ಅಧ್ಯಾಯ – 07
ಬಭ್ರುವಾಹನೇನ ಪ್ರೇತಸಂಸ್ಕಾರಃ
ಬಭ್ರುವಾಹನನ ಮೂಲಕ ಪ್ರೇತಸಂಸ್ಕಾರ
ಸೂತ ಉವಾಚ-
ಇತಿ ಶ್ರುತ್ವಾ ತು ಗರುಡಃ ಕಂಪಿತೋsಶ್ವತ್ಥ ಪತ್ರವತ್ ।
ಜನನಾಮುಪಕಾರಾರ್ಥಂ ಪುನಃ ಪಪ್ರಚ್ಛ ಕೇಶವಮ್ ॥೦೧॥
ಸೂತ ಹೇಳಿದ – ಇದನ್ನು ಕೇಳಿದ ಗರುಡ ಅಶ್ವತ್ಥ ಎಲೆಯ ಹಾಗೆ ನಡುಕೊಂಡು ಜನರ ಉಪಕಾರಕ್ಕೋಸ್ಕರ ಮತ್ತೆ ಕೇಶವನ ಹತ್ತಿರ ಕೇಳಿದ
.
ಗರುಡ ಉವಾಚ-
ಕೃತ್ವಾ ಪಾಪಾನಿ ಮನುಜಾಃ ಪ್ರಮಾದಾದ್ಬುದ್ಧಿತೋsಪಿ ವಾ ।
ನ ಯಾಂತಿ ಯಾತನಾ ಯಾಮ್ಯಾಃ ಕೇನೋಪಾಯೇನ ಕಥ್ಯತಾಮ್ ೨
ಗರುಡ ಹೇಳಿದ – ಮನುಷ್ಯರು ತಿಳುದೋ ತಿಳಿಯದೆಯೋ ಪಾಪಗಳ ಮಾಡಿ, ಏವ ಪಾಪಗಳಿಂದ ಯಮಯಾತನೆಯ ಪಡುತ್ತವೆ ಅವನ್ನು ನನಗೆ ಹೇಳಲ್ಪಡಲಿ.
ಸಂಸಾರಾರ್ಣವಮಗ್ನಾನಾಂ ನರಾಣಾಂ ದೀನಚೇತಸಾಮ್ ।
ಪಾಪೋಪಹತಬುದ್ಧೀನಾಂ ವಿಷಯೋಪಹತಾತ್ಮನಾಮ್ ॥೦೩॥
ಏವ ಮನುಷ್ಯರು ಈ ಸಂಸಾರ ಎಂದು ಹೇಳುವ ಸಮುದ್ರಲ್ಲಿ ಮುಳಗಿ ಅಲ್ಪಬುದ್ಧಿವುಳ್ಳವರಾಗಿದ್ದವೋ, ಯಾರ ಬುದ್ಧಿ ಪಾಪಗಳಿಂದ ಮಂಕಾಗಿದೆಯೋ, ಯಾರ ಆತ್ಮವು ವಿಷಯ ಭೋಗಗಳಿಂದ ಘಾಸಿ ಹೊಂದಿದೆಯೋ
ಉದ್ಧಾರಾರ್ಥಂ ವದ ಸ್ವಾಮಿನ್ ಪುರಾಣಾರ್ಥವಿನಿಶ್ಚಯಮ್ ।
ಉಪಾಯಂ ಯೇನ ಮನುಜಾಃ ಸದ್ಗತಿಂ ಯಾಂತಿ ಮಾಧವ ॥೦೪॥
ಹೇ ಸ್ವಾಮಿಯೇ, ಅಂತವರ ಉದ್ಧಾರಕ್ಕೋಸ್ಕರ ಪುರಾಣಗಳ ಅರ್ಥಗಳಲ್ಲಿ ವಿಶೇಷವಾಗಿ ನಿಶ್ಚಯಿಸಲ್ಪಟ್ಟ ಏವ ಉಪಾಯಗಳಿಂದ ಮನುಷ್ಯರು ಸದ್ಗತಿ ಪಡೆತ್ತರೋ ಹೇಳುವುದಾದರೆ ನನಗೆ ಹೇಳು ಮಾಧವನೇ!
