Followers
Thursday, 9 February 2023
ನರನಾಡಿಗಳು
*ನರನಾಡಿಗಳು ಎಂದರೇನು ?* *ಇವುಗಳ ಮಹತ್ವ ಏನು ? ದೇಹದಲ್ಲಿ ಇವುಗಳು ಪ್ರತ್ಯೇಕವಾಗಿ ಇರುತ್ತವೆ
*ನರ(nerves) -* *ಮೆದುಳು,ಮೆದುಳು* *ಬಳ್ಳಿ(ಬೆನ್ನು ಹುರಿ) ಮತ್ತು* *ಅವುಗಳಿಂದ ಹೊರ ಹರಿದು ಮಾಂಸ,ಚರ್ಮ,ಸಂದು ಮತ್ತು ಬೇರೆ,ಬೇರೆ ಅಂಗಾಂಗಗಳಿಗೆ ಹಾಗು ಪಂಚೇಂದ್ರಿಯಗಳು ವೈಶಿಷ್ಟ್ಯಪೂರ್ಣವಾದ ಕೆಲಸ ಮಾಡುವುದಕ್ಕೆ ಶಕ್ತಿ ಕೊಡುವುದು.*
ನಾಡಿ(pulse)- ರಕ್ತನಾಳಗಳು (ದಮನಿ/ಅಪದಮನಿ) ಹೃದಯದಿಂದ,ಹೃದಯದ ಕಡೆಗೆ ಹರಿದು, ದೇಹದ ಎಲ್ಲಾ ಭಾಗಗಳಿಗೆ ಅತ್ಯಗತ್ಯವಾದ ಆಹಾರದ ಅಂಶ ,ಆಮ್ಲಜನಕ ತಲುಪಿಸುವುದು ಮತ್ತು ಅಂಗಾಂಗಗಳಲ್ಲಿ ಆಗುವ ರಾಸಾಯನಿಕ ಕ್ರಿಯೆಗಳಿಂದ ಉತ್ತಾದನೆಯಾಗುವ ಕಲ್ಮಶಗಳನ್ನು ಹೊತ್ತು ತರುವ ಕೆಲಸ,ರಕ್ತಚಲನೆಯ ಮೂಲಕ. ಇವೆರಡೂ ಇಡೀ ದೇಹವನ್ನು ಆವರಿಸಿವೆ.
ನರಗಳು ಮೆದುಳಿನಿಂದ ಬೆನ್ನುಹುರಿ ಮೂಲಕ ಅಡಿಯಿಂದ ಮುಡಿಯವರಗಿನ ದೇಹದ ಅಂಗಾಂಗಗಳಳಿಗೆ ಸಂಪರ್ಕ ಮತ್ತು ಅದರ ಚಲನೆ ತಿರುಗಿಸುವ ಕ್ರಿಯಗಳನ್ನು ಹತೋಟಿ ಮಾಡುವ ಒಂದು ತಂತು ಜಾಲವಾಗರುತ್ತದೆ.
ಯೋಗದ ಪ್ರಕಾರ ನಾವು ಮೂರು ನಾಡಿಗಳನ್ನು ಮುಖ್ಯ ವಾಗಿ ಗುರುತಿಸುತ್ತೇವೆ. ಅದನ್ನು ಸೂರ್ಯ ನಾಡಿ ಚಂದ್ರ ನಾಡಿ ಮತ್ತು ಸುಷಮ್ನ ನಾಡಿ ಎಂದು ಹೇಳಲ್ಪಟ್ಟಿದೆ ನಮ್ಮಉಸಿರಾಟ ಈ ಎರಡು ನಾಡಿಗಳ ಮೂಲಕ ಅನಿವರತ ನಡೆಯುತ್ತಿರುತ್ತದೆ.
