ಮೊದಲು ದಕ್ಷಿಣಾಗ್ನಿ:-
ಹವಿಷಃ
ಪ್ರಸ್ಥಿತ
ವೀತ
ಹರ್ಯತ
ವೃಷಣಾ
ಜುಷತಾ
ಸುಶರ್ಮ
ಸ್ವವಸಾ
ಭೂತ
ಧತ್ತ
ಇವೆಲ್ಲಾ ದಕ್ಷಿಣಾಗ್ನಿಯಲ್ಲಿ ಮುಖ್ಯಪ್ರಭೇದ. ಇನ್ನು ಇವುಗಳ ಅಂಶಾಗ್ನಿಗಳು ಪ್ರತಿಯೊಂದೂ 6 ವಿಧದಲ್ಲಿವೆ. ಒಟ್ಟು 60 ಪ್ರಭೇದಗಳು. ಇವೆಲ್ಲಾ ಅತೀ ತೀಕ್ಷ್ಣಾಗ್ನಿಗಳು.
ಇದರಲ್ಲಿ ಹವಿಷಃ ದ ಜ್ವಲನಶಕ್ತಿ ಸಾಮಾನ್ಯ (1800 ಡಿಗ್ರಿ ಸೆಲ್ಸಿಯಸ್) ಅಥವಾ ಮಂಡೂರ ಶಾಖ. ಇದರ 6 ಪ್ರಭೇದಗಳು-
ರಂಜಕ
ವ್ಲೀಹ
ಋಚಿ
ಉನ್ಮಾತೃ
ಖಾಂಡವ
ಅನಲ
ಇವೆಲ್ಲಾ ಮೂಲಶಕ್ತಿಗೆ ಹತ್ತುಪಟ್ಟು ಹೆಚ್ಚುತ್ತಾ ಹೋಗುವ ಶಕ್ತಿಯವು. ಆದರೆ ಇವಕ್ಕೆ ಮೂಲ ಇಂಧನರಾಹಿತ್ಯ ಅಗ್ನಿಗಳು. ಇವಕ್ಕೆ ಉರಿಯಲು ಇಂಧನ ಬೇಡ. ಕಂಪಕಾರಣ ಜ್ವಲಿತವಿವು. ಅದರಲ್ಲಿ ಧತ್ತಾಗ್ನಿಯು ಒಮ್ಮೆ ಜ್ವಲಿತವಾದರೆ ಉಪಸಂಹಾರ ಗೊತ್ತಿಲ್ಲದಿದ್ದಲ್ಲಿ ಅದು ಆರುವುದೇ ಇಲ್ಲ. ಪ್ರಪಂಚದ ಎಲ್ಲವನ್ನೂ ತನ್ನಲ್ಲಿ ಕರಗಿಸಿಕೊಳ್ಳುತ್ತಾ ಶೂನ್ಯ ಸೃಷ್ಟಿ ಮಾಡುವ ಅಗಾಧ ಶಕ್ತಿಯುತವಾದದ್ದು. ಇದರ ಶಕ್ತಿಯನ್ನು ಅಳೆಯುವುದಕ್ಕೆ ಮಾಪನವೇ ಇಲ್ಲ.
ಒಂದು ವಿಚಾರ ಗಮನಿಸಿ. ಮಹಾಭಾರತ ಯುದ್ಧಕಾಲದಲ್ಲಿ ಕೌರವ ಭೀಷ್ಮರಲ್ಲಿ ತನ್ನ ಸೇನೆಯ ಮತ್ತು ಪಾಂಡವಸೇನೆಯ ಬಲಾಬಲ, ಅತಿರಥ, ಮಹಾರಥರ ಶಕ್ತಿಯನ್ನು ವಿವರಿಸ ಬೇಕೆಂದಾಗ ಭೀಷ್ಮರು ಹೇಳುತ್ತಾರೆ- ಯಾರು ಯಾರು ಎಂತಹ ವೀರರು ಹಾಗೂ ಒಟ್ಟು ಸೇನೆಯನ್ನು ಯಾರು ಎಷ್ಟು ಕಾಲದಲ್ಲಿ ನಿರ್ನಾಮ ಮಾಡಬಲ್ಲರು ಎಂದು ಹೇಳುತ್ತಾ ತನಗೆ ಒಂದಿನ, ದ್ರೋಣರಿಗೆ ಮೂರುದಿನ, ಅಶ್ವತ್ಥಾಮನಿಗೆ ಒಂದು ನಿಮಿಷ, ಪಾರ್ಥನಿಗೆ ನಿಮಿಷಾರ್ಧ ಸಾಕು. ಈ ಒಟ್ಟು ಹದಿನೆಂಟು ಅಕ್ಷೋಹಿಣಿ ಸೈನ್ಯವನ್ನು ನಾಶಮಾಡಲು ಎಂದು ಹೇಳುತ್ತಾರೆ. ಅಂದರೆ ಈ ಅಗ್ನಿಯ ಸಿದ್ಧಿ ಮಾಡಿಕೊಂಡವ ಕ್ಷಣಾರ್ಧದಲ್ಲಿ ಸರ್ವನಾಶ ಮಾಡಬಲ್ಲ ಎನ್ನುತ್ತಾರೆ. 