಸಂಗೇನ ಭೂತ್ವಾ ಗರ್ಭೇ ಕ್ರಮಾದಸೌ ।
ಗರ್ಭಾದಿಮರಣಾಂತಂ ಚ ಪ್ರಾಪ್ಯ ದುಃಖಂ ಮ್ರಿಯೇತ್ಪುನಃ ॥೫೩॥
ಸ್ತ್ರೀ ಪುರುಷನ ಸಂಬಂಧದ ಗರ್ಭಲ್ಲಿ ಉತ್ಪನ್ನವಾಗಿ ಅನುಕ್ರಮವಾಗಿ ಗರ್ಭದಿಂದ ಹಿಡುದು ಮೃತ್ಯುವಿನ ವರೇಗೆ ದುಃಖವ ಅನುಭವುಸಿ ಮರಣ ಹೊಂದುತ್ತಾ ನೆ
ಸಮುತ್ಪತ್ತೇರ್ವಿನಾಶಶ್ಚ ಜಾಯತೇ ಸರ್ವದೇಹಿನಾಮ್ ।
ಏವಂ ಪ್ರವರ್ತಿತಂ ಚಕ್ರಂ ಭೂತಗ್ರಾಮೇ ಚತುರ್ವಿಧೇ ॥೫೪॥
ಸರ್ವಜೀವಿಗಳಲ್ಲಿಯೂ ಉತ್ಪತ್ತಿ ಮತ್ತೆ ವಿನಾಶ ಉಂಟಾಗುವವು ಈ ರೀತಿಯಾಗಿ ನಾಲ್ಕುವಿಧ ಭೂತಶರೀರಗಳಲ್ಲಿ ಜನ್ಮ- ಮೃತ್ಯು ಚಕ್ರ ಸುತ್ತಿಕೊಂಡು ಡಿರುತ್ತರೆ (ನಾಲ್ಕು ವಿಧ ಭೂತಶರೀರಂಗೊ – ೧.ಉದ್ಭಿಜ = ವೃಕ್ಷ ಲತಾ ಗುಲ್ಮಾದಿ, ೨.ಸ್ವೇದಜ = ತಿಗಣೆ, ಹೇನು, ೩.ಅಂಡಜ = ಪಕ್ಷಿ, ಕೋಳಿ, ಹಾವು, ಆಮೆ ಇತ್ಯಾದಿ, ೪. ಜರಾಯುಜ = ಮನುಷ್ಯ, ಪಶು ಇತ್ಯಾದಿ ಜರಾಬಳ್ಳಿಯೊಟ್ಟಿಂಗೆ ಹುಟ್ಟುವ ಪ್ರಾಣಿಗಳು ).
ಘಟೀಯಂತ್ರಂ ಯಥಾ ಮರ್ತ್ಯಾ ಭ್ರಮಂತಿ ಮಮ ಮಾಯಯಾ।
ಭೂಮೌ ಕದಾಚಿನ್ನರಕೇ ಕರ್ಮಪಾಶಸಮಾವೃತಾಃ ॥೫೫॥
ಮನುಷ್ಯರು ಎನ್ನ ಮಾಯೆಯಿಂದ ಕರ್ಮಪಾಶದಿಂದ ಬಂಧಿಸಲ್ಪಟ್ಟವರಾಗಿ ಒಂದು ಭೂಮಿಲಿ ಮತ್ತೊಂದರ ನರಕದ ಲ್ಲಿ ಗಂಟೆಯಂತ್ರದ (ಮುಳ್ಳಿನಹಾಗೆ) ಹಾಗೆ ತಿರುಗುತ್ತಾ ಇರುತ್ತರೆ
ಅದತ್ತ ದಾನಾಚ್ಚ ಭವೇದ್ದರಿದ್ರೋ ದರಿದ್ರಭಾವಾಚ್ಚ ಕರೋತಿ ಪಾಪಮ್ ।
ಪ್ರಾಪಪ್ರಭಾವಾನ್ನರಕೇ ಪ್ರಯಾತಿ ಪುನರ್ದರಿದ್ರಃ ಪುನರೇವ ಪಾಪಿ ॥೫೬॥
ದಾನ ಮಾಡದೆ ಇರುವ ದರಿದ್ರನಾಗುತ್ತಾನೆ ದರಿದ್ರನಾಗಿ ಪಾಪವ ಮಾಡುತ್ತನೆ ಪಾಪದ ಪ್ರಭಾವದಿಂದ ನರಕಕ್ಕೆ ಹೋಗುತ್ತಾನೆ , ಪುನಃ ದರಿದ್ರನಾಗುತ್ತನೆ , ಪುನಃ ಪಾಪಿಯಾಗುತ್ತಾನೆ
ನಾಭುಕ್ತಂ ಕ್ಷೀಯತೇ ಕರ್ಮಕಲ್ಪಕೋಟಿಶತೈರಪಿ ॥೫೭॥
ತಾನು ಮಾಡಿದ ಶುಭಾಶುಭ ಕರ್ಮಗಳ ಅವಶ್ಯವಾಗಿಯೂ ಅನುಭವಿಸಲೇ ಬೇಕು. ಕರ್ಮಗಳನ್ನು ಅನುಭvisa ನೂರು ಕೋಟಿ ಕಲ್ಪಗಳಾದರೂ ನಾಶ ಆಗುವುದು
ಇತಿ ಗರುಡಪುರಾಣೇ ಸಾರೋದ್ಧಾರೇ ಪಾಪಚಿಹ್ನನಿರೂಪಣಂ ನಾಮ ಪಂಚಮೋsಧ್ಯಾಯಃ ॥
ಇಲ್ಲಿಗೆ ಗರುಡಪುರಾಣಲ್ಲಿ ಸಕಲಶಾಸ್ತ್ರಗಳ ಸಾರವಾದ ‘ಸಾರೋದ್ಧಾರ’ ವಿಭಾಗಲ್ಲಿ ಪಾಪ ಚಿಹ್ನೆಗಳ ನಿರೂಪಣೆ ಎನ್ನುವ ಐದನೇ ಅಧ್ಯಾಯ ಮುಗಿದದ್ದು .
No comments:
Post a Comment