Followers

Monday, 15 June 2020

ಗರುಡ ಪುರಾಣ ಅಧ್ಯಾಯ 7 ಭಾಗ 2

ಗರುಡ ಪುರಾಣ ಅಧ್ಯಾಯ 7 ಭಾಗ 2

 

ಪ್ರೇತ ಉವಾಚ-


ಕಥಯಾಮಿ ನೃಪಶ್ರೇಷ್ಠ ಸರ್ವಮೇವಾದಿತಸ್ತವ ।

ಪ್ರೇತತ್ವಕಾರಣಂ ಶ್ರುತ್ವಾ ದಯಾಂ ಕರ್ತುಂ ತ್ವಮರ್ಹಸಿ ॥೩೪॥


ಪ್ರೇತವು ಹೇಳಿತ್ತು – ಏ ರಾಜನೇ!, ಮೊದಲಿಂದಲೇ  ನಿನಗೆಲ್ಲವನ್ನೂ ಹೇಳುತ್ತೆನೆ ಎನ್ನ ಪ್ರೇತತ್ವದ ಕಾರಣವ ಕೇಳಿ ನೀನು ಎನ್ನ ಮೇಲೆ ದಯೆತೋರುವೆ


ವೈದಶಂ ನಾಮ ನಗರಂ ಸರ್ವಸಂಪತ್ಸುಮನ್ವಿತಮ್ ।

ನಾನಾಜನಪದಾಕೀರ್ಣಂ ನಾನಾರತ್ನಸಮಾಕುಲಮ್ ॥೩೫॥


ಎಲ್ಲ ಸಂಪತ್ತುಗಳಿಂದ ಸಮನ್ವಿತವಾದ ವೈದಶ ಹೇಳುವ ಹೆಸರಿನ ಒಂದು ನಗರ. ನಾನಾ ತರದ ಜನರಿಂದ ಕೂಡಿದ, ನಾನಾ ರತ್ನಸಂಪತ್ತುಗಳಿಂದ ಕೂಡಿಕೋಂಡಿತ್ತು.


ಹರ್ಮ್ಯಪ್ರಾಸಾದಶೋಭಾಢ್ಯಂ ನಾನಾಧರ್ಮಸಮನ್ವಿತಮ್ ।

ತತ್ರಾಹಂ ನ್ಯವಸಂ ತಾತ ದೇವಾರ್ಚನರತಃ ಸದಾ ॥೩೬॥


ದೊಡ್ಡ ಗೋಪುರ ಅರಮನೆ ಭವನಗಳಿಂದ ಶೋಭಾಯಮಾನವಾದ, ನಾನಾ ಧರ್ಮಜರಿಂದ ತುಂಬಿದ ಅಲ್ಲಿ ನಾನು ಸದಾ ದೇವತಾರ್ಚನೆಲಿ ನಿರತನಾಗಿ ವೈಶ್ಯನಾಗಿ ವಾಸವಾಗಿತ್ತಿದ್ದೆ.


ವೈಶ್ಯೋ ಜಾತ್ಯಾ ಸುದೇವೋsಹಂ ನಾಮ್ನಾ ವಿದಿತಮಸ್ತು ತೇ ।

ಹವ್ಯೇನ ತರ್ಪಿತಾ ದೇವಾಃ ಕವ್ಯೇನ ಪಿತರಸ್ತಥಾ ॥೩೭॥


ನನ್ನ ವಿಷಯವ ವಿವರವಾಗಿ ಹೇಳುತ್ತೆನೆ ನಾನು ಜಾತಿಲಿ ವೈಶ್ಯ°. ಸುದೇವ ಎಂದು ಎನ್ನ ಹೆಸರು. ನಾನು ಹವಿಸ್ಸಿನಿಂದ ದೇವತೆಗಳನ್ನೂ, ಕವ್ಯಂದ ಪಿತೃಗಳನ್ನೂ ತೃಪ್ತಿ ಪಡಿಸಿತ್ತಿದ್ದೆ.


ವಿವಿಧೈರ್ದಾನಯೋಗೈಶ್ಚ ವಿಪ್ರಾಃ ಸಂತರ್ಪಿತಾ ಮಯಾ ।

ದೀನಾಂಧಕೃಪಣೇಭ್ಯಶ್ಚ ದತ್ತಮನ್ನ ಮನೇಕಧಾ ॥೩೮॥


ನನ್ನಂದ ಅನೇಕ ರೀತಿಯ ದಾನೋಪಚಾರಗಳಿಂದ ವಿಪ್ರರು ತೃಪ್ತಿಪಡಿಸಲ್ಪಟ್ಟಿತ್ತಿದ್ದು. ದೀನರಿಗೆ , ಕುರುಡರಿಗೆ ಹಾಗೂ ದರಿದ್ರರಿಗೆ ಕೂಡ ನನ್ನಿಂದ ಅನೇಕರೀತಿಯ ಅನ್ನದಾನ ಮಾಡಲ್ಪಟ್ಟಿತ್ತಿದ್ದು.