ಶ್ರೀಭಗವಾನುವಾಚ-
ಸಾಧು ಪೃಷ್ಟಂ ತ್ವಯಾ ತಾರ್ಕ್ಷ್ಯ ಮಾನುಷಾಣಾಂ ಹಿತಾಯ ವೈ ।
ಶ್ರುಣುಷ್ವಾವಹಿತೋ ಭೂತ್ವಾ ಸರ್ವಂ ತೇ ಕಥಯಾಮ್ಯಹಮ್ ॥೦೫॥
ಶ್ರೀ ಭಗವಂತ ಹೇಳಿದ – ಏ ಗರುಡ!, ನೀನು ಮನುಷ್ಯರ ಹಿತಕ್ಕಾಗಿ ಒಳ್ಳೆಯ ಪ್ರಶ್ನೆಯನ್ನೇ ಕೇಳಿದೆ. ಈಗ ನೀನು ಸಮಧಾನಲ್ಲಿ ಕೇಳು. ನಾನು ನಿನಗೆ ಎಲ್ಲವನ್ನೂ ಹೇಳುತ್ತೆನೆ
ದುರ್ಗತಿಃ ಕಥಿತಾ ಪೂರ್ವಮಪುತ್ರಾಣಾಂ ಚ ಪಾಪಿನಾಮ್ ।
ಪುತ್ರಿಣಾಂ ಧಾರ್ಮಿಕಾಣಾಂ ತು ನ ಕದಾಚಿತ್ಖಗೇಶ್ವರ ॥೦೬॥
ಏ ಪಕ್ಷಿರಾಜನೇ!, ಹಿಂದೆ ಪುತ್ರಹೀನರಾದ ಪಾಪಿಗಳ ದುರ್ಗತಿಯ ಹೇಳಿದ್ದೆ. ಪುತ್ರವಂತರಾದ ಧರ್ಮನಿಷ್ಠರು ಎಂದಿಂಗೂ ಹಾಗಾವುದಿಲ್ಲ
ಪುತ್ರಜನ್ಮವಿರೋಧಃ ಸ್ಸಾದ್ಯದಿ ಕೇನಾಪಿ ಕರ್ಮಣಾ ।
ತದಾ ಕಶ್ಚಿದುಪಾಯೇನ ಪುತ್ರೋತ್ಪತ್ತಿಂ ಪ್ರಸಾಧಯೇತ್ ॥೦೭॥
ಒಂದುವೇಳೆ ಏವುದಾರು ಕರ್ಮಫಲದಿಂದ ಅವನಿಗೆ ಮಗ ಹುಟ್ಟದ್ರೆ, ಅವ ಈ ಯಾವುದಾರು ಉಪಾಯದ ಪುತ್ರೋತ್ಪತ್ತಿಯ ಸಾಧ್ಯತೆಯ ಮಾಡಿದರೆ
ಹರಿವಂಶಕಥಾಂ ಶ್ರುತ್ವಾ ಶತಚಂಡೀವಿಧಾನತಃ ।
ಭಕ್ತ್ಯಾಶ್ರೀಶಿವಮಾರಾಧ್ಯ ಪುತ್ರಮುತ್ಪಾದಯೇತ್ಸುಧೀಃ ॥೦೮॥
ಹರಿವಂಶದ ಕಥೆಯ ಕೇಳುವದರಿಂದಲಾಗಲೀ, ಶತಚಂಡೀ ವಿಧಾನದಲಾಗಲೀ, ಭಕ್ತಿಯಿಂದ ಶಿವನ ಆರಾಧಿಸುವದರಿಂದಲಾಗಲೀ, ಬುದ್ಧಿವಂತನಾದ ಮನುಷ್ಯ° ಪುತ್ರೋತ್ಪತ್ತಿಯ ಮಾಡಲಿ
ಪುನ್ನಾಮ್ನೋ ನರಕಾದ್ಯಸ್ಮಾತ್ಪಿತರಂ ತ್ರಾಯತೇ ಸುತಃ ।
