💠🕉💠ಗರಿಕೆಯ ಹಿನ್ನೆಲೆ ಮತ್ತು ಮಹತ್ವ💠🕉💠
🚩ಯಾಕೆ ಗರಿಕೆ ಹುಲ್ಲಿಗೆ ಪೂಜೆಯಲ್ಲಿ ಅತ್ಯಂತ ಪ್ರಾಮುಖ್ಯತೆ ಮತ್ತು ಶ್ರೇಷ್ಠತೆಯನ್ನು ನೀಡಲಾಗುತ್ತದೆ. ಗರಿಕೆಯು ದೇವರಾದ ಶಿವ, ದೇವಿ ಶಕ್ತಿ ಮತ್ತು ಗಣೇಶ ದೇವರನ್ನು ಒಟ್ಟಾಗಿ ಸೇರಿಸುತ್ತದೆ.ಗರಿಕೆಯ ಹಿಂದಿರುವ ಕಥೆ ಇಲ್ಲಿದೆ ಓದಿ
🚩ಹಿಂದೂ ಧರ್ಮದಲ್ಲಿ ಗರಿಕೆಯಿಲ್ಲದೆ ಯಾವ ಪೂಜೆಯು ಸಂಪೂರ್ಣವಾಗುವುದಿಲ್ಲ. ಪವಿತ್ರವಾದ ಗರಿಕೆಯನ್ನು ಮೊದಲು ಪೂಜಿತನಾದ ಗಣೇಶನಿಗೆ ಅರ್ಪಿಸಲೇಬೇಕು. ಪೂಜೆಯಲ್ಲಿ ಪವಿತ್ರವಾದ ಸ್ಥಾನವನ್ನು ಮೊದಲು ತುಳಸಿ ಗಿಡಕ್ಕೆ ನೀಡಲಾಗಿದೆ. ತುಳಸಿಯ ನಂತರ ಗರಿಕೆ ಹುಲ್ಲಿಗೆ ಎರಡನೇ ಸ್ಥಾನ ನೀಡಲಾಗಿದೆ. ತುಳಸಿ ಮತ್ತು ಗರಿಕೆ ಎರಡೂ ಸಹ ಪವಿತ್ರವೆಂದು ಭಾವಿಸಲಾಗಿದೆ. ಗಣೇಶನ ಪೂಜೆಯಲ್ಲಿ ಗರಿಕೆಯು ವಿಶೇಷ ಸ್ಥಾನವನ್ನು ಪಡೆದಿದೆ.
🚩ಗರಿಕೆಯು ಎಲೆಗಳು ಮೂರು ಕತ್ತಿಗಳ ಆಕಾರದ ರೀತಿಯಲ್ಲಿ ಮೊದಲು ಚಿಗುರೊಡೆಯುತ್ತವೆ. ಆ ಮೂರು ಗರಿಕೆಯ ಎಲೆಗಳು ಸಹ ಮೂರು ದೇವ ತತ್ವಗಳಾದ ಶಿವ, ಶಕ್ತಿ,ಮತ್ತು ಗಣೇಶನನ್ನು ಪ್ರತಿಬಿಂಬಿಸುತ್ತವೆ.
🚩ಗರಿಕೆಯ ಹುಲ್ಲಿಗೆ ಗಣೇಶ ದೇವರ ಆತ್ಮವನ್ನು ಆಕರ್ಷಿಸುವ ಶಕ್ತಿಯಿದೆ ಹಾಗೆ ದೇವರ ತತ್ವಗಳನ್ನು ನೀರಿನ ಹನಿಗಳ ಮೂಲಕ ಗರಿಕೆಯ ಎಲೆಗಳಿಗೆ ಹೀರಿಕೊಳ್ಳುವ ಸಾಮರ್ಥ್ಯ ಇದೆ. 21 ಗರಿಕೆಯನ್ನು ಗಣೇಶ ದೇವನಿಗೆ ಪೂಜೆ ಮಾಡುವಾಗ ಅರ್ಪಿಸಿ ಭಕ್ತಿಯಿಂದ ಪೂಜಿಸುವುದರಿಂದ ಅದೃಷ್ಟವನ್ನು ಹೊತ್ತು ತರುವುದು ಎಂದು ನಂಬಲಾಗಿದೆ.
🌼ಗರಿಕೆಯ ಗಿಡವನ್ನು ಗುರುತಿಸುವುದು ಹೇಗೆ ?🌼
🚩ಗರಿಕೆಯು ಒಂದೇ ಬೇರಿನಲ್ಲಿ ಮೊದಲು ಮೂರು ಉದ್ದನೆಯ ಎಲೆಗಳಾಗಿ ಬೆಳೆದು ನಂತರ ಮೂರ್ನಾಲ್ಕು ಗಂಟುಳಾಗಿ ಅಲ್ಲಿಂದ ಎಲೆಗಳು ಚಿಗುರೊಡೆದು ಮತ್ತೆ ಉದ್ದಕ್ಕೆ ಬೆಳೆಯುತ್ತವೆ. ಗರಿಕೆಯ ಎಲೆಯನ್ನು ನೀವು ಒಂದು ವೇಳೆ ಪೂಜೆಗೆ ಕಿತ್ತರೂ ಸಹ ಅದು ಬೇಗ ಬೇಗನೇ ಚಿಗುರೊಡೆದು ಮರುಹುಟ್ಟು ಪಡೆದು ಪುನರ್ಜೀವ ಪಡೆಯುವುದು.
