ಗ ಪು ಅಧ್ಯಾಯ 5 ಭಾಗ 1
ಪಾಪಚಿಹ್ನನಿರೂಪಣಮ್ ಪಾಪಚಿಹ್ನೆಗಳ ನಿರೂಪಣೆ
ಗರುಡ ಉವಾಚ
ಯೇನ ಯೇನ ಚ ಪಾಪೇನ ಯದ್ಯಚ್ಚಿಹ್ನಂ ಪ್ರಜಾಯತೇ ।
ಯಾಂ ಯಾಂ ಯೋನಿಂ ಚ ಗಚ್ಛಂತಿ ತನ್ಮೇ ಕಥಯ ಕೇಶವ ॥೦೧॥
ಗರುಡ° ಹೇಳುತ್ತ°- ಹೇ ಕೇಶವ!, ಏವ ಏವ ಪಾಪಗಳಿಂದ ಏವ ಏವ ಚಿಹ್ನೆಗಳು ಉಂಟಾದವು ಯಾವ ಯಾವ ಯೋನಿಗೆ (ಗರ್ಭಕ್ಕೆ) ಹೋಗುವವು . ಅದರ ಬಗ್ಗೆ ನನಗೆ ಹೇಳು.
ಶ್ರೀಭಗವಾನುವಾಚ
ಯೈಃ ಪಾಪೈರ್ಯಾಂತಿ ಯಾಂ ಯೋನಿಂ ಪಾಪಿನೋ ನರಕಾಗತಾಃ ।
ಯೇನ ಪಾಪೇನ ಯಚ್ಚಿಹ್ನಂ ಜಾಯತೇ ಮಮ ತಚ್ಛೃಣು ॥೦೨॥
ಭಗವಂತ° ಹೇಳಿದ° – ನರಕದಿಂದ ಬಂದ ಪಾಪಿಗಳು ಯಾವ ಪಾಪಗಳಿಂದ ಯಾವ ಗರ್ಭಕ್ಕೆ ಹೋಗುವವು, ಯಾವ ಪಾಪಕ್ಕೆ ಯಾವ ಚಿಹ್ನೆ ಉಂಟಾದವು ಹೇಳುತ್ತೇನೆ ಕೇಳು.
ಬ್ರಹ್ಮ ಹಾ ಕ್ಷಯಾರೋಗೀ ಸ್ಯಾದ್ಗೋಘ್ನಃ ಸ್ಯಾತ್ಕುಬ್ಜಕೋ ಜಡಃ ।
ಕನ್ಯಾಘಾತೀ ಭವೇತ್ಕುಷ್ಠೀ ತ್ರಯಶ್ಚಾಂಡಾಲಯೋನಿಷು ॥೦೩॥
ಬ್ರಹ್ಮಹತ್ಯೆ ಮಾಡಿದವ° ಕ್ಷಯರೋಗಿಯೂ, ಗೋಹತ್ಯೆ ಮಾಡಿದವ ಗೂನು ಬೆನ್ನಿನವನಾಗಿ ಜಡನೂ, ಕನ್ಯಾಹತ್ಯೆ ಮಾಡಿದವ ಕುಷ್ಠರೋಗಿಯೂ ಆಗುತ್ತಾನೆ ಈ ಮೂವರೂ ಚಾಂಡಾಲರಾಗಿ ಹುಟ್ಟುತ್ತಾರೆ
ಸ್ತ್ರೀಘಾತೀ ಗರ್ಭಪಾತೀ ಚ ಪುಲಿಂದೋ ರೋಗವಾನ್ಭವೇತ್ ।
ಅಗಮ್ಯಾಗಮನಾತ್ಷಂಢೋ ದುಶ್ಚರ್ಮಾ ಗುರುತಲ್ಪಗಃ ॥೦೪॥
ಸ್ತ್ರೀಹತ್ಯೆ ಮಾಡಿದವ ಮತ್ತೆ ಗರ್ಭಪಾತ ಮಾಡಿಸಿದವ ಅನಾಗರಿಕನಾಗಿ (ಬೇಡನಾಗಿ) ರೋಗಿಯಾಗಿ ಹುಟ್ಟುತ್ತ ಅಗಮ್ಯಸ್ತ್ರೀಯರಲ್ಲಿ ಗಮನ ಮಾಡಿದವ ಷಂಡನಾಗಿಯೂ, ಗುರುಪತ್ನಿಯ ಗಮನ ಮಾಡಿದವ ಕೆಟ್ಟ ಚರ್ಮರೋಗಿಯಾಗಿಯೂ ಹುಟ್ಟುತ್ತಾನೆ .