ತತ್ಸರ್ವಂ ನಿಷ್ಫಲಂ ರಾಜನ್ ಮಮ ದೈವಾದುಪಾಗತಮ್ ।

ಯಥಾ ಮೇ ನಿಷ್ಫಲಂ ಜಾತಂ ಸುಕೃತಂ ತದ್ವದಾಮಿ ತೇ ॥೨೯॥

ಏ ರಾಜನೇ!, ಅವೆಲ್ಲವೂ ಎನ್ನ ದುರದೃಷ್ಟದ ನಿಷ್ಫಲವಾತು.  ಎನ್ನ ಸೃಕೃತಗಳು ಹೇಗೆ ನಿಷ್ಫಲವಾತು ಹೇಳ್ವದರ ನಿನಗೆ ನಾನು ಹೇಳುತ್ತೆನೆ 


ಮಮ ವೈ ಸಂತತಿರ್ನಾಸ್ತಿ ನ ಸುಹೃನ್ನ ಚ ಬಾಂಧವಃ ।

ನ ಚ ಮಿತ್ರಂ ಹಿ ತಾದೃಗ್ಯಃ ಕುರ್ಯಾದೌರ್ಧ್ವದೇಹಿಕಮ್ ॥೪೦॥


ನನಗೆ ಸಂತಾನ ಇಲ್ಲ ಜೊತೆಗಾರರಿಲ್ಲ ಬಾಂಧವರಿಲ್ಲ ಎನಗೆ ಔರ್ಧ್ವದೇಹಿಕ ಕ್ರಿಯೆಗಳ ಮಾಡುವಂತ ಗೆಳೆಯರು ಯಾರು ಇಲ್ಲ


ಯಸ್ಯ ನ ಸ್ಯಾನ್ಮ ಹಾರಾಜ ಶ್ರಾದ್ಧಂ ಮಾಸಿಕಷೋಡಶಮ್ ।

ಪ್ರೇತತ್ವಂ ಸುಸ್ಥಿರಂ ತಸ್ಯ ದತ್ತೈಃ ಶ್ರಾದ್ಧಶತೈರಪಿ ॥೪೧॥


ಮಹಾರಾಜ!, ಯಾರ ಷೋಡಶ ಮಾಸಿಕ ಶ್ರಾದ್ಧವು ಮಾಡಲ್ಪಟ್ಟಿಲ್ಲವೋ  ಅವನಿಗೆ ನೂರಾರು ಶ್ರಾದ್ಧಗಳ ಮಾಡಿರೂ ಅವನ ಪ್ರೇತತ್ವ ಸ್ಥಿರವಾಗಿಯೇ ಇರುತ್ತದೆ 


ತ್ವಮೌರ್ಧ್ವದೇಹಿಕಂ ಕೃತ್ವಾ ಮಾಮುದ್ಧರ ಮಹೀಪತೇ ।

ವರ್ಣಾನಾಂ ಚೈವ ಸರ್ವೇಷಾಂ ರಾಜಾ ಬಂಧುರಿಹೋಚ್ಯತೇ ॥೪೨॥


ಎಲೈ ರಾಜನೇ!, ನೀನು ಔರ್ಧ್ವದೇಹಿಕ ಕರ್ಮಗಳ ಮಾಡಿ ಎನ್ನ ಉದ್ಧರುಸು. ಈ ಲೋಕಲ್ಲಿ ಎಲ್ಲ ವರ್ಣದವರಿಗೂ ರಾಜನೇ ಬಂಧು ಎಂದು ಹೇಳಲ್ಪಡುತ್ತದೆ .


ತನ್ಮಾಂ ತಾರಯ ರಾಜೇಂದ್ರ ಮಣಿರತ್ನಂ ದದಾಮಿ ತೇ ।

ಯಥಾ ಮೇ ಸದ್ಗತಿರ್ಭೂಯಾತ್ಪ್ರೇತಯೋನಿಶ್ಚ ಗಚ್ಛತಿ ॥೪೩॥


ಏ ರಾಜೇಂದ್ರ!, ಹಾಗಾಗಿ ಎನ್ನ ಪಾರುಮಾಡು. ನಿನಗೊಂದು ಮಣಿರತ್ನವ ಕೊಡುತ್ತೆನೆ  ಅದರಿಂದ ಎನ್ನ ಪ್ರೇತದೇಹವು ಹೊರಟುಹೋಗಲಿ ಹಾಗೂ ನನಗೆ ಸದ್ಗತಿ ಉಂಟಾಗಲಿ.


