Followers

Thursday, 7 May 2020

ಪಂಚಭೂತಗಳಲ್ಲಿ ಅಗ್ನಿ

ಅರುಣಾಚಲೇಶ್ವರರ್ ದೇವಾಲಯ (ಅಗ್ನಿ)
ತಮಿಳುನಾಡಿನ ತಿರುವಣ್ಣಮಲೈ ಪಟ್ಟಣದ ಅಣ್ಣಾಮಲೈ ಬೆಟ್ಟ ಶ್ರೇಣಿಗಳಲ್ಲಿ ನೆಲೆಸಿರುವ ಈ ದೇವಾಲಯವು ಪಂಚಭೂತಗಳಲ್ಲೊಂದಾದ ಅಗ್ನಿ ತತ್ವಕ್ಕೆ ಸಂಬಂಧಿಸಿದ ದೇವಾಲಯವಾಗಿದೆ
. ಇಲ್ಲಿರುವ ಶಿವಸ್ವರೂಪಿ ಲಿಂಗವನ್ನು ಅಣ್ಣಮಲಯರ್ ಅಥವಾ ಅರುಣಾಚಲೇಶ್ವರನ ರೂಪದಲ್ಲಿ ಪೂಜಿಸಲಾಗುತ್ತದೆ. 10 ಹೆಕ್ಟೇರ್ ಪ್ರದೇಶದಲ್ಲಿ ಬೃಹತ್ತಾಗಿ ಹರಡಿರುವ ಈ ದೇವಾಲಯ ಸಂಕೀರ್ಣವು ಹಲವು ಎತ್ತರದ ಗೋಪುರಗಳನ್ನು ಹೊಂದಿದ್ದು ಪೂರ್ವಭಾಗದ ಗೋಪುರವು ಅತ್ಯಂತ ಎತ್ತರದ ಗೋಪುರವಾಗಿದೆ. ಇದರ ಎತ್ತರ ಸುಮಾರು 217 ಅಡಿ ಅಥವಾ 66 ಮೀಟರ್ಗಳಷ್ಟು.

ಪ್ರತಿದಿನ ಆರು ಪೂಜಾ ವಿಧಿ ವಿಧಾನಗಳು ಇಲ್ಲಿ ಜರುಗುತ್ತಿದ್ದು ಬೆಳಿಗ್ಗೆ 5.30 ರಿಂದ ರಾತ್ರಿ 10 ಘಂಟೆಅಯವರೆಗೆ ತೆರೆದಿರುತ್ತದೆ. ತಿರುವಣ್ಣಮಲೈ ರೈಲು ನಿಲ್ದಾಣದಿಂದ ಕೇವಲ 1.6 ಕಿ.ಮೀ ಗಳಷ್ಟು ದೂರದಲ್ಲಿರುವ ಈ ದೇವಾಲಯವನ್ನು ಸುಲಭವಾಗಿ ತಲುಪಬಹುದು

ಆಕಾಶಾದ್ವಾಯುಃ ವಾಯೋರಗ್ನಿಃ
ಅಗ್ನೇರಾಪಃ ಆಪಃ ಪೃಥಿವೀ...