ತಸ್ಮಾತ್ಪುತ್ರ ಇತಿ ಪ್ರೋಕ್ತಃ ಸ್ವಯಮೇವ ಸ್ವಯಂಭುವಾ ॥೦೯॥
‘ಪು’ ಹೇಳವ ಪದವೇ ನರಕದಿಂದ ರಕ್ಷಿಸುವವನೇ ಪುತ್ರ ಹಾಗಾಗಿ ಸ್ವತಃ ಸ್ವಯಂಭುವೇ ಅವನ ‘ಪುತ್ರ’ ಹೇಳಿ ಹೇಳಿದ್ದನೆ
ಏಕೋಪಿ ಪುತ್ರೋ ಧರ್ಮಾತ್ಮಾ ಸರ್ವಂ ತಾರಯತೇ ಕುಲಮ್ ।
ಪುತ್ರೇಣ ಲೋಕಾಂಜಯತಿ ಶ್ರುತಿರೇಷಾ ಸನಾತನೀ ॥೧೦॥
ಒಬ್ಬನೇ ಧರ್ಮಾತ್ಮನಾದ ಪುತ್ರ ಎಲ್ಲ ಕುಲವನ್ನೂ ದಾಟುಸುತ್ತನೆ . ಪುತ್ರನಿಂದ ಲೋಕಗಳೆಲ್ಲವ ಜಯಿಸುತ್ತನೆ ಹೇಳುವ ಸನಾತನ ಸೂಕ್ತಿ.
ಇತಿ ವೇದೈರಪಿ ಪ್ರೋಕ್ತಂ ಪುತ್ರಮಾಹಾತ್ಮ್ಯಮುತ್ತಮಮ್ ।
ತಸ್ಮಾತುತ್ರಮುಖಂ ದೃಷ್ಟ್ವಾ ಮುಚ್ಯತೇ ಪೈತೃಕಾದೃಣಾತ್ ॥೧೧॥
ಈ ರೀತಿಯಾಗಿ ವೇದಗಳು ಉತ್ತಮವಾದ ಪುತ್ರನ ಮಹಾತ್ಮೆಯ ಹೇಳಿದ್ದು. ಹಾಗಾಗಿ ಪುತ್ರನ ಮೊರೆಯ ನೋಡಿ ಪಿತೃ ಋಣದಿಂದ ಮುಕ್ತರಾಗುತ್ತಾರೆ
ಪೌತ್ರಸ್ಯ ಸ್ಪರ್ಶನಾನ್ಮರ್ತ್ಯೋ ಮುಚ್ಯತೇ ಚ ಋಣತ್ರಯಾತ್ ।
ಲೋಕಾನತ್ಯೇದ್ದಿವಃ ಪ್ರಾಪ್ತಿಃ ಪುತ್ರಪೌತ್ರಪ್ರಪೌತ್ರಕೈಃ ॥೧೨॥
ಮೊಮ್ಮಗನ ಸ್ಪರ್ಶದಿಂದ ಮನುಷ್ಯ ಮೂರು ಋಣಗಳಿಂದ ಮುಕ್ತನಾವುತ್ತನೆ ಮಗ, ಮೊಮ್ಮಗ, ಮರಿಮೊಮ್ಮಗ ಇದರಿಂದ ಯಮಲೋಕಗಳ ದಾಟಿ ಸ್ವರ್ಗಾದಿ ಲೋಕಗಳನ್ನು ಹೊಂದುತ್ತನೆ
ಬ್ರಾಹ್ಮೋಢಾ ಪುತ್ರೋನ್ನಯತಿ ಸಂಗೃಹೀತಸ್ತ್ವಧೋನಯೇತ್ ।
ಏವಂ ಜ್ಞಾತ್ವಾ ಖಗಶ್ರೇಷ್ಠ ಹೀನಜಾತಿಸುತಾಂಸ್ತ್ಯಜೇತ್ ॥೧೩॥