ತಥಾ ಕಾರ್ಯಂ ತ್ವಯಾ ವೀರ ಮಮ ಚೇದಿಚ್ಛಸಿ ಪ್ರಿಯಮ್ ।

ಕ್ಷುಧಾತೃಷಾದಿಭಿರ್ದುಃಖ್ಯೈಃ ಪ್ರೇತತ್ವಂ ದುಃಸಹಂ ಮಮ ॥೪೪॥


ಹೇ ವೀರನೇ!, ಎನ್ನ ಪ್ರಿಯವಾದ್ದರ ಮಾಡಲು ಇಚ್ಛಿಸುವುದಾದರೆ   ಹಾಗೆ ಮಾಡು. ಹಸಿವು ಆಹಾರಗಳಿಲ್ಲದೆ ದುಃಖದಿಂದ ಕೂಡಿ ಎನ್ನ ಈ ಪ್ರೇತತ್ವ ಸಹಿಸಲು ಕಷ್ಟಕರವಾಗಿದೆ 


ಸ್ವಾದೂದಕಂ ಫಲಂ ಚಾಸ್ತಿ ವನೇsಸ್ಮಿನ್ ಶೀತಲಂ ಶಿವಮ್ ।

ನ ಪ್ರಾಪ್ನೋಮಿ ಕ್ಷುಧಾರ್ತೋsಹಂ ತೃಷಾರ್ತೋ ನ ಜಲಂ ಕ್ವಚಿತ್ ॥೪೫॥


ಈ ವನಲ್ಲಿ ರುಚಿಕರವಾದ ಹಣ್ಣುಗಳು , ಶೀತಲವಾದ ನೀರೂ ಇದ್ದು. ಅದರೂ ಹಸಿವುವಿಂದ ಆರ್ತನಾಗಿದ್ದರೂ ಹಸಿವುವಿಂದ ಬಳಲಿದ್ದರೂ ಹಣ್ಣು ನೀರುಗಳ ಎನಗೆ ಪ್ರಾಪ್ತಿಯಾಗುತ್ತಿಲ್ಲ.


ಯದಿ ಮೇ ಹಿ ಭವೇದ್ರಾಜನ್ವಿಧಿರ್ನಾರಾಯಣೋ ಮಹಾನ್ ।

ತದಗ್ರೇ ವೇದಮಂತ್ರೈಶ್ಚ ಕ್ರಿಯಾ ಸರ್ವೌರ್ಧ್ವದೇಹಿಕೇ ॥೪೬॥


ಹೇ ಮಹಾರಾಜನೇ!, ಒಂದುವೇಳೆ ಮಹಾನಾರಾಯಣವಿಧಿಯ ಪ್ರಕಾರ ಮಾಡಿರೆ, ಅದರ ಮುoದಾನ  ಕರ್ಮಗಳೂ, 

ಔರ್ಧ್ವದೇಹಿಕ ಕರ್ಮ ಮುಂತಾದ ಸಕಲ ಕರ್ಮಗಳೂ ವೇದಮಂತ್ರಂಗಳಿಂದ ಮಾಡಿದರೆ 


ತದಾ ನಶ್ಯತಿ ಮೇ ನೂನಂ ಪ್ರೇತತ್ವಂ ನಾತ್ರ ಸಂಶಯಃ ।

ವೇದಾ ಮಂತ್ರಾಸ್ತಪೋ ದಾನಂ ದಯಾ ಸರ್ವತ್ರ ಜಂತುಷು ॥೪೭॥


ಅಂದಗಲೆ ನಿಶ್ಚಯವಾಗಿಯೂ ಎನ್ನ ಪ್ರೇತತ್ವವು ನಾಶಹೊಂದುತ್ತದೆ  ಅದರಲ್ಲಿ ಸಂಶಯ ಇಲ್ಲ ವೇದ ಮಂತ್ರಂಗಳು , ತಪಸ್ಸು, ದಾನ, ಸಕಲಪ್ರಾಣಿಗಳಲ್ಲಿ ದಯೆ


ಸಚ್ಛಾಸ್ತ್ರಶ್ರವಣಂ ವಿಷ್ಣೋಃ ಪೂಜಾ ಸಜ್ಜನಸಂಗತಿಃ ।

ಪ್ರೇತಯೋನಿವಿನಾಶಾಯ ಭವಂತೀತಿ ಮಯಾ ಶ್ರುತಮ್ ॥೪೮॥


ಒಳ್ಳೆಯ ಶಾಸ್ತ್ರಗಳ ಓದುವದು, ವಿಷ್ಣು ಪೂಜೆ, ಸಜ್ಜನರ ಸಂಗ – ಇವುಗಳಿಂದ ಪ್ರೇತರೂಪ ನಾಶವಾಗುವುದು  ಹೇಳದರ ನಾನು ಕೇಳಿದ್ದೆ.