ಮಾಂಸಭೋಕ್ತಾsತಿರಕ್ತಾಂಗಃ ಶ್ಯಾಮದಂತಸ್ತು ಮದ್ಯಪಃ ।
ಅಭಕ್ಷ್ಯಭಕ್ಷಕೋ ಲೌಲ್ಯಾದ್ಬ್ರಾಹ್ಮಣಃ ಸ್ಯಾನ್ಮಹೋದರಃ ॥೦೫॥
ಮಾಂಸ ತಿನ್ನುವವನು ಅತಿ ಕೆಂಪು ಬಣ್ಣದ ಶರೀರವುಳ್ಳವನೂ, ಮದ್ಯಪಾನ ಮಾಡುವವ ಕಪ್ಪು ಹಲ್ಲುಗಳುಳ್ಳವನೂ, ತಿನ್ನಲಾಗದಿದ್ದರು ಚಪಲತೆಯಿಂದ ತಿನ್ನುವ ಬ್ರಾಹ್ಮಣ ಮಹೋದರ (ಜಲೋದರ) ರೋಗಿಯೂ ಆಗುತ್ತಾನೆ
ಅದತ್ತ್ವಾಮಿಷ್ಟಮಶ್ನಾತಿ ಸ ಭವೇದ್ಗಲಗಂಡವಾನ್ ।
ಶ್ರಾದ್ಧೇsನ್ನಮಶುಚಿಂ ದತ್ತ್ವಾಚಿತ್ರಕುಷ್ಠಿ ಪ್ರಜಾಯತೇ ॥೦೬॥
ಇಷ್ಟವಾದ ತಿಂಡಿಯ ಇನ್ನೊಬ್ರಿಗೆ ಕೊಡದೆ ತಿನ್ನುವವ ಗಳಗಂಡ ರೋಗಿ ಆಗುತ್ತಾನೆ . ಶ್ರಾದ್ಧಲ್ಲಿ ಅಶುಚಿ ಅನ್ನವ ಕೊಡುವವರು ಚಿತ್ರಕುಷ್ಠರೋಗಿ ಆಗುತ್ತಾನೆ
.
ಗುರೋರ್ಗರ್ವೇಣಾವಮಾನಾದಪಸ್ಮಾರೀ ಭವೇನ್ನರಃ ।
ನಿಂದಕೋ ವೇದಶಾಸ್ತ್ರಾಣಾಂ ಪಾಂಡುರೋಗಿ ಭವೇದ್ಧ್ರುವಮ್ ॥೦೭॥
ಗರ್ವದಿಂದ ಗುರುಗಳಿಗೆ ಅವಮಾನ ಮಾಡಿದ ಮನುಷ್ಯ ಅಪಸ್ಮಾರ ರೋಗವನ್ನು ಆನುಭವಿಸುತ್ತಾನೆ ವೇದಶಾಸ್ತ್ರಗಳ ನ್ನು ನಿಂದಿಸಿದವನು ಖಂಡಿತವಾಗಿಯೂ ಪಾಂಡುರೋಗಿ ಆಗುತ್ತಾನೆ
ಕೂಟಸಾಕ್ಷೀ ಭವೇನ್ಮೂಕಃ ಕಾಣಃ ಸ್ಯಾತ್ಪಂಕ್ತಿಭೇದಕಃ ।
ಅನೋಷ್ಠಃ ಸ್ಯಾದ್ವಿವಾಹಘ್ನೋ ಜನ್ಮಾಂಧಃ ಪುಸ್ತಕಂ ಹರೇತ್ ॥೦೮॥
ಸುಳ್ಳುಸಾಕ್ಷಿ ಹೇಳುವವ ಮೂಕನಾವುತ್ತ. ಪಂಕ್ತಿಭೇದ ಮಾಡುವವ ಒಂದು ಕಣ್ಣು ಕುರುಡನೂ, ವಿವಾಹಕ್ಕೆ ವಿಘ್ನತಂದವ ತುಟಿ ಇಲ್ಲದವನಾಗಿಯೂ, ಪುಸ್ತಕ ಕಳ್ಳತನ ಮಾಡುವವನು ಹುಟ್ಟುಕುರುಡನೂ ಆಗುತ್ತಾನೆ
.