ಬ್ರಹ್ಮವಿವಾಹದ (ಬ್ರಹ್ಮ, ದೈವ, ಆರ್ಷ, ಪ್ರಜಾಪತ್ಯ, ಆಸುರ, ಗಂಧರ್ವ, ರಾಕ್ಷಸ, ಪೈಶಾಚ – ಇವು ಎಂಟು ಪ್ರಮುಖ ವಿವಾಹ ವಿಧಗಳು . ಇದರಲ್ಲಿ ಬ್ರಹ್ಮವಿವಾಹ ಅತೀ ಶ್ರೇಷ್ಠವಾದ್ದು) ವಿಧಿದಿಂದ ವಿವಾಹವಾದ ಪತ್ನಿಂದ ಜನಿಸಿದ ಔರಸ ಪುತ್ರ ಊರ್ಧ್ವಗತಿ (ಉತ್ತಮಗತಿ)ಯ ಪ್ರಾಪ್ತಿ ಮಾಡುಸುತ್ತನೆ ಮತ್ತು ಸಂಗೃಹೀತ (ದುಷ್ಟ ಪದ್ಧತಿಯ ವಿವಾಹದ ಜನಿಸಿದ) ಪುತ್ರ ಅಧೋಗತಿಯತ್ತ (ನರಕದತ್ತೆ) ಕೊಂಡೋಯ್ಯುತ್ತಾನೆ . ಹಾಗಾಗಿ ಹೇ ಪಕ್ಷಿಶ್ರೇಷ್ಠನೇ!, ವ್ಯಕ್ತಿಯು ಹೀನ ಜಾತಿಯ ಸ್ತ್ರೀಯಿಂದ ಜನಿಸಿದ ಪುತ್ರನ ಬಿಡಬೇಕು. (ಅರ್ಥಾತ್, ಹೀನ ವಿವಾಹ ಪದ್ಧತಿಯ ಪ್ರೋತ್ಸಾಹಿಸಲಾಗ, ಅದು ಉನ್ನತಿಗೆ ಯೋಗ್ಯವಲ್ಲ).
ಸವರ್ಣೇಭ ಸವರ್ಣಾಸು ಯೇ ಪುತ್ರಾ ಔರಸಾಃ ಖಗ ।
ಸ ಏವ ಶ್ರಾದ್ಧದಾನೇನ ಪಿತೃಣಾಂ ಸ್ವರ್ಗಹೇತವಃ ॥೧೪॥
ಏ ಗರುಡ!, ಸವರ್ಣ ಪುರುಷರಿಂದ ಸವರ್ಣ ಸ್ತ್ರೀಲಿ ಹುಟ್ಟುವ ಪುತ್ರನಿಗೆ ‘ಔರಸ ಪುತ್ರ’ ಎಂದು ಹೇಳುವದು. ಅವನೇ ಶ್ರಾದ್ಧಕರ್ಮಾದಿಗಳನ್ನು ಮಾಡಿ ಪಿತೃಗಳ ಸ್ವರ್ಗ ಪ್ರಾಪ್ತಿ ಮಾಡುಸಲು ಕಾರಣ ಆಗುತ್ತಾನೆ .
ಶ್ರಾದ್ಧೇನ ಪುತ್ರದತ್ತೇನ ಸ್ವರ್ಯಾತೀತಿ ಕಿಮುಚ್ಯತೇ ।
ಪ್ರೇತೋsಪಿ ಪರದತ್ತೇನ ಗತಃ ಸ್ವರ್ಗಮಥೋ ಶ್ರುಣು ॥೧೫॥
ಪುತ್ರ ಮಾಡಿದ ಶ್ರಾದ್ಧದಿಂದ ಸ್ವರ್ಗಕ್ಕೆ ಹೋಗುತ್ತಾನೆ . ಪ್ರೇತವೂ ಇನ್ನೊಬ್ಬ ಮಾಡಿದ ಶ್ರಾದ್ಧದಿಂದ ಸ್ವರ್ಗಕ್ಕೆ ಹೋಗುತ್ತಾನೆ . ಅದರ ಬಗ್ಗೆ ಕೇಳು.