ಅತೋ ವಕ್ಷ್ಯಾಮಿ ತೇ ವಿಷ್ಣು ಪೂಜಾಂ ಪ್ರೇತತ್ವನಾಶಿನೀಮ್ ।

ಸುವರ್ಣದ್ವಯಮಾನೀಯ ಸುವರ್ಣನ್ಯಾಯಸಂಚಿತಮ್ ।

ತಸ್ಯ ನಾರಾಯಣಸ್ಯೈಕಾಂ ಪ್ರತಿಮಾಂ ಭೂಪ ಕಲ್ಪಯೇತ್ ॥೪೯॥


ಹಾಗಾಗಿ ಪ್ರೇತತ್ವ ನಾಶಮಾಡುವ ವಿಷ್ಣು ಪೂಜೆಯ ನಿನಗೆ ನಾನು ಹೇಳುತ್ತೆನೆ . ಏ ರಾಜನೇ!, ನ್ಯಾಯವಾಗಿ ಸಂಪಾದಿಸಿದ ಎರಡು ಸುವರ್ಣದ ಅಳತೆಯ (32 ಉದ್ದಿನಕಾಳಿನಷ್ಟು ತೂಕದ) ಚಿನ್ನವ ತೆಕ್ಕoಡು ಅದರಿಂದ ಒಂದು ನಾರಾಯಣ ಪ್ರತಿಮೆಯ ಮಾಡಿಸು 


ಪೀತವಸ್ತ್ರಯುಗಚ್ಛನ್ನಾಂ ಸರ್ವಾಭರಣಭೂಷಿತಾಮ್ ।

ಸ್ನಾಪಿತಾಂ ವಿವಿಧೈಸ್ತೋಯೈರಧಿವಾಸ್ಯ ಯಜೇತ್ತತಃ ॥೫೦॥


ಆ ಪ್ರತಿಮೆಗೆ  ವಿವಿಧ ಪವಿತ್ರ ಜಲಂದ ಅಭಿಷೇಕ ಮಾಡಿ, ಎರಡು ಹಳದಿ ವಸ್ತ್ರವ ಹೊದ್ದಿಸಿ ಸರ್ವಾಭರಣಂಗಳ ಅಲಂಕಾರ ಮಾಡಿ, ಮತ್ತೆ ಪೂಜೆ, ಅರ್ಚನೆ ಮಾಡಬೇಕು 


ಪೂರ್ವೇ ತು ಶ್ರೀಧರಂ ತಸ್ಯಾ ದಕ್ಷಿಣೇ ಮಧುಸೂದನಮ್ ।

ಪಶ್ಚಿಮೇ ವಾಮನಂ ದೇವಮುತ್ತರೇ ಚ ಗದಾಧರಮ್ ॥೫೧॥


ಅದರ ಪೂರ್ವಭಾಗಲ್ಲಿ ಶ್ರೀಧರನ, ದಕ್ಷಿಣಲ್ಲಿ ಮಧುಸೂದನನ, ಪಶ್ಚಿಮಲ್ಲಿ ವಾಮನನ್ನೂ ಉತ್ತರಲ್ಲಿ ಗದಾಧರನ


ಮಧ್ಯೇ ಪಿತಾಮಹಂ ಚೈವ ತಥಾ ದೇವಂ ಮಹೇಶ್ವರಮ್ ।

ಪೂಜಯೇಚ್ಚ ವಿಧಾನೇನ ಗಂಧಪುಷ್ಪಾದಿಭಿಃ ಪೃಥಕ್ ॥೫೨॥


ಮಧ್ಯಲ್ಲಿ ಪಿತಾಮಹನಾದ ಬ್ರಹ್ಮನ ಮತ್ತೆ ಮಹೇಶ್ವರನನ್ನೂ ವಿಧಿಪೂರ್ವಕವಾಗಿ ಗಂಧಪುಷ್ಪಾದಿಗಳಿಂದ ಕ್ರಮವಾಗಿ (ಪ್ರತ್ಯೇಕವಾಗಿ) ಪೂಜೆ ಮಾಡೆಕು.