ಇದು ಸಹಜ ಕ್ರಿಯೆ ಇದು ಮೆದುಳು ಶ್ವಾಸಕೋಶದ ಮೂಲಕ ಗಾಳಿಯನ್ನು ಮೂಗಿನ ದ್ವಾರದಿಂದ ಹೀರಿ ಕೊಳವೆಯಮೂಲಕ ಶ್ವಾಸಕೋಶ ತುಂಬಿ ರಕ್ತನಾಳಗಳಿಗೆ ಆಮ್ಲಜನಕದ ರವಾನೆ ಮತ್ತು ಇಂಗಾಲಾಮ್ಲದ ಹೊರಹಾಕುವಿಕೆಯ ಕ್ರಿಯೆಯು ಸಹಜವಾಗಿ ನಡೆಯುತ್ತಿರುತ್ತದೆ.
ಇದಲ್ಲದೆ ಯೋಗವು ಸುಷಮ್ನ ನಾಡಿಯಬಗ್ಗೆ ತಿಳಿಸುತ್ತದೆ ಇದು ಯೋಗಕ್ರಿಯೆಯಲ್ಲಿ ಆಧ್ಯಾತ್ಮಿಕ ಸಾಧನೆಗೆ ಬೇಕಾದ ಸೂಕ್ಷ್ಮ ನಾಡಿ ಇದು. ಇದು ಮೂಲಾದಾರ ಚಕ್ರದಿಂದ ಸಹಸ್ರಾರು ಚಕ್ರದವರೆವಿಗೆ ಸಂಪರ್ಕ ಕಲ್ಪಿಸುವ ಆಧ್ಯಾತ್ಮಿಕ ನಾಡಿ.
ಇದನ್ನು ಯೋಗರೀತಿಯಲ್ಲಿ ಸಾಧಕರು ಪ್ರಚೋದಿಸುವುದನ್ನು ಸಾಧಿಸಿರುತ್ತಾರೆ. ಅವರಿಗೆ ಈ ನಾಡಿಯನ್ನು ತೆರೆಯುವ ಸಾಮರ್ಥ್ಯ ಇರುತ್ತದೆ. ಈ ನಾಡಿ ಮೇಲೆ ಹೇಳಿದ ಸೂರ್ಯ ನಾಡಿ ಮತ್ತು ಚಂದ್ರ ನಾಡಿಳ ನಡುವೆ ಇರುವ ಸೂಕ್ಷ್ಮ ಕೊಳವೆಯಾಗಿದ್ದು ಆರು ಚಕ್ರಗಳ ಮೂಲಕ ಹಾದು ಸಹಸ್ರಾರವನ್ನು ತಲುಪಿದರೆ ಆಗುವ ಆಧ್ಯಾತ್ಮಿಕ ಅನುಭವವೆ ಬೇರೆ ಎಂದು ಯೋಗಿ ಮತ್ತು ಮಹಾತ್ಮರನ್ನು ನೋಡಿ ಅರಿಯಬೇಕು.
ನಾಡಿ ಪ್ರಕರಣ ಸಂಧಿ..
ನಾಡಿಗಳನ್ನು ಸುನಾಡಿ ಅಂತ ದಾಸರು ಕರೆದಿದ್ದಾರೆ .. ಅತೀಂದ್ರಿಯವಾಗಿ, ತೇಜೋ ಮಯವಾಗಿ ಇರುವುದರಿಂದ .. ಸುನಾಡಿ .. ಅಂತ ಹೇಳಿದ್ದಾರೆ.
ನಿಷಾ ನಾಡಿಗಳೆಂದರೆ ಎಡ ಪಾರ್ಶ್ವದ ಸ್ತ್ರೀ ನಾಡಿಗಳಿಗೆ ನಿಷಾ ನಾಡಿ ಎಂತಲೂ ಅಥವಾ ರಾತ್ರಿ ನಾಡಿಗಳು ಎಂತಲೂ ಕರೆಯುತ್ತಾರೆ
ಪರ ನಾಮಕ ಅಂತ ಶ್ರೀ ಲಕ್ಷ್ಮೀದೇವಿಗೆ ಕರೆಯುತ್ತಾರೆ.