ಅತ್ರೈವೋದಾಹರಿಷ್ಯೇsಹಮಿತಿಹಾಸಂ ಪುರಾತನಮ್ ।
ಔರ್ಧ್ವದೇಹಿಕದಾನಸ್ಯ ಪರಂ ಮಾಹಾತ್ಮ್ಯಸೂಚಕಮ್ ॥೧೬॥
ಅದರ ಸಂಬಂಧವಾಗಿಯೇ ಔರ್ಧ್ವದೇಹಿಕ ದಾನದ ಉತ್ತಮವಾದ ಮಹಿಮೆಯ ಸೂಚಿಸುವ ಒಂದು ಪ್ರಾಚೀನ ಇತಿಹಾಸವನ್ನು ಉದಾಹರಿಸುತ್ತೇನೆ
ಪುರಾ ತ್ರೇತಾಯುಗೇ ತಾರ್ಕ್ಷ್ಯ ರಾಜಸೀದ್ಬಭ್ರುವಾಹನಃ ।
ಮಹೋದಯೇ ಪುರೇ ರಮ್ಯೇ ಧರ್ಮನಿಷ್ಠೋ ಮಹಾಬಲಃ ॥೧೭॥
ಏ ಗರುಡ!, ಪೂರ್ವಕಾಲಲ್ಲಿ, ತ್ರೇತಾಯುಗಲ್ಲಿ ಮನೋಹರವಾದ ಮಹೋದಯಪುರಲ್ಲಿ, ಧರ್ಮನಿಷ್ಠನೂ, ಮಹಾಬಲಶಾಲಿಯೂ ಆದ ಬಭ್ರುವಾಹನ ಹೇಳುವ ರಾಜ ಇದ್ದ
ಯಜ್ವಾ ದಾನಪತಿಃ ಶ್ರೀಮಾನ್ಬ್ರಹ್ಮಣ್ಯಃ ಸಾಧುವತ್ಸಲಃ ।
ಶೀಲಾಚಾರಗುಣೋಪೇತೋ ದಯಾದಾಕ್ಷಿಣ್ಯ ಸಂಯುತಃ ॥೧೮॥
ಯಜ್ಞಗಳ ಮಾಡುವವನೂ, ಶ್ರೇಷ್ಠನಾದ ದಾನಿಯೂ, ಶ್ರೀಮಂತನೂ, ಬ್ರಾಹ್ಮಣರ ಆದರಿಸುವವನೂ, ಸಾಧುಗಳ ಪ್ರೀತಿಸುವವನೂ, ಶೀಲಾಚಾರ ಸದ್ಗುಣ ಸಂಪನ್ನನೂ, ದಯಾದಾಕ್ಷಿಣ್ಯಗಳಿಂದ ಕೂಡಿದವನೂ ಅವ ಆಗಿದ್ದ
ಪಾಲಯಾಮಾಸ ಧರ್ಮೇಣ ಪ್ರಜಾಃ ಪುತ್ರಾನಿವೌರಸಾನ್ ।
ಕ್ಷತ್ರಧರ್ಮರತೋ ನಿತ್ಯಂ ಸ ದಂಡ್ಯಾನ್ದಂಡಯನ್ನೃಪಃ ॥೧೯॥
ಅವ ಧರ್ಮದ ಔರಸಪುತ್ರರ ರೀತಿಲಿ ಪ್ರಜೆಗಳ ಪಾಲಿಸಿಕೋಂಡಿದ್ದ. ನಿತ್ಯವೂ ಕ್ಷತ್ರಿಯ ಧರ್ಮಲ್ಲಿ ತತ್ಪರನಾಗಿ ಅಪರಾಧಿಗಳ ದಂಡಿಸುತ್ತಿದ್ದ
ಸ ಕದಾಚಿನ್ಮಹಾಬಾಹುಃ ಸುಸೈನ್ಯೋ ಮೃಗಯಾಂ ಗತಃ ।
ವನಂ ವಿವೇಶ ಗಹನಂ ನಾನಾವೃಕ್ಷ ಸಮನ್ವಿತಮ್ ॥೨೦॥
