Followers

Thursday, 11 June 2020

ಗರುಡ ಪುರಾಣ ಅಧ್ಯಾಯ 6

ಗ ಪು ಅಧ್ಯಾಯ 6


ಪಾಪಜನ್ಮಾದಿದುಃಖನಿರೂಪಣಮ್         


 ಪಾಪಿಗಳ ಜನ್ಮಾದಿ ದುಃಖಂಗಳ ನಿರೂಪಣೆ

 

ಗರುಡ ಉವಾಚ-


ಕಥಮುತ್ಪದ್ಯತೇ ಮಾತುರ್ಜಠರೇ ನರಕಾಗತಃ ।

ಗರ್ಭಾದಿದುಃಖಂ ಯದ್ಭುಂಕ್ತೇ ತನ್ಮೇ ಕಥಯ ಕೇಶವ ॥೦೧॥


ಗರುಡ ಹೇಳಿದ – ಏ ಕೇಶವನೇ, ನರಕದ ಬಂದವ ತಾಯಿಯ  ಗರ್ಭಲ್ಲಿ ಯಾವ ರೀತಿ ಉತ್ಪನ್ನ ಆಗುತ್ತೆ ಗರ್ಭಲ್ಲಿ ಯಾವ ದುಃಖವ ಅನುಭವಿಸುತ್ತರೆ ಹೇಳು  ಎನಗೆ ವಿವರುಸು.


ವಿಷ್ಣುರುವಾಚ-


ಸ್ತ್ರೀಪುಂಸೋಸ್ತು ಪ್ರಸಂಗೇನ ನಿರುದ್ಧೇ ಶುಕ್ರಶೋಣಿತೇ ।

ಯಥಾsಯಂ ಜಾಯತೇ ಮರ್ತ್ಯಸ್ತಥಾ ವಕ್ಷ್ಯಾಮ್ಯಹಂ ತವ ॥೦೨॥


ವಿಷ್ಣು ಹೇಳಿದ – ಸ್ತ್ರೀ ಪುರುಷರ ಸಂಯೋಗದ ವೀರ್ಯಾಣು ಮತ್ತು ಅಂಡಾಣು(ಗರ್ಭಾಣು)ಗಳು  ಗರ್ಭಲ್ಲಿ ತಡೆಹಿಡಿಯಲ್ಪಟ್ಟು ಯಾವ ರೀತಿಲಿ ಮನುಷ್ಯ ಹುಟ್ಟುತ್ತನೆ ಎಂದು ನಿನಗೆ ನಾನು ಹೇಳುತ್ತೆನೆ 


ಋತುಮಧ್ಯೇ ಹಿ ಪಾಪಾನಾಂ ದೇಹೋತ್ಪತ್ತಿಃ ಪ್ರಜಾಯತೇ ।

ಇಂದ್ರಸ್ಯ ಬ್ರಹ್ಮಹತ್ಯಾಸ್ತಿ ಯಸ್ಮಿಂಸ್ತಸ್ಮಿನ್ ದಿನತ್ರಯೇ ॥೦೩॥


ಋತುಕಾಲದ ಸುರುವಾಣ ಮೂರುದಿನಗಳವರೇಗೆ ಇಂದ್ರನಿಗೆ ತಗುಲಿದ ಬ್ರಹ್ಮಹತ್ಯಾದೋಷದ ನಾಲ್ಕನೆಯ ಭಾಗ ರಜಸ್ವಲಾ ಸ್ತ್ರೀಯರಲ್ಲಿ ಇರುತ್ತದೆ . ಆ ಋತುಕಾಲದ  ಮಧ್ಯಲ್ಲಿ ಮಾಡಿದ ಗರ್ಭಾಧಾನದ ಫಲವಾಗಿ ಪಾಪಾತ್ಮರುಗಳ ದೇಹದ ಉತ್ಪತ್ತಿಯಾಗುತ್ತದೆ [ಸ್ತ್ರೀಯರು ತಾವು ಸದಾ ಪುರುಷರ ಸಹವಾಸ ಮಾಡುವಂತೆ ವರವ ಪಡದು ಇಂದ್ರನ ಬ್ರಹ್ಮಹತ್ಯಾ ದೋಷದ ಕಾಲುಭಾಗವ ಸ್ವೀಕರುಸಿದವು. ಅವರ ಈ ಬ್ರಹ್ಮಹತ್ಯಾ ದೋಷ ಪ್ರತ್ಯೇಕ ತಿಂಗಳಲ್ಲಿ ಈ ಮೂರು ದಿನಗಳ ಕಾಲ ರಜಸ್ಸಿನ ರೂಪಲ್ಲಿ ಪ್ರಕಟವಾಗುತ್ತದೆ - ಶ್ರೀ ಮದ್ಭಾ.೬.೯.೯ ]  


ಪ್ರಥಮೇsಹನಿ ಚಾಂಡಾಲೀ ದ್ವಿತೀಯೇ ಬ್ರಹ್ಮಘಾತಿನೀ ।

ತೃತೀಯೇ ರಜಕೀ ಹ್ಯೇತಾ ನರಕಾಗತಮಾತರಃ ॥೦೪॥


ರಜಸ್ವಲಾ ಸ್ತ್ರೀ ಸುರುವಾದ  ದಿನ ಚಾಂಡಲಿ, ಎರಡನೆ ದಿನ ಬ್ರಹ್ಮಘಾತಿನಿ, ಮತ್ತೆ ಮೂರ್ನೇ ದಿನ ಮಡ್ಯೋಳ್ತಿ (ಮಡಿವಾಳಿ/ಅಗಸಗಿತ್ತಿ) ಎನಿಸುತ್ತಳೆ  (ತದನುಸಾರ ಸ್ಪರ್ಶದೋಷ ಎಂದು ಅರ್ಥ). ನರಕಂದ ಬಂದ ಜೀವಿಗಳು ಇವು ಮೂವರು ಮಾತೆಯರುಗಳು 