ಸ್ತೂಲ ದೇಹಗತ ಎಡ ಬಲ ಪಾರ್ಶ್ವದ 72000 ನಾಡಿಗಳ ವ್ಯೂಹಗಳ ಹಂಚಿಕೆ ಹೀಗಿದೆ ..
ನಮ್ಮ ದೇಹದ .. ಸೊಂಟದಿಂದ ಕಾಲಿನ ಬೆರಳಿನ ತುದಿಯ ವರೆಗೆ .. ಎಡ . 12000. ಬಲಕ್ಕೆ..12000.
ಕಂಠದಿಂದ ಕಟಿಯ ಅಂದರೆ ಮಧ್ಯ ದೇಹ ಪರ್ಯಂತ ಎಡ. 14000 ಮತ್ತು. ಬಲ .. 14000. ಶಿರಸ್ಸಿನಿಂದ ಕಂಠದ ಪರ್ಯಂತ ..6000 + 6000 .
ಹಸ್ತ ಭುಜದಿಂದ ಬೆರಳಿನ ತುದಿಯವರೆಗೆ..
4000 + 4000 = ಒಟ್ಟು ಎಡಕ್ಕೆ 36000 ಮತ್ತು ಬಲಕ್ಕೆ 36000 = 72000 ನಾಡಿಗಳು.
ಶ್ರೀ ವಾಸುದೇವ ಪರಮಾತ್ಮನು ನಾಡಿಗತ ಭೃಹತೀ ಛಂದಸ್ಸಿನಿಂದ ಕರೆಸಿಕೊಳ್ಳುತ್ತ ಪ್ರತಿ ಪಾದ್ಯನಾಗಿದ್ದಾನೆ. ಪರಮಾತ್ಮ ಪೂರ್ಣ , ಸರ್ವತ್ರ ವ್ಯಾಪ್ತ ಸರ್ವ ಪ್ರಕಾರದಿಂದಲೋ ಪರಿ ಪೂರ್ಣ ಅದಕ್ಕೆ ಇವನಿಗೆ ಭೃಹತೀ ಅಂತ ಕರೆಯುತ್ತಾರೆ .
ವ್ಯಾನ ರೂಪ ಪರಮಾತ್ಮ ...
ವ್ಯಾನವಾಯುವು ಮೇಲಕ್ಕೆ ಪ್ರವಹಿಸುತ್ತದೆ. ಇದು ಶರೀರದ ಎಲ್ಲಾ 72 ಸಾವಿರ ನಾಡಿಗಳಲ್ಲಿ ಪ್ರವಹಿಸುವ ಶಕ್ತಿಯಾಗಿದೆ.
ವ್ಯಾನವು ಇಡೀ ದೇಹವನ್ನು ವ್ಯಾಪಿಸುತ್ತದೆ, ಎಲ್ಲಾ ಚಲನೆಯನ್ನು ನಿಯಂತ್ರಿಸುತ್ತದೆ ಮತ್ತು ಇತರ ಪ್ರಾಣಗಳನ್ನು ಸಂಯೋಜಿಸುತ್ತದೆ. ಇದು ಇತರ ಪ್ರಾಣಗಳಿಗೆ ಮೀಸಲು ಶಕ್ತಿಯಾಗಿ ಕಾರ್ಯನಿರ್ವಹಿಸುತ್ತದೆ.
ವ್ಯಾನ ಸ್ನಾಯು ವ್ಯವಸ್ಥೆಯನ್ನು ಸಹ ನಿಯಂತ್ರಿಸುತ್ತದೆ, ಸಮತೋಲನವನ್ನು ಕಾಪಾಡುತ್ತದೆ,
ವ್ಯಾನವು ಇಡೀ ದೇಹವನ್ನು ವ್ಯಾಪಿಸುತ್ತದೆ, ಎಲ್ಲಾ ಚಲನೆಯನ್ನು ನಿಯಂತ್ರಿಸುತ್ತದೆ ಮತ್ತು ಇತರ ಪ್ರಾಣಗಳನ್ನು ಸಂಯೋಜಿಸುತ್ತದೆ. ಇದು ಇತರ ಪ್ರಾಣಗಳಿಗೆ ಮೀಸಲು ಶಕ್ತಿಯಾಗಿ ಕಾರ್ಯನಿರ್ವಹಿಸುತ್ತದೆ.