ತತಃ ಪ್ರದಕ್ಷಿಣೀಕೃತ್ಯ ವಹ್ನೌ ಸಂತರ್ಪ್ಯ ದೇವತಾಃ ।

ಘೃತೇನ ದಧ್ನಾ ಕ್ಷೀರೇಣ ವಿಶ್ವೇದೇವಾಂಶ್ಚ ತರ್ಪಯೇತ್ ॥೫೩॥


ಮತ್ತೆ ಪ್ರದಕ್ಷಿಣೆ ಮಾಡಿ ಅಗ್ನಿಲಿ (ಹೋಮದ ಮೂಲಕ ) ದೇವತೆಗಳ ತೃಪ್ತಿಪಡಿಸಿ, ತುಪ್ಪ, ಮೊಸರು, ಹಾಲಿಂದ ವಿಶ್ವೇದೇವರ ತೃಪ್ತಿಪಡಿಸಬೇಕು 


ತತಃ ಸ್ನಾತೋ ವಿನೀತಾತ್ಮ ಯಜಮಾನಃ ಸಮಾಹಿತಃ ।

ನಾರಾಯಣಾಗ್ರೇ ವಿಧಿವತ್ಸ್ವಾಂ ಕ್ರಿಯಾಮೌರ್ಧ್ವದೇಹಿಕಮ್ ॥೫೪॥


ಮತ್ತೆ ಯಜಮಾನ ಮಿಂದು  ವಿನೀತನಾಗಿ, ಸಮಧಾನದಿಂದ ನಾರಾಯಣನ ಮುಂದೆ ಕುಳಿತುಕೊಂಡು  ವಿಧಿವತ್ತಾಗಿ 

ಔರ್ಧ್ವದೇಹಿಕ ಕ್ರಿಯೆಗಳ ಮಾಡಬೇಕು.


ಆರಭೇತ ಯಥಾಶಾಸ್ತ್ರಂ ಕೋಧಲೋಭವಿವರ್ಜಿತಃ ।

ಕುರ್ಯಾಚ್ಛಾದ್ಧಾನಿ ಸರ್ವಾಣಿ ವೃಷಸ್ಯೋತ್ಸರ್ಜನಂ ತಥಾ ॥೫೫॥


ಕ್ರೋಧ ಲೋಭಗಳ ಬಿಟ್ಟು ಶಾಸ್ತ್ರಲ್ಲಿ ಹೇಳಿದಂತೆ ಸುರುಮಾಡಬೇಕು. ಮತ್ತೆ ಶ್ರಾದ್ಧ, ವೃಷೋತ್ಸರ್ಗ ಮತ್ತೆಲ್ಲವನ್ನೂ ಮಾಡಬೇಕು.


ತತಃ ಪದಾನಿ ವಿಪ್ರೇಭ್ಯೋ ದದಾಚ್ಚೈವ ತ್ರಯೋದಶ ।

ಶಯ್ಯಾದಾನಂ ಪ್ರದತ್ವಾ ಚ ಘಟಂ ಪ್ರೇತಸ್ಯ ನಿರ್ವಪೇತ್ ॥೫೬॥


ಮತ್ತೆ ಅರ್ಹರಾದ ಹದಿಮೂರು ಬ್ರಾಹ್ಮಣರಿಗೆ ಹದಿಮೂರು ಬಗೆಯ ‘ಪದದಾನ’ ಮಾಡಬೇಕು.  [ತ್ರಯೋದಶ ಪದದಾನಗಳು - ಕೊಡೆ, ಪಾದರಕ್ಷೆ, ವಸ್ತ್ರ, ಉಂಗುರ, ಕಮಂಡಲ, ಆಸನ, ಪಂಚಪಾತ್ರೆ, ಇವೇಳು ಮತ್ತು ದಂಡ, ತಾಮ್ರದ ಪಾತ್ರೆ, ಅಕ್ಕಿ, ಭೋಜನ, ಧನ ಮತ್ತೆ ಯಜ್ಞೋಪವೀತ ] ಹಾಸಿಗೆ+ತಲೆಗೊಂಬು+ಹಾಸಲೆ+ಹೊದವಲಿಪ್ಪದು ಸೇರಿದ ಶಯ್ಯಾದಾನವ ಮಾಡಿ, ಒಂದು ಉದಕ ಕುಂಭವ (ನೀರ ಕೊಡ / =ಪ್ರೇತಘಟ)  ಪ್ರೇತಕ್ಕಾಗಿ ಅರ್ಪಿಸಬೇಕು.