ಕರ್ಮಣಾ ದೈವನೇತ್ರೇಣ ಜಂತುರ್ದೇಹೋಪಪತ್ತಯೇ ।

ಸ್ತ್ರಿಯಾಃ ಪ್ರವಿಷ್ಟ ಉದರಂ ಪುಂಸೋ ರೇತಃಕಣಾಶ್ರಯಃ ॥೦೫॥


ದೈವ ನೇತೃತ್ವಲ್ಲಿ ತನ್ನ ಕರ್ಮಗನುಗುಣವಾಗಿ ಆ ಜೀವವು ದೇಹದ ಉತ್ಪತ್ತಿಗೋಸ್ಕರ ಪುರುಷನ ವೀರ್ಯಾಣುವ ಆಶ್ರಯಿಸಿ ಸ್ತ್ರೀಯ ಗರ್ಭವ ಪ್ರವೇಶಿಸುತ್ತದೆ 


ಶುಕ್ರಶೋಣಿತ ಸಂಯೋಗಾತ್ ಪಿಂಡೋತ್ಪತ್ತಿಃ ಪ್ರಜಾಯತೇ ।

ರಕ್ತಾಧಿಕೇ ಭವೇನ್ನಾರೀ ಶುಕ್ರಾಧಿಕೇ ಭವತ್ಪುಮಾನ್ ॥

ಕಲಲಂ ತ್ವೇಕರಾತ್ರೇಣ ಪಂಚರಾತ್ರೇಣ ಬುದ್ಬುದಮ್ ।

ದಶಾಹೇನ ತು ಕರ್ಕಂಧೂಃ ಪೇಶ್ಯಂಡಂ ವಾ ತತಃ ಪರಮ್ ॥೦೬॥


ಶುಕ್ರ ಮತ್ತು ಶೋಣಿತ (ಗರ್ಭಾಣು) ಸಂಯೋಗಂದ ಪಿಂಡೋತ್ಪತ್ತಿ ಆಗುವುದು . ಸಂಯೋಗಲ್ಲಿ ಸ್ತ್ರೀಕಾರಕ ಅಂಶ ಪ್ರಾಬಲ್ಯ ಅಧಿಕವಾಗಿದ್ದರೆ ಕೂಸೂ,  ಗoಡುಕಾರಕ ಅಂಶ ಪ್ರಾಬಲ್ಯ ಅಧಿಕವಾಗಿದ್ದರೆ ಮಾಣಿಯಾಗಿಯೂ ಪಿಂಡೋತ್ಪತ್ತಿ ಆಗುತ್ತದೆ (ಅದೂ ಪೂರ್ವ ಕರ್ಮ ಸುಕೃತಂದಲೇ . ಶುಕ್ರಶೋಣಿತಯೋ ಸಾಮ್ಯೇ  ಜಾಯತೇ ಚ ನಪುಂಸಕಃ – ವೀರ್ಯಾಣು ಅಂಡಾಣು(ಗರ್ಭಾಣು)ವಿನ ಸಂಯೋಗಲ್ಲಿ ಸಮಾನವಾಗಿದ್ದರೆ ನಪುಂಸಕತ್ವ). ಒಂದು ಇರುಳಿನಲ್ಲಿ ‘ಕಲ್ಲ ಎಂದು , ಐದು ಇರುಳಿನಲ್ಲಿ ‘ಬುದ್ಬುದ’ ಎಂದು , ಹತ್ತು ಇರುಳಿನಲ್ಲಿ ‘ಕರ್ಕಂದು’ ಎಂದು , ಮತ್ತೆ ‘ಪೇಶ್ಯಂಡ’ ಎಂದುಹೇಳತ್ತಾರೆ 


ಮಾಸೇನ ತು ಶಿರೋ ದ್ವಾಭ್ಯಾಂ ಬಾಹ್ವಂಗಾದ್ಯಂಗವಿಗ್ರಹಃ ।

ನಖಲೋಮಾಸ್ಥಿ ಚರ್ಮಾಣಿ ಲಿಂಗಚ್ಛಿದ್ರೋದ್ಭವಸ್ತ್ರಿಭಿಃ ॥೦೭॥


ಮೊದಲನೇ ತಿಂಗಳಲ್ಲಿ ತಲೆಯೂ, ಎರಡು ತಿಂಗಳಿಗೆ  ಬಾಹು ಮತ್ತಿತರ ಅಂಗಭಾಗಗಳೂ, ಮೂರು ತಿಂಗಳಿಗೆ ಉಗುರು, ತಲೆಕಸವು, ಎಲುಬು, ಚರ್ಮ, ಲಿಂಗ ಮತ್ತೆ ದಶದ್ವಾರಗಳೂ ಉದ್ಭವವಾಗುತ್ತವೆ 


ಚತುರ್ಭಿರ್ಧಾತವಃ ಸಪ್ತ ಪಂಚಭಿಃ ಕ್ಷುತ್ತೃಡುದ್ಭವಃ ।

ಷಡ್ಭಿರ್ಜರಾಯುಣಾ ವೀತಃ ಕುಕ್ಷೌಭ್ರಾಮ್ಯತಿ ದಕ್ಷಿಣೇ ॥೦೮॥


ನಾಲ್ಕು ತಿಂಗಳಿಗೆ  ಏಳು ಧಾತುಗಳೂ (ರಸ, ರಕ್ತ, ಮಾಂಸ, ಮೇದಸ್ಸು, ಅಸ್ಥಿ, ಮಜ್ಜೆ ಹಾಗೂ ಶುಕ್ರ), ಐದು ತಿಂಗಳಿಗೆ ಹಶು ಆಸರುಗಳೂ ಹುಟ್ಟುತ್ತವೆ  ಆರು ತಿಂಗಳಿಗೆ ಗರ್ಭಾಶಯದ ಒಳ ಗರ್ಭಕೋಶದ ಬಲಭಾಗಲ್ಲಿ ಅದು ಚಲಿಸುತ್ತದೆ 