ಗೋಬ್ರಾಹ್ಮಣಪದಾಘಾತಾತ್ಖಂಜಃ ಪಂಗುಶ್ಚ ಜಾಯತೇ ।
ಗದ್ಗದೋsನೃತವಾದೀ ಸ್ಯಾತ್ತಚ್ಛ್ರೋತಾ ಬಧಿರೋ ಭವೇತ್ ॥೦೯॥
ಗೋವಿನ ಮೆಟ್ಟುವವನು ಒಂದು ಕಾಲಿಲ್ಲದವನಾಗಿಯೂ, ಬ್ರಾಹ್ಮಣನ ಮೆಟ್ಟುವವನು ಎರಡು ಕಾಲಿಲ್ಲದವನಾಗಿಯೂ ಆಗುತ್ತಾನೆ ಸುಳ್ಳು ಹೇಳುವವನು ಕೊಕ್ಕಳಿಕೆ ಬಾಯಿಯವನೂ, ಅದರ ಕೇಳುವವ ಕಿವುಡನೂ ಆಗುತ್ತಾನೆ
ಗರದಃ ಸ್ಯಾಜ್ಜಡೋನ್ಮತ್ತಃ ಖಲ್ವಾಟೋsಗ್ನಿ ಪ್ರದಾಯಕಃ ।
ದುರ್ಭಗಃ ಪಲವಿಕ್ರೇತಾ ರೋಗವಾನ್ಪರಮಾಂಸಭುಕ್ ॥೧೦॥
ವಿಷಕೊಡುವವನು ಮರ್ಳನೂ, ಕಿಚ್ಚು ಹಚ್ಚುವವನು ಬೋಳು ತಲೆಯವನೂ, ಮಾಂಸ ಮಾರುವವನು ಅದೃಷ್ಟಹೀನನೂ, ಇತರ ಜೀವಿಗಳ ಮಾಂಸ ತಿನ್ನುವವ ರೋಗಿಯೂ ಆಗುತ್ತಾನೆ
ಹೀನಜಾತೌ ಪ್ರಜಾಯೇತ ರತ್ನಾನಾಮಪಹಾರಕಃ ।
ಕುನಖೀ ಸ್ವರ್ಣಹರ್ತಾಸ್ಯಾದ್ಧಾತುಮಾತ್ರ ಹರೋsಧನಃ ॥೧೧॥
ರತ್ನಗಳನ್ನು ಅಪಹರುಸುವವ ಹೀನ ಜಾತಿಲಿ ಹುಟ್ಟುತ್ತನೆ . ಚಿನ್ನವ ಅಪಹರುಸುವವನು ಕೆಟ್ಟ ಉಗುರು ಇರು ವವನಾಗಿಯೂ, ಬೆಳ್ಳಿ ತಾಮ್ರ ಮುಂತಾದವನ್ನು ಅಪಹರುಸುವವ ನಿರ್ಧನನೂ ಆಗುತ್ತಾನೆ
.
ಅನ್ನಹರ್ತಾ ಭವೇದಾಖುಃ ಶಲಭೋ ಧಾನ್ಯಹಾರಕಃ ।
ಚಾತಕೋ ಜಲಹರ್ತಾ ಸ್ಯಾದ್ವಿಷಹರ್ತಾ ಚ ವೃಶ್ಚಿಕಃ ॥೧೨॥
ಅನ್ನವನ್ನು ಕಳ್ಳತನ ವ ಇಲಿಯೂ, ಧಾನ್ಯಗಳನ್ನು ಕಳ್ಳತ್ತನವನು ಮಿಡತೆಯೂ, ನೀರ ಕಳ್ಳತನ ಮಾಡುವವನು ಚಾತಕ ಹಕ್ಕಿಯೂ, ವಿಷವ ಕಳ್ಳತನ ಮಾಡುವನು ಚೇಳೂ ಆಗುತ್ತಾನೆ
.
