ಮುಂದಿನ ಲೇಖನ
ಹಾಗಾಗಿ ಮುಖ್ಯಸ್ಥಾನದಲ್ಲಿ ನಿಲ್ಲಬಲ್ಲ ಅಗ್ನಿಯೇ ಸೂರ್ಯವೆಂಬ ಮೂಲತತ್ವದಲ್ಲಿ ಅಡಕವಾಗಿರುತ್ತದೆ. ಅದರಲ್ಲಿ ಮೂರು ಭಿನ್ನ ಭಿನ್ನ ಪ್ರಭೇದಗಳಿವೆ. ಅದರಲ್ಲಿ ಒಂದಂಶವೇ ಸೂರ್ಯ. ಉತ್ಕೃಷ್ಟ ಶಾಖ, ನಿರಂತರ ಜ್ವಲನಶೀಲ, ಇಂಧನರಾಹಿತ್ಯ ಸ್ಥಿತಿ. “ಸೂಯವತೀ ಜ್ವಲತೀತಿ ರವೈಃ ಇತಿ ಸೂರ್ಯಃ” ಸೂರ್ಯದ ಒಂದು ಭಾಗವಾಯ್ತು. ಇದು ಪ್ರತ್ಯಕ್ಷ.
ಹಾಗೇ 2ನೇ ಭಾಗವಾಗಿ ಅಂಡಾಂತರ್ಗತ ಚೈತನ್ಯಭಾಗ.
ಅದು ಮೂಲಚೈತನ್ಯ ಪ್ರಕೃತಿ, ಅಂಡಾಂತರ್ಗತ ಅದರ ಪೂರ್ಣಭಾವ ಪ್ರಕಟವಾಗುವುದು ಸ್ತ್ರೀಯರಲ್ಲಿ. ಅದನ್ನು ಜಗತ್ತು ಗುರುತಿಸುವುದು “ಪಾವಕಾಗ್ನಿ” ಎಂದು. ಅದೇ ಪಾವಕಾಗ್ನಿಯ ಒಂದು ರೂಪವೇ “ವೈಶ್ವಾನರ”. ಸಕಲ ಜೀವಿಗಳ ದೇಹದಲ್ಲಿ ವ್ಯಾಪಿಸಿ ಮಹಾವಿಷ್ಣು ರೂಪದಿಂದ ಜಗತ್ಸಂರಕ್ಷಕವಾಗಿದೆ. ಆಹಾರವನ್ನು ಭುಂಜಿಸಿ ದೇಹಕ್ಕೆ ಶಕ್ತಿರೂಪದಲ್ಲಿ ಪ್ರಪಂಚವನ್ನು ಪೊರೆಯುತ್ತಿದೆ. ಹಾಗೇ ಪಾವಕಾಗ್ನಿಯು ಸ್ತ್ರೀಯರ “ಬ್ರಹ್ಮಾಂಡಭೂಮಿಕೆ” ಅಥವಾ ಅಂಡಾಶಯದಲ್ಲಿದ್ದು ಪ್ರಪಂಚ ಸೃಷ್ಟಿಕ್ರಿಯೆಯಲ್ಲಿ ತೊಡಗಿರುತ್ತದೆ. ಹಾಗೇ ಕಣ್ಣಿನಲ್ಲಿ ಒಂದಂಶ ಸೇರಿ ಪ್ರಪಂಚ ನಾಶ ಕ್ರಿಯೆಯಲ್ಲಿಯೂ ತೊಡಗುತ್ತಾ ಒಂದು ರೀತಿಯಲ್ಲಿ ಸೃಷ್ಟಿ, ಸ್ಥಿತಿ, ಲಯಗಳೆಂಬ ಮೂರು ಕಾರ್ಯಗಳಿಂದ ನಿರ್ವಹಿಸುತ್ತಾ ತಿರೋಧಾನದಿಂದ ಪರಿಷ್ಕರಣೆಗೊಳಿಸಿ ಆತ್ಮ ಸಂಸ್ಕಾರ ಮಾಡುತ್ತಾ ಅನುಗ್ರಹರೂಪವಾಗಿ ಜನ್ಮಕ್ಕೆ ಬಂದು ವ್ಯಾವಹಾರಿಕ ಪ್ರಪಂಚದಲ್ಲಿ ವ್ಯವಹರಿಸುತ್ತದೆ. ಅದೇ ಗಾರ್ಹಪತ್ಯ, ದಕ್ಷಿಣ, ಆಹವನೀಯವೆಂಬ ಮೂರು ಪ್ರಭೇದದ ಅಗ್ನಿರೂಪ ಹಾಗು ಜೈವಿಕ ಸ್ವರೂಪ. ಅದೇ ಪ್ರಪಂಚ. ಅದರ ಸತ್ಯವನ್ನೇ ಈ ಕೆಳಗಿನ ಋಗ್ವೇದ ಮಂತ್ರಗಳು ವಿವರಿಸುತ್ತದೆ ಗಮನಿಸಿ.
ಋಗ್ವೇದ, ಮಂಡಲ.1, ಸೂಕ್ತ 89, ಮಂತ್ರ 1-10
ಆ ನೋ ಭದ್ರಾಃ ಕ್ರತವೋ ಯಂತು ವಿಶ್ವತೋಽದಬ್ಧಾಸೋ ಅಪರೀತಾಸ ಉದ್ಭಿದಃ |
ದೇವಾನೋ ಯಥಾ ಸದಮಿದ್ವೃಧೇ ಅಸನ್ನಪ್ರಾಯುವೋ ರಕ್ಷಿತಾರೋ ದಿವೇ ದಿವೇ || 1 ||
ಪ್ರಪಂಚದ ಜೈವಿಕ ಸೃಷ್ಟಿಯಲ್ಲಿ ವಿಶ್ವದೃಷ್ಟಿಯೆಂಬ ವಿಶೇಷ ಪ್ರಕ್ರಿಯೆ ಏನು?