ಸಮಾನೇ ದ್ರವ್ಯಸಂಯೋಗೇ ತೃತೀಯಾ ಪ್ರಕೃತಿರ್ಭವೇತ್ ।

ವಿಭಕ್ತೇ ರೇತಸಿ ಪ್ರಾಯೋ ಭವೇದ್ಯುಗ್ಮಮಪಿ ಕ್ವಚಿತ್॥

ಮಾತುರ್ಜಗ್ಧಾನ್ನಪಾನಾದ್ಯೈರೇಧದ್ಧಾತುರಸಂಮತೇ । 

ಶೇತೇ ವಿಣ್ಮೂತ್ರಯೋರ್ಗರ್ತೇ ಸ ಜಂತುರ್ಜಂತುಸಂಭವೇ ॥೦೯॥


ಸಂಯೋಗ ಸಮಯಲ್ಲಿ ವೀರ್ಯಾಣು ಮತ್ತು ಅಂಡಾಣು ಸಮಾನವಾಗಿ ಕೂಡಿ ವಿಭಜನೆ ಅದಾಗ ಕೆಲವೊದರಿಂದ  ಮೂರನೇ ಪ್ರಕೃತಿಯೂ (ನಪುಂಸಕ) ಅಗುವ ಸಾಧ್ಯತೆ ಇದ್ದು. ತಾಯಿಯು ತಿಂದ ಅನ್ನಪಾನಾದಿಗಳಿಂದ ಅದರ ಧಾತುಗಳು ವೃದ್ಧಿಯಾಗುತ್ತದೆ . ಆ ಜೀವವು ಕ್ರಿಮಿಗಳು ಇರುವ ಮಲಮೂತ್ರದ ಹೊಂಡಲ್ಲಿ ತನ್ನ ಇಚ್ಛೆಗೆ ವಿರೋಧವಾಗಿ ಇರುತ್ತದೆ 


ಕೃಮಿಭಿಃ ಕ್ಷತಸರ್ವಾಂಗಃ ಸೌಕುಮಾರ್ಯಾತ್ಪ್ರತಿಕ್ಷಣಮ್ ।

ಮೂರ್ಛಾಮಾಪ್ನೋತ್ಯುರುಕ್ಲೇಶಸ್ತತ್ರತ್ಯೈಃ ಕ್ಷುಧಿತೈರ್ಮುಹುಃ ॥೧೦॥


ಅಲ್ಲಿರುವ ಕೋಮಲವಾದ ಕೂಸನ್ನು  ಕ್ರಿಮಿಗಳಿಂದ ಕೋಮಲವಾದ ಸರ್ವಾಂಗಂಗಳೂ ಪ್ರತಿಕ್ಷಣ ಕಚ್ಚಲ್ಪಟ್ಟು, ಅಧಿಕ ಬೇನೆಯಿಂದ ಪದೇ ಪದೇ ಮೂರ್ಛಿತವಾಗುತ್ತದೆ 


ಕಟುತೀಕ್ಷ್ಣೋಷ್ಣ ಲವಣರೂಕ್ಷಾಮ್ಲಾದಿಭಿರುಲ್ಪಣೈಃ ।

ಮಾತೃಭುಕ್ತೈರುಪಸ್ಪೃಷ್ಟಃ ಸರ್ವಾಂಗೋತ್ಥಿತವೇದನಃ ।

ಉಲ್ಬೇನ ಸಂವೃತಸ್ತಸ್ಮಿನ್ನಂತ್ರೈಶ್ಚ ಬಹಿರಾವೃತಃ ॥೧೧॥


ಗರ್ಭಾಶಯದಿಂದ  ಆವರಿಸಲ್ಪಟ್ಟು, ಹೆರವ ತಾಯಿಯ ಕರುಳುಗಳಿಂದ ಸುತ್ತುವರೆದು, ತಾಯಿಯು ತಿನ್ನುವ ಕಲ್ಕಗಳಿಂದ ಅಂದರೆ , ಬೆಯಿಸಿದ, ಉಪ್ಪು, ಖಾರ, ಒಗರು, ಹುಳಿ ಮುಂತಾದ ತೀಕ್ಷ್ಣ ರಸಗಳ ಸ್ಪರ್ಶದಿಂದ ಎಲ್ಲ ಅಂಗಗಳಲ್ಲಿಯೂ ಬೇನೆಯ ಅನುಭವುಸುತ್ತದೆ 


ಅಸ್ತೇ ಕೃತ್ವಾ ಶಿರಃ ಕುಕ್ಷೌ ಭುಗ್ನಪೃಷ್ಠಶಿರೋಧರಃ ।

ಅಕಲ್ಪಃ ಸ್ವಾಂಗಚೇಷ್ಟಾಯಾಂ ಶಕುಂತ ಇವ ಪಂಜರೇ ॥೧೨॥


ಗರ್ಭಾಶಯದ ಒಳ ತಲೆ ಬೆನ್ನು ಮತ್ತೆ ಕೊರಳು ಬಗ್ಗಿದಾಗ  ತನ್ನ ಅಂಗ ಚೇಷ್ಟೆಗಳ ಮಾಡಲು ಅಶಕ್ತನಾಗಿ ಪಂಚರಲ್ಲಿ ಇರುವ  ಹಕ್ಕಿಯ ಹಾಗೆ ಇರುತ್ತದೆ 


ತತ್ರ ಲಬ್ಧಸ್ಮೃತಿರ್ದೈವಾತ್ಕರ್ಮ ಜನ್ಮಶತೋದ್ಭವಮ್ ।

ಸ್ಮರನ್ ದೀರ್ಘಮುಚ್ಛ್ವಾಸಂ ಶರ್ಮ ಕಿಂ ನಾಮ ವಿಂದತೇ ॥೧೩॥


ಅಲ್ಲಿ ದೈವ ಶಕ್ತಿಗಿಂತ ಹೆಚ್ಚಾಗಿ ನೂರು ಜನ್ಮಗಳಲ್ಲಿ ಮಾಡಿದ ಕರ್ಮಗಳ ನೆನಪು ಆಗುತ್ತದೆ . ಅವುಗಳ ಸ್ಮರಿಸಿ ದೀರ್ಘಕಾಲ ಉಸುರು ಕಟ್ಟಿದ ಹಾಗೆ ರಜವೂ ಸುಖ ಇಲ್ಲದ್ದೆ ಇರುತ್ತದೆ 


