Followers

Saturday, 2 May 2020

ದೀಪದ ಮಹತ್ವ




ಮುಂದುವರಿದ ಭಾಗ..........

ಮನೆಗೆ ಒಂದೇ ಹಣತೆ ಅಥವಾ ದೀಪವಿದ್ದಾಗ ಮನೆ ಮಂದಿಯೆಲ್ಲಾ ಹಣತೆಯ ಸುತ್ತ ಕುಳಿತುಕೊಳ್ಳುತ್ತಾರೆ. ಅದೇ ಬಗೆ ಬಗೆಯ ದೀಪಗಳು ಹಲವಾರು ಇದ್ದಾಗ, ವ್ಯಕ್ತಿ ಅನುಕೂಲಕ್ಕೆ ತಕ್ಕಂತೆ ಸ್ವತಂತ್ರವಾಗಿ ತನ್ನ ಪಾಡಿಗೆ ತಾನು ಓಡಾಡಿಕೊಂಡು ಇರುತ್ತಾನೆ. ಒಂದೇ ದೀಪದ ಬಳಿ ಎಲ್ಲರೂ ಕುಳಿತಾಗ ಹೆಚ್ಚು ಭಾಂದವ್ಯ ಹಾಗೂ ಸಹಕಾರ ಬೆಳೆಯುತ್ತದೆ. ಉದಾ: ಕ್ಯಾಂಫ್‍ಫೈರ್ ಮಾಡಿಕೊಂಡಾಗ ಅದರ ಸುತ್ತಲು ಎಲ್ಲರೂ ಕುಳಿತುಕೊಳ್ಳುತ್ತಾರೆ. ಒಬ್ಬರು ಹೇಳುವ ವಿಚಾರವನ್ನು ಎಲ್ಲರೂ ಆಲಿಸುತ್ತಾರೆ ಜೊತೆಗೆ ಸ್ಪಂದಿಸುತ್ತಾರೆ. ಅಷ್ಟೇ ಅಲ್ಲ ಅದು ಮನಸ್ಸಿನಲ್ಲಿ ಉಳಿಯುತ್ತದೆ. ಎಲ್ಲರೊಂದಿಗೆ ಬೆರೆತ ಆನಂದದ ಅನುಭವ ಆಗುತ್ತದೆ. ಹಾಗಾಗಿ ಹಣತೆಯ ದೀಪವೇ ಸಾಂಪ್ರದಾಯಿಕವಾಗಿ ಹೆಚ್ಚು ಶ್ರೇಷ್ಠ. ಅದರ ಬಳಿ ಕುಳಿತಾಗ ಬಾಂಧವ್ಯ ಹೆಚ್ಚುವುದು ಎನ್ನಲಾಗುತ್ತದೆ.

ಮೊದಲು ದೀಪ ಬೆಳಗಿ

ಯಾವುದೇ ಕೆಲಸವನ್ನು ಮಾಡುವ ಮೊದಲು ನಾವು ದೇವರಿಗೆ ಎಣ್ಣೆಯ ದೀಪ ಅಥವಾ ತುಪ್ಪದ ದೀಪವನ್ನು ಬೆಳಗಬೇಕು. ಆಗ ಸಕಾರಾತ್ಮಕ ಶಕ್ತಿಯು ಸುತ್ತಲೂ ಆವೃತವಾಗುತ್ತದೆ. ನಾವು ಅಂದುಕೊಂಡ ಕೆಲಸವು ಸುಗಮವಾಗಿ ನೆರವೇರುತ್ತದೆ. ಆದಷ್ಟು ಸಸ್ಯಹಾರಿ ಎಣ್ಣೆಯನ್ನೇ ಬೆಳಗಬೇಕು. ಅದು ಸಕಾರಾರತ್ಮಕ ಶಕ್ತಿಯನ್ನು ಹೊರಸೂಸುತ್ತದೆ.
ಶ್ಲೋಕಗಳು ಹಿಂದೂ ಧರ್ಮದಲ್ಲಿನ ಒಂದು ಅವಿಭಾಜ್ಯ ಅಂಗ , ಮಾಡುವ ಪ್ರತಿಯೊಂದು ಕಾರ್ಯವನ್ನೂ ಶ್ಲೋಕದ ಮೂಲಕವೇ ಆರಂಭ ಮಾಡುತ್ತೇವೆ . ಅದೇ ರೀತಿ ದೇವರಿಗೆ ದೀಪ ಹಚ್ಚುವಾಗಲೂ ಶ್ಲೋಕ ಹೇಳುವ ಪರಿಪಾಠ ಇದೆ… ಅದು ಈರೀತಿ ಇದೆ…