ವ್ಯಾನ ಸ್ನಾಯು ವ್ಯವಸ್ಥೆಯನ್ನು ಸಹ ನಿಯಂತ್ರಿಸುತ್ತದೆ, ಸಮತೋಲನವನ್ನು ಕಾಪಾಡುತ್ತದೆ, ಇದು ಇಡೀ ದೇಹವನ್ನು ವ್ಯಾಪಿಸುತ್ತಿರುವಾಗ, ವ್ಯಾನ ವಿಶೇಷವಾಗಿ ಅಂಗಗಳಲ್ಲಿ ಸಕ್ರಿಯವಾಗಿದೆ.
*ವ್ಯಾನ ವಾಯುವು* *ವಿಚಲಿತವಾದಾಗ, ದೇಹ ಮತ್ತು ಮನಸ್ಸು ಎರಡೂ ವಿಘಟಿತವಾಗುತ್ತವೆ ಮತ್ತು ದುರ್ಬಲಗೊಳ್ಳುತ್ತವೆ, ಇದರ ಪರಿಣಾಮವಾಗಿ ಅಸಮಂಜಸ ಪ್ರಯತ್ನಗಳು, ವಿವಿಧ* *ಕಾಯಿಲೆಗಳು ಮತ್ತು ಮಾನಸಿಕ ಅಸ್ವಸ್ಥತೆ, ಆತಂಕ ಉಂಟಾಗುತ್ತದೆ.
Subscribe to:
Comments (Atom)
ನರನಾಡಿಗಳು
*ನರನಾಡಿಗಳು ಎಂದರೇನು ?* *ಇವುಗಳ ಮಹತ್ವ ಏನು ? ದೇಹದಲ್ಲಿ ಇವುಗಳು ಪ್ರತ್ಯೇಕವಾಗಿ ಇರುತ್ತವೆ *ನರ(nerves) -* *ಮೆದುಳು,ಮೆದುಳು* *ಬಳ್ಳಿ(ಬೆನ್ನು ಹುರಿ) ಮತ್ತು* *ಅ...
-
ಗರುಡ ಪುರಾಣ………… ಬರೇ ಓದೋಕೆ ಹೇಳಿ ಮಾತ್ರ ಅಲ್ಲ ಕೆಲವು ಜನ ಗರುಡ ಪುರಾಣ ಪುಸ್ತಕವ ಮನೆಲಿ ಮಡಿಕೊಂಡಿದ್ರು ಹೊರಗಡೆ ತೆಗೆಯಲ್ಲ ಅದರ ಬಗೆ ಏನು ಗೊತ್ತಿಲ್ಲ – ಅದೂ ಇರ್...
-
*Shloka 20* *अस्ति भाति प्रियं रूपं नाम चेत्यंशपञ्चकम्।* *आद्यत्रयं ब्रह्मरूपं जगद्रूपं ततो द्वयं ।।२०।।* asti bhāti priyaṃ rūpaṃ nāma cetya...
-
ಶ್ರೀ ಚಕ್ರ, ಶ್ರೀ ವಿಧ್ಯೆ ಪ್ರಸಕ್ತ ಕಾಲದಲ್ಲಿ ಶ್ರೀ ವಿಧ್ಯಾ ಎಂದರೆ ಒಂದು ಶಕ್ತಿ ದೇವತೆಯ ಉಪಾಸನೆ ಎಂದು ಅರ್ಥೈಸಿದ್ದಾರೆ. ಅಲ್ಲದೆ ಅದಕ್ಕೆ ಒಂದು ಯಂತ್ರ...
