ಪರ್ಯಟನಾ, ಪರಿಷ್ಕೃತ, ಫರ್ಫರೀಕಾ, ಪುಚ್ಚಟ,
ಪ್ರಣವ,ಉತ್ಥಾನ,ಪ್ರೇರಣಾ,ಸುಭಗಾ,
ದಕ್ಷ, ನಿವಿದಾ, ಭಗ, ಮಿತ್ರ,
ಆದಿತ್ಯರಾದಿಯಾಗಿ ಅದಿತಿ 16 ವಿಧ ಭಿನ್ನತೆಯ ಶಕ್ತಿರೂಪಿಯಾಗಿ ಹೊರಹೊಮ್ಮಿದ ಮಾತೃತ್ವವೇ ಪಾವಕಾಗ್ನಿ ಪ್ರಭೇದಗಳು. ಅವೆಲ್ಲಾ ಈ ಜಗತ್ತಿನ ಜಗದ್ವ್ಯಾಪಾರ ಕ್ಷೇತ್ರದಲ್ಲಿ ಪ್ರವರ್ತನಾ ಶಕ್ತಿ. ಹಾಗೇ ಜಗದ್ವ್ಯಾಪಾರ ನಿಯಮಗಳನ್ನು ಮುಂದಿನ ಮಂತ್ರಗಳಲ್ಲಿ ಹೇಳುತ್ತದೆ.
ತನ್ನೋ ವಾತೋ ಮಯೋಭುವಾತು ಭೇಷಜಂ ತನ್ಮಾತಾ ಪೃಥಿವೀ ತತ್ಪಿತಾ ದ್ಯೌಃ |
ತದ್ಗ್ರಾವಾಣಃ ಸೋಮಸುತೋ ಮಯೋಭುವಸ್ತದಶ್ವಿನಾ ಶೃಣುತಂ ಧಿಷ್ಣ್ಯಾ ಯುವಮ್ || 4 ||
ತಮೀಶಾನಂ ಜಗತಸ್ತಸ್ಥುಷಸ್ಪತಿಂ ಧಿಯಂ ಜಿನ್ವ ಮವಸೇ ಹೂಮಹೇ ವಯಮ್ |
ಪೂಷಾ ನೋ ಯಥಾ ವೇದಸಾಮ ಸದ್ವೃಧೇ ರಕ್ಷಿತಾ ಪಾಯುರದಬ್ಧಃ ಸ್ವಸ್ತಯೇ || 5 ||
ಸ್ವಸ್ತಿ ನ ಇಂದ್ರೋ ವೃದ್ಧಶ್ರವಾಃ ಸ್ವಸ್ತಿ ನಃ ಪೂಷಾ ವಿಶ್ವವೇದಾಃ |
ಸ್ವಸ್ತಿ ನಸ್ತಾರ್ಕ್ಷ್ಯೋ ಅರಿಷ್ಟನೇಮಿಃ ಸ್ವಸ್ತಿ ನೋ ಬೃಹಸ್ಪತಿರ್ದಧಾತು || 6 ||
ಪೃಷದಶ್ವಾ ಮರುತಃ ಪೃಶ್ನಿಮಾತರಃ ಶುಭಂ ಯಾವಾನೋ ವಿದಥೇಷು ಜಗ್ಮಯಃ |
ಅಗ್ನಿಜಿಹ್ವಾ ಮನವಃ ಸೂರಚಕ್ಷಸೋ ವಿಶ್ವೇ ನೋ ದೇವಾ ಅವಸಾ ಗಮನ್ನಿಹ || 7 ||
ಭದ್ರಂ ಕರ್ಣೇಭಿಃ ಶೃಣುಯಾಮ ದೇವಾಃ ಭದ್ರಂ ಪಶ್ಯೇಮಾಕ್ಷಭಿರ್ಯಜತ್ರಾಃ | ಸ್ಥಿರೈರಂಗೈಸ್ತುಷ್ಟುವಾಂಸಸ್ತನೂಭಿರ್ವ್ಯ ಶೇಮ ದೇವಹಿತಂ ಯದಾಯುಃ || 8 ||
ಶತಮಿನ್ನು ಶರದೋ ಅಂತಿದೇವಾ ಯತ್ರಾ ನಶ್ಚಕ್ರಾ ಜರಸಂ ತನೂನಾಮ್ |
ಪುತ್ರಾಸೋ ಯತ್ರ ಪಿತರೋ ಭವಂತಿ ಮಾ ನೋ ಮಧ್ಯಾರೀರಿಷತಾಯುರ್ಗಂತೋಃ || 9 ||
ಅದಿತಿರ್ದ್ಯೌರದಿತಿರಂತರಿಕ್ಷಮದಿತಿರ್ಮಾತಾ ಸ ಪಿತಾ ಸ ಪುತ್ರಃ |
ವಿಶ್ವೇ ದೇವಾ ಅದಿತಿಃ ಪಂಚಜನಾ ಅದಿತಿರ್ಜಾತಮದಿತಿ ರ್ಜನಿತ್ವಮ್ || 10 ||
ಇದೆಲ್ಲಾ ಜೈವಿಕ ಜಗತ್ತಿನ ಮಾತೃಶಕ್ತಿಯೆಂಬ ಅಗ್ನಿಯೇ ಎನ್ನುತ್ತದೆ ವೇದ. ವಿಶ್ವಚಿತ್ರಣವನ್ನು ಅತೀ ವಿವರವಾಗಿ ಬಿಂಬಿಸಿದೆ ವೇದ. ಜೀವಜಗತ್ತಿನ ಎಲ್ಲಾ ಅಂಶಗಳೂ ಇದರಲ್ಲಿ ಚಿತ್ರಿಸಲ್ಪಟ್ಟಿದೆ ವಿವರಿಸಲ್ಪಟ್ಟಿದೆ. ಹಾಗೇ ಅಗ್ನಿಯ ಭಿನ್ನ ಭಿನ್ನ ರೂಪದಲ್ಲಿ ತ್ರೇತಾಗ್ನಿಗಳ ರೂಪದಲ್ಲಿ ಇರುವ ಎಲ್ಲಾ ಭಿನ್ನತೆಯನ್ನೂ ವಿವರಿಸುತ್ತದೆ. ಹಾಗೂ ಅದರ ಶಕ್ತಿ, ಕಾರಕತ್ವ ಎಲ್ಲವನ್ನೂ ವಿವರಿಸಿದೆ ಈ ಕೆಳಗಿನ ಮಂತ್ರಗಳಲ್ಲಿ.


No comments:
Post a Comment