ನಾಥಮಾನ ಋಷಿರ್ಭೀತಃ ಸಪ್ತವಧ್ರಿಃ ಕೃತಾಜಲಿಃ ।

ಸ್ತುವೀತ ತಂ ವಿಕ್ಲವಯಾ ವಾಚಾ ಯೇನೋದರೇsರ್ಪಿತಃ ॥೧೪॥


ಆತ್ಮದರ್ಶಿಯಾದ ಅವ ಸಪ್ತಧಾತುಗಳೆಂಬ ಏಳು ಬಂಧನಗಳಿಂದ ಬಂಧಿಸಲ್ಪಟ್ಟು ಕೈ ಮುಗಿದುಕೊಂಡು, ಸಹಾಯವ ಬೇಡಿಕೋಂಡು, ಭೀತನಾಗಿ, ಅಳುತ್ತ  ತನ್ನ ಈ ಗರ್ಭಕ್ಕೆ ಕಳುಹಿದವನನ್ನು ದೀನಸ್ವರಲ್ಲಿ ಸ್ತುತಿಸುತ್ತದೆ 


ಆರಭ್ಯ ಸಪ್ತಮಾನ್ಮಾಸಾಲ್ಲಬ್ಧಬೋಧೋsಪಿ ವೇಪಿತಃ ।

ನೈಕತ್ರಾಸ್ತೇ ಸೂತಿವಾತೈರ್ವಿಷ್ಠಾಭೂರಿವ ಸೋದರಃ ॥೧೫॥


ಏಳನೇ ತಿಂಗಳಿನ ಪ್ರಾರಂಭದಲ್ಲಿ ಅವನಿಗೆ ಜ್ಞಾನವುಂಟಾದರೂ ಪ್ರಸೂತಿ ವಾಯುವಿನ ಪ್ರಭಾವದಿಂದ ಅದೇ ಹೊಟ್ಟೆಲಿ ಮಲಗಳಲ್ಲಿ ಇರುವ ಹುಳುಗಳ ಹಾಗೆ ಒಂದೇ ದಿಕ್ಕಿನಲ್ಲಿ ಇರುತ್ತದೆ 


ಜೀವ ಉವಾಚ-


ಶ್ರೀಪತಿಂ ಜಗದಾಧಾರಾಮಶುಭಕ್ಷಯಕಾರಕಮ್ ।

ವ್ರಜಾಮಿ ಶರಣಂ ವಿಷ್ಣುಂ ಶರಣಾಗತವತ್ಸಲಮ್ ॥೧೬॥


ಜೀವ ಹೇಳುತ್ತದೆ - ಶ್ರೀಪತಿಯೂ, ಜಗತ್ತಿಗೆಲ್ಲ ಆಧಾರ ಸ್ವರೂಪನೂ, ಅಶುಭವ ನಾಶಮಾಡುವವನೂ, ಶರಣಾಗತವತ್ಸಲನೂ ಆದ ವಿಷ್ಣುವಿಗೆ ಶರಣು ಹೋಗುತ್ತದೆ 


ತ್ವನ್ಮಾಯಾಮೋಹಿತೋ ದೇಹೇ ತಥಾ ಪುತ್ರಕಲತ್ರಕೇ ।

ಅಹಂಮಮಾಭಿಮಾನೇನ ಗತೋsಹಂ ನಾಥ ಸಂಸ್ಕೃತಿಮ್ ॥೧೭॥


ಹೇ ನಾಥ!, ನಿನ್ನೆ ಮಾಯೆಂದ ಮೋಹಿತನಾಗಿ ದೇಹ ಹಾಗೂ ಪತ್ನೀಪುತ್ರರಲ್ಲಿ ನಾನು ಎಂದು ಹೇಳುವ  ಅಭಿಮಾನದ ಈ ಸಂಸಾರವ ಪಡದೆ 


ಕೃತಂ ಪರಿಜನಸ್ಯಾರ್ಥೇ ಮಯಾ ಕರ್ಮ ಶುಭಾಶುಭಮ್ ।

ಏಕಾಕೀ ತೇನ ದಗ್ಧೋsಹಂ ಗತಾಸ್ತೇ ಫಲಭಾಗಿನಃ ॥೧೮॥


ಎನ್ನ ಪರಿಜನರಿಂಗೋಸ್ಕರವಾಗಿ ನಾನು ಶುಭಾಶುಭ ಕರ್ಮಗಳನ್ನು ಮಾಡಿರುತ್ತೆನೆ  ಅವುಗಳಿಂದಲೇ ನಾನು ಏಕಾಂಗಿಯಾಗಿ ದಗ್ಧನಾಗಿ ಬಾಗಿಡಿದ್ದೆ. ಆದರೆ ಫಲದಲ್ಲಿ ಭಾಗಿಯಾಗಿದ್ದೇನೆ  ಆದರು ಹೊರಟು ಹೋದವು.


ಯದಿ ಯೋನ್ಯಾಃ ಪ್ರಮುಚ್ಯೇsಹಂ ತತ್ಸ್ಮರಿಷ್ಯೇ ಪದಂ ತವ ।

ತಮುಪಾಯಂ ಕರಿಷ್ಯಾಮಿ ಯೇನ ಮುಕ್ತಿಂ ವ್ರಜಾಮ್ಯಹಮ್ ॥೧೯॥


ಒಂದು ವೇಳೆ ಈ ಗರ್ಭದ ನಾನು ಬಿಡುಗಡೆ ಹೊಂದಿದರೆ ನಿನ್ನ ಪಾದವ ಸ್ಮರುಸುತ್ತೆನೆ . ಯಾವುದರಿಂದ ನಾನು ಮುಕ್ತಿಯ ಹೊಂದಲು  ಅಂತಹ ಉಪಾಯವ ಹೇಳು ಮಾಡುತ್ತೆನೆ