ಭೋ ದೀಪ ಬ್ರಹ್ಮರೂಪಸ್ತ್ವಂ ಅಂಧಕಾರ ನಿವಾರಕ |
ಇಮಾಂ ಮಯಾಕೃತಾಂ ಪೂಜಾ ಗ್ರಹಾಣತ್ವಂ ಪ್ರವರ್ಧನ ||

ದೀಪಗಳ ಕುರಿತಾಗಿ ಇರುವ ಒಂದೆರಡು ಶ್ಲೋಕಗಳನ್ನ ನೋಡೋಣ…

ದೀಪಜ್ಯೋತಿಃ ಪರಬ್ರಹ್ಮ ದೀಪ ಜ್ಯೊತಿ ಜನಾರ್ಧನಃ |
ದೀಪೋ ಹರತಿ ಪಾಪಾನಿ ಸಂಧ್ಯಾದೀಪ ನಮೋಸ್ತುತೇ ||

ಅರ್ಥಾತ್ ಪರಬ್ರಹ್ಮ , ಜನಾರ್ಧನ ಸ್ವರೂಪವಾದ ದೀಪವು ಪಾಪನಾಶಿನಿಯೂ ಆಗಿದೆ… ಧಾರ್ಮಿಕ ರೀತಿಯಲ್ಲಿ ದೀಪಕ್ಕಿರುವ ಮಹತ್ವವನ್ನು ಈ ಶ್ಲೋಕ ಹೇಳುತ್ತದೆ… ಅಂದರೆ ದೀಪದ ಮಹತ್ವವನ್ನು ಅರಿತು ದೀಪ ಬೆಳಗಿದಾಗ ಅದು ಕತ್ತಲನ್ನು ನಾಶ ಮಾಡಿದಂತೆ ನಮ್ಮ ಪಾಪವನ್ನೂ ನಾಶ ಮಾಡುತ್ತದೆ. ಇದೇ ರೀತಿ ಇನ್ನೊಂದು ಶ್ಲೋಕ ದೀಪದಲ್ಲಿ ತ್ರಿಮೂರ್ತಿಗಳು ವಾಸವಾಗಿದ್ದಾರೆ ಅನ್ನುತ್ತದೆ ಅದು ಈ ರೀತಿ ಇದೆ…

ದೀಪ ಮೂಲೇ ಸ್ಥಿತೋ ಬ್ರಹ್ಮಾ ದೀಪ ಮಧ್ಯೇ ಜನಾರ್ಧನಃ |
ದೀಪಾಗ್ರೇ ಶಂಕರಃ ಪ್ರೋಕ್ತಃ ಸಂಧ್ಯಾದೀಪ ನಮೋಸ್ತುತೇ ||

No comments:

ನರನಾಡಿಗಳು

*ನರನಾಡಿಗಳು ಎಂದರೇನು ?* *ಇವುಗಳ ಮಹತ್ವ ಏನು ? ದೇಹದಲ್ಲಿ ಇವುಗಳು ಪ್ರತ್ಯೇಕವಾಗಿ ಇರುತ್ತವೆ  *ನರ(nerves) -* *ಮೆದುಳು,ಮೆದುಳು* *ಬಳ್ಳಿ(ಬೆನ್ನು ಹುರಿ) ಮತ್ತು* *ಅ...