ರಾಜೋವಾಚ-


ಕಥಂ ಪ್ರೇತಘಟಂ ಕುರ್ಯಾದ್ದದ್ಯಾತ್ಕೇನ ವಿಧಾನತಃ ।

ಬ್ರೂಹಿ ಸರ್ವಾನುಕಂಪಾರ್ಥಂ ಘಟಂ ಪ್ರೇತವಿಮುಕ್ತಿದಮ್ ॥೫೭॥


ರಾಜ ಹೇಳಿದ – ಪ್ರೇತಘಟವ ಹೇಗೆ ಮಾಡಬೇಕು. ಏವ ವಿಧಾನದಿಂದ ಕೊಡಬೇಕು. ಸಕಲ ಜನರ ಹಿತಾರ್ಥವಾಗಿ ಪ್ರೇತಕ್ಕೆ ಮುಕ್ತಿಯ ದೊರಕುಸುವ ಪ್ರೇತಘಟದ ವಿಷಯವ ಹೇಳು.


ಪ್ರೇತ ಉವಾಚ-


ಸಾಧುಪೃಷ್ಟಂ ಮಹಾರಾಜ ಕಥಯಾಮಿ ನಿಬೋಧ ತೇ ।

ಪ್ರೇತತ್ವಂ ನ ಭವೇದ್ಯೇನ ದಾನೇನ ಸುದೃಢೇನ ಚ ॥೫೮॥


ಪ್ರೇತ ಹೇಳಿತ್ತು – ಹೇ ಮಹಾರಾಜ!, ಒಳ್ಳೆದನ್ನೇ ಕೇಳಿದೆ ನೀನು. ಯಾವ ಸುದೃಢವಾದ ದಾನದ ಪ್ರೇತತ್ವ ಉಂಟಾಗಿದೆಯೋ ಅದರ ಹೇಳುತ್ತೆನೆ  ಲಕ್ಷ್ಯ ಗೊಟ್ಟು ಕೇಳು.


ದಾನಂ ಪ್ರೇತಘಟಂ ನಾಮ ಸರ್ವಾಶುಭವಿನಾಶನಮ್ ।

ದುರ್ಲಭಂ ಸರ್ವಲೋಕಾನಾಂ ದುರ್ಗತಿಕ್ಷಯಕಾರಕಮ್ ॥೫೯॥


ಈ ಪ್ರೇತಘಟ ಎಂದು ಹೇಳುವ ಹೆಸರಿನ ದಾನವು ಎಲ್ಲ ಅಶುಭಗಳ ನಾಶವುಂಟು ಮಾಡುವಂತಾದ್ದು ಹಾಗೂ ದುರ್ಗತಿಯನ್ನೂ ಕ್ಷಯಮಾಡುವಂತಾದ್ದು. ಸಕಲಲೋಕಗಳಲ್ಲಿಯೂ ಇದು ದುರ್ಲಭವಾದ್ದು.


ಸಂತಪ್ತ ಹಾಟಕಮಯಂ ತು ಘಟಂ ವಿಧಾಯ ಬ್ರಹ್ಮೇಶಕೇಶವಯುತಂ ಸಹ ಲೋಕಪಾಲೈಃ ।

ಕ್ಷೀರಾಜ್ಯಪೂರ್ಣವಿವರಂ ಪ್ರಣಿಪತ್ಯ ಭಕ್ತ್ಯಾ ವಿಪ್ರಾಯ ದೇಹಿ ತವ ದಾನಶತೈಃ ಕಿಮನ್ನೈಃ ॥೬೦॥


ಕಾಸಿದ ಚಿನ್ನದ ಘಟವ ಮಾಡಿ, ವಿಧಿಪೂರ್ವಕ ಬ್ರಹ್ಮ ಈಶ್ವರ, ಕೇಶವ  ಇಂದ್ರಾದಿ ಲೋಕಪಾಲರ ಜತೆಲಿ ಅದರಲ್ಲಿ ಆವಾಹನೆ ಮಾಡಿ ಅದರಲ್ಲಿ ಹಾಲು ತುಪ್ಪಗಳಿಂದ ತುಂಬುಸಿ ಅದಕ್ಕೆ ನಮಸ್ಕರಿಸಿ, ಭಕ್ತಿಯಿಂದ ಅದನ್ನು  ಬ್ರಾಹ್ಮಣನಿಗೆ ದಾನ ಕೊಡಬೇಕು. ಬೇರೆ ನೂರಾರು ದಾನಗಳಿಂದ ಎನು ಪ್ರಯೋಜನ?!