ವಿಣ್ಮೂತ್ರಕೂಪೇ ಪತಿತೋ ದಗ್ಧೋsಹಂ ಜಠರಾಗ್ನಿನಾ ।

ಇಚ್ಛನ್ನಿತೋ ವಿವಸಿತುಂ ಕದಾ ನಿರ್ಯಾಸ್ಯತೇ ಬಹಿಃ ॥೨೦॥


ಮಲ ಮೂತ್ರಗಳ ಕೂಪಲ್ಲಿ ಬಿದ್ದು ನಾನು ಜಠರಾಗ್ನಿಯಿಂದ ಬೆಂದು ಹೆರ ಬಹಾಳ ಇಚ್ಛಿಸುತ್ತಿದ್ದೆ. ನನ್ನ ಯಾವಾಗ ಬಿಡುಗಡೆ ಮಾಡಿಸುತ್ತೀಯಾ 


ಯೇನೇದೃಶಂ ಮೇ ವಿಜ್ಞಾನಂ ದತ್ತಂ ದೀನದಯಾಲುನಾ ।

ತಮೇವ ಶರಣಂ ಯಾಮಿ ಪುನರ್ಮೇ ಮಾsಸ್ತು ಸಂಸೃತಿಃ ॥೨೧॥


ಹೇಳು  ದೀನದಯಾಳುವೆ ಈ ರೀತಿಯ ವಿಶೇಷವಾದ ಜ್ಞಾನವ ನನಗೆ ಕೊಟ್ಟಿದನೋ ಅವನನ್ನೇ ಶರಣುಹೋಗುತ್ತೆವೆ . ಪುನಃ ನನಗೆ ಈ ಸಂಸಾರವು ಇಲ್ಲದಾಗಲಿ.


ನ ಚ ನಿರ್ಗಂತುಮಿಚ್ಛಾಮಿ ಬಹಿರ್ಗರ್ಭಾತ್ಕದಾಚನ ।

ಯತ್ರ ಯಾತಸ್ಯ ಮೇ ಪಾಪಕರ್ಮಣಾ ದುರ್ಗತಿರ್ಭವೇತ್ ॥೨೨॥


ಇಲ್ಲೆ, ನಾನು ಯಾವತ್ತೂ ಗರ್ಭದಿಂದ ಹೊರ ಬರಲು  ಇಚ್ಛಿಸುತ್ತೇನೆ ಹೇಳು ಎನ್ನ ಪಾಪಕರ್ಮಂಗಳ ಫಲವಾಗಿ ದುರ್ಗತಿ ಉಂಟಾದವು


ತಸ್ಮಾದತ್ರ ಮಹದ್ದುಃಖೇ ಸ್ಥಿತೋsಪಿ ವಿಗತಕ್ಲಮಃ ।

ಉದ್ಧರಿಷ್ಯಾಮಿ ಸಂಸಾರಾದಾತ್ಮಾನಂ ತೇ ಪದಾಶ್ರಯಃ ॥೨೩॥


ಹಾಗಾಗಿ ಇಲ್ಲಿ ಮಹಾದುಃಖದಲ್ಲಿ ಮುಳುಗಿದ್ದರೂ ನಾನು ದುಃಖರಹಿತನಾಗಿದ್ದೆ. ನಿನ್ನ ಪಾದಗಳಲ್ಲಿ ಆಶ್ರಯ ಪಡದು ಎನ್ನ ಆತ್ಮವ ಸಂಸಾರದಿಂದ ಉದ್ಧರಿಸು 


ಶ್ರೀಭಗವಾನುವಾಚ-


ಏವಂ ಕೃತಮತಿರ್ಗರ್ಭೇ ದಶಮಾಸ್ಯಃ ಸ್ತುವನ್ ಋಷಿಃ ।

ಸದ್ಯಃ ಕ್ಷಿಪತ್ಯವಾಚೀನಂ ಪ್ರಸೂತ್ಯೈ ಸೂತಿಮಾರುತಃ ॥೨೪॥


ಭಗವಂತ ಹೇಳಿದ – ಈ ರೀತಿ ಮನಸ್ಸಿಲ್ಲಿ ನಿರ್ಧರಿಸಿಕೋಂಡು ಗರ್ಭಲ್ಲಿ ಹತ್ತು ತಿಂಗಳು  ಸ್ತುತಿ ಮಾಡುತ್ತಿದ್ದ ಆತ್ಮದರ್ಶಿಯಾದ ಜೀವ ಆ ಕ್ಷಣ ಪ್ರಸೂತಿವಾಯುವಿಂದ ತಲೆಕೆಳಕಲಾಗಿ ನೂಕಲ್ಪಟ್ಟು ಪ್ರಸವಿಸಲ್ಪಡುತ್ತದೆ 


ತೇನಾವಸೃಷ್ಟಃ ಸಹಸಾ ಕೃತ್ವಾsವಾಕ್ಶಿರ ಆತುರಃ ।

ವಿನಿಷ್ಕ್ರಾಮತಿ ಕೃಚ್ಛ್ರೇಣ ನಿರುಚ್ಛ್ವಾಸೋ ಹತಸ್ಮೃತಿಃ ॥೨೫॥


ಅದರಿಂದ ಬಲವಾಗಿ ಹೊರಡಿಸಲ್ಪಟ್ಟು ತಲೆಯ ಬಗ್ಗಿಸಿ ಕೋಂಡು ಕಳವಳದಿಂದ ಸ್ಮೃತಿಶೂನ್ಯನಾಗಿ ಉಸುರುಕಟ್ಟಿದ ಹಾಗೆ  ಅತಿ ಕಷ್ಟದಿಂದ ಹೊರಬತ್ತದೆ .