ಜಗತ್ತಿನ ಸೃಷ್ಟಿಯನ್ನು ನಮ್ಮ ವೇದಗಳು ಬಹು ಸೊಗಸಾಗಿ ಬಣ್ಣಿಸುತ್ತವೆ. ಅದರನ್ವಯ ಈ ಸಮಸ್ತ ಸೃಷ್ಟಿಗೆ ಮೂಲಾಧಾರವಾದುದು ಹಿರಣ್ಯಗರ್ಭ ಅಂದರೆ ಅದು ಅತ್ಯಂತ ಸೂಕ್ಷ್ಮಪರಮಾಣು ಸ್ವರೂಪಿ. ಅದೇ ಪರಬ್ರಹ್ಮ ವಸ್ತು. ಅದಕ್ಕೆ ಪೂರಕವಾದುದು ಆಕಾಶ. ಎಲ್ಲ ತತ್ತ್ವಗಳಿಗೂ ಇದೇ ಮೂಲಾಧಾರ. ಯಾವುದೇ ಪರಿಗೊಳಪಡದ ಅತ್ಯಂತ ವಿಶಾಲವಾದ ಹಾಗೂ ಈ ಎಲ್ಲ ಗ್ರಹ ನಕ್ಷತ್ರಗಳಿಗೂ ಆಶ್ರಯತಾಣವಾದುದು ಆಕಾಶ. ಅದರಿಂದ ಹುಟ್ಟಿದುದು ಗಾಳಿ. ವಿಶಾಲವಾದ ಪರಿಯಲ್ಲಿ ಪರಮಾಣುಗಳ ಸಂಯೋಜನೆಯಿಂದ ವಾಯುವಿನ ವ್ಯತ್ಪತ್ತಿ ಆಗುತ್ತಿದ್ದಂತೆಯೇ ಪರಮಾಣುಗಳ ಸಂಘರ್ಷದಲ್ಲಿ ಅಗ್ನಿಯ ಆವಿರ್ಭಾವವಾಗುತ್ತದೆ. ಅಗ್ನಿ ಮತ್ತು ಗಾಳಿಯ ಪರಮಾಣುಗಳು ಸಂಯೋಜನೆಗೊಂಡು ರಸೋತ್ಪತ್ತಿ ಆಗುತ್ತದೆ. ಇದೇ ಜಲ ಜನನಕ್ಕೆ ಕಾರಣವಾಗುತ್ತದೆ. ಅಗ್ನಿ ಗೋಳದ ವಿಸ್ಫೋಟದಿಂದಲೇ ನೀರು ಕಾಣಿಸಿಕೊಳ್ಳುತ್ತದೆ. ಅಂಥ ಜಲ ಮತ್ತು ಅಗ್ನಿಯ ಸಂಯೋಜನೆಯಲ್ಲಿ ಅಗ್ನಿ ಗೋಲ ತಣ್ಣಗಾಗಿ ಜಲದಲ್ಲಿಯೇ ಈ ಭೂಮಿಯ ರಚನೆ ಆಗುತ್ತದೆ.

ಇಂಥ ಮಹಾ ವಿಸ್ಫೋಟ ಸಂಭವಿಸಿ ಜಗತ್ತು ನಿರ್ಮಾಣಗೊಂಡದ್ದಕ್ಕೆ ನಮ್ಮ ವೇದಗಳಲ್ಲಿ ಅತ್ಯಂತ ಕರಾರುವಾಕ್ ಲೆಕ್ಕಾಚಾರವಿದೆ. ಆಧುನಿಕ ವಿಜ್ಞಾನದ ಪ್ರಕಾರ ಈ ಭೂಮಿಯ ಆಯುಸ್ಸಿನ ಬಗ್ಗೆ ನಾನಾ ಗೊಂದಲಗಳಿದ್ದರೂ ವೇದಗಳನ್ವಯ ಈ ಸೃಷ್ಟಿಗೆ ಒಂದು ವೃಂದ, ತೊಂಬತ್ತಾರು ಕೋಟಿ, ಎಂಟು ಲಕ್ಷ, ಐವತ್ತೆರಡು ಸಾವಿರದ ಒಂಬೈನೂರಾ ಎಪ್ಪತ್ತಾರು(1,96,08,52,976) ವರ್ಷಗಳಾದವು.

