ಋಗ್ವೇದ, ಮಂಡಲ.1, ಸೂಕ್ತ 93, ಮಂತ್ರ 1-12
ಅಗ್ನೀಷೋಮಾವಿಮಂ ಸು ಮೇ ಶೃಣುತಂ ವೃಷಣಾ ಹವಮ್ |
ಪ್ರತಿ ಸೂಕ್ತಾನಿ ಹರ್ಯತಂ ಭವತಂ ದಾಶುಷೇ ಮಯಃ ||
ಅಗ್ನೀಷೋಮಾ ಯೋ ಅದ್ ವಾಮಿದಂ ವಚಃ ಸಪರ್ಯತಿ |
ತಸ್ಮೈ ಧತ್ತಂ ಸುವೀರ್ಯಂ ಗವಾಂ ಪೋಷಂ ಸ್ವಶ್ವ್ಯಮ್ ||
ಅಗ್ನೀಷೋಮಾ ಯ ಆಹುತಿಂ ಯೋ ವಾಂ ದಾಶಾದ್ಧವಿಷ್ಕೃತಿಮ್
ಸ ಪ್ರಜಯಾ ಸುವೀರ್ಯಂ ವಿಶ್ವ ಮಾಯುರ್ವ್ಯಶ್ನವತ್ ||
ಅಗ್ನೀಷೋಮಾ ಚೇತಿ ತದ್ವೀರ್ಯಂ ವಾಂ ಯದಮುಷ್ಣೀತ ಮವಸಂ ಪಣಿಂ ಗಾಃ |
ಅವಾತಿರತಂ ಬೃಸಯಸ್ಯ ಶೇಷೋಽ ವಿಂದತಂ ಜ್ಯೋತಿರೇಕಂ ಬಹುಭ್ಯಃ ||
ಯುವಮೇತಾನಿ ದಿವಿ ರೋಚನಾನ್ಯಗ್ನಿಶ್ಚ ಸೋಮ ಸಕ್ರತೂ ಅಧತ್ತಮ್ |
ಯುವಂ ಸಿಂಧೂರಭಿಶಸ್ತೇರವದ್ಯಾದಗ್ನೀಷೋಮಾ ವಮುಂಚತಂ ಗೃಭೀತಾನ್ ||
ಆನ್ಯಂ ದಿವೋ ಮಾತರಿಶ್ವಾ ಜಭಾರಾಮಥ್ನಾದನ್ಯಂ ಪರಿಶ್ಯೇನೋ ಅದ್ರೇಃ |
ಅಗ್ನೀಷೋಮಾ ಬ್ರಹ್ಮಣಾ ವಾವೃಧಾನೋರುಂ ಯಜ್ಞಾಯ ಚಕ್ರಥುರು ಲೋಕಮ್ ||
ಅಗ್ನೀಷೋಮಾ ಹವಿಷಃ ಪ್ರಸ್ಥಿತಸ್ಯ ವೀತಂ ಹರ್ಯತಂ ವೃಷಣಾ ಜುಷೇಥಾಮ್ |
ಸುಶರ್ಮಾಣಾ ಸ್ವವಸಾ ಹಿ ಭೂತಮಥಾ ಧತ್ತಂ ಯಜಮಾನಾಯ ಶಂಯೋಃ ||
ಯೋ ಅಗ್ನೀಷೋಮಾ ಹವಿಷಾ ಸಪರ್ಯಾದ್ದೇವದ್ರೀಚಾ ಮನಸಾ ಯೋ ಘೃತೇನ |
ತಸ್ಯ ವ್ರತಂ ರಕ್ಷತಂ ಪಾತಮಂಹಸೋ ವಿಶೇ ಜನಾಯ ಮಹಿ ಶರ್ಮ ಯಚ್ಛತಮ್ ||
ಅಗ್ನೀಷೋಮಾ ಸವೇದಸಾ ಸಹೂತೀ ವನತಂ ಗಿರಃ | ಸಂ ದೇವತ್ರಾ ಬಭೂವಥುಃ ||
ಅಗ್ನೀಷೋಮಾವನೇನ ವಾಂ ಯೋ ವಾಂ ಘೃತೇನ ದಾಶತಿ | ತಸ್ಮೈ ದೀದಯತಂ ಬೃಹತ್ ||