ಪತಿತೋ ಭುವಿ ವಿಣ್ಮೂತ್ರೇ ವಿಷ್ಠಾಭೂರಿವ ಚೇಷ್ಟತೇ ।

ರೋರೂಯತಿ ಗತೇ ಜ್ಞಾನೇ ವಿಪರೀತಾಂ ಗತಿಂ ಗತಃ ॥೨೬॥


ಭೂಮಿಯ ಮೇಲೆ ಮಲಮೂತ್ರಲ್ಲಿ ಬಿದ್ದು, ಮಲಲ್ಗಿದ್ದ ಹುಳುವಿನ ಹಾಗೆ ವರ್ತಿಸುತ್ತ. ಜ್ಞಾನವು ಹೊರಟುಹೋಗಿ ವಿಪರೀತವಾದ ಗತಿಯ ಹೊಂದಿ ದೊಡ್ಡದಾಗಿ ಕೂಗುತ್ತದೆ 


ಗರ್ಭೇ ವ್ಯಾಧೌ ಶ್ಮಶಾನೇ ಚ ಪುರಾಣೇ ಯಾ ಮತಿರ್ಭವೇತ್ ।

ಸಾ ಯದಿ ಸ್ಥಿರತಾಂ ಯಾತಿ ಕೋ ನ ಮುಚ್ಯೇತ ಬಂಧನಾತ್ ॥೨೭॥


ಗರ್ಭದಲ್ಲಿ, ಕಾಯಿಲೆಲಿ ಸ್ಮಶಾನಲ್ಲಿ ಮತ್ತೆ ಪುರಾಣಗಳ ಕೇಳುವಾಗ ಯಾವ ಬುದ್ಧಿ ಉಂಟಾಗುತ್ತದೆಯೋ  ಅದು ಒಂದು ವೇಳೆ ಸ್ಥಿರವಾಗಿದ್ದರೆ, ಯಾರು ಈ ಸಂಸಾರ ಬಂಧನದಿಂದ ಬಿಡುಗಡೆ ಹೊಂದಿತ್ತಿದ್ದರು ?!


ಯದಾ ಗರ್ಭಾದ್ಬಹಿರ್ಯಾತಿ ಕರ್ಮಭೋಗಾದನಂತರಮ್ ।

ತದೈವ ವೈಷ್ಣವೀ ಮಾಯಾ ಮೋಹಯತ್ಯೇವ ಪೂರುಷಮ್ ॥೨೮॥


ಕರ್ಮಫಲವ ಅನುಭವಿಸಿದ ಮೇಲೆ ಮತ್ತೆ ಗರ್ಭದಿಂದ ಹೊರಬಂದ . ಕೂಡಲೆ ವೈಷ್ಣವೀ ಮಾಯೆ ಪುರುಷನ (ಜನ್ಮವೆತ್ತಿದವನ) ಮೋಹಗೊಳುಸುತ್ತದೆ 


ತದಾ ಮಾಯಯಾ ಸ್ಪೃಷ್ಟೋನ ಕಿಂಚಿದ್ವದತೇsವಶಃ ।

ಶೈಶವಾದಿಭವಂ ದುಃಖಂ ಪರಾಧೀನತಯಾsಶ್ನುತೇ ॥೨೯॥


ಅಗ ಅವ ಮಾಯೆಯ  ವಶನಾಗಿ ರಜವೂ/ಏನನ್ನೂ ಹೇಳಲು ಆಗದೆ . ಮತ್ತೆ ಪರಾಧೀನತೆಯಿಂದ ಬಾಲ್ಯದಲ್ಲಿ ಉಂಟಾದ ದುಃಖವ ಅನುಭವಿಸುತ್ತದೆ .


ಪರಚ್ಛಂದಂ ನ ವಿದುಷಾ ಪುಷ್ಯಮಾಣೋ ಜನೇನ ಸಃ ।

ಅನಭಿಪ್ರೇತಮಾಪನ್ನಃ ಪ್ರತ್ಯಾಖ್ಯಾತುಮನೀಶ್ವರಃ ॥೩೦॥


ಅವನ ಇಚ್ಛೆಯ ಅರ್ತುಗೊಳ್ಳದ್ದೆ ಇದ್ದ  ಜನರಿಂದ ಅವ ಪೋಷಿಸಲ್ಪಡುತ್ತನೆ ಮತ್ತು ತನಗೆ ಇಚ್ಛೆಯಿಲ್ಲದ್ದ ವಸ್ತುವ ಪಡದು ಅದಕ್ಕೆ ಪ್ರತಿ ಹೇಳಲು ಅಸಮರ್ಥನಾಗಿರುತ್ತನೆ 


ಶಾಯಿತೋsಶುಚಿಪರ್ಯಂಕೇ ಜಂತುಸ್ವೇದಜದೂಷಿತೇ ।

ನೇಶಃ ಕಂಡೂಯನೇಂsಗಾನಾಮಾಸನೋತ್ಥಾನಚೇಷ್ಟನೇ ॥೩೧॥


ಅಶುಚಿಯಾದ ಹಾಸಿಗೆಲಿ ಮುಳುಗಿದ , ಬೆವರಿಂದ ಹುಟ್ಟುವ ಕ್ರಿಮಿಗಳಿಂದ ಕೂಡಿದ ಆ ಶಿಶುವು ತನ್ನ ಅಂಗಗಳ ಕೆರದು ಕೊಳ್ಳುತ್ತಲೇ ,ಅಸಾಯಕನಾಗಿ , ಏಳಲು ಮತ್ತೆ ಚಲಿಸಲು ಅಸಮರ್ಥನಾಗಿರುತ್ತನೆ 


ತುದಂತ್ಯಾಮತ್ವಚಂ ದಂಶಾ ಮಶಕಾ ಮತ್ಕುಣಾದಯಃ ।

ರುದಂತಂ ವಿಗತಜ್ಞಾನಂ ಕೃಮಯಃ ಕೃಮಿಕಂ ಯಥಾ ॥೩೨॥


ನೆಲದಲ್ಲಿ ಇರುವ  ನುಸಿ, ತಿಗಣೆ ಇತ್ಯಾದಿಗಳು  ಅವನ ಎಳೆಚರ್ಮವ ಕ್ರಿಮಿಗಳು ಸಣ್ಣ ಹುಳುಗಳು  ಕಚ್ಚುತ್ತದೆ ಕಚ್ಚಿದಾಗ ಜ್ಞಾನರಹಿತನಾಗಿ ಕೂಗುತ್ತನೆ 


ಇತ್ಯೇವಂ ಶೈಸವಂ ಭುಕ್ತ್ವಾ ದುಃಖಂ ಪೌಗಂಡಮೇವ ಚ ।

ತತೋ ಯೌವನಮಾಸಾದ್ಯ ಯಾತಿ ಸಂಪದಮಾಸುರೀಮ್ ॥೩೩॥


ಈ ರೀತಿ ಬಾಲ್ಯ ಹಾಗೂ ಕೌಮಾರ್ಯವಸ್ಥೆಗಳ ದುಃಖಗಳನ್ನು ಅನುಭವುಸಿ, ಮತ್ತೆ ಯೌವನ ಪಡದು ಆಸುರೀ ಸಂಪತ್ತ ಪಡೆಯುತ್ತಾನೆ 