ಶಾಕಂ ಪತ್ರಂ ಶಿಖೀ ಹೃತ್ವಾ ಗಂಧಾಂಶ್ಛುಂಛುಂದರೀ ಶುಭಾನ್ ।
ಮಧು ದಂಶಃ ಪಲಂ ಗೃಧ್ರೋ ಲವಣಂ ಚ ಪಿಪೀಲಿಕಾ ॥೧೩॥
ತರಕಾರಿ, ಸೊಪ್ಪುಗಳ ಕಳ್ಳತನ ಮಾಡುವನು ನವನವಿಲಾಗಿಯೂ, ಶುಭವಸ್ತುವಾದ ಗಂಧವ ಕಳ್ಳತನ ಮಾಡು ವ ಮೂಗಿಲಿಯಾಗಿಯೂ, ಜೇನ ಕಳ್ಳತನ ಮಾಡುವನು ನೆಳವಾಗಿಯೂ, ಮಾಂಸ ಕಳ್ಳತನ ಮಾಡುವನು ಹದ್ದು ಆಗಿಯೂ, ಉಪ್ಪು ಕಳ್ಳತನ ಮಾಡುವನು ಎರುಗು ಆಗಿಯೂ ಹುಟ್ಟುತ್ತಾನೆ
ತಾಂಬೂಲಫಲಪುಷ್ಪಾದಿಹರ್ತಾ ಸ್ಯಾದ್ವಾನರೋವನೇ ।
ಉಪಾನತ್ತೃಣಕಾರ್ಪಾಸಹರ್ತಾ ಸ್ಯಾನ್ಮೇಷಯೋನಿಷು ॥೧೪॥
ತಾಂಬೂಲ, ಹಣ್ಣು, ಹೂವು ಇತ್ಯಾದಿಗಳ ಅಪಹರಿಸುವವ ಕಾಡಿಲ್ಲಿ ವಾನರನಾಗುತ್ತನೆ . ಮೆಟ್ಟು, ಹುಲ್ಲು, ಹತ್ತಿಮರ ಇವುಗಳ ಅಪಹರಿಸುವವನು ಕುರಿಯ ಗರ್ಭಲ್ಲಿ ಹುಟ್ಟುತ್ತಾನೆ
ಯಶ್ಚ ರೌದ್ರೋಪಜೀವೀ ಚ ಮಾರ್ಗೇ ಸಾರ್ಥಾನ್ವಿಲುಂಪತಿ ।
ಮೃಗಯಾವ್ಯಸನೀ ಯಸ್ತು ಛಾಗಃ ಸ್ಯಾದ್ವಧಿಕಗೃಹೇ ॥೧೫॥
ಯಾವಾತನು ಹಿಂಸಾಕೃತ್ಯಗಳಿಂದ ಜೀವನ ನಡೆಸುತ್ತನೋ, ಯಾವಾತನು ಮಾರ್ಗಲ್ಲಿ ಯಾತ್ರಿಕರ ಧನವ ಲೂಟಿಮಾಡುತ್ತನೋ, ಯಾವಾತ ಬೇಟೆ ಆಡುತ್ತಾನೋ ದುರ್ಗುಣವುಳ್ಳವನೋ, ಅವ ಕಟುಕನ ಮನೆಲಿ ಕುರಿಯಾಗಿ ಜನ್ಮ ತಾಳುತ್ತನೆ
.