ಒಂದು ಸರ್ತಿ ಆ ಮಹಾಬಾಹುವು ಸೇನಾಸಮೇತನಾಗಿ, ಮೃಗಗಳ ಬೇಟೆಯಾಡಲು ಹೋದ. ಅನೇಕ ವೃಕ್ಷಗಳಿಂದ ಕೂಡಿದ ಒಂದು ದಟ್ಟವಾದ ವನವನ್ನು ಅವನು ಪ್ರವೇಶಿಸಿದ
ನಾನಾಮೃಗಗಣಾಕೀರ್ಣಂ ನಾನಾಪಕ್ಷಿ ನಿನಾದಿತಮ್ ।
ವನಮಧ್ಯೇ ತದಾ ರಾಜಾ ಮೃಗಂ ದೂರಾದಪಶ್ಯತ ॥೨೧॥
ಆ ವನ ನಾನಾ ತರದ ಪ್ರಾಣಿಗಳ ಗುಂಪನ್ನು ಕೂಡಿ, ನಾನಾ ಪ್ರಕಾರದ ಪಕ್ಷಿಗಳ ಶಬ್ದದಿಂದ ತುಂಬಿ ಹೋಗಿತ್ತು. ಅಷ್ಟರಲ್ಲಿ ಆ ರಾಜ ಆ ಕಾಡಿನ ಮಧ್ಯಲ್ಲಿ ಒಂದು ಜಿಂಕೆಯ ದೂರದಿಂದಲೇ ನೋಡಿದ
ತೇನ ವಿದ್ಧೋಮೃಗೋsತೀವ ಬಾಣೇನ ಸುದೃಢೇನ ಚ ।
ಬಾಣಮಾದಾಯ ತಂ ತಸ್ಯ ವನೇsದರ್ಶನಮೇಯಿವಾನ್ ॥೨೨॥
ಅವನ ಸದೃಢವಾದ ಬಾಣದಿಂದ ಆ ಜಿಂಕೆಯ ಅತಿಯಾಗಿ ಗಾಯಗೊಂಡು ಬಾಣಸಮೇತವಾಗಿ ಕಾಡಿನೊಳಗೆ ಕಣ್ಣಿಗೆ ಕಾಣದಾಯಿತು
ಕಕ್ಷೇಣ ರುಧಿರಾರ್ದ್ರೇಣ ಸ ರಾಜಾನುಜಗಾಮ ತಮ್ ।
ತತೋ ಮೃಗಪ್ರಸಂಗೇನ ವನಮನ್ಯದ್ವಿವೇಶ ಸಃ ॥೨೩॥
ಆ ರಾಜ ರಕ್ತಲೇಪಿತವಾಗಿದ್ದ ಹುಲ್ಲಿನ ಗುರುತಿನಿಂದ ಆ ಜಿಂಕೆಯ ಹಿಂಬಾಲಿಸಿಕೋಂಡು ಹೋಗುತ್ತಾ ಮತ್ತೊಂದು ಕಾಡಿನ್ನು ಪ್ರವೇಶಿಸಿದ
ಕ್ಷುತ್ಕ್ಷಾಮಮಕಂಠೋ ನೃಪತಿಃ ಶ್ರಮಸಂತಾಪಮೂರ್ಛಿತಃ ।
ಜಲಾಶಯಂ ಸಮಾಸಾದ್ಯ ಸಾಶ್ವ ಏವ ವ್ಯಗಾಹತ ॥೨೪॥
ಹಸಿವಿನಿಂದ, ಒಣಗಿದ ಗಂಟಲು ಆ ರಾಜ ಶ್ರಮದಿಂದ ತಾಪದಿಂದ ಇನ್ನೆಂತ ಮೂರ್ಛೆ ತಪ್ಪುವ ಸ್ಥಿತಿಗೆ ತಲುಪಿದ . ಅಲ್ಲಿ ಒಂದು ಜಲಾಶಯದ ಹತ್ತಿರ ಹೋಗಿ ಕುದುರೆಯ ಸಮೇತ ಮಿಂದುನು
.