ತದಾ ದುರ್ವ್ಯಸನಾಸಕ್ತೋ ನೀಚಸಂಗಪರಾಯಣಃ ।

ಶಾಸ್ತ್ರಸತ್ಪುರುಷಾಣಾಂ ಚ ದ್ವೇಷ್ಟಾ ಸ್ಯಾತ್ಕಾಮಲಂಪಟಃ ॥೩೪॥


ಅಷ್ಟರಲ್ಲಿ  ದುರ್ವ್ಯಸನದಲ್ಲಿ ಆಸಕ್ತನಾಗಿ, ನೀಚರ ಸಂಗಗಲ್ಲಿ ತಲ್ಲೀನನಾಗಿ ಶಾಸ್ತ್ರಗಳನ್ನೂ ಸತ್ಪುರುಷರನ್ನೂ ದ್ವೇಷಿಸಿಕೋಂ ಡು ಕಾಮಲಂಪಟನಾಗಿ ಇರುತ್ತನೆ .


ದೃಷ್ಟ್ವಾ ಸ್ತ್ರಿಯಂ ದೇವಮಾಯಾಂ ತದ್ಭಾವೈರಜಿತೇಂದ್ರಿಯಃ ।

ಪ್ರಲೋಭಿತಃ ಪತತ್ಯಂಧೇ ತಮಸ್ಯಗ್ನೌ ಪತಂಗವತ್ ॥೩೫॥


ದೇವಮಾಯೆಯಿಂದ ಕೂಡಿದ ಸ್ತ್ರೀಯ ನೋಡಿದೊಡೆ  ಅದರ ಹಾವಭಾವಗಳಿಂದ ಪ್ರಲೋಭಿತನಾಗಿ, ಇಂದ್ರಿಯಕ್ಕೆ ಅಧೀನನಾದ ಅವ ಅಗ್ನಿಲಿ ಬೀಳುವ ಪತಂಗದಾಗೆ ಕಗ್ಗತ್ತಲೆಲಿ ಬೀಳುತ್ತನೆ 


ಕುರುಂಗಮಾತಂಗಪತಂಗಭೃಂಗಮೀನಾ ಹತಾಃ ಪಂಚಭಿರೇವ ಪಂಚ ।

ಏಕಃ ಪ್ರಮಾದೀ ಸ ಕಥಂ ನ ಹನ್ಯತೇ ಯಃ ಸೇವತೇ ಪಂಚಭಿರೇವ ಪಂಚ ॥೩೬॥


ಜಿಂಕೆ, ಆನೆ, ದೀಪದ ಹುಳು, ಭ್ರಮರ, ಮೀನು ಈ ಐದು ಪ್ರಾಣಿಗಳು  ಐದು ಇಂದ್ರಿಯಂಗಳಲ್ಲಿ ಒಂದೊಂದರಿಂದ ಹತವಾಗುವವು ಐದು ವಿಷಯಗಳನ್ನೂ ತನ್ನ ಐದು ಇಂದ್ರಿಯಗಳಿಂದ ಸೇವಿಸಿ ವಿಷಯ ಸುಖದ ಅಮಲೇರಿದವ ಹೇಗೆ ಹತನಾಗದೆ ಇರುತ್ತಾನೆ? 


ಅಲಬ್ಧಾಭೀಪ್ಸಿತೋsಜ್ಞಾನಾದಿದ್ಧಮನ್ಯುಃ ಶುಚಾರ್ಪಿತಃ ।

ಸಹ ದೇಹೇನ ಮಾನೇನ ವರ್ಧಮಾನೇನ ಮನ್ಯುನಾ ॥೩೭॥


ತಾನು ಇಚ್ಛೆಪಟ್ಟದ್ದು ಲಭಿಸದ್ರೆ ಅಜ್ಞಾನದ ಕೋಪವು ಉಜ್ವಲಿಸಿ ದುಃಖಿತನಾವುತ್ತನೆ . ಅವನ ದೇಹದ ಒಟ್ಟಿಗೆ ಅಷ್ಟೇ ಪ್ರಮಾಣಲ್ಲಿ ಅವನ ಕೋಪವು ವೃದ್ಷಿಯಾಗುತ್ತದೆ 


ಕರೋತಿ ವಿಗ್ರಹಂ ಕಾಮೀ ಕಾಮಿಷ್ವಂತಾಯ ಚಾತ್ಮನಃ ।

ಬಲಾಧಿಕೈಃ ಸ ಹನ್ಯೇತ ಗಜೈರನ್ಯೈರ್ಗಜೋ ಯಥಾ ॥೩೮॥


ಕಾಮೀ ಪುರುಷ ತನ್ನ ನಾಶಕ್ಕಾಗಿ ಇತರ ಕಾಮೀಪುರುಷರೊಟ್ಟಿಗೆ ಯುದ್ಧ ಮಾಡುತ್ತ ಅವ ತನ್ನಿಂದ ಹೆಚ್ಚಿನ ಬಲವಂತನಿಂದ, 


ಒಂದು ಆನೆ ಇನ್ನೊಂದು ಆನೆಯನ್ನು  ಹತ ಆದಹಾಗೆ ಕೊಲ್ಲಲ್ಪಡುತ್ತಾನೆ 


ಏವಂ ಯೋ ವಿಷಯಾಸಕ್ತ್ಯಾ ನರತ್ವಮತಿದುರ್ಲಭಮ್ ।

ವೃಥಾ ನಾಶಯತೇ ಮೂಢಸ್ತಸ್ಮಾತ್ಪಾಪತರೋ ಹಿ ಕಃ ॥೩೯॥


ಹೀಗೆ ಯಾವ ಮೂಢ ವಿಷಯ ಭೋಗಗಳಲ್ಲಿ ಆಸಕ್ತನಾಗಿ ಅತಿ ದುರ್ಲಭವಾದ ಮನುಷ್ಯತ್ವವ ವ್ಯರ್ಥವಾಗಿ ನಾಶಮಾಡುತ್ತನೋ ಅವನಿಂದ ಹೆಚ್ಚಿನ ಪಾಪಗಳು ಆರಿದವು ?!