ಯೋ ಮೃತೋ ವಿಷಪಾನೇನ ಕೃಷ್ಣ ಸರ್ಪೋ ಭವೇದ್ಗಿರೌ ।
ನಿರಂಕುಶಸ್ವಭಾವಃ ಸ್ಯಾತ್ಕುಂಜರೋ ನಿರ್ಜನೇ ವನೇ ॥೧೬॥
ವಿಷ ಸೇವಿಸಿ ಮರಣ ಹೊಂದುವನು ಪರ್ವತಲ್ಲಿ ಕೃಷ್ಣಸರ್ಪ ಆಗುತ್ತಾನೆ . ನಿರಂಕುಶ ಸ್ವಭಾವದವನು (ಅಮರ್ಯಾದಿತ ಸ್ವಭಾವದಂವ), ನಿರ್ಜನ ಅರಣ್ಯಲ್ಲಿ ಆನೆ ಆಗಿ ಹುಟ್ಟುತ್ತಾನೆ
ವೈಶ್ವದೇವಮಕರ್ತಾರಃ ಸರ್ವಭಕ್ಷಾಶ್ಚ ಯೇ ದ್ವಿಜಾಃ ।
ಅಪರೀಕ್ಷಿತಭೋಕ್ತಾರೋ ವ್ಯಾಘ್ರಾಃ ಸ್ಯುರ್ನಿರ್ಜನೇ ವನೇ ॥೧೭॥
ದ್ವಿಜನಾದ ಯಾವಾತನು (ಬ್ರಾಹ್ಮಣ, ಕ್ಷತ್ರಿಯ, ವೈಶ್ಯ) ವೈಶ್ವದೇವ ಪೂಜೆ (ವೈಶ್ವದೇವಬಲಿ) ಮಾಡದೆ ಎಲ್ಲ ಅನ್ನವನ್ನು ಉಣ್ತನೋ, ಪರೀಕ್ಷಣೆ (ಪರಿಷಿಂಚನೆ) ಮಾಡದೆ ಊಟ ಮಾಡ್ತನೋ, ಅವನು ನಿರ್ಜನ ಕಾಡಿಲ್ಲಿ ಹುಲಿಯಾಗಿ ಹುಟ್ಟುತ್ತಾನೆ
ಗಾಯತ್ರೀಂ ನ ಸ್ಮರೇದ್ಯಸ್ತು ಯೋ ನ ಸಂಧ್ಯಾಮುಪಾಸತೇ ।
ಅಂತರ್ದುಷ್ಟೋ ಬಹಿಃಸಾಧುಃ ಸ ಭವೇದ್ಬ್ರಾಹ್ಮಣೋ ಬಕಃ ॥೧೮॥
ಗಾಯತ್ರಿ ಸ್ಮರಣೆ ಮಾಡದದೆ ಇರುವವನು , ಸಂಧ್ಯೋಪಾಸನೆ ಮಾಡದೆ ಇರುವವನು , ಅಂತರಂಗದಲ್ಲಿ ದುಷ್ಟನಾಗಿಯೂ, ಬಹಿರಂಗದಲ್ಲಿ ಸಾಧುವಾಗಿಯೂ ಇರುವ ಬ್ರಾಹ್ಮಣ ಬಕಪಕ್ಷಿ ಆಗುತ್ತಾನೆ
ಅಯಾಜ್ಯ ಯಾಜಕೋ ವಿಪ್ರಃ ಸ ಭದೇದ್ದ್ರಾಮಸೂಕರಃ ।
ಖರೋ ವೈ ಬಹುಯಾಜಿತ್ವಾತ್ಕಾಕೋ ನಿರ್ಮಂತ್ರ ಭೋಜನಾತ್ ॥೧೯॥
ಯಜ್ಞಮಾಡದೆ ಹಾಗೂ ಅನರ್ಹನಾಗಿರುವವನಿಂದ ಯಜ್ಞಮಾಡುಸುವ ಬ್ರಾಹ್ಮಣ ಹಳ್ಳಿಲಿ ಹಂದಿಯಾಗಿ ಹುಟ್ಟುತ್ತಾನೆ ಹಣಕ್ಕಾಗಿ ಹೆಚ್ಚಿಗೆ ಯಜ್ಞ ಮಾಡುಸುವವ ನಿಶ್ಚಯವಾಗಿಯೂ ಕತ್ತೆ ಆಗಿ ಹುಟ್ಟುತ್ತಾನೆ ಆಮಂತ್ರಣ ಇಲ್ಲದೆ ಊಟ ಉಣ್ಣುವವ ಕಾಗೆ ಆಗುತ್ತಾನೆ
.