18 ಅಕ್ಷೋಹಿಣಿ ಸೇನೆಯನ್ನು ಕ್ಷಣಾರ್ಧದಲ್ಲಿ ನಾಶಮಾಡುವ ಶಕ್ತಿ ಅರ್ಜುನ ಹೊಂದಿದ್ದಾನೆಯೆಂದರೆ ಆಗ್ನೇಯಾಸ್ತ್ರ ಶಕ್ತಿಯ ಪ್ರಮಾಣ ನೀವೇ ಅಳೆದುಕೊಳ್ಳಿರಿ. ಇವೆಲ್ಲಾ 60 ವಿಧದ ದಕ್ಷಿಣಾಗ್ನಿ ಪ್ರಭೇದಗಳು. ಇನ್ನು ಗಾರ್ಹಪತ್ಯಾಗ್ನಿಯಲ್ಲಿ 1011 ಪ್ರಭೇದಗಳು. ಇವೆಲ್ಲಾ ಸಹಜ ಇಂಧನಮೂಲ. ಭೌತಿಕವಸ್ತುಗಳನ್ನು ಅವಲಂಬಿಸಿ ಪ್ರಖರತೆ ಪಡೆಯುವ ಶಕ್ತಿಹೊಂದಿದ ಅಗ್ನಿಗಳು. ಇಲ್ಲಿ
ಚಿತಿಗಳು :- 184 ವಿಧ
ಇಷ್ಠಿಕಗಳು :- 156 ವಿಧ
ಸೋಮಗಳು :- 109 ವಿಧ
ಜಯಾದಿಗಳು :- 365 ವಿಧ
ಉಪಾಸನಾಗ್ನಿಗಳು :- 144 ವಿಧ
ಸಂಸ್ಕಾರಾಗ್ನಿಗಳು :- 53 ವಿಧ ಒಟ್ಟು 1011 ವಿಧ.
ಇವೆಲ್ಲಾ ಆಯಾಯ ಸಂಸ್ಕಾರ ಆಧರಿಸಿ ಅಗ್ನಿಯನ್ನು ಸಂಯೋಜನ ಮಾಡುವ ಪ್ರಕ್ರಿಯೆಯೇ ಸಂಸ್ಕಾರ ಎನ್ನಿಸಿಕೊಳ್ಳುತ್ತದೆ. ಅಲ್ಲಿ ಬಲವರ್ಧನಾದಿ 22 ಅಗ್ನಿಭೇದಗಳು ಸಾಮಾನ್ಯವಾಗಿ ಮಾನವಜೀವನ ಸಂಸ್ಕಾರಕ್ಕೆ ಸಾಕು. ಇನ್ನುಳಿದ 31 ವಿಧಗಳು ಯಾಗ, ಯಜ್ಞ, ಇಷ್ಠಿ, ಚಿತಿಗಳಲ್ಲಿ ಭಿನ್ನ ಭಿನ್ನ ರೂಪದಿಂದ ವ್ಯವಹರಿಸುತ್ತವೆ. ಒಟ್ಟು ವಿಶೇಷ ಉದ್ದೇಶದಿಂದ ಮಾಡುವ ಇತರೆ ಯಾಗಯಜ್ಞ ಯೋಜನದಲ್ಲಿ ಈ ಯಾವುದೇ ವಿಧದ ಅಗ್ನಿಯೂ ಬಳಕೆಯಾಗಬಹುದು. ಆದರೆ ಎಲ್ಲವೂ ಶಾಂತ, ಸುಶೀಲ, ಶ್ರೇಷ್ಠ ಅಗ್ನಿ ಪ್ರಭೇದಗಳು. ಇದನ್ನು ಮಾನವನಿಗೆ ಬಳಕೆಗೆ ಶ್ರೇಷ್ಠವೆಂದು ಸೂತ್ರಕಾರರು ಇವುಗಳನ್ನು ಮರ್ತ್ಯಾಗ್ನಿ ಪ್ರಭೇದವೆಂದು ಹೇಳಿರುತ್ತಾರೆ. ಇದರ ಮೂಲ ಮಾತ್ರಾ ಗೃಹಿಣಿ, ಸುಮಂಗಲಿ, ಹೆಣ್ಣು. ಅವಳೇ ಅನಸೂಯೆ.