ಜಾತೀಶತೇಷು ಲಭತೇ ಭುವಿ ಮಾನುಷತ್ವ ತತ್ರಾಪಿ ದುರ್ಲಭತರಂ ಖಲು ಭೋ ದ್ವಿಜತ್ವಮ್ ।

ಯಸ್ತನ್ನ ಪಾಲಯತಿ ಲಾಲಯತೀಂದ್ರಿಯಾಣಿ ತಸ್ಯಾಮೃತಂ ಕ್ಷರತಿ ಹಸ್ತಗತಂ ಪ್ರಮಾದಾತ್ ॥೪೦॥


ಈ ಭೂಮಿಲಿಪ್ಪ ನೂರಾರು ಜೀವ ಜಾತಿಗಳಲ್ಲಿ ಮನುಷ್ಯತ್ವವು ಅದರಲ್ಲಿಯೂ ದ್ವಿಜತ್ವವು ನಿಜವಾಗಿಯೂ ಅತ್ಯಂತ ದುರ್ಲಭವಾದ್ದು.  ಯಾವತನು ಅದರ ಪಾಲುಸುತ್ತನೆಯೋ ಮತ್ತೆ ಇಂದ್ರಿಯಗಳ ಲಾಲುಸುತ್ತನೋ ಅವ ಕೈಗೆ ಸಿಕ್ಕಿದ ಅಮೃತವ ಮೂರ್ಖತನದಿಂದ ಹಾಳು ಮಾಡಿಗೊಳ್ಳುತ್ತನೆ 

.

ತತಸ್ತಾಂ ವೃದ್ಧತಾಂ ಪ್ರಾಪ್ಯ ಮಹಾವ್ಯಾಧಿಸಮಾಕುಲಃ ।

ಮೃತ್ಯುಂ ಪ್ರಾಪ್ಯ ಮಹದುಃಖಂ ನರಕಂ ಯಾತಿ ಪೂರ್ವವತ್ ॥೪೧॥


ಹಾಗೆಯೇ ಮತ್ತೆ ವೃದ್ಧನಾಗಿ, ಮಹಾವ್ಯಾಧಿಗಳ ಹೊಂದಿ, ಅತಿ ದುಃಖದಿಂದ  ಮರಣಹೊಂದಿ, ಮೊದಲಿನ ಹಾಗೆ ನರಕಕ್ಕೆ ಹೋಗುತ್ತಾನೆ 

 

ಏವಂ ಗತಾಗತೈಃ ಕರ್ಮಪಾಶೈರ್ಬದ್ಧಾಶ್ಚ ಪಾಪಿನಃ ।

ಕದಾಪಿ ನ ವಿರಜ್ಯಂತೇ ಮಮ ಮಾಯಾವಿಮೋಹಿತಾಃ ॥೪೨॥


ಹೀಗೆ ನರಕಕ್ಕೆ ಹೋಗುತ್ತಾ  ಬರುತ್ತಾ ಇರುವ ಕರ್ಮಪಾಶದಿಂದ ಬದ್ಧರಾದ ಪಾಪಿಗಳು  ಎನ್ನ ಮಾಯೇಯಿಂದ ಮೋಹಿತರಾಗಿ ಏವತ್ತೂ ವೈರಾಗ್ಯವ ಪಡುವುದಿಲ್ಲ 


ಇತಿ ತೇ ಕಥಿತಾ ತಾರ್ಕ್ಷ್ಯ ಪಾಪಿನಾಂ ನಾರಕೀ ಗತಿಃ ।

ಅಂತ್ಯೇಷ್ಟಿಕರ್ಮಹೀನಾನಾಂ ಕಿಂ ಭೂಯಃ ಶ್ರೋತುಮಿಚ್ಛಸಿ ॥೪೩॥


ಏ ಗರುಡನೇ, ಹೀಗೆ ನಾನು ನಿನಗೆ ಪಾಪಿಗಳು ಮತ್ತೆ ಅಂತ್ಯೇಷ್ಟಿ ಕರ್ಮ ಮಾಡಲ್ಪಡದವರ ನರಕದ ಗತಿಯ ಹೇಳಿದ್ದೆ. ಇನ್ನು ಹೆಚ್ಚಿಗೆ ಎನು ಕೇಳಲು  ಇಚ್ಛಿಸುತ್ತಿಯ 


ಇತಿ ಶ್ರೀಗರುಡಪುರಾಣೇ ಸಾರೋದ್ಧಾರೇ ಪಾಪಿಜನ್ಮಾದಿ ದುಃಖನಿರೂಪಣಂ ನಾಮ ಷಷ್ಠೋsಧ್ಯಾಯಃ ॥


ಇಲ್ಲಿ ಶ್ರೀ ಗರುಡಪುರಾಣಲ್ಲಿ ಸಕಲ ಶಾಸ್ತ್ರಗಳ ಸಾರವಾದ ‘ಸಾರೋದ್ಧಾರ’ ವಿಭಾಗಲ್ಲಿ ‘ಪಾಪಿಗಳ ಜನ್ಮಾದಿ ದುಃಖಗಳ ನಿರೂಪಣೆ’ ಹೇಳುವ ಆರನೇ ಅಧ್ಯಾಯ ಮುಗಿತ್ಉ 

No comments:

ನರನಾಡಿಗಳು

*ನರನಾಡಿಗಳು ಎಂದರೇನು ?* *ಇವುಗಳ ಮಹತ್ವ ಏನು ? ದೇಹದಲ್ಲಿ ಇವುಗಳು ಪ್ರತ್ಯೇಕವಾಗಿ ಇರುತ್ತವೆ  *ನರ(nerves) -* *ಮೆದುಳು,ಮೆದುಳು* *ಬಳ್ಳಿ(ಬೆನ್ನು ಹುರಿ) ಮತ್ತು* *ಅ...