ಪಾತ್ರೇ ವಿದ್ಯಾಮದಾತಾ ಚ ಬಲೀವರ್ದೋ ಭವೇದ್ದ್ವಿಜಃ ।
ಗುರುಸೇವಾಮಕರ್ತಾ ಚ ಶಿಷ್ಯಃ ಸ್ಯಾದ್ಗೋಖರ ಪಶುಃ ॥೨೦॥
ಸತ್ಪಾತ್ರಗೆ ವಿದ್ಯೆಯ ಹೇಳಿ ಕೊಡದ ದ್ವಿಜ ಗೂಳಿ (ಎತ್ತು/ಹೋರಿ)ಆಗಿ ಹುಟ್ಟುತ್ತಾನೆ ಗುರುಸೇವೆಯ ಮಾಡದಿದ್ದ ಶಿಷ್ಯ ಗೋಗಾರ್ದಭ (ಎತ್ತು ಮತ್ತೆ ಕತ್ತೆ) ಪಶು ಆಗುತ್ತಾನೆ
ಗುರುಂ ಹುಂಕೃತ್ಯ ತುಂಕೃತ್ಯ ವಿಪ್ರಂ ನಿರ್ಜಿತ್ಯ ವಾದತಃ ।
ಅರಣ್ಯೇ ನಿರ್ಜಲೇ ದೇಶೇ ಜಾಯತೇ ಬ್ರಹ್ಮ ರಾಕ್ಷಸಃ ॥೨೧॥
ಗುರುವಿನ ಹೆದರಿಸುವವ, ತಿರಸ್ಕರಿಸುವವ ( ಹುಮ್ಮ್ ಹೂಮ್ಮ್ಮ್ ಎಂದು ದುರುಗುಟ್ಟಿ ಹೆದರುಸುವವ), ವಿಪ್ರನ ವಾದಲ್ಲಿ ಮುಖಭಂಗ ಮಾಡುವವ ನೀರಿಲ್ಲದ್ದ ಅರಣ್ಯಪ್ರದೇಶಲ್ಲಿ ಬ್ರಹ್ಮರಾಕ್ಷಸನಾವುತ್ತನೆ
ಪ್ರತಿಶ್ರುತಂ ದ್ವಿಜೇ ದಾನಮದತ್ತ್ವಾ ಜಂಬುಕೋ ಭವೇತ್ ।
ಸತಾಮಸತ್ಕಾರಕರಃ ಫೇತ್ಕಾರೋsಗ್ನಿ ಮುಖೋ ಭವೇತ್ ॥೨೨॥
ಪ್ರತಿಜ್ಞೆಮಾಡಿ ದ್ವಿಜನಿಗೆ ದಾನವ ಕೊಡದ್ದೆ ಇದ್ದವನು ನರಿಯಾಗಿ ಹುಟ್ಟುತ್ತಾನೆ , ಸಜ್ಜನರಿಗೆ ಸತ್ಕಾರ ಮಾಡದೆ ಇದ್ದವನು ಫೇತ್ಕಾರ ಮಾಡುವ ಅಗ್ನಿಮುಖ ಹೇಳವ ದುಷ್ಟ ಶಕ್ತಿ ಆಗುತ್ತಾನೆ (ಅಗ್ನಿಮುಖ ನರಿಯಾಗುತ್ತನೆ ).