ಪಪೌ ತದುದಕಂ ಶೀತಂ ಪದ್ಮ ಗಂಧಾದಿವಾಸಿತಮ್ ।
ತತೋsವತೀರ್ಯ ಸಲಿಲಾದ್ವಿಶ್ರಮೋ ಬಭ್ರುವಾಹನಃ ॥೨೫॥
ಕಮಲ ಸುವಾಸೆನೆಯಿಂದ ಕೂಡಿದ, ಶೀತಲವಾದ ಆ ನೀರಿನ್ನು ಕುಡಿದು ದಾಹದಿಂದ ಸುಧಾರಿಸಿಕೋಂಡ ಮತ್ತೆ ಆ ಬಭ್ರುವಾಹನ ನೀರಿನಿಂದ ಹೊರ ಬಂದನು
ದದರ್ಶ ನೃಗ್ರೋಧತರುಂ ಶೀತಚ್ಛಾಯಂ ಮನೋಹರಮ್ ।
ಮಹಾವಿಟಪವಿಸ್ತೀರ್ಣಂ ಪಕ್ಷಿ ಸಂಘನಿನಾದಿತಮ್ ॥೨೬॥
ಅಲ್ಲಿ ಶೀತಲವಾದ ತಣಿಯಲು ಇತ್ತ, ಅಗಾಲಕ್ಕೆ ವಿಸ್ತರಿಸಿಪ್ದ ಕೊಂಬೆಗಳಲ್ಲಿ ನಾದಗೈವ ಪಕ್ಷಿಗಳಿಂದ ಕೂಡಿದ
ಮನೋಹರವಾದ ಒಂದು ಆಲದ ಮರವ ಅವ ನೋಡಿದ
.
ವನಸ್ಯ ತಸ್ಯ ಸರ್ವಸ್ಯ ಮಹಾಕೇತುಮಿವ ಸ್ಥಿತಮ್ ।
ಮೂಲಂ ತಸ್ಯ ಸಮಾಸಾದ್ಯ ನಿಷಸಾದ ಮಹೀಪತಿಃ ॥೨೭॥
ಅದು ಆ ಕಾಡಿಗೆಲ್ಲ ಮಹಾಧ್ವಜದ ಹಾಗೆ ಇತ್ತು ರಾಜ ಹತ್ತಿರ ಹೋಗಿ ಆ ಮರದ ಬುಡದಲ್ಲಿ ವಿಶ್ರಮಿಸಿಕೋಂಡ
ಅಥ ಪ್ರೇತಂ ದದರ್ಶಾಸೌ ಕ್ಷುತ್ತೃಡ್ಭ್ಯಾಂ ವ್ಯಾಕುಲೇಂದ್ರಿಯಮ್ ।
ಉತ್ಕಚಂ ಮಲಿನಂ ಕುಬ್ಜಂ ನಿರ್ಮಾಂಸಂ ಭೀಮದರ್ಶನಮ್ ॥೨೮॥
ಆ ಸಮಯಲ್ಲಿ ಅವನು ಅತೀ , ರೋದನದಿಂದ ವ್ಯಾಕುಲವಾದ, ಇಂದ್ರಿಯಗಳಿಂದ ಕೂಡಿದ, ಕೆದರಿದ ತಲೆ ಕೂದಲು ಮಲಿನವಾದ ಆಕಾರ , ಗೂನ ಬೆನ್ನ, ಮಾಂಸರಹಿತವಾದ, ನೋಡಲು ಅತಿ ಭಯಂಕರವಾದ ಒಂದು ಪ್ರೇತವ ನೋಡಿದ
.