🌺ಗರಿಕೆ ಹುಲ್ಲಿನ ಕಥೆ.🌺
🚩ಒಂದು ಕಾಲದಲ್ಲಿ ಒಬ್ಬ ರಾಕ್ಷಸ ಅನಲಾಸುರ ಇದ್ದನು. ಅವನು ಸ್ವರ್ಗದಲ್ಲಿ ಆತಂಕ ಉಂಟು ಮಾಡಿದನು.ಅವನ ಕಣ್ಣಿನಿಂದ ಬರುವ ಬೆಂಕಿಯು ಅವನ ದಾರಿಯಲ್ಲಿ ಯಾರೇ ಬಂದರು ಏನೇ ಬಂದರು ಎಲ್ಲವನ್ನು ಸುಟ್ಟು ಹಾಕುತ್ತಿದ್ದನು. ಹೀಗೆ ಎಲ್ಲವನ್ನು ನಾಶ ಮಾಡುತ್ತಿದ್ದನು. ಆಗ ದೇವನಾದ ಗಣೇಶನನ್ನು ಸಹಾಯಕ್ಕೆ ಆಹ್ವಾನಿಸಲಾಗುತ್ತದೆ.
🚩ಗಣೇಶ ಮತ್ತು ರಾಕ್ಷಸ ಅನಲಾಸುರ ಇಬ್ಬರು ಯುದ್ಧ ಮಾಡುತ್ತಾರೆ. ಆಗ ಅನಲಾಸುರನು ಬೆಂಕಿಯ ಉಂಡೆಗಳನ್ನು ಗಣೇಶನ ಮೇಲೆ ಎಸೆಯುತ್ತಾನೆ. ಆಗ ಗಣೇಶನು ಇವನನ್ನು ಸಂಹಾರ ಮಾಡಲು ವಿರಾಟ ರೂಪವನ್ನು ಪಡೆದು ಸಂಪೂರ್ಣವಾಗಿ ಅನಲಾಸುರನನ್ನು ನುಂಗಿಬಿಟ್ಟನು.ಆಗ ಗಣೇಶನ ದೇಹದಲ್ಲಿ ಅಧಿಕವಾದ ಉಷ್ಣಾಂಶ ಉತ್ಪತ್ತಿಯಾಗಿ ಗಣೇಶನ ಹೊಟ್ಟೆಯು ಸಹ ಊದಿಕೊಂಡು ಬಿಡುವುದು.ಗಣೇಶನು ಈ ದೇಹದ ಉಷ್ಣಾಂಶದಿಂದ ದೇಹಾಲಾಸ್ಯದಿಂದ ಸುಧಾರಿಸಿಕೊಳ್ಳುವುದಕ್ಕೆ ಹರ ಸಾಹಸ ಪಡುತ್ತಿದ್ದನು.
🚩ದೇವತೆಗಳಾದ ಬ್ರಹ್ಮ, ವಿಷ್ಣು ಮಹೇಶ್ವರ,ಸೂರ್ಯ, ಚಂದ್ರ, ಎಲ್ಲರೂ ಗಣೇಶನ ನೋವು ಕಡಿಮೆ ಮಾಡುವುದಕ್ಕೆ ಬಂದರು ಏನು ಮಾಡಿದರೂ ಹೊಟ್ಟೆ ನೋವು ಗಣೇಶನಿಗೆ ಕಡಿಮೆ ಯಾಗುವುದಿಲ್ಲ.
ಕೊನೆಗೆ ಋಷಿ ಮುನಿಗಳು 21 ಗರಿಕೆಯನ್ನು ತೆಗೆದುಕೊಂಡು ಬಂದು ಗಣೇಶನ ತಲೆಯ ಮೇಲೆ ಇಡುತ್ತಾರೆ. ಆಗ ಗಣೇಶನ ದೇಹದ ಉಷ್ಣಾಂಶವೆಲ್ಲವೂ ಹಾವಿಯಾಗಿ ಮಾಯಾಜಾಲವಾಗಿ ಕಡಿಮೆಯಾಗುತ್ತದೆ. ಗಣೇಶನು ಸಹ ಗುಣ ಮುಖನಾಗುತ್ತಾನೆ.
🏵ಎಂತಹ ಗರಿಕೆಯನ್ನು ಗಣೇಶನಿಗೆ ಅರ್ಪಿಸಬಾರದು ?🏵
ಗಣೇಶನಿಗೆ ಹೂವು ಹೊಡೆದ ಗರಿಕೆಯನ್ನು ಅರ್ಪಿಸಬಾರದು. ಯಾಕೆಂದರೆ ಎಲೆಗಳು ಹಣ್ಣಾಗಿ ಹೋಗಿರುತ್ತವೆ ಬಣ್ಣವೂ ಸ್ವಲ್ಪ ಬದಲಾಗುತ್ತದೆ. ಆದ್ದರಿಂದ ಅಂತಹ ಹಣ್ಣಾಗಿ ಹೂವು ಬಿಟ್ಟ ಗರಿಕೆಯ ಹುಲ್ಲನ್ನು ಪೂಜೆಗೆ ಬಳಸಬಾರದು. ಗರಿಕೆಯಲ್ಲಿರುವ ಜೀವಶಕ್ತಿಯ ಉಲ್ಲಾಸ ಕೂಡ ಕಡಿಮೆಯಾಗಿರುತ್ತದೆ. ಗರಿಕೆಯಲ್ಲಿರುವ ದೇವತೆಗಳನ್ನು ಆಕರ್ಷಿಸುವ ಶಕ್ತಿ ಸಾಮರ್ಥ್ಯ ಕೂಡ ಕಡಿಮೆ ಆಗಿರುವುದು. ಆದ್ದರಿಂದ ಹೂವು ಹೊಡೆದ ಗರಿಕೆಯು ಪೂಜೆಗೆ ಬಳಸಬಾರದು.
No comments:
Post a Comment