-
ಶ್ರೀ ಚಕ್ರ, ಶ್ರೀ ವಿಧ್ಯೆ - 2 ವಿನಾಶಕಾರೀ ಕ್ಷುದ್ರೋಪಾಸನೆ! ಎಚ್ಚರ!! (ಋತ್ವಿಕ್ ವಾಣಿ ಪತ್ರಿಕೆ - ಫೆಬ್ರವರಿ ೧೯೯೯) ಇನ್ನು ಪ್ರಸಕ್ತ ಕಾಲದಲ್ಲಿ ಬಳೆಯಲ್...
-
ಗರುಡ ಪುರಾಣ ಅಧ್ಯಾಯ – 8 ಆತುರದಾನನಿರೂಪಣಮ್ ಮರಣಕಾಲದಲ್ಲಿ ಮಾಡಬೇಕಾದ ದಾನಗಳ ನಿರೂಪಣೆ ಗರುಡ ಉವಾಚ ಆಮುಷ್ಮಿ ಕೀಂ ಕ್ರಿಯಾಂ...
-
💐 ಗೋಪುರ, ಕಳಶ, ಧ್ವಜಸ್ತಂಭ ಇವುಗಳಿಗೂ ದೇವಾಲಯಕ್ಕೂ ಏನು ಸಂಬಂಧ ✍️ ಕೆಲ ಪ್ರಾಂತ್ಯಗಳಲ್ಲಿ ದೇವಾಲಯಗಳಿಗೆ ಗೋಪುರವಿರುತ್ತದೆ. ಅವುಗಳಲ್ಲಿ ಮಹಾದ್ವಾರದ ಮೇಲ...
-
* ಭಾರತೀಯರ ಕಾಲ ಗಣನೆಯೆ - ಬದುಕಿನ ವಿಜ್ಞಾನವಿದು* ಪ್ರಕೃತಿಯೇ ಒಪ್ಪದ ಜನವರಿ 01 ರಂದು ಹೊಸ ವರ್ಷ ಆರಂಭ ಆಗವುದೆಂತು ? ಡಿಸೆಂಬರ್ ತಿಂಗಳು ಬಂತು ಅಂದರೆ ಸಾಕು, ಎಲ್ಲರ ...
-
*ನರನಾಡಿಗಳು ಎಂದರೇನು ?* *ಇವುಗಳ ಮಹತ್ವ ಏನು ? ದೇಹದಲ್ಲಿ ಇವುಗಳು ಪ್ರತ್ಯೇಕವಾಗಿ ಇರುತ್ತವೆ *ನರ(nerves) -* *ಮೆದುಳು,ಮೆದುಳು* *ಬಳ್ಳಿ(ಬೆನ್ನು ಹುರಿ) ಮತ್ತು* *ಅ...
-
ಶ್ರೀಶಿವರಹಸ್ಯಾಂತರ್ಗತಾ ಋಭುಗೀತಾ 3 ॥ ತೃತೀಯೋಽಧ್ಯಾಯಃ ॥ ಸೂತಃ – ತತೋ ಮಹೇಶಾತ್ ಸಂಶ್ರುತ್ಯ ಸೂತ್ರಾಣಿ ಋಭುರೇವ ಹಿ । ಕೈಲಾಸೇಶಂ ಮಹಾದೇವಂ ತುಷ್ಟಾವ ವಿನಯ...
-
✍️ಎಲ್ಲವನ್ನೂ ಮರೆತು ಏಕಾಗ್ರತೆಯಿಂದ ಹೋಗುವ ದೇವಾಲಯದ ಪ್ರವೇಶ ದ್ವಾರದಲ್ಲೇ ಮಿಥುನ ಶಿಲ್ಪ ಹಾಗೂ ರಾಕ್ಷಸ ಶಿಲ್ಪದ ಅವಶ್ಯಕತೆ ಏನು? 💐ದೇವಾಲಯ ರಚನಾ ವಿಧಾನ ನಿಯಮದಂತೆ ಪ್...