ಅಗ್ನೀಷೋಮಾವಿಮಾನಿ ನೋ ಯುವಂ ಹವ್ಯಾ ಜುಜೋಷತಮ್ | ಆ ಯಾತ ಮುಪ ನಃ ಸಚಾ ||
ಅಗ್ನೀಷೋಮಾ ಪಿಪೃತಮರ್ವತೋ ನ ಆಪ್ಯಾಯಂತಾಮುಸ್ರಿಯಾ ಹವ್ಯಸೂದಃ |
ಅಸ್ಮೇ ಬಲಾನಿ ಮಘವತ್ಸು ಧತ್ತಂ ಕೃಣುತಂ ನೋ ಅಧ್ವರಂ ಶ್ರುಷ್ಟಿಮಂತಮ್ ||
ಈ ಭಿನ್ನ ಭಿನ್ನವಾದ ಕೆಲ ಅಗ್ನಿ ಪ್ರಭೇದಗಳು ಪ್ರಪಂಚ ಮುಖದಲ್ಲಿರುತ್ತವೆ. ಅವುಗಳೆಲ್ಲಾ ಯಾವುದೇ ಕಾರಣಕ್ಕೆ ಅವು ಒಂದೇ ಅಲ್ಲ. ಹಾಗೂ ಇನ್ನೊಂದು ಆ ಗುಣವನ್ನು ಹೊಂದಲು ಸಾಧ್ಯವಿಲ್ಲ. ಕೃತಕವಾಗಿಯೂ ಒದಗಿಸಲು ಸಾಧ್ಯವಿಲ್ಲ. ಸಹಜ ಶಾಖ ಮಾತ್ರದಿಂದ ಗುರುತಿಸುವ ಅಗ್ನಿಯಲ್ಲಿಯೇ ಸೌದೆ, ತೆಂಗಿನ ಚಿಪ್ಪು, ತೆಂಗಿನ ಸಿಪ್ಪೆ, ಅಡಿಕೆ ಸಿಪ್ಪೆ, ಗೇರುಬೀಜ ಇತ್ಯಾದಿ ಪ್ರಕೃತಿ ಮೂಲ, ಇನ್ನು ವಿದ್ಯುತ್, ಗ್ಯಾಸ್ ಇತ್ಯಾದಿ ಮೂಲದಲ್ಲಿಯೇ ಯಾವುದೂ ಒಂದರಂತಿಲ್ಲ ಒಂದು. ಹಾಗಿದ್ದ ಮೇಲೆ ಇನ್ನು ಮುಂದೆ ತಿಳಿಸುವ ಅಗ್ನಿ ಪ್ರಭೇದಗಳು ಅದಕ್ಕಿಂತ ತೀರಾ ಭಿನ್ನ. ಈ ಮೇಲ್ಕಂಡ ಭೌತಿಕವಸ್ತು ಮೂಲದಿಂದ ಉತ್ಪನ್ನಗಳಾದ ಬೆಂಕಿ ಶಾಖಕ್ಕೆ ಮಾತ್ರಾ. ಆದರೆ ಈ ಅಗ್ನಿಗಳು ಶಾಖ ಮಾತ್ರವಲ್ಲ, ಇತರೆ ಗುಣವನ್ನೂ ಹೊಂದಿದೆ. ಅವುಗಳಲ್ಲಿ ದಕ್ಷಿಣಾಗ್ನಿ ಪ್ರಭೇದ, ಗಾರ್ಹಪತ್ಯಾಗ್ನಿ ಪ್ರಭೇದ ಹಾಗೂ ಆವಹನೀಯಾಗ್ನಿ ಪ್ರಭೇದಗಳು ಎಂದು ಮೂರು ವಿಧ. ಅವುಗಳ ವಿಸ್ತೃತ ರೂಪ ಅಗಾಧ ಶಕ್ತಿ. ವಿವರಿಸಲಸಾಧ್ಯ. ಸ್ವಯಂಶಕ್ತಿ ಹಾಗೂ ಸ್ವಯಂಪ್ರೇರಿತ. ಅದರ ವಿವರಣೆ ಕೊಡಲು ನನ್ನ ಇತಿಮಿತಿಯಲ್ಲಿ ಪ್ರಯತ್ನಿಸುತ್ತೇನೆ.
1 comment:
ಸೂಪರ್
Post a Comment