ಮಿತ್ರಧ್ರುಗ್ಗಿರಿಗೃಧ್ರಃ ಸ್ಯಾದುಲೂಕಃ ಕ್ರಯವಂಚನಾತ್ ।
ವರ್ಣಾಶ್ರಮಪರೀವಾದಾತ್ಕಪೋತೋ ಜಾಯತೇ ವನೇ ॥೨೩॥
ಮಿತ್ರದ್ರೋಹಿಯಾದವ ಪರ್ವತದ ಹದ್ದು ಆಗಿ ಹುಟ್ಟುತ್ತಾನೆ ಕೊಟ್ಟು ತಗೋಳ್ಳೋದರಲ್ಲಿ (ವ್ಯಾಪಾರಲ್ಲಿ) ಮೋಸ ಮಾಡುವವ ಗೂಬೆ ಆಗುತ್ತಾನೆ ವರ್ಣಾಶ್ರಮವ ನಿಂದುಸುವವ ಕಾಡಿಲ್ಲಿ ಪಾರಿವಾಳವಾಗಿ ಹುಟ್ಟುತ್ತನೆ
.ಆಶಾಚ್ಛೇದಕರೋ ಯಸ್ತು ಸ್ನೇಹಚ್ಛೇದಕರಸ್ತು ಯಃ ।
ಯೋ ದ್ವೇಷಾತ್ ಸ್ತ್ರೀಪರಿತ್ಯಾಗೀ ಚಕ್ರವಾಕಶ್ಚಿರಂ ಭವೇತ್ ॥೨೪॥
ಆಶಾಭಂಗ ಮಾಡುವವ, ಸ್ನೇಹವ ಒಡವವ, ದ್ವೇಷದ ಸ್ತ್ರೀಯ ಪರಿತ್ಯಜಿಸುವವ ಬಹುಕಾಲದವರೆಗೆ ಚಕ್ರವಾಕ ಪಕ್ಷಿಯಾಗಿ ಇರುತ್ತನೆ
ಮಾತಾಪಿತೃಗುರುದ್ವೇಷೀ ಭಗಿನೀಭ್ರಾತೃವೈರಕೃತ್ ।
ಗರ್ಭೇ ಯೋನೌ ವಿನಷ್ಟಃ ಸ್ಯಾದ್ಯಾವದ್ಯೋನಿಸಹಸ್ರಶಃ ॥೨೫॥
ಅಮ್ಮ ಅಪ್ಪ ಗುರುಗಳ ದ್ವೇಷುಸುವವ , ಸೋದರ ಸೋದರಿಯರ ಹತ್ತಿರ ವೈರತ್ವವ ತೋರುಸುವವ ಸಾವಿರಾರು ಜನ್ಮಗಳ ಹೊಂದಿದರೂ ಗರ್ಭದಲ್ಲೇ ನಷ್ಟಹೊಂದುತ್ತನೆ
ಶ್ವಶ್ರ್ವೋರ್ಗಾಲಿಪ್ರದಾ ನಾರೀ ನಿತ್ಯಂ ಕಲಹಕಾರಿಣೀ ।
ಸಾ ಜಲೌಕಾ ಚ ಯೂಕಾ ಸ್ಯಾದ್ಭರ್ತಾರಂ ಭರ್ತ್ಸತೇ ಚ ಯಾ ॥೨೬॥
ಅತ್ತೆ ಮಾವನೋರ ನಿಂದುಸುವ, ನಿತ್ಯವೂ ಕಲಹ ಮಾಡುವ ನಾರಿ ಜಿಗಣೆಯಾಗುತ್ತನೆ ತನ್ನ ಗಂಡನನ್ನೇ ಹೀಯಾಳುಸುವ ಸ್ತ್ರೀ ಹೇನಗುತ್ತಾಳೆ
ಸ್ವಪತಿಂ ಚ ಪರಿತ್ಯಜ್ಯ ಪರಪುಂಸಾನುವರ್ತಿನೀ ।
ವಲ್ಗುಲೀ ಗೃಹಗೋಧಾ ಸ್ಯಾದ್ದ್ವಿಮುಖೀವಾsಥ ಸರ್ಪಿಣೀ ॥೨೭॥
ತನ್ನ ಪತಿಯ ಬಿಟ್ಟ ಪರಪುರುಷನ ಅನುಸರಿಸಲು, ಬಾವಲಿ, ಹಲ್ಲಿ ಅಥವಾ ಎರುಡು ಮೋರೆಯ ಹೆಣ್ಣು ಸರ್ಪವಾಗುತ್ತಾರೆ