ಬ್ರಹ್ಮಾ ಮಧ್ಯೇ ತಥಾ ವಿಷ್ಣುಃ ಶಂಕರಃ ಶಂಕರೋsವ್ಯಯಃ ।

ಪ್ರಾಚ್ಯಾದಿಷು ಚ ತತ್ಕಂಠೇ ಲೋಕಪಾಲಾನ್ ಕ್ರಮೇಣ ತು ॥೬೧॥


ಮಧ್ಯಲ್ಲಿ ಬ್ರಹ್ಮ, ವಿಷ್ಣು ಮತ್ತೆ ಅವಿನಾಶಿಯಾದ ಸುಖವನ್ನು ಕೊಡುವ ಶಂಕರ ಇವರುಗಳನ್ನೂ, ಪೂರ್ವಾದಿ ದಿಕ್ಕುಗಳಲ್ಲಿ ಅದರ ಕಂಠಲ್ಲಿ ಲೋಕಪಾಲಕರನ್ನೂ ಕ್ರಮವಾಗಿ


ಸಂಪೂಜ್ಯ ವಿಧಿವದ್ರಾಜನ್ ಧೂಪೈಃ ಕುಸುಮಚಂದನೈಃ ।

ತತೋ ದುಗ್ಧಾಜ್ಯಸಹಿತಂ ಘಟಂ ದೇಯಂ ಹಿರಣ್ಮಯಮ್ ॥೬೨॥


ಏ ರಾಜನ್!, ಚಂದನ ಹೂಗು ಧೂಪಗಳಿಂದ ವಿಧಿಪೂರ್ವಕವಾಗಿ ಅರ್ಚಿಸಿ, ಮತ್ತೆ ಹಾಲು ತುಪ್ಪಗಳ ಸಹಿತ ಆ ಚಿನ್ನದ ಘಟವ ದಾನ ಕೊಡಬೇಕು.


ಸರ್ವದಾನಾಧಿಕಂ ಚೈತನ್ಮ ಹಾಪಾಕನಾಶನಮ್ ।

ಕರ್ತವ್ಯಂ ಶ್ರದ್ಧಯಾ ರಾಜನ್ಪ್ರೇತತ್ವವಿನಿವೃತ್ತಯೇ ॥೬೩॥


ಏ ರಾಜನೇ, ಇದು ಎಲ್ಲ ದಾನಗಳಲ್ಲಿಯೂ ಶ್ರೇಷ್ಠವಾದ್ದು ಮತ್ತೆ ಮಹಾಪಾತಕಗಳ ನಾಶಮಾಡುವಂತಾದ್ದು. ಹಾಗಾಗಿ ಪ್ರೇತತ್ವದ ವಿಮೋಚನೆಗೆ ಬೇಕಾಗಿ ಇದರ ಶ್ರದ್ಧೆಯಿಂದ ದಾನ  ಮಾಡಬೇಕು.


ಶ್ರೀಭಗವಾನುವಾಚ –


ಏವಂ ಸಂಜಲ್ಪತಸ್ತಸ್ಯ ಪ್ರೇತೇನ ಸಹ ಕಾಶ್ಯಪ ।

ಸೇನಾ ಜಗಾಮಾನುಪದಂ ಹಸ್ತ್ಯಶ್ವರಥಸಂಕುಲಾ ॥೬೪॥


ಭಗವಂತ  ಮಹಾವಿಷ್ಣು ಹೇಳಿದ – ಹೇ ಕಾಶ್ಯಪನೇ!, ಈ ರೀತಿ ಆ ಪ್ರೇತದ ಒಟ್ಟಿಗೆ ರಾಜ ಮಾತಾಡಿಕೊಂಡು, ರಾಜನ ಹಿಂಬಾಲಿಸಿಕೋಂಡು ಬಂದಿದ್ದ ಆನೆ, ಕುದುರೆ, ರಥಗಳಿಂದ ಕೂಡಿದ ರಾಜನ ಸೈನ್ಯವು ಅಲ್ಲಿಗೆ ಬಂದು ನಿಂತಿತ್ತು.


ತತೋ ಬಲೇ ಸಮಾಯಾತೇ ದತ್ವಾ ರಾಜ್ಞೇ ಮಹಾಮಣಿಮ್ ।

ನಮಸ್ಕೃತ್ಯ ಪುನಃ ಪ್ರಾರ್ಥ್ಯ ಪ್ರೇತೋsದರ್ಶನಮೇಯಿವಾನ್ ॥೬೫॥


ರಾಜನ ಸೈನ್ಯವು ಅಲ್ಲಿಗೆ ಬಂದೀತು  ಮತ್ತೆ, ಆ ಪ್ರೇತವು ರಾಜನಿಗೆ ಮಹಾಮಣಿಯ ಕೊಟ್ಟ, ನಮಸ್ಕರಿಸಿ, ಪುನಃ ಪ್ರಾರ್ಥಿಸಿ ಅದೃಶ್ಯ ಆಯಿತು.