ಅದರ ಹಿನ್ನೆಲೆಯಲ್ಲಿ ದೇವಾ ಅರ್ಥಾತ್ ಕೊಡಲ್ಪಡುವುದು ಏನು?
ಕೊಡಿಸುವುದು ಏನು?
ಸಂಚಿತವೇನು?
ಪ್ರಾಪ್ತಿಯಾದ ಅತ್ಮಿಕವೇನು?
ಕಾಲಕಾರಣದಿಂದ ಪ್ರಾಪಂಚಿಕ ಆಗಾಮಿಯೇನು?
ಇವೆಲ್ಲವೂ ಹೇಗೆ ರಕ್ಷಿಸಲ್ಪಡುತ್ತದೆ?
ಏಕೆ ರಕ್ಷಿಸಲ್ಪಡುತ್ತದೆ?
ರಕ್ಷಣೆಯ ಉದ್ದೇಶವೇನು?
ಔಚಿತ್ಯವೇನು?
ಇದರಲ್ಲಿರುವ ಆನಂದವೇನು?
ಇವೆಲ್ಲವನ್ನೂ ವಿವರಿಸಿ ಅಗ್ನಿಸ್ವರೂಪ ವಿವರಿಸುತ್ತೇನೆ ಎಂದಿದೆ. ಈ ಮಂತ್ರಭಾಗ ಹಾಗೇ “ದೇವಾಸುರಮರ್ತ್ಯ”ವೆಂಬ ತ್ರಿಕರ್ಮ ಸಿದ್ಧಿ, ಶುದ್ಧಿ, ಬದ್ಧತೆ ಬಗ್ಗೆ ತಿಳಿಯೋಣ.
ದೇವಾನಾಂ ಭದ್ರಾ ಸುಮತಿರ್ಋಜೂಯತಾಂ ದೇವಾನಾಂ ರಾತಿರಭಿನೋ ನಿವರ್ತತಾಮ್ | ದೇವಾನಾಂ ಸಖ್ಯ ಮುಪಸೇದಿಮಾ ವಯಂ ದೇವಾ ನ ಆಯುಃ ಪ್ರತಿರಂತು ಜೀವಸೇ || 2 ||
ಪ್ರಪಂಚದಲ್ಲಿ ಒಂದು ವಿಶಿಷ್ಟಶಕ್ತಿಯಿದೆ. ಅದನ್ನು ವಾಚ್ಯವಾಗಿ ಹೇಳುವುದಿದ್ದರೆ “ಸತ್ಯ”. ಪ್ರಪಂಚದ ಸತ್ಕರ್ಮಾಚರಣೆ ಹಾಗೇ ದಿನ, ರಾತ್ರಿ, ಕಾಲಸಂಚಾರ, ಮಳೆ, ಬೆಳೆ, ಸುಖ, ಸಮೃದ್ಧಿ, ಕ್ಷೇಮ, ಲಾಭ, ಸೃಷ್ಟ್ಯಾದಿ ನಿರಂತರತೆಯೆಲ್ಲವೂ ಈ ಸತ್ಯದ ಆಧಾರದಲ್ಲಿ ನಿಂತಿದೆ. ಸತ್ಯವೆಂದರೆ ವಾಚ್ಯಾರ್ಥ ಮಾತ್ರವಲ್ಲ, ಸತ್ಯವು ವಿವರಿಸಲಾಗದ, ದೃಗ್ಗೋಚರವಾಗದ, ನಿತ್ಯನೂತನ ನಿರಂತರವಾದದ್ದು. ಆದರೆ ಅದರ ನಡೆಯೇ ಪ್ರಪಂಚ ಸುಕೃತಿ. ಅದನ್ನು ಆವರಿಸಿ ಆವರಣದೊಳಗಡಕವಾಗುವಂತೆ ಮಾಡಿದ “ಮಾಯೆ” ಪ್ರಾಪಂಚಿಕವಾಗಿ ವಿಕೃತಿ. ಆದರೆ ಆಧ್ಯಾತ್ಮಿಕವಾಗಿ “ಸತ್ಯವೇ”. ಸತ್ಯದ ಹೊರತುಪಡಿಸಿ ಯಾವುದೂ ಇಲ್ಲ.
ತಾನ್ ಪೂರ್ವಯಾ ನಿವಿದಾ ಹೂಮಹೇ ವಯಂ ಭಗಂ ಮಿತ್ರಮದಿತಿಂ ದಕ್ಷಮಸ್ರಿಧಮ್ | ಅರ್ಯಮಣಂ ವರುಣಂ ಸೋಮಮಶ್ವಿನಾ ಸರಸ್ವತೀ ನಃ ಸುಭಗಾ ಮಯಸ್ಕರತ್ || 3 ||
ಜಗತ್ತಿನ ಭಿನ್ನತೆಯಲ್ಲಿ ಮುಖ್ಯವಾಗಿ ಕಾಣುವ ಪ್ರಭೇದ ಅರ್ಯಮಾ, ವರುಣ, ಸೋಮ, ಅಶ್ವಿನಿ, ಸರಸ್ವತಿ ಅಲ್ಲದೇ ಭಿನ್ನ ಭಿನ್ನವಾದ ಸತ್ಯಾಶ್ರಿತ ಸದಾಶಯಗಳೆಲ್ಲಾ ತುಂಬಿರುವ ಈ ಜಗದ್ವ್ಯಾಪಾರ ಕ್ಷೇತ್ರಕ್ಕೆ ಮೂಲ

No comments:
Post a Comment