ಇನ್ನು ಮೂರನೆಯದಾದ ಆವಹನೀಯಾಗ್ನಿ. ಇದು ಚಿತ್ರರೂಪಾ ಎಂದಿದೆ ವೇದ. ಹಲವು ಪರಿವರ್ತನೆಗಳಿಂದ ಭಿನ್ನಾಂಶಯುಕ್ತವಾಗಿದ್ದು ಪ್ರಾಪಂಚಿಕ ಬೆಳೆಸುತ್ತಾ ಆಧ್ಯಾತ್ಮದೆಡೆಗೆ ಕೊಂಡೊಯ್ಯುವ ವಿಶಿಷ್ಠಗುಣವನ್ನು ಹೊಂದಿರುತ್ತದೆ. ಆದರೆ ಇದರ ಮಾತೃಕೆಯೂ ಸ್ತ್ರೀಯೊಬ್ಬಳಿಂದ ಪ್ರಕಟಗೊಂಡು ಗೃಹಸ್ಥನಿಂದ ಔಪಾಸನೆಗೊಂಡು ನಂತರವೇ ಆವಹನೀಯ ಗುಣವನ್ನು ಹೊಂದಿ ಲೋಕಮುಖದಲ್ಲಿ ವ್ಯವಹರಿಸುತ್ತದೆ. ಅದರ ವಿವರ ಗಮನಿಸಿ;
ಉದಾ:-ನಾಚಿಕೇತಾಗ್ನಿ. ಒಂದು ಆಹವನೀಯ ಭಾಗದ ಪ್ರಭೇದ. ಇಲ್ಲಿ ವಾಜಶ್ರವನ ಮಗ ನಚಿಕೇತನು ತಾನು ಆರ್ಜಿಸಿದ ಜ್ಞಾನಕಾರಣದಿಂದಾಗಿ ನಚಿಕೇತನ ಅಧ್ಯಾಪಿತ ಜ್ಞಾನವೇ ಒಂದು ಅಗ್ನಿ ಪ್ರಭೇದ. ಹಾಗೇ ಬೇರೆ ಬೇರೆ ಋಷಿ, ಮುನಿ, ಮನುಗಳ ಜ್ಞಾನವೇ ಅಗ್ನಿಯಾಗಿ ರೂಪು ಪಡೆಯುತ್ತದೆ. ಅದನ್ನು ಸಾಧಿಸುವ ವಿಧಾನವೇ ವಿಶೇಷ ಸಾಧನೆ. ಆದರೆ ಈ ಅಗ್ನಿಯಲ್ಲಿ ಶಾಖವಿಲ್ಲ, ಸುಡುವುದಿಲ್ಲ, ತಂಪಾಗಿರುತ್ತದೆ. ಅಲ್ಲಿ ಅದನ್ನು ಪ್ರಖರಗೊಳಿಸುವುದೇ ಒಂದು ತಾಂತ್ರಿಕವಿಧ್ಯೆ. ಇಲ್ಲಿ
ರಸಾದಿ ಸಂಸ್ಕರಣ ವಿಧ್ಯೆಗಳು,
ಧಾತು ಸಂಸ್ಕರಣಾದಿಗಳು,
ಲೋಹ ಸಂಸ್ಕರಣಾದಿಗಳು,
ಜೀವಸಂಸ್ಕರಣಾದಿಗಳು,
ಮಾನವ ಸಂಸ್ಕರಣಾದಿಗಳು,
ಮನೋ ಸಂಸ್ಕರಣಾದಿಗಳು,
ಆತ್ಮ ಸಂಸ್ಕರಣಾದಿಗಳು
ಎಂಬ 7 ರೀತಿಯ ಉಜ್ಜೀವಿತ ವಿಧ್ಯಾಪ್ರಕಾರವೇ ಇದೆ. ಇದು ಏನನ್ನೂ, ಏನಕ್ಕೇನೂ ಮಾಡಬಲ್ಲ ಪರಿವರ್ತಿಸಿ ರೂಪುಗೊಡುವ ಶಕ್ತಿ ಇದಕ್ಕಿದೆ.
ನಚಿಕೇತಾಗ್ನಿಯಲ್ಲಿ ನೀವು ಹೋಮಿಸಿದ ವಸ್ತು ಸುಡುವುದಿಲ್ಲ ಆದರೆ ವಸ್ತು ಪರಿವರ್ತನೆಯಾಗುತ್ತದೆ. ಅದು ಐಚ್ಛಿಕ. ಅದರಲ್ಲಿ ಶಾಖವಿಲ್ಲ. ಭೌತಿಕವಸ್ತುವನ್ನು ಯಾವುದನ್ನೂ ಸುಡುವುದಿಲ್ಲ. ಆದರೆ ಪರಿವರ್ತಿಸಬಲ್ಲದು. ಅದರ ರಸ, ದ್ರವ್ಯ, ಧಾತು, ಶಕ್ತಿ, ಋಣ, ಕಣ, ಗುಣ ಆಧರಿಸಿ ಅದು ರೂಪಾಂತರ ಹೊಂದುತ್ತದೆ

No comments:
Post a Comment