ತಸ್ಮಾದ್ವನಾದ್ವಿನಿಷ್ಕ್ರಮ್ಯ ರಾಜಾಪಿ ಸ್ವಪುರಂ ಯಯೌ ।

ಸ್ವಪುರಂ ಚ ಸಮಾಸಾದ್ಯ ತತ್ಸರ್ವಂ ಪ್ರೇತಭಾಷಿತಮ್ ॥೬೬॥


ಮತ್ತೆ ರಾಜನೂ ಆ ಕಾಡಿನಿಂದ ಹೊರಟು  ತನ್ನ ಪಟ್ಟಣಕ್ಕೆ ಹೋದನು ತನ್ನ ಊರ ಸೇರಿ, ಪ್ರೇತವು ಹೇಳಿದ ಎಲ್ಲವನ್ನೂ


ಚಕಾರ ವಿಧಿವತ್ಪಕ್ಷಿನ್ನೌರ್ಧ್ವದೇಹಿಕಜಂ ವಿಧಿಮ್ ।

ತಸ್ಯ ಪುಣ್ಯಪ್ರದಾನೇನ ಪ್ರೇತೋ ಮುಕ್ತೋ ದಿವಂ ಯಯೌ ॥೬೭॥


ಔರ್ಧ್ವದೇಹಿಕ ಕ್ರಿಯೆಗಳ ವಿಧಿಪೂರ್ವಕವಾಗಿ ಮಾಡಿ ಅದರ ಪುಣ್ಯ ಫಲವ ದಾನ ಮಾಡಿದ , ಏ ಪಕ್ಷಿಯೇ!, ಪ್ರೇತವು ಮುಕ್ತಿಹೊಂದಿ ಸ್ವರ್ಗಲೋಕಕ್ಕೆ ಹೋಯಿತು.


ಶ್ರಾದ್ಧೇನ ಪರದತ್ತೇನ ಗತಃ ಪ್ರೇತೋsಪಿ ಸದ್ಗತಿಮ್ ।

ಕಿಂ ಪುನಃ ಪುತ್ರದತ್ತೇನ ಪಿತಾ ಯಾತೀತಿ ಚಾದ್ಭುತಮ್ ॥೬೮॥


ಇತರರು ಮಾಡಿದ ಶ್ರಾದ್ಧದಿಂದ ಪ್ರೇತವು ಸದ್ಗತಿಯ ಹೊಂದಿತ್ತು. ಮತ್ತೆ ಮಗ ಮಾಡಿದ್ದರಿಂದ ಅಪ್ಪ ಸದ್ಗತಿಯ ಹೊಂದುವುದರಲ್ಲಿ ಎಂತ ಆಶ್ಚರ್ಯ ಇದ್ದು?!.


ಇತಿಹಾಸಮಿಮಂ ಪುಣ್ಯಂ ಶೃಣೋತಿ ಶ್ರಾವಯೇಚ್ಚ ಯಃ ।

ನ ತೌ ಪ್ರೇತತ್ವಮಾಯಾತಃ ಪಾಪಾಚಾರಯುತಾವಪಿ ॥೬೯॥


ಈ ಪುಣ್ಯಕರವಾದ ಇತಿಹಾಸವ ಕೇಳುವವ  ಕೇಳುಸುವವ ಪಾಪಗಳ ಮಾಡಿದ್ದರೂ ಅವ ಪ್ರೇತತ್ವವ ಪಡುವುದಿಲ್ಲ 


 

ಇತಿ ಶ್ರೀಗರುಡಪುರಾಣೇ ಸಾರೋದ್ಧಾರೇ ಬಭ್ರುವಾಹನೇನ ಪ್ರೇತಸಂಸ್ಕಾರೋ ನಾಮ ಸಪ್ತಮೋsಧ್ಯಾಯಃ ॥


ಇಲ್ಲಿಗೆ ಶ್ರೀಗರುಡಪುರಾಣಲ್ಲಿ ಸಕಲ ಶಾಸ್ತ್ರಗಳ ಸಾರವಾದ ‘ಸಾರೋದ್ಧಾರ’ ವಿಭಾಗಲ್ಲಿ ಬಭ್ರುವಾಹನನ ಮೂಲಕ ಪ್ರೇತ ಸಂಸ್ಕಾರ’ ಎಂದು ಹೇಳುವ  ಏಳನೇ ಅಧ್ಯಾಯ ಮುಗಿದತ್ತು.

No comments:

ನರನಾಡಿಗಳು

*ನರನಾಡಿಗಳು ಎಂದರೇನು ?* *ಇವುಗಳ ಮಹತ್ವ ಏನು ? ದೇಹದಲ್ಲಿ ಇವುಗಳು ಪ್ರತ್ಯೇಕವಾಗಿ ಇರುತ್ತವೆ  *ನರ(nerves) -* *ಮೆದುಳು,ಮೆದುಳು* *ಬಳ್ಳಿ(ಬೆನ್ನು ಹುರಿ) ಮತ್ತು* *ಅ...