ಯಃ ಸ್ವಗೋತೋಪಘಾತೀ ಚ ಸ್ವಗೋತ್ರಸ್ತ್ರೀ ನಿಷೇವಣಾತ್ ।
ತರಕ್ಷುಃ ಶಲ್ಲಕೋ ಭೂತ್ವಾ ಋಕ್ಷಯೋನಿಷು ಜಾಯತೇ ॥೨೮॥
ತನ್ನ ಗೋತ್ರವ ನಾಶಮಾಡುವವ, ಮತ್ತ ತನ್ನ ಗೋತ್ರದ ಸ್ತ್ರೀಯನ್ನೇ ಸೇರುವವನು ಕಿರುಬನಾಗಿ, ಮುಳ್ಳಂದಿಯಾಗಿ, ಕರಡಿಯಾಗಿ ಹುಟ್ಟುತ್ತನೆ
ತಾಪಸೀಗಮನಾಕ್ಕಾಮೀ ಭವೇನ್ಮರುಪಿಶಾಚಕಃ ।
ಅಪ್ರಾಪ್ತ ಯೌವನಾಸಂಗಾದ್ಭವೇದಜಗರೋ ವನೇ ॥೨೯॥
ತಾಪಸೀ ಸ್ತ್ರೀಲಿ ಗಮನಮಾಡುವ ಕಾಮೀ ಪುರುಷ ಮರುಭೂಮಿಲಿ ಪಿಶಾಚಿಯಾಗಿ ಇರುತ್ತನೆ ಯೌವ್ವನಪ್ರಾಪ್ತವಾಗದ ಕೂಸಿನ (ಸ್ತ್ರೀಯ) ಸೇರುವವ ಕಾಡಿಲ್ಲಿ ಹೆಬ್ಬಾವಾಗಿ ಹುಟ್ಟುತ್ತಾನೇ
ಗುರುದಾರಾಭಿಲಾಷೀ ಚ ಕೃಕಲಾಸೋ ಭವೇನ್ನರಃ ।
ರಾಜ್ಞೀಂ ಗತ್ವಾ ಭವೇದ್ದುಷ್ಟ್ರೋ ಮಿತ್ರಪತ್ನೀಂ ಚ ಗರ್ದಭಃ ॥೩೦॥
ಗುರುಪತ್ನಿಯ ಇಚ್ಚಿಸುವವ ನರ ಓಂತಿಯಾಗಿ . ರಾಜಪತ್ನಿಯ ಸೇರುವವ ಒಂಟೆ ಆಗುತ್ತಾನೆ ಮಿತ್ರನ ಪತ್ನಿಯ ಸೇರುವವ ಕತ್ತೆ ಆಗುತ್ತಾನೆ
ಗುದಗೋ ವಿಡ್ವರಾಹಃ ಸ್ಯಾದ್ವೃಷಸ್ಯಾದ್ವೃಷಲೀಪತಿ ।
ಮಹಾಕಾಮೀ ಭವೇದ್ಯಸ್ತು ಸ್ಯಾದಶ್ವಃ ಕಾಮಲಂಪಟಃ ॥೩೧॥
ಗುದಾಗಮನ ಮಾಡುವವ ಮಲಭೋಗಿ ಹಂದಿ ಹಾಗೂ ಮಲಿನಗಾಮಿ ಎತ್ತು ಆಗುತ್ತಾನೆ ಮಹಾಕಾಮಿಯಾಗಿದ್ದ ಮನುಷ್ಯ ಕಾಮಲಂಪಟ ಕುದುರೆ ಆಗುತ್ತಾನೆ
ಮೃತಸ್ಯೇಕಾದಶಾಹಂ ತು ಭುಂಜಾನಃ ಶ್ವಾ ವಿಜಾಯತೇ ।
ಲಭೇದ್ದೇವಲಕೋ ವಿಪ್ರೋಯೋನಿಂ ಕುಕ್ಕುಟಸಂಜ್ಞಕಾಮ್ ॥೩೨॥
ಮರಣಸೂತಕಲ್ಲಿ ಮೃತನ ಹನ್ನೊಂದನೇ ದಿನದ ಆಹಾರವ ತಿನ್ನುವವ ನಾಯಿಯಾಗುಟ್ಟತ್ತಾನೆ . ದೇವದ್ರವ್ಯವ ಭೋಗಿಸುವ ವಿಪ್ರ ಕೋಳಿ ಜನ್ಮವಾಗಿ ಹುಟ್ಟುತ್ತಾನೆ
No comments:
Post a Comment