ತಂ ದೃಷ್ಟ್ವಾ ವಿಕೃತಂ ಘೋರಂ ವಿಸ್ಮಿತೋ ಬಭ್ರುವಾಹನಃ ।
ಪ್ರೇತೋsಪಿ ದೃಷ್ಟ್ವಾ ತಂ ಘೋರಾಮಟವೀಮಾಗತಂ ನೃಪಮ್ ॥೨೯॥
ಆ ವಿಕಾರವಾದ ಭಯಂಕರವಾದ ರೂಪವ ನೋಡಿ ಬಭ್ರುವಾಹನ ಅಶ್ಚರ್ಯಪಟ್ಟ ಆ ಪ್ರೇತವೂ ಆ ಘೋರವಾದ ಕಾಡಿಗೆ ಬಂದ ರಾಜನ ನೋಡಿ –
ಸಮುತ್ಸುಕಮನಾ ಭೂತ್ವಾ ತಸ್ಯಾಂತಿಕಮುಪಾಗತಃ ।
ಅಬ್ರವೀತ್ಸ ತದಾ ತಾರ್ಕ್ಷ್ಯ ಪ್ರೇತರಾಜೋ ನೃಪಂ ವಚಃ ॥೩೦॥
ಕುತೂಹಲದಿಂದ ಅವನ ಹತ್ತಿರ ಬಂತು. ಏ ಗರುಡ!, ಆ ಪ್ರೇತರಾಜ ರಾಜನ ಹತ್ತಿರ ಮಾತಾಡಿತ್ತು –
ಪ್ರೇತಭಾವೋ ಮಯಾ ತ್ಯಕ್ತಃ ಪ್ರಾಪ್ತೋsಸ್ಮಿ ಪರಮಾಂಗತಿಮ್ ।
ತ್ವತ್ಸಂಯೋಗಾನ್ಮಹಾಬಾಹೋ ಜಾತೋ ಧನ್ಯತರೋsಸ್ಮ್ಯಹಮ್ ॥೩೧॥
“ಏ ಮಹಾಬಾಹುವೇ!, ನಿನ್ನ ಸಂಯೋಗದಿಂದ ನನ್ನ ಪ್ರೇತಭಾವವ ಬಿಟ್ಟು ಪರಮಗತಿಯ ಪಡದ್ದೆ. ನಾನು ಅತಿ ಧನ್ಯನಾದೆ "
ರಾಜೋವಾಚ-
ಕೃಷ್ಣವರ್ಣ ಕರಾಲಾಸ್ಯ ಪ್ರೇತತ್ವಂ ಘೋರದರ್ಶನಮ್ ।
ಕೇನ ಕರ್ಮವಿಪಾಕೇನ ಪ್ರಾಪ್ತಂ ತೇ ಬಹ್ವಮಂಗಲಮ್ ॥೩೨॥
ರಾಜ ಹೇಳಿದ – ಈ ಕಪ್ಪು ಬಣ್ಣದ, ಕರಾಳ ಮೋರೆಯ, ನೋಡಲು ಭಯಂಕರವಾದ ಅತ್ಯಂತ ಅಮಂಗಳಕರವಾದ ಈ ಪ್ರೇತತ್ವವ ನೀನು ಏವ ಕರ್ಮಫಲದಿಂದ ಪಡದೆ?
ಪ್ರೇತತ್ವಕಾರಣಂ ತಾತ ಬ್ರೂಹಿ ಸರ್ವಮಶೇಷತಃ ।
ಕೋsಸಿ ತ್ವಂ ಕೇನ ದಾನೇನ ಪ್ರೇತತ್ವಂ ತೇ ವಿನಶ್ಯತಿ ॥೩೩॥
ಹೇ ಮಿತ್ರನೇ,!, ನಿನ್ನ ಪ್ರೇತತ್ವಕ್ಕೆ ಕಾರಣವ ಎಲ್ಲವನ್ನೂ ರಜವೂ ಬಿಡದ್ದೆ ಹೇಳು. ನೀನು ಯಾರು?, ಯಾವ ಕಾರಣಗಳಿಂದ ನಿನ್ನ ಪ್ರೇತತ್ವ ನಾಶ ಆಯಿತು ?
ಮುಂದುವರಿಯಲಿದೆ……..
No comments:
Post a Comment