ವೇದಗಳ ಲೆಕ್ಕಾಚಾರ ಅತ್ಯಂತ ಕುತೂಹಲಕಾರಿ. ಸ್ವಾಯಂಭುವ, ಸ್ವಾರೋಚಿಷ, ಔತ್ತಮಿ, ತಾಮಸ, ರೈವತ, ಚಾಕ್ಷಷು, ವೈವಸ್ವತ ಎಂಬ ಏಳು ಮತ್ತು ಸಾವರ್ಣೀ ಹೆಸರಿನ ಏಳು (ದಕ್ಷ ಸಾವರ್ಣೀ, ಬ್ರಹ್ಮ ಸಾವರ್ಣಿ, ಧರ್ಮ, ರುದ್ರ ರೋಚ್ಯದೇವ ಹಾಗೂ ಇಂದ್ರ ಸಾವರ್ಣಿ) ಸೇರಿ ಒಟ್ಟು ಹದಿನಾಲ್ಕು ಮನ್ವಂತರಗಳು. ಕೃತ, ತ್ರೇತಾ, ದ್ವಾಪರ, ಕಲಿ ಹೀಗೆ ನಾಲ್ಕು ಯುಗಗಳು. ಇಂಥ ಚತುರ್ಯುಗಗಳ ಎಪ್ಪತ್ತೊಂದು ಆವರ್ತನಕ್ಕೆ ಒಂದು ಮನ್ವಂತರ. ಬ್ರಹ್ಮನ ಒಂದು ಹಗಲೆಂದರೆ ಒಂದು ಸಾವಿರ ಚತುರ್ಯುಗಗಳು. ರಾತ್ರಿಯೆಂದರೂ ಅಷ್ಟೇ. (ಇಲ್ಲಿ ಸೃಷ್ಟಿಯೆಂದರೆ ಒಂದು ಹಗಲು ಮತ್ತು ಪ್ರಳಯವೆಂದರೆ ಒಂದು ರಾತ್ರಿಯಂತೆ) ಈಗ ನಾವು ಆರನೆಯದಾದ ವೈವಸ್ವತ ಮನ್ವಂತರದಲ್ಲಿದ್ದೇವೆ. ಅದರಲ್ಲಿ ಇಪ್ಪತ್ತೆಂಟನೆಯ ಆವರ್ತದ ಕಲಿಯುಗದ ಪ್ರಥಮ ಪಾದ ನಡೆಯುತ್ತಿದೆ. ಕಲಿಯುಗದ ಒಟ್ಟು ಅವಧಿಯಲ್ಲಿ ನಾಲ್ಕು ಸಾವಿರದ ಒಂಬೈನೂರಾ ಎಪ್ಪತ್ತಾರು ವರ್ಷಗಳು ಕಳೆದಿದ್ದು, ಇನ್ನೂ ಕಲಿಯುಗದಲ್ಲಿಯೇ ನಾಲ್ಕು ಲಕ್ಷ ಇಪ್ಪತ್ತೇಳು ಸಾವಿರದ ಇಪ್ಪತ್ತನಾಲ್ಕು ವರ್ಷಗಳು ಉಳಿದಿವೆ.

ಪ್ರಕೃತಿ ಎಂದು ಗುರುತಿಸುವ ಖಗೋಲ ಇದಕ್ಕಿಂತಲೂ ಪುರಾತನವಾದುದು ಎಂದು ವೇದಗಳಲ್ಲಿ ಅತ್ಯಂತ ಸ್ಪಷ್ಟವಾಗಿ ಹೇಳಲಾಗಿದೆ.

ಅದ್ಭ್ಯಃ ಸಂಬೃತಃ ಪೃಥಿವೈ ರಸಾಶ್ಚ
ವಿಶ್ವ ಕರ್ಮಣ ಸಮವರ್ತತಾಗ್ರೇ
ತಸ್ಯತ್ವಷ್ಟಾ ವಿದಧದ್ ರೂಪಮೇತಿ...

ಯಜುರ್ವೇದದ ಈ ಸಾಲುಗಳು ಜಗತ್ತಿನ ಪುರಾತನತೆಗೆ ಸಾಕ್ಷಿ. ಒಟ್ಟಾರೆ ನಮ್ಮ ಭೂಮಿಯ ಸೃಷ್ಟಿಗೆ ಕಾರಣವೇ

No comments:

ನರನಾಡಿಗಳು

*ನರನಾಡಿಗಳು ಎಂದರೇನು ?* *ಇವುಗಳ ಮಹತ್ವ ಏನು ? ದೇಹದಲ್ಲಿ ಇವುಗಳು ಪ್ರತ್ಯೇಕವಾಗಿ ಇರುತ್ತವೆ  *ನರ(nerves) -* *ಮೆದುಳು,ಮೆದುಳು* *ಬಳ್ಳಿ(ಬೆನ್ನು ಹುರಿ) ಮತ್ತು* *ಅ...